ದೈನಂದಿನ ಅಪರಾದ ವರದಿ.
ದಿನಾಂಕ 25.01.2014 ರ 16:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 2 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 4 |
1. ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 23.01.2014 ರಂದು ರಾತ್ರಿ ಸುಮಾರು 7 ಗಂಟೆಯ ವೇಳೆಗೆ ಮಂಗಳೂರು ತಾಲೂಕು ಕಾರ್ನಾಡು ಗ್ರಾಮದ ಲಿಂಗಪ್ಪಯ್ಯಕಾಡು ನಾಗಬನದ ಬಳಿ ನಗರ ಪಂಚಾಯತ್ ಚುನಾವಣಾ ಪ್ರಚಾರ ಸಭೆಯ ಸಮಯ ಆರೋಪಿತರಾದ ಬಸವರಾಜ್ ಹರ್ವಾಳ ,ಮಂಜುನಾಥ ಆರ್.ಕೆ, ಅಶೋಕ್ ಎಲ್ ಪೂಜಾರ್ ಹಾಗೂ ಮಂಜುನಾಥ ಕಂಬಾರ ಇವರು ಸದ್ರಿ ಸ್ಥಳಕ್ಕೆ ಬಂದು ಅವಾಚ್ಯ ಶಬ್ದಗಳಿಂದ ಬೈದಿದ್ದು ಈ ಸಮಯ ಫಿರ್ಯಾದಿದಾರರಾದ ವಿಠಲ ರವರು ಆರೋಪಿತರನ್ನು ನೀವು ಈ ರೀತಿ ಬೈಯ್ಯುವುದು ಸರಿಯಲ್ಲ ಎಂದು ಹೇಳಿದಾಗ ಆರೋಪಿತರ ಪೈಕಿ ಓರ್ವನಾದ ಬಸವರಾಜ್ ಹರ್ವಾಳನು ಫಿರ್ಯಾದಿದಾರರನ್ನು ಉದ್ದೇಶಿಸಿ ಸಾರ್ವಜನಿಕವಾಗಿ ಜಾತಿ ನಿಂದನೆಗೈದಿದ್ದು ಈ ಸಮಯ ಇನ್ನೊರ್ವ ಆರೋಪಿ ಮಂಜುನಾಥ ಆರ್.ಕೆ ಫಿರ್ಯಾದಿದಾರರನ್ನು ಉದ್ದೇಶಿಸಿ ಇನ್ನು ಮುಂದೆ ನೀನು ಬಿಜೆಪಿಯ ಪ್ರಚಾರ ಸಭೆಯಲ್ಲಿ ಭಾಗವಹಿಸಿದರೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದು ಆರೋಪಿ ಅಶೋಕ ಎಲ್ ಪೂಜಾರ್ ಫಿರ್ಯಾದಿದಾರರನ್ನು ಕೈಯಿಂದ ದೂಡಿ ಹಾಕಿದ್ದು ಆರೋಪಿ ಮಂಜುನಾಥ ಕಂಬಾರ ಕಲ್ಲಿನಿಂದ ಹಲ್ಲೆ ನಡೆಸಿರುವುದಾಗಿದೆ.
2. ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಕಮಾಂಡರ್ ವಿ. ಸಿಕ್ವೇರಾ ರವರು ಮಂಗಳೂರು ತಾಲೂಕು ಬೈಕಂಪಾಡಿ ಗ್ರಾಮದ ತಣ್ಣೀರು ಬಾವಿಯಲ್ಲಿರುವ ಭಾರತಿ ಶಿಪ್ ಯಾರ್ಡಿನಲ್ಲಿ ಕೆಲಸ ಮಾಡುವವರಾಗಿದ್ದು, ದಿನಾಂಕ: 24-01-14 ರಂದು ಭಾರತ್ ಶಿಪ್ ಯಾರ್ಡಿಗೆ ಕೆಲಸಕ್ಕೆಂದು ತನ್ನ ಸಹೋದ್ಯೋಗಿಗಳೊಂದಿಗೆ ಕೆಎ-19ಎಂಎ-3327ನೇ ನಂಬ್ರದ ವಾಹನದಲ್ಲಿ ಬರುತ್ತಿರುವಾಗ ಬೆಳಿಗ್ಗೆ 07-45 ಗಂಟೆ ಸಮಯಕ್ಕೆ ಶಿಪ್ ಯಾರ್ಡಿನ ಕ್ಯಾಂಪಸ್ ನ ಹೊರಗಡೆ ಇರುವ ರಸ್ತೆಯಲ್ಲಿ ಈ ಮೊದಲು ಶಿಪ್ ಯಾರ್ಡಿನಲ್ಲಿ ಮೆಸಸ್ ಎಫ್ ಎಫ್ ಎಂ ಎಸ್ ಸರ್ವಿಸ್ ನಿಂದ ಕಾಂಟ್ರಾಕ್ಟ್ ನೆಲೆಯಲ್ಲಿ ಕೆಲಸಕ್ಕೆ ತೆಗೆದುಕೊಂಡಿದ್ದು, ನಂತರ ಕಾರಣಾಂತರಗಳಿಂದ ಅವರನ್ನು ಕೆಲಸದಿಂದ ತೆಗೆದು ಹಾಕಿದ ಮೇಲ್ಕಾಣಿಸಿದ ಆರೋಪಿಗಳಾದ ರಾಕಿ ಕೊವೆಲ್ಲೋ, ಉಮೇಶ್ ಕಾಂಚನ್, ಲುವಿಸ್ ಕುವೆಲ್ಲೋ & ದಯಾನಂದ ಎಂಬವರು ಪಿರ್ಯಾದಿದಾರರು ಮತ್ತು ಅವರ ಸಹೋದ್ಯೋಗಿಗಳು ಬರುತ್ತಿದ್ದ ಕಾರನ್ನು ರಸ್ತೆಯಲ್ಲಿ ತಡೆದು ನಿಲ್ಲಿಸಿ, ಬೇಡದ ಮಾತುಗಳಿಂದ ಬೈದು, ಅವರಿಗೆ ಬೆದರಿಕೆಯನ್ನು ಒಡ್ಡಿರುತ್ತಾರೆ.
3. ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಕಮಾಂಡರ್ ಜೆರೊಮ್ ಕ್ಯಾಸ್ಟಲಿನೋ ರವರು ಮಂಗಳೂರು ತಾಲೂಕು ಪಣಂಬೂರು ಗ್ರಾಮದ ತಣ್ಣೀರು ಬಾವಿಯಲ್ಲಿರುವ ಭಾರತಿ ಶಿಪ್ ಯಾರ್ಡ್ ನಲ್ಲಿ ಸೀನಿಯರ್ ಜನರಲ್ ಮೆನೇಜರ್ ಆಗಿದ್ದು, ಇವರು ಈ ದಿನ ದಿನಾಂಕ: 24-01-2014 ರಂದು ಭಾರತ್ ಶಿಪ್ ಯಾರ್ಡಿಗೆ ಕೆಲಸಕ್ಕೆಂದು ಕಾರು ನಂಬ್ರ ಕೆಎ-20ಝೆಡ್-4227 ರಲ್ಲಿ ಚಾಲಕ ರೋಬರ್ಟ್ ಡಿಸೋಜಾ ರವರೊಂದಿಗೆ ಬರುತ್ತಿರುವಾಗ ಬೆಳಿಗ್ಗೆ 08-25 ಗಂಟೆ ಸಮಯಕ್ಕೆ ಭಾರತಿ ಶಿಪ್ ಯಾರ್ಡಿನ ಕ್ಯಾಂಪಸ್ ನ ಹೊರಗಡೆ ಇರುವ ರಸ್ತೆಯಲ್ಲಿ ಈ ಮೊದಲು ಶಿಪ್ ಯಾರ್ಡಿನಲ್ಲಿ ಮೆಸಸ್ ಎಫ್ ಎಫ್ ಎಂ ಎಸ್ ಸರ್ವಿಸ್ ನಿಂದ ಕಾಂಟ್ರಾಕ್ಟ್ ನೆಲೆಯಲ್ಲಿ ಕೆಲಸಕ್ಕೆ ತೆಗೆದುಕೊಂಡಿದ್ದು, ನಂತರ ಕಾರಣಾಂತರಗಳಿಂದ ಅವರನ್ನು ಕೆಲಸದಿಂದ ತೆಗೆದು ಹಾಕಿದ ಕಾರಣಕ್ಕಾಗಿ ಮೇಲ್ಕಾಣಿಸಿದ ಆರೋಪಿಗಳಾದ ಗಂಗಾಧರ, ರಾಕಿ ಕೊವೆಲ್ಲೋ, ಉಮೇಶ್ ಕಾಂಚನ್, ಲುವಿಸ್ ಕುವೆಲ್ಲೋ & ದಯಾನಂದ ಎಂಬವರುಗಳು ಪಿರ್ಯಾದಿದಾರರು ಬರುತ್ತಿದ್ದ ಕಾರನ್ನು ರಸ್ತೆಯಲ್ಲಿ ತಡೆದು ನಿಲ್ಲಿಸಿ, ಬೇಡದ ಮಾತುಗಳಿಂದ ಬೈದು ಜೀವ ಭಯದ ಬೆದರಿಕೆಯನ್ನು ಒಡ್ಡಿರುತ್ತಾರೆ.
4. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 23-01-2014 ರಂದು ಪಿರ್ಯಾದಿದಾರರಾದ ಶ್ರೀ ನಿತಿನ್ ವಿನೋದ್ ರವರು ತನ್ನ ಬಾಬ್ತು ಸ್ಕೂಟರ್ ನಂಬ್ರ KL-14-N-8539 ನೇದರಲ್ಲಿ ಸವಾರರಾಗಿ, ಅಬ್ದುಲ್ ಮುನಾಜ್ ಎಂಬವರನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ಪಾಂಡೇಶ್ವರ ಶ್ರೀನಿವಾಸ ಕಾಲೇಜಿನಿಂದ ಹೊರಟು ಉಜ್ಜೋಡಿ, ತೊಕ್ಕಟ್ಟು, ಮಂಜೇಶ್ವರ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುತ್ತಾ ಉಚ್ಚಿಲ ಬಸ್ಸು ನಿಲ್ದಾಣದ ಬಳಿ ತಲುಪುವಾಗ ಸಮಯ ಸುಮಾರು ಸಂಜೆ 5:00 ಗಂಟೆಗೆ ತಲಪಾಡಿ ಕಡೆಯಿಂದ ಉಚ್ಚಿಲ ಕಡೆಗೆ ಕಾರು ನಂಬ್ರ KL-14-M-5470 ನೇದರ ಚಾಲಕನು ತನ್ನ ಬಾಬ್ತು ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾಧಿದಾರರ ಸ್ಕೂಟರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾಧಿದಾರರು ಹಾಗೂ ಸಹಸವಾರರು ಸ್ಕೂಟರ್ ಸಮೇತ ಡಾಮರು ರಸ್ತೆಗೆ ಬಿದ್ದು, ಇದರ ಪರಿಣಾಮ ಪಿರ್ಯಾಧಿದಾರರ ಬಲ ಕಣ್ಣಿನ ಬಳಿ ಹಾಗೂ ಮೊಣಗಂಟು ಬಳಿ ರಕ್ತ ಬರುವ ಗಾಯವಾಗಿರುತ್ತದೆ. ಹಾಗೂ ಸಹಸವಾರಾದ ಅಬ್ದುಲ್ ಮುನಾಜ್ ಎಂಬವರಿಗೆ ಗಲ್ಲಕ್ಕೆ ಮೂಳೆ ಮುರಿತದ ಗಾಯ, ಬಲಕೈ ಭುಜದ ಬಳಿ ರಕ್ತ ಬರುವ ಗಾಯ, ಎಡ ಕೈಯ ಬೆರಳುಗಳಿಗೆ ಹಾಗೂ ಮೊಣಗಂಟಿಗೆ ಗಂಭೀರ ಸ್ವರೂಪದ ಗಾಯವಾಗಿರುತ್ತದೆ.
5. ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 23/01/2014 ರಂದು 16.30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಹಸನಬ್ಬಾ ರವರು ತನ್ನ ಮಗ ರಾಬಿಕ್ ಎಂಬವರೊಂದಿಗೆ ಮಗನ ಬಾಬ್ತು ಆಕ್ಟೀವಾ ಹೊಂಡಾ ನಂ. KA 19 EJ 3114 ನೇದರಲ್ಲಿ ಮಗನೊಂದಿಗೆ ಸಹಸವಾರರಾಗಿ ಕುಳಿತುಕೊಂಡು ಹೋಗುತ್ತಾ ಮಂಗಳೂರು ತಾಲೂಕು ಮಳವೂರು ಗ್ರಾಮದ ಮರವೂರು ಸೇತುವೆಯ ಸ್ವಲ್ಪ ಮುಂದೆ ತಲುಪುತ್ತಿದ್ದಂತೆ ಎದುರಿನಿಂದ ಅಂದರೆ ಬಜಪೆ ಕಡೆಯಿಂದ ಮಂಗಳೂರು ಕಡೆಗೆ ಒಂದು 407 ಟೆಂಪೋ ನಂಬ್ರ KA 19 A 2035 ನೇದ್ದನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸಹಸವಾರರಾಗಿ ಕುಳಿತ್ತಿದ್ದ ಆಕ್ಟೀವಾ ಹೋಂಡಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಅವರ ಮಗ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಸ್ಕೂಟರ್ ಸವಾರ ರಾಬಿಕ್ ರವರ ಮಣಿಗಂಟಿಗೆ ಮೂಳೆ ಮುರಿತದ ಗಾಯವಾಗಿರುವುದಲ್ಲದೇ, ಪಿರ್ಯಾದಿದಾರರಿಗೆ ಸಾಮಾನ್ಯ ಸ್ವರೂಪದ ಗಾಯವಾಗಿದ್ದು, ಗಾಯಾಳುಗಳು ಮಂಗಳೂರು ಎಸ್.ಸಿ.ಎಸ್. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ.
6. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಸಾರಾಂಶವೇನೆಂದರೆ ಪಿರ್ಯಾದಿದಾರರಾದ ಅರುಣ್ ಕುಮಾರ್ ರವರ 6 ವರ್ಷದ ಮಗನಿಗೆ ನೆರೆ ಕರೆಯಲ್ಲಿ ಬಾಡಿಗೆ ನೆಲೆಯಲ್ಲಿ ವಾಸಿಸುವ ಕಿಟ್ಟಿ@ ಕೃಷ್ಣ ಎಂಬಾತನು ದಿನಾಂಕ 16-01-2014 ರಂದು ಸಂಜೆ 5-30 ಗಂಟೆ ಸಮಯಕ್ಕೆ ಅವರ ಮನೆಯ ಹತ್ತಿರದ ಸಮುದ್ರ ಕಿನಾರೆಯಲ್ಲಿ ಮೊಬೈಲ್ ನಲ್ಲಿ ಗಂಡು, ಹೆಣ್ಣು ಅಶ್ಲೀಲ ಚಟುವಟಿಕೆಯಲ್ಲಿ ತೊಡಗಿರುವ ವಿಡಿಯೋವನ್ನು ತೋರಿಸಿ ಮಕ್ಕಳ ಮನಸ್ಸನ್ನು ಉದ್ರೇಕಗೊಳಿಸುವಂತೆ ಮಾಡಿದ್ದು, ತದ ನಂತರ ಸದ್ರಿ ಬಾಲಕನು ಪಿರ್ಯಾದಿ ಮನೆಯಲ್ಲಿ ಅದೇ ವಿಚಾರದಲ್ಲಿ ಮಾತನಾಡುತ್ತಾ ಮಾನಸಿಕವಾಗಿ ನೊಂದಿರುವುದಾಗಿ, ಆರೋಪಿಯು ಈ ಹಿಂದೆ ಕೂಡಾ 15 ವರ್ಷ ಪ್ರಾಯದ ಪಿರ್ಯಾದಿಯ ಅಕ್ಕನ ಮಗನಿಗೂ ಅಶ್ಲೀಲ ವಿಡಿಯೋವನ್ನು ತೋರಿಸಿ ಯಾರಿಗಾದರೂ ಹೇಳಿದಲ್ಲಿ ಬಿಡುವುದಿಲ್ಲ ಎಂಬುದಾಗಿ ಬೆದರಿಕೆ ಹಾಕಿದ್ದಾಗಿರುತ್ತದೆ.
No comments:
Post a Comment