ದೈನಂದಿನ ಅಪರಾದ ವರದಿ.
ದಿನಾಂಕ 06.01.2014 ರ 16:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 1 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 3 |
ವಂಚನೆ ಪ್ರಕರಣ : | : | 0 |
ಮನುಷ್ಯ ಕಾಣೆ ಪ್ರಕರಣ | : | 1 |
ಇತರ ಪ್ರಕರಣ | : | 0 |
1 ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರಿಯಾದ ಪ್ರಕರಣ : ದಿನಾಂಕ: 06.01.2014 ರಂದು ಪಿರ್ಯಾದುದಾರರಾದ ಶಶಿಧರ ಕೊಟ್ಯಾನ್ ರವರು ತಮ್ಮ ಬಾಬ್ತು KA-19-MD-1242ನೇ ನಂಬ್ರದ ಕಾರನ್ನು ಮಂಗಳೂರು ಶಾರಾವು ಮಹಾಗಣಪತಿ ದೇವಸ್ಥಾನದ ಕಡೆಯಿಂದ ಪಿ.ಎಂ ರಾವ್ ರಸ್ತೆಯಲ್ಲಿ ಚಲಾಯಿಸಿಕೊಂಡು ಬರುತ್ತಾ ಕೆ.ಎಸ್.ಆರ್ ರಾವ್ ರಸ್ತೆಯ ಪಾಪ್ಯುಲರ್ ಬಿಲ್ಡಿಂಗ್ ಎದುರುಗಡೆ ತಲುಪಿ ಹಂಪನಕಟ್ಟೆ ಕಡೆಗೆ ಹೋಗುವರೇ ಸದ್ರಿ ಕಾರನ್ನು ಬಲಬದಿಗೆ ತಿರುಗಿಸುತ್ತಿದ್ದಂತೆ ನವಭಾರತ್ ಕಡೆಯಿಂದ ಹಂಪನಕಟ್ಟೆ ಕಡೆಗೆ KA-19-EE-2511ನೇ ನಂಬ್ರದ ಮೋಟಾರ್ ಸೈಕಲ್ಲನ್ನು ಅದರ ಸವಾರ ಸುಶಾಂತ್ ಎಂಬವರು ಅತೀವೇಗ ಮತ್ತು ಅಜಾಗರೂಕತೆಯಿಂದ ಸವಾರಿಮಾಡಿಕೊಂಡು ಬಂದು ಪಿರ್ಯಾದುದಾರರ ಕಾರಿನ ಎದುರು ಎಡಬದಿಗೆ ಢಿಕ್ಕಿ ಹೊಡೆದ ಪರಿಣಾಮ ಸದ್ರಿ ಕಾರಿನ ಎದುರು ಎಡಬದಿಯ ಮಡ್ ಗಾರ್ಡ್, ಎದುರಿನ ಗ್ಲಾಸ್, ಎಡಬದಿ ಎದುರಿನ ಹೆಡ್ ಲೈಟ್, ಬಂಪರ್ ಜಖಂ ಉಂಟಾಗಿರುವುದಲ್ಲದೇ ಸದ್ರಿ ಅಪಘಾತದಿಂದ ಆರೋಪಿ ಮೋಟಾರ್ ಸೈಕಲ್ ಸವಾರರ ಎಡಕೈ ಮಣಿಗಂಟಿನ ಬಳಿ ಊದಿದ ಗಾಯ ಉಂಟಾಗಿರುವುದು.
2.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 05-01-2014 ರಂದು ರಾತ್ರಿ 10-30 ರ ವೇಳೆಗೆ ಮಂಗಳೂರು ನಗರದ ಪಾಂಡೇಶ್ವರದ ನಿರ್ಮಾಣ ಹಂತದ ಮಾಲ್ ಕಟ್ಟಡದ ಬಳಿಯಲ್ಲಿ ಪಿರ್ಯಾದಿದಾರರಾದ ಮನೋಜ್ ಸುವರ್ಣ ಎಂಬವರು ಕರ್ತವ್ಯ ನಿರ್ವಹಿಸುತ್ತಿರುವ ವೇಳೆ ರಾತ್ರಿ ಬಂದ ಮೂವರು ಅಪರಿಚಿತರು ಮಾಲ್ ನ ಒಳಗಡೆ ಹೋಗುತ್ತೇವೆಂದು ಹೇಳಿದಾಗ, ಫಿರ್ಯಾದುದಾರರು ಅವರುಗಳನ್ನು ಹೋಗಲು ಬಿಡದೇ ಇದ್ದುದರಿಂದ ಆರೋಪಿತರು, ಮಾಲ್ ನ ಗೇಟ್ ಮುಂದೆ ರಸ್ತೆಗೆ ಬರುವಂತೆ ಫಿರ್ಯಾದುದಾರರಲ್ಲಿ ಹೇಳಿ ಫಿರ್ಯಾದುದಾರರು ಮುಂದೆ ಬಂದಾಗ ಆರೋಪಿಗಳೆಲ್ಲರೂ ಸೇರಿಕೊಂಡು ಫಿರ್ಯಾದುದಾರರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು, ಅವರಲ್ಲಿದ್ದ ಒಬ್ಬಾತನು ಅಲ್ಲೇ ಬಿದ್ದಿದ್ದ ಒಂದು ಕಬ್ಬಿಣದ ರಾಡ್ ನಿಂದ ಫಿರ್ಯಾದುದಾರರ ತಲೆಯ ಹಿಂಭಾಗಕ್ಕೆ ಜೋರಾಗಿ ಹೊಡೆದು, ಉಳಿದ ಇಬ್ಬರು, ಕೈಗಳಿಂದ ಫಿರ್ಯಾದುದಾರರಿಗೆ ಹೊಡೆದಿದ್ದು, ಕೂಡಲೇ ಅಲ್ಲಿಗೆ ಓಡಿ ಬಂದ ಸೂಪರ್ ವೈಸರ್ ಹಾಗೂ ಇನ್ನೋರ್ವ ಸೆಕ್ಯೂರಿಟಿ ಗಾರ್ಡ್ ಬಂದಾಗ ಆರೋಪಿಗಳು ಜೀವ ಬೆದರಿಕೆ ಹಾಕಿ ಪರಾರಿಯಾಗಿರುತ್ತಾರೆ.
3. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 05.01.2014 ರಂದು 12.00 ಗಂಟೆಗೆ ಪಿರ್ಯಾದಿದಾರರಾದ ಸುನೀತಾ ಎಂಬವರು ತನ್ನ ತಂದೆ ಚಾಂಟು ಎಂಬವರೊಂದಿಗೆ ಅಡ್ಯಾರ್ ಕಟ್ಟೆ ಎಂಬಲ್ಲಿ ಬಸ್ಸಿನಿಂದ ಇಳಿದು ರಸ್ತೆ ದಾಟುವರೆ ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದ ಸಮಯ ಮಂಗಳೂರು ಕಡೆಯಿಂದ ಕೆಎ-19-ಇಎಫ್-6019 ನೇ ಮೋಟಾರ್ ಸೈಕಲನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾಧಿದಾರರ ತಂದೆ ಚಾಂಟು ರವರಿಗೆ ಡಿಕ್ಕಿಹೊಡೆದ ಪರಿಣಾಮ ಸದ್ರಿಯವರು ಸುಮಾರು 10-15 ಅಡಿ ದೂರು ಹೋಗಿ ಬಿದ್ದು ಮಾತನಾಡದೇ ಇದ್ದವರನ್ನು ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ಕೊಂಡುಹೋದಾಗ ಅಲ್ಲಿ ವೈದ್ಯರು ಪರೀಕ್ಷಿಸಿ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದು, ಡಿಕ್ಕಿಹೊಡೆದ ಮೋಟಾರ್ ಸೈಕಲ್ ಚಾಲಕನಿಗೂ ಅಲ್ಪಸ್ಲಲ್ಪ ಗಾಯಗೊಂಡಿರುತ್ತಾರೆ.
4. ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ದೀಪಕ್ ಎಂಬವರ ಪತ್ನಿಯಾದ ಶ್ರೀಮತಿ ಭಾರತಿಯವರು ದಿನಾಂಕ 07-12-2013 ರಂದು ಸಂಜೆ ತನ್ನ 8 ತಿಂಗಳ ಪ್ರಾಯದ ಜೀವ ಎಂಬ ಮಗುವನ್ನು ತನ್ನ ನೆರೆಮನೆಯ ಸಮೀಪ ಆಟವಾಡುತ್ತಿದ್ದ ಪ್ರಜ್ವಲ್ ಎಂಬವರ ಕೈಯಲ್ಲಿ ಕೊಟ್ಟು ತಾನು ಬೋಂದೆಲ್ ಆಸ್ಪತ್ರೆಗೆ ಹೋಗಿ ಬರುತ್ತೇನೆ ಎಂಬುದಾಗಿ ಹೇಳಿ ಹೋಗಿದ್ದು, ಈ ವರೆಗೆ ಮರಳಿ ಬಾರದೆ ಕಾಣೆಯಾಗಿರುತ್ತಾರೆ.
5. ಬಜಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 4-1-2014 ರಂದು ರಾತ್ರಿ ಸುಮಾರು 8-00 ಗಂಟೆಗೆ ಪಿರ್ಯಾದುದಾರರಾದ ವಸಂತ ರವರು ತನ್ನ ಬಾಬ್ತು ರಿಕ್ಷಾ ನಂಬ್ರ ಕೆಎ 19 ಡಿ 5480 ನ್ನು ನೀರುಡೆ ಕಡೆಯಿಂದ ಮುಚ್ಚೂರು ಕಡೆಗೆ ಚಲಾಯಿಸಿಕೊಂಡು ಬರುವಾಗ ಎದುರುಗಡೆಯಿಂದ ಅಂದರೆ ಮುಚ್ಚೂರು ಕಡೆಯಿಂದ ನೀರುಡೆ ಕಡೆಗೆ ಕೆಂಪು ಬಣ್ಣದ ಮಾರುತಿ ಆಲ್ಟೋ 800 ಕೆಎ 19 ಎಂಬಿ 6583 ಕಾರನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮುಚ್ಚೂರು ಪಲ್ಕೆ ಎಂಬಲ್ಲಿ ಪಿರ್ಯಾದಿದಾರರ ಬಾಬ್ತು ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಮಗುಚಿ ಬಿದ್ದು ರಿಕ್ಷಾದ ಬಲಬದಿ ಚಕ್ರ, ರಿಕ್ಚಾದ ಇಂಜಿನ್ ಮತ್ತು ಎಡಬದಿ ಸೇಪ್ಗೆ ಜಖಂ ಉಂಟಾಗಿದ್ದು ರಿಕ್ಷಾ ಚಾಲಕರಾದ ಪಿರ್ಯಾದಿದಾರರಿಗೆ ಯಾವುದೇ ಗಾಯವಾಗಿರುವುದಿಲ್ಲ.
No comments:
Post a Comment