Saturday, January 25, 2014

Daily Crime Reports 24-01-2014

ದೈನಂದಿನ ಅಪರಾದ ವರದಿ.

ದಿನಾಂಕ 24.01.201416:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

3

ಮನೆ ಕಳವು ಪ್ರಕರಣ

:

1

ಸಾಮಾನ್ಯ ಕಳವು

:

0

ವಾಹನ ಕಳವು

:

1

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

2

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

3

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1. ಉರ್ವಾ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾಧಿದಾರರು ತನ್ನ ತಂದೆಯ ಬಾಬ್ತು ಹಿರೋಹೊಂಡಾ ಮೊಟಾರು ಸೈಕಲ್    ಕೆಎ 19 ಕೆ 7192 ನೇದನ್ನು ಬಳಸುತ್ತಿದ್ದು  ಪ್ರತಿ ನಿತ್ಯ ಉರ್ವಸ್ಟೋರ್ನಲ್ಲಿರುವ ಹಿರೋಹೊಂಡಾ ಶೋರೂಮ್‌‌ನಲ್ಲಿ ಕೆಲಸಕ್ಕೆ ಬರುತ್ತಿದ್ದು ಎಂದಿನಂತೆ ದಿನಾಂಕ 10-01-2014 ರಂದು ಬೆಳಿಗ್ಗೆ 8-30 ಗಂಟೆಗೆ ಸದ್ರಿ ಮೊಟಾರು ಸೈಕಲ್ನ್ನು ಶೋರೂಮಿನ ಎದುರುಡೆ ಬಸ್ಸು ನಿಲ್ದಾಣದ ಹತ್ತಿರ ಪಾರ್ಕ್ಮಾಡಿ ಕೆಲಸಕ್ಕೆ ಹೋಗಿದ್ದು ಸಂಜೆ 18-00 ಗಂಟೆ ಕೆಲಸ ಮುಗಿಸಿ ಸದ್ರಿ ಮೊಟಾರು ಸೈಕಲ್ಪಾಕ್ಮಾಡಿದ ಸ್ಥಳಕ್ಕೆ ಬಂದು ನೋಡಿದಾಗ ಸದ್ರಿ ವಾಹನ ನಿಲ್ಲಿಸಿದ ಸ್ಥಳದಲ್ಲಿ ಕಾಣದೇ ಇದ್ದು ಸದ್ರಿ ವಾಹನವನ್ನು 2-3 ದಿನ ಹುಡುಕಿದರೂ ಪತ್ತೆಯಾಗದೇ ಇರುವುದರಿಂದ ಇದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ.

 

2. ಉರ್ವಾ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ  23-01-2014 ರಂದು  ರಾತ್ರಿ 11.00 ಗಂಟೆಗೆ  ಮಂಗಳೂರು ನಗರದ ಸಿಸಿಬಿ ಘಟಕದ PSI ಶ್ಯಾಮಸುಂದರ್ ಹಾಗೂ ಸಿಬ್ಬಂದಿಗಳು ಖಚಿತ ವರ್ತಮಾನದಂತೆ ಕೊಟ್ಟಾರ ಚೌಕಿ ಬಳಿ ಇರುವ ದನುಷ್ ಹೊಟೇಲ್ ಬಿಲ್ಡಿಂಗ್  3ನೇ ಮಹಡಿಯಲ್ಲಿ ರುವ ದುರ್ಗಾ ರಿಕ್ರೆಷೇನ್ ಗೆ  ದಾಳಿನಡೆಸಿ  ಅಲ್ಲಿ ಕೋಣೆಯೊಳಗೆ  ಇಸ್ಪೀಟ್ ಎಲೆಗಳನ್ನು ಹಾಕಿ  ಹಣವನ್ನು ಪಣವಾಗಿಟ್ಟುಕೊಂಡು(ಅಂದರ್ ಬಾಹರ್)  ಎಂಬ ಜುಗಾರಿ ಆಟವನ್ನು  ಆಡುತ್ತಿದ್ದ 20 ಮಂದಿ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು  ಅವರ ಬಳಿ ಅದಕ್ಕೆ ಉಪಯೋಗಿಸಿದ  52 ಇಸ್ಪೀಟ್  ಎಲೆಗಳು ಹಾಗು  ನಗದು ರೂಪಾಯಿ 19,650 /ನ್ನು  ಸ್ವಾಧೀನ ಪಡಿಸಿ  ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾಗಿದೆ.

 

3. ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿ ಮಂಜುನಾಥ ಇವರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಕಾರ್ನಾಡು ಗ್ರಾಮದ ಲಿಂಗಪ್ಪಯ್ಯಕಾಡು ಬಿ ಕಾಲನಿಯಲ್ಲಿ ನ್ಯಾಯ ಬೆಲೆ ಅಂಗಡಿ ನಡೆಸುತ್ತಿದ್ದು, ದಿನಾಂಕ 23-01-2014 ಸಂಜೆ 7:30 ಗಂಟೆ ಸಮಯಕ್ಕೆ ಕಾರ್ನಾಡು ಗ್ರಾಮದ ಲಿಂಗಪ್ಪಯ್ಯಕಾಡು ಎಂಬಲ್ಲಿ ಬಿ.ಜೆ.ಪಿ. ಸಾರ್ವಜನಿಕ ಸಭೆಯಲ್ಲಿ ಆರೋಪಿತರಾದ ವಿರೋಭ ನಾರಾಯಣಪುರ, ಈರಣ್ಣ ಅರಳಗುಂಡಿಗಿ, ಶಶಿಕುಮಾರ್ ಇವರ ಮಾತು ಕೇಳಿ, ಬಿ.ಜೆ.ಪಿ ಜಿಲ್ಲಾ ಉಪಾಧ್ಯಕ್ಷರಾದ ಉಮಾನಾಥ ಕೋಟ್ಯಾನ್ ರವರು ಹೀನಾಯವಾಗಿ ಮಾತಾನಾಡಿ, ಜಾತಿನಿಂದನೆ ಮಾಡಿ, ಜೀವ ಬೆದರಿಕೆ ಹಾಕಿರುವುದಾಗಿದೆ.

 

4. ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 23.01.2014 ರಂದು ಪಿರ್ಯಾದಿದಾರರಾದ ಶ್ರೀ ರಾಘವೇಂದ್ರ ಗೌಡ ರವರು ತನ್ನ ಸಹದ್ಯೋಗಿ ಮುತ್ತಪ್ಪ ಎಂಬವರ ಬಾಬ್ತು ಮೋಟಾರು ಸೈಕಲ್ ನಂಬ್ರ ಕೆಎ.19.ಎಕ್ಸ್ 3406ನೇದರಲ್ಲಿ  ಸಂತೋಷ್  ರಾಥೋಡ ರವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಮಂಗಳೂರು ನಗರದ ಸಾರ್ವಜನಿಕ ಕಾಂಕ್ರೀಟು ರಸ್ತೆಯಾದ  ಲಾಲ್ ಭಾಗ್ ಲೇಡಿಹಿಲ್ ರಸ್ತೆಯಲ್ಲಿ ಮೋಟಾರು ಸೈಕಲನ್ನು ಚಲಾಯಿಸಿಕೊಂಡು ಹೋಗುತ್ತಾ  ಬೆಳಿಗ್ಗೆ  08.30 ಗಂಟೆಗೆ ಕರಾವಳಿ ಮೈದಾನದ ಬಳಿ ತಲುಪುತ್ತಿದ್ದಂತೆ ಅಲ್ಲಿಯೇ ಎಡಬದಿಯಲ್ಲಿ ಪಾರ್ಕ್ ಮಾಡಿದ  ಸ್ಕಾರ್ಪಿಯೋ ಕಾರು ನಂಬ್ರ ಕೆಎ.19.ಜೆಡ್.8266ನೇದನ್ನು ಅದರ ಚಾಲಕ ವೆಂಕಟೇಶ್ ಎಂಬವರು ಅತೀವೇಗ ಮತ್ತು ನಿರ್ಲಕ್ಷ್ಯತನದಿಂದ ಯಾವುದೇ ಸೂಚನೆ ನೀಡದೆ ಒಮ್ಮಲೇ ಬಲಕ್ಕೆ ತಿರುಗಿಸಿ ಪಿರ್ಯಾದಿದಾರರ ಚಲಾಯಿಸುತ್ತಿದ್ದ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದುದರಿಂದ  ಎಡ ಕಾಲಿನ ಕೋಲು ಕಾಲಿಗೆ ಮೂಳೆ ಮುರಿತದ ಗಾಯ ಮತ್ತು ಅದೇ ಕಾಲಿನ ಹಿಮ್ಮಡಿಗೆ ರಕ್ತಗಾಯವಾದವರು ಮೊದಲಿಗೆ ತೇಜಸ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಚಿಕಿತ್ಸೆ ಬಗ್ಗೆ .ಜೆ. ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ  ಎಂಬಿತ್ಯಾದಿಯಾಗಿರುತ್ತದೆ.

 

5. ಮಂಗಳೂರು ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ವಾಸುದೇವ್ ರಾವ್ ರವರು ಅಧ್ಯಕ್ಷರಾಗಿರುವ ಸೌತ್ ಕೆನರಾ ಫೊಟೊಗ್ರಾಫರ್ಸ್ ಅಸೋಸಿಯೇಶನ್(ರಿ), .. ಮತ್ತು ಉಡುಪಿ ಇದರ ಕಚೇರಿ ಮಂಗಳೂರು ನಗರದ ಶಿವಭಾಗ್ ನಲ್ಲಿರುವ ವಸಂತಿ ಕಾಂಪ್ಲೆಕ್ಸ್ 2ನೇ ಮಹಡಿಯಲ್ಲಿದ್ದು, ದಿನಾಂಕ 18-01-2014 ರಂದು ಸುಮಾರು 12-00 ಗಂಟೆಯಿಂದ  ದಿನಾಂಕ 23-01-2014 ರಂದು ಸಮಯ ಸುಮಾರು 16-00 ಗಂಟೆಯ ಮಧ್ಯೆ ಯಾರೋ ಕಳ್ಳರು ಸದ್ರಿ ಕಛೇರಿಯ ಎದುರಿನ ಬಾಗಿಲನ್ನು ಯಾವುದೋ ಹರಿತವಾದ ಆಯುಧದಿಂದ ಮೀಟಿ ತೆರೆದು ಒಳ ಪ್ರವೇಶಿಸಿ ಸದ್ರಿ ಕಚೇರಿಯಲ್ಲಿರುವ ಗೋಡ್ರೇಜ್ ಒಂದನ್ನು ತೆರೆದು ಬೆಲೆ ಬಾಳುವ ಸೊತ್ತುಗಳಿಗಾಗಿ ಹುಡುಕಾಡಿದ್ದು, ಸದ್ರಿ ಕಚೇರಿಯಲ್ಲಿದ್ದ CPU-1, Monitor-1, Key-Board-1 ಹಾಗೂ Mouse-1  ಹೀಗೆ ಒಟ್ಟು ಅಂದಾಜು 23,000/- ರೂ ಬೆಲೆ ಬಾಳುವ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.

 

6. ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19-01-2014 ರಂದು ಪಿರ್ಯಾದಿದಾರರಾದ ಶ್ರೀ ವಿನೋದಾ ಹೆಗ್ಡೆ ರವರು ರಾತ್ರಿ ಸಮಯ ಬೆಳ್ತಂಗಡಿಯಲ್ಲಿ ಮದುವೆ ಸಮಾರಂಭದ ಡಿಜೆ ಕಾರ್ಯಕ್ರಮ ನಡೆಸಲು ಹೋಗಿ ವಾಪಾಸ್ಬೆಳ್ತಂಗಡಿಯಿಂದ ತನ್ನ ಮನೆಯಾದ ಬೆಳುವಾಯಿ ಕಡೆಗೆ ಮೋಟಾರು ಸೈಕಲ್ನಂಬ್ರ ಕೆಎ 20 ಆರ್‌ 7763 ನೇಯದ್ದನ್ನು ಸವಾರಿ ಮಾಡಿಕೊಂಡು ಬರುತ್ತಾ ಮೂಡಬಿದ್ರೆಯ ಮಾರ್ಪಾಡಿ ಗ್ರಾಮದ ಜೈನ್ಪೇಟೆಯಿಂದ ಸ್ವಲ್ಪ ಮುಂದಕ್ಕೆ ಅರಮನೆ ರಸ್ತೆ ಕ್ರಾಸ್ಬಳಿ ದಿನಾಂಕ : 20-01-2014 ರಂದು ಮುಂಜಾನೆ 03-45 ಗಂಟೆ ಸಮಯಕ್ಕೆ ತಲುಪಿದಾಗ ಕಾರ್ಕಳ ಕಡೆಯಿಂದ ಮೂಡಬಿದ್ರೆ ಕಡೆಗೆ ಬಾಳೆಹಣ್ಣು ತುಂಬಿದ ಬೊಲ್ಲೆರೋ ಪಿಕ್‌-ಆಪ್ ವಾಹನವನ್ನು ಅದರ ಚಾಲಕರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರು ಸೈಕಲ್ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರಿಗೆ ಬಲಕಾಲಿನ ಮೊಣಗಂಟೆಗೆ ರಕ್ತಗಾಯವಾಗಿ ಬಲಕಾಲಿನ ತೋಡೆಗೆ ಹಾಗೂ ಬಲ ಸೊಂಟಕ್ಕೆ ಗುದ್ದಿದ ನೋವುಂಟಾಗಿದ್ದು ಅಲ್ಲದೇ ಬಲ ಕಣ್ಣಿನ ಹುಬ್ಬಿನ ಬಳಿ ಹಾಗೂ ಎಡ ಕಿವಿಗೆ ರಕ್ತಗಾಯವಾಗಿದ್ದು ಪಿರ್ಯಾದಿದಾರರು ಚಿಕಿತ್ಸೆಯ ಬಗ್ಗೆ ಕಾರ್ಕಳ ಸ್ಪಂದನಾ ಆಸ್ಪತ್ರೆಯಲ್ಲಿ ಒಳರೊಗಿಯಾಗಿ ದಾಖಲಿಸಲ್ಪಟ್ಟಿದ್ದು ಅಪಘಾತವನ್ನುಂಟು ಮಾಡಿದ ಬೊಲ್ಲೆರೋ ಪಿಕ್-ಆಪ್ವಾಹನದ ಅದರ ಚಾಲಕರು ಪಿರ್ಯಾದಿದಾರರಿಗೆ ಆರೈಕೆ ನೀಡದೇ ವಾಹನದ ಸಮೇತ ಪರಾರಿಯಾಗಿರುವುದಾಗಿದೆ.

 

7. ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ ; 23-01-2014 ರಂದು 16-10 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು ಮಾರ್ಪಾಡಿ ಗ್ರಾಮದ ಕೋಟೆಬಾಗಿಲು ಎಂಬಲ್ಲಿರುವ ಅಪ್ನಿ ದುಖಾನ್ಅಂಗಡಿಯ ಬಳಿ ಸಾಮಾನು ಖರೀದಿಸಲು ಬರುತ್ತಿದ್ದ ಪಿರ್ಯಾದಿದಾರರಾದ ಶ್ರೀ ಆಸೀಫ್ರವರನ್ನು ಅಕ್ರಮವಾಗಿ ತಡೆದು ನಿಲ್ಲಿಸಿದ ಆರೋಪಿಗಳಾದ ಸಿರಾಜ್ ಮತ್ತು ಶರೀಫ್ ಕೊಟೇಬಾಗಿಲು ಎಂಬವರು ಪಿರ್ಯಾದಾರರು ಅವರನ್ನು ದುರುಗುಟ್ಟಿ ನೋಡಿದರು ಎಂಬ ಕಾರಣದಿಂದ ಅವಾಚ್ಯ ಶಬ್ದಗಳಿಂದ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೈದು ಕೈಯಿಂದ ಹೊಡೆದು ಕಾಲಿನಿಂದ ತುಳಿದಿದ್ದು ಇದರಿಂದ ಪಿರ್ಯಾದಿದಾರ ಮೂಗಿಗೆ ಎಡ ಕಾಲಿನ ತೋಡೆಗೆ ತಲೆಯ ಹಿಂಬದಿಗೆ ಗುದ್ದಿದ ನೋವುವಾಗಿರುತ್ತದೆ.

 

8. ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 23-01-14 ರಂದು ಸಂಜೆ 5-00 ಗಂಟೆಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ದಿನಕರ್ ಶೆಟ್ಟಿ ರವರು ಠಾಣೆಯಲ್ಲಿರುವ ಸಮಯ ನಗರದ ನೀರೇಶ್ವಾಲ್ಯ ಜಂಕ್ಷನ್ ಬಳಿಯ ಬಂಬು ಬಜಾರ್ ರಸ್ತೆಯಲ್ಲಿರುವ ಹಳೆಯ ಹಂಚು ಛಾವಣಿಯ ಕಟ್ಟಡದ ಕೋಣೆಯೊಂದರಲ್ಲಿ, ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೇ ಗ್ಯಾಸ್ ಸಿಲಿಂಡಗಳನ್ನು ದಾಸ್ತಾನು ಇರಿಸಿಕೊಂಡು ಮಾರಾಟ ಮಾಡುತ್ತಿದ್ದಾರೆಂಬ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಯವರೊಂದಿಗೆ ಹಾಗೂ ಆಹಾರ ಮತ್ತು ನಾಗರೀಕ ಸರಬುರಾಜು ಇಲಾಖೆಯ ಉಪ ನಿರ್ದೇಶಕರಾದ ಶ್ರೀಮತಿ ಸುನಂದ ರವರೊಂದಿಗೆ 17-30 ಗಂಟೆಗೆ ಸದ್ರಿ ದಾಸ್ತಾನು ಕೊಠಡಿಗೆ ಪಂಚರೊಂದಿಗೆ ಧಾಳಿ ನಡೆಸಿದಾಗ, ಯಾವುದೇ ಪರವಾನಿಗೆ ಇಲ್ಲದೇ 26 ಗ್ಯಾಸ್ ತುಂಬಿರುವ ಇಂಡೆನ್ ಎಲ್ ಪಿ ಜಿ ಸಿಲಿಂಡರ್ ಗಳು ಮತ್ತು 9 ಖಾಲಿ ಇಂಡೆನ್ ಎಲ್ ಪಿ ಜಿ ಸಿಲಿಂಡರ್ ಗಳು ಪತ್ತೆಯಾಗಿದ್ದು, ಬಗ್ಗೆ ಹಾಜರಿದ್ದ ಇಬ್ಬರು ಆರೋಪಿಗಳಾದ ಅಬ್ದುಲ್ಲಾ ಬಿ. ಮತ್ತು ಮೊಹಮ್ಮದ್ ಎಂಬವರಲ್ಲಿ ಸದ್ರಿ ಗ್ಯಾಸ್ ಸಿಲಿಂಡರ್ ಗಳ ಬಗ್ಗೆ ವಿಚಾರಿಸಿದಾಗ, ನಾವು ಸದ್ರಿ ಗ್ಯಾಸ್ ಸಿಲಿಂಡರ್ ಗಳನ್ನು ಸಾರ್ವಜನಿಕರಿಗೆ ನಿರ್ದಿಷ್ಟ ಪಡಿಸಿದ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ದಾಸ್ತಾನು ಇರಿಸಿಕೊಂಡಿರುವುದಾಗಿ ನುಡಿದಿದ್ದು, ಸದ್ರಿ ಸಿಲಿಂಡರ್ ಗಳನ್ನು  ಯಾವುದೇ ಸುರಕ್ಷತೆ, ಸಾರ್ವಜನಿಕರ ಜೀವಕ್ಕೆ ಉಂಟಾಗುವ ಅಪಾಯದ ಬಗ್ಗೆ ಮುನ್ನೇಚ್ಚರಿಕೆ ಕ್ರಮಗಳನ್ನು ವಹಿಸದೇ, ಅಕ್ರಮವಾಗಿ ದಾಸ್ತಾನು ಇರಿಸಿ ಕೊಂಡಿರುವುದನ್ನು ಮಹಜರು ಮುಖೇನಾ ಸ್ವಾಧೀನಪಡಿಸಿಕೊಂಡಿರುವುದಾಗಿದೆ

 

9. ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 23-01-2014 ರಂದು ಪಿರ್ಯಾದಿದಾರರಾದ ಜೀವನ್ ಕುಮಾರ್ ರವರು ಅವರ ಹೆಂಡತಿಯೊಂದಿಗೆ ಮಂಗಳೂರಿನಿಂದ ಚಿತ್ರಾಪುರ ಅವರ ಮನೆ ಕಡೆಗೆ ಹೋಗುವರೇ ಸುರತ್ಕಲ್ ಕಡೆ ತೆರಳುವ ಬಸ್ಸು ನಂಬ್ರ ಕೆ...19.ಬಿ.2266 ನೇದರಲ್ಲಿ ಹೊರಟು ಸಂಜೆ ಸಮಯ 3-45 ಗಂಟೆಗೆ ಚಿತ್ರಾಪುರ ದೇವಸ್ಥಾನದ ಬಳಿ ಇರುವ ಬಸ್ಸು ತಂಗುದಾಣದಲ್ಲಿ ನಿಂತ ಬಸ್ಸಿನಿಂದ ಪಿರ್ಯಾದಿಯ ಹೆಂಡತಿ ಇಳಿಯುತ್ತಿದ್ದಂತೆ ಚಾಲಕರು ಬಸ್ಸಿನಿಂದ ಇಳಿಯುತ್ತಿರುವುದನ್ನು  ಗಮನಿಸದೇ ಒಮ್ಮಲೇ ನಿರ್ಲಕ್ಷತನದಿಂದ ಬಸ್ಸನ್ನು ಮುಂದಕ್ಕೆ ಚಲಾಯಿಸಿದ ಪರಿಣಾಮ ಪಿರ್ಯಾದಿಯ ಹೆಂಡತಿ ಶ್ರೀಮತಿ ಮಮತಾ ಜೆ. ಅಮೀನ್ ರವರು ಆಯ ತಪ್ಪಿ ಬಸ್ಸಿನಿಂದ ಕೆಳಗೆ ಬಿದ್ದು ತಲೆಗೆ ರಕ್ತ ಗಾಯವಾಗಿದ್ದು ಬಗ್ಗೆ ಮಂಗಳೂರು .ಜೆ ಆಸ್ಪತ್ರೆಗೆಯಲ್ಲಿ ಒಳರೋಗಿಯಾಗಿ ದಾಖಲು ಮಾಡಿರುವುದು.

No comments:

Post a Comment