ಅಪಘಾತ ಪ್ರಕರಣ;
ಮಂಗಳೂರು ಗ್ರಾಮಾಂತರ ಠಾಣೆ
- ದಿನಾಂಕ 08-02-2013 ರಂದು ಮದ್ಯಾಹ್ನ 14-00 ಗಂಟೆಗೆ ಪಿಯರ್ಾದಿದಾರರಾದ ಶ್ರೀ ಕೃಷ್ಣ ಎಂಬವರು ಅವರ ಬಾಬ್ತು ಟೆಂಪೋ ಕೆಎ 19 ಡಿ 1861ನ್ನು ಅಡ್ಯಾರ್ ಕಡೆಯಿಂದ ಮರೋಳಿ ಕಡೆಗೆ ಚಲಾಯಿಸಿಕೊಂಡು ಬರುತ್ತಾ ಪಡಿಲ್ ಎಂಬಲ್ಲಿಗೆ ತಲುಪುತ್ತಿದ್ದಂತೆ ಮರೋಳಿ ಕಡೆಯಿಂದ ಪಡೀಲ್ ಕಡೆಗೆ ಮೋಟಾರು ಬೈಕ್ ಕೆಎ 19 ಯು 3128ನ್ನು ಅದರ ಸವಾರ ಆನಂದ ಎಂಬವರು ಸತೀಶ ಎಂಬವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಪಡಿಲ್ ಎಂಬಲ್ಲಿ ರಸ್ತೆಯ ಮಧ್ಯದಲ್ಲಿರುವ ಡಿವೈಡರಿಗೆ ಡಿಕ್ಕಿ ಹೊಡೆದು ಸವಾರ ಮತ್ತು ಸಹಸವಾರರು ಟೆಂಪೋ ಕೆಎ-19-ಡಿ-1861 ರ ಚಕ್ರದಡಿಗೆ ಎಸೆಯಲ್ಪಟ್ಟು ಇಬ್ಬರೂ ತೀವ್ರ ಸ್ವರೂಪದ ರಕ್ತಗಾಯಗೊಂಡು ಸಹಸವಾರರಾದ ಸಂತೋಷ್ ಎಂಬವರು ಸ್ಥಳದಲ್ಲಿಯೇ ಮೃತಪಟ್ಟದ್ದಲ್ಲದೆ, ಗಾಯಾಳು ಮೋಟಾರು ಬೈಕ್ ಸವಾರ ಆನಂದ ದೇವಾಡಿಗರು ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಂತೆ ಮೃತಪಟ್ಟದ್ದಾಗಿರುತ್ತದೆ ಎಂಬುದಾಗಿ ಕೃಷ್ಣ (52) ತಂದೆ: ಪೋಂಕ್ರ ಮೂಲ್ಯ ವಾಸ: ಅಡ್ಯಾರು ಹೊಳೆ ಬದಿ ಮನೆ ಅಡ್ಯಾರ್ ಗ್ರಾಮ ಮಂಗಳೂರು ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣೆ ಅಪರಾದ ಕ್ರಮಾಂಕ 31/12 ಕಲಂ:279, 337 ಐಪಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಮಂಗಳೂರು ಗ್ರಾಮಾಂತರ ಠಾಣೆ
- ದಿನಾಂಕ: 06.02.2013 ರಂದು ರಾತ್ರಿ 9.20 ಗಂಟೆಗೆ ತನ್ನ ಬಾಬ್ತು ಆಕ್ಷಿವ್ ಹೋಂಡಾ ಕೆಎ-19-ಇಜಿ-5732 ನೇದರಲ್ಲಿ ಬೋಂದೆಲ್ ಕಡೆಯಿಂದ ಪಚ್ಚನಾಡಿ ಕಡೆಗೆ ಬರುತ್ತಿದ್ದ ಸಮಯ ಪಚ್ಚನಾಡಿ ಕಡೆಯಿಂದ ಬೋಂದೆಲ್ ಕಡೆಗೆ ಕಾರು ನಂಬ್ರ: ಕೆಎ 19-ಎಂಎ-96838 ನೇ ಕಾರನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಬೈಕ್ ಸಮೇತ ಪಿರ್ಯಾದಿದಾರರು ಬಿದ್ದು ಹಣೆಗೆ,ಮೂಗಿಗೆ, ತುಟಿಗೆ, ಗಲ್ಲಕ್ಕೆ ರಕ್ತ ಗಾಯವಾಗಿರುವುದಲ್ಲದೆ, ಭುಜಕ್ಕೆ ಗುದ್ದಿದ ಗಾಯವಾಗಿ ಕೈ ಕಾಲುಗಳಿಗೆೆ ತರಚಿದ ಗಾಯವಾಗಿರುವುದಾಗಿ ಎಂಬುದಾಗಿ ವಿವೇಕ್ ಕೋನ್ಸೆಸೊ ತಂದೆ : ವಲೇರಿಯನ್ ಕೋನ್ಸೆಸೊ ವಾಸ : ಕೋನ್ಸೆಸೊ ಬೊಂದೆಲ್ ಪಚ್ಚನಾಡಿ ಮಂಗಳುರು ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣೆ ಅಪರಾದ ಕ್ರಮಾಂಕ 30/12 ಕಲಂ:279, 337 ಐಪಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ನಡೆಸಿದ ಪ್ರಕರಣ
ಮಂಗಳೂರು ಗ್ರಾಮಾಂತರ ಠಾಣೆ;
- ದಿನಾಂಕ 05-11-2012 ನಡೆದಿದ್ದ ಆರೋಪಿ ರಾಜೇಶ್ ಎಂಬವನ ಮದುವೆಯ ವಿಡಿಯೋ ಆಲ್ಬಮ್ ಚಿತ್ರೀಕರಣ ನಡೆಸಿದ್ದ ಪಿಯರ್ಾದಿದಾರರು ಅದರ ಆಲ್ಬಮ್ ಹಣದಲ್ಲಿ ಬಾಕಿ ಇದ್ದ 3000-00 ರೂಪಾಯಿಯನ್ನು ಕೇಳಲೆಂದು ದಿನಾಂಕ 05-02-2013 ರಂದು ಬೆಳಿಗ್ಗೆ 10-45 ಗಂಟೆಗೆ ಆಪಾದಿತ ರಾಜೇಶನ ಮನೆಗೆ ಹೋದಾಗ ರಾಜೇಶ ಮತ್ತು ಅವನ ತಮ್ಮಂದಿರಾದ ಲಕ್ಷ್ಮೀಶ ಮತ್ತು ಸೋನಿ ಎಂಬವರು ಪಿಯರ್ಾದುದಾರರನ್ನು ಉದ್ದೇಶಿಸಿ ನಿನ್ನ ಆಲ್ಬಮ್ ಹರಿದು ಹೋಗಿದೆ ನೀನು ಪೊಟೋ ತೆಗೆದ್ದು ಸರಿ ಇಲ್ಲ ಬೋಳಿಮಗ ರಂಡೆಮಗ ಬೇವಸರ್ಿ ಎಂಬಿತ್ಯಾದಿ ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಹೊಡೆದು ಅವರ ಮಹಡಿಯಿಂದ ಕೆಳಗೆ ಹೋಗದಂತೆ ಬಾಗಿಲು ಮುಚ್ಚಿ ತಡೆ ಉಂಟು ಮಾಡಿರುತ್ತಾರೆ. ಎಂಬುದಾಗಿ ಶ್ರೀನಿವಾಸ ತಂದೆ : ನರಸಿಂಹ ಕೆ ವಾಸ : ಜಪ್ಪಿನಮೊಗರು ಗ್ಯಾರೇಜ್ ಅಸೋಸಿಯೇಷನ್ ಬಳಿ ಮಂಗಳೂರು ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣೆ ಅಪರಾದ ಕ್ರಮಾಂಕ 29/12 ಕಲಂ:341, 323, 504 ಜೊತೆಗೆ 34 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಪೂರ್ವ ಪೊಲೀಸ್ ಠಾಣೆ;
- ದಿನಾಂಕ: 07-02-2013 ರಂದು ಪಿರ್ಯಾದಿದಾರರಿಗೆ ಪರಿಚಯವಿರುವ ತಮ್ಮನಾದ ಇಬ್ರಾನ್ ಅನ್ಸಾರಿ ಎಂಬವರು ಅಭಿಮಾನ್ ಕನ್ಷ್ಟ್ರಕ್ಷನ್ ಬಿಲ್ಡರ್ನಲ್ಲಿ ಸುಮಾರು 5 ವರ್ಷಗಳಿಂದ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದು ಜಮಾಲ್ ಎಂಬವರು ದೂರವಾಣಿ ಮುಖಾಂತರ ನಿಮ್ಮ ತಮ್ಮನಾದ ಇಬ್ರಾನ್ ಎಂಬವನು ದಿನಾಂಕ: 07-02-2013 10-00ಗಂಟೆಗೆ ಎಸ್.ಸಿ.ಎಸ್. ಆಸ್ಫತ್ರೆಯ ಬಳಿ ಅಭಿಮಾನ್ ಕನ್ಷ್ಟ್ರಕ್ಷನ್ ಬಿಲ್ಡರ್ರವರ ನಿಮರ್ಾಣ ಹಂತದಲ್ಲಿರುವ ಕಟ್ಟಡದ 7 ನೇ ಮಹಡಿಯಿಂದ ಕೆಲಸ ಮಾಡುತ್ತಿರುವ ಸಮಯ ಆಕಸ್ಮಿಕವಾಗಿ ಆಯಾ ತಪ್ಪಿ ಕೆಳಗೆ ಬಿದ್ದ ಪರಿಣಾಮ ತೀವೃ ತರದ ರಕ್ತಗಾಯವಾಗಿದ್ದು ಅವರನ್ನು ಸಿ.ಟಿ. ಆಸ್ಪತ್ರೆಗೆ ದಾಖಲಿಸಲಾಗಿದೆ. ಎಂದು ತಿಳಿಸಿದ್ದು ನಾನು ಕೂಡಲೇ ಮಂಗಳೂರಿಗೆ ಬಂದು ಆತನ ಆರೋಗ್ಯ ವಿಚಾರಿಸಿ, ನಂತರ ಅಲ್ಲೆ ಇದ್ದು ದಿನಾಂಕ: 08-02-2013 ರಂದು 19-30 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ. ಈತನ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲ ಎಂಬುದಾಗಿ ಶ್ರೀ ಅಜೀಜ್ ಅನ್ಸಾರಿ ಪ್ರಾಯ (37) ತಂದೆ: ನಭಮಿಯಾ ವಾಸ: ಸತ್ತಘರವಾ ಅಂಚೆ ದುಮ್ಮಾ, ಗಿರಿಡ್ ಜಿಲ್ಲೆ ಜಾರ್ಕಂಡ್ ರಾಜ್ಯ. ರವರು ನೀಡಿದ ದೂರಿನಂತೆ ಯು.ಡಿ.ಆರ್. ನಂಬ್ರ 02/2013 ಕಲಂ 174 ಸಿ.ಅರ್.ಪಿ.ಸಿ. ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment