ದೈನಂದಿನ ಅಪರಾದ ವರದಿ.
ದಿನಾಂಕ 29.01.2014 ರ 16:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 3 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 1 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 2 |
ವಂಚನೆ ಪ್ರಕರಣ | : | 1 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 2 |
1. ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 21-01-2014 ರಂದು ರಾತ್ರಿ 10-00 ಗಂಟೆ ಸಮಯಕ್ಕೆ ಪಿರ್ಯಾದುದಾರರಾದ ಶ್ರೀ ಅಬ್ದುಲ್ ಸತ್ತಾರ್ ರವರು ತನ್ನ ಕೆ.ಎ19-ಇಬಿ-7785 ನಂಬ್ರದ Active Honda ವನ್ನು ಎಂದಿನಂತೆ ಮಂಗಳೂರು ನಗರದ ಕುದ್ರೋಳಿಯ ಜಾಮೀಯಾ ಮಸೀದಿಯ ಬದಿಯಲ್ಲಿ ಪಾರ್ಕ್ ಮಾಡಿ ಹೋಗಿದ್ದು, ನಂತರ ವಾಪಾಸ್ಸು, ದಿನಾಂಕ 22-01-2014ರ ಬೆಳಿಗ್ಗೆ 05-30 ಗಂಟೆ ಮಧ್ಯೆ ಬಂದು ನೋಡಿದಾಗ ತಾನು ಪಾರ್ಕ್ ಮಾಡಿದ Active Honda ವನ್ನು ಯಾರೋ ಕಳ್ಳರು ಕಳವುಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ Active Honda ದ ಸೀಟಿನಡಿಯಲ್ಲಿ ಪಿರ್ಯಾದುದಾರರ ಚಾಲನಾ ಪರವಾನಿಗೆ, ಹಾಗೂ ಇನ್ನಿತ್ತರ ದಾಖಲಾತಿ ಪತ್ರಗಳು ಕೂಡಾ ಇದ್ದವು. ಕಳವಾದ Active Honda ದ ಮೌಲ್ಯ ರೂ. 35000/- ಆಗಿರುವುದಾಗಿದೆ.
2. ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28-01-2014 ರಂದು ಫಿರ್ಯಾದಿದಾರರಾದ ಶ್ರೀ ವಾಲ್ಟರ್ ಡಿ'ಸೋಜಾ ರವರು ತನ್ನ ಹೆಂಡತಿ ಮತ್ತು ಮಗಳೊಂದಿಗೆ ಸಂಜೆ ಸುಮಾರು 7:30 ಗಂಟೆಗೆ ಕಾರ್ಕಳದ ಅತ್ತೂರು ಚರ್ಚಿನ ವಾರ್ಷಿಕ ಜಾತ್ರೆಗೆ ಹೋದವರು ದಿನಾಂಕ 29-01-2014 ರಂದು ಬೆಳಿಗ್ಗೆ 5:15 ಗಂಟೆ ಮನೆಗೆ ವಾಪಾಸು ಬಂದು ನೋಡಿದಾಗ ಯಾರೋ ಕಳ್ಳರು ಮನೆಯ ಮುಂದಿನ ಬಾಗಿಲಿನ ಚಿಲಕವನ್ನು ಮುರಿದು ಮನೆಯ ಒಳಪವ್ರವೇಶಿಸಿ ಮನೆಯ ಹಾಲ್ನಲ್ಲಿದ್ದ ಅಲ್ಮೇರವನ್ನು ತೆರೆದು ಅದರ ಒಳಗಿದ್ದ ಬಟ್ಟೆ-ಬರೆಗಳನ್ನು ಚೆಲ್ಲಾಪಿಲಿ ಮಾಡಿ ನಂತರ ಬೆಡ್ರೂಂನ ಒಳಗಡೆ ಇದ್ದ ಕಬ್ಬಿಣದ ಅಲ್ಮೇರವವನ್ನು ಮಲಗುವ ಮಂಚದ ಮೇಲೆ ಹಾಕಿ, ಅಲ್ಮೇರವನ್ನು ಬಲಾತ್ಕರವಾಗಿ ಯಾವುದೋ ಆಯುಧದಿಂದ ಮೀಟಿ ತೆರದು ಅದರ ಒಳಗಡೆ ಇಟ್ಟಿದ್ದ ಪಿರ್ಯಾದಿದಾರರ ಹೆಂಡತಿಯ ಮತ್ತು ಮಗಳ 1) ಸುಮಾರು 34 ಗ್ರಾಂ ತೂಕದ ಕರಿಮಣಿ ಸರ-1, 2) ಸುಮಾರು 16 ಗ್ರಾಂ ತೂಕದ ಪ್ಲಸ್ ಗುರುತಿನ ಪೆಡೆಂಟ್ ಇದ್ದ ಚೈನ್-1, 3) ಸುಮಾರು 8 ಗ್ರಾಂ ತೂಕದ ನಕ್ಲೆಸ್-1 4) ಸುಮೂರು 24 ಗ್ರಾಂ ತೂಕದ ಪ್ಲೆನ್ ಬಳೆ-2, 5) ಸುಮಾರು 8 ಗ್ರಾಂ ತೂಕದ ಪ್ಲಸ್ ಗುರುತಿನ ಪೆಡೆಂಟ್ ಇದ್ದ ಚೈನ್-1, 6)ಸುಮಾರು 4 ಗ್ರಾಂ ತೂಕದ ಕೈ ಬೆರಳಿನ ಉಂಗುರ-2, 7) ಸುಮಾರು 2 ಗ್ರಾಂ ತೂಕದ ಮಗುವಿನ ಕಿವಿಯ ಓಲೆ-ಒಂದು ಜೊತೆ, ಮತ್ತು ನಗದು ಹಣ 8,000/- ರೂಪಾಯಿಯನ್ನು ಕಳುವು ಮಾಡಿಕೊಂಡು ಹೋಗಿದ್ದು, ಕಳುವಾದ ಚಿನ್ನಾಭರಣಗಳ ಮತ್ತು ನಗದಿನ ಅಂದಾಜು ಬೆಲೆ 2,38,400/- ಆಗಬಹುದು.
3. ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 28/01/2014 ರಂದು 21:15 ಗಂಟೆಗೆ ಬಪ್ಪನಾಡು ಗ್ರಾಮದ, ಮುಲ್ಕಿ ಬಸ್ಸು ನಿಲ್ದಾಣದ ಬಳಿ ಮಟ್ಕಾ ಚೀಟಿ ಬರೆದು ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದ ಆರೋಪಿ ಕುಟ್ಟಿ ಸಾಲ್ಯಾನ್ ನನ್ನು ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ದಳ ಬಂದರು, ಮಂಗಳೂರು ವಿಶೇಷ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಎಫ್. ಎನ್ ಲಿಂಗದಾಳ್ ಇವರು ಪೊಲೀಸ್ ಉಪಾಧೀಕ್ಷಕರ ದಳದ ಸಿಬ್ಬಂದಿಗಳೊಂದಿಗೆ ದಾಳಿ ಮಾಡಿ ಆರೋಪಿ ಕುಟ್ಟಿ ಸಾಲ್ಯಾನ್ ನನ್ನು ದಸ್ತಗಿರಿ ಮಾಡಿ ಮಟ್ಕಾ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 985/- ಮಟ್ಕಾ ಸಂಖ್ಯೆಗಳನ್ನು ಬರೆದಿರುವ ಚೀಟಿ -1, ಮಟ್ಕಾ ಸಂಖ್ಯೆಗಳನ್ನು ಬರೆಯಲು ಉಪಯೋಗಿಸಿದ ನೀಲಿಬಣ್ಣದಬಾಲ್ ಪೆನ್ನು-1, ಗಳನ್ನು ಸ್ವಾಧೀನಪಡಿಸಿಕೊಂಡು, ಆರೋಪಿ ಕುಟ್ಟಿ ಸಾಲ್ಯಾನ್ ಹಾಗೂ ಸೊತ್ತು ಸಮೇತ ಮುಲ್ಕಿ ಠಾಣೆಗೆ ಹಾಜರುಪಡಿಸಿರುವುದಾಗಿದೆ.
4. ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28.01.2014 ರಂದು ಬಳಿಗ್ಗೆ ಸುಮಾರು 08.00 ಗಂಟೆಗೆ ಕಾರು ನಂಬ್ರ KA19-MD-4978 ನ್ನು ಅದರ ಚಾಲಕ ನಂತೂರು ಜಂಕ್ಷನ್ ಕಡೆಯಿಂದ ಶಿವಬಾಗ್ ಜಂಕ್ಷನ್ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ನಂತೂರು ಬಳಿಯ ಶ್ರೀರಾಮ್ ಪೈನಾನ್ಸ್ ಇರುವ ಕಟ್ಟಡದ ಬಳಿ ತಲುಪುವಾಗ ಒಮ್ಮೆಲೇ ಬಲಕ್ಕೆ ಚಲಾಯಿಸಿದ್ದರಿಂದ ಹಿಂದಿನಿಂದ ಬರುತ್ತಿದ್ದ ಪಿರ್ಯಾದುದಾರರಾದ ಕು. ಚೈತ್ರಾ ರವರ ಸ್ಕೂಟರ್ ನಂಬ್ರ KA19-EH-8091 ಕ್ಕೆ ಡಿಕ್ಕಿ ಮಾಡಿದ ಪರಿಣಾಮ, ಪಿರ್ಯಾದುದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು,ಎಡಕಣ್ಣಿನ ಮೇಲ್ಭಾಗಕ್ಕೆ ರಕ್ತಗಾಯ, ಬಾಯಿಗೆ, ತುಟಿಗೆ, ಎಡಕೈಗೆ ರಕ್ತಗಾಯ, ಎಡಕಾಲಿನ ಮೊಣಗಂಟಿಗೆ, ಬಲಕಾಲಿನ ಮೊಣಗಂಟಿಗೆ ತರಚಿದ ಗಾಯವಾಗಿ ಸಿಟಿ ಆಸ್ಪತ್ರೆಯಲ್ಲಿ ಓಳರೋಗಿಯಾಗಿ ದಾಖಲಿರುವುದಾಗಿದೆ.
5. ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28.01.2014 ರಂದು ಸಮಯ ಸುಮಾರು 15.10 ಗಂಟೆಗೆ ಪಿರ್ಯಾದುದಾರರಾದ ಲದ್ರು ಡಿ'ಸೋಜಾ ರವರು ಮಾರ್ನಾಮಿಕಟ್ಟೆ ದ್ವಾರದ ಬಳಿ ಬಸ್ಸಿಗಾಗಿ ಕಾಯುತ್ತಾ ನಿಂತಿರುವಾಗ ಕಾಶಿಯಾ ಜಂಕ್ಷನ್ ಕಡೆಯಿಂದ ಕೋಟಿ ಚೆನ್ನಯ್ಯ ಸರ್ಕಲ್ ಕಡೆಗೆ ಬಸ್ಸು ನಂಬ್ರ KA19-B-4778 ನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ರಸ್ತೆಯ ತೀರಾ ಎಡಭಾಗದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದುದಾರರು ರಸ್ತೆಗೆ ಬಿದ್ದಾಗ ಬಸ್ಸಿನ ಎಡಭಾಗದ ಹಿಂಭಾಗದ ಚಕ್ರ ಎಡಕಾಲಿನ ಪಾದದ ಮೇಲೆ ಹರಿದು ಹೋಗಿ ಗಂಭೀರ ಸ್ವರೊಪದ ಗಾಯ ಉಂಟಾಗಿ ಪಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ದಾಖಾಲಾಗಿ ಚಿಕೆತ್ಸೆಯಲ್ಲಿರುತ್ತಾರೆ.
6. ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 24-01-2014 ರಂದು 19-00 ಗಂಟೆಯಿಂದ ದಿನಾಂಕ 25-01-2014 ರಂದು 09-30 ಗಂಟೆಯ ಮಧ್ಯೆ ಮಂಗಳೂರು ನಗರದ ಫಳ್ನೀರು ರಸ್ತೆಯಲ್ಲಿರುವ ಮಿಲ್ಲೇನಿಯಂ ಕಟ್ಟಡದ 1ನೇ ಮಹಡಿಯಲ್ಲಿರುವ ಪಿರ್ಯಾದಿದಾರರಾದ ನವೀಶಾ ಲತೀಫ್ ರವರ ಬಾಬ್ತು ಇ.ಎನ್.ಟಿ. ಕ್ಲೀನಿಕ್ ನ ಶಟರ್ ಡೋರಿಗೆ ಅಳವಡಿಸಿದ ಬೀಗವನ್ನು ಯಾವುದೋ ಆಯುಧವನ್ನು ಉಪಯೋಗಿಸಿ ಮೀಟಿ ತೆರೆದು ಒಳ ಪ್ರವೇಶಿಸಿ ಕ್ಲೀನಿಕ್ ನ ಒಳಗೆ ಪಿರ್ಯಾದಿದಾರರ ಕ್ಯಾಬೀನ್ ನ ಟೇಬಲ್ ಮೇಲೆ ಇದ್ದ ಸುಮಾರು 15,000/- ರೂ ಬೆಲೆ ಬಾಳುವ ಡೆಲ್ ಕಂನಿಯ ಲ್ಯಾಪ್ ಟಾಪ್-1, ಉಪಕರಣಗಳ ಶೆಲ್ಫ್ ಮೇಲೆ ಇಟ್ಟಿದ್ದ ಅಂದಾಜು ರೂ. 5,000/- ಬೆಲೆ ಬಾಳುವ ಒನಿಡಾ ಕಂಪನಿಯ ಟಿ.ವಿ-1 ಮತ್ತು ವಿ-ಗಾರ್ಡ್ ಕಂಪನಿಯ ಅಂದಾಜು ರೂ. 2,000/- ಬೆಲೆ ಬಾಳುವ ಸ್ಟೆಬಿಲೈಸರ್-1 ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತಿನ ಒಟ್ಟು ಮೌಲ್ಯ ರೂ.22,000/- ಆಗಬಹುದು.
7. ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28-01-2014 ರಂದು ಸಂಜೆ ಸುಮಾರು 17-00 ಗಂಟೆಯಿಂದ ದಿನಾಂಕ 29-01-2014 ರಂದು ಬೆಳಿಗ್ಗೆ 08-30 ಗಂಟೆಯ ಮಧ್ಯೆ ಪಿರ್ಯಾದಿದಾರರು ಮುಖ್ಯೋಪಾಧ್ಯಾಯಿನಿಯಾಗಿ ಕಾರ್ಯನಿರ್ವಹಿಸಿಕೊಂಡಿರುವ ಕಂಕನಾಡಿಯಲ್ಲಿರುವ ಸಂತ.ಜೋಸೆಫ್ಸ್ ಪ್ರೌಢ ಶಾಲೆಯ ಬಾಗಿಲಿನ ಚಿಲಕದ ಬೀಗವನ್ನು ಯಾವುದೋ ಆಯುಧವನ್ನು ಉಪಯೋಗಿಸಿ ಮುರಿದು ತೆಗೆದು ಒಳಪ್ರವೇಶಿಸಿದ ಯಾರೋ ಕಳ್ಳರು, ಸದ್ರಿಯವರ ಕಛೇರಿಯೊಳಗಿದ್ದ ದಾಖಲಾತಿಗಳನ್ನು ಚೆಲ್ಲಾಪಿಲ್ಲಿ ಮಾಡಿ, ಸದ್ರಿಯವರ ಕಛೇರಿಯಲ್ಲಿದ್ದ ಒಟ್ಟು 19,500/- ರೂ ಬೆಲೆ ಬಾಳುವ ಎಸರ್ ಕಂಪನಿಯ ಮೊನಿಟರ್-1, ಸಿ.ಪಿ.ಯು-1, ಮೌಸ್, ಕೀ-ಬೋರ್ಡ್ ಹಾಗೂ ರೂ.500/- ಬೆಲೆ ಬಾಳುವ ಜೀನಿಯಸ್ ಕಂಪನಿಯ ಸ್ಪೀಕರ್-1, ಹೀಗೆ ಒಟ್ಟು ರೂ.20,000/- ಬೆಲೆ ಬಾಳುವ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.
8. ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ನಾರಾಯಣ ಪೂಜಾರಿ ಎಂಬವರ ಅಕ್ಕನ ಮಗನಾದ ಲತೀಶ್ ಪ್ರಾಯ 29 ವರ್ಷ ಎಂಬವನು ದಿನಾಂಕ 27-01-2014 ರಂದು ರಾತ್ರಿ ಸಮಯ ಯಾವುದೋ ವಿಷಪದಾರ್ಥವನ್ನು ತೆಗೆದುಕೊಂಡಿದ್ದು, ಸರಕಾರಿ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು, ವೆನ್ಲಾಕ್ ಆಸ್ಪತ್ರೆಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಯೆನಪೊಯ ಆಸ್ಪತ್ರೆಗೆ ಬೆಳಿಗ್ಗೆ 4 ಗಂಟೆಗೆ ದಾಖಲಿಸಿದ್ದು, ದಿನಾಂಕ 28-01-2014 ರ ಮದ್ಯಾಹ್ನದವರೆಗೆ ಲತೀಶ್ ನ ಸ್ಥಿತಿಯು ಉತ್ತಮವಾಗಿದ್ದು, ತದನಂತರ ಲತಿಶ್ ಗೆ ಯಾವುದೋ ಚುಚ್ಚು ಮದ್ದು ಕೊಟ್ಟನಂತರ ಒಂದು ರೀತಿಯಲ್ಲಿ ಮಾನಸಿಕ ಅಸ್ವಸ್ಥನಾಗಿ ವರ್ತಿಸುತ್ತಿದ್ದರಿಂದ ವೈದ್ಯರು ತಮಗೆ ಯಾವುದೇ ಮಾಹಿತಿ ನೀಡಿದೇ ಇದ್ದು, ದಿನಾಂಕ 28-01-2014 ರಂದು ರಾತ್ರಿ 9:30 ಗಂಟೆಗೆ ಲತೀಶ್ ನು ಐಸಿಯು ನಲ್ಲಿದ್ದ ಸಮಯ ಕಿಟಕಿಯ ಗಾಜುಗಳನ್ನು ಒಡೆದಿದ್ದು, ರಾತ್ರಿ ಸುಮಾರು 12 ಗಂಟೆಗೆ ಲತೀಶ್ ನು ಐಸಿಯು ನ ಕಿಟಕಿಯ ಗಾಜನ್ನು ಒಡೆದು 4 ನೇ ಮಹಡಿಯ ಮೇಲಿಂದ ಹಾರಿದ್ದು, ರಾತ್ರಿ 1:30 ಗಂಟೆ ಸಮಯಕ್ಕೆ ವೈದ್ಯರು ಈ ಬಗ್ಗೆ ಮಾಹಿತಿ ನೀಡಿದ್ದು, ನೋಡಲಾಗಿ ಲತೀಶ್ ನು ಮೃತಪಟ್ಟಿರುವುದಾಗಿ ಈ ಬಗ್ಗೆ ವೈದ್ಯರಲ್ಲಿ ವಿಚಾರಿಸಿದಾಗ ಸದ್ರಿ ಲತೀಶ್ ನು ಮಾನಸಿಕ ಅಸ್ವಸ್ಥನಾಗಿ ಮಹಡಿಯಿಂದ ಹಾರಿ ಮೃತಪಟ್ಟಿರುವುದಾಗಿ, ಅವನು ವಿಷಪದಾರ್ಥ ಸೇವಿಸಿದ ಬಗ್ಗೆ ಹೆಚ್ಚಿನ ಚಿಕಿತ್ಸೆಗಾಗಿ ಯೆನಪೊಯ ಆಸ್ಪತ್ರೆಗೆ ದಾಖಲಾಗಿ ಆಸ್ಪತ್ರೆಯ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಮಯ ಆಸ್ಪತ್ರೆಯ ವೈಧ್ಯಾಧಿಕಾರಿಯವರು ಹಾಗೂ ಸಿಬ್ಬಂಧಿಗಳು ಸೂಕ್ತ ಮುಂಜಾಗರೂಕತಾ ಕ್ರಮ ಕೈಗೊಳ್ಳದೇ ಇರುವುದರಿಂದ ಲತೀಶ್ ನು ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿ ಮೃತಪಡಲು ಅವಕಾಶವಾಗಿರುತ್ತದೆ. ಲತೀಶ್ ನು ಆತ್ಮಹತ್ಯೆ ಮಾಡಿ ಮೃತಪಡಲು ಯೆನಪೊಯ ಆಸ್ಪತ್ರೆಯ ಕರ್ತವ್ಯನಿರತ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಯವರೇ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗಿದೆ ಎಂಬುದಾಗಿದೆ.
9. ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀಮತಿ ಮಲ್ಲವ್ವ, ಶಿರಹಟ್ಟಿ, ಗದಗ ಜಿಲ್ಲೆ ಎಂಬವರು ನೀಡಿದ ಫಿರ್ಯಾದಿಯ ಸಾರಾಂಶವೇನೆಂಧರೆ, ಜ್ಯೋತಿ ಎಂಬ ಹೆಂಗಸು ಫಿರ್ಯದಿದಾರರ ಮಗಳಾದ ಕುಮುದಾಳನ್ನು ನಕಲಿ ಜನನ ಪ್ರಮಾಣ ಪತ್ರ ವನ್ನು ಜನನ ಮತ್ತು ಮರಣ ನೊಂದಣಾಧಿಕಾರಿ, ಪಟ್ಟಣ ಪಂಚಾಯತು, ಯಲ್ಲಾಪುರ, ಉತ್ತರ ಕನ್ನಡ ಇಲ್ಲಿ ದಿನಾಂಕ: 28-10-2013 ರಂದು ಸೃಷ್ಟಿಸಿ ನಕಲಿ ಜನನದ ದೃಢಪತ್ರವನ್ನು ವಿದ್ಯಾ ಎಂಬ ಹೆಸರಿನಲ್ಲಿ ಪಡೆದು, ಫಿರ್ಯಾದಿದಾರರ ಮಗುವಿನ ದಾಖಲಾತಿಯನ್ನು ಫೋರ್ಜರಿ ಮಾಡಿ, ಫಿರ್ಯಾದಿದಾರರಲ್ಲಿ ಹಣ ನೀಡುವಂತೆ ಒತ್ತಾಯಿಸುತ್ತಿರುವುದಾಗಿದೆ.
No comments:
Post a Comment