Monday, January 13, 2014

Daily Crime Reports 12-01-2014

ದೈನಂದಿನ ಅಪರಾದ ವರದಿ.

ದಿನಾಂಕ 12.01.201416:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

3

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

1

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

7

ವಂಚನೆ ಪ್ರಕರಣ         :

:

0

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

3

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1 ಮಂಗಳೂರು ಪೂರ್ವ ಪೊಲೀಸ್‌  ಠಾಣೆಯಲ್ಲಿ  ವರದಿಯಾದ ಪ್ರಕರಣ  : ದಿನಾಂಕ 11-01-2014 ರಂದು  ಠಾಣಾ ವ್ಯಾಪ್ತಿಯ ಮಂಗಳೂರು ನಗರದ ಪಂಪ್ ವೆಲ್  ಸಮೀಪದ ಅನ್ನಪೂರ್ಣ ಹೊಟೇಲ್ ಬಿಲ್ಡೀಂಗ್ ನಲ್ಲಿರುವ 1 ನೇ ಮಹಡಿಯ  ಒಂದು  ಕೋಣೆಯಲ್ಲಿ ಅಂದರ್ ಬಾಹರ್ ಎಂಬ ಜುಗಾರಿ ಆಟ ಆಡುತ್ತಿದ್ದಾರೆ ಎಂಬ ಬಗ್ಗೆ ಬಂದ ಖಚಿತ ವರ್ತಮಾನದಂತೆ ನಗರದ ಸಿಸಿಬಿ ಘಟಕದ ನಿರೀಕ್ಷಕರು ಹಾಗೂ ಸಿಬ್ಬಂದಿಗಳು  ಪಂಚರುಗಳನ್ನು ಕರೆದುಕೊಂಡು ಇಲಾಖಾ ಜೀಪಿನಲ್ಲಿ  ಜುಗಾರಿ ಆಟವಾಡುತ್ತಿದ್ದ  ಸ್ಥಳಕ್ಕೆ ಕರೆದುಕೊಂಡು ಹೋಗಿ ಸಮಯ ಸಂಜೆ 04-45 ಗಂಟೆಗೆ ಹೊಟೇಲ್ ಬಿಲ್ಡೀಂಗ್ ನಲ್ಲಿರುವ 1 ನೇ ಮಹಡಿಯ  ಒಂದು  ಕೋಣೆಯಲ್ಲಿ  ಜುಗಾರಿ  ಆಟವಾಡುತ್ತಿದ್ದ 6 ಜನರನ್ನು ವಶಕ್ಕೆ ತೆಗೆದುಕೊಂಡು ನಂತರ ಅವರು ಆಟಕ್ಕೆ ಉಪಯೋಗಿಸಿದ ಪ್ಲಾಸ್ಟೀಕ್ ಶೀಟ್ -1, ಆಟಿನ್, ಡೈಮಂಡ್ , ಕ್ಲವರ್ ,ಇಸ್ಪೀಟ್ , ಎಲೆಗಳು - ಒಟ್ಟು 52 ಮತ್ತು ಜುಗಾರಿ ಆಟಕ್ಕೆ ಹಣವನ್ನು ಪಣವಾಗಿಟ್ಟ ರೂ 3850/- ನ್ನು ಪಂಚರ ಸಮಕ್ಷಮ ಸ್ವಾಧೀನಪಡಿಸಿಕೊಂಡಿರುವುದಾಗಿದೆ..

 

  2.ಮಂಗಳೂರು ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ  ವರದಿಯಾದ ಪ್ರಕರಣ : ದಿನಾಂಕ 11/01/2014 ರಂದು ಬೆಳಗ್ಗೆ ಸುಮಾರು 8.30 ಗಂಟೆಗೆ ಬಿಜೈ ಜಂಕ್ಷನ್ ಕಡೆಯಿಂಧ KSRTC ಜಂಕ್ಷನ್ ಕಡೆಗೆ ಕ್ರೇನ್ ನಂಬ್ರ KA19-MB-2519 ಅದರ ಚಾಲಕ ತುಳಸಿದಾಸ ಎಂಬುವರು ನಿರ್ಲಕ್ಷೈತನದಿಂಧ ಚಲಾಯಿಸಿಕೊಂಡು ಬಂದು ಬಿಜೈ SSB ಕ್ರಾಸ್ ಜಂಕ್ಷನ್ ಬಳಿ ರಸ್ತೆ ವಿಭಾಜಕದ ತೇರವು ಇರುವ ಸ್ಥಳದಲ್ಲಿ KSRTC ಕಡೆಯಿಂದ ಬಂಟ್ಸ್ ಹಾಸ್ಟೆಲ್ ಕಡೆಗೆ ಸವಾರಿ  ಮಾಡಿಕೊಂಡು ಹೊಗುತ್ತಿದ್ದ ಸ್ಕೂಟರ್ ನಂಬ್ರ KA19-EH-6837 ಕ್ಕೆ ಡಿಕ್ಕಿ ಮಾಡಿದ ಪರಿಣಾಮ ಸ್ಕೂಟರ್ ಸವಾರಳಾಗಿದ್ದ ಭಾರತಿ ರೈ ಹಿಂಬದಿ ಸವಾರ ಅಕ್ಷಯ ರೈ ರಸ್ತೆಗೆ ಬಿದ್ದು ಸವಾರರರಿಗೆ ತರಚಿದ ಗಾಯ ಹಿಂಬದಿಯ ಸವಾರರ ಕಾಲಿನ ಮೊಣಗಂಟಿಗೆ ಗುದ್ದಿದ ಗಾಯ ಉಂಟಾಗಿ AJ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ.

 

3.ಮಂಗಳೂರು ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ  ವರದಿಯಾದ ಪ್ರಕರಣ : ದಿನಾಂಕ 11/01/2014 ರಂದು ಬೆಳಗ್ಗೆ ಸಮಯ ಸುಮಾರು 4.30 ಗಂಟೆಗೆ ಫಿರ್ಯಾದುದಾರರಾದ ಅಬ್ದುಲ್ ಮಜೀದ್ ಎಂಬವರು ತನ್ನ ಬಾಬ್ತು ಆಟೋ ರಿಕ್ಷಾ ನಂಬ್ರ KA19-A-4245 ರಲ್ಲಿ ಚಾಲಕರಾಗಿ ಬಿಕರ್ನಕಟ್ಟೆ ಜಂಕ್ಷನ್ ಕಡೆಯಿಂದ ಕದ್ರಿ ಶಿವಭಾಗ ಕಡೆಗೆ ಚಲಾಯಿಸಿಕೊಂಡು ನಂತೂರು ಜಂಕ್ಷನ್ ತಲುಪುವಾಗ ಪದವು ಜಂಕ್ಷನ್ ಕಡೆಯಿಂದ ಮಹಾವೀರ ವೃತ್ತದ ಕಡೆಗೆ ಲಾರಿ ನಂಬ್ರ KA25-B-8386 ನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಆಟೋ ರಿಕ್ಷಾಕ್ಕೆ ಡಿಕ್ಕಿ ಮಾಡಿದ ಪರಿಣಾಮ ರಿಕ್ಷಾ ಚಾಲಕ ರಸ್ತೆಗೆ ಬಿದ್ದು ತಲೆಗೆ ಹಾಗೂ ಸೊಂಟಕ್ಕೆ ಗಂಭಿರ ಗಾಯಗೊಂಡು ತೇಜಸ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಡಿಕ್ಕಿ ಮಾಡಿದ ಲಾರಿ ಚಾಲಕ ಗಾಯಾಳುವನ್ನು ಉಪಚರಿಸದೆ ಪೊಲೀಸರಿಗೆ ಮಾಹಿತಿ ನೀಡದೆ ಲಾರಿ ಸಮೇತ ಪರಾರಿ ಆಗಿರುವುದ್ದಾಗಿದೆ.

 

4. ಪಣಂಬೂರು ಪೊಲೀಸ್‌  ಠಾಣೆಯಲ್ಲಿ  ವರದಿಯಾದ ಪ್ರಕರಣ : ದಿನಾಂಕ. 10-01-2014ರಂದು ರಾತ್ರಿ 11-30 ಗಂಟೆ ಸಮಯಕ್ಕೆ ಶ್ರೀ ದೀಪಕ್ ಕುಮಾರ್ ರಾಯ್ ಎಂಬವರ ಬಾಬ್ತು ಸಂಸ್ಥೆಯ ತೋಕೂರು ಗ್ರಾಮದ ಜೋಕಟ್ಟೆ ಬಳಿ ದಾವುದ್ ಎಂಬವರು ಎಗ್ರಿಮೆಂಟ್ ಮೂಲಕ ಪೈಪ್ ಲೈನ್ ಕಾಮಗಾರಿಗಾಗಿ ಸಂಸ್ಥೆಯಿಂದ ಒದಗಿಸಿದ ಕಬ್ಬಿಣದ ಬೆಲೆಬಾಳುವ ಪೈಪ್ ನ್ನು ಕೆ..09 . 2438ನೇ ಮಹೀಂದ್ರ ಪಿಕ್ ಅಪ್ ವಾಹನದಲ್ಲಿ ಬಂದ ಅದರ ಚಾಲಕ ಮತ್ತು ಕೆ.. 19 ಇಡಿ 3887ನೇ ಮೋಟಾರು ಸೈಕಲ್ ನಲ್ಲಿ ಬಂದ ಸವಾರ ಕಬ್ಬಿಣದ ಪೈಪ್ ನ್ನು ಕಳವುಗೈದು ಮಹೀಂದ್ರ ಪಿಕ್ ಅಪ್ ವಾಹನದಲ್ಲಿ ಕೊಂಡು ಹೋಗಿರುವುದಲ್ಲದೇ, ಮೋಟಾರು ಸೈಕಲ್ ನ್ನು ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದು, ಕಳವಾದ ಮಾಲಿನ ಬೆಲೆ ರೂ. 49,000-00 ಆಗಿರುವುದಾಗಿದೆ.

 

5. ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್‌  ಠಾಣೆಯಲ್ಲಿ  ವರದಿಯಾದ ಪ್ರಕರಣ  :  ದಿನಾಂಕ 11-01-2014 ರಂದು  ಪಿರ್ಯಾದುದಾರರಾದ ನವನೀತ್ ಎಂಬವರು ತನ್ನ ತಮ್ಮನಾದ ಅಖಿಲೇಶ್ ಎಂಬವನನ್ನು ಕೆನರಾ ಹೈಸ್ಕೂಲ್ ಶಾಲೆಯಿಂದ ಊಟಕ್ಕೆಂದು ಮನೆಗೆ ಕರೆದುಕೊಂಡು ಹೋಗುವರೇ ಲೇಡಿಹಿಲ್ ಬಳಿ ಇರುವ ಸ್ವಿಮ್ಮಿಂಗ್ ಫೂಲ್  ಬಳಿ ಕಾಯುತ್ತಿದ್ದು, ಸಮಯ ಮದ್ಯಾಹ್ನ ಸುಮಾರು 1:30 ಗಂಟೆಗೆ ಅಖಿಲೇಶ್ ನು ಶಾಲೆ ಬಿಟ್ಟು  ತನ್ನ ಸಂಗಡಿಗರಾದ ಕಿರಣ್ ಮತ್ತು ಪನ್ನೀರ್ ಸೆಲ್ವಂ ರವರ ಜೊತೆಯಲ್ಲಿ  ಮಣ್ಣಗುಡ್ಡೆಲೇಡಿಹಿಲ್ ರಸ್ತೆಯ ತೀರಾ ಎಡಬದಿಯ ಮಣ್ಣಿನ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದಾಗ, ಮಣ್ಣಗುಡ್ಡ ಕಡೆಯಿಂದ ಲೇಡಿಹಿಲ್ ಕಡೆಗೆ ಲಾರಿ ನಂ: KA-19-AB-9745 ನೇದನ್ನು ಅದರ ಚಾಲಕರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ತೀರಾ ಎಡಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ಅಖಿಲೇಶ್ನಿಗೆ ಡಿಕ್ಕಿ ಹೊಡೆದು ನಂತರ ಆತನ  ಸಂಗಡಿಗರಾದ  ಪನ್ನೀರ್ ಸೆಲ್ವಂ ಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿ ಹೊಡೆದ ಪರಿಣಾಮ ಅಖಿಲೇಶ್ ಮತ್ತು ಪನ್ನೀರ್ ಸೆಲ್ವಂ ರಸ್ತೆಗೆ ಬಿದ್ದು ಗಾಯಗೊಂಡವರನ್ನು  ಪಿರ್ಯಾದುದಾರರು ಚಿಕಿತ್ಸೆಯ ಬಗ್ಗೆ ತೇಜಸ್ವಿನಿ ಆಸ್ಪತ್ರೆಗೆ ಕೊಂಡು ಹೋಗಿ ದಾಖಲಿಸಿದ್ದು, ಅಪಘಾತದಿಂದ ಅಖಿಲೇಶ್ ಎಡ ಕೈಯ ಮೂರು ಕಡೆಗೆ ಮೂಳೆ ಮುರಿತದ ರಕ್ತ ಗಾಯ ಹಾಗೂ ಪನ್ನೀರ್ ಸೆಲ್ವಂ ಬೆನ್ನಿಗೆ ರಕ್ತಗಾಯ ಹಾಗೂ ತಲೆಗೆ ಗುದ್ದಿದ ಗಾಯವಾಗಿರುತ್ತದೆ.

 

6. ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ  ವರದಿಯಾದ ಪ್ರಕರಣ : ದಿನಾಂಕ: 10-01-2014ರಂದು 22-20 ಗಂಟೆಗೆ ಫಿರ್ಯಾದಿದಾರರಾದ ಮಹಮ್ಮದ್ ಹನೀಫ್ ಎಂಬವರು ಅವರ ಅತ್ತೆಯ ಮನೆಗೆ ಹೋದಾಗ ಮನೆಯಲ್ಲಿ ಮಸೀದಿ ಅಧ್ಯಕ್ಷರು ಹಾಗೂ ಕಮಿಟಿಯ ಸದಸ್ಯರು ಇದ್ದು ಇದನ್ನು ನೋಡಿದ ಫಿರ್ಯಾದಿದಾರರು ನೀವುಗಳು ಮಸೀದಿಯ ವಿಚಾರದಲ್ಲಿ ಮನೆಗೆ ಬರುವುದು ಸರಿಯಲ್ಲ ಎಂದು ಹೇಳಿದಾಗ ಮಯ್ಯದ್ದಿ ಸಿದ್ದೀಕ್‌, ಸರ್ಫುದ್ದೀನ್‌, ಶಫೀಕ್‌, ರಜಾಕ್‌, ಹಸನಬ್ಬ ಎಂಬವರು ಸಮಾನ ಉದ್ದೇಶದಿಂದ ಫಿರ್ಯಾದಿಯನ್ನು ದೂಡಿ ಹಾಕಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಲ್ಲದೇ ಅವರುಗಳ ಪೈಕಿ ಮಯ್ಯದ್ದಿ, ಶಫೀಕ್‌, ಸಿದ್ದೀಕ್‌, ಸರ್ಫುದ್ದೀನ್, ಎಂಬವರುಗಳು ಅಲ್ಲಿಯೇ ಇದ್ದ ಮರದ ಸೋಂಟೆಯಿಂದ ಫಿರ್ಯಾದಿಯ ಕೈಗೆ ಮತ್ತು ಕಾಲಿಗೆ, ಮುಖಕ್ಕೆ ಹಲ್ಲೆ ನಡೆಸಿ ಗಾಯವನ್ನುಂಟು ಮಾಡಿರುವುದಲ್ಲದೇ ಬಗ್ಗೆ ಚಿಕಿತ್ಸೆಯ ಬಗ್ಗೆ ಮೂಡಬಿದ್ರಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಘಟನೆಗೆ ಗುಂಡು ಕಲ್ಲು ಮಸೀದಿಯಲ್ಲಿ ನಮಾಜಿನ ವಿಚಾರದಲ್ಲಿ ಆದ ತಕರಾರನ್ನು ಮನೆಯ ಬಳಿಗೆ ಬಂದು ಹೇಳುವುದು ಸರಿಯಲ್ಲ ಎಂದು ಹೇಳಿರುವುದರಿಂದ ಆರೋಪಿಗಳು ಸಮಾನ ಉದ್ದೇಶದಿಂದ ಕೃತ್ಯ ನಡೆಸಿರುವುದಾಗಿದೆ.

 

7. ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ  ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಅಬ್ದುಲ್ ಖಾದರ್ ಎಂಬವರು ಗುಂಡು ಕಲ್ಲು ಮಸೀದಿಯ ಅಧ್ಯಕ್ಷರಾಗಿದ್ದು, ದಿನಾಂಕ:10-01-2014ರಂದು ಸಂಜೆ 07-30 ಗಂಟೆಗೆ ಗುಂಡು ಕಲ್ಲು ಮಸೀದಿಗೆ ನಮಾಜಿಗೆ ಹೋಗಿದ್ದು ಸಮಯ ನಮಾಜಿನ ವಿಷಯದಲ್ಲಿ ಮೋಯಿಸ್ಎಂಬವನಿಗೆ ಮಸೀದಿ ಗುರುಗಳು ಹೇಳಿದಂತೆ ನಡೆದುಕೊಳ್ಳಬೇಕು ಎಂದು ತಿಳಿಸಿದ್ದು ನಮಾಜು ಮುಗಿಸಿಕೊಂಡು ಹೋಗುವ ಸಮಯ ಜಾಹೀರ್ಎಂಬವನು ಫಿರ್ಯಾದಿಯ ತಮ್ಮನಲ್ಲಿ ನಮಾಜು ಮಾಡುವ ವಿಷಯದಲ್ಲಿ ಫಿರ್ಯಾದಿದಾರರು ಹೇಳಲು ಯಾರು ಅವರ ಕೆನ್ನೆಗೆ ಹೊಡೆಯಬೇಕು ಎಂದು ಹೇಳಿ ವಿಚಾರವನ್ನು ಮಸೀದಿಯ ಅಧ್ಯಕ್ಷರ ಗಮನಕ್ಕೆ ತಂದು ಅಧ್ಯಕ್ಷರ ಜೊತೆಯಲ್ಲಿ ರಾತ್ರಿ 21-30 ಗಂಟೆಗೆ ಜಾಹೀರ್ ತಾಯಿ ಜಮೀಲಾ ಎಂಬವರಲ್ಲಿ ವಿಚಾರವನ್ನು ತಿಳಿಸುತ್ತಿದ್ದಾಗ ಸುಮಾರು 22-00 ಗಂಟೆಗೆ ಮಹಮ್ಮದ್ಹನೀಫ್‌, ಮಯ್ಯದ್ದಿ, ಅಬ್ದುಲ್ಸಲಾಂ, ಸಾಹುಲ್ಹಮೀದ್‌ @ ಕುಂಜ್ಞಿ ಮೋನು, ಮಹಮ್ಮದ್ ಮುಕ್ತಾರ್‌, ರಿಜ್ವಾನ್ಎಂಬವರುಗಳು ಸಮಾನ ಉದ್ದೇಶದಿಂದ ಫಿರ್ಯಾದಿದಾರರಲ್ಲಿ ನೀವು ಇಲ್ಲಿ ಯಾಕೆ ಬರುತ್ತೀರಿ ಎಂದು ಹೇಳುತ್ತಾ ಅವಾಚ್ಯ ಶಬ್ದಗಳಿಂದ ಬೈದು, ಅವರುಗಳ ಪೈಕಿ ಮಹಮ್ಮದ್ ಹನೀಫ್ಮತ್ತು ಮಯ್ಯದ್ದಿ ಕೈಯಿಂದ ದೂಡಿ ಮೈಕೈಗೆ ಹೊಡೆದು ಹಲ್ಲೆ ನಡೆಸಿರುವುದಾಗಿದೆ. ಘಟನೆಗೆ ಗುಂಡುಕಲ್ಲು ಮಸೀದಿಯಲ್ಲಿನ ನಮಾಜು ವಿಷಯದಲ್ಲಿ ನಡೆದ ತಕರಾರು ಘಟನೆಗೆ ಕಾರಣವಾಗಿರುತ್ತದೆ. ಫಿರ್ಯಾದಿಯು ಚಿಕಿತ್ಸೆಯ ಬಗ್ಗೆ ಮೂಡಬಿದ್ರಿ ಸರಕಾರಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ.

 

8. ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ  ವರದಿಯಾದ ಪ್ರಕರಣ : ದಿನಾಂಕ 11-01-2014 ರಂದು ಮದ್ಯಾಹ್ನ 12-30 ಗಂಟೆಗೆ ಫಿರ್ಯಾದುದಾರರಾದ ಉಮ್ಮರ್ ಫಾರೂಕ್ @ ಫಾರೂಕ್ ರವರು ತನಗೆ ಪರಿಚಯ ಇರುವ ವಲ್ಲಿ ಮಹಮ್ಮದ್ ಅಸ್ಲಾಂ ಎಂಬವರ ಬಳಿಗೆ ಹೋಗಿ ತಾನು ಸುಮಾರು ಒಂದು ತಿಂಗಳ ಹಿಂದೆ ಹಾಕಿದ್ದ ಜಲ್ಲಿಯ ಹಣ ರೂ 4,50,000/- ಹಣವನ್ನು ನೀಡಲು ಬಾಕಿ ಇದ್ದು, ಇದನ್ನು ಕೇಳಲು ಮಂಗಳೂರಿನ ಉಪ್ಪಿನ ದಕ್ಕೆಯ ಬಳಿ ಹೋಗಿ ವಲ್ಲಿ ಮಹಮ್ಮದ್ ಅಸ್ಲಾಂ ರವರಲ್ಲಿ ಕೇಳಿದಾಗ ಸದ್ರಿಯವರು ಅವಾಚ್ಯ ಶಬ್ದಗಳಿಂದ ಬೈದು ನಂತರ ಕೈಯಿಂದ ಹೊಡೆದು ಕಾಲಿನಿಂದ ತುಳಿದಿರುತ್ತಾರೆ. ಆನಂತರ ಇನ್ನು ಮುಂದೆ ಹಣ ಕೇಳಿದಲ್ಲಿ ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿದ್ದು, ಈ ಬಗ್ಗೆ ಫಿರ್ಯಾದುದಾರರು ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ಒಳರೋಗಿಯಾಗಿ ದಾಖಲಾಗಿರುತ್ತಾರೆ.

 

9. ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ  ವರದಿಯಾದ ಪ್ರಕರಣ : ದಿನಾಂಕ  ತಾರೀಕು 11-01-2014 ರಂದು 17.00 ಗಂಟೆಗೆ ಮಂಗಳೂರು ಕೇಂದ್ರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ತಿಲಕ್ಚಂಧ್ರ ರವರಿಗೆ ಕಚೇರಿಯಲ್ಲಿರುವಾಗ ದೂರವಾಣಿ ಮುಖಾಂತರ ಬಾತ್ಮೀದಾರರಿಂದ ಬಂದ ಮಾಹಿತಿ ಮೇರೆಗೆ ಉತ್ತರ ಠಾಣಾ ಪೊಲೀಸ್ ನಿರೀಕ್ಷಕರು, ಉಪನಿರೀಕ್ಷಕರು ಹಾಗೂ ಉತ್ತರ ಠಾಣಾ ಸಿಬ್ಬಂದಿಯವರೊಂದಿಗೆ ಉತ್ತರ ಪೊಲೀಸ್ ಠಾಣಾ ಸರಹದ್ದಿನ ಉತ್ತರ ದಕ್ಕೆಯಲ್ಲಿರುವ ಗುರುಪುರ ನದಿ ಕಿನಾರೆ ಬಳಿ ತಲುಪಿ ಕಿನಾರೆಯಲ್ಲಿ ಲಂಗರು ಹಾಕಿ ನಿಲ್ಲಿಸಿದ್ದ ಎಂ.ಎಸ್.ವಿ. ಜೈಲಾನಿ ಎಂಬ ಹೆಸರಿನ ಬೋಟ್ ನ (ಮಂಜಿ) ತಳಭಾಗದಲ್ಲಿ ವಸ್ತುಗಳನ್ನು ಶೇಖರಿಸಿಡುವ ಜಾಗದಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ ಪೆಟ್ರೋಲ್ ತುಂಬಿಸಿದ 16 ಪ್ಲಾಸ್ಟಿಕ್ ಕ್ಯಾನ್ ಗಳನ್ನು ವಶಪಡಿಸಿಕೊಂಡು ಹಾಗೂ ಆರೋಪಿ ಸಾಹುಲ್ ಹಮೀದ್ (33) ತಂದೆ: ಹೆಚ್. ಹಸನ್, ವಾಸ: ಒಡಿಯರ್ ಕಂಪೌಂಡ್, ಅನ್ಸಾರಿ ರಸ್ತೆ, ಬಂದರು, ಮಂಗಳೂರು ಎಂಬವರನ್ನು ದಸ್ತಗಿರಿ ಮಾಡಿದ್ದು, ವಿಚಾರಿಸಿದಾಗ ಇವುಗಳನ್ನು ಲಕ್ಷದ್ವೀಪಕ್ಕೆ ಕೊಂಡು ಹೋಗುವರೇ ಶೇಖರಿಸಿಟ್ಟಿರುವುದಾಗಿ ತಿಳಿಸಿದ ಮೇರೆಗೆ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾಗಿದೆ.

 

10. ಬಜ್ಪೆ ಪೊಲೀಸ್ ಠಾಣೆಯಲ್ಲಿ  ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಎಲ್ವಿರಾ ಡಿ'ಸೋಜಾ ರವರ ಸುಮಾರು 23 ವರ್ಷದ ಮಗ ಮರ್ವಿನ್ಡಿಸೋಜಾ ಎಂಬಾತನು ದಿನಾಂಕ 06-01-2014 ರಂದು ಮದ್ಯಾಹ್ನ ಸುಮಾರು 2-35 ಗಂಟೆಗೆ ಮಂಗಳೂರು ತಾಲೂಕು ಮೂಳೂರು ಗ್ರಾಮದ ಜಂಗಮಮಠ ಸಮೀಪದ ತನ್ನ ಮನೆಯಿಂದ ಅಟೋ ರಿಕ್ಷಾವೊಂದನ್ನು ತರಿಸಿ ಅದರಲ್ಲಿ ಹೊರಟು ಹೋದವನು ಈವರೆಗೆ ವಾಪಾಸು ಮನೆಗೆ ಬಾರದೇ ಕಾಣೆಯಾಗಿರುತ್ತಾನೆ.

 

11. ಬಜ್ಪೆ ಪೊಲೀಸ್ ಠಾಣೆಯಲ್ಲಿ  ವರದಿಯಾದ ಪ್ರಕರಣ : ದಿ: 10-1-2014 ರಂದು ರಾತ್ರಿ 8-45 ಗಂಟೆಗೆ ಪಿರ್ಯಾದಿ ದೇವರಾಜ್ @ ರಾಜೇಶ್ ಅಮೀನ್ ಎಂಬವರು  ತನ್ನ ಮೋಟಾರು ಬೈಕ್ನಂಬ್ರ ಕೆಎ 19 ಬಿ 8408 ನೇದರಲ್ಲಿ ಬಜಪೆ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿರುವಾಗ ಕೆಂಜಾರು ಗ್ರಾಮದ ಕರಂಬಾರು ಎಂಬಲ್ಲಿಗೆ ತಲಪುತ್ತಿದ್ದಂತೆ ರಾತ್ರಿ 9-00 ಗಂಟೆಗೆ ಮಂಗಳೂರು ಕಡೆಯಿಂದ ಬಜಪೆ ಕಡೆಗೆ ಒಂದು ಮೋಟಾರ್ಬೈಕ್  ನಂಬ್ರ ಕೆಎ 19 ಆರ್‌ 3837 ನೇದನ್ನು ಅದರ ಸವಾರ ಸಹಸವಾರನನ್ನು ಕುಳ್ಳಿರಿಸಿಕೊಂಡು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ಸೈಕಲ್‌‌ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು ರಸ್ತೆಗೆ ಎಸೆಯಲ್ಪಟ್ಟು ತೀವ್ರ ಸ್ವರೂಪದ ಗಾಯವಾಗಿದ್ದು , ಎರಡೂ ಕಣ್ಣಿನ ಭಾಗಕ್ಕೆ ರಕ್ತಗಾಯಗಳಾಗಿದ್ದು ಬಲಕಾಲಿನ ಪಾದ ಹಾಗೂ ಮೇಲ್ಬಾಗಕ್ಕೆ ರಕ್ತಗಾಯ, ಬಾಯಿಗೆ ಕೂಡಾ ಜಖಂ ಆಗಿ ಮೇಲ್ಬಾಗದ ಎರಡು ಹಲ್ಲುಗಳು ಉದುರಿಹೋಗಿರುತ್ತದೆ. ಹಾಗೂ ಡಿಕ್ಕಿ ಮಾಡಿದ ಬೈಕಿನ ಇಬ್ಬರು ಸವಾರರಿಗೂ ಗಾಯಗಳಾಗಿದ್ದು ಎರಡೂ ಬೈಕ್ಗಳು ಜಖಂಗೊಂಡಿರುತ್ತದೆ. ಗಾಯಾಳು ಫಿರ್ಯಾದಿದಾರರು ಚಿಕಿತ್ಸೆಯ ಬಗ್ಗೆ  ಮಂಗಳೂರು .ಜೆ. ಆಸ್ಪತ್ರೆಗೆ ದಾಖಲಾಗಿದ್ದು, ಅಲ್ಲದೇ ಆರೋಪಿ ಸವಾರ ಮತ್ತು ಸಹ ಸವಾರರು ಮಂಗಳೂರು ವಿಜಯ ಕ್ಲಿನಿಕ್ ಗೆ ದಾಖಲಾಗಿರುತ್ತಾರೆ.

 

12. ಬಜ್ಪೆ ಪೊಲೀಸ್ ಠಾಣೆಯಲ್ಲಿ  ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಸುಧಾಕರ ರವರು ಮಾನ್ಯ ಜೆ.ಎಂ.ಎಫ್.ಸಿ. 2ನೇ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲು ಮಾಡಿದ್ದು, ದಿನಾಂಕ: 05-01-2014 ರಂದು ಮಂಗಳೂರು ತಾಲೂಕು, ಮೂಳೂರು ಗ್ರಾಮದ, ಗುರುಪುರ ವಜ್ರದೇಹಿ ಮಠದ ಬಳಿ ನಡೆದ ಹಿಂದೂ ಸಮಾವೇಶದಲ್ಲಿ ಭಾಷಣಕಾರರು ಹಿಂದೂಗಳ ಮೇಲೆ ಆಗುತ್ತಿರುವ ಅನ್ಯಾಯ, ಹಲ್ಲೆ, ಹಿಂದೂ ಹುಡುಗಿಯರ ಅಪಹರಣ, ಅನ್ಯಾಯದ ಬಗ್ಗೆ ಮಾತನಾಡಿದ್ದು, ಕಲ್ಲಡ್ಕ ಪ್ರಭಾಕರ ಭಟ್ರವರು  ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸುವುದು ಅವರ ನಂಬಿಕೆ, ಹಿಂದೂಗಳು ಸಂತರ ಪೂಜೆ ಮಾಡುವುದು ಅವರ ನಂಬಿಕೆ, ಆದರೆ, ಸರಕಾರವು ಮೂಢನಂಬಿಕೆಯೆಂದು ನಿಷೇಧಿಸಲು ಹೊರಟಿದೆ ಎಂದು ಮಾತನಾಡಿದ ವಿಚಾರವನ್ನು, ಸ್ಥಳಕ್ಕೆ  ಬಾರದೇ ಹಿಂದೂ ಮತ್ತು ಮುಸಲ್ಮಾನರ ವಿರುದ್ಧ ದ್ವೇಷ ಉಂಟು ಮಾಡಲು ಮಹಮ್ಮದ್ ಉಸ್ಮಾನ್ ಎಂಬವರು ಸುಳ್ಳು ದೂರನ್ನು ಬಜಪೆ ಠಾಣೆಗೆ ನೀಡಿರುವುದಾಗಿದೆ.

 

13. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ  ವರದಿಯಾದ ಪ್ರಕರಣ : ದಿನಾಂಕ 10-01-2013 ರಂದು 19:30 ಗಂಟೆಗೆ ಪಿರ್ಯಾಧಿದಾರರಾದ ಶ್ರೀ ಯತಿಶ್ ಕುಮಾರ್ ರವರು ತನ್ನ ಬಾಬ್ತು ಕೆಎ-19-ಡಬ್ಲ್ಯು-1767 ನೇ  Active Honda ಮೋಟಾರ್‌‌ ಸೈಕಲನ್ನಲ್ಲಿ  ಮಂಗಳೂರು ಕಡೆಯಿಂದ ವಾಮಂಜೂರು ಕಡೆಗೆ ಹೋಗುತ್ತಾ  ವಾಮಂಜೂರು ಚರ್ಚ್ಬಳಿ ತೊಯಿಪೆಕಲ್ಲು 2 ನೇಕ್ರಾಸ್‌‌ ಬಳಿ  ತಲುಪುತ್ತಿದ್ದಂತೆ ಮುಂದುಗಡೆಯಿಂದ ಅಂದರೆ ವಾಮಂಜೂರು ಕಡೆಯಿಂದ  ಕೆಎ-19-ಇಜಿ-9401 ನೇ ಮೋಟಾರ್‌‌ ಸೈಕಲನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು  ಬಂದು ಏಕಾ ಏಕಿಯಾಗಿ ಬಲಕ್ಕೆ  ಬಂದು ಪಿರ್ಯಾಧಿದಾರರ  ಮೋಟಾರ್‌‌ ಸೈಕಲ್ಗೆ ಡಿಕ್ಕಿಹೊಡೆದ ಪರಿಣಾಮ  ಸದ್ರಿಯವರು  ರಸ್ತೆಗೆ ಎಸೆಯಲ್ಪಟ್ಟು  ಅವರ ಹಣೆಗೆ, ಮೂಗಿಗೆ ಮತ್ತು ಬಾಯಿಗೆ ರಕ್ತಗಾಯ ಮತ್ತು  ತಲೆಯ ಹಿಂಬದಿಗೆ ಜಖಂ ಉಂಟಾಗಿರುವುದಾಗಿಯೂ ಹಾಗೂ ಆರೋಪಿ ಮೋಟಾರ್‌‌ ಸೈಕಲ್‌‌ ಸವಾರನಿಗೆ ಹಾಗೂ ಅದರ ಹಿಂಬಂದಿ ಸವಾರಿನಿಗೂ ಗಾಯವಾಗಿರುವುದು.

 

14. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ  ವರದಿಯಾದ ಪ್ರಕರಣ : ದಿನಾಂಕ 10.01.14 ರಂದು  ಪಿರ್ಯಾದಿದಾರರಾದ ಶ್ರೀ ಉದಯ್ ಕುಮಾರ್ ರವರು ಅವರ ಸ್ನೇಹಿತ ಮಾರ್ಟಿನ್ಎಂಬರೊಂದಿಗೆ ಮಾರ್ಟಿನ್ ಬೈಕ್ನಂಬ್ರ  KA 19 R 5603 ನೇದರಲ್ಲಿ  ವಾಮಂಜೂರಿನ  ಮಂಗಳ ಜ್ಯೋತಿ  ಶಾಲೆಯ ಎದುರು  ತಲುಪಿದಾಗ ಬೈಕಿನ ಹಿಂಬದಿ  ಟಯರ್ ಪಂಚರ್ಆಗಿದ್ದರಿಂದ ಬೈಕ್ಮಾರ್ಟಿನ್ ನಿಯಂತ್ರಣ  ತಪ್ಪಿ ರಸ್ತೆಯ ಬಲಬದಿಗೆ ಸರಿದಾಗ ಎದುಗಡೆಯಿಂದ ಬಂದ ಆಲ್ಟೋ  ಕಾರು  KA 19 P 4706 ನ್ನು ನಿಲ್ಲಿಸಿದ ಅದರ ಚಾಲಕನು ಪಿರ್ಯಾದಿ ಮತ್ತು ಮಾರ್ಟಿನ್ನನ್ನು  ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು, ಪಿರ್ಯಾದಿದಾರರ ಎದೆಯ ಬಾಗಕ್ಕೆ ಜೋರಾಗಿ ಗುದ್ದಿ ಕೆಳಗೆ ಬೀಳಿಸಿ ತುಳಿದಿದ್ದು, ವೇಳೆ ಮಾರ್ಟಿನ್ರವರು ಆರೋಪಿಯನ್ನು  ಸಮಧಾನಿಸ ತೊಡಗಿದಾಗ ಪಿರ್ಯಾದಿದಾರರು ಅವರೊಂದಿಗೆ ಯಾಕೆ ಮಾತನಾಡುತ್ತಿ, ಅವರ ಮೇಲೆ ಪೊಲೀಸ್  ಕಂಪ್ಲೇಟ್ಕೊಡೋಣ, ಎಂದು  ಹೇಳಿದಾಗ ಆರೋಪಿಯು ಪಿರ್ಯಾದಿದಾರರ ಶರ್ಟ್ ಕಾಲರ್ಹಿಡಿದು ತಡೆದು ನಿಲ್ಲಿಸಿ, ನನ್ನ ಮೇಲೆ ಕಂಪ್ಲೇಟ್ಕೊಟ್ಟರೆ ನಿನ್ನನ್ನು ಮುಗಿಸುತ್ತೇನೆ ಎಂದು ಜೀವ ಬೆದರಿಕೆ ಹಾಕಿರುತ್ತಾರೆ.

 

15. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ  ವರದಿಯಾದ ಪ್ರಕರಣ : ದಿನಾಂಕ: 11.01.2014 ರಂದು  ರಾತ್ರಿ  7.40 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಕೆ. ದಿನಕರ ಎಂಬವರು ತನ್ನ ಬಾಬ್ತು ಕೆಎ-19-ವೈ-3235 ನೇ ದ್ವಿಚಕ್ರ ವಾಹನದಲ್ಲಿ ಮಂಗಳೂರು ಕಡೆಯಿಂದ ಕೊಡಕ್ಕಲ್‌‌ ಕಡೆಗೆ ಹೋಗುತ್ತಾ ಪಡೀಲ್‌‌‌ ಜಂಕ್ಷನ್‌‌ ತಲುಪುತ್ತಿದ್ದಂತೆ ಪಿರ್ಯಾದಿದಾರರ ಮುಂದುಗಡೆಯಿಂದ ಅಂದರೆ ಬಿ.ಸಿ ರೋಡ್ಕಡೆಯಿಂದ ಪಂಪ್ವೆಲ್‌‌ ಕಡೆಗೆ  ಕೆಎ-19-ಬಿ-7031 ನೇ ಆಟೋ ರಿಕ್ಷಾವನ್ನು ಅದರ ಚಾಲಕ ಸಲಾಂ ಎಂಬವರು  ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ದ್ವಿಚಕ್ರವಾಹನಕ್ಕೆ ಡಿಕ್ಕಿಹೊಡೆದ ಪರಿಣಾಮ ಸದ್ರಿಯವರು ವಾಹನ ಸಮೇತ ರಸ್ತೆಗೆ ಬಿದ್ದು ಬಲಕೈಯ ಕಿರುಬೆರಳಿಗೆ ಮತ್ತು ಉಂಗುರ ಬೆರಳಿಗೆ  ಮೂಳೆ ಮುರಿತದ ತೀವ್ರಗಾಯವಾಗಿರುವುದಾಗಿದೆ.

No comments:

Post a Comment