ದಿನಾಂಕ 17-01-2014 ರಂದು ನಗರದ ನವರತ್ನ ಪ್ಯಾಲೇಸ್ ವಸತಿಗೃಹದಲ್ಲಿ ಮಾಡಿದ ಸಾಲವನ್ನು
ತೀರಿಸಲು ಹಣ ಮತ್ತು ಚಿನ್ನಾಭರಣಕ್ಕಾಗಿ ಪರಿಚಯದ ಸುಮಾರು 70 ವರ್ಷ ಪ್ರಾಯದ ಕೇರಳದ ಶ್ರೀಮತಿ
ಎಲ್ಲಿಕುಟ್ಟಿ ಎಂಬವರನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ರವೀಂದ್ರನ್ @ ರವಿ @ ಕುಚ್ಚುಕೋಲು
ರವಿ, ಪ್ರಾಯ: 61 ವರ್ಷ, ತಂದೆ: ದಿ. ಕಣ್ಣನ್, ವಾಸ: ಕುನ್ನೂಲು ಮನೆ, ಪಟುವಮ್ ಗ್ರಾಮ ಮತ್ತು
ಅಂಚೆ, ತಳಿಪ್ಪರಂಬು ತಾಲೂಕು, ಕಣ್ಣೂರು ಜಿಲ್ಲೆ, ಕೇರಳ ರಾಜ್ಯ. ಎಂಬಾತನನ್ನು ಮಂಗಳೂರು ನಗರದ
ಮಾನ್ಯ ಪೊಲೀಸ್ ಆಯುಕ್ತರವರ ನಿರ್ದೇಶನದಂತೆ ಮಂಗಳೂರು ನಗರ ಕಾನೂನು ಮತ್ತು ಶಿಸ್ತು ವಿಭಾಗದ
ಪೊಲೀಸ್ ಉಪ ಆಯುಕ್ತರಾದ ಶ್ರೀ ಜಗದೀಶ್ ಕೆ.ವಿ., ಕೆ.ಎ.ಎಸ್. ರವರ ಮಾರ್ಗದರ್ಶನದಲ್ಲಿ ಮಾನ್ಯ
ಕೇಂದ್ರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಕೆ. ತಿಲಕ್ ಚಂದ್ರ ರವರ ನೇತೃತ್ವದಲ್ಲಿ
ಉತ್ತರ ಪೊಲೀಸ್ ನಿರೀಕ್ಷಕರಾದ ಶ್ರೀ ಚಲುವರಾಜು.ಬಿ. ರವರು ಪೊಲೀಸ್ ಉಪ ನಿರೀಕ್ಷಕರಾದ ಶ್ರೀ
ಕೆ.ಕೆ. ರಾಮಕೃಷ್ಣ ಹಾಗೂ ಸಿಬ್ಬಂದಿಯವರಾದ ಯೋಗೀಶ್ ಎಎಸ್ಐ, ಹರೀಶ್ಚಂದ್ರ ಎಎಸ್ಐ, ಮುಖ್ಯ
ಆರಕ್ಷಕರಾದ ಜನಾರ್ದನ, ಬಾಲಕೃಷ್ಣ, ಚಿತ್ತರಂಜನ್ ಆರಕ್ಷಕರಾದ ಸುಧಾಕರ, ಮಣಿ, ರಾಜೇಶ್, ಇಸಾಕ್,
ಸುನೀಲ್ ರವರುಗಳನ್ನೊಳಗೊಂಡ ವಿಶೇಷ ತಂಡದವರು ಕೇರಳ ರಾಜ್ಯದ ಕಣ್ಣೂರಿನ ತಳಿಪರಂಬ ಠಾಣಾ ವ್ಯಾಪ್ತಿಯ
ಪಟ್ವಾಂ ಪಂಚಾಯತ್ ಬಳಿ ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. ತನಿಖೆ
ಪ್ರಗತಿಯಲ್ಲಿರುತ್ತದೆ.
No comments:
Post a Comment