Thursday, January 30, 2014

One Associate of Vicky Shetty Nabbed By Mangalore City Police

ಭೂಗತ ಪಾತಕಿ ವಿಕ್ಕಿ ಶೆಟ್ಟಿಯ ಸಹಚರ ರಾದಾ ಯಾನೆ ರಾದಾಕೃಷ್ಣ ಶೆಟ್ಟಿಯನ್ನು ಮಂಗಳೂರು ಸಿಸಿಬಿ ಪೊಲೀಸರಿಂದ ಬಂಧನ.
ನಿನ್ನೆ ದಿನ ತಾರೀಕು 29-01-2014 ರಂದು ಸಿಸಿಬಿ ಪೊಲೀಸರಿಗೆ ಬಂದ ಖಚಿತ ಮಾಹಿತಿಯಂತೆ ಮಂಗಳೂರು ನಗರದ ಕುಡ್ಪಾಡಿ ರೈಲ್ವೆ ಕ್ರಾಸ್ ಬಳಿಯಲ್ಲಿ ಭೂಗತ ಪಾತಕಿ ವಿಕ್ಕಿಯ ಶೆಟ್ಟಿಯ ಸಹಚರರಾದ ಆಕಾಶಭವನ ಶರಣ್ ಮತ್ತು ಕಾಸರಗೋಡಿನ ರಾದಾ ಯಾನೆ ರಾದಾಕೃಷ್ಣ ಶೆಟ್ಟಿ ಇವರು ಯಾವುದೋ ತಕ್ಷೀರು ಮಾಡುವ ಉದ್ದೇಶವನ್ನು ಮಾಡುವ ಇರಾದೆಯಿಂದ ಇದ್ದಾರೆ ಎಂಬುದಾಗಿ ಮಾಹಿತಿ ಇದ್ದು, ಅದರಂತೆ ಸಿಸಿಬಿ ಪೊಲೀಸರು ಅಲ್ಲಿ ಹೋದಾಗ ಶರಣ್ ಎಂಬಾತನು ಅಲ್ಲಿಂದ ಓಡಿ ಹೋಗಿ ತಪ್ಪಿಸಿಕೊಂಡಿದ್ದು, ರಾದಾಕೃಷ್ಣ ಎಂಬಾತನನ್ನು ಪೊಲೀಸರು ದಸ್ತಗಿರಿ ಮಾಡಿರುತ್ತಾರೆ. ರಾದಾಕೃಷ್ಣ ಶೆಟ್ಟಿಯನ್ನು ಕೂಲಂಕುಷವಾಗಿ ವಿಚಾರಣೆ ನಡೆಸಿದಾಗ, ಇವರಿಬ್ಬರು ಬಿಜೈ ರಾಜಾ ಕೊಲೆ ಪ್ರಕರಣದ ಆರೋಪಿಗಳಾದ ಮಹೇಶ್ ಕೋಡಿಕಲ್ ಮತ್ತು ಚಂದು ಯಾನೆ ಚಂದ್ರಹಾಸ ಶೆಟ್ಟಿಯನ್ನು ಕೊಲೆ ಮಾಡುವ ಉದ್ದೇಶದಿಂದ ತಾವು ಒಟ್ಟು ಸೇರಿ ಮಾತುಕತೆ ನಡೆಸುತ್ತಿದ್ದುದು ಅಲ್ಲದೇ ಈ ಕೃತ್ಯಕ್ಕೆ ತನ್ನ ಬಳಿ ಪಿಸ್ತೂಲಿನ 4 ಮದ್ದುಗುಂಡುಗಳು ಮತ್ತು ಮ್ಯಾಗಜೀನ್ ಇದ್ದುದಾಗಿಯೂ ತಿಳಿಸಿದ್ದು, ಇವುಗಳನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಂಡಿರುತ್ತಾರೆ. ನಂತರ ಆತನು ತನ್ನ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ತಿಳಿಸಿದಂತೆ ಆತನ ಮನೆಯಲ್ಲಿ ಇದ್ದಂತಹ ಪಿಸ್ತೂಲು ಹಾಗೂ ಮದ್ದುಗುಂಡುಗಳನ್ನು ಕೂಡ ಸ್ವಾಧೀನಪಡಿಸಲಾಗಿದೆ.
ಬಂಧಿತನಾಗಿರುವ ರಾದಾಕೃಷ್ಣ ಶೆಟ್ಟಿಯು ಕಳೆದ ವರ್ಷದಲ್ಲಿ ವಲೇನ್ಸಿಯಾದಲ್ಲಿ ನಡೆದ ಪಚ್ಚು ಯಾನೆ ಪ್ರಶಾಂತ್ ಶೆಟ್ಟಿಯ ಕೊಲೆ ಪ್ರಕರಣದ ಆರೋಪಿಯಾಗಿ ತಲೆಮರೆಸಿಕೊಂಡಿದ್ದನು. ಓಡಿ ಹೋದ ಆರೋಪಿ ಆಕಾಶಭವನ ಶರಣ್ ಎಂಬಾತನ ಮೇಲೆ ಹಲವಾರು ಕೊಲೆ ಪ್ರಕರಣಗಳು ಇದ್ದು, ಆಕಾಶಭವನ ಶರಣ್ನಿಗೆ ರಾದಾಕೃಷ್ಣ ಶೆಟ್ಟಿಯು ತನ್ನ ಮನೆಯಲ್ಲಿ ಆಶ್ರಯವನ್ನು ಕೂಡ ನೀಡಿರುತ್ತಾನೆ. ಪ್ರಕರಣವು ತನಿಖಾ ಹಂತದಲ್ಲಿರುತ್ತದೆ.
ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ.ಆರ್.ಹಿತೇಂದ್ರ, ಐ.ಪಿ.ಎಸ್ ರವರ ನಿದರ್ೇಶನದಂತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಮಾನ್ಯ ಪೊಲೀಸ್ ಉಪ-ಆಯುಕ್ತರಾದ ಶ್ರೀ.ಡಾ.ಕೆ.ವಿ.ಜಗದೀಶ್ರವರ ಮಾಗದರ್ಶನದಂತೆ ಮಂಗಳೂರು ದಕ್ಷಿಣ ಉಪ-ವಿಭಾಗದ ಎ.ಸಿ.ಪಿ ರವರಾದ ಶ್ರೀ.ಪವನ್. ನಜ್ಜೂರುರವರು ಹಾಗೂ ಮಂಗಳೂರು ಸಿಸಿಬಿ ಘಟಕದ ಇನ್ಸ್ಪೆಕ್ಟರ್ ರವರಾದ ಶ್ರೀ.ವೆಲೆಂಟೈನ್ ಡಿಸೋಜ ಮತ್ತು ಪಿಎಸ್ಐ ಶ್ಯಾಮ್ಸುಂದರ್ ಹಾಗೂ ಸಿಬ್ಬಂದಿಯವರಾದ ಶಶಿಧರ ಶೆಟ್ಟಿ, ಗಣೇಶ್.ಎಂ.ಪಿ, ಗಣೇಶ್ ಕಲ್ಲಡ್ಕ, ವೇಣುಗೋಪಾಲ, ಚಂದ್ರಶೇಖರ, ದಿನೇಶ್ ಬೇಕಲ್ ಹಾಗೂ ಚಾಲಕ ತೇಜಕುಮಾರ್ ರವರು ಕಾಯರ್ಾಚರಣೆಯಲ್ಲಿ ಭಾಗವಹಿಸಿರುತ್ತಾರೆ.

No comments:

Post a Comment