Friday, January 31, 2014

Dialy Crime Reports 31-01-2014

ದೈನಂದಿನ ಅಪರಾದ ವರದಿ.

ದಿನಾಂಕ 31.01.201416:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

1

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

1

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

1

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

5

ವಂಚನೆ ಪ್ರಕರಣ        

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1. ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಬಂಟ್ವಾಳ ತಾಲೂಕು ನರಿಂಗಾನ ಗ್ರಾಮದ ಕಲ್ಲರಕೋಡಿ ಎಂಬಲ್ಲಿ ದಿನಾಂಕ 27-01-2014 ರಂದು ರಾತ್ರಿ 10:00 ಗಂಟೆಗೆ ಮಂಜನಾಡಿ ಕಡೆಯಿಂದ ನೆತ್ತಿಲಪದವು ಕಡೆಗೆ ಕೆಎ-19-ಇಸಿ-9483 ನೇ ಬೈಕು ಸವಾರ ರವಿ ಎಂಬವರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಮೇಲ್ಕಾಣಿಸಿದ ಸ್ಥಳದಲ್ಲಿ ತಲುಪಿ ಬ್ರೇಕ್ ಹಾಕಿದಾಗ ಬೈಕ್ ಮಗುಚಿ ಬಿದ್ದು, ಸಹಸವಾರ ರಸ್ತೆಗೆ ರಟ್ಟಿ, ಅವರ ಬಲಕಾಲು ಪಾದದ ಮೇಲೆ ಬೈಕ್ ಬಿದ್ದು, ಪಾದಕ್ಕೆ ಕೀಲು ಮುರಿತದ ಗಾಯವಾಗಿರುತ್ತದೆ ಹಾಗೂ ಮಂಗಳೂರು ಯೇನೆಪೋಯಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.

 

2. ಉರ್ವಾ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿಯವರಾದ ಶ್ರೀಮತಿ ಯಶವಂತಿ ರವರ ಗಂಡನಾದ ವಿವೇಕ ಪೂಜಾರಿ ಎಂಬವರು ದಿನಾಂಕ 30-01-2014 ರಂದು 10:00 ಗಂಟೆಗೆ ಮನೆಯಿಂದ ಪೈಟಿಂಗ್ ಕೆಲಸಕ್ಕೆ ಹೋಗಿದ್ದು ನಂತರ ಪಿರ್ಯಾದಿಯವರು ಕೂಲಿ ಕೆಲಸಕ್ಕೆ ಹೋಗಿದ್ದು, ಸಂಜೆ ಕೆಲಸ ಮುಗಿಸಿ ಮನೆಗೆ ಬಂದಾಗ ದಾರಿ ಮಧ್ಯೆ ತನ್ನ ಗಂಡನಿಗೆ ಯಾರೋ ಇಬ್ಬರು ಹೊಡೆದಿದ್ದು ಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಯಾರೋ ಎ.ಜೆ ಆಸ್ಪತ್ರೆಗೆ ದಾಖಲು ಮಾಡಿರುವಂತೆ ತಿಳಿದು ಬಂದಂತೆ ಪಿರ್ಯಾದಿಯು ಎ.ಜೆ ಆಸ್ಪತ್ರೆಗೆ ಹೋಗಿ ನೋಡಿದಲ್ಲಿ ಗಾಯಾಳು ತನ್ನ ಗಂಡ ವಿವೇಕ ಪೂಜಾರಿ ತೀವ್ರ ತರದ ಗಾಯದಿಂದ ಚಿಕಿತ್ಸೆಯಲ್ಲಿದ್ದು, ಈ ಸಮಯ ತನಗೆ ಮಂಜುನಾಥ ಯಾನೆ ಕಳ್ಳ ಮಂಜ ಮತ್ತು ಇನ್ನೊಬ್ಬನು ಸೇರಿ ಚೂರಿಯಿಂದ ತಿವಿದು ತೀವ್ರ ಸ್ವರೂಪದ ಗಾಯ ಉಂಟು ಮಾಡಿರುತ್ತಾರೆ ಎಂದು ತಿಳಿಸಿದ್ದು ನಂತರ ಮಾತನಾಡಲು ಅಸೌಖ್ಯವಾಗಿದ್ದು ಹೆಚ್ಚಿನ ಚಿಕಿತ್ಸೆಗೆ ತೀವ್ರ ಘಟಕಕ್ಕೆ ವೈದ್ಯರು ದಾಖಲು ಮಾಡಿರುತ್ತಾರೆ.

 

3. ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದುದಾರರಾದ ಶ್ರೀ ರೋಶನ್ ಸಲ್ದಾನಾ ರವರ ಬಾಬ್ತು ಸ್ಟೇಟ್ ಬ್ಯಾಂಕ್ ನಿಂದ ಜಲ್ಲಿಗುಡ್ಡೆ ವರೆಗೆ ಚಲಿಸುವ ಸಿಟಿ ಬಸ್ ಕೆಎ 19 ಡಿ 2829 ರಲ್ಲಿ ದಿನಾಂಕ 30-01-14 ರಂದು ಚಕ್ಕರ್ ಆಗಿ ಹೋಗಿದ್ದು, ಸಂಜೆ 3-30 ಗಂಟೆಗೆ ಬಜಾಲ್ ಕ್ರಾಸ್ ನಿಂದ ಸ್ವಲ್ಪ ಮುಂದೆ ಒಂದು ಟಾಟಾ ಇಂಡಿಕಾ ಕಾರು ಎದುರು ಬಂದುದರಿಂದ ರಸ್ತೆ ಬ್ಲಾಕ್ ಆಯ್ತು. ಇದರಿಂದಾಗಿ ಬಸ್ ಚಾಲಕ ಹಾಗೂ ಕಾರಿನಚಾಲಕರ ಮಧ್ಯೆ ಮಾತಾಗಿದ್ದು, ನಂತರ ಫಿರ್ಯಾದುದಾರರು ಬಸ್ ನಿಂದ ಇಳಿದು ಕಾರು ಹಿಂತೆಗೆಯುವಂತೆ ವಿನಂತಿಸಿದಲ್ಲಿ ಆತ ಅವಾಚ್ಯ ಶಬ್ದಗಳಿಂದ ಬೈದಿದ್ದು, ನಂತರ ಬಸ್ ಚಾಲಕರಲ್ಲಿ ಬಸ್ ಹಿಂತೆಗೆಯುವಂತೆ ಹೇಳಿ ಬಸ್ ಚಲಾಯಿಸಿಕೊಂಡು ಮುಂದಕ್ಕೆ ಬಂದಿರುತ್ತಾರೆ. ನಂತರ ಸಂಜೆ 4-00 ಗಂಟೆಯ ವೇಳೆಗೆ ಕಂಕನಾಡಿ ಶಾಲೆಯ ಮುಂಭಾಗ ಬಸ್ ಸ್ಟಾಪ್ ಬಳಿ ತಲುಪುತ್ತಿದ್ದಂತೆಯೇ ಒಂದು ಇಂಡಿಕಾ ಕಾರು ಹಾಗೂ ಓಮ್ನಿ ಕಾರಿನಲ್ಲಿ ಸುಮಾರು 25-30 ವರ್ಷದ 4 ಜನ ಯುವಕರು ಬಂದು ಬಸ್ ಗೆ ಕಾರನ್ನು ಅಡ್ಡ ಇಟ್ಟು, ಫಿರ್ಯಾದುದಾರರ ಬಳಿಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು, ಫಿರ್ಯಾದುದಾರರ ಮುಖಕ್ಕೆ, ಕೆನ್ನೆಗೆ, ತಲೆಗೆ ಹಾಗೂ ಶರೀರಕ್ಕೆ ಹೊಡೆದುದಲ್ಲದೇ, ಫಿರ್ಯಾದುದಾರರ ಕುತ್ತಿಗೆಯಲ್ಲಿದ್ದ ಸುಮಾರು ಒಟ್ಟು 12.5 ಪವನ್ ತೂಕದ ಚಿನ್ನದ ಚೈನು ಮತ್ತು ಕೈಯಲ್ಲಿದ್ದ ಬ್ರಾಸ್ ಲೈಟ್ ನ್ನು ಎಳೆದುಕೊಂಡು ಹೋಗಿದ್ದು, ಫಿರ್ಯಾದುದಾರರು ಕಾರಿನ ನಂಬ್ರವನ್ನು ನೋಡಿದ್ದು, KA 19 B 9733 ಮತ್ತು  KA 19 C 6567 ಆಗಿದ್ದು, ನಂತರ ಫಿರ್ಯಾದುದಾರರು ಚಿಕಿತ್ಸೆ ಬಗ್ಗೆ ಕೊಲಸೋ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ.

 

4. ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 30-01-2014 ರಂದು 13-15 ಗಂಟೆಗೆ ರಾಜೇಶ ಎಂಬವನು ಮಂಗಳೂರು ತಾಲೂಕು ಮಾರ್ಪಾಡಿ ಗ್ರಾಮದ ಹಳೇ ಬಸ್ನಿಲ್ದಾಣದ ಬಳಿಯಿರುವ ರಿಕ್ಷಾ ಪಾರ್ಕ್ಬಳಿಯ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಟ್ಕಾ ಎಂಬ ಜುಗಾರಿ ಆಟಕ್ಕಾಗಿ ಹಣ ಸಂಗ್ರಹಿಸುತ್ತಿದ್ದುದನ್ನು ಅಬಕಾರಿ ಮತ್ತು ಲಾಟರಿ ಜಾರಿ ನಿಷೇಧ ದಳ, ಮಂಗಳೂರು ವಿಶೇಷ ಪೊಲೀಸ್ಠಾಣೆಯ ನಿರೀಕ್ಷಕರಾದ ಶ್ರೀ ಎಫ್.ಎನ್. ಲಿಂಗಾವಲ್ ರವರು ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಕ್ರಮ ಕೈಗೊಳ್ಳುವಂತೆ ಠಾಣೆಗೆ ವರದಿ ನೀಡಿರುವುದಾಗಿದೆ.

 

5. ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 24/01/2014 ರಂದು ಬೆಳಿಗ್ಗೆ 10.00 ಗಂಟೆಯಿಂದ ದಿನಾಂಕ 29/01/2014 ರಂದು 14.00 ಗಂಟೆಯ ಮದ್ಯೆ ಯಾರೋ ಕಳ್ಳರು ಮಂಗಳೂರು ನಗರದ ಪಾಂಡೇಶ್ವರದಲ್ಲಿರುವ ಅಲ್ಬುಕರ್ಕ ಛೇಂಬರ್ಸ ನ ಕಟ್ಟಡದಲ್ಲಿರುವ 18 ಕರ್ನಾಟಕ ಬೇಟಾಲಿಯನ್ನ ಎನ್.ಸಿ.ಸಿ ಬಾಬ್ತು ವಾಹನ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ರಕ್ಷಣಾ ಇಲಾಖೆಯ ಕರ್ತವ್ಯಕ್ಕೆ ಸಂಬಂದಪಟ್ಟ 05 D 162139 L ನೇ ನಂಬ್ರದ Swaraj Mazda ವಾಹನದ ಡಿಸ್ಕ್ ಸಹಿತ ಟಾಯರ್ ನ್ನು ಕಳುವು ಮಾಡಿಕೊಂಡು ಹೋಗಿದ್ದು ಕಳುವಾದ ಸೊತ್ತಿನ ಅಂದಾಜು ಮೌಲ್ಯ 21,000 ರೂಪಾಯಿ ಆಗಬಹುದು.

 

6. ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29-01-2014 ರಂದು ಪಿರ್ಯಾದಿದಾರರಾದ ಶ್ರೀ ಗಣಪತಿ ಕೆ. ನಾಯ್ಕ್ ರವರು ಸವಾರರಾಗಿ ಹಾಗೂ ಮನೋಹರ್ ರವರು ಸಹಸವಾರರಾಗಿ ಕೆಲಸದ ನಿಮಿತ್ತ ಕಂಪನಿಯ ಬಾಬ್ತು ಕೆ ಎ 19-ಇಎಪ್- 0820 ನೇ ಸ್ಕೂಟರ್ ನಲ್ಲಿ ಮುಲ್ಕಿಗೆ ತೆರಳಿ ವಾಪಾಸು ಬೈಕಂಪಾಡಿ ಕಡೆಗೆ ರಾ ಹೆ 66 ರಲ್ಲಿ ತೆರಳುತ್ತಿದ್ದು ಮಂಗಳೂರು ತಾಲೂಕು ಕುಳಾಯಿ ಗ್ರಾಮದ ಹೊನ್ನಕಟ್ಟೆ ಜಂಕ್ಷನ್ ಬಳಿ ರಾತ್ರಿ 8-15 ಗಂಟೆಗೆ ತಲುಪುತ್ತಿದ್ದಂತೆ ಮಂಗಳೂರು ಕಡೆಯಿಂದ ಕುಳಾಯಿಗುಡ್ಡೆ ಕಡೆಗೆ ಕೆ ಎ-19- ಇಜೆ- 4762 ನೇ ಸ್ಕೂಟರನ್ನು ಅದರ ಸವಾರ ದೇವಪ್ಪ ನಾಯ್ಕನು ಅಜಾಗರೂಕತೆಯಿಂದ ಒಮ್ಮೆಲೆ ರಸ್ತೆಯ ಬಲಕ್ಕೆ ತಿರುಗಿಸಿದ ಪರಿಣಾಮ ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಸ್ಕೂಟರಿಗೆ ಡಿಕ್ಕಿ ಉಂಟಾಗಿ ಪಿರ್ಯಾದಿದಾರರು ಹಾಗೂ ಸಹಸವಾರ ಮನೋಹರರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದು ಹಾಗೂ ಅಪಘಾತ ಪಡಿಸಿದ ಸವಾರ ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದು ಅಪಘಾತದಿಂದಾಗಿ ಮನೋಹರ ರವರ ತಲೆಗೆ ಗುದ್ದಿದ ಗಾಯ ಹಾಗೂ ಕಾಲಿಗೆ ತರಚಿದ ಗಾಯವಾಗಿದ್ದು, ಮನೋಹರರವರಿಗೆ ಹೆಚ್ಚಿನ ಗಾಯವಾಗದ ಕಾರಣ ಪಿರ್ಯಾದಿದಾರರು ಮನೋಹರರವರ ಜೊತೆ ರೂಮಿಗೆ ತೆರಳಿದ್ದು ಈ ದಿನ ದಿನಾಂಕ 30-01-14 ರಂದು ಬೆಳಿಗ್ಗೆ ಮನೋಹರ್ ರವರಿಗೆ ತಲೆಗೆ ಆದ ಗಾಯದಿಂದ ನೋವುಂಟಾಗಿದ್ದರಿಂದ ಚಿಕಿತ್ಸೆ ಬಗ್ಗೆ ಮಂಗಳೂರಿನ ಪಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.

 

7. ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28/01/2014 ರಂದು 17.00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಮಹಮ್ಮದ್ ರವರು ತನ್ನ ಬಾಬ್ತು ಮಾರುತಿ ಓಮ್ನಿ ಕಾರು ನಂಬ್ರ KA 19 MD 8034 ನೇದರಲ್ಲಿ ಗುರುಕಂಬ್ಳದಿಂದ ಕೈಕಂಬದ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಮಂಗಳೂರು ತಾಲೂಕು ಮೂಡುಪೆರಾರ ಗ್ರಾಮದ ಗುರುಕಂಬ್ಳ ತಿರುವು ರಸ್ತೆ ಎಂಬಲ್ಲಿ ತಲುಪುತಿದ್ದಂತೆ, ಮೂಡಬಿದ್ರೆ ಕಡೆಯಿಂದ ಮಂಗಳೂರು ಕಡೆಗೆ ಲಾರಿ ನಂಬ್ರ KA 19 C 7932 ನೇದ್ದನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮಾರುತಿ ಓಮ್ನಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಪಿರ್ಯಾದಿದಾರರ ಹಣೆಗೆ ತರಚಿದ ಗಾಯ, ಎಡಕೈಯ 4 ಬೆರಳುಗಳಿಗೆ ರಕ್ತಗಾಯವಾಗಿದ್ದು, ಅವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ತೇಜಸ್ವಿನಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ.

 

8. ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 30-01-14 ರಂದು ಮಧ್ಯಾಹ್ನ ಪಿರ್ಯಾದಿದಾರರಾದ ಶ್ರೀ ಮೋಹನ್ ಕುಮಾರ್ ರವರು ಅವರ ದೊಡ್ಡಪ್ಪನವರಾದ ಮೋನಪ್ಪ ದೇವಾಡಿಗ ಎಂಬವರ ಜೊತೆಯಲ್ಲಿ ಹೊಸಬೆಟ್ಟು ದೀಪಾ ಫಾರ್ಮ್ಸ್ ಬಳಿ ಇರುವ ಪಿರ್ಯಾದಿದಾರರ ತಂದೆಯ ಬಾಬ್ತು ಚಾ, ತಿಂಡಿಯ ಕ್ಯಾಂಟೀನ್ ಗೆ ಹೋಗುವರೇ ರಾ.ಹೆ. 66 ರ ಪಶ್ಚಿಮ ಬದಿಗೆ ಬಂದು ಬಲಗಡೆ ನೋಡುತ್ತಾ ರಸ್ತೆ ದಾಟುತ್ತಿದ್ದ ಸಮಯ ಮಧ್ಯಾಹ್ನ ಸಮಯ ಸುಮಾರು 3-30 ಗಂಟೆಗೆ ಸುರತ್ಕಲ್ ಕಡೆಯಿಂದ ಬೈಕಂಪಾಡಿ ಕಡೆಗೆ ಒಂದು ಬಸ್ಸು ಬರುತ್ತಿದ್ದು ಅದರ ಹಿಂದಿನಿಂದ ಒಂದು ಪಿಕ್ ಅಪ್ ವಾಹನ ಕೆಎ-19-ಬಿ-9027 ನೇದನ್ನು ಅದರ ಚಾಲಕ ಅತೀ ವೇಗವಾಗಿ ಚಲಾಯಿಸಿಕೊಂಡು ಬರುತ್ತಾ ಬಸ್ಸಿನ  ಎಡ ಬದಿಯಿಂದ ಓವರ್ ಟೇಕ್ ಮಾಡಿ ರಸ್ತೆಯ ತೀರಾ ಎಡ ಬದಿಗೆ ಬಂದು ಪಿರ್ಯಾದಿದಾರರ ದೊಡ್ಡಪ್ಪನವರಿಗೆ ಢಿಕ್ಕಿ ಹೊಡೆದ ಪರಿಣಾಮ ಅವರ ತಲೆಗೆ ರಕ್ತ ಗಾಯವಾಗಿದ್ದು ಬಲ ಕೈಗೆ ಮೂಳೆ ಮುರಿತದ ಗಾಯ ಹಾಗೂ ಬೆನ್ನು ಭಾಗದ ಒಳಗಡೆ ಗಂಭೀರ ಗಾಯವಾಗಿದ್ದು ಸದ್ರಿಯವರನ್ನು ಚಿಕಿತ್ಸೆಯ ಬಗ್ಗೆ ಸುರತ್ಕಲ್ ಪದ್ಮಾವತಿ ಆಸ್ಪತ್ರೆಗೆ ಕರೆ ತಂದು ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಎ.ಜೆ. ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.

 

9. ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 31-01-14 ರಂದು ಬೆಳಿಗ್ಗೆ 10-30 ಗಂಟೆಗೆ ಮಂಗಳೂರು ತಾಲೂಕು ಕಾಟಿಪಳ್ಳ ಗ್ರಾಮದ ಕೈಕಂಬ ಎಂಬಲ್ಲಿ ಪಿರ್ಯಾದಿದಾರರಾದ ಮೊಹಮ್ಮದ್ ನೌಷಾದ್ @ ಹಸನಬ್ಬಾ ರವರು ಮತ್ತು ದಾಮೋದರ್ ರವರು ಹೊಟೇಲಿಗೆ ಹೋಗುತ್ತಿದ್ದಾಗ ಸೈಂಟ್ ಆ್ಯಂಟನಿ ಬಸ್ಸಿನ ಚಾಲಕ ರಾಜ ಹಾಗೂ ಆತನ ಸ್ನೇಹಿತ ಗಂಗಾಧರ ಎಂಬವರು ಮೋಟಾರ್ ಸೈಕಲ್ ನಲ್ಲಿ ಬಂದು ನಿನ್ನೆ  ದಿನಾಂಕ; 30-01-14 ರಂದು ಬಸ್ಸಿನ ವೇಳಾ ಪಟ್ಟಿ ವಿಷಯದಲ್ಲಿ ನಡೆದ ಮಾತಿನ ಜಗಳದ ವಿಚಾರವಾಗಿ ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ರಾಜ ಎಂಬಾತನು ಅವಾಚ್ಯ ಶಬ್ದಗಳಿಂದ ಬೈದು ಹೊಟೇಲ್ ನ ಹೊರಗಡೆ ಇದ್ದ ಸೋಡಾ ಬಾಟಲಿಯನ್ನು ತುಂಡು ಮಾಡಿ ಪಿರ್ಯಾದಿದಾರರಿಗೆ ಎಡ ಕೈಯಿಂದ ಹೊಡೆದು ಬಲಕೈಯಲ್ಲಿದ್ದ ಸೋಡಾ ಬಾಟಲಿ ತುಂಡಿನಿಂದ ಪಿರ್ಯಾದಿದಾರರ ಮುಖಕ್ಕೆ ಗೀರಿ ರಕ್ತ ಗಾಯಗೊಳಿಸಿದ್ದಲ್ಲದೇ ಅಲ್ಲಿದ್ದ ಗಂಗಾಧರ ಎಂಬಾತನು ಜೋರಾಗಿ ಮಾತನಾಡಿ ಬೆದರಿಕೆ ಹಾಕಿದ್ದು ಅಲ್ಲದೇ ಚಾಲಕ ದಾಮೋದರರವರಿಗೆ ಕೂಡಾ ಬೆದರಿಕೆ ಹಾಕಿದ್ದು ಈ ಗಲಾಟೆಗೆ ಬಸ್ಸಿನ ಮಾಲಿಕರಾದ ರೋಶನ್ ರವರು ಕಾರಣರಾಗಿರುತ್ತಾರೆ.

 

10. ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ  30.01.2014 ರಂದು  ರಾತ್ರಿ ಸುಮಾರು 7:45 ಗಂಟೆ ಸಮಯಕ್ಕೆ ಡೋನಾಲ್ಡ್ಡಿಸೋಜ ಎಂಬವರು  ಅವರ ಬಾಬ್ತು ಮಹೀಂದ್ರ XYLO ಕಾರು  ನಂಬ್ರ KA 19 MA 3202 ನ್ನು  ಸಾರ್ವಜನಿಕ NH 75ನೇ ರಸ್ತೆಯಾದ BC ರೋಡ್‌  ಕಡೆಯಿಂದ ಪಡೀಲ್ಕಡೆಗೆ ಮಾನವ ಜೀವಕ್ಕೆ ಅಪಾಯವಾಗುವಂತೆ ಅತೀ ವೇಗ  ಯಾ ದುಡುಕುತನದಿಂದ ಚಲಾಯಿಸಿ ಕೊಡೆಕ್ಕಲ್ ಎಂಬಲ್ಲಿರುವ KBS ಜನರಲ್‌  ಸ್ಟೋರ್ಅಂಗಡಿಯ ಮುಂಭಾಗ ರಸ್ತೆ ಅಡ್ಡ ದಾಟುತ್ತಿದ್ದ ಪುರುಷೋತ್ತಮ ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ ಪುರುಷೋತ್ತಮರವರು ಡಾಮರು ರಸ್ತೆಗೆ ಬಿದ್ದು  ತಲೆಗೆ, ಕೈ, ಕಾಲುಗಳಿಗೆ, ಮತ್ತು ಎದೆಯ ಭಾಗಕ್ಕೆ ರಕ್ತ ಬರುವ ಹಾಗೂ ಗುದ್ದಿದ ನೋವುಂಟಾದವರನ್ನು ಚಿಕಿತ್ಸೆಯ ಸಲುವಾಗಿ ಕಂಕನಾಡಿ ಫಾದರ್ಮುಲ್ಲರ್ಸಾಗಿಸುತ್ತಿದ್ದಂತೆ ಮೃತಪಟ್ಟಿರುವುದು.

No comments:

Post a Comment