ದೈನಂದಿನ ಅಪರಾದ ವರದಿ.
ದಿನಾಂಕ 16.01.2014 ರ 16:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 3 |
ವಂಚನೆ ಪ್ರಕರಣ : | : | 0 |
ಮನುಷ್ಯ ಕಾಣೆ ಪ್ರಕರಣ | : | 2 |
ಇತರ ಪ್ರಕರಣ | : | 2 |
1.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 13.01.2014 ರಂದು ಸಂಜೆ ಸುಮಾರು 6.30 ಗಂಟೆಗೆ ಫಿರ್ಯಾದಿದಾರರಾದ ಮುಖೇಶ ಪೂಜಾರಿರವರು ತನ್ನ ಚಿಕ್ಕಪ್ಪ ಶಿವಾನಂದ ಕೋಟ್ಯಾನ್ ರವರ ಬೈಕು ನಂಬರ್ ಕೆಎ 19 EK 2016 ನೇದರಲ್ಲಿ ಸಹಸವಾರನಾಗಿ ಕಿನ್ನಿಗೋಳಿ ಕಡೆಗೆ ಹೋಗುತ್ತಿರುವಾಗ್ಗೆ ಮಂಗಳೂರು ತಾಲೂಕು ಐಕಳ ಗ್ರಾಮದ ಐಕಳ ಶ್ರೀ ಮಹಾಕಾಳಿ ದೇವಸ್ಥಾನದ ಬಳಿ ತಲುಪುವಾಗ್ಗೆ ಮೂಡಬಿದ್ರೆ ಕಡೆಯಿಂದ ಎದುರುಗಡೆಯಿಂದ ಟಿಪ್ಪರ್ ಲಾರಿ ಕೆಎ 19 ಬಿ 4075 ನೇದನ್ನು ಅದರ ಚಾಲಕ ಸಿದ್ದು ಎಂಬಾತನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರು ಹಾಗೂ ಶಿವಾನಂದ ಕೋಟ್ಯಾನ್ ರವರು ಬೈಕು ಸಮೇತ ರಸ್ತೆ ಬಿದ್ದಿದ್ದು ಫಿರ್ಯಾದಿದಾರರ ಎರಡೂ ಕಾಲಿಗೆ ಎಡ ಸೊಂಟಕ್ಕೆ ತೀವ್ರ ತರಹದ ಜಖಂ ಆಗಿದ್ದು ಚಿಕಿತ್ಸೆ ಬಗ್ಗೆ ಮಂಗಳೂರು ಎ.ಜೆ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.
2.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರ ರವಿ ಎಂಬವರ ತಂಗಿಯಾದ ಕುಮಾರಿ ರೇಣುಕಾ ಪ್ರಾಯ 19 ವರ್ಷ ಎಂಬಾಕೆಯು ದಿನಾಂಕ: 09-01-14 ರಂದು ಬೆಳಿಗ್ಗೆ 08-00 ಗಂಟೆಗೆ ಉರ್ವಾ ಸ್ಟೋರ್ ಬಳಿಗೆ ಕೆಲಸ ನಿಮಿತ್ತ ಬೈಕಂಪಾಡಿ ತನ್ನ ಬಾಡಿಗೆ ಮನೆಯಿಂದ ಹೋದವಳು ಕೆಲಸಕ್ಕೂ ಹೋಗದೆ ಸಂಬಂಧಿಕರ ಮನೆಗೂ ಹೋಗದೆ ಬಳಿಕ ಮನೆಗೂ ಬಾರದೆ ಕಾಣೆಯಾಗಿರುವುದಾಗಿದೆ.
3.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 15.1.2014 ರಂದು 18.20ಗಂಟೆಗೆ ಲಾರಿ ನಂಬ್ರ KA 12A - 3128 ಅದರ ಚಾಲಕ ಕೈಕಂಬ ಜಂಕ್ಷನ್ ಕಡೆಯಿಂದ ಮರೋಳಿ ಕಡೆಗೆ ಅತೀವೇಗ ಮತ್ತು ಅಜಾಗರುಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಗ್ರಾಮಾಂತರ ಪೊಲೀಸ್ ಠಾಣೆಯ ಬಳಿ ಇರುವ ಕೆನರಾ ವರ್ಕಶಾಪ್ ಎದುರು ಮುಂದಿನಿಂದ ಹೋಗುತಿದ್ದ ಹೊಂಡಾ ಕಾರು ನಂಬ್ರ KA 19 MD 5123ರ ಹಿಂಬಾಗಕ್ಕೆ ಡಿಕ್ಕಿ ಮಾಡಿದ ಪರಿಣಾಮ ಕಾರಿನ ಹಿಂಭಾಗ ಸಂಪೊರ್ಣ ಜಖಂಗೊಂಡಿದ್ದು ಲಾರಿಯ ಮುಂಭಾಗ ಜಖಂಗೊಂಡಿರುತ್ತದೆ. ಅಪಘಾತದಿಂದ ಯಾರಿಗೂ ಕೂಡ ಗಾಯ ಆಗಿರುವುದಿಲ್ಲ.
4.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶರೀ ಸಿಪ್ರಿಯನ್ ಟೆಲ್ಲಿಸ್ ಎಂಬವರ ತಂದೆಯಾದ ಪ್ರಾನ್ಸಿಸ್ ಟೆಲ್ಲಿಸ್ ಎಂಬವರು ದಿನಾಂಕ ; 13/01/2014 ರಂದು ಮುಂಡ್ಕೂರಿನಿಂದ ಬಸ್ಸಿನಲ್ಲಿ ಬಂದು ಅಲಂಗಾರಿನಲ್ಲಿ ಇಳಿದು ರಸ್ತೆ ದಾಟಿ ಹೋಗುತ್ತಿರುವ ಸಮಯ ಸಂಜೆ ಸುಮಾರು 6-50 ಗಂಟೆಗೆ ದ್ವಿಚಕ್ರ ವಾಹನ ನಂಬ್ರ ಕೆಎ 19 ಇಜೆ 6473 ನೇಯದರ ಸವಾರ ಬೆಳುವಾಯಿ ಕಡೆಯಿಂದ ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರ ತಂದೆಯವರಿಗೆ ಢಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದಿದ್ದು ಅವರ ಎಡ ಕಾಲಿಗೆ, ಎಡಕೈಗೆ ರಕ್ತಗಾಯವಾಗಿರುತ್ತದೆ ಚಿಕಿತ್ಸೆಯ ಬಗ್ಗೆ ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಮಾಡಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಎ ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.
5. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಶಾಲಿನಿ ರವರ ಮಗಳಿಗೆ ನೆರೆಕರೆಯವರಾದ ವಿಕೇಶ್ ಮತ್ತು ಪ್ರವೀಣ್ ಎಂಬವರು ದೈಹಿಕ ದೌರ್ಜನ್ಯ ನಡೆಸಿದ ಬಗ್ಗೆ ಅವಳು ಠಾಣೆಗೆ ದೂರನ್ನು ನೀಡಿದ ಕಾರಣಕ್ಕಾಗಿ ಆರೋಪಿ ವಿಕೇಶನ ತಾಯಿ ಮತ್ತು ಸಂಬಂಧಿಕರಾದ ಪ್ರಶಾಂತ ವಿಕೇಶನ ಅತ್ತೆ ಭವಾನಿ ಮತ್ತು ಪುನಿತ್ ಎಂಬವನು ಬೈಯ್ಯುವುದು ಉಗುಳುವುದು ದಿಟ್ಟಿಸಿ ನೋಡುವುದು ಇತ್ಯಾದಿಗಳನ್ನು ಮಾಡಿ ಮಾನಸಿಕ ಹಿಂಸೆ ನೀಡುತ್ತಿದ್ದು ದಿನಾಂಕ 14-01-2014 ರಂದು ಸಂಜೆ 4-30 ಗಂಟೆ ಸಮಯಕ್ಕೆ ಪಿರ್ಯಾದಿದಾರರು ಪೇಟೆಗೆ ಹೋಗುವ ಸಂದರ್ಭದಲ್ಲಿ ಆರೋಪಿಗಳು ಅವರನ್ನು ತಮ್ಮ ಮನೆಯ ಗೇಟಿನ ಬಳಿ ರಸ್ತೆಯಲ್ಲಿ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ನಮ್ಮ ಮಕ್ಕಳ ವಿರುದ್ದ ದೂರು ನೀಡಿ ನಿನಗೆ ಏನು ಮಾಡಲು ಸಾಧ್ಯವಾಯಿತು ಮಕ್ಕಳ ವಿರುದ್ದ ಸಾಕ್ಷಿ ಹೇಳಿದರೆ ನಿನ್ನನ್ನು ಮತ್ತು ನಿನ್ನ ಮಗಳನ್ನು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಬೆದರಿಕೆಯನ್ನು ಹಾಕಿರುವುದಾಗಿದೆ.
6. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಅಲೋಶಿಯನ್ ಬಾಯ್ಸ್ ಹೋಮ್, ನೆಹರುನಗರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಕರ್ನಾಟಕ ಸರಕಾರದ ಅನುದಾನಿತ ಸಂಸ್ಥೆ ಕೋಟೆಕಾರ್ ಅಂಚೆ, ಸೋಮೇಶ್ವರ ಗ್ರಾಮ, ಮಂಗಳೂರು ಎಂಬ ಸಂಸ್ಥೆಯಲ್ಲಿ ಮಕ್ಕಳ ಕಲ್ಯಾಣ ಸಮಿತಿ ಆಧ್ಯಕ್ಷರ ಅದೇಶದ ಮೇರೆಗೆ ತಾತ್ಕಾಲಿಕ ನೆಲೆಯಲ್ಲಿ ದಾಖಲಾದ ಬಾಲಕರಾದ (1) ಸೋನು, ಪ್ರಾಯ 17 ವರ್ಷ, ಮತ್ತು (2) ರಿತೇಶ್ಪ್ರಾಯ 15 ವರ್ಷ ಎಂಬವರು ದಿನಾಂಕ 13-01-2014 ರಂದು ಮಧ್ಯಾಹ್ನ 15-00 ಗಂಟೆ ಸಮಯಕ್ಕೆ ಟಿ.ವಿ. ನೋಡುತ್ತಿದ್ದವರು ಅಲ್ಲಿಂದ ತಪ್ಪಿಸಿಕೊಂಡು ರೈಲ್ವೇ ಸ್ಟೇಷನ್ ಬಂದು ಅಲ್ಲಿಂದ ರೈಲ್ವೇ ಹಳಿಯಲ್ಲಿ ನಡೆದುಕೊಂಡು ಹೋಗಿ ಕಾಣೆಯಾಗಿರುತ್ತಾರೆ.
7. ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಫಾ. ಸ್ಟೀವ್ಬರ್ಟ್ ಡಿ'ಸಿಲ್ವ ಎಸ್.ಜೆ. ರವರು ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜಿನ ಪ್ರೀನ್ಸಿಪಾಲರಾಗಿದ್ದು, ನಿನ್ನೆ ದಿನಾಂಕ 15-01-2014 ರಂದು ಫೇಸ್ ಬುಕ್ ಅಂತರ್ಜಾಲ ಮತ್ತು ಎಸ್.ಎಂ.ಎಸ್, ಮೂಲಕ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತಿಳಿಯುವ ಹಾಗೆ ಯಾರೋ ಕಿಡಿಗೇಡಿಗಳು ಕಾಲೇಜಿನ ಮಾಜಿ ಕ್ಯಾಂಪಸ್ ಮಿನಿಸ್ಟರ್ ಫಾ. ಅಲೇನ್ ಲೋಬೋ ರವರು ಮೃತಪಟ್ಟಿರುವ ಬಗ್ಗೆ ಬಿತ್ತರಿಸಿದ್ದು, ಫೇಸ್ ಬುಕ್ ನಲ್ಲಿ "Hello guys, there is a sad news. Former Aloysius Collage Campus minister, Fr. Allen Lobo, has been expired due to age, bar. So there will be leave to the Collage. So let his soul rest in peace" ಎಂಬುದಾಗಿ ಪ್ರಕಟಿಸಿದ್ದು, ಇದನ್ನು ದಿನಾಂಕ 15-01-2014 ರಾತ್ರಿ 11:00 ಗಂಟೆಗೆ ಪಿರ್ಯಾದಿದಾರರು ನೋಡಿದ್ದು, ಈ ಸುದ್ದಿಯು ಕಾಲೇಜಿನ ವಿದ್ಯಾರ್ಥಿಗಳಲ್ಲಿ, ಅವರ ಪಾಲಕರಲ್ಲಿ ಹಾಗೂ ಸಾರ್ವಜನಿಕರಲ್ಲಿ ಗೊಂದಲವನ್ನು ಸೃಷ್ಠಿಸಿರುತ್ತಾರೆ.
No comments:
Post a Comment