ದೈನಂದಿನ ಅಪರಾದ ವರದಿ.
ದಿನಾಂಕ 04.01.2014 ರ 16:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗನಂತಿದೆ.
ಕೊಲೆ ಪ್ರಕರಣ
|
:
|
0
|
ಕೊಲೆ ಯತ್ನ
|
:
|
0
|
ದರೋಡೆ ಪ್ರಕರಣ
|
:
|
0
|
ಸುಲಿಗೆ ಪ್ರಕರಣ
|
:
|
0
|
ಮನೆ ಕಳವು ಪ್ರಕರಣ
|
:
|
0
|
ಸಾಮಾನ್ಯ ಕಳವು
|
:
|
0
|
ವಾಹನ ಕಳವು
|
:
|
0
|
ಮಹಿಳೆಯ ಮೇಲಿನ ಪ್ರಕರಣ
|
:
|
0
|
ರಸ್ತೆ ಅಪಘಾತ ಪ್ರಕರಣ
|
:
|
2
|
ವಂಚನೆ ಪ್ರಕರಣ :
|
:
|
1
|
ಮನುಷ್ಯ ಕಾಣೆ ಪ್ರಕರಣ
|
:
|
1
|
ಇತರ ಪ್ರಕರಣ
|
:
|
1
|
1. ಸಂಚಾರ ಪಶ್ಚಿಮ ಠಾಣೆಯಲ್ಲಿ ವರದಿಯಾದ ಪ್ರಕರಣ: SMT. ದಿನಾಂಕ: 03.01.2014 ರಂದು ದೇವಿಕಾ ಎಂವವರು ತಮ್ಮ ಅಗತ್ಯ ಕೆಲಸದ ನಿಮಿತ್ತ ಮಂಗಳೂರು ನಗರದ ಮಹಾನಗರ ಪಾಲಿಕೆಗೆ ಬಂದು ತಮ್ಮ ಕೆಲಸ ಮುಗಿಸಿ ವಾಪಾಸ್ಸು ತಮ್ಮ ಕಛೇರಿಗೆ ಹೋಗುವರೇ ಮಂಗಳೂರು ಮಹಾನಗರ ಪಾಲಿಕೆಯ ಬಸ್ಸು ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿರುವ ಸಮಯ ಮಧ್ಯಾಹ್ನ ಬಸ್ ನಿಲ್ದಾಣದಲ್ಲಿ ಪಾರ್ಕ್ ಮಾಡಿದ್ದ ಮೋಟಾರ್ ಸೈಕಲ್ಲೊಂದನ್ನು ಅದರ ಸವಾರರು ಒಮ್ಮೇಲೆ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ದೇವಿಕಾರವರಿಗೆ ಢಿಕ್ಕಿ ಹೊಡೆದ ಪರಿಣಾಮ ಗಾಯಗೊಂಡಿದ್ದು ಅವರನ್ನು ಯೇನೆಪೋಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ ಅಪಘಾತ ಮಾಡಿದ ಮೋಟಾರು ಸೈಕ್‌ಲ್‌ನ ಪೂರ್ತಿ ನಂಬ್ರವನ್ನು ಗಮನಿಸದೇ ಇದ್ದು 7411 ನೇ ನೊಂದಣಿ ಸಂಖ್ಯೆಯದ್ದು ಆಗಿದೆ ಎಂದು ತಿಳಿಸಿರುತ್ತಾರೆ.
2.ಬಜಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ :ದಿನಾಂಕ: 03-01-2014 ರಂದು ದಿನೇಶ್ ಎಂಬವರು ರಾತ್ರಿ 8-00 ಗಂಟೆ ಸಮಯಕ್ಕೆ ಮೋಟಾರು ಸೈಕಲ್ ನಲ್ಲಿ ಹೋಗುತ್ತಿರುವಾದ ಮಂಗಳೂರು ತಾಲೂಕಿನ , ಮಳವೂರು ಗ್ರಾಮದ , ಅಂಬೇಡ್ಕರ್ ನಗರ ಮತ್ತು ಕೊಪ್ಪಲಕ್ಕೆ ಹೋಗುವ ದಾರಿ ಮಧ್ಯೆ ಹೋಗುತ್ತಿರುವಾಗ ಪುನೀತ್ ಅರುಣ್ ಮತ್ತು ಆಲ್ವೀನ್ ಎಂಬವರುಗಳು ತಡೆದು ನಿಲ್ಲಿಸಿ ಹಲ್ಲೆ ಮಾಡಿರುತ್ತಾರೆ
3. ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಕೇವಿನ್ ಅವೀನ್ ಜೆ. ಸಲ್ದಾನ ಎಂಬವರು ಉದಯವಾಣಿ ಪತ್ರಿಕೆಯಲ್ಲಿ ಬಂದ ಪ್ರಕಟಣೆಯನ್ನು ಓದಿ ನೋಡಿ ಮಂಗಳೂರು ತಾಲೂಕು, ಬೆಳ್ಮ ಗ್ರಾಮದ ದೇರಳಕಟ್ಟೆ ಎಂಬಲ್ಲಿರುವ ಆಲ್ಫಾ ಟೂರ್ಸ್ & ಟ್ರಾವೆಲ್ಸ್ ಸಂಸ್ಥೆಯ ಮಾಲಕರಾದ ಆರೋಪಿ ಮಹಮ್ಮದ್ ಶಾಫಿ ಎಂಬವರಲ್ಲಿ ವ್ಯವಹರಿಸಿದಲ್ಲಿ ವಿದೇಶವಾದ ಕಥಾರ್‌ನಲ್ಲಿ ಒಂದು ಉದ್ಯೋಗವಿದೆ ಎಂದು ಹೇಳಿ, ವಿದೇಶಕ್ಕೆ ಹೋಗಲು ಫಿರ್ಯಾದಿದಾರರಿಂದ ರೂ. 62,000/- ವನ್ನು ಎಗ್ರಿಮೆಂಟ್ ಮೂಲಕ ದಿನಾಂಕ 17.08.2013 ರಂದು ಮಾಡಿಸಿ 60 ದಿನಗಳ ಒಳಗೆ ಉದ್ಯೋಗ ಕೊಡಿಸುವುದಾಗಿ ಹೇಳಿ ವಾಯ್ದೆ ಮುಗಿದರೂ ಈವರೆಗೆ ವೀಸಾವನ್ನು ಕೊಡಸದೇ, ಫಿರ್ಯಾದಿದಾರರು ಎಗ್ರಿಮೆಂಟ್ ಮೂಲಕ ನೀಡಿದ ಹಣವನ್ನು ಕೂಡಾ ವಾಪಾಸ್ಸು ಮಾಡದೇ, ಹಾಗೂ ಕೇವಿನ್ ಅವೀನ್ ಜೆ. ಸಲ್ದಾನ ನೀಡಿದ ದಾಖಲಾತಿಗಳನ್ನು ಕೂಡಾ ನೀಡದೇ ಆರೋಪಿಯು ವಂಚಿಸಿರುತ್ತಾರೆ ಎಂಬಿತ್ಯಾದಿ.
4. ಮೂಡಬಿದ್ರೆ ಠಾಣೆಯಲ್ಲಿ ವರದಿಯಾದ ಪ್ರಕರಣ : 03-01-2014 ರಂದು ಸಂಜೆ 17-30 ಗಂಟೆಗೆ ಸುರೇಶ್ ಪೂಜಾರಿ ಎಂಬವರ ತಾಯಿ ಶ್ರೀಮತಿ ಲಲಿತ ಎಂಬವರು ಪಡು ಮಾರ್ನಾಡು ಗ್ರಾಮದ ಅಡ್ಕರೆ ಮನೆಯ ಮುಂದೆ ರಸ್ತೆ ದಾಟುವರೇ ನಿಂತಿರುವ ಸಮಯ ಧರೆಗುಡ್ಡೆ ಕಡೆಯಿಂದ ಮೋಟಾರು ಸೈಕಲ್ ನಂಬ್ರ ಕೆಎ-19-ಇಹೆಚ್-3679 ನೇ ಯದರ ಸವಾರ ಸಂದೀಪ್ ಎಂಬವನು ಮೋಟಾರು ಸೈಕಲನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕೊಂಡು ಬಂದು ರಸ್ತೆ ದಾಟಲು ನಿಂತಿದ್ದ ಸುರೇಶ್ ಪೂಜಾರಿಯರ ತಾಯಿ ಲಲಿತಾ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಲಲಿತಾ ರವರು ರಸ್ತೆಗೆ ಬಿದ್ದು ಅವರ ತಲೆಯ ಹಿಂಬದಿಗೆ ಗಂಬೀರ ಗುದ್ದಿದ ಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಮೂಡಬಿದ್ರೆ ಆಳ್ವಾಸ್ ಅಸ್ಪತ್ರೆಗೆ ಕರೆದು ಕೊಂಡು ಹೋಗಿದ್ದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಎ.ಜೆ ಅಸ್ಪತ್ರೆಗೆ ಕರೆದು ಕೊಂಡು ಹೋದಾಗ ಆಸ್ಪತ್ರೆಯ ವೈದ್ಯಾದಿಕಾರಿಯವರು ಮಂಗಳೂರು ವೆನ್ಲಾಕ್ ಅಸ್ಪತ್ರೆಗೆ ಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಮಂಗಳೂರು ವೆನ್ಲಾಕ್ ಅಸ್ಪತ್ರೆಗೆ ಕೊಂಡು ಹೋಗಿ ದಾಖಲಿಸಿದ್ದು ಚಿಕಿತ್ಸೆ ಫಲ ಕಾರಿಯಾಗದೆ ಮೃತ ಪಟ್ಟಿರುತ್ತಾರೆ.
5. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 03.01.14 ರಂದು ಬೆಳಿಗ್ಗೆ ಹೆಲೆನ್ ಆನಂದ್ ರವರು ಕೆಲಸಕ್ಕೆ ಹೋಗಿದ್ದು ಸಂಜೆ ಸುಮಾರು 5 ಗಂಟೆಗೆ ಹೆಲೆನ್ ಆನಂದ್ ರವರಿಗೆ ಅವರ ಮಗಳು ಫೋನ್ ಮಾಡಿ ತಂದೆ ಇಮ್ಮಾನುವೇಲ್ ಜತ್ತನ್ನ (73) ಎಂಬವರು ಕಾಣೆಯಾಗಿರುವುದಾಗಿ ತಿಳಿಸಿದ್ದು ಅವರು ಮಾನಸಿಕವಾಗಿ ಅಸ್ವಸ್ಥಗೊಂಡಿದ್ದು ಅವರ ಪತ್ತೆಯ ಬಗ್ಗೆ ಸಂಬಂಧಿಕರಲ್ಲಿ ಮತ್ತು ಇತರ ಕಡೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗದೇ ಇರುವುದರಿಂದ ಪತ್ತೆಮಾಡಿಕೊಡಬೇಕಾಗಿ ಕೋರಿಕೆ. ಕಾಣೆಯಾದವರ ವಿವರ : ಇಮ್ಯಾನ್‌ವೆಲ್ ಜತನ್ನ , ಗೋದಿ ಮೈಬಣ್ಣ, ಬಿಳಿ ತಲೆ ಕೂದಲು, ನೀಲಿಶರ್ಟ್ ಹಳದಿ ಬಣ್ಣದ ಬನಿಯಾನ್ ಧರಿಸಿರುತ್ತಾರೆ.
No comments:
Post a Comment