ದೈನಂದಿನ ಅಪರಾದ ವರದಿ.
ದಿನಾಂಕ 10.01.2014 ರ 16:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ
|
:
|
0
|
ಕೊಲೆ ಯತ್ನ
|
:
|
0
|
ದರೋಡೆ ಪ್ರಕರಣ
|
:
|
0
|
ಸುಲಿಗೆ ಪ್ರಕರಣ
|
:
|
0
|
ಹಲ್ಲೆ ಪ್ರಕರಣ
|
:
|
0
|
ಮನೆ ಕಳವು ಪ್ರಕರಣ
|
:
|
0
|
ಸಾಮಾನ್ಯ ಕಳವು
|
:
|
1
|
ವಾಹನ ಕಳವು
|
:
|
0
|
ಮಹಿಳೆಯ ಮೇಲಿನ ಪ್ರಕರಣ
|
:
|
0
|
ರಸ್ತೆ ಅಪಘಾತ ಪ್ರಕರಣ
|
:
|
5
|
ವಂಚನೆ ಪ್ರಕರಣ :
|
:
|
0
|
ಮನುಷ್ಯ ಕಾಣೆ ಪ್ರಕರಣ
|
:
|
0
|
ಇತರ ಪ್ರಕರಣ
|
:
|
1
|
2.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09-01-2014 ರಂದು ಬೆಳಿಗ್ಗೆ ಸುಮಾರು 10-45 ಗಂಟೆಗೆ ಪದವು ಜಂಕ್ಷನ್ ಕಡೆಯಿಂದ ನಂತೂರು ಜಂಕ್ಷನ್ ಕಡೆಗೆ ಎನ್.ಹೆಚ್. 66 ರಸ್ತೆಯಲ್ಲಿ ಬಸ್ಸು ನಂಬ್ರ KA-20-D-117ನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿ ಕೊಂಡು ಬಂದು ನಂತೂರು ಜಂಕ್ಷನ್ ಬಳಿ ಇರುವ ಬಬ್ಬು ಸ್ವಾಮಿ ದೈವಸ್ಥಾನದ ಎದುರು ತಲುಪುವಾಗ ಮುಂದಿನಿಂದ ಹೋಗುತ್ತಿದ್ದ ಲಾರಿ ನಂಬ್ರ KA-19-AB-595ರ ಹಿಂಬಾಗಕ್ಕೆ ಡಿಕ್ಕಿ ಮಾಡಿದ ಪರಿಣಾಮ ಲಾರಿಯ ಹಿಂಭಾಗ, ಬಸ್ಸಿನ ಮುಂಭಾಗ ಜಖಂ ಗೊಂಡಿದ್ದು, ಡಿಕ್ಕಿ ಮಾಡಿದ ಬಸ್ಸಿನಲ್ಲಿ ಪ್ರಯಾಣಿಕರಾಗಿದ್ದ ಶ್ರೀಮತಿ ಸವಿತ ಮುಖಕ್ಕೆ ರಕ್ತ ಗಾಯಗೊಂಡು ಎ.ಜೆ. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ.
3. ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09/01/2014 ರಂದು ರಾತ್ರಿ ಸುಮಾರು 22.30 ಗಂಟೆಗೆ ಮೋಟಾರು ಸೈಕಲ್ ನಂಬ್ರ KA19-EA-4761 ನ್ನು ಅದರ ಸವಾರ ಅಭಿ ಎಂಬುವರು ಬಂಟ್ಸ್ ಹಾಸ್ಟೆಲ್ ಜಂಕ್ಷನ್ ಕಡೆಯಿಂದ ಕರಂಗಲಪಾಡಿ ಜಂಕ್ಷನ್ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಅತೀ ವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂಟ್ಸ್ ಹಾಸ್ಟೆಲ್ ಬಳಿಯಿರುವ ಕಾಮತ್ ಎಂಡ್ ರಾವ C A ಕಚೇರಿ ಎದುರು ರಸ್ತೆಯ ತೀರಾ ಎಡಭಾಗದಲ್ಲಿ ಚಲಾಯಿಸಿ ಪಾದಚಾರಿ ಉಮೇಶ ಎಂಬುವರಿಗೆ ಡಿಕ್ಕಿ ಮಾಡಿದ ಪರಿಣಾಮ ಉಮೇಶ ಕುಮಾರರ ಬಲಕಾಲಿಗೆ ಗಂಭಿರ ಸ್ವರೂಪದ ಗಾಯ ಸವಾರ ಅಭಿ ಅವರಿಗೆ ಸಾದಾ ಸ್ವರೂಪದ ಗಾಯಗೊಂಡು ತೇಜಸ್ವಿನಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ.
4. ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 08.01.2014 ರಂದು ರಾತ್ರಿ ಸುಮಾರು 10.45 ಗಂಟೆ ಸಮಯಕ್ಕೆ ಪಿರ್ಯಾದುದಾರ ಶ್ರೀಮತಿ ಸುಜಾತಾ ರವರ ಗಂಡ ಕಿಶೋರ್ ಕುಮಾರ್ ಪ್ರಾಯ: 49 ವರ್ಷ ರವರು ತಮ್ಮ ಬಾಬ್ತು ಆಟೋರಿಕ್ಷಾ ನಂಬ್ರ KA-19-B-4268 ನೇದನ್ನು ಮಂಗಳೂರು ನಗರದ ಕೆ.ಎಸ್.ಆರ್. ರಸ್ತೆಯಲ್ಲಿ ಹಂಪನ ಕಟ್ಟೆ ವೃತ್ತದ ಕಡೆಯಿಂದ ಚಲಾಯಿಸಿಕೊಂಡು ಬಂದು ಹೋಟೆಲ್ ಪೂಂಜಾ ಇಂಟರ್ ನ್ಯಾಷನಲ್ ನ ಮುಂದುಗಡೆ ಸಾರ್ವಜನಿಕ ಕಾಂಕ್ರೀಟ್ ರಸ್ತೆಯಲ್ಲಿ ತನ್ನ ಬಾಬ್ತು ಆಟೋರಿಕ್ಷಾವನ್ನು ಹಳೇ ಬಸ್ ನಿಲ್ದಾಣದ ಕಡೆಗೆ ಬಲ ಬದಿಗೆ ತಿರುಗಿಸುವ ಇಂಡಿಕೇಟರ್ ಬಳಸಿ, ಆಟೋರಿಕ್ಷಾವನ್ನು ಬಲಬದಿಗೆ ತಿರುಗಿಸಿ ರಸ್ತೆಯ ತೀರಾ ಎಡ ಬದಿಗೆ ತಲುಪಿದಾಗ ಸಿಟಿ ಸೆಂಟರ್ ಕಡೆಯಿಂದ ಹಂಪನಕಟ್ಟೆ ಕಡೆಗೆ KA-19-EJ-3868 ನೇ ನಂಬ್ರದ ಮೋಟಾರ್ ಸೈಕಲನ್ನು ಅದರ ಸವಾರ ಅತಿ ವೇಗ ಮತ್ತು ತೀರಾ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಸದ್ರಿ ಆಟೋರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸದ್ರಿ ಆಟೋರಿಕ್ಷಾ ಚಾಲಕರು ಆಟೋರಿಕ್ಷಾ ಸಮೇತರಾಗಿ ರಸ್ತೆಗೆ ಬಿದ್ದುದರಿಂದ ಆಟೋರಿಕ್ಷಾ ಚಾಲಕ ಕಿಶೋರ್ ಕುಮಾರ್ ರವರರ ಬಲ ಕಾಲಿನ ಹೆಬ್ಬೆರಳಿಗೆ ಮೂಳೆ ಮುರಿತದ ಗಾಯ, ಪಾದಕ್ಕೆ ರಕ್ತ ಗಾಯ ಹಾಗೂ ಬಲ ಕಾಲಿನ ಮಣಿಗಂಟಿಗೆ ಗುದ್ದಿದ ಸ್ವರೂಪದ ಗಾಯವಾದವರನ್ನು ಸ್ಥಳದಲ್ಲಿಯೇ ಇದ್ದ ಸಾರ್ವಜನಿಕರು ಅತ್ತಾವರ ಕೆ.ಎಂ.ಸಿ. ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿರುವುದಾಗಿದೆ.
5. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 21-12-13 ರಂದು ರಾತ್ರಿ ಸುಮಾರು 10-00 ಗಂಟೆಗೆ ಆರೋಪಿಗಳು ಪಿರ್ಯಾದಿದಾರರಾದ ಶ್ರೀಮತಿ ವಿಶಾಲಾ ರವರ ಮನೆಗೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿದ್ದು ಆರೋಪಿಗಳಾದ ಮೀನಾಕ್ಷಿ , ಲೀಲಾ, ಬಾಬು, ಮಧುಸೂಧನ್ ಇವರುಗಳು ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ್ದಲ್ಲದೆ ಉಳಿದ ಆರೋಪಿಗಳು ಕೂಡಾ ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿದಾರರನ್ನು ಬಲಾತ್ಕಾರವಾಗಿ ಮನೆಯಿಂದ ಹೊರಗಡೆ ಎಳೆದುಕೊಂಡು ಹೋಗಿ ಆಟೋ ರಿಕ್ಷಾ ನಂಬ್ರ ಕೆಎ-19-ಡಿ-6584 ರಲ್ಲಿ ಕೂರಿಸಿಕೊಂಡು ಚಿತ್ರ ಹಿಂಸೆ ನೀಡಿರುವುದಾಗಿದೆ.
6. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 21-12-13 ರಂದು ರಾತ್ರಿ ಸುಮಾರು 11-30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಪುಷ್ಪಲತಾ ರವರ ಮಾಲಕತ್ವದ ಟಾಟಾ ವಿಂಗರ್ ಅಂಬುಲೆನ್ಸ್ ವಾಹನ ಕೆಎ-20-ಸಿ-9259 ನೇದನ್ನು ಅದರ ಚಾಲಕ ಅರುಣ್ ಕುಮಾರ್ ಎಂಬವರು ಮಂಗಳೂರು-ಉಡುಪಿ ರಾ.ಹೆ,66 ರ ರಸ್ತೆಯಲ್ಲಿ ಚಲಾಯಿಸಿಕೊಂಡು ಬರುತ್ತಾ ಸುರತ್ಕಲ್ ಗ್ರಾಮದ ಎನ್ ಐಟಿಕೆ ಬಳಿ ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿಯ ತಡೆ ಗೋಡೆಗೆ ಢಿಕ್ಕಿ ಹೊಡೆದ ಪರಿಣಾಮ ಸದ್ರಿ ಅಂಬುಲೆನ್ಸ್ ನ ಎಡ ಭಾಗದ ಬಾಡಿ, ಎದುರು ಶೇಪ್, ಇಂಜಿನ್ , ಗ್ಲಾಸ್, ಬಂಪರ್ ಹಾಗೂ ಎಡ ಬದಿಯ ಹೆಡ್ ಲೈಟ್ ಜಖಂಗೊಂಡಿರುವುದಾಗಿದೆ.
7. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 08-01-14 ರಂದು ಸಂಜೆ 5-30 ಗಂಟೆಗೆ ಮಂಗಳೂರು ತಾಲೂಕು ಹೊಸಬೆಟ್ಟು ಗ್ರಾಮದ ಹೊಸಬೆಟ್ಟು ಜಂಕ್ಷನ್ ಬಳಿ ಅಭಯ ಮಾರ್ಬಲ್ ಅಂಗಡಿಯ ಎದುರು ರಾ.ಹೆ.66ರ ರಸ್ತೆ ಬದಿಯಲ್ಲಿ ಪಿರ್ಯಾದಿದಾರರಾದ ರಾಕೇಶ್.ಕೆ.ಆರ್ ಹಾಗೂ ಅವರ ತಂದೆ ರಮೇಶ್ ಭಟ್ ಇವರು ರಸ್ತೆ ದಾಟುವರೇ ನಿಂತುಕೊಂಡಿದ್ದ ಸಮಯ ಸುರತ್ಕಲ್ ಕಡೆಯಿಂದ ಮಂಗಳೂರು ಕಡೆಗೆ ಕೆಎ-20-ಸಿ-7662 ನೇ ಟಿಪ್ಪರ್ ಲಾರಿಯನ್ನು ಅದರ ಚಾಲಕ ರವಿ ಎಂಬಾತನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಮೇಶ್ ಭಟ್ ರವರಿಗೆ ಢಿಕ್ಕಿ ಹೊಡೆಸಿದ ಪರಿಣಾಮ ಅವರ ಹಣೆಗೆ ಹಾಗೂ ಕೈಗೆ ಗಾಯವಾಗಿದ್ದು ಮಂಗಳೂರು ಎ.ಜೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುವುದು.
No comments:
Post a Comment