ದೈನಂದಿನ ಅಪರಾದ ವರದಿ.
ದಿನಾಂಕ 03.01.2013 ರ 16:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ
|
:
|
0
|
ಕೊಲೆ ಯತ್ನ
|
:
|
0
|
ದರೋಡೆ ಪ್ರಕರಣ
|
:
|
0
|
ಸುಲಿಗೆ ಪ್ರಕರಣ
|
:
|
0
|
ಮನೆ ಕಳವು ಪ್ರಕರಣ
|
:
|
0
|
ಸಾಮಾನ್ಯ ಕಳವು
|
:
|
1
|
ವಾಹನ ಕಳವು
|
:
|
0
|
ಮಹಿಳೆಯ ಮೇಲಿನ ಪ್ರಕರಣ
|
:
|
1
|
ರಸ್ತೆ ಅಪಘಾತ ಪ್ರಕರಣ
|
:
|
8
|
ವಂಚನೆ ಪ್ರಕರಣ
|
:
|
0
|
ಮನುಷ್ಯ ಕಾಣೆ ಪ್ರಕರಣ
|
:
|
1
|
ಹಲ್ಲೆ ಪ್ರಕರಣ
|
:
|
1
|
ದನ ಕಳವು ಪ್ರಕರಣ
|
:
|
0
|
1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ರಸ್ತೆ ಅಪಘಾತ ಪ್ರಕರಣ: ದಿನಾಂಕ: 02.01.2014 ರಂದು ಪಿರ್ಯಾದುದಾರರಾದ ಜಾನ್ ಪುರ್ಟಾಡೋ ಎಂಬವರು ಮಂಗಳೂರು ನಗರದ ಕೋಡಿಯಾಲ್ ಬೈಲಿನ ಬಿಷಫ್ ಹೌಸ್ ನಲ್ಲಿ ತಾವು ಕರ್ತವ್ಯ ನಿರ್ವಹಿಸುತ್ತಿರುವ ಕಛೇರಿಯ ಎದುರು ಭಾಗದಲ್ಲಿರುವ ಕರ್ನಾಟಕ ಬ್ಯಾಂಕಿಗೆ ಹಣ ಜಮಾ ಮಾಡಿ ವಾಪಸ್ಸು ತಮ್ಮ ಕಛೇರಿಗೆಂದು ಹೋಗುವರೇ ಕರ್ನಾಟಕ ಬ್ಯಾಂಕಿನ ಎದುರುಗಡೆ ರಸ್ತೆಯ ಎಡಬದಿಯಲ್ಲಿ ನಿಂತುಕೊಂಡಿರುವ ಸಮಯ ಮಧ್ಯಾಹ್ನ 14:50 ಗಂಟೆಗೆ ಕೆಎಸ್ಆರ್ ಕಡೆಯಿಂದ ನವಭಾರತ್ ಕಡೆಗೆ KA-19-EH-6463ನೇ ನಂಬ್ರದ ಮೋಟಾರ್ ಸೈಕಲ್ಲನ್ನು ಅದರ ಸವಾರ ಅರುಣ್ ಕುಮಾರ್ ಎಂಬವರು ಅತೀವೇಗ ಮತ್ತು ತೀರಾ ನಿರ್ಲಕ್ಷತನದಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಕಾಂಕ್ರೀಟ್ ರಸ್ತೆಗೆ ಬಿದ್ದು ಅವರ ತಲೆಯ ಎಡಭಾಗಕ್ಕೆ ಗುದ್ದಿದ ನೋವು, ಎಡ ಕೆನ್ನೆಯ ಬಳಿ ತರಚಿದ ಗಾಯ, ಬಲ ಕೈ ಮೊಣಗಂಟಿನ ಬಳಿ ಹಾಗೂ ಎಡ ಕೈ ಎಡ ಕಾಲಿನ ಮೊಣಗಂಟಿನ ಬಳಿ ತರಚಿದ ಗಾಯಗೊಂಡವರನ್ನು ಸದ್ರಿ ಮೋಟಾರ್ ಸೈಕಲ್ ಸವಾರರು ಚಿಕಿತ್ಸೆ ಬಗ್ಗೆ ನಗರದ ಯೇನೆಪೋಯಾ ಆಸ್ಪತ್ರೆಯಲ್ಲಿ ದಾಖಲಿಸಿಗೊಳಿಸಿರುವುದು
2. ಮಂಗಳೂರು ಸಂಚಾರ ಪೂರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ರಸ್ತೆ ಅಪಘಾತ ಪ್ರಕರಣ: ದಿನಾಂಕ 29-12-2013 ರಂದು ಬೆಳಿಗ್ಗೆ ಸಮಯ ಸುಮಾರು 06.40 ಗಂಟೆಗೆ ಆಟೋರಿಕ್ಷಾ ನಂಬ್ರ KA19-D-1046 ನ್ನು ಅದರ ಚಾಲಕ ಕಂಕನಾಡಿ ಕಡೆಯಿಂದ ಕೋಟಿ ಚೆನ್ನಯ್ಯ ಸರ್ಕಲ್ ಕಡೆಗೆ ಅತಿ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ವೆಲೆನ್ಸಿಯಾ ಸರ್ಕಲ್ ತಲುಪುವಾಗ ಜೆರೋಸ ರಸ್ತೆ ಕಡೆಯಿಂದ ಕಂಕನಾಡಿ ಕಡೆಗೆ ಬರುತ್ತಿದ್ದ ಸ್ಕೂಟರ್ ನಂಬ್ರ KA19-EF-6657ಕ್ಕೆ ಡಿಕ್ಕಿಮಾಡಿದ ಪರಿಣಾಮ ಸ್ಕೂಟರ್ ಸವಾರ ಮತ್ತು ಹಿಂಬದಿ ಸವಾರ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಸವಾರ ಕುಮಾರರವರಿಗೆ ತಲೆಯ ಎಡಭಾಗಕ್ಕೆ ರಕ್ತಗಾಯ ಹಿಂಬದಿ ಸವಾರ ರಾಜೇಂದ್ರರ ಬಾಯಿಗೆ ಮತ್ತು ತಲೆಯ ಹಿಂಬಾಗಕ್ಕೆ ರಕ್ತಗಾಯವಾಗಿ ಪಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಚಿಕೆತ್ಸೆ ಪಡೆದುಕೊಂಡಿರುತ್ತಾರೆ.
3. ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ದಿನಾಂಕ:16-12-2013 ರಂದು ಬೆಳಿಗ್ಗೆ 05-30ಗಂಟೆಗೆ ಕುಮಾರಿ ಸ್ನೇಹಲತ (21) ರವರು ತನ್ನ ಮನೆಯಾದ ಮಂಗಳೂರು ತಾಲೂಕು ಕೊಣಾಜೆ ಗ್ರಾಮದ ಅಸೈಗೋಳಿ ಕೆ ಎಸ್ ಆರ್ ಪಿ ವಸತಿ ಗೃಹದಿಂದ ಮಂಗಳೂರು ಕೃಷಿ ವಿಜ್ಞಾನ ಕೇಂದ್ರವತಿಯಿಂದ ನಡೆಯುವ ಕಾರ್ಯಕ್ರಮಕ್ಕೆಂದು ಹೋದವರು ದಿನಾಂಕ:18-12-2013ರಂದು ರಾತ್ರಿ 11-30ಗಂಟೆಗೆ ಪಿರ್ಯಾದಿದಾರರು ಕಾಣೆಯಾದ ತನ್ನ ಮಗಳು ಸ್ನೇಹಲತಾಗೆ ಫೋನು ಮಾಡಿಧಾಗ ತಾನು ಬೆಂಗಳೂರಿನಲ್ಲಿರುವುದಾಗಿ ತಿಳಿಸಿದ್ದು, ಮರು ದಿನ ದಿನಾಂಕ:19-12-2013ರಂದು ಬೆಳಿಗ್ಗೆ 11-30 ಗಂಟೆಗೆ ಸ್ನೇಹಲತಾಳು ಪಿರ್ಯಾದಿದಾರರಿಗೆ ಫೋನು ಮಾಡಿ ತಾನು ಬೆಂಗಳೂರಿನಲ್ಲಿ ಚಾಕಲೇಟ್ ಕಂಪನಿಯಲ್ಲಿ ತನ್ನ ಸ್ನೇಹಿತೆಯರ ಜೊತೆಯಲ್ಲಿ ಕೆಲಸಕ್ಕೆ ಸೇರಿರುವುದಾಗಿ ತಿಳಿಸಿದ್ದು ನಂತರ ಈ ದಿನದ ವರೆಗೆ ಫೋನ್ ಮಾಡದೇ, ವಾಪಾಸು ಮನೆಗೆ ಬಾರದೇ ಕಾಣೆಯಾಗಿರುತ್ತಾಳೆ.
4. ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ರಸ್ತೆ ಅಪಘಾತ ಪ್ರಕರಣ: ದಿನಾಂಕ: 02.01.2014 ರಂದು ಮದ್ಯಾಹ್ನ ಸಮಯ ಸುಮಾರು 3:00 ಗಂಟೆಗೆ ಪಿರ್ಯಾದುದಾರರಾದ ಜನಾನಿ ಬಂಗೇರಾ ಎಂಬವರು ಮಂಗಳೂರು ನಗರದ ದಕ್ಕೆಗೆ ಮೀನು ತರಲೆಂದು ಸ್ಟೇಟ್ಬ್ಯಾಂಕ್ನಿಂದ ಒಂದು ಆಟೋರಿಕ್ಷಾದಲ್ಲಿ ಕುಳಿತು ಹ್ಯಾಮಿಲ್ಟನ್ ವೃತ್ತದಿಂದಾಗಿ ದಕ್ಕೆಗೆ ಹೋಗುತ್ತಿದ್ದಾಗ, ಸದ್ರಿ ಅಟೋರಿಕ್ಷಾವನ್ನು ಅದರ ಚಾಲಕನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಮಂಜೂರಾಮ್( ಗೇಟ್‌ವೇ) ಹೋಟೆಲ್ ಬಳಿ ತಲುಪುತ್ತಿದ್ದಂತೆ, ಕಾರೊಂದು ರಸ್ತೆಗೆ ಅಡ್ಡ ಬರುತ್ತಿದ್ದುದನ್ನು ಕಂಡು ನಾನು ಪ್ರಯಾಣಿಸುತ್ತಿದ್ದ ಅಟೋರಿಕ್ಷಾವನ್ನು ಅದರ ಚಾಲಕನು ಒಮ್ಮೆಲೆ ಬ್ರೇಕ್ ಹಾಕಿದ್ದರಿಂದ ಅಟೋರಿಕ್ಷಾವು ಮಗುಚಿ ಬಿದ್ದು, ಪಿರ್ಯಾದಿದಾರಳ ಬಲ ಮತ್ತು ಎಡ ಕಾಲಿನ ಮೊಣಗಂಟಿಗೆ ಹಾಗೂ ಬಾಯಿಗೆ ಗಾಯವಾದ್ದವರನ್ನು ಸದ್ರಿ ಚಾಲಕನು ಇನ್ನೊಂದು ರಿಕ್ಷಾದಲ್ಲಿ ಚಿಕಿತ್ಸೆಯ ಬಗ್ಗೆ ಯುನಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿರುವುದಾಗಿದೆ. ಅಪಘಾತದ ಗಡಿಬಿಡಿಯಲ್ಲಿ ಸದ್ರಿ ಅಟೋರಿಕ್ಷಾದ ಚಾಲಕನ ಹೆಸರು ಮತ್ತು ಅಟೋರಿಕ್ಷಾ ನಂಬ್ರ ನೋಡಲು ಆಗಿರುವುದಿಲ್ಲ.
5. ಮಂಗಳೂರು ಸಂಚಾರ ಪೂರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ರಸ್ತೆ ಅಪಘಾತ ಪ್ರಕರಣ: ದಿನಾಂಕ 29-12-2013 ರಂದು ಬೆಳಿಗ್ಗೆ ಸುಮಾರು 11.00 ಗಂಟೆಗೆ KSRTC ಬಸ್ಸು ನಂಬ್ರ KA19-F-2784 ನ್ನು ಅದರ ಚಾಲಕ ಕರಂಗಲ್ ಪಾಡಿ ಕಡೆಯಿಂದ ಬಂಟ್ಸ್ ಹಾಸ್ಟೆಲ್ ಕಡೆಗೆ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬಂಟ್ಸ್ ಹಾಸ್ಟೆಲ್ ಬಸ್ಸು ನಿಲ್ದಾಣದ ಬಳಿ ಮೋ.ಸೈಕಲ್ ನಂಬ್ರ KA19-Y-1592 ಕ್ಕೆ ಡಿಕ್ಕಿ ಮಾಡಿದ ಪರಿಣಾಮ ಮೋ.ಸೈಕಲ್ ಸವಾರ ಮೋ.ಸೈಕಲ್ ಸಮೆತ ರಸ್ತೆಗೆ ಬಿದ್ದು ಕಾಲುಗಳಿಗೆ ತರಚಿದ ಗಾಯ ಆಗಿರುತ್ತದೆ. ಬಸ್ಸು ಡಿಕ್ಕಿಯಿಂದ ಮೋ.ಸೈಕಲ್ ನಂಬ್ರ KA19-Y-1592 ಸಂಪೂರ್ಣ ಜಖಂಗೊಂಡಿರುತ್ತದೆ.
6. ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ದಿನಾಂಕ 01-01-2014 ರಂದು ರಾತ್ರಿ 7-00 ಗಂಟೆಗೆ ಪಿರ್ಯಾದಿದಾರರಾದ ಎಸ್.ವೀರಪ್ಪ ರವರು ಶಿವಶಕ್ತಿ ಭಜನಾ ಮಂದಿರದ ರಸ್ತೆಯಲ್ಲಿ ಹೋಗುತ್ತಿದ್ದಾಗ ಅಮ್ಮಿ ಶೆಟ್ಟಿ ಅಂಗಡಿಯ ಹತ್ತಿರ ಫೈಝಲ್ ಎಂಬಾತ ಮೋಟಾರು ಸೈಕಲಿನಲ್ಲಿ ಬಂದು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ತಲವಾರಿನಿಂದ ಹಲ್ಲೆಗೆ ಬಂದಾಗ ಪಿರ್ಯಾದಿದಾರರು ಅಲ್ಲಿಂದ ತಪ್ಪಿಸಿಕೊಂಡು ಮುಂದೆ ಓಡಿದಾಗ ನವಾಝ್ ಎಂಬವರ ಕ್ವಾಲಿಸ್ ವಾಹನದಲ್ಲಿ ಇಮ್ರಾಯಿ, ಲಂಬು ಹಮೀದ್, ಅಮ್ಮೀ, ಬೆಳ್ಳಿಮೋನು, ಸೈಫುಲ್ಲಾ ಎದುರುಪದವು, ಇಲಿಯಾಸ್, ನವಾಝ್, ನಾಸಿರ್ ನಿಸರ್ಗಧಾಮ, ಅಬ್ಬು ಶಾಲೆ ಪದವು, ಇಮ್ರಾನ್ ರವರು ಕ್ವಾಲಿಸ್ ವಾಹನದಿಂದ ಇಳಿದು ಹಲ್ಲೆಗೆ ಮುಂದಾಗಿ ಅವಾಚ್ಯ ಶಬ್ದಗಳಿಂದ ಪಿರ್ಯಾದಿದಾರರಿಗೆ ಬೈದು ಜೀವ ಬೆದರಿಕೆ ಹಾಕಿರುವುದಾಗಿದೆ
7. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ರಸ್ತೆ ಅಪಘಾತ ಪ್ರಕರಣ: ದಿನಾಂಕ 02-01-14 ರಂದು ಬೆಳಿಗ್ಗೆ ಪಿರ್ಯಾದಿದಾರರಾದ ದಿವಾಕರ ಎಂಬವರು ಕೆಲಸದ ನಿಮಿತ್ತ ಅವರ ಬಾಬ್ತು ಆಕ್ಟೀವ್ ಹೊಂಡಾ ನಂಬ್ರ ಕೆಎ-19-ಇಬಿ-1646 ನೇದರಲ್ಲಿ ಅವರ ಪರಿಚಯದ ಲಕ್ಷ್ಮಣ್ ಎಂಬವರನ್ನು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಮುಕ್ಕದಿಂದ ಚೇಳ್ಯಾರು ಕಡೆಗೆ ರಾ.ಹೆ.66 ರಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿದ್ದು ಬೆಳಿಗ್ಗೆ ಸುಮಾರು 06-30 ಗಂಟೆಗೆ ಮುಕ್ಕ ಚೆಕ್ ಪೋಸ್ಟ್ ಬಳಿ ತಲುಪುತ್ತಿದ್ದಂತೆ ಅವರ ಹಿಂದಿನಿಂದ ಪಿವೈ-03-6357ನೇ ಕಾರನ್ನು ಅದರ ಚಾಲಕ ನಾಸೀಮುದ್ದೀನ್ ಎಂಬವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರ್ ಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮತ್ತು ಲಕ್ಷ್ಮಣ್ ರವರು ರಸ್ತೆಗೆ ಬಿದ್ದು ಪಿರ್ಯಾದಿದಾರರಿಗೆ ಬೆನ್ನಿಗೆ, ಬಲ ಕೈಗೆ, ತಲೆಗೆ, ಹಾಗೂ ಲಕ್ಷ್ಮಣ್ ರವರಿಗೆ ಬಲಕೈ, ಎಡ ಕಾಲಿಗೆ, ಗಾಯವಾಗಿದ್ದು ಮಂಗಳೂರು ಎ.ಜೆ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಈ ಅಪಘಾತದಿಂದ ಪಿರ್ಯಾದಿದಾರರ ಸ್ಕೂಟರ್ ನ ಹಿಂದೆ ಜಖಂಗೊಂಡಿರುತ್ತದೆ
8. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ರಸ್ತೆ ಅಪಘಾತ ಪ್ರಕರಣ: ದಿನಾಂಕ: 02.01.2014 ರಂದು ರಾತ್ರಿ 02.15 ಗಂಟೆಗೆ ಪಿರ್ಯಾದಿದಾರರಾದ ಜಪ್ರೀತ್ ಎಂಬವರು ತನ್ನ ಸಹಪಾಟಿಗಳೊಂದಿಗೆ ನೀರುಮಾರ್ಗದಲ್ಲಿ ರೋಸ್ ಪಾರ್ಟಿಗೆ ಹೋಗಿ ಮರಳಿ ಮಂಗಳೂರು ಕಡೆಗೆ ಪಿರ್ಯಾಧಿದಾರರು ತನ್ನ ಕಾರಿನಲ್ಲಿ ಮಂಗಳೂರಿಗೆ ಬರುತ್ತಿರುವಾಗ ಅವರ ಸಹಪಾಟಿಗಳಾದ ಫ್ರಾನ್ಸಿಸ್ ರವರು ಕೆಎ-19-ಇಡಿ-6787 ನೇ ಮೋಟಾರ್ ಸೈಕಲ್‌ನಲ್ಲಿ ಶರ್ವಿನ್ ಎಂಬವರನ್ನು ಕುಳ್ಳಿರಿಸಿಕೊಂಡು ನೀರುಮಾರ್ಗದಿಂದ ಮಂಗಳೂರು ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಮೋಟಾರ್ ಸೈಕಲನ್ನು ಚಲಾಯಿಸಿಕೊಂಡು ಬರುತ್ತಾ ಪಾಲ್ದನೆ ಎಂಬಲ್ಲಿ ಹತೋಟಿ ತಪ್ಪಿ ರಸ್ತೆ ಬದಿಯ ಮರದ ಕಾಂಡಕ್ಕೆ ಡಿಕ್ಕಿಹೊಡೆದ ಪರಿಣಾಮ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಶರ್ವಿನ್ ರವರ ತಲೆಗೆ ಗುದ್ದಿದ ಗಾಯ ಮತ್ತು ಮುಖಕ್ಕೆ ತರಚಿದ ಗಾಯ ಮತ್ತು ಗಲ್ಲಕ್ಕೆ ಎಲುಬು ಮುರಿತದ ತೀವ್ರಗಾಯವಾಗಿರುವುದಾಗಿಯೂ ಅಲ್ಲದೆ ಫ್ರಾನ್ಸಿಸ್ ರವರ ಮೂಗಿಗೆ ಮತ್ತು ದವಡೆಗೆ ತೀವ್ರಗಾಯ ಮತ್ತು ತಲೆಗೆ ಗುದ್ದಿದ ಗಾಯವಾಗಿ ಆಸ್ಪತ್ರೆಗಳಲ್ಲಿ ಸ್ಮೃತಿ ಇಲ್ಲದೆ ಒಳರೋಗಿಯಾಗಿ ದಾಖಲಾಗಿರುವುದು.
9. ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ರಸ್ತೆ ಅಪಘಾತ ಪ್ರಕರಣ: ದಿನಾಂಕ 31-12-2013 ರಂದು ಫಿರ್ಯಾದಿದಾರರಾದ ಶ್ರೀ ಶ್ಯಾಮ್ ಅಂಚನ್ ಎಂಬವರು ಸಂಜೆ ವೇಳೆಗೆ ಕೆಲಸ ಬಿಟ್ಟು ಮನೆಗೆ ಹೋಗುವರೇ ಅಚ್ಚರ್ ಕಟ್ಟೆ ತಲುಪಿದಾಗ ಒಂದು ಬೈಕ್ ಅಪಘಾತ ಸಂಭ ವಿಸಿದ್ದು ಅವರಿಗೆ ಆರೈಕೆ ಮಾಡಿ ಕಳುಹಿಸಿಕೊಟ್ಟು ವಾಪಸ್ಸ್ ಬರುವಾಗ ಬನ್ನಡ್ಕ ರಾಘವೇಂದ್ರ ಸ್ವಾಮಿ ಮಠದ ಬಳಿ ನಡೆದುಕೊಂಡು ಬರುವ ಸಮಾಯ ಸಂಜೆ ಸುಮಾರು 6.30 ಗಂಟೆ ವೇಳೆಗೆ ಬೆಳುವಾಯಿ ಕಡೆಯಿಂದ ಕೆ ಎ 19 ಇಜಿ 1297 ನೇದರ ಸವಾರ ಸಹ ಸವಾರನನ್ನು ಕುಳ್ಳಿರಿಸಿಕೊಂಡು ಅತೀ ವೇಗ ಹಾಗೊ ನಿರ್ಲಕ್ಷತೆಯಿಂದ ಚಲಾಯಿಸಿಕೊಂಡು ಬಂದು ಹಿಂಬದಿಯಿಂದ ಡಿಕ್ಕಿ ಪಡೆದ ಪರಿಣಾಮ ರಸ್ತೆಗೆ ಬಿದ್ದು ಎಡ ಕಾಲಿನ ಕೋಲು ಕಾಲಿಗೆ ಗಂಭೀರ ರಕ್ತ ಗಾಯ ಎಡ ಕೆನ್ನೆಗೆ ತರಚಿದ ಗಾಯ ವಾಗಿದ್ದು ಬೈಕಿನಲ್ಲಿದ್ದವರಿಗೆ ಕೂಡ ಗಾಯ ವಾಗಿರುತ್ತದೆ ಚಿಕಿತ್ಸೆ ಯ ಬಗ್ಗೆ ಮಂಗಳೂರು ತೇಜಸ್ವೀನಿ ಅಸ್ಪತ್ರಯಲ್ಲಿ ದಾಖಲಾಗಿರುವುದಾಗಿದೆ.
10. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ಪಿರ್ಯಾದಿಧಾರರಾದ ಶ್ರೀಮತಿ ರೆನಿಟಾ ಡಿಸೋಜಾ ಎಂಬವರು ಸುರತ್ಕಲ್ ಗ್ರಾಮದ ಮುಂಚೂರು ಶ್ರೀನಿವಾಸ ನಗರ ಎಂಬಲ್ಲಿನ ವಾಸಿ ಇನಾಸ್ ಡಿಸೋಜಾ ಎಂಬವರೊಂದಿಗೆ ದಿನಾಂಕ 19-18-2002 ರಂದು ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ಆಗಿದ್ದು ತದ ನಂತರ ಪಿರ್ಯಾದಿದಾರರ ಗಂಡ 4 ವರ್ಷಗಳ ತನಕ ಒಳ್ಳೆಯ ರೀತಿಯಲ್ಲಿ ಸಂಸಾರ ಹೂಡಿದ್ದು 4 ವರ್ಷದ ಬಳಿಕ ಪಿರ್ಯಾದಿಗೆ ಖರ್ಚಿಗೆ ಸರಿಯಾಗಿ ಹಣ ಕೊಡದೇ ಕ್ಷುಲ್ಲಕ ಕಾರಣಕ್ಕೆ ಜಗಳ ಆಡುತ್ತಿದ್ದು ದಿನಾಂಕ 22-12-2013 ರಂದು ಪಿರ್ಯಾದಿದಾರರು ಮುಂಚೂರು ಮನೆಯಲ್ಲಿರುವಾಗ ಸಂಜೆ 5-00 ಗಂಟೆಗೆ ಪಿರ್ಯಾದಿ ಗಂಡ ಹಾಗೂ ಗಂಡನ ಅಣ್ಣ ನೋರ್ಬಟ್ ಎಂಬವರು ಸೇರಿ ಪಿರ್ಯಾದಿಯೊಂದಿಗೆ ವಿನಾಃ ಕಾರಣ ಗಲಾಟೆ ಮಾಡಿ ಪಿರ್ಯಾದಿಯನ್ನು ಹೊರಗೆ ಹಾಕಿ ಬಟ್ಟೆ ಬರೆಯನ್ನು ಅಂಗಳಕ್ಕೆ ಬಿಸಾಡಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿರುವುದಾಗಿದೆ.
11. ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಮೋಸೈಕಲ್ ಕಳವು ಪ್ರಕರಣ: ದಿನಾಂಕ 02-01-2014 ರಂದು ಫಿರ್ಯಾದಿದಾರರಾದ ಮನೋಜ್ ಕುಮಾರ್ ತಂಗಿಯನ್ನು ಬಸ್ಸಿಗೆ ಬಿಡಲು ಬಂದು ಮಂಗಳೂರಿನ ಹಳೆಯ ಬಸ್ ನಿಲ್ದಾಣದ ಬಳಿ ಹಣ್ಣು ಹಂಪಲು ಅಂಗಡಿ ಬಳಿ ಸಂಜೆ 7:00 ಗಂಟೆಗೆ ಫಿರ್ಯಾದಿದಾರರ ಬಾಬ್ತು ಕೆಎ-01-ಇಇ-4194 ನೇ ಹೋಂಡಾ ಯೂನಿಕಾರ್ನ ಬೈಕನ್ನು ಪಾರ್ಕ್ ಮಾಡಿದ್ದು ಬಳಿಕ ತಂಗಿಯನ್ನು ಬಸ್ಸಿಗೆ ಬಿಟ್ಟು ಸಂಜೆ 7:50 ಗಂಟೆಗೆ ವಾಪಾಸು ಬಂದು ನೋಡಲಾಗಿ ಪಾರ್ಕು ಮಾಡಿದ ಸ್ಥಳದಲ್ಲಿ ಬೈಕ್ ಇಲ್ಲದೇ ಇದ್ದು, ಆಸುಪಾಸಿನಲ್ಲಿ ವಿಚಾರಿಸಿಕೊಂಡು ಸಂಬಂಧಿಕರಲ್ಲಿ ವಿಚಾರಿಸಿಕೊಂಡು ಎಲ್ಲಾ ಕಡೆ ಹುಡುಕಾಡಿದ್ದು, ಎಲ್ಲೂ ಬೈಕ್ ಪತ್ತೆಯಾಗಿರುವುದಿಲ್ಲ. ಬೈಕಿಗೆ ಹ್ಯಾಂಡ್ ಲಾಕ್ ಮಾಡಿರುವುದಿಲ್ಲ. ಕಳವಾದ ಬೈಕಿನ ಅಂದಾಜು ಮೌಲ್ಯ ರೂ 28000/- ಆಗಬಹುದು.
12. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ರಸ್ತೆ ಅಪಘಾತ ಪ್ರಕರಣ: ದಿನಾಂಕ 02-01-2014 ರಂದು ಸಂಜೆ ಪಿರ್ಯಾದಿದಾರರಾದ ಪವನ್ ಎಂ. ಕುಳಾಯಿ ಶೆಟ್ಟಿ ಐಸ್ ಕ್ರೀಂ ಬಳಿ ಇದ್ದಾಗ ಅವರ ದೊಡ್ಡಪ್ಪ ಗೋವಿಂದರಾಜು ಎಂಬವರು ರಾ. ಹೆ. 66 ನ್ನು ದಾಟುವರೇ ರಾ. ಹೆ ಯ ಇನ್ನೊಂದು ಬದಿ ಪೂರ್ವ ದಿಕ್ಕಿನಲ್ಲಿ ರಸ್ತೆಯ ಬದಿಯಲ್ಲಿ ನಿಂತುಕೊಂಡು ಇರುವಾಗ ಸುರತ್ಕಲ್ ಕಡೆಯಿಂದ ಮಂಗಳೂರು ಕಡೆಗೆ ರಾ. ಹೆ 66 ರಲ್ಲಿ ಕೆಎ -19-ಇಹೆಚ್ - 7712 ನೇ ಮೊಟಾರ್ ಸೈಕಲನ್ನು ಅದರ ಸವಾರ ಪ್ರಶಾಂತ್ ಎಂಬವರು ಅತೀವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಿಂತಿದ್ದ ಗೋವಿಂದರಾಜುರವರಿಗೆ ಸಂಜೆ 5-15 ಗಂಟೆಗೆ ಡಿಕ್ಕಿಯಾಗಿ ಗೋವಿಂದರಾಜುರವರು ಮತ್ತು ಮೋಟಾರ್ ಸೈಕಲ್ ಸವಾರರು ರಸ್ತೆಗೆ ಬಿದ್ದು ಗೋವಿಂದರಾಜುರವರಿಗೆ ತಲೆಗೆ ಹಾಗೂ ಶರೀರಕ್ಕೆ ಗಂಬೀರ ಗಾಯಗೊಂಡು ಸವಾರರಿಗೂ ಗಾಯಗಳಾಗಿದ್ದು ಗೋವಿಂದರಾಜುರವರನ್ನು ಚಿಕಿತ್ಸೆಗೆ ಮುಕ್ಕದ ಶ್ರೀನಿವಾಸ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಎ ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಗೋವಿಂದರಾಜುರವರೆಗಿ ಚಿಕಿತ್ಸೆ ಪಲಕಾರಿಯಾಗದೇ ಸಂಜೆ 19-16 ಗಂಟೆಗೆ ಅವರು ಮೃತಪಟ್ಟಿರುವುದು.
No comments:
Post a Comment