Saturday, February 16, 2013

Daily Crime Incidents for Feb 16, 2013


ಅಸ್ವಾಭಾವಿಕ ಮರಣ ಪ್ರಕರಣ

ಮಂಗಳೂರು ಪೂರ್ವ ಪೊಲೀಸ್ ಠಾಣೆ

  • ದಿನಾಂಕ: 14-02-2013 ರಂದು ಪಿರ್ಯಾದಿದಾರರಾದ ಶ್ರೀ.ನಿರ್ಮಲ್ ಹಲ್ದಾರ್(31) ತಂದೆ: ಅನಿಲ್ ಹಲ್ದಾರ್ ವಾಸ: ಹಲ್ದಾರ್ ಪಾರ ಗ್ರಾಮ, ನಿಸಿಂಗಪೂರ್ ಅಂಚೆ,ರಾಣಾ ಘಾಟ್, ನದಿಯಾ ಜಿಲ್ಲೆ, ಪಶ್ಚಿಮ ಬಂಗಾಲ ರವರು ಹಾಗೂ ಅವರ ಸಂಬಂಧಿ ನಿಮಾಯ ಹಲ್ದಾರ್ ಎಂಬವರು ಮಂಗಳೂರು ನಗರದ ಎಸ್ಸಿಎಸ್ ಆಸ್ಪತ್ರೆ ಬಳಿ ಇರುವ ಅಭಿಮಾನ್ ಬಿಲ್ಡರ್ಸ್ರವರ ಹೊಸ ಬಿಲ್ಡಿಂಗ್ ಕಟ್ಟಡ ನಿಮರ್ಾಣದ 8ನೇ ಮಹಡಿಯಲ್ಲಿ ಕೆಲಸ ಮಾಡುತ್ತಿರುವ ಸಮಯ ಸುಮಾರು ಬೆಳಿಗ್ಗೆ 11.30 ಗಂಟೆಗೆ 100 ಅಡಿ ಎತ್ತರದಲ್ಲಿ ಬಾರ್ ಬೆಂಡಿಂಗ್ ಮಾಡುತ್ತಿದ್ದ ನಿಯಾಮ ಹಲ್ದಾರ್ ಆಕಸ್ಮಿಕವಾಗಿ ಆಯತಪ್ಪಿ ಗೋಡೆಯಿಂದ ಜಾರಿ ನೆಲಕ್ಕೆ ಬಿದ್ದು ತಲೆಗೆ ಗಂಭೀರ ರಕ್ತಗಾಯವಾದವನನ್ನು ಚಿಕಿತ್ಸೆ ಬಗ್ಗೆ ಮಂಗಳೂರು ಎಸ್ಸಿಎಸ್ ಆಸ್ಪತ್ರೆಗೆ ದಾಖಲಿಸಿದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮಧ್ಯಾಹ್ನ 1.40 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿದೆ. ಮೃತನ ಮರಣದ ಬಗ್ಗೆ ಯಾವುದೇ ಸಂಶಯವಿರುವುದಿಲ್ಲ. ಮೃತದೇಹದ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಿ ಮೃತದೇಹ ಬಿಟ್ಟುಕೊಡುವರೇ ಎಂಬುದಾಗಿ ಶ್ರೀ.ನಿರ್ಮಲ್ ಹಲ್ದಾರ್ ರವರು ನೀಡಿದ ದೂರಿನಂತೆ ಮಂ. ಪೂರ್ವ ಪೊಲೀಸ್ ಠಾಣೆ ಯುಡಿಆರ್.ನಂ. 03/2013 ಕಲಂ: 174 ಸಿಆರ್ಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಹಲ್ಲೆ ಪ್ರಕರಣ

ಮಂಗಳೂರು ಪೂರ್ವ ಪೊಲೀಸ್ ಠಾಣೆ


  • ದಿನಾಂಕ 15.02.2013 ರಂದು ಸುಮಾರು 19.30 ಗಂಟೆಗೆ ಫಿಯರ್ಾದಿದಾರರಾದ ಶ್ರೀ.ರೋಹಿತ್ ಕೋಟ್ಯಾನ್(43) ತಂದೆ: ದಿ.ಸೀನ ಬಂಗೇರ ವಾಸ: ಬಸ್ತಿ ರೋಡ್ ಹೌಸ್, ಹೊಸಾಳ ಗ್ರಾಮ, ಬಾಕರ್ೂರು, ಉಡುಪಿ ಜಿಲ್ಲೆ. ರವರು ಮಂಗಳೂರು ನಗರದ ಮಲ್ಲಿಕಟ್ಟೆ ದ್ವಾರದ ಬಳಿ ನಿಂತುಕೊಂಡಿದ್ದ ಸಮಯ, ಪಿಯರ್ಾದಿದಾರರಿಗೆ ಪರಿಚಯವಿರುವ ರವಿಚಂದ್ರ, ಯತೀಶ್ ಹಾಗೂ ಮದನ್ ಎಂಬವರು ಏಂ 19ಒಃ 0307ನೇ ನ್ಯಾನೋ ಕಾರಿನಲ್ಲಿ ಸದ್ರಿ ಸ್ಥಳಕ್ಕೆ ಬಂದಿದ್ದು, ಏಕಾಏಕಿಯಾಗಿ ಪಿಯರ್ಾದಿದಾರರಿಗೆ ಕೈಯಿಂದ ಹೊಡೆದು ಪಿಯರ್ಾದಿದಾರರನ್ನು ಉದ್ದೇಶಿಸಿ 'ರಂಡೇ ಮಗ, ಬೇವಸರ್ಿ ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ಈ ಬಗ್ಗೆ ಪಿಯರ್ಾದಿದಾರರು ಪ್ರಶ್ನಿಸಿದ್ದು ರವಿಚಂದ್ರ  ಎಂಬ ವ್ಯಕ್ತಿ ಅಲ್ಲೇ ರಸ್ತೆ ಬದಿಯಲ್ಲಿದ್ದ ಮರದ ರೀಪಿನಿಂದ ಪಿಯರ್ಾದಿದಾರರ ಮೂಗಿಗೆ ಹೊಡೆದಿರುವುದಾಗಿದೆ ಹಾಗೂ ಯತೀಶ್ ಮತ್ತು ಮದನ್ ಎಂಬವರುಸೇರಿಕೊಂಡು ಕೈಯಿಂದ ಸದ್ರಿಯವರ ಎಡ ಕಿವಿ ಹಾಗೂ ದೇಹದ ಇತರ ಭಾಗಗಳಿಗೆ ಹೊಡೆದಿದ್ದು, ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಒಡ್ಡಿ ಅಲ್ಲಿಂದ ಪರಾರಿಯಾಗಿರುತ್ತಾರೆ. ಸದ್ರಿಯವರುಗಳು ಹೊಡೆದ ಪರಿಣಾಮ ಪಿಯರ್ಾದಿದಾರರ ಕಿವಿ ಹಾಗೂ ಮೂಗಿನ ಬಳಿ ರಕ್ತ ಗಾಯವಾಗಿರುತ್ತದೆ. ಸದ್ರಿ ಆರೋಪಿತರು ಪಿಯರ್ಾದಿದಾರರಿಗೆ ಯಾವ ಉದ್ದೇಶದಿಂದ ಹೊಡೆದಿರುತ್ತಾರೆ ಎಂಬುದು ತಿಳಿದು ಬಂದಿರುವುದಿಲ್ಲ ಎಂಬುದಾಗಿ ಶ್ರೀ.ರೋಹಿತ್ ಕೋಟ್ಯಾನ್ ರವರು ನೀಡಿದ ದೂರಿನಂತೆ ಮಂ. ಪೂರ್ವ ಪೊಲೀಸ್ ಠಾಣೆ ಮೊ.ನಂ. 16/2013 ಕಲಂ: 323 324 504 506 ಡಿ/ತಿ 34   ಭಾ.ದಂ.ಸಂ. ನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ವಂಚನೆ ಪ್ರಕರಣ

ಬರ್ಕೆ ಪೊಲೀಸ್ ಠಾಣೆ


  • ದಿನಾಂಕ 15-02-2013ರಂದು ಬೆಳಿಗ್ಗೆ 10-30 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ಲಲಿತಾ ಚಟ್ಟಿಯಾರ್ (73) ಗಂಡ: ದಿ. ಅಂಬು ಚೆಟ್ಟಿಯಾರ್, ವಾಸ: ದೇವಿಕೃಪಾ, ರಕ್ತೇಶ್ವರಿ ಟೆಂಪಲ್ ಬಳಿ, ಮಾಲೇಮಾಲ್, ಮಂಗಳೂರು ರವರು ಮನೆ ಕೆಲಸಮಾಡುವ ಮನೆಯಾದ ಗಾಂಧಿನಗದ ಬಳಿ ನಡೆದುಕೊಂಡು ಹೋಗುತ್ತಿರುವ  ಸಮಯ ಸುಮಾರು 11-00 ಗಂಟೆಗೆ ಗಾಂಧಿ ನಗರ ಶಾಲೆಯ ಗೇಟಿನ ಸ್ವಲ್ಪ ಮುಂದೆ ತಲಪುತ್ತಿದ್ದಂತೆ  ಒಬ್ಬ ದಪ್ಪಗಿನ ಯುವಕನು ಹಿಂದಿನಿಂದ ಬಂದು ನಾವು ಪೊಲೀಸ್ ಡಿಪಾಟರ್್ಮೆಂಟ್ನವರು, ಅಲ್ಲಿಯೇ ಮುಂದೆ ಚೂರಿ ಹಿಡಿದು ಚೈನ್ ಎಳೆಯುವವರು ಇದ್ದಾರೆ, ನೀವು ಇಲ್ಲಿಗೆ ಬನ್ನಿ ಎಂದು  ಶಾಲೆಯ ಗೇಟಿನ ಎದುರು ಕರೆದುಕೊಂಡು ಬಂದು ಅಲ್ಲಿ ಮೊದಲೇ  ಹಾಜರಿದ್ದ ಮತ್ತೊಬ್ಬ ಬಿಳಿ ಅಂಗಿ ಹಾಕಿದ ಸಪೂರದ ಉದ್ದದ   ಯುವಕ ಇದ್ದು, ಅಲ್ಲಿ ಅವರು ನಾವುಗಳು ಪೊಲೀಸರು ಎಂದು ಹೇಳಿದ್ದು, ಸ್ವಲ್ಪ ಹೊತ್ತಿನಲ್ಲಿಯೇ ಮತ್ತೊಬ್ಬ ಸಪೂರ ಶರೀರಿದ ಉದ್ದದ ಯುಕನು ಹತ್ತಿರಕ್ಕೆ ಬಂದಾಗ  ಮೊದಲಿದ್ದ ಇಬ್ಬರು ಯುವಕರು ಮೂರನೇ ವ್ಯಕ್ತಿಯಲ್ಲಿ ಒಂದು ಲಕೋಟೆ ತೋರಿಸಿ, ನಾವು ಪೊಲೀಸರು ಅಲ್ಲಿ ಚೂರಿ ಹಿಡಿದು ಚೈನ್ ಎಳೆಯುವವರು ಇದ್ದಾರೆ ನಿಮ್ಮ ಕುತ್ತಿಗೆಯಲ್ಲಿದ್ದ ಚೈನ್ ಲಕೋಟೆಗೆ ಹಾಕಿ ಎಂದು ಹೇಳಿ ಆ ವ್ಯಕ್ತಿಯು ಆತನ ಚೈನ್ನ್ನು ಲಕೋಟೆಯಲ್ಲಿ ಹಾಕಿದ್ದು, ಇದನ್ನು ನಂಬಿದ ಪಿರ್ಯಾದಿದಾರರು ಅವರ ಕುತ್ತಿಗೆಯಲ್ಲಿದ್ದ ಸುಮಾರು ಒಂದೂವರೆ ಪವನ್ ತೂಕದ ಚಿನ್ನದ ಚೈನ್ ಅಂದಾಜು ಬೆಲೆ ರೂ. 24000/- ನೇದ್ದನ್ನು ಲಕೋಟೆಗೆ ಹಾಕಿದ್ದು ಬಳಿಕ ಮೂವರು ವ್ಯಕ್ತಿಗಳು ಉರ್ವ ಮಾಕರ್ೆಟ್ನಿಂದ ಲೇಡಿಹಿಲ್ ಕಡೆಗೆ ವೇಗವಾಗಿ ನಡೆದುಕೊಂಡು ಹೋಗಿರುತ್ತಾರೆ.  ಬಳಿಕ  ನೋಡಲಾಗಿ ಸದ್ರಿಯವರು ಲಕೋಟೆಯಲ್ಲಿ ಹಾಕಿದ್ದ ಚಿನ್ನದ ಚೈನ್ ಇಲ್ಲದೇ ಇದ್ದು, ಈ ಮೇಲ್ಕಂಡ ಮೂರು ವ್ಯಕ್ತಿಗಳು ತಾವು ಪೊಲೀಸರು ಎಂದು ಪಿರ್ಯಾದಿದಾರರನ್ನು ನಂಬಿಸಿ,  ಚಿನ್ನದ ಸರವನ್ನು ಮೋಸಮಾಡಿ ತೆಗೆದುಕೊಂಡು ಹೋಗಿರುವುದು ಎಂಬುದಾಗಿ ಲಲಿತಾ ಚಟ್ಟಿಯಾರ್  ರವರು ನೀಡಿದ ದೂರಿನಂತೆ ಬಕರ್ೆ ಪೊಲೀಸ್ ಠಾಣೆ ಮೊನಂ. 11/2013 ಕಲಂ. 420 ಐ.ಪಿ.ಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಪಘಾತ ಪ್ರಕರಣ

ಸಂಚಾರ ಪೂರ್ವ ಠಾಣೆ


  • ದಿನಾಂಕ: 15-02-2013 ರಂದು ಸಮಯ ಸುಮಾರು 12.40 ಗಂಟೆಗೆ ಬಸ್ಸು ನಂಬ್ರ ಏಂ- 20 ಃ- 9039 ನ್ನು ಅದರ ಚಾಲಕ ನಂತೂರು ಸರ್ಕಲ್  ಕಡೆಯಿಂದ ಮಲ್ಲಿಕಟ್ಟೆ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಕದ್ರಿ _ ಶಿವಭಾಗ್ನ ಪೆಟ್ರೋಲ್ ಪಂಪ್ ಎದುರು ತಲುಪುವಾಗ ಬಸ್ಸಿನ ಮುಂದಿನಿಂದ ಅಂದರೆ, ನಂತೂರು ಜಂಕ್ಷನ್ ಕಡೆಯಿಂದ ಮಲ್ಲಿಕಟ್ಟೆ ಕಡೆಗೆ ಪಿರ್ಯಾದುದಾರರಾದ ಶ್ರೀಮತಿ ಹೇಮಲತ ಆರ್ (43)ತಂದೆ : ಎಸ್.ಎಮ್. ರಾಜೇಶ್ @ ರಾಜೇಶ್ ಕುಮಾರ್ ವಾಸ: 9-31/2. ಪದವು ಗ್ರಾಮ, ಶಕ್ತಿನಗರ ಅಂಚೆ, ಮಂಗಳೂರು ರವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ರಾಜೇಶ್ @ ರಾಜೇಶ್ಕುಮಾರ್ ಎಂಬವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೊ,ಸೈಕಲ್ ನಂಬ್ರ ಏಂ-19 ಇಃ-7968 ರ ಹಿಂಭಾಗಕ್ಕೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದುದಾರರು ಮತ್ತು ರಾಜೇಶ್ @ರಾಜೇಶ್ಕುಮಾರ್ ಮೊ,ಸೈಕಲ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದುದಾರರ ಎಡಕೈಗೆ ಗಂಭೀರ ಸ್ವರೂಪದ ಮಾಂಸ ಕಿತ್ತುಹೋದ ಗಾಯ ಹಾಗೂ ತಲೆಗೆ ಗುದ್ದಿದ ಗಾಯವಾಗಿ ಎಸ್ಸಿಎಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ. ಹಾಗೂ ರಾಜೇಶ್ @ ರಾಜೇಶ್ಕುಮಾರ್ಗೆ ಬಲಕೈಗೆ ತರಚಿದ ಗಾಯವಾಗಿರುತ್ತವೆ ಎಂಬುದಾಗಿ ಹೇಮಲತ ಆರ್  ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಮೊ.ನಂಬ್ರ 33/2013 279 , 337,338  ಐ.ಪಿ.ಸಿ.ಕಾಯ್ದೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


.ಕಾಣೆ ಪ್ರಕರಣ

ಕೊಣಾಜೆ ಠಾಣೆ


  • ದಿನಾಂಕ 14-02-2013 ರಂದು ಸಂಜೆ 7-00 ಗಂಟೆಯ ಸಮಯಕ್ಕೆ ಮಂಗಳೂರು ತಾಲೂಕು ಮಂಜನಾಡಿ ಗ್ರಾಮದ ಕಲ್ಕಟ ಎಂಬಲ್ಲಿರುವ ವಾಸ್ತವ್ಯದ ಮನೆಯಿಂದ ಫಿರ್ಯಾಧಿದಾರರಾದ ಅಭಿಮಾನ್ ತಂದೆ ದಿ.ಪಾಂಡು ಡೊಗ್ರಿ ಕ್ರಾಸ್ ವಾಸ,ಕಲ್ಕಟ ಮನೆ ಮಂಜಾನಾಡಿ ಗ್ರಾಮ, ಮಂಗಳೂರು ತಾಲುಕು ರವರ ಹೆಂಡತಿ ಶ್ರೀಮತಿ ಜ್ಯೋತಿ ಎಂಬವಳು ತನ್ನ ಅಣ್ಣನ ಮಗನಾದ ಹರೀಶ್ ಎಂಬವರೊಂದಿಗೆ ಮಗುವನ್ನು ಮನೆಯಲ್ಲಿ ಬಿಟ್ಟು ಎಲ್ಲಿಗೊ ಹೋಗಿರುತ್ತಾರೆ ಎಂಬುದಾಗಿ ಅಭಿಮಾನ್ ರವರು ನೀಡಿದ ದೂರಿನಂತೆ ಕೊಣಾಜೆ ಠಾಣಾ ಅ.ಕ್ರ. ನಂ. 20-2013 ಹೆಂಗಸು ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 


No comments:

Post a Comment