ದೈನಂದಿನ ಅಪರಾದ ವರದಿ.
ದಿನಾಂಕ 17.01.2014 ರ 16:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ
|
:
|
0
|
ಕೊಲೆ ಯತ್ನ
|
:
|
0
|
ದರೋಡೆ ಪ್ರಕರಣ
|
:
|
0
|
ಸುಲಿಗೆ ಪ್ರಕರಣ
|
:
|
0
|
ಹಲ್ಲೆ ಪ್ರಕರಣ
|
:
|
2
|
ಮನೆ ಕಳವು ಪ್ರಕರಣ
|
:
|
0
|
ಸಾಮಾನ್ಯ ಕಳವು
|
:
|
0
|
ವಾಹನ ಕಳವು
|
:
|
0
|
ಮಹಿಳೆಯ ಮೇಲಿನ ಪ್ರಕರಣ
|
:
|
0
|
ರಸ್ತೆ ಅಪಘಾತ ಪ್ರಕರಣ
|
:
|
3
|
ವಂಚನೆ ಪ್ರಕರಣ :
|
:
|
0
|
ಮನುಷ್ಯ ಕಾಣೆ ಪ್ರಕರಣ
|
:
|
0
|
ಇತರ ಪ್ರಕರಣ
|
:
|
0
|
1.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 16.01.2014 ರಂದು ರಾತ್ರಿ ಸಮಯ ಸುಮಾರು 10.20ಗಂಟೆಗೆ ಪಿರ್ಯಾದುದಾರರಾದ ಶ್ರೀ ರಾಜೇಶ್ ಕೊಟ್ಟಾರಿ ಎಂಬವರು ಮಲ್ಲಿಕಟ್ಟೆಯ ಅಂಚನ್ ಬಾರ್ & ರೆಸ್ಟೋರೆಂಟ್ ನಲ್ಲಿ ಉಟವನ್ನು ಪಾರ್ಸೆಲ್ತೆಗೆದುಕೊಂಡು ಹೊರಗೆ ಬಂದು ಅಲ್ಲೇ ಪಕ್ಕದಲ್ಲಿ ನಿಲ್ಲಿಸಿದ್ದ ಕಾರಿನ ಹತ್ತಿರ ಹೋಗುವಾಗ ಪಿರ್ಯಾದಿದಾರರಿಗೆ ಪರಿಚಯವಿರುವ ಸುಜಿತ್ದೇವಾಡಿಗನು ಒಮ್ಮೆಲೇ ಮರದ ರೀಪನ್ನು ತೆಗೆದುಕೊಂಡು ಬಂದು ಏಕಾಏಕೀಯಾಗಿ ಪಿರ್ಯಾದುದಾರರ ಬಲಭುಜಕ್ಕೆ ಮತ್ತು ಬಲಕೈಯ ಮೊಣಕೈಯತಟ್ಟಿಗೆ ಹೊಡೆದು ಪಿರ್ಯಾದುದಾರರನ್ನು ಅವಾಚ್ಯ ಶಬ್ದಗಳಿಂದ ಬೈದು ಪರಾರಿಯಾಗಿರುತ್ತಾನೆ. ಪಿರ್ಯಾದಿದಾರರ ಪರಿಚಯದ ದಿನೇಶ್ ಅಂಚನ್ಗಲಾಟೆಯನ್ನು ಬಿಡಿಸಿದ್ದು, ನಂತರ ಅಲ್ಲಿ ಸೇರಿದ ಜನರು ಪಿರ್ಯಾದುದಾರರನ್ನು ಕೊಲಾಸೋ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ. ಸುಜಿತ್ದೇವಾಡಿಗ ಪಿರ್ಯಾದಿಗೆ ಹೊಡೆದ ಪರಿಣಾಮ ಬಲಭುಜಕ್ಕೆ ಮತ್ತು ಬಲ ಮೊಣ ಕೈ ತಟ್ಟೆಗೆ ಗುದ್ದಿದ ಗಾಯವಾಗಿ ಬಾಸುಂಡೆ ಬಂದಿರುತ್ತದೆ. ಸುಜಿತ್ದೇವಾಡಿಗನಿಗೆ ಪಿರ್ಯಾದುದಾರರ ವ್ಯವಹಾರದ ಮೇಲೆ ಅಸೂಯೆ ಉಂಟಾಗಿ ಈ ಹಲ್ಲೆ ನಡೆಸಿರುವುದಾಗಿದೆ.
2.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 16.10.2014 ರಂದು ಪಿರ್ಯಾದಿದಾರರಾದ ನವೀನ್ ಕೆ. ಎಂಬವರು ಕೋಡಿಕಲ್ ತನ್ನ ಬಾಡಿಗೆ ಮನೆಯಿಂದ ನಡೆದುಕೊಂಡು ಬರುತ್ತಾ ಮದ್ಯಾಹ್ನ 13.20 ಗಂಟೆಗೆ ಮಂಗಳೂರು ನಗರದಸಾರ್ವಜನಿಕ ರಸ್ತೆಯಾದ ಕೊಟ್ಟಾರ ಚೌಕಿ ಬಳಿ ಕೋಡಿಕಲ್ ಕ್ರಾಸ್ ರಾ.ಹೆ 66ನೇದಕ್ಕೆ ತಲುಪಿದಾಗ ಆರೋಪಿ ಪಿಕ್ ಅಪ್ ವಾಹನಕೆಎ.19.ಎಂಎ.2196ನೇದನ್ನು ಅದರ ಚಾಲಕ ಶ್ರೀಕಾಂತ್ ಎಂಬವರು ನಂತೂರು ಕಡೆಯಿಂದ – ಕೂಳೂರು ಕಡೆಗೆ ಅತೀವೇಗ ಮತ್ತುಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಎಡ ಭುಜಕ್ಕೆಮತ್ತು ಎಡ ಪಕ್ಕೆಲುಬಿಗೆ ಗುದ್ದಿದ ಗಾಯವಾಗಿ ಚಿಕಿತ್ಸೆ ಬಗ್ಗೆ ನಗರದ ಎ.ಜೆ. ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ.
3. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ. ಅಬ್ದುಲ್ ಲತೀಫ್ ರವರು ಈ ದಿನ ದಿನಾಂಕ 16-01-2014 ರಂದು ಸಂಜೆ ಬದ್ರಿಯ ಕೋಡಿ ಜುಮ್ಮ ಮಸೀದಿಗೆ ಹೋಗಿ ನಮಾಜ್ ಮಾಡಿ ಬಳಿಕ ಗೆಳೆಯರಾದ ಬಶೀರ್ ಹಾಗೂ ಇಸ್ಮಾಯಿಲ್ ರವರೊಂದಿಗೆಕೋಡಿ ಸೋಲಾರ್ ಕ್ಲಬ್ನ ಬಳಿ ಕುಳಿತುಕೊಂಡಿರುವಾಗ ಸಮಯ ಸುಮಾರು ಸಂಜೆ 5:00 ಗಂಟೆಗೆ ಪಿರ್ಯಾದಿದಾರರ ಪರಿಚಯದವರಾದ ಮಣ್ಣನ್ಯಾನೆ ಮುನಾಫ್, ಅಲ್ತಾಫ್ ಹಾಗೂ ಚಬ್ಬಿ ಯಾನೆ ಕಬೀರ್ ಎಂಬವರುಗಳು ಎರಡು ಮೋಟಾರು ಸೈಕಲಿನಲ್ಲಿ ಕೋಟೆಪುರ ಕಡೆಯಿಂದ ಉಳ್ಳಾಲಕಡೆಗೆ ಬರುತ್ತಾ ಪಿರ್ಯಾದಿದಾರರನ್ನು ನೋಡಿ ಸ್ವಲ್ಪ ಮುಂದಕ್ಕೆ ಹೋಗಿ ನಿಲ್ಲಿಸಿ ಆ ಸಮಯ ಅವರ ಹಿಂಬದಿಯಿಂದ ಮೀನಿನ ಲಾರಿ ಬರುವುದನ್ನುನಿಲ್ಲಿಸಿ ಕಲ್ಲು ಹಾಗೂ ಮರದ ಸೋಂಟೆಯಿಂದ ಲಾರಿಯ ಗ್ಲಾಸನ್ನು ಹುಡಿ ಮಾಡುತ್ತಿದ್ದನು ಪಿರ್ಯಾದಿದಾರರು ಕಂಡು ಅವರ ಬಳಿ ಹೋಗಿ ಯಾಕೆಗಲಾಟೆ ಮಾಡುತ್ತೀರಿ ಎಂದು ಕೇಳಿದಾಗ ಚಬ್ಬಿ @ ಕಬೀರನು ಪಿರ್ಯದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದಿದ್ದು, ಈ ಸಮಯ ಮಣ್ಣನ್ಎಂಬಾತನು ಬೈಕಿನಲ್ಲಿದ್ದ ಯಾವುದೋ ಒಂದು ಅರಿತವಾದ ಆಯುಧವನ್ನು ತೆಗೆದು ಪಿರ್ಯಾದಿದಾರರ ಬಲಕೈಗೆ ಹೊಡೆದನು. ಇದರ ಪರಿಣಾಮಪಿರ್ಯಾದಿಧಾರರಿಗೆ ಕೈಗೆ ರಕ್ತ ಗಾಯವಾಗಿರುತ್ತದೆ. ಇದನ್ನು ನೋಡಿದ ಪಿರ್ಯಾದಿದಾರರ ಪೈಕಿ ಬಶೀರನು ತಡೆಯಲು ಬಂದಾಗ ಆರೋಪಿಗಳ ಪೈಕಿಅಲ್ತಾಫನು ಪಿರ್ಯಾದಿದಾರರನ್ನು ಉದ್ದೇಶಿಸಿ ಕೊಲ್ಲದೇ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿರುತ್ತಾನೆ. ಈ ಘಟನೆ ಕಾರಣವೇನೆಂದರೆಪಿರ್ಯಾದಿದಾರರ ಸಂಘಟನೆಯ ವೈ ಮನಸ್ಸು ಕಾರಣವಾಗಿರುತ್ತದೆ.
4.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 16-01-2014 ರಂದು 15-30 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಮೆಲ್ವಿನ್ ಡಿ’ಸೋಜಾ ರವರು ತನ್ನ ಬಾಬ್ತು ಮಾರುತಿ ಓಮ್ನಿ ನಂ ಎಮ್.ಹೆಚ್-05 ಎಎಕ್ಸ್-4378 ನೇದರಲ್ಲಿ ಗೆಳೆಯ ನಾದ ರಿಯಾಸ್ ಫೆರಾವೋರೋಂದಿಗೆ ಪ್ರಯಾಣಿಸಿಕೊಂಡು ಪಿರ್ಯಾದಿದಾರರು ಮಾರುತಿ ಓಮ್ನಿಯನ್ನು ಕೂಳೂರು ಕಡೆಯಿಂದ ಜೊಕಟ್ಟೆ ಕಡೆಗೆ ಚಲಾಯಿಸಿಕೊಂಡು ಬಂದುಪಣಂಬೂರು ಠಾಣಾ ವ್ಯಾಪ್ತಿಯ ಕುದುರೆಮುಖ ಜಂಕ್ಷನ್ ಬಳಿ ತಲುಪಿದಾಗ ಪಣಂಬೂರು ಸರ್ಕಲ್ ಕಡೆಯಿಂದ ತಣ್ಣೀರುಬಾವಿ ಕಡೆಗೆ ಲಾರಿ ನಂಎಪಿ-24 ಟಿಬಿ-0595 ನೇಯ ಲಾರಿಯನ್ನು ಅದರ ಚಾಲಕ ರಾಮಕೃಷ್ಣ ಎಂಬವರು ಅತಿ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡುಬಂದು ಕುದುರೆ ಮುಖ ಜಂಕ್ಷನ್ ಬಳಿ ಮಾರುತಿ ಓಮ್ನಿಯ ಬಲಬಾಗದ ಡೋರಿಗೆ ಬಲಬಾಗ ಹಿಂದುಗಡೆಯ ಬಾಡಿಗೆ ಡಿಕ್ಕಿ ಹೊಡೆದು ಜಖಂಗೊಳಿಸಿರುತ್ತಾರೆ.
5.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 16-01-2014ರಂದು ಸಮಯ ಸುಮಾರು ಬೆಳಿಗ್ಗೆ11.00 ಗಂಟೆಗೆ ಪಿರ್ಯಾದುದಾರರಾದ ಶ್ರೀ ಅರುಣಕಾರ್ ಎಂ. ರವರು ತನ್ನ ಸ್ಕೂಟರ್ ನಂಬ್ರ KA19-EB-3570 ರಲ್ಲಿ ಸವಾರರಾಗಿ ಬಿಕರ್ನಕಟ್ಟೆಕಡೆಯಿಂದ ಕದ್ರಿ ಶಿವಭಾಗ್ ಕಡೆಗೆ ಬರುತ್ತಾ ನಂತೂರು ಬಸ್ಸು ನಿಲ್ದಾಣ ತಲುಪುವಾಗ ಹಿಂದಿನಿಂದ ಅಂದರೆ ನಂತೂರು ಜಂಕ್ಷನ್ ಕಡೆಯಿಂದ ಬಸ್ಸುನಂಬ್ರKA.21-A-4460 ಅನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಸ್ಕೂಟರಿಗೆ ಡಿಕ್ಕಿ ಮಾಡಿದ ಪರಿಣಾಮ ಸ್ಕೂಟರಿನ ಸವಾರ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ತಲೆಗೆರಕ್ತಗಾಯವಾಗಿ ಸಿ.ಟಿ.ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ.
No comments:
Post a Comment