Tuesday, January 28, 2014

Daily Crime Reports 28-01-2014

ದೈನಂದಿನ ಅಪರಾದ ವರದಿ.

ದಿನಾಂಕ 28.01.201416:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

1

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

4

ವಂಚನೆ ಪ್ರಕರಣ        

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

4

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1. ಬರ್ಕೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 27-01-2014ರಂದು ಬೆಳಿಗ್ಗೆ 9-00 ಗಂಟೆಗೆ ಪಿರ್ಯಾದುದಾರರಾದ ಶ್ರೀ ಸತಿಶ್ ರವರು ಮಣ್ಣಗುಡ್ಡ ಬಳಿ ತನ್ನ ಕೆಲಸದ ನಿಮಿತ್ತ ಬಂದವರು ವಿಶಾಲ್ ನರ್ಸಿಗ ಹೋಂ ಕಡೆಗೆ ಹೋಗುವ ರಸ್ತೆಯಲ್ಲಿ ವೇರ್ ಹೌಸ್ ಕಡೆಗೆ ತಿರುಗುವ ತಿರುವಿನ ಬಳಿಯಿರುವ ಗೂಡಂಗಡಿ ಬಳಿ ನಿಂತುಕೊಂಡಿರುವ ಸಮಯ ಸುಮಾರು 9-15 ಗಂಟೆಗೆ ಕಾಪಿಗುಡ್ಡೆ ವಾಸಿ ಸಚಿನ್ ಎಂಬಾತನು ಕೈಯಲ್ಲಿ ಹೂವನ್ನು ಹಿಡಿದಿದ್ದು, ಓರ್ವ ಹುಡುಗಿಯ ಬಳಿ ಹೋಗಿ, ಆಕೆಗೆ ಕೊಟ್ಟಾಗ ಆಕೆಯು ನಿರಾಕರಿಸಿ, ಮುಂದೆ ಹೋಗುವಷ್ಟರಲ್ಲಿ ಸಚಿನನು ತನ್ನಲ್ಲಿದ್ದ  ಚಾಕುವಿನಂತಹ ಆಯುಧದಿಂದ ತನ್ನ ಹೊಟ್ಟೆಗೆ ತಾನೇ ತಿವಿದುಕೊಂಡು ರಕ್ತಗಾಯಪಡಿಸಿಕೊಂಡಿದ್ದು, ಆತನು ಪ್ರೇಮ ವೈಫಲ್ಯದಿಂದ ಮನನೊಂದು ಜಿಗುಪ್ಸೆಗೊಂಡು ಈ ರೀತಿ ಆತ್ಮಹತ್ಯೆಗೆ ಪ್ರಯತ್ನಿಸಿರುವುದಾಗಿದೆ.

 

2. ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಶಿವಪ್ರಸಾದ್ ರವರು ಮೋಟಾರುಸೈಕಲ್ ನಂಬ್ರ ಕೆ..19ವೈ 3301ನ್ನು ಕೆಲಸ ಮುಗಿಸಿ ಮನೆಗೆ ಹೋಗುವ ಸಮಯ ದಿನಾಂಕ:15-01-2014ರಂದು ರಾತ್ರಿ 08-30ಗಂಟೆಗೆ ತಿಬ್ಲೆಪದವು ಕಕ್ಕೆಮಜಲು ಮನೆಯ ಸಮೀಪ ರಸ್ತೆಯ ಬದಿ  ಗ್ರೌಂಡ್ ನಲ್ಲಿ ಪಾರ್ಕ್ ಮಾಡಿ ಹೋಗಿದ್ದು ಮರುದಿನ  ದಿನಾಂಕ:16-01-2014  ಬೆಳಿಗ್ಗೆ 08-30ಗಂಟೆಗೆ ಮನೆಯಿಂದ ಬಂದು ನೋಡಿದಾಗ ಮೋಟಾರು ಸೈಕಲ್ ನಿಲ್ಲಿಸಿದ ಸ್ಥಳದಲ್ಲಿ ಇಲ್ಲದೇ ಕಾಣೆಯಾಗಿದ್ದು ಈ ತನಕ ಹುಡುಕಾಡಿದಲ್ಲಿ ಪತ್ತೆಯಾಗಿಲ್ಲ, ಸದ್ರಿ ಮೊಟಾರು ಸೈಕಲ್ ನ್ನು ದಿನಾಂಕ:15-01-2014ರ ರಾತ್ರಿ 08-30ಗಂಟೆಯಿಂದ 16-01-2014ರ ಬೆಳಿಗ್ಗೆ 08-30ರ ಮದ್ಯೆ ಯಾರೋ ಕಳ್ಳರು ಕಳವು ಮಾಡಿರುವುದಾಗಿದೆ. ಸದ್ರಿ ಬೈಕಿನಲ್ಲಿ ಇಟ್ಟಿದ್ದ ಡ್ರೈವಿಂಗ್ ಲೈಸೆನ್ಸ್ ಕೂಡ ಕಳುವಾಗಿರುತ್ತದೆ . ಇದರ ಅಂದಾಜು ಮೌಲ್ಯ 28000/- ರೂ. ಆಗಿರುತ್ತದೆ.

 

3. ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 27/01/2014  ರಂದು 13.30 ಗಂಟೆಗೆ ತಾಳಿಪ್ಪಾಡಿ ಗ್ರಾಮದ, ಕಿನ್ನಿಗೋಳಿ ಮಾರ್ಕೆಟ್  ರಸ್ತೆಯಲ್ಲಿರುವ ವಿದ್ಯುತ್ ಪರಿಕರದ ಕಂಬದ ಬಳಿ ಮಟ್ಕಾ ಚೀಟಿ ಬರೆದು ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದವನನ್ನು ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ದಳ ಬಂದರು, ಮಂಗಳೂರು ವಿಶೇಷ ಪೊಲೀಸ್ ಠಾಣೆಯ ಪೊಲೀಸ್‌‌ ನಿರೀಕ್ಷಕರಾದ ಎಫ್. ಎನ್ ಲಿಂಗದಾಳ್ ಇವರು ಠಾಣಾ ಸಿಬ್ಬಂದಿಗಳ ಜೊತೆಯಲ್ಲಿ ಧಾಳಿ ಮಾಡಿ ಆರೋಪಿಯಾದ ರತ್ನಾಕರ ಪೂಜಾರಿ ಯನ್ನು ದಸ್ತಗಿರಿ ಮಾಡಿ ಮಟ್ಕಾ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 2455/- ಮಟ್ಕಾ ಸಂಖ್ಯೆಗಳನ್ನು ಬರೆದಿರುವ ಚೀಟಿ -1, ಮಟ್ಕಾ ಸಂಖ್ಯೆಗಳನ್ನು ಬರೆಯಲು ಉಪಯೋಗಿಸಿದ ಪೆನ್ನು-1, ಇವುಗಳನ್ನು ಸ್ವಾಧೀನಪಡಿಸಿಕೊಂಡು, ಮುಲ್ಕಿ ಠಾಣೆಗೆ ಹಾಜರುಪಡಿಸಿರುವುದಾಗಿದೆ.

 

4. ಕಾವೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರಾದ ಲೊಕೇಶ್ ರವರು ಅವರ ಬಾಬ್ತು  ಮೋಟಾರು ಸೈಕಲ್ ನಂಬ್ರ: ಕೆ-19-ಇಇ-6088 ನೇಯದರಲ್ಲಿ ಪತ್ನಿ ವೀಣಾರವರನ್ನು ಹಿಂಬದಿ ಸವಾರರಾಗಿ ಕುಳಿರಿಸಿಕೊಂಡು ಕೂಳೂರಿನಿಂದ ಕುಂಜತ್ತ್ ಬೈಲ್ ಕಡೆಗೆ ಬರುತ್ತಾ ಬೆಳಿಗ್ಗೆ 9-15 ಗಂಟೆಗೆ ಕೂಳೂರು ಬಸ್ತಿಕಾರ್ ಬಳಿ ತಲುಪಿದಾಗ ಎದುರಿನಿಂದ ಹೋಗುತ್ತಿದ್ದ ಕಾರು ನಂಬ್ರ ಕೆಎಲ್-11-ಕೆ-4577 ನ್ನು ಅದರ ಚಾಲಕನು ಅತೀ ವೇಗ ಮತ್ತು ಅಜಾರೂಕತೆಯಿಂದ ಯಾವುದೇ ಮುನ್ಸೂಚನೆ ನೀಡದೆ ಡಿವೈಡರ್ ಬಳಿ ಬಲಕ್ಕೆ ತಿರುಗಿಸಿದಾಗ ಪಿರ್ಯಾದಿದಾರರು ಚಲಾಯಿಸುತ್ತಿದ್ದ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮತ್ತು ಹಿಂಬದಿ ಸವಾರರು  ರಸ್ತೆಗೆ ಬಿದ್ದು ಪಿರ್ಯಾದಿದಾರರ ಎಡ ಕಾಲಿನ ಪಾದಕ್ಕೆ ತರಚಿದ ಗಾಯ ಮತ್ತು ಸೊಂಟಕ್ಕೆ ಗುದ್ದಿದ ಗಾಯ ಹಾಗೂ ಪಿರ್ಯಾದಿದಾರರ ಪತ್ನಿಗೆ ತಲೆಗೆ ಮತ್ತು ಬಲಕಾಲಿಗೆ ರಕ್ತಗಾಯವಾಗಿ ಚಿಕಿತ್ಸೆಯ ಬಗ್ಗೆ ಮಂಗಳೂರಿನ ಎ.ಜೆ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.

 

5. ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 27-01-2014 ರಂದು ರಾತ್ರಿ 19-15 ವೇಳೆಗೆ ಪಾವಂಜೆ ಗ್ರಾಮದ ಪಾವಂಜೆ ಎಂಬಲ್ಲಿ ಮಂಗಳೂರುಉಡುಪಿ ರಾಷ್ಟೀಯ ಹೆದ್ದಾರಿ 66 ನೇಯದರಲ್ಲಿ ಆರೋಪಿ ಬಸ್ಸು ಚಾಲಕ ದಯಾನಂದ ಎಂಬವರು ತಾನು ಚಲಾಯಿಸುತ್ತಿದ್ದ ಬಸ್ಸು K.A 19  C  8549 ನೇದ್ದನ್ನು ಹಳೆಯಂಗಡಿ ಕಡೆಯಿಂದ ಸುರತ್ಕಲ್ ಕಡೆಗೆ ಅತೀ ವೇಗ ಹಾಗು ಅಜಾಗರೂಕತೆಯಿಂದ ಚಲಾಯಿಸುತ್ತಾ ರಸ್ತೆಯ ತೀರಾ ಎಡ ಬದಿಗೆ ಚಲಾಯಿಸುತ್ತಾ ಬಂದು ರಸ್ತೆಯ ಎಡ ಬದಿಯ ಮಣ್ಣು ರಸ್ತೆಯಲ್ಲಿ ನಡೆದು ಕೊಂಡು ಹೋಗುತ್ತಿದ್ದ ಪಾದಾಚಾರಿ ಮುತ್ತಪ್ಪ ಪೂಜಾರಿ (75) ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ ತಲೆಗೆ, ಎಡ ಸೊಂಟಕ್ಕೆ ಎಡಕಾಲಿಗೆ ತೀವ್ರ ತರದ ಜಖಂ ಉಂಟಾಗಿರುತ್ತದೆ ಗಾಯಾಳು ಚಿಕಿತ್ಸೆಯ ಬಗ್ಗೆ ಮಂಗಳೂರು ಕೆ.ಎಂ.ಸಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.

 

6. ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 28.01.2014 ರಂದು ಬೆಳಿಗ್ಗೆ 5:45 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ರಾಘವೇಂದ್ರ ಭಟ್ ರವರು ತಮ್ಮ ಬಾಬ್ತು KA-19-Z-924ನೇ ಕಾರನ್ನು ಮಂಗಳೂರು ನಗರದ ಲೇಡಿಹಿಲ್ ವೃತ್ತದಲ್ಲಿ ಚಲಾಯಿಸುತ್ತಿದ್ದ ಸಮಯ ಉರ್ವಾ ಸ್ಟೋರ್ ಕಡೆಯಿಂದ KA-19-8038ನೇ ನಂಬ್ರದ 407 ಟೆಂಪೋವನ್ನು ಅದರ ಚಾಲಕರು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆ ನೀಡದೇ ಸದ್ರಿ ಟೆಂಪೋವನ್ನು ಬಲಕ್ಕೆ ತಿರುಗಿಸಿ ಪಿರ್ಯಾದುದಾರರ ಕಾರಿನ ಎಡ ಬದಿಗೆ ಢಿಕ್ಕಿ ಹೊಡೆದು ಜಖಂಗೊಳಿಸಿರುತ್ತಾರೆ.

 

7. ಕಾವೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾಧುದಾರರಾದ ಶ್ರೀಮತಿ ಸುಮಿತ್ರ ಎಂಬವರ ಮೊಬೈಲ್ಪೋನ್ಸಂಖ್ಯೆ: 9141275727 ನೇಯದ್ದಕ್ಕೆ  ಕೊಡಿಕಲ್ವಾಸಿಗಳಾದ ಶ್ರೀ ರವಿ ಮತ್ತು ರವಿಯ ಪತ್ನಿ ಶ್ರೀಮತಿ ಶೋಭಾಲತಾ ಎಂಬವರು ದಿನಾಂಕ: 26-01-2014 ರಂದು 1:26:52 ಗಂಟೆಯ ಸಮಯಕ್ಕೆ ಮೊಬೈಲ್ಪೋನ್ಸಂಖ್ಯೆ: 9886206993 ಮತ್ತು 8792783207 ನಿಂದ ಹಾಗೂ 3:19:21 ಗಂಟೆಯ ಸಮಯಕ್ಕೆ ಮೊಬೈಲ್ಪೋನ್ಸಂಖ್ಯೆ 9731601476 ನೇಯದರಿಂದ ಕರೆಯನ್ನು ಮಾಡಿ ಬೈದು ನಿನ್ನನ್ನು ನಾಳೆ ಬೆಳಿಗ್ಗೆ ಕೆಲಸ ಮಾಡುವಲ್ಲಿಗೆ ಬಂದು ಕೊಲೆ ಮಾಡುತ್ತೇನೆಂದು ಜೀವ ಬೆದರಿಕೆಯನ್ನು ಒಡ್ಡಿರುತ್ತಾರೆಂದು ಹಾಗೂ ನಿಂದಿಸಿರುವುದಾಗಿದೆ.

 

8. ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಮನ್ಸೂರ್ ಅಹಮ್ಮದ್ ರವರು ಮಂಗಳೂರು ನಗರದ ಬಂದರ್ ಅಜೀಜುದ್ದೀನ್ ರಸ್ತೆಯ ಆಜಾದ ಹಾರ್ಡ್ ವೇರ್ ಅಂಗಡಿಯ ಮಾಲಕರಾಗಿದ್ದು, ದಿನಂಪ್ರತಿ ಬೆಳಿಗ್ಗೆ 10:30 ಗಂಟೆಗೆ ಅಂಗಡಿ ಬಂದು 20:30 ಗಂಟೆಗೆ ಮನೆಗೆ ಹೋಗುತ್ತಿದ್ದು, ದಿನಾಂಕ 20-01-2014 ರಂದು ತನ್ನ ಬಾಬ್ತು ಜಾಗೋರ್ ಕಂಪೆನಿಯ ಕಾರು ನಂಬ್ರ PY-01-BS-0840 ನೇಯದ್ದನ್ನು 15:00 ಗಂಟೆಗೆ ಅಂಗಡಿಯ ಎದುರು ಅಜೀಜುದ್ದೀನ್ ರಸ್ತೆಯ ಉರ್ದು ಶಾಲೆಯ ಬಲ ಬದಿಯಲ್ಲಿ ದಕ್ಷಿಣ ಉತ್ತರ ವಾಗಿ ನಿಲ್ಲಿಸಿದ್ದು, ವಾಪಾಸ್ಸು ವ್ಯವಹಾರ ಮುಗಿಸಿ 20:30 ಗಂಟೆಗೆ ಕಾರು ಪಾರ್ಕ್ ಮಾಡಿದ ಸ್ಥಳಕ್ಕೆ ಬಂದು ನೋಡಲಾಗಿ ಕಾರಿನ ಎಲ್ಲಾ ಕಡೆಗಳಲ್ಲಿ ಯಾರೋ ಅಪರಿಚಿತರು ಯಾವುದೋ ವಸ್ತುವಿನಿಂದ ಗೀರಿದ ಗುರುತುಗಳು ಕಂಡು ಬಂದಿದ್ದು, ಪಿರ್ಯಾದಿದಾರರ ಜಾಗೋರ್ ಕಾರಿಗೆ ಗೀಚಿದ್ದರಿಂದ ಸುಮಾರು ರೂ. 1,00,000/- ರಷ್ಟು ನಷ್ಟವುಂಟಾಗಿದ್ದು, ತಕ್ಷೀರು ನಡೆದ ದಿನದ ನಂತರ ಪಿರ್ಯಾದಿದಾರರು ವ್ಯವಹಾರದ ನಿಮಿತ್ತ ಹೊರಗೆ ಹೋಗಿದ್ದು, ನಂತರ ಬಂದು ಇನ್ಸೂರೇನ್ಸ್ ಅಧಿಕಾರಿಗಳನ್ನು ಸಂಪರ್ಕಿಸಿ ತಡವಾಗಿ ದೂರು ನೀಡಿರುವುದಾಗಿದೆ.

 

9. ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 27-01-14 ರಂದು ರಾತ್ರಿ ಸುಮಾರು 1-00 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ಎನ್. ಹಸನಬ್ಬಾ ರವರು ಅವರ ಬಾಬ್ತು ಕಾಟಿಪಳ್ಳ ಗ್ರಾಮದ ಗಣೇಶಪುರ ದಲ್ಲಿರುವ ಅಂಗಡಿಯಲ್ಲಿ  ಮಲಗಿದ್ದ ಸಮಯ ಸಚಿನ್, ರಶೀದ್ ಹಾಗೂ ಮುನ್ನ ಮತ್ತು ಇತರೆ ಹುಡುಗರು ಮಾರುತಿ ಓಮಿನಿ ಕಾರಿನಲ್ಲಿ ಬಂದು ಅಂಗಡಿಯ ಬಾಗಿಲನ್ನು ಬಡಿದು ಸಿಗರೇಟ್ ಕೊಡುವಂತೆ ತಿಳಿಸಿ ಪಿರ್ಯಾದಿದಾರರು ನಿರಾಕರಿಸಿದಾಗ ಕೈಯಿಂದ ದೂಡಿ ಹಲ್ಲೆ ನಡೆಸಿದ್ದು ಆ ಸಮಯ ಅಲ್ಲಿಗೆ ಬಂದ ಹಾಲಿನ ವಾಹನವನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಸಿಗರೇಟ್ ನೀಡದಿದ್ದರೆ ಹಾಲಿನ ವಾಹನವನ್ನು ಹಾಗೂ ಅಂಗಡಿಯನ್ನು ಬೆಂಕಿ ಇಟ್ಟು ಸುಡುವುದಾಗಿ ಬೆದರಿಸಿ ಅಲ್ಲದೇ ಪಿರ್ಯಾದಿದಾರರಿಗೂ ಕೂಡ ಜೀವ ಬೆದರಿಕೆ ಹಾಕಿ ಮಾರುತಿ ಓಮಿನಿ ಕಾರಿನಲ್ಲಿ ಹೋಗಿರುತ್ತಾರೆ.

 

 

10. ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28-01-2014 ರಂದು ಬೆಳಿಗ್ಗೆ 7-15 ಗಂಟೆಗೆ ಪಂಪುವೆಲ್ಕಡೆಯಿಂದ ಲಾರಿನಂಬ್ರ ಕೆಎ 19 6094 ನೇದನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತೊಕ್ಕೊಟ್ಟು ಕಡೆಯಿಂದ ಪಂಪುವೆಲ್ಕಡೆಗೆ ಬರುತ್ತಿದ್ದ ಕೆಎ 19 ಇಡಿ 9512 ನೇ ಬೈಕಿಗೆ ಎಕ್ಕೂರಿನ ಫಿಶರಿಶ್ಕಾಲೇಜಿನ ಬಳಿ ಡಿಕ್ಕಿ ಹೊಡೆದ ಪರಿಣಾಮ ಸದ್ರಿ ಬೈಕ್ಸವಾರ ಮಹಮ್ಮದ್ಇಕ್ಬಾಲ್ರವರಿಗೆ ತೀವ್ರ ತರದ ಗಾಯಗಳಾಗಿದ್ದು ಅವರನ್ನು ಚಿಕಿತ್ಸೆ ಬಗ್ಗೆ ಕೆ.ಎಂ.ಸಿ ಆಸ್ಪತ್ರೆಗೆ ಕೊಂಡೊಯ್ದರೂ ಪ್ರಯೋಜನವಾಗದೆ ಬೆಳಿಗ್ಗೆ 9-20 ಗಂಟೆಗೆ ಮೃತಪಟ್ಟಿರುತ್ತಾರೆ.

No comments:

Post a Comment