ಕಳ್ಳತನ ಪ್ರಕರಣ:
ಉಳ್ಳಾಲ ಠಾಣೆ;
- ಮಂಗಳೂರು ತಾಲೂಕು ತಲಪಾಡಿ ಗ್ರಾಮದ ಬರ್ತ ಎಂಬಲ್ಲಿರುವ ಪಿರ್ಯಾದುದಾರರ ಮನೆಗೆ ಯಾರೋ ಕಳ್ಳರು ದಿನಾಂಕ 17-02-2013 ರಂದು 23-00 ಗಂಟೆಯಿಂದ ದಿನಾಂಕ 18-02-2013 ರ ಬೆಳಿಗ್ಗೆ 5-00 ಗಂಟೆಯ ಮಧ್ಯೆ, ಮನೆಯ ಹಿಂದಿನ ಬಾಗಿಲಿನ ಚಿಲಕವನ್ನು ಬಲತ್ಕಾರವಾಗಿ ಮುರಿದು ಒಳಪ್ರೇಶಿಸಿ, ಮನೆಯಲ್ಲಿದ್ದ ಎರಡು ಸೂಟ್‌ಕೇಸ್ ಮತ್ತು ಹ್ಯಾಂಗರ್‌ನಲ್ಲಿದ್ದ ಪಿರ್ಯಾದುದಾರರ ಪ್ಯಾಂಟ್‌ನ್ನು ಹೊರಗಡೆ ತಂದು, ಪ್ಯಾಂಟ್ ಕಿಸೆಯಲ್ಲಿದ್ದ ನಗದು ಹಣ ರೂಪಾಯಿ 11,000/- ಹಾಗು ಸೂಟ್‌ಕೇಸ್‌ನ್ನು ಮುರಿದು ಅದರಲ್ಲಿದ್ದ ನಗದು ಹಣ 70,000/- ಮತ್ತು ಸುಮಾರು ಒಂದುವರೆ ಪವನ್ ತೂಕದ ಚಿನ್ನದ ಸರ (ಹವಳದ ಸರ) ಹಾಗು ¼ ಪವನ್ ತೂಕದ ಚಿನ್ನದ ಉಂಗುವರನ್ನು ಕಳವು ಮಾಡಿ, ಸೂಟ್‌ಕೇಸ್ ಮತ್ತು ಅದರಲ್ಲಿದ್ದ ದಾಖಲೆಪತ್ರ ಹಾಗು ಪ್ಯಾಂಟ್‌ನ್ನು ತೆಂಗಿನ ಮರದ ಬುಡದಲ್ಲಿ ಬಿಸಾಡಿ ಹೋಗಿರುತ್ತಾರೆ. ನಗದು ಹಣ ರೂಪಾಯಿ 81,000/- ಮತ್ತು ಸುಮಾರು 35,000/- ರೂಪಾಯಿ ಬೆಲೆಬಾಳುವ ಚಿನ್ನಾಭರಣ ಸೇರಿ ಕಳವಾದ ಸ್ವತ್ತಿ ಒಟ್ಟು ಮೌಲ್ಯ ರೂಪಾಯಿ 1,16,000/- ರೂಪಾಯಿ ಆಗಬಹುದು ಎಂಬಿತ್ಯಾದಿಯಾಗಿ ಪಿರ್ಯಾದುದಾರರು ನೀಡಿದ ಲಿಖಿತ ಪಿರ್ಯಾದಿಯ ಸಾರಾಂಶವಾಗಿದೆ ಅಚ್ಯುತ ಪ್ರಾಯ (78) ವಾಸ: ಬರ್ತೆ ಮನೆ ತಲಪಾಡಿ ಮಂಗಳೂರು ರವರು ನೀಡಿದ ದೂರಿನಂತೆ ಉಳ್ಳಾಲ ಠಾಣೆ ಅಪರಾದ ಕ್ರಮಾಂಕ 49/2013 ಕಲಂ: 457, 380 ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment