ದೈನಂದಿನ ಅಪರಾದ ವರದಿ.
ದಿನಾಂಕ 15.01.2014 ರ 16:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 1 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 3 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 2 |
ವಂಚನೆ ಪ್ರಕರಣ : | : | 1 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 0 |
1.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14-01-2014 ರಂದು ಸಂಜೆ 4:30 ರ ವೇಳೆಗೆ ಮಂಗಳೂರು ತಾಲೂಕು ಕಾರ್ನಾಡು ಗ್ರಾಮದ ಲಿಂಗಪ್ಪಯ್ಯಕಾಡು ಶಾಲೆಯ ಹಿಂಭಾಗದಲ್ಲಿ ಪ್ರಕರಣದ ಪಿರ್ಯಾದಿದಾರರಾದ ಶ್ರೀ ಭೀಮಪ್ಪ ಎಂಬವರು ನಿಂತಿರುವಾಗ ಆರೋಪಿ ಮುಸ್ತಾಫ @ ಮುಸ್ತಾ , ಇರ್ಷಾದ್, ಲಕ್ಷ್ಮಣ ಮತ್ತು ಸಲ್ಮನ್ ರವರು ತಕ್ಷೀರು ಮಾಡುವ ಸಮಾನ ಉದ್ದೇಶದಿಂದ ಪಿರ್ಯಾದಿದಾರರ ಬಳಿ ಬಂದು ಈ ಪೈಕಿ ಮುಸ್ತಾಫನು ಪಿರ್ಯಾದಿದಾರರನ್ನು ಉದ್ದೇಶಿಸಿ, ನಾನು ಹಣ ಕೇಳಿದರೆ ಕೊಡುವುದಿಲ್ಲವೆಂದು ಹೇಳಿ ಕಲ್ಲಿನಿಂದ ತಲೆಗೆ ಹೊಡೆದಿದ್ದು, ಈ ಸಮಯ ಇರ್ಷಾದ್ ಕೂಡಾ ಕಲ್ಲಿನಿಂದ ಹೊಡೆದಿದ್ದು, ನಂತರ 1 ನೇ ಆರೋಪಿತನು ಪಿರ್ಯಾದಿದಾರರರ ಪ್ಯಾಂಟಿನ ಕಿಸೆಯಲ್ಲಿದ್ದ ನಗದು ಹಣ ರೂ 40,000/- ಹಾಗೂ ಕಾರ್ಬನ್ ಕಂಪನಿಯ ರೂ 2000/- ಮೌಲ್ಯ ಮೊಬೈಲ್ ಪೋನ್ ನ್ನು ಸುಲಿಗೆ ಮಾಡಿ ನಂತರ ಪಿರ್ಯಾದಿದಾರರನ್ನು ಆರೋಪಿ ಮುಸ್ತಾಫ ಮತ್ತು ಸಲ್ಮನ್ ರವರು ಆರೋಪಿತರ ಮನೆಯ ಪಕ್ಕದ ಕೋಣೇಯೊಳಗೆ ಕರೆದುಕೊಂಡು ಹೋಗಿ ಬೆಂಚ್ ಮೇಲೆ ಮಲಗಿಸಿ, ಕೈ ಮತ್ತು ಕಾಲನ್ನು ಕಟ್ಟಿ, ರೀಪಿನಿಂದ ಹೊಡೆದು ಗಾಯಪಡಿಸಿರುವುದಾಗಿದೆ. ಗಾಯಾಳು ಚಿಕಿತ್ಸೆಯ ಬಗ್ಗೆ ಮುಲ್ಕಿ ಸರಕಾರಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ.
2. ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14/01/2014 ರಂದು ರಾತ್ರಿ ಕೆಲಸಕ್ಕೆಂದು ಪಿರ್ಯಾದಿದಾರರಾದ ರಾಕೇಶ್ ಸಂಕ್ಸೇನಾ ಎಂಬವರು ಲಾಲ್ ಸಿಂಗ್ ರವರ ಜೊತೆ ಕೂಳೂರು ಹಳೇ ಸೇತುವೆಯಲ್ಲಿ ಕುದುರೆ ಮುಖ ಜಂಕ್ಷನ್ ಕಡೆಗೆ ರಸ್ತೆಯ ಬಲ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ರಾತ್ರಿಸುಮಾರು 20.00 ಗಂಟೆ ವೇಳೆಗೆ ಪಣಂಬೂರು ಕಡೆಯಿಂದ ಕೂಳೂರು ಕಡೆಗೆ ಕೆ ಎ 19 ಡಿ 363 ನೇಯ ನಂಬ್ರದ ಬಸ್ಸನ್ನು ಬಸ್ಸಿನ ಚಾಲಕನು ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿ ಲಾರಿಯೊಂದನ್ನು ಒವರ್ ಟೇಕ್ ಮಾಡುವ ವೇಳೆ, ಲಾಲ್ ಸಿಂಗ್ ರವರಿಗೆ ಬಲವಾಗಿ ಡಿಕ್ಕಿ ಹೊಡೆದ ಪರಿಣಾಮ ಲಾಲ್ ಸಿಂಗ್ ರವರ ಹಣೆಗೆ ,ಮೂಗಿಗೆ,ಗಲ್ಲಕ್ಕೆ ತೀವ್ರ ಸ್ವರೂಪದ ಗಾಯವಾಗಿದ್ದು ಬಲಗಾಲಿನ ಪಾದದ ಬಳಿ ತರಚಿದ ಗಾಯವಾಗಿದ್ದು ಲಾಲ್ ಸಿಂಗ್ ರವರು ಎ ಜೆ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.
3. ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಕೆ. ಅಬ್ದುಲ್ ಕರೀಮ್ ಎಂಬವರ ಅಣ್ಣ ಕೆ.ಕೆ. ಬದ್ರುದ್ದೀನ್ ರವರ ಸಿಂಡಿಕೇಟ್ ಬ್ಯಾಂಕ್ ಹಂಪನಕಟ್ಟಾ ಶಾಖೆಯ AK ನಂಬ್ರ NRE 01002040001914 ನಿಂದ ದಿನಾಂಕ 13-01-2014 ರಂದು ಮಡಿಕೇರಿಯ ಕೂರ್ಗ ಅರ್ತ ಮೂವರ್ಸ್ ಎಂಬವರ ಖಾತೆಗೆ ರೂ. 60,000/- ಹಣವನ್ನು ಜಮಾ ಮಾಡಬೇಕೆಂದು ಹಂಪನಕಟ್ಟಾ ಶಾಖೆಯ ಸೀನಿಯರ್ ಮ್ಯಾನೇಜರ್ ಗೆ ಇ-ಮೇಲ್ ಮಾಡಿದ್ದನ್ನು ಡೆಲ್ಲಿಯ ವಿನಯ್ ಕುಮಾರ್ ಎಂಬವರು ತನ್ನ ಡೆಲ್ಲಿಯ ಸಫ್ದರ್ ಜಂಗ್ ಖಾತೆ ನಂಬ್ರ 00321530003392, FSC CODE: HDFC00000032 ನೇಯದ್ದಕ್ಕೆ ರೂ. 2,40,000/- ಹಣವನ್ನು ಮಂಗಳೂರು ಖಾತೆಗೆ ಬ್ಯಾಂಕಿನ ಮ್ಯಾನೇಜರ್ ನ ಸಹಾಯದಿಂದ ಸೈಬರ್ ಮೂಲಕ ಸಹಿಯನ್ನು ನಕಲಿ ಮಾಡಿ ಹಣವನ್ನು ದುರ್ವಿನಿಯೋಗ ಮಾಡಿರುವುದಾಗಿದೆ.
4. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14-01-2014 ರಂದು ಮದ್ಯಾಹ್ನ 2-15 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಮಹಮ್ಮದ್ ಹಸೈನಾರ್ ನಿಜಾಮ್ ಎಂಬವರು ಮನೆಕಡೆಯಿಂದ ಕಳವಾರು ಮಸೀದಿ ಕಡೆಗೆ ನಡೆದುಕೊಂಡು ಬರುತ್ತಿದ್ದಾಗ ಮಂಗಳೂರು ತಾಲೂಕು ಕಳವಾರು ಗ್ರಾಮದ ಪೇಜಾವರ ಹೈಸ್ಕೂಲ್ ಬಳಿ ಆರೋಪಿ ರಿಯಾಜ್ ಎಂಬಾತನು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ನೀನು ನನ್ನ ಬಗ್ಗೆ ಮಸೀದಿಯಲ್ಲಿ ಏನು ಹೇಳಿಕೊಟ್ಟಿದ್ದಿ ಎಂದು ಹೇಳಿ ರಸ್ತೆ ಬದಿಯಲ್ಲಿದ್ದ ಒಂದು ಜಲ್ಲಿ ಕಲ್ಲನ್ನು ಹೆಕ್ಕಿ ಪಿರ್ಯಾದಿದಾರರ ತಲೆಯ ಹಿಂಭಾಗಕ್ಕೆ ಹಾಗೂ ಎಡ ಕೆನ್ನೆಗೆ ಗುದ್ದಿದ್ದು ಪಿರ್ಯಾದಿದಾರರು ಬೊಬ್ಬೆ ಹಾಕಿದಾಗ ಅಲ್ಲಿ ಜನ ಸೇರುವುದನ್ನು ಕಂಡು ಆರೋಪಿಯು ಕಲ್ಲನ್ನು ಅಲ್ಲೆ ಬಿಸಾಡಿ ಓಡಿ ಹೋಗಿದ್ದು, ಪಿರ್ಯಾದಿದಾರರು ಆರೋಪಿಯ ಬಗ್ಗೆ ಮಸೀದಿಯಲ್ಲಿ ಏನೆಲ್ಲಾ ಹೇಳಿದ್ದಾರೆ ಎಂದು ಬಾವಿಸಿ ಈ ಕೃತ್ಯ ನಡೆಸಿದ್ದು ಹಲ್ಲೆಗೊಳಗಾದ ಪಿರ್ಯಾದಿದಾರರ ತಲೆಗೆ ಹಾಗೂ ಕೆನ್ನೆಗೆ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಸುರತ್ಕಲ್ ಪದ್ಮಾವತಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ.
5. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ದೀಕ್ಷಿತ ಎಂಬವರು ದಿನಾಂಕ 15.01.2014 ರಂದು ಬೆಳಿಗ್ಗೆ ಸುಮಾರು 7:00 ಗಂಟೆಗೆ ತನ್ನ ಮನೆಯಿಂದ ಹೊರಟು ಮಂಗಳೂರಿನ ಕದ್ರಿಯಲ್ಲಿರುವ ತೇಜಸ್ವೀನಿ ಆಸ್ಪತ್ರೆಗೆ ಕೆಲಸಕ್ಕೆಂದು ಬೆಳಿಗ್ಗೆ ಸುಮಾರು 7:10 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು ಪದವು ಗ್ರಾಮದ ಶಕ್ತಿನಗರ ಶ್ರೀ ಗೋಪಾಲ ಕೃಷ್ಣ ದೇವಸ್ಥಾನದ ಪ್ರವೇಶ ದ್ವಾರದ ಮುಂಬಾಗ ರಸ್ತೆಯ ಎಡಬದಿಯಿಂದ ನಡೆದುಕೊಂಡು ಬರುತ್ತಿದ್ದಂತೆ ಪ್ರಾಯ ಸುಮಾರು 22- 24 ವರ್ಷ ಪ್ರಾಯದ ಅಪರಿಚಿತ ಯುವಕ ಪಿರ್ಯಾದಿದಾರರು ಕುತ್ತಿಗೆಯಲ್ಲಿ ಧರಿಸಿದ್ದ ಎರಡೆಳೆಯ ಸುಮಾರು 3.½ ತೂಕದ ಬಂಗಾರದ ಕರಿಮಣಿ ಸರವನ್ನು ಎಳೆದುಕೊಂಡು ಪರಾರಿಯಾಗಿರುವುದಾಗಿಯು, ಕರಿಮಣಿ ಸರದ ತೂಕ ಅಂದಾಜು ಮೌಲ್ಯ ಸುಮಾರು 70000/- ಆಗ ಬಹುದು.
6. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14.01.2014 ರಂದು ಸುಮಾರು ರಾತ್ರಿ 8:00 ಗಂಟೆ ಸಮಯಕ್ಕೆ ಕಣ್ಣೂರು ಬಸ್ ಸ್ಟಾಪ್‌ನಲ್ಲಿ ಪಿಯಾ್ದಿದಾರರಾದ ಅಬ್ದುಲ್ ನಜೀರ್ ಎಂಬವರು ನಿಂತುಕೊಂಡಿದ್ದ ಸಮಯ ಮುಂಭಾಗ ಇನ್ನೋಂದು ಬಸ್ಸ್ಟಾಪ್ ನಲ್ಲಿ ನಿಂತಿದ್ದ ಮುಸ್ತಾಕ್ ಆತನ ಅಣ್ಣ ಮೊಹಮ್ಮದ್ ಸಿರಾಜ್ ಹಫೀಜ್ ಮತ್ತು ಅನೀಜ್ ಎಂಬವರು ಪಿರ್ಯಾದಿದಾರರನ್ನು ದುರುಗುಟ್ಟಿ ನೋಡಿ ಪಿರ್ಯಾದಿದಾರರು ನಿಂತಲ್ಲಿಗೆ ಬಂದು ಅವರಪೈಕಿ ಮುಸ್ತಾಕ್ ಅವಾಚ್ಯ ಶಬ್ದದಿಂದ ಬೈದು, ಮೊಹಮ್ಮದ್ ಸಿರಾಜ್ ಹಿಂಭಾದಿಂದ ಹಿಡಿದು ಮುಸ್ತಾಪ್ ತಲವಾರಿನಿಂದ ತಲೆಗೆ ಕಡಿದಿದ್ದು, ಅನೀಜ್ ಹಫೀಜ್ ಕೈಯಿಂದ ಹೊಡೆದ ಪರಿಣಾ ಪಿರ್ಯಾದಿದಾರರಿಗೆ ರಕ್ತಗಾಯವಾಗಿ ಮಂಗಳೂರು ವೆನ್ಲಾ ಕ್ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.
7. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 15-01-2014 ರಂದು ಬೆಳಿಗ್ಗೆ 9-45 ರಾ.ಹೆ 73 ರಲ್ಲಿ ಕೊಡಕ್ಕಲ್ ವೋಕ್ಸ್ ವೇಗನ್ ಶೋರೂಮಿನ ಎದುರುಗಡೆ ಫರಂಗಿಪೇಟೆ ಯಿಂದ ಮಂಗಳೂರು ಕಡೆಗೆ ಪಿರ್ಯಾದಿದಾರರಾದ ಶ್ರೀ ಕೆ. ರಾಮನಾಥ ಪ್ರಭು ರವರು ಸಹಸವಾರರನ್ನು ಕುಳ್ಳಿರಿಸಿಕೊಂಡು ಬರುತ್ತಿರುವಾಗ ಫರಂಗಿಪೇಟೆ ಕಡೆಯಿಂದ ಕಾರು ನಂಬ್ರ ಕೆಎ 19 ಎಂಬಿ 7666 ಕಾರಿನ ಚಾಲಕನು ಅತೀವೇಗ ಹಾಗೂ ಅಜಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮತ್ತು ಸಹ ಸವಾರ ಪೌಲ್ ಪ್ರಾನ್ಸಿಸ್ ರವರು ಬೈಕ್ ಸಮೇತ ರಸ್ತೆಗೆ ಬಿದ್ದು ರಕ್ತ ಬರುವ ಗಾಯವುಂಟಾಗಿದ್ದು ಚಿಕಿತ್ಸೆ ಬಗ್ಗೆ ಒಮೇಗಾ ಆಸ್ಪತ್ರೆಯಲ್ಲಿ ಪೌಲ್ ಪ್ರಾನ್ಸಿಸ್ ರವರು ಒಳರೋಗಿಯಾಗಿ ಹಾಗೂ ಪಿರ್ಯಾದಿದಾರರು ಹೊರರೋಗಿಯಾಗಿ ದಾಖಲಾಗಿರುತ್ತಾರೆ.
No comments:
Post a Comment