Wednesday, January 15, 2014

Daily Crime Reports 14-01-2014

ದೈನಂದಿನ ಅಪರಾದ ವರದಿ.

ದಿನಾಂಕ 14.01.201416:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

1

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

1

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

3

ವಂಚನೆ ಪ್ರಕರಣ         :

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಪೂರ್ವ ಪೊಲೀಸ್‌  ಠಾಣೆಯಲ್ಲಿ  ವರದಿಯಾದ ಪ್ರಕರಣ  : ದಿನಾಂಕ 13-01-2014 ರಂದು ಫಿರ್ಯಾದುದಾರರಾದ ಅಕ್ಷಯ ದೇವಾಡಿಗ ರವರು  ಸಮಯ ಸುಮಾರು 15-45 ಗಂಟೆಗೆ ತನ್ನ ಸಹಪಾಠಿಗಳ ಜೊತೆ ಕಾಲೇಜು ಮುಗಿಸಿ ಮನೆಗೆ ಹೋಗಲು ಬಸ್ಸಿಗಾಗಿ ಎಂ.ಜಿ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಾ ಮಾನಸ ಟವರ್ಸ್ ಬಿಲ್ಡೀಂಗ್ ಎದುರಿನ ರಸ್ತೆಯಲ್ಲಿ ಸಾರ್ವಜನಿಕರು ನಡೆದಾಡುವ ರಸ್ತೆಯ ಬದಿ ತಲುಪಿದಾಗ ಹಿಂದಿನಿಂದ ಒರ್ವ ಅಪರಿಚಿತ ವ್ಯಕ್ತಿ ಬೈಕಿನಲ್ಲಿ ಬಂದು ಫಿರ್ಯಾದುದಾರರನ್ನು ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿದಾಗ ಫಿರ್ಯಾದುದಾರರ ಹಿಂದಿನಿಂದ ಬಂದ ಪರಿಚಯದ ಮಹೇಶ್, ಧನುಷ್, ರಾಹುಲ್ ಮತ್ತು ಇನ್ನೊರ್ವ ವ್ಯಕ್ತಿ ಕೈಯಿಂದ ಹೊಡೆದಿದ್ದು ಹಾಗೂ ಇನ್ನೊರ್ವ ವ್ಯಕ್ತಿಯು ಆತನ ಕೈಯಲ್ಲಿದ್ದ ಚೂರಿಯಿಂದ  ಫಿರ್ಯಾದುದಾರರನ್ನು ಕೊಲೆ ಮಾಡುವ ಉದ್ದೇಶದಿಂದ  ಫಿರ್ಯಾದುದಾರರ ಬೆನ್ನಿನ ಎಡಬದಿಗೆ ಚುಚ್ಚಿ ರಕ್ತಗಾಯವನ್ನುಂಟು ಮಾಡಿದ್ದು ಸಮಯ ಜೊತೆಗಿದ್ದ ಸಹಪಾಠಿಗಳು ತಡೆಯಲು ಬಂದಿದ್ದು ಹಾಗೂ  ರಸ್ತೆಯಲ್ಲಿ   ಜನರು ನೋಡುವುದನ್ನು ಕಂಡು ಆರೋಪಿಗಳು ಫಿರ್ಯಾದುದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ ಓಡಿಹೋಗಿರುತ್ತಾರೆ.

 

2.ಮಂಗಳೂರು ಪೂರ್ವ ಪೊಲೀಸ್‌  ಠಾಣೆಯಲ್ಲಿ  ವರದಿಯಾದ ಪ್ರಕರಣ  : ದಿನಾಂಕ 09-01-2014 ರಂದು ಬೆಳಿಗ್ಗೆ 04-00 ಗಂಟೆಯಿಂದ 05-00 ಗಂಟೆಯ ಮಧ್ಯೆ ನಗರದ ಓಶಿಯನ್ ಪರ್ಲ್ ಹೊಟೇಲಿನ ಹಿಂದಿನ ಗೇಟಿನ ಬಳಿ ಪಾರ್ಕ್ ಮಾಡಿಟ್ಟಿದ್ದ ಪಿರ್ಯಾದಿದಾರರಾದ ಮಂಜುನಾಥ್ ಎಂಬವರು ಉಪಯೋಗಿಸುತ್ತಿದ್ದ ತನ್ನ ಸ್ನೇಹಿತ ಸುನಿಲ್ ಮನಿಯಾನಿಯವರ ಆರ್.ಸಿ. ಮಾಲಕತ್ವದ 2012ನೇ ಮಾಡೆಲಿನ KA 19 EF 0797 ನೇ ಬಜಾಜ್ ಕಂಪನಿಯ ಅಂದಾಜು ಮೌಲ್ಯ 49,000/- ರೂ ಬೆಲೆ ಬಾಳುವ ದ್ವಿ-ಚಕ್ರ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ದಿನದಿಂದ ಇಲ್ಲಿಯ ತನಕ ಹುಡುಕಾಡಿದಲ್ಲಿ ಸಿಗದೇ ಇದ್ದುದರಿಂದ ಪಿರ್ಯಾದಿ ನೀಡಿರುವುದಾಗಿದೆ.

 

 

3. ಮಂಗಳೂರು ಸಂಚಾರ ಪೂರ್ವ ಪೊಲೀಸ್‌  ಠಾಣೆಯಲ್ಲಿ  ವರದಿಯಾದ ಪ್ರಕರಣ  :  ದಿನಾಂಕ 13-01-2014 ರಂದು ಬೆಳಗ್ಗೆ ಸುಮಾರು 10:15 ಗಂಟೆಗೆ ಬಸ್ಸು ನಂಬ್ರ KA-19-C-3877 ನೇ ದನ್ನು ಅದರ ಚಾಲಕ ಬಲ್ಮಠ ಜಂಕ್ಷನ್ ಕಡೆಯಿಂದ ಬೆಂದೂರವೆಲ್  ಜಂಕ್ಷನ್ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜಿವಕ್ಕೆ ಹಾನಿಯಾಗುವ ರಿತಿಯಲ್ಲಿ ಚಲಾಯಿಸಿಕೊಂಡು ಬಂದು ಲಕ್ಷ್ಮಿ ಕೃಷ್ಣಾ ಟವರ್ ಎದುರು ರಸ್ತೆಯ ಎಡಭಾಗದಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರು ಸೈಕಲ್ ನಂಬ್ರ KA-30-Q-3083  ನೇ ದಕ್ಕೆ ಡಿಕ್ಕಿ ಮಾಡಿದ ಪರಿಣಾಮ ಸವಾರ ಮೋಟರ್ ಸೈಕಲ್ ಸಮೆತ ರಸ್ತೆಗೆ ಬಿದ್ದಾಗ ಬಸ್ಸಿನ ಎಡಭಾಗದ ಹಿಂಭಾಗದ ಚಕ್ರ ಮೋಟಾರ ಸೈಕಲ್ ಸವಾರನ ತಲೆಯ ಮೆಲೆ ಹರಿದು ಹೊದಾಗ ಮೋಟಾರ ಸೈಕಲ್ ಸವಾರನ ಹೆಲ್ಮೆಟ್ ಜಖಂಗೊಂಡು ತಲೆಗೆ ತೀವ್ರ ಸ್ವರೂಪದ ರಕ್ತಗಾಯಗೊಂಡು ಅಪಘಾತ ಸ್ಥಳದಲ್ಲಿಯೆ ಮೃತಪಟ್ಟಿರುವುದಾಗಿದೆ.  

 

 

4. ಕಾವೂರು ಪೊಲೀಸ್‌ ಠಾಣೆಯಲ್ಲಿ  ವರದಿಯಾದ ಪ್ರಕರಣ : ದಿನಾಂಕ:13-01-2014 ರಂದು  ಪಿರ್ಯಾಧಿದಾರ ಆಭಿಲಾಷ್ ಎಂಬವರು ತನ್ನ ಮಿತ್ರ ಶಿಶಿಲ್ ಎಂಬವರ ಜೊತೆ ಅವರ ಮೋಟಾರ್ ಸೈಕಲ್ ನಂಬ್ರ KA-19-V 3102 ನೇದರಲ್ಲಿ ಸಹಸವಾರನಾಗಿ ಕೂಳೂರು ಕಡೆಯಿಂದ ಕೊಟ್ಟಾರ ಚೌಕಿಕಡೆಗೆ ಸರ್ವಿಸ್ ರಸ್ತೆಯಲ್ಲಿ  ಕೂಳೂರು ವಿಆರ್ ಎಲ್ ಹತ್ತಿರ ಸವಾರಿ ಮಾಡಿಕೊಂಡು ಹೋಗುವಾಗ  ಸಂಜೆ ಸುಮಾರು 6.30 ಗಂಟೆಗೆ  ತಮ್ಮ ಹಿಂದುಗಡೆಯಿಂದ ಬಂದ ಅಲ್ಟೊ ಕಾರು ನಂಬ್ರ KA-19-C 4851  ನೆಯದನ್ನು ಅದರ ಚಾಲಕನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕೊಂಡು ಬಂದು ಪಿರ್ಯಾದಿಯ ಬೈಕಿ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಶಿಶಿಲ್ ರವರಿಗೆ ತಲೆಗೆ ರಕ್ತ ಬರುವ ಗಾಯವಾಗಿದ್ದು, ಪಿರ್ಯಾದಿಗೆ ತರಚಿದ ಗಾಯವಾಗಿರುತ್ತದೆ. ಆರೋಪಿ ಕಾರು ಚಾಲಕರು ಅಪಘಾತದ ಬಳಿಕ ಕಾರನ್ನು ನಿಲ್ಲಿಸದೇ ಪೊಲೀಸರಿಗೆ ಮಾಹಿತಿ ನೀಡದೆ, ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ಸಹಕಾರಿಯಾಗದೆ ಕಾರು ಸಮೇತ ಪರಾರಿಯಾಗಿರುವುದಾಗಿದೆ.

 

 

5. ಬಜ್ಪೆ ಪೊಲೀಸ್ ಠಾಣೆಯಲ್ಲಿ  ವರದಿಯಾದ ಪ್ರಕರಣ : ದಿನಾಂಕ 13/01/2014 ರಂದು 21.30 ಗಂಟೆಗೆ ಮೃತ ಪಧ್ಮನಾಭ ರೈ ಎಂಬವರು ರಾತ್ರಿ ಪಾಳಿ ಕರ್ತವ್ಯದ ಬಗ್ಗೆ ತನ್ನ ಮನೆಯಿಂದ ಹೊರಟು ಬಸ್ಸಿಗೆ ಹೋಗುವರೇ ನಡೆದುಕೊಂಡು ಹೋಗುತ್ತಾ ಮಂಗಳೂರು ತಾಲೂಕು ಬಡಗುಳಿಪಾಡಿ ಗ್ರಾಮದ ಗಂಜಿಮಠ ಮಹಾಗಣಪತಿ ದೇವಸ್ಥಾನದ ಬಳಿ ತಲುಪುತ್ತಿದ್ದಂತೆ ಮೂಡಬಿದ್ರೆ ಕಡೆಯಿಂದ ಕೈಕಂಬ ಕಡೆಗೆ ಮೋಟಾರು ಸೈಕಲ್ ನಂಬ್ರ KA 19 EG 83186 ನೇದ್ದನ್ನು ಅದರ ಸವಾರ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಧ್ಮನಾಭ ರೈ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಪದ್ಮನಾಭ ರೈ ರವರು ರಸ್ತೆಗೆ ಬಿದ್ದು ಅವರ ತಲೆಗೆ ಗಾಯವಾಗಿದ್ದು, ಅಲ್ಲದೇ ಮೋ. ಸೈಕಲ್ ಸಹಸವಾರ ಶ್ರೀ ಕುಮಾರ್ ಎಂಬವರಿಗೂ ಕೂಡಾ ಸಾಮಾನ್ಯ ಗಾಯವಾಗಿದ್ದು, ಹೊರರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ.  ಪದ್ಮನಾಭ ರೈ ರವರನ್ನು ಚಿಕಿತ್ಸೆ ಬಗ್ಗೆ ಮಂಗಳೂರು ಕೆ.ಎಂ.ಸಿ. ಆಸ್ಪತ್ರೆಗೆ  ದಾಖಲಿಸಿದ್ದು, ಸದ್ರಿಯವರು ಚಿಕಿತ್ಸೆ ಫಲಕಾರಿಯಾಗದೇ  ದಿನ ದಿನಾಂಕ 14/01/2014 ರಂದು ಬೆಳಿಗ್ಗೆ 05.30 ಗಂಟೆಗೆ ಮೃತಪಟ್ಟಿರುತ್ತಾರೆ.

No comments:

Post a Comment