ದೈನಂದಿನ ಅಪರಾದ ವರದಿ.
ದಿನಾಂಕ 21.01.2014 ರ 16:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ
|
:
|
0
|
ಕೊಲೆ ಯತ್ನ
|
:
|
0
|
ದರೋಡೆ ಪ್ರಕರಣ
|
:
|
0
|
ಸುಲಿಗೆ ಪ್ರಕರಣ
|
:
|
0
|
ಹಲ್ಲೆ ಪ್ರಕರಣ
|
:
|
5
|
ಮನೆ ಕಳವು ಪ್ರಕರಣ
|
:
|
1
|
ಸಾಮಾನ್ಯ ಕಳವು
|
:
|
0
|
ವಾಹನ ಕಳವು
|
:
|
1
|
ಮಹಿಳೆಯ ಮೇಲಿನ ಪ್ರಕರಣ
|
:
|
0
|
ರಸ್ತೆ ಅಪಘಾತ ಪ್ರಕರಣ
|
:
|
8
|
ವಂಚನೆ ಪ್ರಕರಣ :
|
:
|
1
|
ಮನುಷ್ಯ ಕಾಣೆ ಪ್ರಕರಣ
|
:
|
0
|
ಇತರ ಪ್ರಕರಣ
|
:
|
0
|
2. ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19-01-2014 ರಂದು ಫಿರ್ಯಾದಿದಾರರಾದ ಶೈಲೇಶ್ ರವರು ತನ್ನ ಬಾಬ್ತು ಮೋಟಾರ್ ಸೈಕಲ್ ನಂ ಕೆಎ-46-ಎಚ್-3340ನೇದರಲ್ಲಿ ಬೊಂದೆಲ್ ನಿಂದ ಮನೆಯ ಕಡೆಗೆ ಅಂದರೆ ಜಾರದ ಬೆಟ್ಟು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಮೂಡುಶೆಡ್ಡೆ ಕಡೆಯಿಂದ ಬರುತ್ತಿದ್ದ ಕೆಎ-19-ಎಲ್-8154ನೇದರ ಮೋಟಾರ್ ಸೈಕಲ್ ಸವಾರನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಜಾರದಬೆಟ್ಟು ಕ್ರಾಸ್ ಬಳಿ ಮದ್ಯಾಹ್ನ ಸುಮಾರು 12-15 ಗಂಟೆ ಸಮಯಕ್ಕೆ ಪಿರ್ಯಾದುದಾರರ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿಯು ಡಾಮಾರು ರಸ್ತೆಗೆ ಬಿದ್ದಾಗ ಮೊಣಕೈಗೆ, ಕಾಲಿನ ಮೇಲ್ಪಾದ ಹಾಗೂ ಕೆಳಪಾದಕ್ಕೆ ರಕ್ತಗಾಯವಾಗಿರುತ್ತದೆ. ಚಿಕಿತ್ಸೆ ಬಗ್ಗೆ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.
3. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 20-01-2014 ರಂದು ಪಿರ್ಯಾದಿದಾರರಾದ ಹಸನಬ್ಬಾ ರವರು ತನ್ನ ಮನೆಯಿಂದ ಉಳ್ಳಾಲ ಕೋಡಿಯಲ್ಲಿರುವ ಮಯ್ಯದ್ದೀನ್ ಮಸೀದಿಗೆ ಹೋಗಿದ್ದು, ನಮಾಜ್ ಮುಗಿಸಿ ವಾಪಾಸು ಹೊರಗಡೆ ಬಂದು ತನ್ನ ಮಗ ತೌಸೀಕ್ ಹಾಗೂ ಅಳಿಯನಾದ ನೌಶಾದ್ ರವರೊಂದಿಗೆ ಮಾತನಾಡುತ್ತಿರುವ ಸಮಯ ಸುಮಾರು 12:45 ಗಂಟೆಗೆ ಮಸೀದಿಯ ವಯರಿಂಗ್ ಕೆಲಸವನ್ನು ಈ ಹಿಂದೆ ಮಾಡಿದ್ದು, ಮಸೀದಿಯವರು ವೈಟ್ ಬಲ್ಬನ್ನು ಹಾಕಲು ತಿಳಿಸಿದಂತೆ ಪಿರ್ಯಾದಿದಾರರು ಹಾಕಿರುತ್ತಾರೆ. ಈ ಕಾರಣವನ್ನು ಇಟ್ಟುಕೊಂಡು ನೆರೆಮನೆಯವರಾದ ಪಿರ್ಯಾದಿದಾರರಿಗೆ ಪರಿಚಯವರಾದ ಔದಿ ಎಂಬಾತನು ಪಿರ್ಯಾದಿದಾರರಿಗೆ ಅವ್ಯಾಚ್ಯ ಶಬ್ದಗಳಿಂದ ಬೈದು, ಪಿರ್ಯಾದಿದಾರರ ಮುಖಕ್ಕೆ ಹೊಡೆದು, ಅಲ್ಲಿ ಇದ್ದ ಮರದ ರೀಪುನಿಂದ ತಲೆಯ ಹಿಂಭಾಗಕ್ಕೆ, ಬಲ ಬದಿಯ ಕಿವಿಗೆ, ಸೊಂಟಕ್ಕೆ ಮತ್ತು ಕಾಲಿಗೆ ಹೊಡೆದಿರುತ್ತಾನೆ. ತಲೆಯ ಹಿಂಭಾಗಕ್ಕೆ ಹೊಡೆದ ಪರಿಣಾಮ ತಲೆ ಊದಿ ಕೊಂಡಿರುತ್ತದೆ ಮತ್ತು ಕಿವಿಯ ಬಳಿ ದಪ್ಪವಾಗಿರುತ್ತದೆ. ನಂತರ ಪಿರ್ಯಾದಿದಾರರು, ಅವರ ಮಗ ಮತ್ತು ಅಳಿಯ ರವರು ಒಂದು ರಿಕ್ಷಾದಲ್ಲಿ ಚಿಕಿತ್ಸೆಯ ಬಗ್ಗೆ ತೊಕ್ಕಟ್ಟು ನೇತಾಜಿ ಆಸ್ಪತ್ರೆಗೆ ಹೋಗಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.
4. ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 20.01.2014 ರಂದು ಮುಂಜಾನೆ 02.30 ಗಂಟೆಗೆ ಮೋ.ಸೈಕಲ್ ನಂಬ್ರ KA19EK2552 ರಲ್ಲಿ ಪ್ರದೀಪ ಎಂಬವರು ಸವಾರರಾಗಿ ಹಿಂಬದಿ ಸವಾರರಾಗಿ ಹರ್ಷವರ್ಧನ ಎಂಬವರು ಇದ್ದುಕೊಂಡು ಪ್ರದೀಪ ಮೋ.ಸೈಕಲನ್ನು ಕುಂಟಿಕಾನದ ಕಡೆಯಿಂದ ಕೆ.ಪಿ.ಟಿ ಕಡೆಗೆ ಅತಿ ವೇಗ ಮತ್ತು ಅಜಾಗರುಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಎನ್.ಎಚ್. 66 ರಸ್ತೆಯಲ್ಲಿ ಚಲಾಯಿಸಿಕೊಂಡು ಬಂದು ಕೆ.ಪಿ.ಟಿ. ಜಂಕ್ಷನ್ ಬಳಿ ರಸ್ತೆ ವಿಭಾಜಕಕ್ಕೆ ಡಿಕ್ಕಿ ಮಾಡಿದ ಪರಿಣಾಮ ಸವಾರ ಮತ್ತು ಸಹ ಸವಾರ ಮೋ.ಸೈಕಲ್ ಸಮೇತ ರಸ್ತೆಗೆ ಬಿದ್ದು ಸಹ ಸವಾರನ ತಲೆಗೆ ಮತ್ತು ಹೊಟ್ಟೆಗೆ ಗುದ್ದಿದ ಗಾಯ ಸವಾರನ ತಲೆಗೆ ಗಂಭೀರ ಸ್ವರೂಪದ ಗಾಯ ಬೆನ್ನು ಮತ್ತು ಕೈಗಳಿಗೆ ಚರ್ಮ ಕಿತ್ತು ಹೋದ ಸಾದಾ ಸ್ವರೂಪದ ಗಾಯ ಉಂಟಾಗಿ ಗಾಯಳುಗಳು ಎ.ಜೆ.ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ.
5. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 20-01-2014ರಂದು ರಾತ್ರಿ ಉಳ್ಳಾಲ ದರ್ಗಾದ ಎದುರು ಭಾಗದಲ್ಲಿ ಮಿಲಾದ್ ಸಂಗಮ ಖುರ್ದಾ ಮಜಿಲಿನ್ ಕಾರ್ಯಕ್ರಮ ನೋಡಲೆಂದು ಪಿರ್ಯಾದಿದಾರರಾದ ಮಹಮ್ಮದ್ ಅರೀಫ್ ರವರು ಬಂದಿದ್ದ ಸಮಯ ರಾತ್ರಿ 11-00 ಗಂಟೆಗೆ ಇವರಿಗೆ ಪರಿಚಯವಿರುವ ಮೇಲಂಗಡಿ ಕಾಜಾ ಜಲಾಲ್ ಎಂಬುವವನು ಪಿರ್ಯಾದುದಾರರ ಹತ್ತಿರ ಬಂದವನು ಹಳೇ ದ್ವೇಷದಿಂದ ಅವನ ಕೈಯಲ್ಲಿದ್ದ ಕಬ್ಬಿಣದ ಮುಳ್ಳುಗಳಿರುವ ಪಂಚನಿಂದ ಪಿರ್ಯಾದಿಯ ಮುಖಕ್ಕೆ ಹಣೆಗೆ ತಲೆಯ ಹಿಂಬಾಗಕ್ಕೆ ಬಲವಾಗಿ ಗುದ್ದಿದ್ದರ ಪರಿಣಾಮ ಪಿರ್ಯಾದುದಾರರಿಗೆ ರಕ್ತಗಾಯವಾಗಿರುತ್ತದೆ ನಂತರ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿದೆ. ನಂತರ ಪಿರ್ಯಾದಿಯು ತೊಕ್ಕೊಟ್ಟುವಿನ ನೇತಾಜಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ.
6. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 20-01-2014 ರಂದು 20-00 ಗಂಟೆಗೆ ಪಿರ್ಯಾದುದಾರರಾದ ಬಿ. ಜಯಾ ಶೆಟ್ಟಿ ರವರು ತನ್ನ ಬಾಬ್ತು ಆಕ್ಟಿವಾ ದ್ವಿಚಕ್ರ ವಾಹನ ನಂಬ್ರ KA 19 EG 7042 ನೇಯದರಲ್ಲಿ ಪತ್ನಿ ಶ್ರೀಮತಿ. ನಿರ್ಮಲಾರವರನ್ನು ಸಹಸವಾರಳನ್ನಾಗಿ ಕುಳ್ಳಿರಿಸಿಕೊಂಡು ಸವಾರಿ ಮಾಡುತ್ತಾ ಮಂಗಳೂರು ತಾಲೂಕು, ತಲಪಾಡಿ, ಕೆ.ಸಿ. ರೋಡ್ ಜಂಕ್ಷನ್‌ನಲ್ಲಿ ರಾ.ಹೆ. 66 ಕ್ಕೆ ಪ್ರವೇಶಿಸುವರೇ ರಸ್ತೆ ಬದಿಯಲ್ಲಿ ದ್ವಿಚಕ್ರವನ್ನು ನಿಲ್ಲಿಸಿದ್ದಾಗ ಮಂಗಳೂರು ಕಡೆಯಿಂದ ವಿನಯ ನಾಯ್ಕ್ ಎಂಬವರು KA 19 MA 5087 ನೇ ನಂಬ್ರದ ಕಾರನ್ನು ಅತೀವೇಗ ಹಾಗು ತೀರಾ ನಿರ್ಲಕ್ಷ್ಯತನದಿಂದ ಚಾಲಾಯಿಸಿಕೊಂಡು ದ್ವಿಚಕ್ರಕ್ಕೆ ಡಿಕ್ಕಿ ಹೊಡೆದುದರಿಂದ ಪಿರ್ಯಾದುದಾರರು ಮತ್ತು ಅವರ ಪತ್ನಿ ರಸ್ತೆಗೆ ಎಸೆಯಲ್ಪಟ್ಟುರು. ಈ ಅಪಘಾತದಿಂದ ಪಿರ್ಯಾದುದಾರರಿಗೆ ಗುದ್ದಿದ ಮತ್ತು ತರಚಿದ ಗಾಯವಾಗಿರುತ್ತದೆ. ಅವರ ಪತ್ನಿ ಶ್ರೀಮತಿ ನಿರ್ಮಲಾರವರಿಗೆ ಬೆನ್ನಿಗೆ, ಸೊಂಟಕ್ಕೆ ಗಾಯವಾಗಿರುತ್ತದೆ. ಪಿರ್ಯಾದುದಾರರು ದೇರಳಕಟ್ಟೆ ಯೆನಪೋಯ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿದ್ದು, ಅವರ ಪತ್ನಿಯು ಒಳರೋಗಿಯಾಗಿ ದಾಖಲುಗೊಂಡು ಚಿಕಿತ್ಸೆಯಲ್ಲಿರುತ್ತಾರೆ.
7. ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 20-01-2014 ರಂದು 18.30 ಗಂಟೆ ಸಮಾಯಕ್ಕೆ ಮಂಗಳೂರು ತಾಲೂಕು ಪ್ರಾಂತ್ಯ ಗ್ರಾಮದ ಮೂಡಬಿದ್ರೆ ಪೋಲಿಸ್ ಠಾಣೆಯ ಗೇಟಿನ ಬಳಿ ಪಿರ್ಯಧಿದಾರರಾದ ಅನಿಲ್ ರವರು ತನ್ನ ಸಂಬಂಧಿಕರೊಂದಿಗೆ ಅರ್ಜಿ ವಿಚಾರಣೆ ಬಗ್ಗೆ ಠಾಣೆಗೆ ಬರುತ್ತಿದ್ದ ಸಮಯ ಎದುರಿನಿಂದ ಬಂದ ಆರೋಪಿ ಶೀನಾ ಎಂಬವರು ಪಿರ್ಯಧಿದಾರರನ್ನು ತಡೆದು ನಿಲ್ಲಿಸಿ ಅಂಗಿಯ ಕಾಲರ್ ಹಿಡಿದು ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಒಡ್ಡಿ, ಕೈಯಿಂದ ಮುಖಕ್ಕೆ ಹೊಡೆದು ಗಾಯ ಪಡಿಸಿರುವುದಾಗಿದೆ.
8. ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 19-01-2014 ರಂದು ರಾತ್ರಿ 7-00 ಗಂಟೆಗೆ ಜೋಕಟ್ಟೆ ಸರಕಾರಿ ಶಾಲೆಯ ಬಳಿ ಪಿರ್ಯಾದಿದಾರರಾದ ಬಿಪಿನ್ ಕುಮಾರ್ ಸಿಂಗ್ ರವರು ಮತ್ತು ಉಮ್ಮರ್ ಪಾರೂಕ್ ಜೋಕಟ್ಟೆ ಬಳಿ ನಿಂತಿದ್ದಾಗ ಜೋಕಟ್ಟೆ ಜಂಕ್ಷನ್ ಕಡೆಯಿಂದ ಕೆಬಿಎಸ್ ಕಡೆಗೆ ಒಂದು ಕೆಎ-30-6120ನೇ 407 ನೇದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿ ನಿಂತಿದ್ದ ನಮಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಎಡ ಕಾಲಿಗೆ ತೀವ್ರ ತರದ ರಕ್ತ ಗಾಯವಾಗಿರುತ್ತದೆ. ಹಾಗೂ ಉಮ್ಮರ್ ಫಾರೂಕ್ ರವರಿಗೆ ಎಡ ಕಾಲಿಗೆ, ಮತ್ತು ಬಲಕಾಲಿನ ಮೊಣಗಂಟಿನ ಕೆಳಗೆ ತರಚಿದ ರಕ್ತಗಾಯ ಹಾಗೂ ತಲೆಯ ಹಿಂಭಾಗಕ್ಕೆ ಗಾಯವಾಗಿದ್ದು, ತುರ್ತು ಘಟಕ ವಿಭಾಗದಲ್ಲಿ ಚಿಕಿತ್ಸೆಯಲ್ಲಿ ಇರುತ್ತಾರೆ. ಅಲ್ಲಿ ಸೇರಿದ ಜನರಲ್ಲಿ ಮಹಮ್ಮದ್ ಅಸ್ಗರ್ ಎಂಬವರು ಯಾವುದೋ ವಾಹನದಲ್ಲಿ ಗಾಯಾಳುಗಳನ್ನು ಮಂಗಳೂರು ಎ. ಜೆ. ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದಲ್ಲಿ ಪರೀಕ್ಷಿಸಿದ ವೈದ್ಯರು ಗಾಯಾಳುಗಳನ್ನು ಒಳರೋಗಿಯಾಗಿ ದಾಖಲಿಸಿರುತ್ತಾರೆ
9. ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 18-01-2014 ರಂದು ರಾತ್ರಿ 23-00 ಗಂಟೆ ಸಮಯಕ್ಕೆ ಅಚಲ್ ಇಂಡಸ್ಟ್ರೀ ಕಚೇರಿ ಎದುರು ಮೇ/ ಟ್ರಿಡೆಂಟ್ ಇನ್ಪ್ರಾಸ್ಟ್ರಕ್ಟರ್ ಬೈಕಂಪಾಡಿಗೆ ಸಂಬಂದಿಸಿದ ಲಾರಿ ನಂ ಕೆ ಎ-19 ಸಿ -9687 ನೇದರ ಚಾಲಕ ಅತಿ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಹೊಡೆದ ಪರಿಣಾಮ ವಿದ್ಯುತ್ ವೈರ್ ಗಳನ್ನು ಎಳೆದುಕೊಂಡು ಹೋದ ಪರಿಣಾಮ 3,08,300 ರೂಪಾಯಿ ನಷ್ಟ ಉಂಟಾಗಿರುತ್ತದೆ. ಈ ಬಗ್ಗೆ ಮೆಸ್ಕಾಂ ನ ಬೈಕಂಪಾಡಿ ಶಾಖೆಯ ಇಂಜಿನಿಯರ್ ಶಿವಪ್ರಸಾದ ದೂರು ನೀಡಿರುತ್ತಾರೆ.
10. ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 20-12-2013 ರಂದು ಬೆಳಿಗ್ಗೆ 10.30 ಗಂಟೆಗೆ ಪಿರ್ಯಾದಿದಾರರಾದ ಭೂಧಾ ರವರು ಆಳ್ವಾಸ್ ಕಾಲೇಜ್ ಕಡೆಗೆ ಹೋಗುವರೇ ನಡೆದುಕೊಂಡು ಹೋಗುತ್ತಾ, ಮಂಗಳೂರು ತಾಲೂಕು ಪುತ್ತಿಗೆ ಗ್ರಾಮದ ಆಳ್ವಾಸ್ ಕಾಲೇಜು ರಸ್ತೆಯ ಶರಾವತಿ ಹಾಸ್ಟೇಲ್ ಪಕ್ಕ ತಲುಪುಪಿದಾಗ, ಹಿಂದಿನಿಂದ ಬಂದ ಕೆಎ-20-ಎಂ-9640 ನೇ ನಂಬ್ರದ ಇನ್ನೋವಾ ಕಾರನ್ನು ಅದರ ಚಾಲಕರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿ ಪಿರ್ಯಾದಿದಾರರಿಗೆ ಹಿಂಬದಿಯಲ್ಲಿ ಢಿಕ್ಕಿಯಾಗಿದ್ದು, ಪರಿಣಾಮ ಪಿರ್ಯಾದಿದಾರರ ಬಲಕಾಲಿನ ಕೋಲುಕಾಲಿಗೆ ತೀವ್ರ ಗಾಯವಾಗಿದ್ದು, ಚಿಕಿತ್ಸೆಗಾಗಿ ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಿ, ಮೂಳೆ ಮುರಿತವಾಗಿದ್ದುದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಕಾರ್ಕಳ ನರ್ಸಿಂಗ್ ಹೋಮ್ ಗೆ ದಾಖಲಾಗಿರುವುದು.
11. ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ಮಿನರಲ್ಸ್ ಪ್ರೈ ಲಿಮಿಟೆಡ್ ನ ಸಲಹೆಗಾರರಾದ ಶ್ರೀ ಉದಯ ಶಂಕರ್ ಪಾಂಡೆ ರವರು ಉಪಯೋಗಕ್ಕಾಗಿ ಸದ್ರಿ ಕಂಪೆನಿಯಿಂದ ಕಾರ್ಪೊರೇಶನ್ ಬ್ಯಾಂಕ್ ಮಂಗಳೂರು ಶಾಖೆಯ ಕ್ರೆಡಿಟ್ ಕಾರ್ಡ್ ನಂಬ್ರ 4258 0600 0021 0968 ನ್ನು ನೀಡಿದ್ದು, ಸದ್ರಿ ಉದಯ್ ಶಂಕರ್ ಪಾಂಡೇ ರವರು ದಿನಾಂಕ 10-07-2013 ರಿಂದ 15-08-2013 ರ ವರೆಗೆ ಅಮೇರಿಕಾದಲ್ಲಿ ಇದ್ದ ವೇಳೆ ಈ ಮಧ್ಯೆ ಭಾರತ ದೇಶದಲ್ಲಿ ದಿನಾಂಕ 29-07-13 ರಿಂದ 20-08-13 ರ ಅವಧಿಯಲ್ಲಿ ಯಾರೋ ಅಪರಿಚಿತರು ಶ್ರೀ ಉದಯ ಶಂಕರ್ ಪಾಂಡೆ ರವರಿಗೆ ಸಂಬಂದಿಸಿದ ಮೇಲೆ ಹೇಳಿದ ಕ್ರೆಡಿಟ್ ಕಾರ್ಡ್ ನ್ನು ನಕಲಿ ಮಾಡಿ ಉಪಯೋಗಿಸಿ ಅದರಿಂದ ದೇಶದ ವಿವಿದ ಕಡೆಗಳಲ್ಲಿ, ವಿವಿಧ ಮಾಲ್ ಗಳಲ್ಲಿ ಸುಮಾರು 1,53,593,22 ರೂ ಮೊತ್ತದ ವಸ್ತುಗಳನ್ನು ಖರೀದಿಸಿ ಮೋಸ ಮಾಡಿರುವುದಾಗಿದೆ. ಎಂಬ ಬಗ್ಗೆ ಮಂಗಳೂರು ಮಿನರಲ್ಸ್ ಪ್ರೈ ಲಿಮಿಟೆಡ್ ನ ಸಂತೋಷ್ ಮೆಂಡನ್ ರವರು ಠಾಣೆಗೆ ಬಂದು ದೂರು ನೀಡಿರುತ್ತಾರೆ.
12. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 20-01-2014 ರಂದು ಪಿರ್ಯಾದಿದಾರರಾದ ಕಲಂದರ್ ಶಕೀಲ್ ರವರು ಅಪರಾಹ್ನ ಊಟಕ್ಕೆಂದು ಮನೆ ಕಡೆಗೆ ಅವರ ಬಾಬ್ತು ಮೋಟಾರು ಸೈಕಲ್ ನಂಬ್ರ ಕೆ.ಎ. 17.ಹೆಚ್..4918 ನೇದರಲ್ಲಿ ಹೋಗುತ್ತಾ ಅಪರಾಹ್ನ 12-40 ಗಂಟೆಗೆ ಕುಳಾಯಿಯ ಸಣ್ಣನಗರ ಎಂಬಲ್ಲಿ ಓರ್ವ ಗಿಡ್ಡಗಿನ ಕಪ್ಪಗಿನ ಯುವಕನು ಪಿರ್ಯಾದಿಯನ್ನು ತಡೆದು ನಿಲ್ಲಿಸಿ ಗದರಿಸಿದಾಗ ಆತನ ಕಡೆಯಿಂದ ಇತರ ಮೂವರು ಬಂದು ಅವರ ಪೈಕಿ ಓರ್ವನ ಕೈಯಲ್ಲಿ ಸ್ಟೀಲ್ ನಂತಹ ರಾಡಿನಿಂದ ಪಿರ್ಯಾದಿದಾರರಿಗೆ ಹೊಡೆಯಲು ಬಂದಾಗ ಪಿರ್ಯಾದಿಯು ತಡೆಯಲು ಪಿರ್ಯಾದಿ ಕೋಲು ಕೈಗೆ ತಾಗಿದ್ದು ಆ ಬಳಿಕ ಪಿರ್ಯಾದಿಯು ಬೈಕನ್ನು ಅಲ್ಲಿಯೇ ಬಿಟ್ಟು ಮನೆ ಕಡೆಗೆ ಓಡಿ ಹೋಗಿದ್ದು ಈ ಘಟನೆಗೆ ಸುಮಾರು 2 ವರ್ಷಗಳ ಹಿಂದೆ ಪಿರ್ಯಾದಿಗೆ ಸಂಬಂದಿಸಿದ ಜಿನಸಿ ಅಂಗಡಿಯನ್ನು ದುಷ್ಕರ್ಮಿಗಳು ಹುಡಿ ಮಾಡಿದ ಬಗ್ಗೆ ಕೇಸು ದಾಖಲಾಗಿದ್ದು ಸದ್ರಿ ಕೇಸಿನ ವಿಚಾರಣೆಯು ನ್ಯಾಯಾಲಯದಲ್ಲಿ ಪ್ರಸ್ತುತ ನಡೆಯುತ್ತಿದ್ದು ಸಾಕ್ಷಿ ನುಡಿಯದಂತೆ ಈ ಹಿಂದೆ ಬೆದರಿಕೆ ಕರೆಗಳು ಬಂದಿದ್ದು ಅದೇ ವಿಚಾರದಲ್ಲಿ 4 ಜನ ಆರೋಪಿಗಳು ಈ ಕೃತ್ಯ ಎಸಗಿರಬಹುದಾಗಿದೆ.
13. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 18-01-2014 ರಂದು ಫಿರ್ಯಾಧಿದಾರರಾದ ಶ್ರೀಮತಿ ಶಶಿರೇಖಾ ಎಸ್. ರವರು ಇಂಡಿಯಾನ್ ಓಯಿಲ್ ನ ಡೀಲರ್ ಆಗಿರುವ ಮುಕ್ಕದ ಮಂಗಳ ಪ್ಯೂಯೂಲ್ ಸರ್ವಿಸಸ್ ಎಂಬ ಹೆಸರಿನ ಪೆಟ್ರೋಲ್ ಬಂಕ್ ನಲ್ಲಿ ಇರುವಾಗ ಮಧ್ಯಾಹ್ನ 2:00 ಗಂಟೆಗೆ ಸದ್ರಿ ಪೆಟ್ರೋಲ್ ಬಂಕ್ ಗೆ ಡೀಸಿಲ್ ಹಾಕಲು ಬಂದಿದ್ದ ಕೆ.ಎ-19/ ಬಿ 6466 ನೇ ನೊಂದಣಿ ಸಂಖ್ಯೆಯ ಲಾರಿಯನ್ನು ಅದರ ಚಾಲಕ ನಾಗರಾಜ್ ಎಂಬವರು ಡಿಸೀಲ್ ಹಾಕಿದ ಬಳಿಕ ನಿರ್ಲಕ್ಷತನದಿಂದ ಒಮ್ಮೇಲೆ ಮುಂದಕ್ಕೆ ವೇಗವಾಗಿ ಚಲಾಯಿಸಿದ ಪರಿಣಾಮ ಸದ್ರಿ ಲಾರಿಯನ್ನು ಸದ್ರಿ ಪೆಟ್ರೋಲ್ ಬಂಕ್ ನ ಉತ್ತರ ಬದಿಯಲ್ಲಿದ್ದ Indian Oil Servo ಎಂದು ಇರುವ ಸೈನೆಜ್ ಬೋರ್ಡ್ ನ ಕೆಳಗಡೆ ಡಿಕ್ಕಿ ಹೊಡೆದ ಪರಿಣಾಮ ಸದ್ರಿ ಸೈನೆಜ್ ಬೋರ್ಡ್ ಜಖಂಗೊಂಡು ಸುಮಾರು ರೂ . 50,000/ ( ರೂಪಾಯಿ ಐವತ್ತು ಸಾವಿರ ಮಾತ್ರ ) ನಷ್ಟ ಉಂಟಾಗಿದ್ದು ಅಲ್ಲದೇ ಲಾರಿಯ ಮುಂಭಾಗದ ಎಡಬದಿ ಜಖಂ ಆಗಿರುತ್ತದೆ. ಲಾರಿ ಮಾಲಕರಾದ ಅರುಣ್ ಭಟ್ ಇವರು ಮೇಲ್ಕಂಡ ಪೆಟ್ರೋಲ್ ಬಂಕ್ ಗೆ ಬಂದು ಸೈನೆಜ್ ಬೋರ್ಡ್ ನ ರಿಪೇರಿ ಬಗ್ಗೆ ಹಣ ನೀಡುವುದ್ದಾಗಿಯೂ ಪೊಲೀಸ್ ದೂರು ನೀಡುವುದು ಬೇಡ ಎಂದು ತಿಳಿಸಿದ್ದರಿಂದ ದೂರು ನೀಡದೇ ಇದ್ದು, ಸದ್ರಿಯವರು ಈ ವರೆಗೆ ಬಾರದೇ ಹಣ ನೀಡದೇ ಇರುವುದ್ದರಿಂದ ತಡವಾಗಿ ಈ ಅಪಫಾತದ ಬಗ್ಗೆ ದೂರು ನೀಡಿರುವುದಾಗಿದೆ.
14. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19.01.2014 ರಂದು 17:45 ಗಂಟೆಯಿಂದ 20.01.2014 ರ 00:00 ಗಂಟೆ ಮದ್ಯೆ ಮಂಗಳೂರು ಕಂಕನಾಡಿ ಗ್ರಾಮದ ನಾಗುರಿ ಎಂಬಲ್ಲಿರುವ ಶ್ರೀ ತೆಜೇಶ್ ಕುಮಾರ್ ಎಂಬವವರಿಗೆ ಸೇರಿದ ಶ್ರೀ ಗಣಪತಿ ಸ್ಯಾನಿಟರಿ ಅಂಗಡಿಯ ಗೋಡಾನಿನ ಬಾಗಿಲಿಗೆ ಭದ್ರಪಡಿಸಿದ ಬೀಗವನ್ನು ಯಾರೋ ಕಳ್ಳರು ಬಲತ್ಕಾರವಾಗಿ ತೆಗೆದು ಗೋಡಾನಿನ ಒಳ ಪ್ರವೇಶಿಸಿ ಗೋಡಾನಿನಲ್ಲಿ ಪ್ಯಾಕ್ನಲ್ಲಿ ಇರಿಸಿದ್ದ ಹೊಸದಾದ, ಪ್ಯಾರಿವೇರ್, ವೋಕ್ಸ್‌ಟನ್ , ಎಕ್ವಾಲ್ ಕಂಪನಿಯಲ್ಲಿ ತಯಾರಾದ ಟ್ಯಾಪ್ ಫಿಟ್ಟಿಂಗ್ ವಸ್ತುಗಳನ್ನು ಹಾಗೂ ಇನ್ವಾರರ್ಟರ್ ಹಾಗೂ ಬ್ಯಾಟರಿಯನ್ನು ಕಳವು ಮಾಡಿಕೊಂಡು ಹೋಗಿರುವುದಾಗಿಯೂ, ಕಳವು ಆದ ಸೊತ್ತುಗಳ ಅಂದಾಜು ಮೌಲ್ಯ ಸುಮಾರು 71000/- ಆಗಬಹುದು.
15. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 18-01-2014 ರಂದು ಬೆಳಿಗ್ಗೆ ಪಿರ್ಯಾದಿದಾರರಾದ ಸನದ್ ಕುಮಾರ್ ಡೆನಿಯಲ್ ರವರು ತಮ್ಮ ಮನೆಯಾದ ಅಡ್ಯಾರ್ಪದವಿನಿಂದ ತಮ್ಮ ನೆರೆಯ ಕೃಷ್ಣಪ್ಪ ಎಂಬವರು ಚಲಾಯಿಸುತ್ತಿದ್ದ ಕೆಎ 19 ಇಜೆ 9818 ನೇ ಮೋಟಾರ್ ಸೈಕಲಿನಲ್ಲಿ ಪಿರ್ಯಾದಿದಾರರು ಹಿಂಬದಿ ಸವಾರರಾಗಿ ಕುಳಿತುಕೊಂಡು ಮಂಗಳೂರು ನಗರಕ್ಕೆ ಹೊರಟಿದ್ದು, ರಾ.ಹೆ 169 ಬೈತುರ್ಲಿ ಬಸ್‌ಸ್ಟಾಪ್ ಮುಂದೆ ಬೆಳಿಗ್ಗೆ ಸುಮಾರು 10-15 ಗಂಟೆವೇಳೆಗೆ ತಲುಪಿದಾಗ ಪಿರ್ಯಾದಿದಾರರ ಹಿಂದಿನಿಂದ ಅಂದರೆ ಮೂಡಬಿದ್ರೆ ಕಡೆಯಿಂದ ಬಸ್ಸೊಂದನ್ನು ಅದರ ಚಾಲಕನು ಅತೀವೇಗ ಹಾಗೂ ಅಜಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಬೈಕನ್ನು ಓವರ್ ಟೇಕ್ ಮಾಡುವ ತರಾತುರಿಯಲ್ಲಿ ಬೈಕಿನ ಬಲ ಹ್ಯಾಂಡಲಿಗೆ ಡಿಕ್ಕಿಹೊಡೆದ ಪರಿಣಾಮ ಸವಾರರು ಎಡಬದಿಗೂ ಪಿರ್ಯಾದಿದಾರರು ಬಲಬದಿಗೂ ರಸ್ತೆಗೆ ಬೈಕ್ ಸಮೇತ ಬಿದ್ದಿದ್ದು ಆ ಸಮಯ ಸದ್ರಿ ಬಸ್ಸಿನ ಎಡಬದಿಯ ಹಿಂಬದಿ ಟಯರ್ ಪಿರ್ಯಾದಿದಾರರ ಬಲಕೈ ಮೇಲೆ ಹಾದುಹೋಗಿ ಗಂಭೀರ ಗಾಯಗೊಂಡಿರುತ್ತಾರೆ. ಸದ್ರಿ ಬಸ್ಸಿನ ನಂಬ್ರ ಕೆಎ 19 ಡಿ 2425 ಆಗಿದ್ದು ಸದ್ರಿ ಬಸ್ಸಿನ ಚಾಲಕನು ಬಸ್ಸನ್ನು ನಿಲ್ಲಿಸದೇ ಪರಾರಿಯಾಗಿರುತ್ತಾನೆ. ಗಾಯಗೊಂಡ ಪಿರ್ಯಾದಿದಾರರನ್ನು ಸವಾರರು ಮತ್ತು ಇತರರು ಸೇರಿ ಉಪಚರಿಸಿ ಎಸ್‌ಸಿಎಸ್ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಿಸಿರುತ್ತಾರೆ.
16. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿ: 21.01.2014 ರಂದು 00.30 ಗಂಟೆ ವೇಳೆಗೆ ವಾಮಂಜೂರು ಪಾಯಿಂಟ್ ಕರ್ತವ್ಯದಲ್ಲಿದ್ದ ಪಿರ್ಯಾದಿದಾರರಾದ ಪಿಸಿ 564 ಬೀರಪ್ಪ ಗಡನವರ್ ರವರು ವಾಮಂಜೂರು ಜಂಕ್ಷನ್ ಸಮೀಪದ ಸಿಂಧೂರ ವೈನ್ಸ್ ಹೊರಗಡೆ ಜೋರಾಗಿ ಬೊಬ್ಬೆಹೊಡೆದು ಮಾತನಾಡುತ್ತಿದ್ದ ಆರೋಪಿಗಳೊಡನೆ ಅಪರಾತ್ರಿಯಲ್ಲಿ ಇಲ್ಲಿ ಯಾಕೆ ನಿಂತಿದ್ದೀರಿ, ಮನೆಗೆ ಹೋಗಲು ಆಗುವುದಿಲ್ಲವಾ ಎಂದು ಹೇಳಿದ್ದಕ್ಕೆ ಆರೋಪಿಗಳಿಬ್ಬರು ತಕ್ಷೀರು ನಡೆಸುವ ಸಮಾನ ಉದ್ದೇಶದಿಂದ ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಪಿರ್ಯಾದಿದಾರರ ಎರಡು ಕೆನ್ನೆಗಳಿಗೆ ಹೊಡೆದು ಶರ್ಟ್ನ ಕಾಲರ್ ಹಿಡಿದು ಎಳೆದಾಡಿ ಸರಕಾರಿ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿರುತ್ತಾರೆ.
No comments:
Post a Comment