ದೈನಂದಿನ ಅಪರಾದ ವರದಿ.
ದಿನಾಂಕ 09.01.2014 ರ 16:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ 0
ಕೊಲೆ ಯತ್ನ 0
ದರೋಡೆ ಪ್ರಕರಣ 0
ಸುಲಿಗೆ ಪ್ರಕರಣ 1
ಮನೆ ಕಳವು ಪ್ರಕರಣ 0
ಸಾಮಾನ್ಯ ಕಳವು 1
ವಾಹನ ಕಳವು 0
ಮಹಿಳೆಯ ಮೇಲಿನ ಪ್ರಕರಣ 0
ರಸ್ತೆ ಅಪಘಾತ ಪ್ರಕರಣ 2
ವಂಚನೆ ಪ್ರಕರಣ 0
ಮನುಷ್ಯ ಕಾಣೆ ಪ್ರಕರಣ 1
ಹಲ್ಲೆ ಪ್ರಕರಣ 0
1. ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ಶ್ರೀಮತಿ ರೀನಾ ದಾಮೋದರ್ ರವರು ಮನೆಯಿಂದ ನಡೆದುಕೊಂಡು ಮನೆಯಿಂದ ಮಗಳು ಪೂಜಾ ಜೊತೆಯಲ್ಲಿ ನಡೆದುಕೊಂಡು ಹೋಗುತ್ತಾ ಮಂಗಳೂರು ನಗರದ ಟೌನ್ ಹಾಲ್- ಗಾಂಧಿಪಾರ್ಕ್ ನ ಮಧ್ಯದಲ್ಲಿರುವ ಇಂಟರ್ ಲಾಕ್ ಅಳವಡಿಸಿರುವ ದಾರಿಯಲ್ಲಿ ನಡೆದುಕೊಂಡು ಹೋಗುತ್ತಾ ಮಧ್ಯೆಗೆ ತಲುಪಿದಾಗ ಫಿರ್ಯಾದುದಾರರ ಹಿಂಭಾಗದಿಂದ ನಡೆದುಕೊಂಡು ಬಂದ ಓರ್ವ ವ್ಯಕ್ತಿ ಏಕಾಏಕಿ ಕುತ್ತಿಗೆಗೆ ಕೈ ಹಾಕಿ ಫಿರ್ಯಾದುದಾರರ ಕುತ್ತಿಗೆಯಲ್ಲಿದ್ದ ಸರಗಳ ಪೈಕಿ 40 ಗ್ರಾಂ ತೂಕ ಚಿನ್ನದ ಪ್ಲೈನ್ ಚೈನನ್ನು ಬಲತ್ಕಾರವಾಗಿ ಸುಲಿಗೆ ಮಾಡಿರುತ್ತಾನೆ.
2. ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 08.01.2013 ರಂದು ಆಂಬ್ಲ ಮೊಗರು ಎಂಬಲ್ಲಿ ದಾಮೋಧರ ಪೂಜಾರಿ ಎಂಬವರು ಕೆ.ಎ 18-8850 ನೇ ಬಸ್‌ನಲ್ಲಿ ಜನದಟ್ಟನೆ ಇದ್ದ ಕಾರಣ ಬಸ್ಸಿನ ಮುಂದಿನ ಡೋರ್‌ನಲ್ಲಿ ಇದ್ದು ಚಾಲಕ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ದಾಮೋಧರ ಪೂಜಾರಿ ಯವರು ಒಮ್ಮೆಲೆ ರಸ್ತೆಗೆ ಎಸೆಯಲ್ಪಟ್ಟು ಗಂಬೀರ ಗಾಯಗೊಂಡಿದ್ದಾರೆ.
3. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28-12-2013 ರಂದು ಸಂಜೆ ಸುಮಾರು 6-00 ಗಂಟೆಯಿಂದ ದಿನಾಂಕ 30-12-2013 ರಂದು ಬೆಳಿಗ್ಗೆ ಸುಮಾರು 8-00 ಗಂಟೆಯ ಮಧ್ಯೆ ಮಂಗಳೂರು ತಾಲೂಕು ಬಾಳ ಗ್ರಾಮದ ಹೆಚ್‌ಪಿಸಿಎಲ್‌ಗೆ ಸಂಬಂದಪಟ್ಟ ಕಂಪೌಂಡಿನ ಒಳಗಡೆ ಸತೀಶ್ ಶೆಟ್ಟಿಯವರಿಗೆ ಸಂಬಂದಿಸಿದ ಟಾಟಾ ಹಿಟಾಚಿ 200 ಮೆಷಿನ್‌ನಲ್ಲಿದ್ದ ಹೈಟ್ರೋಲಿಕ್ ಪಂಪ್‌ನ್ನು ಆಪರೇಟರ್ ಸಂದೀಪ್ ಎಂಬಾತನು ಕಳ್ಳತನ ಮಾಡಿಕೊಂಡು ಹೋಗಿರುತ್ತಾನೆ.
4. ಬಜಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 08.01.2013 ರಂದು ಶಿವರಾಮ ಶೆಟ್ಟ ಎಂಬವರು KA 19 EK 2274 ನೇ ಮೋಟಾರು ಸೈಕಲ್‌ನನ್ನು ಚಲಾಯಿಸಿಕೊಂಡು ಬರುತ್ತಾ ಪೆರ್ಮುದೆ ಎಂಬಲ್ಲಿ ತಲುಪುವಾಗ ಮುಂಭಾಗದಲ್ಲಿ ಬಂದ KA 19 B 7108 ನೇದನೆ ಕಾರು ಚಾಲಾಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ವಾಹನವನ್ನು ಚಲಾಯಿಸಿಕೊಂಡು ಬಂದು ಶಿವರಾಮ ಶೆಟ್ಟಿಯವರ ಬೈಕಿಗೆ ಡಿಕ್ಕಿ ಹೊಡೆದ ಪರಿಣಾ ರಸ್ತೆಗೆ ಬಿದ್ದು ಗಾಯಗೊಂಡಿರುತ್ತಾರೆ
5. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪದ್ಮಪ್ರಸಾಧ್ ಎಂಬವರು ದಿನಾಂಕ: 16.12.2013 ರಂದು ಬೈಕ್‌ನಂಬ್ರ: KA-05-ED-9496 ನೇ SUZUKI SAMURAI ಬೈಕ್‌ನಲ್ಲಿ ಮೇರಿಹಿಲ್ ಎಂಬಲ್ಲಿ ಇರುವ ತಮ್ಮ ಮನೆಯಿಂದ ಕೆಲಸದ ಬಗ್ಗೆ ಮಂಗಳೂರಿನ ಬಂದರಿಗೆ ಹೋದವರು ಕೆಲಸಕ್ಕೂ ಹೋಗದೆ ಮನೆಗೂ ಬಾರದೆ ಬೈಕ್ ಸಮೇತ ಕಾಣೆಯಾಗಿದ್ದು ಸದ್ರಿಯವರ ಪತ್ತೆಯ ಬಗ್ಗೆ ಸ್ನೇಹಿತರಲ್ಲಿ ಮತ್ತು ಸಂಬಂಧಿಕರಲ್ಲಿ ವಿಚಾರಿಸಿದಲ್ಲಿ ಇದುವರೆಗೂ ಪತ್ತೆಯಾಗಿರುವುದಿಲ್ಲ.
No comments:
Post a Comment