ದೈನಂದಿನ ಅಪರಾದ ವರದಿ.
ದಿನಾಂಕ 20.01.2014 ರ 16:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ
|
:
|
1
|
ಕೊಲೆ ಯತ್ನ
|
:
|
0
|
ದರೋಡೆ ಪ್ರಕರಣ
|
:
|
0
|
ಸುಲಿಗೆ ಪ್ರಕರಣ
|
:
|
0
|
ಹಲ್ಲೆ ಪ್ರಕರಣ
|
:
|
3
|
ಮನೆ ಕಳವು ಪ್ರಕರಣ
|
:
|
3
|
ಸಾಮಾನ್ಯ ಕಳವು
|
:
|
0
|
ವಾಹನ ಕಳವು
|
:
|
0
|
ಮಹಿಳೆಯ ಮೇಲಿನ ಪ್ರಕರಣ
|
:
|
0
|
ರಸ್ತೆ ಅಪಘಾತ ಪ್ರಕರಣ
|
:
|
6
|
ವಂಚನೆ ಪ್ರಕರಣ :
|
:
|
2
|
ಮನುಷ್ಯ ಕಾಣೆ ಪ್ರಕರಣ
|
:
|
0
|
ಇತರ ಪ್ರಕರಣ
|
:
|
1
|
1. ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19-01-2014 ರಂದು ರಾತ್ರಿ 8:00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ರತ್ನಾಕರ ರವರು ಬೋಳೂರಿನ ಸಾಯಿ ಗ್ಯಾರೆಜ್ ಬಳಿಯ ಕುಡ್ಲಕುದ್ರುವಿನ ಗೆಟಿನ ಬಳೀ ನಡೆದುಕೊಂಡು ಬರುತ್ತಿದ್ದಾಗ ಆರೊಪಿ ಯಾದ ಅನೀಲ್ ಎಂಬಾತನು ಇತರೊಂದಿಗೆ ಸೇರಿ ಪೂರ್ವದ್ವೇಶದಿಂದ ಕಬ್ಬಿಣದ ರಾಡ್ ನಿಂದ ಪಿರ್ಯದಿದಾರರ ಎಡಕಾಲಿನ ಮಣಿಗಂಟು ಹಾಗೂ ಕೋಲು ಕಾಲಿಗೆ ಹಾಗೂ ಬಲ ಕೊಲು ಕಾಲಿಗೆ ಹೊಡೆದು ರಕ್ತಗಾಯ ಉಂಟು ಮಾಡಿರುವುದಾಗಿದೆ.
2. ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 17-01-2014 ರಂದು ರಾತ್ರಿ ಸುಮಾರು 9:00 ಗಂಟೆಗೆ ಆರೋಪಿಗಳಾದ ಗುರು, ಬಾಲು ಹಾಗೂ ಮತ್ತಿತ್ತರರು ಸೇರಿಕೊಂಡು, ಪಿರ್ಯಾದಿದಾರರಾದ ಶ್ರೀ ಸಂತೋಷ್ ಕೊಟ್ಯಾನ್ ರವರ ಮನೆಯ ಬಳಿ ಬಂದು ನಿನ್ನ ಜೊತೆ ಮಾತಾನಾಡಲಿಕ್ಕೆ ಇದೆ ಎಂದು ತಿಳಿಸಿದಂತೆ, ಪಿರ್ಯಾದಿದಾರರು ಅವರ ಜೊತೆ ಅವರು ಬಂದ ಬಿಳಿ ಬಣ್ಣದ ಓಮ್ನಿ ವ್ಯಾನ್ ನಲ್ಲಿ ಹೋಗಿದ್ದು, ಆರೋಪಿಗಳು ಮಂಗಳೂರು ತಾಲೂಕು , ಪಡಿಪಣಂಬೂರು ಗ್ರಾಮದ ಪಡುಪಣಂಬೂರು ಕಂಬಳಗದ್ದೆ ಬಳಿ ಬಂದು ವಾಹನದಿಂದ ಇಳಿದು, ಗುರು ಕೈಯಿಂದ ಪಿರ್ಯಾದಿದಾರರಿಗೆ ಹೊಡೆದಿದ್ದು, ಅಲ್ಲದೆ ಅವರ ಜೊತೆಯಲ್ಲಿದ್ದ ಇತರರು ಪಿರ್ಯಾದಿದಾರರನ್ನು ಹಿಡಿದುಕೊಂಡು ತಪ್ಪಿಸಿಕೊಳ್ಳದಂತೆ ತಡೆದು ನಿಲ್ಲಿಸಿ ಎಲ್ಲರೂ ಕೈಯಿಂದ ಹೊಡೆದು, ಕಾಲಿನಿಂದ ಒದ್ದು, ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈದು, ಆರೋಪಿಗಳಲ್ಲೊಬ್ಬ ರಾಡನ್ನು ತೋರಿಸಿಕೊಂಡು ಹಣ ಕೊಡದಿದ್ದರೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂಬುದಾಗಿ ಜೀವಬೆದರಿಕೆ ಒಡ್ಡಿರುತ್ತಾರೆ ಎಂಬಿತ್ಯಾದಿ. ಆರೋಪಿತರಾದ ಗುರು ಹಾಗೂ ಬಾಲು ಮತ್ತು ಪಿರ್ಯಾದಿದಾರರೊಳಗೆ ಮೊದಲೇ ಇದ್ದ ಹಣದ ವಿಚಾರದ ತಕರಾರು ಈ ಘಟನೆಗೆ ಕಾರಣವಾಗಿರುತ್ತದೆ.
3. ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19-01-2014ರಂದು 16.00ಗಂಟೆಗೆ ಕಾರು ನಂಬ್ರ KA.19AA.0056ನೇಯದನ್ನು ಅದರ ಚಾಲಕ ಶೇಬಾಜ್ ಅಲಿ ಎಂಬವರು ಪದವು ಜಂಕ್ಷನ್ ಕಡೆಯಿಂದ ಕುಂಟಿಕಾನ ದ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು K.P.T.ಜಂಕ್ಷನ್ ತಲುಪುವಾಗ ಯೆಯ್ಯಾಡಿ ಕಡೆಯಿಂದ ಸರ್ಕ್ಯೂಟ್ ಹೌಸ್ ಜಂಕ್ಷನ್ ಕಡೆಗೆ ಹೋಗುತ್ತಿದ್ದ ಮೋಟಾರು ಸೈಕಲ್ ನಂ.KA.25 Y0883ಕ್ಕೆ ಡಿಕ್ಕಿ ಮಾಡಿದ ಪರಿಣಾಮ ಮೋಟಾರು ಸೈಕಲು ಸವಾರ ರಸ್ತೆಗೆ ಬಿದ್ದು ತಲೆಗೆ ಗಂಭೀರ ಸ್ವರೂಪದ ಗಾಯಗೊಂಡು ಮೃತಪಟ್ಟಿರುದಾಗಿದೆ.
4. ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19-01-2014 ರಂದು ಸಮಯ ಸುಮಾರು ರಾತ್ರಿ 08-30 ಗಂಟೆಗೆ ಪಿರ್ಯಾದಿದಾರರಾದ ಕೊರಗಪ್ಪ ಪ್ರಾಯ 53 ವರ್ಷ ರವರು ಪಣಂಬೂರು ಜಂಕ್ಷನ್ ನಿಂದ ಎನ್ ಎಮ್ ಪಿ ಟಿ ಕ್ಯಾಂಟಿನ್ ಕಡೆಗೆ ಹೋಗುವರೇ ರಸ್ತೆ ದಾಟುತ್ತಿರುವಾಗ ಬೈಕಂಪಾಡಿ ಕಡೆಯಿಂದ ಕೂಳೂರು ಕಡೆಗೆ ಕೆ ಎ-19-ಕೆ 0017 ನೇ ನಂಬ್ರದ ಬಜಾಜ್ ಎಮ್80 ನೇದನ್ನು ಅದರ ಚಾಲಕ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಎಡಕೈಗೆ ಮತ್ತು ಬಲಕಾಲಿನ ಕೋಲು ಕಾಲಿಗೆ ಮತ್ತು ಎಡ ಕೈ ಯ ಕೋಲು ಕೈಗೆ ಮೂಳೇ ಮುರಿತದ ರಕ್ತ ಗಾಯವಾಗಿರುತ್ತದೆ ಮತ್ತು ಹಣೆ ಮತ್ತು ಬಲ ಕೈಯ ತಟ್ಟಿಗೆ ರಕ್ತ ಗಾಯವಾಗಿದ್ದು. ಅಪಘಾತವವನ್ನು ಉಂಟು ಮಾಡಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡದೆ ಪಿರ್ಯಾದಿಗೆ ಹಾರೈಕೆ ಮಾಡದೆ ಅಪಘಾತ ಸ್ಥಳದಲ್ಲಿ ಮೋಟಾರುಸೈಕಲ್ ಬಿಟ್ಟು ಪರಾರಿಯಾಗಿರುತ್ತಾರೆ, ಗಾಯಾಳು ಮಂಗಳೂರು ವೆನ್ ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.
5. ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 21-08-2008 ರಂದು ಪಿರ್ಯಾದುದಾರರಾದ ಶ್ರೀ ಯುಪಿ ಅಬ್ಬೋನು ರವರ ಮಗನಾದ ಮಹಮ್ಮದ್ ಮುಸ್ತಾಫ್ ನ ಮದುವೆಯು ಶಾಜಿಯಾ ಬೀಬಿ ಫಾತಿಮಾಳೊಂದಿಗೆ ಮಿಲಾಗ್ರೀಸ್ ಚರ್ಚ್ ಹಾಲ್ ನಲ್ಲಿ ಡೆದಿರುತ್ತದೆ. ಈ ಸಂದರ್ಭದಲ್ಲಿ ಶಾಜಿಯಾ ಬೀಬಿ ಫಾತಿಮಾ ಳಿಗೆ 175 ಪವನ್ ಚಿನ್ನದ ಒಡವೆ ಹಾಗೂ 8 ಲಕ್ಷ ಮೌಲ್ಯದ ನೆಕ್ಲೇಸ್ ಗಳನ್ನು ಫಿರ್ಯಾದುದಾರರು ನೀಡಿರುತ್ತಾರೆ. ನಂತರ ಮದುವೆ ಸಮಯ ನೀಡಿದ ಚಿನ್ನಾಭರಣಗಳನ್ನು ಭದ್ರತೆಯ ದೃಷ್ಟಿಯಿಂದ ಸ್ಟೆಟ್ ಬ್ಯಾಂಕ್ ಆಫ್ ಇಂಡಿಯಾ ವಲೆನ್ಸಿಯಾ ಬ್ರಾಂಚ್ ನ ಸೇಫ್ ಲಾಕರ್ ನಲ್ಲಿ ಇಟ್ಟಿರುತ್ತಾರೆ. ಅದನ್ನು ತೆಗೆಯುವ ಅಧಿಕಾರ ಫಿರ್ಯಾದುದಾರರ ಮಗ ಹಾಗೂ ಸೊಸೆಗೆ ಮಾತ್ರ ಇರುತ್ತದೆ. ಅದರಂತೆ ಶಾಜಿಯಾ ಬೀಬಿ ಫಾತಿಮಾ ಳು ತನ್ನ ಚಿಕ್ಕಪ್ಪನ ಮಗಳ ಮದುವೆಗೆ ಹೋಗಲಿಕ್ಕಿದೆಯೆಂದು ಸುಳ್ಳು ಹೇಳಿ ವಂಚಿಸಿ ಚಿನ್ನಾಭರಣಗಳನ್ನು ಸ್ಟೇಟ್ ಬ್ಯಾಂಕ್ ನಿಂದ ತೆಗೆದಿರುತ್ತಾಳೆ. ಈ ಚಿನ್ನಾಭರಣಗಳ್ನು ಹಿಡಿದುಕೊಂಡು ವಿದೇಶಕ್ಕೆ ಹೋಗಲು ಹುನ್ನಾರ ನಡೆಸುತ್ತಿದ್ದು, ಫಿರ್ಯಾದುದಾರರಿಗೆ ಹಾಗೂ ಅವರ ಮಗನಿಗೆ ಸೊಸೆ ಶಾಜಿಯ ಬೀಬಿ ಫಾತಿಮಾಳು, ಆಕೆಯ ತಂದೆಯಾದ ಅಬ್ದುಲ್ ಮಜೀದ್ , ತಾಯಿ ಶ್ರೀಮತಿ ಹೈರುನ್ನಿಸ, ಅಣ್ಣನಾದ ಶಮೀರ್ ಅಹಮದ್ ಹಾಗೂ ಇಫ್ತಿಕಾರ್ ಹಾಗೂ ಹ್ಯಾರೀಸ್ ಇವರುಗಳ ಪ್ರೇರಣೆಯಿಂದ ಚಿನ್ನವನ್ನು ಪಡೆದು ಮೋಸ ಮಾಡಿರುತ್ತಾರೆ ಎಂಬಿತ್ಯಾದಿ.
6. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19-01-2014 ರಂದು ರಾತ್ರಿ ಪೊಲೀಸ್ ನೀರಿಕ್ಷರಾದ ಎಂ.ಎ. ನಟರಾಜ್ ರವರಿಗೆ ಸುರತ್ಕಲ್ ಮಾರ್ಕೆಟ್ ನ ಮೆಂಲ್ಟಿಂಗ್ ಪಾಯಿಂಟ್ ಸ್ವೀಟ್ಸ್ ಅಂಗಡಿಗೆ ಸ್ವೀಟ್ಸ್ ಖರೀದಿ ಮಾಡಲು ಬಂದ ವ್ಯಕ್ತಿ ನಕಲಿ ನೋಟನ್ನು ನೀಡುತ್ತಿರುವುದಾಗಿ ಮಾಹಿತಿ ಬಂದಂತೆ ಸ್ಥಳಕ್ಕೆ ದಾವಿಸಿ ಪರಿಶೀಲಿಸಲಾಗಿ 1000/- ರೂ ಮುಖ ಬೆಲೆಯ ನಕಲಿ ನೋಟಿನಂತೆ ಕಂಡು ಬಂದಿದ್ದು, ಈ ಬಗ್ಗೆ ಚಲಾವಣೆ ಮಾಡಲು ಬಂದ ವ್ಯಕ್ತಿ ಸುಶಾಂತ್ ಮಂಡಲ್ ಎಂಬಾತನನ್ನು ವಿಚಾರಿಸಿದಲ್ಲಿ ಆತನೊಂದಿಗೆ ಇನ್ನೊಬ್ಬ ವ್ಯಕ್ತಿ ಶರತ್ ಮಂಡಲ್ ಎಂಬಾತನು ಕಾಟಿಪಳ್ಳದ ರೂಮ್ನಲ್ಲಿ ಇದ್ದು, ಆ ರೂಮ್ನಲ್ಲಿಯು ಇನ್ನು 1,000 ಮತ್ತು 500 ನಕಲಿ ನೋಟುಗಳು ಹಾಗು ನಕಲಿ ನೋಟುಗಳನ್ನು ಅಂಗಡಿಗೆ ಕೊಟ್ಟು ಬದಲಾವಣೆ ಮಾಡಿದ ಅಸಲಿ ನೋಟುಗಳು ಕೂಡಾ ಇರುವುದಾಗಿ ತಿಳಿಸಿದ್ದು ಅಲ್ಲದೇ ಸದ್ರಿ ನಕಲಿ ನೋಟುಗಳನ್ನು ಸಲೀಂ ಎಂಬಾತನು ಅವರಿಗೆ ನೀಡಿ ಚಲಾವಣೆ ಮಾಡಲು ತಿಳಿಸಿ ಕಳುಹಿಸಿಕೊಟ್ಟಿರುವುದಾಗಿ ತಿಳಿಸಿರುತ್ತಾರೆ. ಅದರಂತೆ ಮೇಲಿನ ರೂಮಿಗೆ ತೆರಳಿ ಒಟ್ಟು 92500/-ರೂ ಬೆಲೆಯ ನಕಲಿ ನೋಟುಗಳನ್ನು ಹಾಗೂ ನಕಲಿ ನೋಟುಗಳನ್ನು ಚಲಾವಣೆ ಮಾಡಿ ಪಡೆದ ಒಟ್ಟು 40420 /- ರೂ ಬೆಲೆಯ ಅಸಲಿ ನೋಟುಗಳನ್ನು ವಶಕ್ಕೆ ಪಡೆದು, ಖೋಟಾ ನೋಟುಗಳನ್ನು ಚಲಾವಣೆ ಮಾಡುತ್ತಿದ್ದರಿಂದ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿರುವುದಾಗಿದೆ.
7. ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರು ಮಂಗಳೂರು ನಗರದ ಕೆಸ್ ರಾವ್ ರಸ್ತೆಯ ಎಸ್.ಎಲ್.ಶೇಟ್ ಕಟ್ಟಡದಲ್ಲಿ ದಿ. ಇಂಡಸ್ಟ್ರಿಯಲ್ & ಏಜೆನ್ಸಿ ಎಂಬ ಹೆಸರಿನ ಸ್ಟೇಷನರಿ ಅಂಗಡಿಯನ್ನು ನಡೆಸಿಕೊಂಡಿದ್ದು, ಅಂಗಡಿಗೆ ಸಂಬಂಧಪಟ್ಟ ಸ್ಟೇಷನರಿ ವಸ್ತುಗಳನ್ನು ಅಂಗಡಿಯ ಮೇಲೆಕಡೆ ಅಂದರೆ ಕಟ್ಟಡದ 1 ನೇ ಮಹಡಿಯಲ್ಲಿ ಗೋದಾಮಿನಲ್ಲಿ ಶೇಖರಿಸಿ ಇಡುವುದಾಗಿದೆ. ದಿನಾಂಕ 19-01-2014 ರಂದು ಮಧ್ಯಾಹ್ನ ಅಂಗಡಿ ಮತ್ತು ಗೋಡೌನಿಗೆ ಬೀಗ ಹಾಕಿ ಹೋಗಿದ್ದು, ರಾತ್ರಿ ಸುಮಾರು 10:00 ಗಂಟೆಗೆ ಅಂಗಡಿ ಬಳಿ ಬಂದು ಅಂಗಡಿ ಹಾಗೂ ಗೋಡೌನಿಗೆ ಹಾಕಿದ ಬೀಗ ಭದ್ರವಾಗಿರುವುದನ್ನು ಗಮನಿಸಿ ಮನೆಗೆ ಹೋಗಿದ್ದು, ಮರುದಿನ ದಿನಾಂಕ 20-01-2014 ರಂದು ಬೆಳಿಗ್ಗೆ 8:30 ಗಂಟೆಗೆ ಅಂಗಡಿಗೆ ಬಂದಾಗ ಗೋಡೌನಿಗೆ ಹೋಗುವ ಮೆಟ್ಟಲಿನ ಬಾಗಿಲಿನ ಬೀಗವನ್ನು ಹಾಗೂ ಗೋಡೌನಿನ ಬಾಗಿಲಿನ ಬೀಗವನ್ನು ಯಾರೋ ಕಳ್ಳರು ಮುರಿದು ಒಳಗಿದ್ದ ಇಂಡಕ್ಷನ್ ಕುಕ್ಕರ್ ಬಾಕ್ಸ್-1, ಹಾಟ್ ಬಾಕ್ಸ್-1, ವಾಟರ್ ಕ್ಯಾನ್, ಟಪ್ಪರ್ ವೇರ್ ಬಾಕ್ಸ್ ಮುಂತಾದ ವಸ್ತುಗಳನ್ನು ಕಳ್ಳರು ಕಳವು ಮಾಡಿದ್ದು, ಕಳವಾದ ಸೊತ್ತುಗಳ ಒಟ್ಟ ಮೌಲ್ಯ ಸುಮಾರು 15,000/- ಆಗಬಹುದು, ಈ ಸೊತ್ತುಗಳನ್ನು ದಿನಾಂಕ 19-01-2014 ರಂದು ರಾತ್ರಿ 10:00 ಗಂಟೆಯಿಂದ ದಿನಾಂಕ 20-01-2014 ರಂದು ಬೆಳಿಗ್ಗೆ 8:30 ಗಂಟೆ ಅವಧಿ ಮಧ್ಯೆ ಯಾರೋ ಕಳ್ಳರು ಗೋಡೌನಿಗೆ ಹೋಗುವ ಮೆಟ್ಟಲಿನ ಬಾಗಿಲಿನ ಬೀಗವನ್ನು ಹಾಗೂ ಗೋಡೌನಿನ ಬಾಗಿಲಿನ ಬೀಗವನ್ನು ಯಾರೋ ಕಳ್ಳರು ಮುರಿದು ಕಳವು ಮಾಡಿರುವುದಾಗಿದೆ.
8. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 18-01-2014 ರಂದು ರಾತ್ರಿ 7-45 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಮೋಹನ್ ದಾಸ್ ಶೆಟ್ಟಿ ರವರು ತನ್ನ ಬಾಬ್ತು ಹೋಂಡಾ ಆಕ್ಟೀವಾ ನಂಬ್ರ ಕೆಎ 19 ಇಎ 553 ನೇದನ್ನು ಮರೋಳಿ ಕಡೆಯಿಂದ ಚಲಾಯಿಸಿಕೊಂಡು ಬಂದು ನಾಗೂರಿ ಕಡೆಗೆ ಹೋಗುವ ಸಲುವಾಗಿ ಪಡೀಲ್ ಜಂಕ್ಷನ್ ತಲುಪಿದಾಗ ಕಣ್ಣೂರು ಕಡೆಯಿಂದ ಲಾರಿ ನಂಬ್ರ ಕೆಎ 25 7850 ನೇದನ್ನು ಅದರ ಚಾಲಕನಾದ ಬಸವರಾಜ್ ಎಂಬವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಹೋಂಡಾ ಆಕ್ಟೀವಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಡಾಮಾರು ರಸ್ತೆಗೆ ಬಿದ್ದಿದ್ದು ಈ ಅಪಘಾತದಿಂದ ಅವರ ಎಡ ಕೈ ಕೋಲು ಕೈಗೆ ಮೂಳೆ ಮುರಿತದ ಜಖಂ ಹಾಗೂ ಬಲಕಾಲಿನ ಬೆರಳುಗಳಿಗೆ ರಕ್ತಗಾಯವಾಗಿದ್ದು ಈ ಬಗ್ಗೆ ಎಸ್‌ಸಿಎಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.
9. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19-01-2014 ರಂದು ಪಿರ್ಯಾದಿದಾರರು ಫರಂಗಿಪೇಟೆ ಕಡೆಯಿಂದ ತನ್ನ ಬಾಬ್ತು ಬೈಕ್ ನಂಬ್ರ ಕೆಎ 19 ಇಇ 4035 ನೇ ದನ್ನು ಚಲಾಯಿಸಿಕೊಂಡು ಪಡೀಲ್ ಕಡೆಗೆ ಬರುತ್ತಾ ಬೆಳಿಗ್ಗೆ 8-00 ಗಂಟೆವೇಳೆಗೆ ಕೊಡಕ್ಕಲ್ ರೈಲ್ವೇ ಓವರ್ ಬ್ರಿಡ್ಜ್ ಸಮೀಪಿಸುತ್ತಿದ್ದಂತೆ ಸದ್ರಿಯವರ ಹಿಂಬದಿಯಿಂದ ಎಲ್ಜಿವಿ ವಾಹನ ನಂಬ್ರ ಕೆಎ 19 ಎಎ 0860 ನೇದನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಾದ ಶ್ರೀ ಪ್ರೇಮನಾಥ್ ರವರ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಬೈಕ್ ಸಮೇತ ರಸ್ತೆಗೆ ಬಿದ್ದುದರಿಂದ ಎಡಕಾಲಿನ ತೊಡೆಯ ಭಾಗಕ್ಕೆ ಗುದ್ದಿದ ನೋವು , ಸೊಂಟದ ಬಳಿ, ಎಡಕೈ ಮೊಣಗಂಟಿನ ಬಳಿ ರಕ್ತ ಗಾಯ ಉಂಟಾಗಿದ್ದು ಚಿಕಿತ್ಸೆ ಬಗ್ಗೆ ಅಥೇನಾ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.
10. ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ:16/01/2014 ರಂದು ಬೆಳಿಗ್ಗೆ 11-45 ಗಂಟೆಗೆ ಮಂಗಳೂರು ತಾಲೂಕು ಕೆಂಜಾರು ಗ್ರಾಮದ ತಾಳಿಮುಗೇರು ಎಂಬಲ್ಲಿ ಫಿರ್ಯಾದುದಾರರಾದ ರಾಘು ಕೊಟ್ಯಾನ್ ರವರ ಬಾಬ್ತು ಮಾನ್ಯ ನ್ಯಾಯಾಲಯದಲ್ಲಿ ವ್ಯಾಜ್ಯದಲ್ಲಿರುವ ಜಮೀನಿಗೆ ಆರೋಪಿಗಳಾದ ರಾಮದಾಸ್, ರಾಮನಾಥ, ಧರ್ಮಾ, ರಾಜು, ಸೀತಾರಾಮ, ಚಿತ್ತರಂಜನ್, ಸುನೀಲ್, ಯುವರಾಜ್, ಜಾನಕಿ, ರತ್ನಾ ಎಂಬವರು ಖಾಸಗಿ ಸರ್ವೆಯರ್ ರವರನ್ನು ಜಮೀನನ್ನು ಅಳತೆ ಮಾಡಲು ಕರೆದುಕೊಂಡು ಬಂದು ಅಳತೆ ಮಾಡಲು ಪ್ರಾರಂಭಿಸಿದಾಗ ಫಿರ್ಯಾದುದಾರರು ಮತ್ತು ಅವರ ಮಗ ರಾಜೇಶ್ ಸದ್ರಿ ಜಾಗವು ತಕರಾರಿನಲ್ಲಿ ಇರುವುದರಿಂದ ಸರ್ವೆ ಮಾಡ ಬಾರದು ಎಂದು ಆಕ್ಷೇಪಿಸಿದ್ದಕ್ಕೆ ಆರೋಪಿಗಳು ಫಿರ್ಯಾದುದಾರರಿಗೆ ಮತ್ತು ಆತನ ಮಗ ರಾಜೇಶನಿಗೆ ತಕ್ಷೀರು ಮಾಡುವ ಸಮಾನ ಉದ್ದೇಶದಿಂದ ಅಕ್ರಮಕೂಟ ಸೇರಿ ಅವರುಗಳು ಮರದ ದೊಣ್ಣೆಯಿಂದ ರಾಜೇಶನಿಗೆ ಹೊಡೆದು ನೆಲಕ್ಕೆ ಉರುಳಿಸಿ ಎದೆಗೆ ತುಳಿದು ಹಲ್ಲೆ ಮಾಡಿದಲ್ಲದೇ ಫಿರ್ಯಾದುದಾರರಿಗೆ ಕೈಗಳಿಂದ ಹೊಡೆದು, ಕಾಲಿನಿಂದ ತುಳಿದು ಹಲ್ಲೆ ಮಾಡಿದ್ದುದಲ್ಲದೇ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾರೆ.
11. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 15-01-2014 ರಂದು ಬೆಳಿಗ್ಗೆ ಸುಮಾರು 6-00 ಗಂಟೆಗೆ ಅಳಪೆ ಗ್ರಾಮದ ಪಡೀಲ್ ಪ್ರಶಾಂತ್ ಭಾಗ್ ಮುಖ್ಯ ರಸ್ತೆಯಲ್ಲಿರುವ ಪಿರ್ಯಾದಿದಾರರಾದ ಡಾ. ಗುರುಮೂರ್ತಿಯವರು ಮನೆಯಿಂದ ಬೆಲೂರು ಹಳೇಬೀಡು ಮತ್ತು ಚಿಕ್ಕಮಗಳೂರು ದತ್ತಪೀಠ ಯಾತ್ರಾ ಸ್ಥಳಗಳಿಗೆ ಹೋಗಿಬರುವರೇ ತನ್ನ ಹೆಂಡತಿ ಮಕ್ಕಳು ತಂದೆ ಹಾಗೂ ತಂಗಿ, ತಂಗಿಯ ಗಂಡ ಮತ್ತು ಅವರ ಮಗಳೊಂದಿಗೆ ತನ್ನ ವಾಸದ ಮನೆಗೆ ಬೀಗಹಾಕಿ ಕಾರಿನಲ್ಲಿ ಹೋದವರು ಬೆಲೂರು ಹಳೆಬೀಡು ಮತ್ತು ಚಿಕಮಗಳೂರು ದತ್ತಫೀಠ ಮುಂತಾದ ಯಾತ್ರಾ ಸ್ಥಳಗಳಿಗೆ ಸಂದರ್ಶಿಸಿ ಸಂಜೆ ಸುಮಾರು 6-00 ಗಂಟೆಗೆ ಹೊರಟು ಬಂದವರು ರಾತ್ರಿ ಸುಮಾರು 11-30 ಗಂಟೆಗೆ ಮನೆಗೆ ಬಂದು ನೋಡಿದಾಗ ಮನೆಯ ಮುಂದಿನ ಬಾಗಿಲು ತೆರೆದಿದ್ದು ಒಳಪ್ರವೇಶಿಸಿ ನೋಡಿದಾಗ ಯಾರೋ ಕಳ್ಳರು ಮನೆಯ ಬಾಗಿಲಿನ ಬೀಗ ಮುರಿದು ಒಳ ಪ್ರವೇಶಿಸಿ ಬೆಡ್ರೂಮ್ಗಳಲ್ಲಿದ್ದ ಕಬ್ಬಿಣದ ಅಲ್ಮೇರಾಗಳ ಬೀಗಗಳನ್ನು ಯಾವುದೋ ಬಲವಾದ ಆಯುಧಗಳಿಂದ ತೆರೆದು ಕಪಾಟಿನೊಳಗಡೆ ಇದ್ದ ನಗದು ಹಣ 60,000 ರೂ , ಡಾಲರ್ಸ್ 1,20,000 ಮೌಲ್ಯ, ರೂ. 18,000/- ನೀಲಿ ಕಲ್ಲು ಇರುವ ಬಂಗಾರದ ಉಂಗುರ -01, ರೂ 15, 000/- ಮೌಲ್ಯ 4 ಗ್ರಾಂ ತೂಕದ ಬಂಗಾರದ ನಾಣ್ಯ -01 , ರೂ . 2000 ಮೌಲ್ಯದ ಬಿಳಿ ಕಲ್ಲು ಇರುವ ಬಂಗಾರದ ಸಣ್ಣ ಮೂಗುತಿ ಬೊಟ್ಟು – 01, ರೂ 6000 ಮೌಲ್ಯದ ಒಂದು ಜೊತೆ ಬೆಳ್ಳಿಯ ಕಾಲು ಚೈನ್ ಹಾಗೂ ಬೆಳ್ಳಿಯ ನಾಣ್ಯ- 01. ಇವುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿಯೂ, ಕಳವಾದ ನಗದು ಹಣ ಮತ್ತು ಸೊತ್ತುಗಳ ಅಂದಾಜು ಮೌಲ್ಯ 2,21,000/ ಆಗಬಹುದು.
12. ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 18.01.2014 ರಂದು ರಾತ್ರಿ 7.30 ಗಂಟೆ ವೇಳೆಗೆ ಪಿರ್ಯಾದಿದಾರರಾದ ಶ್ರೀ ಹಲೀದ್ ರವರು ತನ್ನ ಮಗ ಸಫ್ವಾನ್ ಜೊತೆಯಲ್ಲಿ ತಮ್ಮ ಮನೆ ಕಡೆಗೆ ನಡೆದುಕೊಂಡು ಹೋಗುತ್ತಾ ವಾಮಂಜೂರು ಪೆಟ್ರೋಲ್ ಬಂಕ್ ಸಮೀಪ ತಲುಪಿದಾಗ, ವಾಮಂಜೂರು ಜಂಕ್ಷನ್ ಕಡೆಯಿಂದ ಬಸ್ಸು ನಂಬ್ರ ಕೆಎ-19-ಡಿ-3899 ನ್ನು ಅದರ ಚಾಲಕ ಯೋಗೀಶ್ ಎಂಬವನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಯಾವುದೇ ಸೂಚನೆ ನೀಡದೆ ಏಕಾಏಕಿಯಾಗಿ ಸದ್ರಿ ಬಸ್ಸನ್ನು ವಾಮಂಜೂರು ಪೆಟ್ರೋಲ್ ಬಂಕ್ ಕಡೆಗೆ ತಿರುಗಿಸಿದಾಗ ಸದ್ರಿ ಬಸ್ಸಿನ ಹಿಂಬದಿ ಎಡಬದಿ ಚಕ್ರವು ಸಫ್ವಾನ್ನ ಬಲಕಾಲಿನ ಪಾದದ ಮೇಲೆ ಹಾದುಹೋಗಿದ್ದರಿಂದ ಬಲಕಾಲಿನ ಪಾದಕ್ಕೆ ಗಂಭೀರ ಗಾಯವಾಗಿ ಫಾಧರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಿಸಲಾಗಿದೆ
13. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 16-01-2014 ರಂದು ಬೆಳಿಗ್ಗೆ 06-20 ಗಂಟೆಗೆ ಸೂರಿಂಜೆ ಪೋಸ್ಟ್ ಆಫೀಸ್ ಬಳಿಯ ಹಾಲು ಡೈರಿ ಎದುರಿನಲ್ಲಿ ಅಂದರೆ ದಕ್ಷಿಣ ಬದಿಯ ಡಾಂಭಾರು ರಸ್ತೆಯಲ್ಲಿ ಸೂರಿಂಜೆ ಕಡೆಯಿಂದ ಕಾಟಿಪಳ್ಳ ಕಡೆಗೆ ಬರುತ್ತಿದ್ದ ಕೆ ಎ 19 ಇಡಿ 3165 ನೇ ನಂಬ್ರದ ಮೋಟಾರು ಸೈಕಲ್ ಗೆ ಅದರ ಎದುರಿನಿಂದ ಅಂದರೆ ಕಾಟಿಪಳ್ಳ ಕಡೆಯಿಂದ ಸೂರಿಂಜೆ ಕಡೆಗೆ ಲಾರಿ ನಂಬ್ರ ಕೆ ಎ20-1981 ನೇದನ್ನು ಅದರ ಚಾಲಕ ರಘುನಾಥ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದ ಮೇಲ್ಕಂಡ ಮೋಟಾರು ಸೈಕಲ್ ಸವಾರ ಹಸನಬ್ಬನವರ ತಲೆಗೆ, ಹಣೆಗೆ, ಬಲಕೈ ಭುಜ ಹಾಗೂ ಸೊಂಟಕ್ಕೆ ಗಾಯಾವಾಗಿದ್ದವರನ್ನು ಪಿರ್ಯಾದಿದಾರರಾದ ಶ್ರೀ ಮಹಮ್ಮದ್ ಅಶ್ರಫ್ ರವರು ಅಲ್ಲಿ ಸೇರಿದವರೊಂದಿಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಕೆ ಎಂ ಸಿ ಜ್ಯೋತಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಒಳರೋಗಿಯಾಗಿ ದಾಖಲಿಸಿರುವುದಾಗಿದೆ
14. ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14-01-2014 ರಂದು ಪಿರ್ಯಾದಿದಾರರಾದ ಸಾಗರ್ ಎಂಬವರು ಮಂಗಳೂರು ಕೆ.ಎಸ್. ರಾವ್ ರಸ್ತೆಯಲ್ಲಿರುವ ನವರತ್ನ ಪ್ಯಾಲೇಸ್ ಲಾಡ್ಜ್ ನಲ್ಲಿ ಕರ್ತವ್ಯದಲ್ಲಿರುವಾಗ ಮದ್ಯಾಹ್ನ ಸುಮಾರು 02:45 ಗಂಟೆಗೆ ಒಬ್ಬ ಗಂಡಸು ಪ್ರಾಯ ಸುಮಾರು 45 ರಿಂದ 50 ಪ್ರಾಯ ಹಾಗೂ ಸುಮಾರು 70 ವರ್ಷ ಪ್ರಾಯದ ಹೆಂಗಸು ಜೊತೆಯಲ್ಲಿ ಬಂದು ಉಳಕೊಳ್ಳಲು ರೂಮ್ ಕೇಳಿದಾಗ, ಗಂಡಸಿನಲ್ಲಿ ಗುರುತಿನ ಚೀಟಿಯನ್ನು ಕೇಳಿದಾಗ ಆತನು ತನ್ನಲ್ಲಿ ಗುರುತಿನ ಚೀಟಿ ಇರುವುದಿಲ್ಲವಾಗಿಯೂ ತನ್ನ ಹೆಸರು ಕೆ. ಟಿ. ಬೇಬಿ ಎಂತಲೂ ಆತನ ಜೊತೆಯಲ್ಲಿದ್ದ ಹೆಂಗಸು ತನ್ನ ಐಡಿಯನ್ನು ಕೊಟ್ಟಿದ್ದು, ಐಡಿಯನ್ನು ಪರಿಶೀಲಿಸಿದಾಗ, ಅಲಿಕುಟ್ಟಿ ಎಂಬ ಹೆಸರಿನಲ್ಲಿದ್ದು, ನಂತರ ಅವರಿಗೆ ಲಾಡ್ಜ್ ನ ಒಂದನೇ ಮಹಡಿಯ ರೂಮ್ ನಂಬ್ರ 612 ನ್ನು ನೀಡಿದ್ದು, ನಂತರ ರೂಮ್ ನಲ್ಲೇ ಇದ್ದು, ರಾತ್ರಿ ಸುಮಾರು ಆ ಗಂಡಸು ಹೊರ ಹೋಗಿದ್ದು, ಸುಮಾರು ರಾತ್ರಿ 8:45 ಗಂಟೆಗೆ ಲಾಡ್ಜ್ ಗೆ ವಾಪಾಸ್ಸು ಬಂದಿದ್ದು, ಬರುವಾಗ ಆತನು ಅಮಲು ಪದಾರ್ಥ ಸೇವಿಸಿದಂತೆ ಕಂಡು ಬಂದಿದ್ದು, ನಡೆದಾಡಲು ಕಷ್ಟವಾಗುತ್ತಿದ್ದು, ನಮ್ಮ ರೂಮ್ ಬಾಯ್ ಪ್ರವೀಣ್ ನು ರೂಮ್ ಗೆ ಕರೆದುಕೊಂಡು ಹೋಗಿ ಬಿಟ್ಟಿದ್ದು, ಅವರು ರೂಮ್ ನಲ್ಲೇ ಇದ್ದು, ದಿನಾಂಕ 15-01-2014 ರಂದು ಇವರಿಬ್ಬರೂ ರೂಮ್ ನಿಂದ ಹೊರ ಬಂದಿರುವುದಿಲ್ಲ. ಅವರು ರೂಮ್ ನಲ್ಲೇ ಇದ್ದು, ಈ ದಿನ ದಿನ ದಿನಾಂಕ 17-01-2014 ರಂದು ಬೆಳಿಗ್ಗೆ ರೂಮ್ ನಂಬ್ರ 612 ರ ಲ್ಯಾಂಡ್ ಪೋನ್ ಗೆ ಫೋನ್ ಮಾಡಿದಾಗ, ಫೋನ್ ರೀಸಿವ್ ಮಾಡದೇ ಇರುವುದರಿಂದ ನಮಗೆ ಸಂಶಯ ಬಂದು, ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಪೊಲೀಸರು ಬಂದು ಪಿರ್ಯಾದಿದಾರರ ಸಮಕ್ಷಮ ರೂಮ್ ನಂಬ್ರ 612 ನ್ನು ಬಲ್ತ್ಕಾರವಾಗಿ ತೆರೆದು ಒಳಹೋದಾಗ ರೂಮ್ ನಲ್ಲಿದ್ದ ಹೆಂಗಸು ಅಂಗಾತವಾಗಿ ಮಂಚದ ಮೇಲೆ ಮಲಗಿದ ಸ್ಥಿತಿಯಲ್ಲಿದ್ದು, ದೇಹವು ಊದಿಕೊಂಡಿದ್ದು, ಮುಗಿನಿಂದ ರಕ್ತ ಮಿಶ್ರಿತ ನೀರು ಹೊರ ಬರುತ್ತಿದ್ದು, ದಿನಾಂಕ 14-01-2014 ರಂದು ಗಂಡಸಿನೊಂದಿಗೆ ಬಂದಿರುವ ಹೆಂಗಸಿನದ್ದಾಗಿರುತ್ತದೆ. ದಿನಾಂಕ 14-01-2014 ರಂದು ಮೃತ ಹೆಂಗಸಿನೊಂದಿಗೆ ಮದ್ಯಾಹ್ನ 2:45 ಗಂಟೆಗೆ ಹೋಟೇಲ್ ಗೆ ಬಂದು ಗಂಡಸು ಕೆ.ಟಿ. ಬೇಬಿ ಯು ರಾತ್ರಿ 8:45 ಗಂಟೆಯಿಂದ ದಿನಾಂಕ 17-01-2014 ರ ಬೆಳಿಗ್ಗೆ 6:30 ಗಂಟೆಯ ಮಧ್ಯ ಕಾಲದಲ್ಲಿ ಯಾವುದೋ ಕಾರಣಕ್ಕಾಗಿ ಕೊಲೆ ಮಾಡಿ ಯಾರಿಗೂ ತಿಳಿಯದಂತೆ ರೂಮ್ ನ್ನು ಲಾಕ್ ಮಾಡಿ ಪರಾರಿಯಾಗಿರುತ್ತಾನೆ.
15. ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಜಯಚಂದ್ರ ರವರು ಮಂಗಳೂರು ಬಲ್ಮಠ ರಸ್ತೆಯ ಲಿಟ್ಲ ಫ್ಲವರ್ ಕಟ್ಟಡದ 1 ನೇ ಮಹಡಿಯಲ್ಲಿರುವ ಮೆರಿಟ್ ಪ್ರೈಟ್ ಕಂಪೆನಿಯಲ್ಲಿ ಮ್ಯಾನೇಜರ್ ಆಗಿ ಕೆಲಸಮಾಡಿ ಕೊಂಡಿದ್ದು, ದಿನಾಂಕ 17-01-2014 ರಂದು ಸಂಜೆ 5:30 ಗಂಟೆಯಿಂದ ದಿನಾಂಕ 18-01-2014 ರ ಬೆಳಿಗ್ಗೆ 9:45 ಗಂಟೆ ಸಮಯದ ಮಧ್ಯದಲ್ಲಿ ಯಾರೋ ಕಳ್ಳರು ಪಿರ್ಯಾದಿದಾರರ ಬಾಬ್ತು ಕಛೇರಿಯ ಎದುರು ಬಾಗಿಲಿಗೆ ಅಳವಡಿಸಿದ ಬೀಗವನ್ನು ಯಾವುದೋ ಆಯುಧ ಉಪಯೋಗಿಸಿ ಬಲತ್ಕಾರವಾಗಿ ಮುರಿದು, ಒಳಪ್ರವೇಶಿಸಿ ಕಛೇರಿಯಲ್ಲಿದ್ದ ಸಿಪಿಯು – 2, ಮಾನಿಟರ್ – 2 (ಎಲ್.ಜಿ. ಹಾಗೂ ಕಾಂಪ್ಯಾಕ್ ಕಂಪೆನಿ), ಕೀಬೊರ್ಡ್ – 2, ಮತ್ತು ನಗದು ರೂ. 4,000/- ಹಣವನ್ನು ಹಾಗೂ ಒಂದು ಹಾರ್ಡ್ ಡಿಸ್ಕ್ ನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಕಂಪ್ಯೂಟರ್ ಸಾಮಾಗ್ರಿಗಳ ಅಂದಾಜು ಮೌಲ್ಯ ರೂ. 20,000/- ಆಗಬಹುದು.
16. ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿಯ ಅಧ್ಯಕ್ಷರಾದ ಡಾ. ಸತ್ಯಮೂರ್ತಿ ಭಟ್ ಹಾಗೂ ರಿಜಿಸ್ಟಾರ್ ಆಗಿರುವ ಡಾ. ತಿಮ್ಮಪ್ಪ ಶೆಟ್ಟಿಗಾರ್ ರವರು ಜಿಲ್ಲಾ ಆಯುಷ್ ಅಧಿಕಾರಿಯಾಗಿರುವ ಪಿರ್ಯಾದಿದಾರರಾದ ಸದಾನಂದ್ ರವರು ಒಟ್ಟು ಸೇರಿ ದಿನಾಂಕ 18-01-2014 ರಂದು ನಕಲಿ ವೈದ್ಯ ವೃತ್ತಿ ನಡೆಸುತ್ತಿರುವ ಸಯ್ಯದ್ ಹಾಸಿಮ್ ಎಂಬವರ ಮಗ ನಸ್ರುಲ್ಲಾ ರಜಪೂತ್ ಚಹಾನ್ ಎಂಬವರ ಮಂಗಳೂರು ಪುರಭವನ ಸಮೀಪದ ರೇಮಂಡ್ಸ್ ಶೋ ರೂಮ್ ಮೇಲೆ ಇರುವ "ಚೌಹಾನ್ ಡಿಸ್ಪೆನ್ಸರಿ" ಗೆ ಬೆಳಿಗ್ಗೆ 11:30 ಗಂಟೆಗೆ ಭೇಟಿ ನೀಡಿ ತನಿಖೆ ನಡೆಸಿದ್ದು, ತನಿಖೆಯಿಂದ ನಸ್ರುಲ್ಲಾ ರಜಪೂತ್ ಚೌಹಾನ್ ರವರು ನಿಯಮಾನುಸಾರ ಯಾವುದೇ ಅರ್ಹತೆ ಮತ್ತು ನೊಂದಣಿ ಇಲ್ಲದೇ ವೈದ್ಯ ವೃತ್ತಿ ನಡೆಸುತ್ತಿರುವುದು ಹಾಗೂ ಸಾರ್ವಜನಿಕರನ್ನು ಮೋಸ ಮಾಡುತ್ತಿರುವುದು ಬಗ್ಗೆ ಕಂಡು ಬಂದಿದ್ದು, ಈ ಬಗ್ಗೆ ಮಹಜರು ನಡೆಸಿ ಮಹಜರಿನ ಮೂಲ ಪ್ರತಿ ಮತ್ತು ಕಾನೂನು ಕ್ರಮ ಜರುಗಿಸಲು ಅನುಮತಿಗಾಗಿ ಕರ್ನಾಟಕ ಅಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿ, ಬೆಂಗಳೂರು ರವರಿಗೆ ಬರೆದ ಅರ್ಜಿಯ ಪ್ರತಿಯನ್ನು ಪಿರ್ಯಾದು ಯೊಂದಿಗೆ ನೀಡಿರುವುದು.
No comments:
Post a Comment