ದಿನಾಂಕ 02.01.2014 ರ 16:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗನಂತಿದೆ.
ಕೊಲೆ ಪ್ರಕರಣ
|
:
|
0
|
ಕೊಲೆ ಯತ್ನ
|
0
| |
ದರೋಡೆ ಪ್ರಕರಣ
|
0
| |
ಸುಲಿಗೆ ಪ್ರಕರಣ
|
0
| |
ಮನೆ ಕಳವು ಪ್ರಕರಣ
|
1
| |
ಸಾಮಾನ್ಯ ಕಳವು
|
0
| |
ವಾಹನ ಕಳವು
|
0
| |
ಮಹಿಳೆಯ ಮೇಲಿನ ಪ್ರಕರಣ
|
0
| |
ರಸ್ತೆ ಅಪಘಾತ ಪ್ರಕರಣ
|
2
| |
ವಂಚನೆ ಪ್ರಕರಣ :
|
0
| |
ಮನುಷ್ಯ ಕಾಣೆ ಪ್ರಕರಣ
|
1
| |
ಇತರ ಪ್ರಕರಣ
|
6
|
1. ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಶ್ರೀ ಚಾರ್ಲ್ಸ್ ವಿಲಿಯಂ ರವರು ದಿನಾಂಕ 31-12-2013 ರಂದು ರಾತ್ರಿ ಪೂಜೆಗೆಂದು ಲೇಡಿಹಿಲ್ ಚರ್ಚ್ ಗೆ ಹೋಗಿ ಪೂಜೆ ಮುಗಿಸಿ ವಾಪಾಸು ತನ್ನ ಮೋಟಾರು ಸೈಕಲ್ ನಲ್ಲಿ ಮನೆಯ ಕಡೆಗೆ ಹೋಗುತ್ತಿದ್ದ ಅಮಯ ರಾಕೇಶ್, ಪ್ರವೀಣ್ ಡೊಣ್ಣ, ಪ್ರವೀಣ್, ರೋಶನ್, ಜೈಸನ್, ಜಾಯಲ್ ಮತ್ತು ಸಂದೇಶ್ ಎಂಬವರು ಚಾರ್ಲ್ಸ್ ರವರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದ ದಿಂದ ಬೈದು ಹಲ್ಲೆ ನಡೆಸಿರುತ್ತಾರೆ
2.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 01.01.2014 ರಂದು ಮಂಗಳೂರು ಗ್ರಾಮಾಂತರ ಠಾಣಾ ಪಿ.ಎಸ್.ಐಯವರು ಮತ್ತು ಸಿಬ್ಬಂದಿಗಳ ಜೊತೆಗೆ ಖಚಿತ ಮಾಹಿತಿಯ ಮೇರೆಗೆ ಕಣ್ಣೂರು ಗ್ರಾಮ ಎಂಬಲ್ಲಿ ಕೆಎ-19-ಸಿ-4759 ನೇ ನಂಬ್ರದ ಪಿಕ್‌ಅಪ್ ವಾಹನದಲ್ಲಿ ಸಂಜೆ ಸುಮಾರು 04.15 ಗಂಟೆಗೆ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ 6 ದನಕರುಗಳ ಸಮೇತ ಚಾಲಕ ಸಾಧಿಕ್ ಮತ್ತು ಫೆಡ್ರಿಕ್ ಕ್ರೂಜ್ ಎಂಬವರನ್ನು ದಸ್ತಗಿರಿ ಮಾಡಿ ದನಕರುಗಳನ್ನು ಸ್ವಾದೀನಪಡಿಸಿದ್ದಾಗಿದೆ.
3.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ ದಿನಾಂಕ 01-01-2014 ರಂದು ಬೆಳಿಗ್ಗೆ 09-00 ಗಂಟೆಗೆ ತಸ್ಲೀಮ್ ಆರೀಪ್ ಎಂಬವರು ತನ್ನ ಗೆಳೆಯ ಅಹಮ್ಮದ್ ಇಸಾಕ್ರವರ ಬೈಕಿನಲ್ಲಿ ಸ್ಟೇಟ್ಬ್ಯಾಂಕಿನಲ್ಲಿರುವ ತನ್ನ ಅಂಗಡಿಗೆ ಬರುತ್ತಿರುವ ಸಮಯ 09-30ಗಂಟೆಗೆ ಮಂಗಳಾಕ್ರೀಡಾಂಗಣದ ಎದುರು ತಲುಪುತ್ತಿದ್ದಂತೆ ಓರ್ವ ಪಾದಚಾರಿ ವ್ಯಕ್ತಿಯು ರಸ್ತೆಗೆ ಅಡ್ಡವಾಗಿ ಬಂದಾಗ ಗೆಳೆಯ ಇಸಾಕ್ ಬೈಕನ್ನು ನಿಲ್ಲಿಸಿದ್ದು ತಸ್ಲೀಮ್‌ರವರು ಆ ವ್ಯಕ್ತಿಗೆ ಜೋರು ಮಾಡಿ ಸ್ವಲ್ಪ ಎಚ್ಚರದಿಂದ ರಸ್ತೆ ದಾಟುವಂತೆ ತಿಳಿಸಿ ಮುಂದಕ್ಕೆ ಹೊರಡುವಷ್ಟರಲ್ಲಿ ಹಿಂದಿನಿಂದ ಬಂದ ಬಿಳಿ ಬಣ್ಣದ ಕಾರು ನಂಬ್ರ ಕೆಎ-19-ಎಮ್ಬಿ-1914ನೇ ವಾಹನದ ಚಾಲಕನು ತಸ್ಲೀಮ್ ರವರು ಸವಾರಿ ಮಾಡುತ್ತಿದ್ದ ಬೈಕಿಗೆ ಅಡ್ಡ ಇಟ್ಟು ವಾಹನದ ಚಾಲಕ ಹಾಗೂ ಅದರಲ್ಲಿದ್ದ ಮೂವರು ವ್ಯಕ್ತಿಗಳು ಕಾರಿನಿಂದ ಹೊರಬಂದು ತಸ್ಲೀಮ್ ಅವಾಚ್ಯ ಶಬ್ದದಿಂದ ಬೈದು ಹಲ್ಲೆ ನಡೆಸಿರುತ್ತಾರೆ
4.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 01-01-2014 ರಂದು ರಾತ್ರಿ ಸುರತ್ಕಲ್ ಗ್ರಾಮದ ಮುಕ್ಕ ಆಲಿ ಕಾಂಪ್ಲೆಕ್ಸ್ ನಲ್ಲಿ ಇದ್ದ ಸಮಯ ಕುಟ್ಟನ ಪಿಳ್ಳೆ ಎಂಬವರು ಕಾಂಪ್ಲೆಕ್ಸ್ ಎದುರು ರಾ ಹೆ 66 ರ ಬದಿ ಕಚ್ಚಾ ರಸ್ತೆಯಲ್ಲಿ ಮುಕ್ಕ ಜಂಕ್ಷನ್ ಕಡೆಗೆ ರಾತ್ರಿ ಸಮಯ ಸುಮಾರು 19-10 ಗಂಟೆ ವೇಳೆಗೆ ನಡೆದುಕೊಂಡು ಹೋಗುತ್ತಿದ್ದಾಗ ಸುರತ್ಕಲ್ ಕಡೆಯಿಂದ ಮುಲ್ಕಿ ಕಡೆಗೆ ಆಪಾದಿತ ಉದಯ ಪೈ ರವರು ನೋಂದಣಿಯಾಗದ ಹೊಸ ಲಾರಿಯನ್ನು ಅದರ ಚಾಲಕ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಬಂದು ಕುಟ್ಟನ ಪಿಳ್ಳೆ ಎಂಬವರಿಗೆ ರಭಸವಾಗಿ ಡಿಕ್ಕಿ ಪಡಿಸಿದ್ದು, ಕುಂಟನ ಪಿಳ್ಳೆ ಎಂಬವರಿಗೆ ಗಾಯವಾಗಿರುತ್ತದೆ.
5.ಕಾವೂರು ಪೊಲೀಸ್ ಠಾಣೆಯಲ್ಲಿ ವರಿದಯಾದ ಪ್ರಕರಣ : ಖತೀಜಮ್ಮ ಎಂಬವರು ವಾಸವಾಗಿರುವ ಮನೆಗೆ ಈ ದಿನ ದಿನಾಂಕ 01-01-2014 ರಂದು ರಾತ್ರಿ 8-30 ಗಂಟೆಗೆ ವೀರಪ್ಪ ಮತ್ತು ಹರೀಶ ಪ್ರಕಾಶ, ಜಯಂತ, ದಯ ಮೇಸ್ತ್ರಿ, ನಾಗು, ವರುಣ, ಲಕ್ಷ್ಮಣ, ದೀಪು, ದೀಲಿಪ್, ಮತ್ತು ಇತರರೊಂದಿಗೆ ಎಕಾಎಕಿ ಪಿ ಮನೆಗೆ ನುಗ್ಗಿ ಖತೀಜಮ್ಮ ಮತ್ತು ಅವರ ಮಗಳಾದ ಸಫಿಯಾ, ಮೊಮ್ಮಕ್ಕಳಾದ ಸೂಝಿನಾ, ಸೀರಿನಾರವರಿಗೆ ದೊಣ್ಣೆಯಿಂದ ಹಲ್ಲೆ ನಡೆಸಿ ರುವುದಾಗಿದೆ.
6. ಕಾವೂರು ಪೊಲೀಸ್ ಠಾಣೆಯಲ್ಲಿ ವರಿದಯಾದ ಪ್ರಕರಣ ಎಸ್.ವೀರಪ್ಪ ರವರು ದಿನಾಂಕ 01-01-2014 ರಂದು ರಾತ್ರಿ 7-00 ಗಂಟೆಗೆ ಶಿವಶಕ್ತಿ ಭಜನಾ ಮಂದಿರದ ರಸ್ತೆಯಲ್ಲಿ ಹೋಗುತ್ತಿದ್ದಾಗ ಅಮ್ಮಿ ಶೆಟ್ಟಿ ಅಂಗಡಿಯ ಹತ್ತಿರ ಫೈಝಲ್, ನವಾಝ್ ಎಂಬವರ ಕ್ವಾಲಿಸ್ ವಾಹನದಲ್ಲಿ ಇಮ್ರಾಯಿ, ಲಂಬು ಹಮೀದ್, ಅಮ್ಮೀ, ಬೆಳ್ಳಿಮೋನು, ಸೈಫುಲ್ಲಾ ಎದುರುಪದವು, ಇಲಿಯಾಸ್, ನವಾಝ್, ನಾಸಿರ್ ನಿಸರ್ಗಧಾಮ, ಅಬ್ಬು ಶಾಲೆ ಪದವು, ಇಮ್ರಾನ್ ಎಂಬವರುಗಳು ವೀರಪ್ಪರವರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದದಿಂದ ಬೈದು ಹಲ್ಲೆ ನಡೆಸಿರುತ್ತಾರೆ
7.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ : ದಿನಾಂಕ 01/01/2014 ರಂದು ಸಂಜೆ 4-00 ಗಂಟೆಗೆ ಅಬ್ದುಲ್ ರಹಿಮಾನ್ ಎಂವರು ಕಾಲೇಜಿನಲ್ಲಿರುವ ಸಮಯ ಅಶ್ವಿನ್ ಹಾಗೂ ಇತರರು ಸೇರಿಕೊಂಡು ಮಹಮ್ಮದ್, ಇಮ್ರಾನ್, ಅಬ್ದುಲ್ ರಹಿಮಾನ್, ಹರ್ಷದ್, ಅನ್ಸಾರ್ ಎಂಬವರನ್ನು ತಡೆದು ನಿಲ್ಲಿಸಿ, ಕೈಯಿಂದ ತಲೆಗೆ ಮತ್ತು ಮುಖಕ್ಕೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿರುತ್ತಾರೆ.
8.ಬಜಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 02/01/2014 ರಂದು ಬೆಳಿಗ್ಗೆ 10.30 ಗಂಟೆಯಿಂದ 13.20 ಗಂಟೆ ಮಧ್ಯೆ ಮಂಗಳೂರು ತಾಲೂಕಿನ ಪಡುಪೆರಾರ ಗ್ರಾಮದ ಅಂಬಿಕಾ ನಗರ ಎಂಬಲ್ಲಿ ವಾಸವಾಗಿರುವ ಪದ್ಮನಾಭ ಪೂಜರಿಯವರ ಮನೆಗೆ ಯಾರೋ ಕಳ್ಳರು ನುಗ್ಗಿ ಬೆಡ್ ರೂಂ ನಲ್ಲಿದ್ದ ಕಬ್ಬಿಣದ ಕಪಾಟಿನ ಮೇಲಿದ್ದ ಕೀಯಿಂದ ಕಪಾಟಿನ ಬಾಗಿಲನ್ನು ತೆರೆದು ಕಪಾಟಿನೊಳಗೆ ಲಾಕರ್ ನಲ್ಲಿದ್ದಂಹಹ ಬಂಗಾರದ ಕರಿಮಾಣಿ ಸರ ಸುಮಾರು 32 ಗ್ರಾಂ ತೂಕದ್ದು, ಹವಳದ ಸರ ಸುಮಾರು 3 1/2 ಪವನ್ ತೂಕದ್ದು, ಮುತ್ತಿನ ಸರ 2 ಪವನ್ ತೂಕದ್ದು, ಸಾದಾ ಚೈನ್ 1 1/2 ಪವನ್ ತೂಕ, ಲಕ್ಷ್ಮೀ ಪೆಂಡೆಂಟ್ ಇರುವ ಹವಳದ ಸಣ್ಣ ಚೈನ್ - 1, 1 1/4 ಪವನ್ ತೂಕ, ಮತ್ತು ಮುತ್ತಿನ ಬೆಂಡೋಲೆ - 1 ಜೊತೆ 4 ಗ್ರಾಂ ತೂಕ, ಅಂದರೆ ಒಟ್ಟು ಸುಮಾರು 100 ಗ್ರಾಂ ತೂಕದ 2,00,000/- ಲಕ್ಷ ರೂ. ಬೆಲೆ ಬಾಳುವ ಬಂಗಾರದ ಒಡವೆಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.
9. ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ಪ್ರಶಾಂತ್ಎಂಬವರ ಪೇಪರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನವೀನ ಎಂಬವರು ದಿನಾಂಕ 31-12-2013 ರಂದು 8-30 ಗಂಟೆಗೆ ಸೂಟರ್ ಪೇಟೆ 9 ನೇ ಕ್ರಾಸ್ ನಲ್ಲಿರುವ ರೂಮಿಗೆ ಹೋಗಿ ಬರುತ್ತೇನೆಂದು ಎಂದು ಹೇಳಿಹೋದವರು ಕಾಣೆಯಗಿರುತ್ತಾರೆ .
10. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 01.01.2014 ರಂದು 07.10 ಗಂಟೆಗೆ ಪಿರ್ಯಾದಿದಾರರು ಕೆಎ-20-ಸಿ-9169 ನೇ ಬಸ್ಸನ್ನು ಮೂಡಬಿದ್ರೆ ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಬಂದು ಕುಡುಪು ಗ್ರಾಮದ ಬೈತುರ್ಲಿ ತಲುಪಿದಾಗ ಮಂಗಳೂರು ಕಡೆಯಿಂದ ಕುಡುಪು ಕಡೆಗೆ ಕೆಎ-19-ಸಿ-9266 ನೇ ರಿಕ್ಷಾವನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮುಂದೆ ಹೋಗುವ ವಾಹನವನ್ನು ಓವರ್‌ಟೇಕ್ ಮಾಡುವ ಆತುರದಲ್ಲಿ ರಸ್ತೆ ತೀರಾ ಎಡಬದಿಯಲ್ಲಿ ಬರುತ್ತಿದ್ದ ಬಸ್ಸಿಗೆ ಡಿಕ್ಕಿಹೊಡೆದ ಪರಿಣಾಮ ಬಸ್ಸು ಮತ್ತು ಆಟೋ ಎರಡೂ ಜಖಂಗೊಂಡು ಆಟೋ ಚಾಲಕನಿಗೆ ಗಾಯವಾಗಿರುವುದಾಗಿದೆ.
No comments:
Post a Comment