ದೈನಂದಿನ ಅಪರಾದ ವರದಿ.
ದಿನಾಂಕ 22.01.2014 ರ 16:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 1 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 1 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 6 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 2 |
1. ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 24-06-2012 ರಂದು ಪಿರ್ಯಾದಿದಾರರಾದ ಶ್ರೀಮತಿ ಸುನೀತಾ ಶೆಟ್ಟಿ ರವರು ಆರೋಪಿ ಪ್ರಶಾಂತ್ ಶೆಟ್ಟಿಯೊಂದಿಗೆ ರೊಸಾರಿಯೋ ಚರ್ಚ್ ಹಾಲ್ ನಲ್ಲಿ ಮದುವೆಯಾಗಿರುತ್ತದೆ. ಮದುವೆಯ ನಂತರ ಆರೋಪಿಯು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದು, 1 ಗಂಡು ಮಗುವಿನ ಜನನದ ಸಂದರ್ಭದಲ್ಲಿ ಪಿರ್ಯಾದಿದಾರರನ್ನು ಆರೋಪಿಯು ಒತ್ತಾಯ ಪೂರ್ವಕವಾಗಿ ಮನೆಯಿಂದ ಹೊರಹಾಕಿರುತ್ತಾರೆ. ನಂತರ ಆರೋಪಿ ಪಿರ್ಯಾದಿದಾರರು ಹಾಗೂ ಮಗುವನ್ನು ನೋಡಲು ಬಂದಿರುವುದಿಲ್ಲ. ನನಗೆ ಜೀವನಾಧಾರ ಇಲ್ಲದೇ ಮಾನ್ಯ ನ್ಯಾಯಾಲಯದಲ್ಲಿ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ್ದು, ದಿನಾಂಕ 20-01-2014 ರಂದು ಆರೋಪಿ ಏಕಾಏಕಿ ಪಿರ್ಯಾದಿದಾರರ ಮನೆಗೆ ಬಂದು "ನಾನು ವಿದೇಶಕ್ಕೆ ಹೋಗುವ ತಯಾರಿಯಲ್ಲಿದ್ದೇನೆ, ಈ ಸಂದರ್ಭದಲ್ಲಿ ಜೀವನಾಂಶ ಕೇಳುತ್ತಿದ್ದೀಯಾ, ನೀನೆ ನನಗೆ ಹಣ ಕೊಡಬೇಕು ಇಲ್ಲದಿದ್ದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ" ಎಂದು ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿದಾರರ ಮೇಲೆ ಕೈಯಿಂದ ಹಲ್ಲೆ ನಡೆಸಿರುತ್ತಾರೆ ಎಂಬಿತ್ಯಾದಿ.
2. ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 21.01.2014 ರಂದು 18:15 ಗಂಟೆಗೆ ಬಪ್ಪನಾಡು ಗ್ರಾಮದ ತ್ರಿವೇಣಿ ಬಾರ್ ಬಳಿಯಲ್ಲಿ ಆರೋಪಿ ಅಶೋಕ ತಂದೆ: ಕೃಷ್ಣಪ್ಪ, ವಾಸ: ಜಾನಕಿ ನಿಲಯ, ಕಡಿ ಪಟ್ನ, ಪಡುಬಿದ್ರೆ ಎಂಬವರು ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಿ ಮಟ್ಕಾ ಹಣವನ್ನು ಸಂಗ್ರಹಿಸುತ್ತಿದ್ದವರನ್ನು ಮುಲ್ಕಿ ಠಾಣಾ ಪೊಲೀಸ್ ನಿರೀಕ್ಷಕರುವರು ಸಿಬ್ಬಂದಿಗಳ ಜೊತೆ ದಾಳಿ ಮಾಡಿ ಆರೋಪಿ ಅಶೋಕನನ್ನು ದಸ್ತಗಿರಿ ಮಾಡಿ ಮಟ್ಕಾ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 1485/- ಮಟ್ಕಾ ಸಂಖ್ಯೆಗಳನ್ನು ಬರೆದಿರುವ ಬಿಳಿ ಹಾಳೆ -1, ಮಟ್ಕಾ ಸಂಖ್ಯೆಗಳನ್ನು ಬರೆಯಲು ಉಪಯೋಗಿಸಿದ ಪೆನ್ನು-1, ಇವುಗಳನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ.
3. ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 20/01/2014 ರಂದು ಫಿರ್ಯಾದಿದಾರರಾದ ಶ್ರೀಮತಿ ಝುಬೈದಾ ರವರು ತನ್ನ ಮನೆಯಿಂದ ಕೂಳೂರು ಕಡೆಗೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಬರುತ್ತಾ ಮಧ್ಯಾಹ್ನ ಸುಮಾರು 12-30 ಗಂಟೆಗೆ ಕೂಳೂರು ಶ್ರೀ ನಾರಾಯಣಗುರು ಮಂದಿರದಿಂದ ಸ್ವಲ್ಪ ಮುಂದೆ ತಲುಪಿದಾಗ ಎದುರುಗಡೆಯಿಂದ ಮೋಟಾರು ಸೈಕಲ್ KA 19 EE 9493 ನೇಯುದನ್ನು ಅದರ ಸವಾರರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರಿಗೆ ಢಿಕ್ಕಿ ಮಾಡಿದ ಪರಿಣಾಮ ಫಿರ್ಯಾದಿದಾರರು ರಸ್ತೆಗೆ ಬಿದ್ದು ಎಡಕೈಗೆ ಮೂಳೆಮುರಿತದ ಗಾಯವಾಗಿದ್ದು, ಚಿಕಿತ್ಸೆ ಬಗ್ಗೆ ತೇಜಸ್ವಿನಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ.
4. ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದುದಾರರಾದ ಶ್ರೀ ಓಸ್ವಲ್ಡ್ ರವರು ತನ್ನ ಆಕ್ಟಿವಾ ಹೊಂಡಾ KA 19-V-4038 ನೇಯದನ್ನು ದಿನಾಂಕ 08/01/2014 ರಂದು ಸಂಜೆ 06-00 ಗಂಟೆಗೆ ತನ್ನ ಮನೆಯಾದ ಪಂಜಿಮೊಗರು ಗ್ರಾಮದ ವಿದ್ಯಾನಗರದ ಬಳಿ ಇರುವ ತನ್ನ ಮನೆಯಲ್ಲಿ ಪಾರ್ಕ್ ಮಾಡಿದ್ದು, ಬೆಳಗ್ಗೆ 07-00 ಗಂಟೆ ಸಮಯಕ್ಕೆ ಆಕ್ಟಿವಾ ಹೊಂಡಾ ಪಾರ್ಕ್ ಮಾಡಿದ ಸ್ಥಳಕ್ಕೆ ಬಂದಾಗ ಆಕ್ಟೀವಾ ಹೊಂಡಾ ಕಂಡುಬಾರದೇ ಇದ್ದು ಸುತ್ತಮುತ್ತ ಈವರೆಗೆ ಹುಡುಕಾಡಿ ಪತ್ತೆಯಾಗಿರುವುದಿಲ್ಲ. ವಾಹನವನ್ನು ಯಾರೋ ಕಳ್ಳರು ದಿನಾಂಕ 08/01/2014ರ ಸಂಜೆ 06-00 ಗಂಟೆಯಿಂದ ಬೆಳಗ್ಗೆ 7-00 ಗಂಟೆಯ ಮಧ್ಯೆ ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಹೋಂಡಾ ಆಕ್ಟಿವಾದ ಇಂಜಿನ್ ನಂಬ್ರ JFO8E8398954,ಚಾಸಿಸ್ ನಂಬ್ರ ME 4JF082D6820109, ಕಪ್ಪು ಬಣ್ಣದ್ದಾಗಿದ್ದು,2006 ನೇ ಮಾಡೆಲ್ ಆಗಿದ್ದು, ಅಂದಾಜು ಮೌಲ್ಯ ರೂ. 16,000/- ಆಗಬಹುದು.
5. ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 20-01-2014ರಂದು ಸಮಯ ಸುಮಾರು ಮದ್ಯಾಹ್ನ 12.30 ಗಂಟೆಗೆ ತಾಲೂಕು ಪಂಚಾಯತ್ ಮೈನ್ ಗೇಟಿನ ಎದುರು ಸಾರ್ವಜನಿಕರ ರಸ್ತೆಯ ಬದಿಯಲ್ಲಿ ಪಿರ್ಯದುದಾರರಾದ ಶ್ರೀಮತಿ ಸುಮಿತ್ರ ರವರು ನಡೆದುಕೊಂಡು ಹೋಗುತಿರುವಾಗ ಹಂಪನಕಟ್ಟೆ ಕಡೆಯಿಂದ R.T.O. ಕಡೆಗೆ ಮೋಟರ್ ಸೈಕಲ್ ನಂಬ್ರ KA 19 EH-9891ನ್ನು ಅದರ ಸವಾರ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜಿವಕ್ಕೆ ಹಾನಿಯಾಗುವ ರಿತಿಯಲ್ಲಿ ಚಲಾಯಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ಪಿರ್ಯದುದಾರರು ರಸ್ತೆಗೆ ಬಿದ್ದು ಬಲಕೈಗೆ ತ್ರೀವ ಸ್ವರೂಪದ ಗುದ್ದಿದ ಗಾಯ ಹಾಗೂ ತಲೆಗೆ ರಕ್ತ ಗಾಯವಾಗಿ ಆಥೆನಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ.
6. ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ದಿನಾಂಕ. 19-01-2013ರಂದು 20-45 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಅನಿತಾ ರವರು ತನ್ನ ಗಂಡ ಜುಬಿ ಕೆ. ಜೋಯ್ ಹಾಗೂ ಮಕ್ಕಳೊಂದಿಗೆ ನಂದನೇಶ್ವರ ದೇವರ ಕಟ್ಟೆ ಪೂಜೆ ಮೆರವಣಿಗೆ ನೋಡಲು ಎನ್.ಎಂ.ಪಿ.ಟಿ ಕಾಲನಿ 17ನೇ ಸ್ಟ್ರೀಟ್ ರಸ್ತೆಯ ಎಡಬದಿ ನಿಂತುಕೊಂಡಿದ್ದಾಗ ಎನ್.ಎಂ.ಪಿ.ಟಿ ಕಾಲನಿ ಕಡೆಯಿಂದ (ಸಿಐಎಸ್ ಎಫ್ ಕಾಲನಿ) ಕಾರೊಂದರ ಚಾಲಕ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ನಿಂತುಕೊಂಡಿದ್ದ ಸ್ಥಳದಿಂದ ಸ್ವಲ್ಪ ಮುಂದೆ ಒಮ್ಮೆಲೆ ನಿಲ್ಲಿಸಿ, ವಾಪಾಸು ಅತೀವೇಗವಾಗಿ ಹಿಂದಕ್ಕೆ ಚಲಾಯಿಸಿ ರಸ್ತೆಯ ಎಡಬದಿ ನಿಂತಿದ್ದ ಪಿರ್ಯಾದಿದಾರರ ಗಂಡನ ಎಡಕಾಲಿಗೆ ಡಿಕ್ಕಿ ನಡೆಸಿ ತೀವ್ರತರದ ಗಾಯಗೊಳಿಸಿ ಪರಾರಿಯಾಗಿರುತ್ತಾನೆ. ಕಾರಿನ ನಂಬ್ರ ನೋಡಲಾಗಿ ಕೆ.ಎ. 19 ಎಂ.ಸಿ. 3027 ಮತ್ತು ಕಾರಿನ ಚಾಲಕನ ಹೆಸರು ರಾಹುಲ್ ಎಂದಾಗಿರುತ್ತದೆ.
7. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ. ನಿಜಲಿಂಗಪ್ಪ ಹ. ಚಲವಾಡಿ ರವರು ಮಂಗಳೂರು ಕೆ.ಎಸ್.ಆರ್.ಟಿ.ಸಿ. 1ನೇ ಘಟಕ ಇದರಲ್ಲಿ ಕೆಲಸ ಮಾಡಿಕೊಂಡು, ಸುಮಾರು 4 ತಿಂಗಳಿನಿಂದ ಕೆಎ-19-ಎಫ್-2920 ನೇ ಕೆ.ಎಸ್.ಆರ್.ಟಿ.ಸಿ. ಬಸ್ಸಿನಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 21-01-2014 ರಂದು ಮಂಗಳೂನಿಂದ ಕಾಸರಗೋಡಿಗೆ ಹೋಗಿ ದಿನಾಂಕ 22-01-2014 ರಂದು ವಾಪಾಸು ಮಂಗಳೂರು ಕಡೆಗೆ ಬೆಳಿಗ್ಗೆ 05:55 ಗಂಟೆಗೆ ಹೊರಟು ಬೆಳಿಗ್ಗೆ 07:00 ಗಂಟೆಗೆ ತಲಪಾಡಿ ಗ್ರಾಮದ ಮೇಲ್ ತಲಪಾಡಿಯ ಬ್ರಿಡ್ಜ್ ಬಳಿ ಕಳೆದು ತಲುಪುವಾಗ ತೊಕ್ಕಟ್ಟು ಕಡೆಯಿಂದ ತಲಪಾಡಿ ಕಡೆಗೆ ಹೋಗುವ ಮೋಟಾರು ಸೈಕಲಿನಲ್ಲಿ ಬಂದ ಇಬ್ಬರ ಪೈಕಿ ಬೈಕಿನ ಹಿಂದೆ ಕುಳಿತವನು ಬಸ್ಸಿನ ಮುಂದಿನ ಗ್ಲಾಸಿಗೆ ಕಲ್ಲು ಬಿಸಾಡಿರುವುದರಿಂದ ಗ್ಲಾಸ್ ಜಖಂಗೊಂಡು ಸುಮಾರು 15,000/- ರೂಪಾಯಿ ನಷ್ಟವುಂಟಾಗಿರುತ್ತದೆ.
8. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 21-01-2014 ರಂದು ಮದ್ಯಾಹ್ನ 2-30 ಗಂಟೆಗೆ ಪಿರ್ಯಾದಿದಾರರು ಶಿಬರೂರು ಕಡೆಗೆ ಪುಚ್ಚಾರಿ ಸೂರಿಂಜೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಸೂರಿಂಜೆ ಗ್ರಾಮದ ಪುಚ್ಚಾಡಿ ರಸ್ತೆಯಲ್ಲಿರುವ ಎಸ್ ಎಂ ಮಂಜಿಲ್ ಮನೆಯ ಬಳಿ ತಲುಪಿದಾಗ ಪಿರ್ಯಾದಿದಾರರ ಹಿಂದಿನಿಂದ ಅಂದರೆ ಪುಚ್ಚಾಡಿ ಕಡೆಯಿಂದ ಆರೋಪಿ ಪಯಾಜ್ ಎಂಬವರು ಕೆ ಎ 19 ಇಡಿ 2486 ನೇ ಮೋಟಾರು ಸೈಕಲ್ ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಬಲಕಾಲಿನ ಮೊಣಗಂಟಿಗೆ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಸುರತ್ಕಲ್ ಮುಕ್ಕ ಶ್ರೀನಿವಾಸ ಆಸ್ಪತ್ತೆಗೆ ದಾಖಲುಗೊಂಡಿರುತ್ತಾರೆ.
9. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 21-01-2014 ರಂದು ಬೆಳಿಗ್ಗೆ ಪಿರ್ಯಾದಿದಾರರಾದ ಬಾಲಕೃಷ್ಣ ಶೆಟ್ಟಿ ರವರು ತಮ್ಮ ಗೆಳೆಯ ಪ್ರಭಾಕರ್ರವರ ತಂಗಿ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದು ಅವರನ್ನು ನೋಡಿ ಬರಲು ಪ್ರಭಾಕರ್ರವರ ಬಾಬ್ತು ಪಲ್ಸರ್ ಬೈಕ್ ನಂಬ್ರ ಕೆಎ 21 ಜೆ 4648 ನೇದರಲ್ಲಿ ಹಿಂಬದಿ ಸವಾರರಾಗಿ ರಾ.ಹೆ 169 ರಲ್ಲಿ ಮೂಡಬಿದ್ರೆಯಿಂದ ಮಂಗಳೂರಿಗೆ ಹೊರಟಿದ್ದು, ಮದ್ಯಾಹ್ನ ಸುಮಾರು 12-00 ಗಂಟೆಯ ವೇಳೆಗೆ ವಾಮಂಜೂರಿನ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಬಸ್‌ಸ್ಟಾಪಿನ ಬಳಿ ತಲುಪಿದಾಗ ರಸ್ತೆಯ ಎಡಬದಿಯಲ್ಲಿ ಬಸ್ಸೊಂದು ಪ್ರಯಾಣಿಕರನ್ನು ಇಳಿಸುವ ಮತ್ತು ಹತ್ತಿಸುವ ಸಲುವಾಗಿ ನಿಲ್ಲಿಸಿದ್ದರಿಂದ ಬೈಕ್ ಸವಾರ ಬಸ್ಸಿನ ಬಲಬದಿಯಿಂದ ಬಸ್ಸನ್ನು ದಾಟಿ ಮುಂದಕ್ಕೆ ಬೈಕನ್ನು ಚಲಾಯಿಸಿದಾಗ ರಸ್ತೆಯ ಬಲಬದಿಯ ಮಣ್ಣು ರಸ್ತೆಯಿಂದ ಕೆಎ 19 ಎಂಡಿ 4142 ನೇ ಆಲ್ಟೋ 800 ಕಾರನ್ನು ಅದರ ಚಾಲಕಿ ಲವೀನಾ ಕ್ರಾಸ್ತಾ ಎಂಬವರು ತಮ್ಮ ಕಾರನ್ನು ಒಮ್ಮೆಲೆ ಮುಖ್ಯ ರಸ್ತೆಗೆ ಚಲಾಯಿಸಿಕೊಂಡು ಬಂದು ಪ್ರಭಾಕರರವರು ಚಲಾಯಿಸುತ್ತಿದ್ದ ಬೈಕಿಗೆ ಡಿಕ್ಕಿಹೊಡೆದ ಪರಿಣಾಮ ಇಬ್ಬರೂ ಬೈಕ್ ಸಮೇತ ರಸ್ತೆಗೆ ಬಿದ್ದಿದ್ದು ಪ್ರಭಾಕರರವರಿಗೆ ಬಲಕಾಲಿನ ಕೋಲುಕಾಲಿಗೆ ಮೂಳೆ ಮುರಿತದ ಗಾಯವಾಗಿದ್ದು, ಪಿರ್ಯಾದಿದಾರರಿಗೆ ಬಲ ಕಾಲಿಗೆ ತರಚಿದ ಗಾಯವಾಗಿದ್ದು, ಗಾಯಾಳು ಪ್ರಭಾಕರರವರು ಒಳರೋಗಿಯಾಗಿ ಚಿಕಿತ್ಸೆ ಬಗ್ಗೆ ತೇಜಸ್ವಿನಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.
10. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ರಾಜಶೇಖರ ರವರು ಚಾಲಕರಾಗಿರುವ ಮಂಗಳೂರು ಮಹಾನಗರ ಪಾಲಿಕೆಯ ನೀರುಸರಬರಾಜು ಮಾಡುವ ಕೆಎ 19 ಎ 13 ನೇ ನಂಬ್ರದ ಟ್ಯಾಂಕರ್ ಲಾರಿಯಲ್ಲಿ ಫೆಲಿಕ್ಸ್ ಡಿಸೋಜಾ ಎಂಬವರು ಚಾಲಕರಾಗಿದ್ದು, ದಿನಾಂಕ 21-01-2014 ರಂದು ಬೆಂದೂರುವೆಲ್ ಎಂಬಲ್ಲಿಂದ ಸದ್ರಿ ಟ್ಯಾಂಕರಿಗೆ ನೀರನ್ನು ತುಂಬಿಸಿಕೊಂಡು ಪಚ್ಚನಾಡಿ ಬಸವಲಿಂಗೇಶ್ವರ ಕಾಲನಿಯ ಸಾರ್ವಜನಿಕ ಟ್ಯಾಂಕಿಗೆ ನೀರನ್ನು ತುಂಬಿಸುವ ಸಲುವಾಗಿ ಫೆಲಿಕ್ಸ್ ಡಿಸೋಜಾರವರು ಮಂಗಳೂರಿನಿಂದ ಪಚ್ಚನಾಡಿಗೆ ಸದ್ರಿ ಟ್ಯಾಂಕರನ್ನು ಚಲಾಯಿಸಿಕೊಂಡು ಹೋಗುತ್ತಾ ಕುಡುಪು ಗ್ರಾಮದ ಬೈತುರ್ಲಿ ಜೆರ್ರೀ ಎಂಬವರ ಹಳೇಯ ಶೇಂದಿ ಅಂಗಡಿಯನ್ನು ದಾಟಿ ಸ್ವಲ್ಪ ಮುಂದೆ ಹೋದಾಗ ತಿರುವು ರಸ್ತೆಯಲ್ಲಿ ವಾಮಂಜೂರು ಕಡೆಯಿಂದ ಕುಲಶೇಖರ ಕಡೆಗೆ ಬರುತ್ತಿದ್ದ ಕೆಎ 19 ಇಬಿ 892 ನೇದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಹಾಗೂ ಹಿಂಬದಿ ಸವಾರ ಬೈಕ್ ಸಮೇತ ರಸ್ತೆಗೆ ಬಿದ್ದುದರಿಂದ ಇಬ್ಬರಿಗೂ ತಲೆಗೆ ಮತ್ತು ಕಾಲಿಗೆ ಗಂಭೀರ ಗಾಯಗೊಂಡಿದ್ದರಿಂದ ಪಿರ್ಯಾದಿದಾರರು ಮತ್ತು ಇತರರು ಸೇರಿ ಗಾಯಾಳು ಇಬ್ಬರನ್ನೂ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ವಾಹನವೊಂದರಲ್ಲಿ ಕಳುಹಿಸಿದ್ದು, ಗಾಯಾಳುಗಳ ಪೈಕಿ ಬೈಕ್ ಸವಾರ ಹಿತೇಶ್ ದಾರಿ ಮಧ್ಯೆಯೇ ಮೃತಪಟ್ಟಿದ್ದು, ಸಹಸವಾರ ಲಿಖಿತ್ ನನ್ನು ಚಿಕಿತ್ಸೆ ಬಗ್ಗೆ ಸಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುತ್ತಾರೆ.
No comments:
Post a Comment