ಮುಲ್ಕಿ ಪೊಲೀಸ್ ಠಾಣೆಯ ಸರಹದ್ದಿನ ಕಾರ್ನಾಡು ಗ್ರಾಮದ ಕಾರ್ನಾಡು ಬೈಪಾಸ್ ಎಂಬಲ್ಲಿಯ ರೈಮಂಡ್ ರೆಬ್ಬೆಲ್ಲೊ ಎಂಬವರ ಬಚ್ಚಲು ಮನೆಯಲ್ಲಿದ್ದ ತಾಮ್ರದ ಹಂಡೆಯು ದಿನಾಂಕ: 06/02/2013ರಂದು ರಾತ್ರಿ ವೇಳೆ ಕಳವಾಗಿದ್ದು, ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ದಿನಾಂಕ: 07/02/2013 ರಂದು ಕೇಸು ದಾಖಲಾಗಿರುತ್ತದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ವಿಶ್ವನಾಥ (35) ತಂದೆ: ಸೂರ್ಯ ಮೇಸ್ತ್ರಿ, ವಾಸ: ಮುಲ್ಕಿ ಸರಕಾರಿ ಆಸ್ಪತ್ರೆ ವಸತಿಗೃಹದ ಬಳಿ, ಮುಲ್ಕಿ ಎಂಬಾತನನ್ನು ದಿನಾಂಕ: 08/02/2013 ರಂದು ಮದ್ಯಾಹ್ನ ಪಡುಪಣಂಬೂರು ಎಂಬಲ್ಲಿ ಆತನು ಕಳವಿನ ಹಂಡೆಯನ್ನು ಮಾರಾಟಕ್ಕೆ ತೆಗೆದುಕೊಂಡು ಹೋಗುತ್ತಿದ್ದಾಗ ಖಚಿತ ಮಾಹಿತಿಯಂತೆ ಮುಲ್ಕಿ ಠಾಣೆಯ ಪಿ.ಎಸ್.ಐ.ರವರು ದಸ್ತಗಿರಿ ಮಾಡಿ ಆತನ ಸ್ವ ಇಚ್ಚಾ ಹೇಳಿಕೆಯಂತೆ ಆತನು ಮುಲ್ಕಿ ಠಾಣೆಯ ವಿವಿದ ಕಡೆಗಳಲ್ಲಿ ಕಳವು ಮಾಡಿದ ಒಟ್ಟು 8 ತಾಮ್ರದ ಹಂಡೆಗಳನ್ನು ಸ್ವಾಧೀನಪಡಿಸಿಕೊಂಡಿದ್ದು, ಸ್ವಾಧೀನಪಡಿಸಿದ ಹಂಡೆಗಳ ಒಟ್ಟು ಮೌಲ್ಯ 35,500/- ರೂಪಾಯಿ ಆಗಿದ್ದು,
ಆರೋಪಿಯು
1) ಕಾರ್ನಾಡು ಗ್ರಾಮದ ಬೈಪಾಸ್ ಬಳಿಯ ರೈಮಂಡ್ ರೆಬೆಲ್ಲೊರವರ ಮನೆಯಿಂದ
2) ಕಿಲ್ಪಾಡಿ ಗ್ರಾಮದ ಗೇರುಕಟ್ಟೆ ಎಂಬಲ್ಲಿಯ ಶ್ರೀಮತಿ ಸುನಿತ ಎಂಬವರ ಮನೆಯಿಂದ.
3) ಕಾರ್ನಾಡು ಗ್ರಾಮದ ಧರ್ಮಸ್ಥಾನದ ಬಳಿಯ ಗೋವಿಂದ ಎಂ. ಅಮೀನ್ ಎಂಬವರ ಮನೆಯಿಂದ
4) ಕಾರ್ನಾಡು ಗ್ರಾಮದ ಧರ್ಮಸ್ಥಾನದ ಬಳಿಯ ಸುರೇಂದ್ರ ಶೆಣೈರವರ ಮನೆಯಿಂದ
5) ಬೆಳ್ಳಾಯೂರು ಗ್ರಾಮದ ಚಂದ್ರಮೌಳೀಶ್ವರ ದೇವಸ್ಥಾನದ ಬಳಿಯ ನಾಗೇಶ ಡಿ. ಸಾಲ್ಯಾನ್ ಎಂಬವರ ಮನೆಯಿಂದ
6) ಬಪ್ಪನಾಡು ಗ್ರಾಮದ ಕೊಳಚಿಕಂಳ್ಬ ಎಂಬಲ್ಲಿಯ ಪಾಂಡು ಮೆಂಡನ್ ಎಂಬವರ ಮನೆಯಿಂದ
7) ಕಾರ್ನಾಡು ಗ್ರಾಮದ ತೈತೋಟ ಎಂಬಲ್ಲಿಯ ಪುರಂದರ ಕೋಟ್ಯಾನ್‌ಎಂಭವರ ಮನೆಯಿಂದ
ತಾಮ್ರದ ಹಂಡೆಗಳನ್ನು ಕಳವು ಮಾಡಿದ ಬಗ್ಗೆ ಆರೋಪಿಯ ವಿರುದ್ದ ಒಟ್ಟು 7 ಪ್ರಕರಣಗಳು ದಾಖಲಾಗಿರುತ್ತದೆ.
No comments:
Post a Comment