Sunday, February 10, 2013

Daily Crime Incidents for Feb 10, 2013


ಮನುಷ್ಯ ಕಾಣೆ ಪ್ರಕರಣ

ಬರ್ಕೆ ಪೊಲೀಸ್ ಠಾಣೆ


  • ಪಿರ್ಯಾದಿದಾರರಾದ ಧನೇಶ್(29) ತಂದೆ ದಿ| ಮುಕುಂದನ್ ವಾಸ: ಕಂಡತ್ತಿಪರಂಬ್ ಹೌಸ್ ಎಡಕೊಚ್ಚಿ ವಿಲೇಜ್ ಕೊಚ್ಚಿ ತಾಲೂಕು ಎನರ್ಾಕುಲಂ ಜಿಲ್ಲೆ ಕೇರಳ ರಾಜ್ಯ ರವರು ಬೊಕ್ಕಪಟ್ಣ  ಕಾರ್ನಲ್ ಗಾಡರ್್ನಲ್ಲಿರುವ ಸ್ಟಾರ್ ಶಿಫ್ ಯಾಡರ್್ನಲ್ಲಿ ವೆಲ್ಡಿಂಗ್ ಕಂಟ್ರಾಕ್ಟರ್ ಕೆಲಸ ಮಾಡುತ್ತಿದ್ದು ಅವರ ಕೈಕೆಳಗೆ ಕೆಲಸ ಮಾಡುತ್ತಿದ್ದ ಮಿಥುನ್ ರಾಜ್(24) ಎಂಬಾತನು ದಿನಾಂಕ 05-02-2013 ರಂದು  ಮಧ್ಯಾಹ್ಯ 14-15 ಗಂಟೆಗೆ ತನ್ನ ಊರಾದ ಕೊಚ್ಚಿಗೆ ಹೋಗಲು ಪಿರ್ಯಾದಿದಾರರಿಂದ ಹಣ ಪಡೆದು ಕೊಚ್ಚಿಗೆಂದು ಹೋಗಿದ್ದು ಆದರೆ ಅವನು ಊರಿಗೆ ಹೋಗದೇ ವಾಪಾಸು ಕೆಲಸಕ್ಕೂ ಬಾರದೇ ಕಾಣೆಯಾಗಿರುತ್ತಾರೆ ಎಂಬುದಾಗಿ ಧನೇಶ್ ರವರು ನೀಡಿದ ದೂರಿನಂತೆ ಬಕರ್ೆ ಪೊಲೀಸ್ ಠಾಣಾ ಅ.ಕ್ರ. 08/2013 ಕಲಂ: ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಪಘಾತ ಪ್ರಕರಣ

ಸಂಚಾರ ಪೂರ್ವ ಠಾಣೆ


  • ದಿನಾಂಕ: 08-02-2013 ರಂದು ಸಮಯ ಮುಂಜಾನೆ ಸುಮಾರು 04.30 ಗಂಟೆಗೆ ಕಾರು ನಂಬ್ರ ಏಂ-05 ಒಉ- 3167 ನ್ನು ಅದರ ಚಾಲಕ ಅಮೋಘ್ರವರು ತನ್ನ ಸ್ನೇಹಿತರಾದ ಪಿರ್ಯಾದುದಾರರಾದ ಮಾದಪ್ಪ (22) ತಂದೆ : ದೇವಯ್ಯ ವಾಸ: ನಾಪ್ಲೋಕು ಗ್ರಾಮ ಮತ್ತು ಅಂಚೆ, ಮಡಿಕೇರಿ,ಹಾಲಿ ವಿಳಾಸ- ಗಣೇಶ್ ವಿಹಾರ್, ಬೆಸೆಂಟ್ ಕಾಲೇಜ್ ಬಳಿ, ಕೋಡಿಯಲ್ ಬೈಲ್, ಮಂಗಳೂರು ಮತ್ತು ಸುದೇವ್ ಎಂಬವರನ್ನು ಕಾರಿನಲ್ಲಿ ಕುಳ್ಳಿರಿಸಿಕೊಂಡು ಕೋಡಿಯಾಲ್ಬೈಲ್ ಕಡೆಯಿಂದ ಜ್ಯೋತಿ ಬಸ್ಸು ನಿಲ್ದಾಣದ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಕರಂಗಲ್ಪಾಡಿಯ ತಂದೂರ್ ಬಾರ್ನ್ ಕ್ರಾಸ್ ಬಳಿ ತಲುಪುವಾಗ ಕಾರಿನ ವೇಗವನ್ನು ನಿಯಂತ್ರಿಸಲಾಗದೆ, ರಸ್ತೆ ಬದಿಯ ಆವರಣ ಗೋಡೆಗೆ ಕಾರು ಡಿಕ್ಕಿಯಾಗಿ ಜಂಖಗೊಂಡು ಕಾರಿನಲ್ಲಿದ್ದ ಪಿರ್ಯಾದುದಾರರ ಎಡಕೈಗೆ ಗಂಭೀರ ಸ್ವರೂಪದ ಗಾಯವಾಗಿ ಸುದೇವ್ರವರ ಹಣೆಗೆ ರಕ್ತಗಾಯವಾಗಿ ಗಾಯಾಳುಗಳು ವಿನಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಮಾದಪ್ಪ ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣಾ ಮೊ.ನಂಬ್ರ 29/2013 279 , 337, 338 ಐ.ಪಿ.ಸಿ. ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಬಜಪೆ ಠಾಣೆ


  • ದಿನಾಂಕ: 09-02-2013 ರಂದು 08-30 ಗಂಟೆ ಸಮಯಕ್ಕೆ, ಮಂಗಳೂರು ತಾಲೂಕು, ಮೂಳೂರು ಗ್ರಾಮದ, ಗುರುಪುರ ಎಂಬಲ್ಲಿ ಮೂಡಬಿದ್ರಿ-ಮಂಗಳೂರು ಎನ್.ಹೆಚ್ ರಸ್ತೆಯಲ್ಲಿ ಬಸ್ಸು ನಂ: ಕೆಎ 19 ಡಿ 5630 ನೇದ್ದನ್ನು ಅದರ ಚಾಲಕ  ಕೈಕಂಬ ಕಡೆಯಿಂದ ಮಂಗಳೂರು ಕಡೆಗೆ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ , ರಸ್ತೆಯ ಎಡಬದಿಯಲ್ಲಿ ಮಣ್ಣು ರಸ್ತೆಯಲ್ಲಿ ನಿಂತಿದ್ದ ಫಿರ್ಯಾದಿ ಶ್ರೀಮತಿ ಉಷಾ ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ ಶ್ರೀಮತಿ ಉಷಾರವರು ಕೆಳಕ್ಕೆ ಬಿದ್ದು, ಅವರ ಬಲ ಸೊಂಟಕ್ಕೆ ಗಾಯವುಂಟಾಗಿರುತ್ತದೆ ಎಂಬುದಾಗಿ ಉಷಾರವರು ನೀಡಿದ ದೂರಿನಂತೆ ಬಜಪೆ ಠಾಣಾ ಅ.ಕ್ರ: 32/2013 ಕಲಂ: 279, 338 34 ಐಪಿಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



ಕಾವೂರ್ ಠಾಣೆ


  • ದಿನಾಂಕ:09-02-2013 ರಂದು ಬೆಳಿಗ್ಗೆ ಸುಮಾರು 11.15 ಗಂಟೆಯ ಸಮಯಕ್ಕೆ ಪಿರ್ಯಾದುದಾರರಾದ ಶ್ರೀ ಮಹಾಲಿಂಗ ಎಂಬವರು ಮಾನ್ಯ ನ್ಯಾಯಾಲಯದ ಅಧಿಕಾರ ವ್ಯಾಪ್ತಿಗೊ ಳಪಟ್ಟ ಕಾವೂರು ಪೊಲೀಸ್‌ ಠಾಣಾ ಸರಹದ್ದಿನ ಕೊಂಚಾಡಿ ಗ್ರಾಮದ ಕೊಂಚಾಡಿ ಎಂಬಲ್ಲಿಯ ಸಾರ್ವಜನಿಕ ರಸ್ತೆಯ ಬಳಿಯಲ್ಲಿ ನಿಂತುಕೊಂಡಿರುವಾಗ್ಯೆ  ಜೀಪು ನಂಬ್ರ  3111 ನೇಯದ್ದನ್ನು ಅದರ ಚಾಲಕ ಆಪಾದಿರಾದ ವಿವೇಕ್‌ ಚೇತನ್‌ ಎಂಬವರು ಎಯ್ಯಾಡಿ ಕೊಂಚಾಡಿ ಕಡೆಯಿಂದ ದೆರೇಬೈಲು ಕೊಂಚಾಡಿ ಕಡೆಗೆ ಅತೀವೇಗ ಹಾಗೂ ಅಜಾಗರೂ ಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರಿಗೆ ಡಿಕ್ಕಿಹೊಡೆದ ಪರಿಣಾಮ ಪಿರ್ಯಾದುದಾರರ ತಲೆಗೆ ರಕ್ತಗಾಯ ಹಾಗೂ ಬಲಕಾಲು ಮೂಲೆಮುರಿತವಾಗಿರುತ್ತದೆಂದು ಅಫಘಾತದ ಬಳಿಕ ಸದ್ರಿ ಜೀಪು ಪಕ್ಕದಲ್ಲಿದ್ದ ವಿಧ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿರುವುದಾಗಿ ಎಂಬುದಾಗಿ ಮಹಾಲಿಂಗ ರವರು ನೀಡಿದ ದೂರಿನಂತೆ ಕಾವೂರ್ ಠಾಣಾ ಅ.ಕ್ರ. 30/2013 ಕಲಂ: 279, 338 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



  • ಫಿರ್ಯಾಧುದಾರರಾದ ಮೆಲ್ವಿನ್ ಲಿಯೋ ಪೀಹರ್ ಸುವಾರೀಸ್ ರವರು ಈ ದಿನ ದಿನಾಂಕ 09-02-2013 ರಂದು ಕೊಟ್ಟಾರ ಚೌಕಿ ಕಡೆಯಿಂದ ಸುರತ್ಕಲ್ ಕಡೆಗೆ ತನ್ನ ಕಾರು ಕೆ.ಎ. 19 ಎಂ.ಎ. 3643 ನೇಯದನ್ನು ಚಲಾಯಿಸಿಕೊಂಡು ಬರುತ್ತಾ ಸಂಜೆ ಸುಮಾರು 16-30 ಗಂಟೆಗೆ ಕೂಳೂರು ವಿ.ಆರ್.ಎಲ್ ಕಛೇರಿ ಬಳಿ ತಲುಪಿದಾಗ ಹಿಂದಿನಿಂದ ಲಾರಿ ಎಂ.ಹೆಚ್. 35 ಕೆ 5690 ನೇಯದನ್ನು ಅದರ ಚಾಲಕರಾದ ಸಂತೋಷ್ ರವರು ಅತೀ ವೇಗವಾಗಿ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಕಾರನ್ನು ಓವರ್ ಟೇಕ್ ಮಾಡುವ ಭರದಲ್ಲಿ ಲಾರಿಯ ಎಡಬದಿ ಬಾಡಿ ಕಾರಿನ ಬಲಬದಿಗೆ ತಾಗಿ ಕಾರಿನ ಬಲಭಾಗವು ಸಂಪೂರ್ಣ ಜಖಂಗೊಂಡಿರುತ್ತದೆ ಎಂಬುದಾಗಿ ಮೆಲ್ವಿನ್ ಲಿಯೋ ಪೀಹರ್ ಸುವಾರೀಸ್ ರವರು ನೀಡಿದ ದೂರಿನಂತೆ ಕಾವೂರ್ ಠಾಣಾ ಅ.ಕ್ರ. 31/2013 ಕಲಂ: 279 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಮಂಗಳೂರು ಗ್ರಾಮಾಂತರ ಠಾಣೆ


  • ಫಿರ್ಯಾದಿದಾರರಾದ ವೀಣಾ ವಾಸ: ವಾಮಂಜೂರು ಮಂಗಳೂರು ರವರು ದಿನಾಂಕ:08/2/2013 ರಂದು 17-30 ಸುನೀಲ್ ಆಚಾರ್ಯ ಎಂಬವರೊಂದಿಗೆ ಮಾತಾಡಿಕೊಂಡು ವಾಮಂಜೂರು ಜಂಕ್ಷನ್  ಕಡೆಯಿಂದ ತಮ್ಮ ಮನೆ ಕಡೆಗೆ ರಸ್ತೆ ಬದಿ ಮಣ್ಣುರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಅವರ ಹಿಂಬದಿಯಿಂದ ಅಂದರೆ ವಾಮಂಜೂರು ಜಂಕ್ಷನ್ ಕಡೆಯಿಂದ  ಆಟೋ ರಿಕ್ಷಾ ನಂಬ್ರ:ಕೆಎ-19-ಬಿ-7602 ನೇಯದನ್ನು ಅದರ ಚಾಲಕ ಅಮೀರ್ ಎಂಬವನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ಫಿರ್ಯಾದಿದಾರರ ಬಲಭುಜಕ್ಕೆ ಢಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರು ಮುಗ್ಗರಿಸಿ ರಸ್ತೆಗೆ ಬಿದ್ದ ಪರಿಣಾಮ ಅವರ  ಬಲಭುಜ, ತಲೆಗೆ ಗುದ್ದಿದ ನೋವಾಗಿದ್ದಲ್ಲದೇ   ಬಲಕೈಗೆ ಮೂಳೆ ಮುರಿತದ ಜಖಂ ಉಂಟಾಗಿರುವುದಾಗಿದೆ ಎಂಬುದಾಗಿ ವೀಣಾ ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣಾ ಅ.ಕ್ರ. 33/2012 ಕಲಂ:279, 338 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಕೊಣಾಜೆ ಠಾಣೆ


  • ದಿನಾಂಕ 08.02.2013 ರಂದು ಬೆಳಿಗ್ಗೆ 10:45 ಗಂಟೆಗೆ ಫಿರ್ಯಾದಿದಾರರಾದ ಮಹಮ್ಮದ್‌ (38) ತಂದೆ: ದಿ.ಇಬ್ರಾಹಿಂ ವಾಸ: ಪುಂಡಿಕೈಪಡ್ಪುಮನೆ ನರಿಂಗಾನ ಗ್ರಾಮ ಬಂಟ್ವಾಳ ರವರು ತನ್ನ ತಮ್ಮನ ಬಾಬ್ತು ಮೋಟಾರ್‌ ಸೈಕಲ್‌ ಕೆಎಲ್‌-14ಕೆ-7901 ರಲ್ಲಿ ಸಹಸವಾರಬಾಗಿ ಕುಳಿತುಕೊಂಡು ಹೋಗುತ್ತಿದ್ದಾಗ ಮಂಗಳೂರು ತಾಲೂಕು ಮಂಜನಾಡಿ ಗ್ರಾಮದ ಮೊಂಟೆಪದವು ಎಂಬಲ್ಲಿಗೆ ತಲುಪುತ್ತಿದ್ದಂತೆಯೇ ಸವಾರನು ಅಜಾಗರೂಕತೆಯಿಂದ ಚಲಾಯಿಸಿ ಒಮ್ಮಲೇ ಬ್ರೇಕ್‌ ಹಾಕಿದ ಪರಿಣಾಮ ನಿಯಂತ್ರಣ ಕಳೆದುಕೊಂಡ ಬೈಕ್‌ ರಸ್ತೆಗೆ ಬಿದ್ದಾಗ ರಸ್ತೆಗೆ ಎಸೆಯಲ್ಪಟ್ಟ ಫಿರ್ಯಾದಿದಾರರ ಎಡಭುಜಕ್ಕೆ, ಎಡಕಾಲಿನ ಮೊಣಗಂಟಿಗೆ ಮೂಳೆ ಮುರಿತದ ಗಾಯವಾಗಿರುತ್ತದೆ. ಆರೋಪಿ ಸವಾರನಿಗೆ ಕೂಡಾ ಕಾಲಿನ ಮಂಡಿಗೆ, ಮತ್ತಿತ್ತರ ಕಡೆಗೆ ತರಚಿದ ಗಾಯವಾಗಿರುತ್ತದೆ. ಗಾಯಾಳುಗಳು ಮಂಗಳೂರು ಯುನಿಟಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದಾಗಿ ಮಹಮ್ಮದ್ ರವರು ನೀಡಿದ ದೂರಿನಂತೆ ಕೊಣಾಜೆ ಠಾಣಾ ಅ.ಕ್ರ. 17/2013 ಕಲಂ: 279, 338 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಹಲ್ಲೆ ಪ್ರಕರಣ

ಮಂಗಳೂರು ಗ್ರಾಮಾಂತರ ಠಾಣೆ


  • ಫಿರ್ಯಾದಿದಾರರಾದ ಹೆರಾಲ್ಡ್ ಡಿಸೋಜಾ ವಾಸ: ಅತ್ತಾವರ ಮಂಗಳೂರು ರವರು ದಿನಾಂಕ:09/2/2013 ರಂದು ಜಪ್ಪಿನಮೊಗರು ಕಡೆಕಾರ್ ಎಂಬಲ್ಲಿರುವ ಸ್ಥಳವನ್ನು ಸಮತಟ್ಟುಗೊಳಿಸಲೆಂದು ಟಿಪ್ಪರ್ ನಲ್ಲಿ  ಮಣ್ಣು ತರಿಸಿ ಇಸ್ಮಾಯಿಲ್ ಅಖ್ತರ್ ಎಂಬವರಿಂದ ಮಣ್ಣಿನ ರಾಶಿಯನ್ನು ಸಮತಟ್ಟುಗೊಳಿಸುತ್ತಿದ್ದ  ವೇಳೆ ಮಣ್ಣಿನ ರಾಶಿಯಿಂದ ಮಣ್ಣು ಜಾರಿ ಪಕ್ಕದಲ್ಲಿರುವ ಅವರ ತಂದೆಯ ಹೆಸರಿನಲ್ಲಿರುವ ಸ್ಥಳಕ್ಕೆ ಬಿದ್ದಿದ್ದನ್ನು ಕಂಡ  ಆರೋಪಿ ಜೇಮ್ಸನು ಫಿರ್ಯಾದಿದಾರರನ್ನುದ್ದೇಶಿಸಿ  ತಂದೆಯ ಜಾಗಕ್ಕೂ ಮಣ್ನೂ ಹಾಕಿಸಿ ಅದನ್ನು ಒಳಗೆ ಹಾಕಲು ಪ್ರಯತ್ನಿಸುತ್ತಿದ್ದೀಯಾ ಎಂದು ಹೇಳಿ ಫಿರ್ಯಾದಿದಾರರ ಸ್ಥಳಕ್ಕೆ ಅಕ್ರಮಪ್ರವೇಶ ಮಾಡಿ  ಫಿರ್ಯಾದಿದಾರರ ಬಾಬ್ತು ಕಾರು ನಂಬ್ರ: ಕೆಎ-19-ಪಿ-4962 ನೇಯದಕ್ಕೆ ಕಲ್ಲುಗಳಿಂದ ಹೊಡೆದು ಕಾರಿನ ಮುಂಬದಿ ಗಾಜು, ಬಾನೆಟ್ ಗೆ ಹಾನಿಯನ್ನುಮಟು ಮಾಡಿ ಸುಮಾರು 5000/ ರೂಪಾಯಿಗಳಷ್ಟು ನಷ್ಟವನ್ನುಂಟು ಮಾಡಿದ್ದಲ್ಲದೇ ಬೇವರ್ಸಿ ರಂಡೇಮಗಾ ನಿನ್ನನ್ನು ಇದೇ ರೀತಿ ಪುಡಿ ಮಾಡುತ್ತೇನೆ ಎಂದು ಹೇಳಿ ಮರದ ಸೋಂಟೆಯಿಂದ ಫಿರ್ಯಾದಿದಾರರ ತಲೆಗೆ ಹೊಡೆಯಲು ಬೀಸಿದಾಗ ಫಿರ್ಯಾದಿದಾರರು ಕೈ ಅಡ್ಡ ಹಿಡಿದು ತಡೆದುದರಿಂದ ಅವರ ಬಲಗೈ ಉಂಗುರಬೆರಳು, ಎಡಕೆನ್ನೆಗೆ ತಾಗಿ ನೋವಾಗಿರುತ್ತದೆ. ನಂತರ ಆರೋಪಿಯು ಅಲ್ಲಿಂದ ಹೋಗುತ್ತಾ ಇನ್ನು ಜಾಗದ ವಿಷಯದಲ್ಲಿ ತಲೆಹಾಕಿದರೆ ನಿನ್ನನ್ನು ಕೊಮದೇ ಬಿಡುತ್ತೆನೆ ಎಂದು ಜೀವ ಬೆದರಿಕೆ ಹಾಕಿರುತ್ತಾನೆ.  ಈ ಘಟನೆಯು ಈ ದಿನ ತಾರೀಕು 09/2/13 ರಂದು 12-00 ಗಂಟೆಯಿಂದ 12-15 ಗಂಟೆಯ ಮಧ್ಯೆ ನಡೆದಿರುತ್ತದೆ ಎಂಬುದಾಗಿ ಹೆರಾಲ್ಡ್ ಡಿಸೋಜಾ ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣಾ ಅ.ಕ್ರ. 34/2012 ಕಲಂ: 447,504,427,324,506 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments:

Post a Comment