Monday, January 20, 2014

Counterfeit Currency Notes - 2 Arrested

 

ನಿನ್ನೆ ದಿನಾಂಕ 19-01-2014 ರಂದು ಸಂಜೆ ಸುಮಾರು 9-00 ಗಂಟೆಗೆ ಬಂಗಾಳಿ ಬಾಷೆ ಮಾತನಾಡುವ ಓರ್ವ ವ್ಯಕ್ತಿ ಸುರತ್ಕಲ್‌ನ ಮೂಡಾ ಕಾಂಪ್ಲೆಕ್ಸ್‌ನಲ್ಲಿನ  "ಮೆಲ್ಟಿಂಗ್‌ ಪಾಯಿಂಟ್‌" ಎಂಬ ಹೆಸರಿನ ಕೋಲ್ಡ್ರಿಂಗ್ಸ್‌ ಅಂಗಡಿಗೆ ಬಂದು ಎರಡು ಲೀಟರ್‌ನ ಮಾಝಾ ಸಾಫ್ಟ್‌ ಡ್ರಿಂಗ್ಸ್‌ನ್ನು ಖರೀದಿ ಮಾಡುವಾಗ ಸಾವಿರ ರೂಪಾಯಿಯ ಒಂದು ನೋಟನ್ನು ಮಾಲಿಕರಾದ ಮುಸ್ತಾಫರವರಿಗೆ ನೀಡಿದ್ದು ಅವರು ನೋಟು ನಕಲಿ ಇರಬಹುದೆಂದು  ಅನುಮಾನಗೊಂಡು ಆತನನ್ನು ಅಂಗಡಿಯಲ್ಲಿ ನಿಲ್ಲಿಸಿಕೊಂಡು ಸುರತ್ಕಲ್‌ ಪಿಐರವರವಿಗೆ ಕರೆ ಮಾಡಿದ್ದು ಕೂಡಲೇ ಪಿ,ಐ,ರವರು ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಬಂದು ಆತನನ್ನು ವಿಚಾರಿಸಲಾಗಿ ಸದ್ರಿಯವನು ಸುಶಾಂತ್‌  ಮಂಡಲ್‌ ಪ್ರಾಯ 20 ವರ್ಷ ತಂದೆ ಬಿನಯ್‌ ಮಂಡಲ್‌, ವಾಸ ಪರ್‌ದೇವ್ಣಾಪುರ್‌ ಗ್ರಾಮ, ದೇವ್ಣಪುರ್‌ ಅಂಚೆ, ಬೈಷ್ಣಬ್‌ನಗರ್‌ ಪೊಲೀಸ್‌ ಠಾಣಾ ವ್ಯಾಪ್ತಿ, ಮಾಲ್ಡಾ  (ಸದರ್‌) ಜಿಲ್ಲೆ, ಪಶ್ಚಿಮ ಬಂಗಾಳ ರಾಜ್ಯ ಎಂದು ತಿಳಿಸಿದ್ದು, ತಾನು ಹಾಗು ನಮ್ಮ ಊರಿನ ಶರತ್‌ ಮಂಡಲ್‌ ಎಂಬ ಮತ್ತೊಬ್ಬನೊಂದಿಗೆ ಮೊನ್ನೆ ದಿನ ದಿನಾಂಕ 17-01-2014 ರಂದು ಸುರತ್ಕಲ್‌ಗೆ ಬಂದು ಒಂದು ಬಾಡಿಗೆ ಮನೆಯಲ್ಲಿ ವಾಸವಿರುವುದಾಗಿ ಹಾಗು ಆ ರೂಮ್‌ನಲ್ಲಿ ನಕಲಿ ನೋಟುಗಲು ಇರುವುದಾಗಿ ತನ್ನೊಂದಿಗೆ ಬಂದರೆ ಮನೆಯನ್ನು ತೋರಿಸುವುದಾಗಿ ತಿಳಿಸಿದ್ದರಿಂದ ಕೂಡಲೇ ಆತನೊಂದಿಗೆ ಪಿಐಯವರು ಕಾಟಿಪಳ್ಳ  1ನೇ ಬ್ಲಾಕ್‌ನಲ್ಲಿರುವ ಸದ್ರಿಯವರು ವಾಸವಿದ್ದ ಬಾಡಿಗೆ ರೂಮ್‌ ಹೋಗಿ ಪರಿಶೀಲಿಸಲಾಗಿ ರೂಮ್‌ನಲ್ಲಿ ಒಬ್ಬ ಯುವಕನಿದ್ದು ಆತನನ್ನು ವಿಚಾರಿಸಲಾಗಿ ಶರತ್‌ ಮಂಡಲ್‌ ಪ್ರಾಯ 19 ವರ್ಷ ತಂದೆ ನರೇಶ್‌ ಮಂಡಲ್‌, ವಾಸ ಪರ್‌ದೇವಾನಪುರ್‌ ಗ್ರಾಮ, ದೇವ್ಣಪುರ್‌ ಅಂಚೆ, ಬೈಷ್ಣಬ್‌ನಗರ್‌ ಪೊಲೀಸ್‌ ಠಾಣಾ ವ್ಯಾಪ್ತಿ, ಮಾಲ್ಡ (ಸದರ್‌) ಜಿಲ್ಲೆ, ಪಶ್ಚಿಮ ಬಂಗಾಳ ರಾಜ್ಯ ತಿಲಿಸಿದ್ದು ಅವರನ್ನು ವಿಚಾರಣೆಗೊಳಪಡಿಸಿದ ಮೇರೆಗೆ ತಮ್ಮ ಬಳಿ ಇದ್ದ ಹಣವನ್ನು ಹಾಜರುಪಡಿಸಿದ್ದು ಈ ಪೈಕಿ ಸಾವಿರ ರೂಪಾಯಿಯ 81 ನಕಲಿ ನೋಟುಗಳು ಹಾಗು ಐದು ನೂರು  ರೂಪಾಯಿಯ 23 ನಕಲಿ ನೋಟುಗಳು (ಒಟ್ಟು 92,500 ರೂಪಾಯಿ) ಅಲ್ಲದೆ 500, 100, 50, 20 ಮತ್ತು 10 ರೂಪಾಯಿಯ ಅಸಲಿ ನೋಟುಗಳು ಒಟ್ಟು 40,420 ರೂಪಾಯಿ ಇವುಗಳನ್ನು ಹಾಜರುಪಡಿಸಿದ್ದನ್ನು ವಶಕ್ಕೆ ಪಡೆದುಕೊಂಡು ಠಾಣಾ ಅ.ಕ್ರ 21/2014 ಕಲಂ 489 (ಬಿ) ಮತ್ತು (ಸಿ) ಐಪಿಸಿಯ ಅಡಿಯಲ್ಲಿ ಕೇಸು ದಾಖಲಿಸಿಕೊಂಡು ಆರೋಪಿಗಳಿಬ್ಬರನ್ನು ವಿಚಾರಣೆಗೊಳಪಡಿಸಿದಾಗ ಇವರಿಬ್ಬರು ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಸಲೀಂ ಎಂಬ ವ್ಯಕ್ತಿಯಿಂದ ಸಾವಿರ ರೂಪಾಯಿಯ ಒಂದು ಲಕ್ಷ ರೂಪಾಯಿ ಮತ್ತು ಐನೂರು ರೂಪಾಯಿಯ ಐವತ್ತು ಸಾವಿರ ರೂಪಾಯಿ ಮೌಲ್ಯದ  ನಕಲಿ ನೋಟುಗಳನ್ನು ಪಡೆದುಕೊಂಡು ಬಂದು ಸುರತ್ಕಲ್‌ ಸಂತೆಯಲ್ಲಿ 50, 100, 150 ರೂಪಾಯಿಯ ವಸ್ತುಗಳನ್ನು ಖರೀದಿ ಮಾಡಿ ನಕಲಿ ನೋಟುಗಳನ್ನು ಚಲಾವಣೆ ಮಾಡುತ್ತಿದ್ದು, ಸದ್ರಿ ಆರೋಪಿಗಳು ಖರೀದಿ ಮಾಡಿದ ಚಿಲ್ಲರೆ ಸಾಮಾನುಗಳನ್ನು ಕೂಡಾ ವಶ ಪಡಿಸಿಕೊಳ್ಳಲಾಗಿದೆ. ಸದ್ರಿಯವರು ಬಹತೇಕ ಎಲ್ಲಾ ಸಂತೆ ನಡೆಯುವ ಸ್ಥಳಗಳಿಗೆ ಹೋಗಿ ಮಾರಾಟ ಮಾಡುವ ಉದ್ದೇಶ ಹೊಂದಿದ್ದುದ್ದಾಗಿ ತಿಳಿಸಿರುತ್ತಾರೆ. ಇವರಿಬ್ಬರು ಕಮಿಷನ್‌ ಆದಾರದ ಮೇರೆಗೆ ನಕಲಿ ನೋಟುಗಳನ್ನು ಚಲಾವಣೆ ಮಾಡುತ್ತಿರುವುದಾಗಿ ತಿಳಿದು ಬಂದಿರುತ್ತದೆ.

ಪಣಂಬೂರು ಎಸಿಪಿ ಶ್ರೀ ಎಸ್‌ ರವಿಕುಮಾರ್‌ರವರ ಮಾರ್ಗದರ್ಶನದಲ್ಲಿ ಸುರತ್ಕಲ್‌‌ ಠಾಣಾದಿಕಾರಿ ಎಂ.ಎ. ನಟರಾಜ್‌ ಸಿಬ್ಬಂದಿಗಳಾದ, ವಿಜಯರಾಜ, ಬಿ.ಕೆ ಕೃಷ್ಣ, ಸಂತೋಷ್‌, ಗಿರೀಶ್‌ ಸುವರ್ಣ, ಗಿರೀಶ್‌ ಜೋಗಿ, ಪುನಿತ್‌, ರಾಜ, ರಫೀಯುಲ್ಲಾ ರವರು ಬಾಗವಹಿಸಿರುತ್ತಾರೆ.

ಪೊಲೀಸ್‌ ಆಯುಕ್ತರಾದ ಶ್ರೀ ಆರ್ ಹಿತೇಂದ್ರ ಐಪಿಎಸ್‌ ಹಾಗು ಉಪ ಪೊಲೀಸ್‌ ಆಯುಕ್ತರಾದ ಡಾ: ಕೆ. ವಿ. ಜಗದೀಶ್‌ ರವರುಗಳು ಮೇಲ್ಕಂಡ ಕೃತ್ಯವನ್ನು ಪತ್ತೆ ಹಚ್ಚಿದ ಸಿಬ್ಬಂದಿಯವರನ್ನು ಮತ್ತು ಕೃತ್ಯವನ್ನು ಬಯಲಿಗೆಳಯಲು ಪೊಲೀಸರಿಗೆ ಸಹಕರಿಸಿದ ಸಾರ್ವಜನಿಕರನ್ನು ಅಬಿನಂದಿಸಿರುತ್ತಾರೆ.

 

ಸಾವಿರ ಮುಖ ಬೆಲೆಯ ಮೇಲಿರುವ ಸೀರಿಯ್‌ಗಳು

ಐನೂರು ಮುಖ ಬೆಲೆಯ ನೋಟುಗಳು

5 G R

8 G Q

6 A R

1 C G

5 K F

5 T C

4 G C

3 U P

2 C H

I A P

1 T N

9 H R

I E Q

4 K M

1 N E

7 D D

3 D V

4 M W

9 F C

3 T E

2 F R

 

No comments:

Post a Comment