ದೈನಂದಿನ ಅಪರಾದ ವರದಿ.
ದಿನಾಂಕ 23.01.2014 ರ 16:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 5 |
ಮನೆ ಕಳವು ಪ್ರಕರಣ | : | 1 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 3 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 1 |
ಇತರ ಪ್ರಕರಣ | : | 1 |
1. ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 22.01.2014 ರಂದು ಪಿರ್ಯಾದುದಾರರಾದ ಶ್ರೀಮತಿ ಕೆ.ಪಿ. ಸೀತಾಬಾಯಿ ರವರು ಸಂಜೆ ಸುಮಾರು 5:30 ಗಂಟೆ ಸಮಯಕ್ಕೆ ಮಂಗಳೂರು ಮಹಾನಗರ ಪಾಲಿಕೆ ಬಳಿ ಇರುವ ನೆಹರು ಅವೆನ್ಯೂ ರಸ್ತೆಯ ಎಡಬದಿಯಲ್ಲಿ ರಸ್ತೆ ದಾಟುವರೇ ನಿಂತುಕೊಂಡಿರುವ ಸಮಯ ಲಾಲ್ ಭಾಗ್ ಕಡೆಯಿಂದ KA-19-Q-9870ನೇ ನಂಬ್ರದ ಸ್ಕೂಟರನ್ನು ಅದರ ಸವಾರ ಸಂಜು ಎಂಬವರು ಅತೀವೇಗ ಮತ್ತು ತೀರಾ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು ರಸ್ತೆಗೆ ಬಿದ್ದು ಅವರ ಎಡ ಕೈ ರಟ್ಟೆಗೆ ಮೂಳೆ ಮುರಿತದ ಗಾಯ, ಎಡ ಕಾಲ ಕಿರು ಬೆರಳ ಬಳಿ ಮತ್ತು ಬಲ ಬೆನ್ನಿನ ಬಳಿ ತರಚಿದ ಗಾಯಗೊಂಡವರನ್ನು ಆರೋಪಿ ಸಂಜು ರವರು ಚಿಕಿತ್ಸೆಯ ಬಗ್ಗೆ ನಗರದ ವಿಜಯ ಕ್ಲಿನಿಕ್ ಆಸ್ಪತ್ರೆಯಲ್ಲಿ ದಾಖಲುಗೊಳಿಸಿರುವುದು.
2. ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 21-01-2014 ರಂದು ಸಂಜೆ ಸುಮಾರು 19-30 ಗಂಟೆಯಿಂದ ದಿನಾಂಕ 22-01-2014 ರಂದು ಬೆಳಿಗ್ಗೆ ಸಮಯ ಸುಮಾರು 09-00 ಗಂಟೆಯ ಮಧ್ಯೆ ಯಾರೋ ಕಳ್ಳರು ಪಿರ್ಯಾದಿದಾರರಾದ ಒಲಿಂಡಾ ಮೀರಾ ರೊಡ್ರಿಗಸ್ ರವರು ನಡೆಸಿಕೊಂಡಿರುವ ಮಂಗಳೂರು ನಗರದ ಶಿವಭಾಗ್ ನಲ್ಲಿರುವ ವಸಂತಿ ಕಾಂಪ್ಲೆಕ್ಸ್ ನ ಒಂದನೇ ಮಹಡಿಯಲ್ಲಿರುವ ಎಬಿಸಿ ಟ್ರೇಡರ್ಸ್ ಅಂಡ್ ಎಕ್ಸ್ಪೋರ್ಟ್ಸ್ ಎಂಬ ಸಂಸ್ಥೆಯ ಎದುರಿನ ಶಟರ್ ಬಾಗಿಲಿಗೆ ಹಾಕಿದ ಬೀಗವನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಮೀಟಿ ತೆರೆದು ಒಳಪ್ರವೇಶಿಸಿ ಒಳಗಿದ್ದ ಕಪಾಟುಗಳನ್ನು ಕೀಯ ಸಹಾಯದಿಂದ ತೆರೆದು ಬೆಲೆ ಬಾಳುವ ವಸ್ತುಗಳಿಗಾಗಿ ಹುಡುಕಾಡಿ, ಸದ್ರಿ ಆಫೀಸಿನಲ್ಲಿದ್ದ Dell ಕಂಪನಿಯ CPU-1, Monitor-1, Key-Board, Mouse ಹಾಗೂ Western Digital ಕಂಪನಿಯ Hard Disc ಗಳು-2 ಹೀಗೆ ಒಟ್ಟು ಅಂದಾಜು 24,060/- ರೂ ಬೆಲೆ ಬಾಳುವ ವಸ್ತುಗಳನ್ನು ಹಾಗೂ ಕೆಲವೊಂದು ಜಾಗಕ್ಕೆ ಸಂಬಂಧಿಸಿದ ಮೂಲ ದಾಖಲಾತಿಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ
3. ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22/01/2014 ರಂದು ಸಂಜೆ ಸುಮಾರು 6:00 ಗಂಟೆಗೆ ಶೆಪಿಲ್ಡ್ ಅಪಾರ್ಟಮೆಂಟ್ ಬದಿಯ ಸಾರ್ವಜನಿಕ ರಸ್ತೆಯಲ್ಲಿ ದಿಲೀಪ್ ಕುಮಾರ ಪಿರೇರಾ ಎಂಬುವರು ಕಾರು ನಂಬ್ರ KA-12-N-6834 ರಲ್ಲಿ ಚಾಲಕರಾಗಿದ್ದುಕೊಂಡು ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೊಸಮನಿ ಫಕೀರಪ್ಪ ಎಂಬುವರ ಜೊತೆ ನಿಂತಿದ್ದ ಆತನ ಮಗಳು ಅಶ್ವಿನಿ ಎಂಬ ಹೆಸರಿನ ಬಾಲಕಿಗೆ ಡಿಕ್ಕಿ ಮಾಡಿದ ಪರಿಣಾಮ ಬಾಲಕಿಯ ಎರಡು ಕಾಲುಗಳಿಗೆ ಗಂಭೀರ ಸ್ವರೂಪದ ಗಾಯ ಉಂಟಾಗಿ SCS ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ.
4. ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 21/01/2014 ರಂದು ರಾತ್ರಿ ಸುಮಾರು 09.30 ಗಂಟೆ ಸಮಯಕ್ಕೆ ಮರಿಯಾಡಿ ಮಸೀದಿ ಬಳಿ ಪಿರ್ಯಾದಿದಾರರಾದ ಶ್ರೀ ಮುಸ್ತಾಫಾ ರವರು ಹಾಕಿದ ಬ್ಯಾನರ್ ಹಾಗೂ ಬಂಟಿಂಕ್ಸ ಗಳನ್ನು ಪಿರ್ಯಾದಿದಾರರು ತೆಗೆಯುತ್ತಿದ್ದಾಗ ಲಾಡಿಯಲ್ಲಿ ವಾಸ್ತವ್ಯದಲ್ಲಿರುವ ಕಲಂದರ್ ಮತ್ತು ದಾವೂದ್ ಎಂಬವರು ಅಲ್ಲಿಗೆ ಆಟೋವೊಂದರಲ್ಲಿ ಬಂದು ನಮ್ಮನ್ನು ತಡೆದು, ಅವಾಚ್ಯ ಶಬ್ದಗಳಿಂದ ಬೈದು, ಪಿರ್ಯಾದಿದಾರರಿಗೆ ಕಾಲಿನಿಂದ ಒದ್ದು, ಬಿಡಿಸಲು ಬಂದ ಅಬ್ಬಾಸ್, ಅಸ್ಬೀರ್, ಕಲಂದರ್ ಶಾಫಿ ಎಂಬವರಿಗೂ ಕೈಯಿಂದ ಹಲ್ಲೆ ಮಾಡಿ ನಮ್ಮ ಗಲಾಟೆ ಕೇಳಿ ಜನ ಸೇರಿದ್ದ ಸಮಯ ಆರೋಪಿಗಳು ದಾವೂದ್ ಎಂಬಾತನ ಮನೆಯ ಬಳಿ ಆಟೋ ನಿಲ್ಲಿಸಿ ಓಡಿ ಪರಾರಿಯಾಗಿರುವುದು.
5. ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 21/01/2014 ರಂದು ಪಿರ್ಯಾದಿದಾರರಾದ ಖಲಂದರ್ ರವರು ತಮ್ಮ ಆಟೋ ರಿಕ್ಷಾದಲ್ಲಿ ಮರಿಯಾಡಿಯ ದಾವೂದ್ ಎಂಬವರ ಅಂಗಡಿಗೆ ಸಾಮಾನು ಕೊಂಡು ಹೋಗಿ ನಂತರ ವಾಪಾಸು ಅಲ್ಲಿಂದ ಹೊರಡಲು ಅನುವಾದಾಗ ರಾತ್ರಿ ಸುಮಾರು 10.00 ಗಂಟೆಗೆ ಅಂಗಡಿಯ ಬಳಿಯಲ್ಲಿ ಪಿರ್ಯಾದಿಯವರಿಗೆ ಪರಿಚಯವಿರುವ ಮುಸ್ತಾಫ ಮತ್ತು ಶರೀಫ್ ಎಂಬವರು ಪಿರ್ಯಾದಿದಾರರ ಬಳಿ ಬಂದು ಆಟೋ ರಿಕ್ಷಾವನ್ನು ತಡೆದು ನಿಲ್ಲಿಸಿ, "ಮೊನ್ನೆ ಈದ್ ಮಿಲಾದ್ ಸಂದರ್ಭದಲ್ಲಿ ಬಣ್ಣದ ಕಾಗದ ಹಾಕುವ ವಿಚಾರದಲ್ಲಿ ಭಾರಿ ಮಾತನಾಡಿದ್ದೀಯ, ನೀನು ಈಗ ಮಾತನಾಡು ನೋಡುವಾ" ಎಂದು ನನ್ನಲ್ಲಿ ಹೇಳುತ್ತಿದ್ದಂತೆ ಅಲ್ಲಿಯೇ ಇದ್ದ ಅಬ್ಬಾಸ್, ಇಸ್ಮಾಯಿಲ್, ಇರ್ಫಾನ್, ಎಲ್ಯಾಸ್ ಮತ್ತು ಇತರರು ಮರದ ಸೋಂಟೆಯಿಂದ ಹೊಡೆದು ಉಳಿದವರು ಮುಸ್ತಾಫ, ಶರೀಫ್ ಹಸನಬ್ಬ, ಕೈಯಿಂದ ಮುಖಕ್ಕೆ ಚೆನ್ನಾಗಿ ಹೊಡೆದಿರುತ್ತಾರೆ. ನಂತರ ಪಿರ್ಯಾದಿದಾರರು ಸ್ಥಳದಿಂದ ರಿಕ್ಷಾ ಬಿಟ್ಟು ಓಡಿ ಹೋಗಿದ್ದು, ದಿನಾಂಕ 22-01-14 ರಂದು ಬೆಳಿಗ್ಗೆ 07.30 ಗಂಟೆಗೆ ನನ್ನ ಆಟೋ ರಿಕ್ಷಾ ತರಲು ಹೋದಾಗ ಅಬ್ಬಾಸ್ ಮತ್ತು ಮುಸ್ತಾಫ್ ಎಂಬವರು ನನ್ನ ಬಳಿ ಬಂದು, "ನಿನ್ನೆ ನೀನು ತಪ್ಪಿಸಿಕೊಂಡು ಹೋಗಿದ್ದಿ, ಈಗ ಪುನಃ ಬಂದಿದ್ದಿ" ಎಂದು ನಂತರ ಅವಾಚ್ಯ ಶಬ್ದಗಳಿಂದ ಬೈದು, ಅಬ್ಬಾಸ್ ನು ಯಾವುದೋ ವಸ್ತುವಿನಿಂದ ಪಿರ್ಯಾದಿದಾರರ ಎಡಭುಜದ ಬಳಿ ಗೀರಿರುತ್ತಾನೆ. ಮುಸ್ತಾಫ್ ನು ಕೈಯಿಂದ ಹೊಡೆದು ಕಾಲಿನಿಂದ ತುಳಿದು ಗಾಯಗೊಳಿಸಿರುವುದಾಗಿದೆ.
6.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 21-01-2014 ರಂದು ಪಿರ್ಯಾದಿದಾರರಾದ ಶ್ರೀ ಮೆಲ್ವಿನ್ ರಂಜಿತ್ ರವರು ಸ್ವಂತ ಕೆಲಸದ ನಿಮಿತ್ತ ಉಚ್ಚಿಲ್ ಕಡೆಗೆ ಹೋಗುವರೇ ಮನೆಯಿಂದ ತನ್ನ ಬಾಬ್ತು ಬೈಕ್ ನಂಬ್ರ KA-19-EH-6381 ನೇದರಲ್ಲಿ ಹೊರಟು ಗಟ್ಟಿ ಸಮಾಜ ಭವನದ ಅಂಬಿಕಾ ರೋಡ್ ಬಳಿ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಸಂಜೆ ಸಮಯ ಸುಮಾರು 5:30 ಗಂಟೆಗೆ ತಲಪಾಡಿ ಕಡೆಯಿಂದ ತೊಕ್ಕಟ್ಟು ಕಡೆಗೆ ಕಾರು ನಂಬ್ರ KA-19-MA-1521 ನೇದರ ಚಾಲಕನು ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರ ಬಲಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಬೈಕ್ ಸಮೇತ ರಸ್ತೆಗೆ ಬಿದ್ದು, ಇದರ ಪರಿಣಾಮ ಬಲಕಾಲಿಗೆ ಗಂಭೀರ ಸ್ವರೂಪದ ಮೂಳೆ ಮುರಿತವಾಗಿದ್ದು, ಬಲಕೈಗೆ ಗುದ್ದಿದ ನೋವುಂಟಾಗಿರುವುದಾಗಿದೆ.
7. ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಲಕ್ಷ್ಮಣ ಎಂಬವರು ಕಳೆದ ಎರಡು ವರ್ಷಗಳಿಂದ ಮಂಗಳೂರು ಕೆ.ಎಸ್. ರಾವ್ ರಸ್ತೆಯ ಸಿಟಿ ಸೆಂಟರ್ ಮಾಲ್ ನಲ್ಲಿರುವ 'ಅಂಚನ್' ನಲ್ಲಿ "ಹೆಚ್.ಯು.ಎಲ್. ಕಂಪೆನಿ"ಯ ಪ್ರಮೋಟರ್ ಆಗಿ ಕೆಲಸ ಮಾಡಿಕೊಂಡಿದ್ದು, ಕಳೆದ ಒಂದು ವರ್ಷದಿಂದ ಸ್ಟೋರ್ ನ ಡಾನ್ ಮ್ಯಾನೇಜರ್ ಆದ ನಾಗರಾಜ್ ಮತ್ತು ಸುಪರ್ವೈಸರ್ ಅರುಣ್ ಎಂಬವರು ಪಿರ್ಯಾದಿದಾರರಿಗೆ ನಿರಂತರ ಕಿರುಕುಳ ನೀಡುತ್ತಿದ್ದು, ದಿನಾಂಕ 22-01-2014 ರಂದು ಸಮಯ ಸುಮಾರು 16:00 ಗಂಟೆಗೆ ನಾಗರಾಜ್ ಮತ್ತು ಅರುಣ್ ರವರು ಪಿರ್ಯಾದಿದಾರರಿಗೆ ಬಾಯಿಗೆ ಬಂದಂತೆ ಮಾತನಾಡಿ, ಸ್ಟೋರ್ ನೀಮದ ಹೊರಗೆ ಹೋಗದಂತೆ ತಡೆದು ನಿಲ್ಲಿಸಿ, ಮೈ ಮೇಲೆ ಕೈ ಹಾಕಿ, ಶರ್ಟ್ ಕಾಲರ್ ಹರಿದು ಹಾಕಿ, ಕೈಯಿಂದ ಹೊಡೆದು ನೋವುಂಟು ಮಾಡಿದ್ದು, ನಂತರ ಸಾಮಾನುಗಳನ್ನು ಜೋಡಿಸುತ್ತಿರುವಾಗ ಪುನಃ ನಾಗರಾಜ್ ಎಂಬವರು ಕೈಯಿಂದ ಹೊಡೆದು ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದಿರುವುದಾಗಿದೆ.
8. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 21-01-2014 ರಂದು ಮಂಗಳೂರು ತಾಲೂಕು ಕಾಟಿಪಳ್ಳ ಗ್ರಾಮದ ಪಡುಪದವು ಎಂಬಲ್ಲಿರುವ ಪಿರ್ಯಾದಿದಾರರಾದ ಶ್ರೀ ರೋಶನ್ ಡಿ'ಸೋಜಾ ರವರ ಜಾಗಕ್ಕೆ ಆರೋಪಿ ಪ್ರಭಾಕರ ಸಾಲ್ಯಾನ್ ಎಂಬವರು ಅಕ್ರಮ ಪ್ರವೇಶ ಮಾಡಿ ಕೆಲಸ ಮಾಡುತ್ತಿದ್ದ ಕೆಲಸದವರ ಮೇಲೆ ಹಲ್ಲೆ ಮಾಡಲು ಹೋಗಿ ಸ್ಥಳದಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಹುಡಿಮಾಡುತ್ತೇನೆ ಎಂಬುದಾಗಿ ಬೆದರಿಕೆ ಹಾಕಿ ಅಲ್ಲದೇ ಈ ಮೊದಲು ಪಿರ್ಯಾದಿದಾರರ ಜಾಗದಲ್ಲಿದ್ದ ಗಿಡ ಮರಗಳನ್ನು ಕಿತ್ತು ಹಾಕಿ, ಪಿರ್ಯಾದಿದಾರರ ತಾಯಿಗೆ ಸೇರಿದ ಜಾಗದ ಸರ್ವೇ ನಂಬ್ರ 53/1ಬಿ ಜಾಗದ ಆವರಣ ಗೋಡೆಯನ್ನು ಕೆಡವಿ ಹಾಗೂ ಜಾಗದ ಸುತ್ತ ನಿರ್ಮಿಸಿದ್ದ ತಂತಿ ಬೇಲಿಯನ್ನು ಕೆಡವಿ ನಷ್ಟವುಂಟು ಮಾಡಿರುತ್ತಾರೆ.
9. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಮೋಹನ್ ಕುಮಾರ್, ಮಾನ್ಯ ತಹಶಿಲ್ದಾರರು ಮಂಗಳೂರು ತಾಲೂಕು ಹಾಗೂ ತಾಲೂಕು ದಂಡಾಧಿಕಾರಿಗಳು ದಿನಾಂಕ 22-01-2014 ರಂದು ಪೆರ್ಮುದೆ ಗ್ರಾಮಪಂಚಾಯತ್ನಿಂದ ತಾಲೂಕು ಕೇಂದ್ರ ಸ್ಥಾನಕ್ಕೆ ಹಿಂದಿರುಗುತ್ತಿದ್ದಾಗ ಗುರುಪುರ ಹೋಬಳಿ, ತಿರುವೈಲ್ ಗ್ರಾಮದ ಕೆತ್ತಿಕಲ್ ಎಂಬಲ್ಲಿ 09 ಲಾರಿಗಳಲ್ಲಿ ಸರಕಾರಿ ಖನಿಜ /ಜಲ್ಲಿಕಲ್ಲುಗಳನ್ನು ಸರಕಾರಿ ಸರ್ವೆ ನಂಬ್ರ ದ ಜಮೀನುಗಳಿಂದ ಕದ್ದು ಯಾವುದೇ ಪರ್ಮಿಟ್ ಇಲ್ಲದೆ ಲಾರಿಗಳಲ್ಲಿ ತುಂಬಿಕೊಂಡು ಹೋಗುವುದನ್ನು ಗಮನಿಸಿ ಅವುಗಳನ್ನು ತಡೆದು ಪರಿಶೀಲನೆ ಮಾಡಿ ವಶಕ್ಕೆ ಪಡೆದು ಮಹಜರು ಮುಖೇನ ಠಾಣೆಗೆ ತಂದು ಒಪ್ಪಿಸಿರುವುದನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿರುವುದಾಗಿದೆ.
10. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22-01-2014 ರಂದು ಸಂಜೆ ವೇಳೆ ಪಿರ್ಯಾದಿದಾರರಾದ ಶ್ರೀ ಎಸ್.ಎನ್. ರಾಜಾ ರವರ ಬಾಬ್ತು ಲಾರಿ ನಂಬ್ರ ಕೆಎ 02 ಎಎ 8548 ನೇ ಲಾರಿಯು ಮಂಗಳೂರಿನಿಂದ ಕಲ್ಲಿದ್ದಲನ್ನು ಹೇರಿಕೊಂಡು ಬಳ್ಳಾರಿ ಕಡೆಗೆ ಹೊರಟಿದ್ದು ಅರ್ಕುಳ ಎಂಬಲ್ಲಿ ರಾ.ಹೆ 73 ರಲ್ಲಿ ರಸ್ತೆಯಲ್ಲಿ ಕೆಟ್ಟು ನಿಂತಿದ್ದು, ದಿನಾಂಕ 23-01-2014 ರಂದು ಬೆಳಿಗ್ಗಿನ ಜಾವ 5-30 ಗಂಟೆಗೆ ಬುಲೆಟ್ ಟ್ಯಾಂಕರ್ ನಂಬ್ರ ಕೆಎ 01 ಎಸಿ 4569 ನೇದನ್ನು ಅದರ ಚಾಲಕ ಮರಿಯಪ್ಪನ್ ಎಂಬವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕೆಟ್ಟು ನಿಂತಿದ್ದ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಟ್ಯಾಂಕರ್ ಲಾರಿಯ ಮುಂಭಾಗ ಸಂಪೂರ್ಣ ಜಖಂ ಗೊಂಡಿದ್ದು, ಪಿರ್ಯಾದಿದಾರರ ಲಾರಿಯ ಹಿಂಭಾಗ ಜಖಂಗೊಂಡಿದ್ದು ಗಾಯಗೊಂಡ ಟ್ಯಾಂಕರ್ ಚಾಲಕನನ್ನು ಚಿಕಿತ್ಸೆಯ ಬಗ್ಗೆ ಮಂಗಳೂರಿಗೆ ಕಳುಹಿಸಿಕೊಟ್ಟಿರುವುದಾಗಿದೆ.
11. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಶಶಿಂದ್ರನ್ ಟಿ.ಯು. ರವರ ತಾಯಿ ಶ್ರೀಮತಿ ಕಾತ್ಯಾಯಿನಿ (65) ಯವರು ದಿನಾಂಕ 22-01-2014 ರಂದು 12-30 ಗಂಟೆಗೆ ಪಿರ್ಯಾದಿದಾರರ ಮನೆಯಿಂದ ಯಾರೂ ಇಲ್ಲದ ಸಮಯದಲ್ಲಿ ಮನೆಯ ಹತ್ತಿರದಿಂದ ಒಂದು ರಿಕ್ಷಾದಲ್ಲಿ ಯಾರಲ್ಲಿಯೂ ಹೇಳದೆ ಒಂದು ಕಪ್ಪು ಬಣ್ಣದ ವ್ಯಾನಿಟಿ ಬ್ಯಾಗ್ ಹಾಕಿಕೊಂಡು ಹೋಗಿರುತ್ತಾರೆ. ಇವರಿಗೆ ಮಳಯಾಳಂ ಭಾಷೆ ಮಾತ್ರ ಗೊತ್ತಿರುವುದಾಗಿದೆ. ಇವರು ಬಿಳಿ ಬಣ್ಣದವರಾಗಿದ್ದು ಸುಮಾರು 5 ಅಡಿ 2 ಇಂಚು ಉದ್ದವಿದ್ದು ಸಪೂರ ಶರೀರ ಹೊಂದಿರುತ್ತಾರೆ.
No comments:
Post a Comment