ಬಜಪೆ ಪೊಲೀಸ್ ಠಾಣಾ ಅ.ಕ್ರ:01/2014 ಕಲಂ:454,380 ಐ.ಪಿ.ಸಿ. ಪ್ರಕರಣದಲ್ಲಿ ದಿನಾಂಕ:02-01-2014 ರಂದು ಬಜಪೆ ಪಡುಪೆರಾರ್ ಗ್ರಾಮದ ಅಂಬಿಕಾ ನಗರ ಎಂಬಲ್ಲಿ ಪದ್ಮನಾಭ ಪೂಜಾರಿ ಎಂಬವರ ಮನೆಯಿಂದ ಕಳವು ಮಾಡಿದ ಆರೋಪಿಗಳಾದ 1.ಶ್ರೀಮತಿ:ಮುನಿಯಮ್ಮ, 2ಶ್ರೀಮತಿ:ಲಕ್ಷ್ಮಿ 3.ಶ್ರೀಮತಿ:ಸರಸ್ವತಿ ಎಂಬವರನ್ನು ಗುರುಪುರ ಬಂಡ ಶಾಲೆ ಬಳಿಯಿಂದ ಮತ್ತು 4.ಶ್ರೀಮತಿ:ಗುಲಾಬಿ 5. ಮಂಜ ಎಂಬವರನ್ನು ಪಚ್ಚನಾಡಿ ಎಂಬಲ್ಲಿಂದ ಈ ದಿನ ತಾರೀಕು:11-01-2014 ರಂದು ದಸ್ತಗಿರಿ ಮಾಡಿದ ಬಜಪೆ ಪೊಲೀಸ್ ನಿರೀಕ್ಷಕರು ಮತ್ತು ಸಿಬ್ಬಂದಿಯವರು ಆರೋಪಿತರಿಂದ ಸುಮಾರು 3,30,000/- ರೂಪಾಯಿ ಬೆಲೆಯ 129.8 ಗ್ರಾಂ ಬಂಗಾರದ ಒಡವೆ ಹಾಗೂ 12,000 ನಗದನ್ನು ವಶಪಡಿಸಿಕೊಂಡು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
No comments:
Post a Comment