Tuesday, January 28, 2014

Daily Crime Reports 26-01-2014 & 27-01-2014

ದೈನಂದಿನ ಅಪರಾದ ವರದಿ.

ದಿನಾಂಕ 27.01.201416:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

1

ಹಲ್ಲೆ ಪ್ರಕರಣ   

:

3

ಮನೆ ಕಳವು ಪ್ರಕರಣ

:

3

ಸಾಮಾನ್ಯ ಕಳವು

:

0

ವಾಹನ ಕಳವು

:

1

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

12

ವಂಚನೆ ಪ್ರಕರಣ        

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

2

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1. ಉರ್ವಾ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದುದಾರರ ಸ್ನೇಹಿತರಾದ ಶ್ರೀ ವಿನೋದ್ ಸಿ ಡಿ'ಸೋಜಾ, ತಂದೆ: ದಿ ವಿಕ್ಟರ್ಜಾನ್ ಡಿ'ಸೋಜಾ, ವಾಸ: ಕೊಟ್ಟಾರ ಕ್ರಾಸ್, ಮಂಗಳೂರು ರವರು ಸುಮಾರು 15 ವರ್ಷದಿಂದ ವಿದೇಶದಲ್ಲಿದ್ದು ಅವರು ಕೆ. 19 ಆರ್‌ 5714 ಹೊಂಡಾ ಆಕ್ಟೀವಾ ದ್ವಿಚಕ್ರ ವಾಹನದ ಮಾಲಕರಾಗಿರುತ್ತಾರೆ. ಅವರು ವಿದೇಶದಿಂದ ಇಲ್ಲಿಗೆ ಬರುವ ವೇಳೆ ಸದ್ರಿ ವಾಹನ ಉಪಯೋಗಿಸುತ್ತಿದ್ದು ವಾಪಾಸ್ಸು ಹೋದಾಗ ಅದನ್ನು ಫಿರ್ಯಾದುದಾರರ ವಶಕ್ಕೆ ನೀಡಿ ಹೋಗುತ್ತಿದ್ದು ಅದನ್ನು ಅವರು ದೈನಂದಿನ ಕೆಲಸ ಕಾರ್ಯಗಳಿಗೆ ಹೋಗಲು ಬಳಸುತ್ತಿದ್ದರು. ದಿನಾಂಕ 21-01-2014 ರಂದು ಫಿರ್ಯಾದುದಾರರು ನಂತೂರಿನಲ್ಲಿ ಕೆಲಸ ಮುಗಿಸಿ ವಾಪಾಸ್ಸು ಮನೆಗೆ ಸದ್ರಿ ಹೊಂಡಾ ಆಕ್ಟೀವಾ ಸ್ಕೂಟರ್ನಲ್ಲಿ ರಾತ್ರಿ 10-30 ಗಂಟೆಗೆ ಮನೆಯ ಕೌಂಪೌಂಡ್ನೊಳಗೆ ಪಾರ್ಕ್ಮಾಡಿ ಎರಡನೇ ಅಂತಸ್ತಿನಲ್ಲಿರುವ ಮನೆಯ ಒಳಗೆ ಹೋಗಿದ್ದು ಮರು ದಿನ ಅಂದರೆ ದಿ 22-01-2014 ರಂದು ಬೆಳಿಗ್ಗೆ   08-30 ಗಂಟೆಗೆ ಮಗಳನ್ನು ಶಾಲೆಗೆ ಬಿಡಲು ಮಹಡಿಯಿಂದ ಕೆಳಗೆ ಇಳಿದು ಪಾರ್ಕಿಂಗ್ಮಾಡಿದ ಜಾಗಕ್ಕೆ ಬಂದು ನೋಡಿದಾಗ ಸದ್ರಿ ವಾಹನವನ್ನು  ಯಾರೋ ಕಳ್ಳರು ಕಳವು ಮಾಡಿರುವುದು ಗಮನಕ್ಕೆ ಬಂದಿದ್ದು ಹಾಗೂ ಸದ್ರಿ ವಾಹನಕ್ಕೆ ಸಂಬಂಧಿಸಿದ ಮೂಲ ದಾಖಲಾತಿಗಳಾದ  ಆರ್‌.ಸಿ ಮತ್ತು ಇನ್ಸುರೆನ್ಸ್‌‌ನ ಕಾಗದಗಳು ಸದ್ರಿ ವಾಹನದ ಸೀಟಿನ ಕೆಳಗಡೆ ಇಟ್ಟಿರುವುದಾಗಿದೆ.

 

2. ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 25/01/2014  ರಂದು 17.00 ಗಂಟೆಗೆ ಕಾರ್ನಾಡು ಗ್ರಾಮದ ಲಿಂಗಪ್ಪಯ್ಯಕಾಡು ಅಂಬಿಕಾ ಸ್ಟೋರ್ ಬಳಿಯಲ್ಲಿ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಿ ಮಟ್ಕಾ ಹಣವನ್ನು ಸಂಗ್ರಹಿಸುತ್ತಿದ್ದವನನ್ನು ಮುಲ್ಕಿ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ಕೆ. ರಾಮಚಂದ್ರ ನಾಯಕ್ ರವರು ಸಿಬ್ಬಂದಿಗಳ ಜೊತೆ ದಾಳಿ ಮಾಡಿ ಆರೋಪಿಗಳಾದ ಬಸವರಾಜ್ ಮತ್ತು ಲಿಯೋ ಎಂಬವರನ್ನು ದಸ್ತಗಿರಿ ಮಾಡಿ ಮಟ್ಕಾ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 860/- ಮಟ್ಕಾ ಸಂಖ್ಯೆಗಳನ್ನು ಬರೆದಿರುವ ಬಿಳಿ ಹಾಳೆ -1, ಮಟ್ಕಾ ಸಂಖ್ಯೆಗಳನ್ನು ಬರೆಯಲು ಉಪಯೋಗಿಸಿದ ಪೆನ್ನು-1, ಇವುಗಳನ್ನು ಸ್ವಾಧೀನಪಡಿಸಿಕೊಂಡಿದ್ದು, ಅರೋಪಿಗಳು ಮಟ್ಕಾ ಜೂಜಾಟಕ್ಕಾಗಿ ಹಣವನ್ನು ಸಂಗ್ರಹಿಸಿ ಆರೋಪಿ ಲಿಯೋ ಎಂಬಾತನಿಗೆ ನೀಡುತ್ತಿರುವುದಾಗಿದೆ

 

3. ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 25/01/2014  ರಂದು 19.30 ಗಂಟೆಗೆ ಕಾರ್ನಾಡು ಗ್ರಾಮದ ಕೊಲ್ನಾಡು ಕೈಗಾರಿಕಾ ಪ್ರದೇಶದ ಬಳಿ ಇರುವ ಪಾಳು ಬಿದ್ದ ಶೆಡ್ ನಲ್ಲಿ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಿ ಮಟ್ಕಾ ಹಣವನ್ನು ಸಂಗ್ರಹಿಸುತ್ತಿದ್ದವನನ್ನು ಮುಲ್ಕಿ ಠಾಣಾ ಪೊಲೀಸ್ ನಿರೀಕ್ಷಕರುವರು ಸಿಬ್ಬಂದಿಗಳ ಜೊತೆ ದಾಳಿ ಮಾಡಿ ಆರೋಪಿಯನ್ನು ದಸ್ತಗಿರಿ ಮಾಡಿ ಮಟ್ಕಾ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 620/- ಮಟ್ಕಾ ಸಂಖ್ಯೆಗಳನ್ನು ಬರೆದಿರುವ ಬಿಳಿ ಹಾಳೆ -1, ಮಟ್ಕಾ ಸಂಖ್ಯೆಗಳನ್ನು ಬರೆಯಲು ಉಪಯೋಗಿಸಿದ ಪೆನ್ನು-1, ಇವುಗಳನ್ನು ಸ್ವಾಧೀನಪಡಿಸಿಕೊಂಡಿದ್ದು, ಅರೋಪಿ ಮಟ್ಕಾ ಜೂಜಾಟಕ್ಕಾಗಿ ಹಣವನ್ನು ಸಂಗ್ರಹಿಸಿ ಆರೋಪಿ ಲಿಯೋ ಎಂಬಾತನಿಗೆ ನೀಡುತ್ತಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ

 

 

4. ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 24.01.2014 ರಂದು ಪಿರ್ಯಾದುದಾರರಾದ ಶ್ರೀ ಶ್ರೀನಿವಾಸ್ ರಾವ್ ರವರು ತಮ್ಮ ಕಾರ್ಯದ ನಿಮಿತ್ತ ಮಂಗಳೂರು ನಗರದ ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣಕ್ಕೆ ಹೋಗಿ ವಾಪಾಸ್ಸು ಮನೆಗೆ ಹೋಗುವರೇ 47A ರೂಟ್ ನಂಬ್ರದ ಸಿಟಿ ಬಸ್ಸಿನ ಹಿಂದುಗಡೆ ಸೀಟಿನಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಸಮಯ ಕೆ.ಎಸ್.ಆರ್.ಟಿ.ಸಿ - ಕುಂಟಿಕಾನ ರಸ್ತೆಯಲ್ಲಿ ಬಸ್ಸನ್ನು ಅದರ ಚಾಲಕರು ಅತೀವೇಗ ಮತ್ತು ತೀರಾ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಹೋಗುತ್ತಾ ಬಿಜೈ ಕಾಪಿಕಾಡು ಬಳಿ ಇರುವ ಪೆಟ್ರೋಲ್ ಬಂಕ್ ಎದುರು ರಸ್ತೆಗೆ ಅಳವಡಿಸಿದ್ದ ಹಂಪ್ಸ್ ಬಳಿ ತಲುಪುತ್ತಿದ್ದಂತೆ 11:30 ಗಂಟೆ ಸಮಯಕ್ಕೆ ಸದ್ರಿ ಬಸ್ಸಿನ ಚಾಲಕರು ಬಸ್ಸಿಗೆ ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ಪಿರ್ಯಾದುದಾರರು ಬಸ್ಸಿನ ಒಳಗಡೆ ಬಿದ್ದು ಅವರ ಬೆನ್ನು ಮೂಳೆಗೆ (ಹುರಿ) ಗುದ್ದಿದ ನೋವು ಉಂಟಾದವರು ಚಿಕಿತ್ಸೆಯ ಬಗ್ಗೆ ನಗರದ ಎ.ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲುಗೊಂಡಿರುವುದು ಅಲ್ಲದೇ ಸದ್ರಿ ಅಪಘಾತದ ಸಮಯ ಬಸ್ಸಿನ ಚಾಲಕರು ಗಾಯಾಳು ಪಿರ್ಯಾದುದಾರರನ್ನು ಬಸ್ಸಿನಿಂದ ಇಳಿಸಿ ಸೀದಾ ಪರಾರಿಯಾಗಿರುವುದು.

 

5. ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 25.01.2014 ರಂದು ಪಿರ್ಯಾದುದಾರರಾದ ಶ್ರೀ ಎಲ್. ಸಾಗರ್ ರವರು ಮಂಗಳೂರು ನಗರದ ಕೊಟ್ಟಾರ ಚೌಕಿ ಎಂಬಲ್ಲಿಂದ ಕೋಡಿಕಲ್ ಕಡೆಗೆ ಹೋಗುವ KA-19-D-6829ನೇ ನಂಬ್ರದ (ROUT NO 1B) ಬಸ್ಸಿಗೆ ಹತ್ತಿ ಬಸ್ಸಿನಲ್ಲಿ ಮಿತಿ ಮೀರಿದ ಜನ ವಿರುವ ಕಾರಣ ಸದ್ರಿ ಬಸ್ಸಿನ ಒಳಗಡೆ ಹೋಗಲು ಸಾದ್ಯವಾಗದೇ ಬಸ್ಸಿನ ಹಿಂಭಾಗದ ಫೂಟ್ ಬೋರ್ಡಿನಲ್ಲಿ ನಿಂತು ಕೊಂಡು ಪ್ರಯಾಣಿಸುತ್ತಿರುವ ಸಮಯ ಸುಮಾರು 1:00 ಗಂಟೆಗೆ ಧನುಷ್ ಹೋಟೆಲ್ ಎದುರುಗಡೆ ಇಕ್ಕಟ್ಟಾದ ರಸ್ತೆಯ ಎಡಬದಿಯಲ್ಲಿ ರಸ್ತೆ ಮತ್ತು ಫೂಟ್ ಪಾತಿನಲ್ಲಿ KA-19-48-5683ನೇ ನಂಬ್ರದ ಲಾರಿಯನ್ನು ನಿಲ್ಲಿಸಿದ್ದರೂ ಕೂಡಾ ಬಸ್ಸನ್ನು ಅದರ ಚಾಲಕರು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿ ಪಿರ್ಯಾದುದಾರರಿಗೆ ತಾಗಿದ ಪರಿಣಾಮ ಪಿರ್ಯಾದುದಾರರು ಲಾರಿ ಮತ್ತು ಬಸ್ಸಿನ ಮಧ್ಯೆ ಸಿಲುಕಿ ಪಿರ್ಯಾದುದಾರರ ಬಲ ಕೆನ್ನೆಗೆ ಮೂಳೆ ಮುರಿತದ ಮತ್ತು ಹಲ್ಲಿಗೆ ಜಖಂ ಹಾಗೂ ಎಡಕಿವಿ, ಎಡ ಹಣೆಗೆ ತರಚಿದ ಗಾಯ ಮತ್ತು ಎರಡೂ ಭುಜಗಳಿಗೆ ಗುದ್ದಿದ ಗಾಯಗೊಂಡವರನ್ನು ಬಸ್ಸಿನ ನಿರ್ವಾಹಕರು ಚಿಕಿತ್ಸೆಯ ಬಗ್ಗೆ ನಗರದ ಎ.ಜೆ ಆಸ್ಪತ್ರೆಯಲ್ಲಿ ದಾಖಲುಗೊಳಿಸಿರುವುದು.

 

6. ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ  25.01.2014 ರಂದು   ಫಿರ್ಯಾದಿದಾರರಾದ ಆನಂದ ಗೌಡ ರವರು ಮದ್ಯಾಹ್ನ 1.30 ಗಂಟೆಗೆ  ಮೂಡಬಿದ್ರೆಯಲ್ಲಿ ನಡೆಯುವ  ಕಂಬಳ  ಉತ್ಸವಕ್ಕೆ  ತನ್ನ ಸಂಸಾರದೊಂದಿಗೆ ಮುಲ್ಕಿಯಿಂದ  ಮೂಡಬಿದ್ರೆ  ಹೋಗುವ  ಕೆಎ  19 ಡಿ 5877ನೇ ನಂಬ್ರದ ಬಲ್ಲಾಳ್ ಎಂಬ  ಬಸ್ಸಿನಲ್ಲಿ  ಹೋಗುತ್ತಾ  ಫಿರ್ಯಾದಿದಾರರು ಚಾಲಕನ  ಹಿಂಬದಿಯ 5ನೇ ಸೀಟಿನಲ್ಲಿ  ಬಲಬದಿಯ ಕಿಟಿಕಿ ಬದಿಯಲ್ಲಿ  ಪ್ರಯಾಣಿಕನಾಗಿ  ಕುಳಿತುಕೊಂಡಿದ್ದು ಸಮಯ ಸುಮಾರು  ಮದ್ಯಾಹ್ನ 1.45 ಗಂಟೆಗೆ   ಮಂಗಳೂರು ತಾಲೂಕು  ತಾಳಿಪ್ಪಾಡಿ ಗ್ರಾಮದ ಎಸ್.ಕೋಡಿಯಿಂದ  ಮುಂದಕ್ಕೆ  ಹೊಸಕಾವೇರಿ ಬಳಿ ತಲುಪುತ್ತಿದ್ದಂತೆ  ಕಿನ್ನಿಗೋಳಿ ಕಡೆಯಿಂದ  ಓರ್ವ ಟಾಟಾ ಏಸ್ ಟೆಂಪೋ ಚಾಲಕನು ತನ್ನ  ಟೆಂಪೋವನ್ನು ಅತೀ ವೇಗ  ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಾ ಬಂದು ಬಸ್ಸಿನ  ಬದಿಗೆ  ತಾಗಿಸಿಕೊಂಡು  ಬಸ್ಸಿನ  ಬಲಬದಿಯಲ್ಲಿ ಕುಳಿತಿದ್ದ  ಫಿರ್ಯಾದಿದಾರರ   ಬಲಕೈಗೆ  ಬಲವಾಗಿ ತಾಗಿಸಿದ್ದರ  ಪರಿಣಾಮ  ಫಿರ್ಯಾದಿದಾರರ   ಮೊಣಕೈಗೆ  ಬಲವಾದ  ಪೆಟ್ಟು ಬಿದ್ದು ರಕ್ತಗಾಯವಾಗಿದ್ದಾಗಿಯೂ ಅಪಘಾತ ಪಡಿಸಿದ  ಟಾಟಾ ಏಸ್ ಸವಾರನು  ತನ್ನ  ಟೆಂಪೋವನ್ನು  ನಿಲ್ಲಿಸಿದೇ  ಪರಾರಿಯಾಗಿದ್ದು ಅಲ್ಲದೇ  ಟಾಟಾಏಸ್  ಟೆಂಪೋದ  ನಂಬರ್  ತಿಳಿದಿಲ್ಲವಾಗಿರುತ್ತದೆ.

 

7. ಮಂಗಳೂರು ಪಶ್ಚಿಮ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 26.01.2014 ರಂದು ಪಿರ್ಯಾದುದಾರರಾದ ಶ್ರೀ ಸಂಜೀವ್ ಹೆಚ್. ಗೌಡ ರವರು ತಮ್ಮ ಸ್ನೇಹಿತ ದರ್ಶನ್ ಎಂಬವರ ಬಾಬ್ತು KA-13-EA-8118ನೇ ನಂಬ್ರದ ಬುಲೆಟ್ ಮೋಟಾರ್ ಸೈಕಲ್ಲಿನಲ್ಲಿ ಹಿಂಬದಿ ಸವಾರನಾಗಿ ಕುಳಿತು ಸದ್ರಿ ಮೋಟಾರ್ ಸೈಕಲ್ಲನ್ನು ಅಕ್ಷಯ್ ಎಂಬವರು ಮಂಗಳೂರು ನಗರದ ಕೆ.ಎಸ್.ಆರ್.ಟಿ.ಸಿ ಕಡೆಯಿಂದ ಕುಂಟಿಕಾನ ಕಡೆಗೆ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಾ ಕಾಪಿಕಾಡ್ ಪೆಟ್ರೋಲ್ ಬಂಕ್ ಬಳಿ ಸುಮಾರು 7:40 ಗಂಟೆ ಸಮಯಕ್ಕೆ ಸದ್ರಿ ಮೋಟಾರ್ ಸೈಕಲ್ ಜಂಪ್ ಆಗಿ ಸವಾರರು ಮೋಟಾರ್ ಸೈಕಲ್ ಮೇಲೆ ಹತೋಟಿ ತಪ್ಪಿ ರಸ್ತೆ ಬದಿಯ ಡಿವೈಡರಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು ಮತ್ತು ಸಹ ಸವಾರ ಇಬ್ಬರೂ ರಸ್ತೆಗೆ ಬಿದ್ದು ಪಿರ್ಯಾದುದಾರರ ಎರಡು ಕೈಗೆ, ಗಡ್ಡಕ್ಕೆ, ಬಲಬದಿ ಹಣೆಗೆ, ಬಲಕಣ್ಣಿನ ಬಳಿ ಸಾಮಾನ್ಯ ತರಚಿದ ಗಾಯ ಹಾಗೂ ಸವಾರ ಅಕ್ಷಯ್ ರವರ ತಲೆಗೆ ತೀವ್ರ ತರಹದ ಗಾಯಗೊಂಡವರು ಚಿಕಿತ್ಸೆಯ ಬಗ್ಗೆ ನಗರದ ಎ.ಜೆ ಆಸ್ಪತ್ರೆಯಲ್ಲಿ ದಾಖಲುಗೊಂಡವರು ಚಿಕಿತ್ಸೆ ಫಲಕಾರಿಯಾಗದೇ ಬೆಳಿಗ್ಗೆ 8:20 ಗಂಟೆಗೆ ಮೃತಪಟ್ಟಿರುವುದಾಗಿದೆ.

 

8. ಮಂಗಳೂರು ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 24-01-2014 18-30 ಗಂಟೆಯಿಂದ 25-01-2014 ರಂದು 11-30 ಗಂಟೆಯ ಮಧ್ಯೆ ಮಂಗಳೂರು ನಗರದ ಕಂಕನಾಡಿಯಲ್ಲಿರುವ ಎಲ್.ಪಿ.ಫೆರ್ನಾಂಡೀಸ್ ಕಟ್ಟಡದ 2ನೇ ಮಹಡಿಯಲ್ಲಿರುವ ಪಿರ್ಯಾದಿದಾರರಾದ ಶ್ರೀಮತಿ ಆಶಾ ಡಿ'ಸೋಜಾ ರವರ ಬಾಬ್ತು ಅಕೌಂಟೆಂಟ್ ಆಫೀಸಿನ ಬಾಗಿಲಿಗೆ ಹಾಕಿದ ಬೀಗವನ್ನು ಯಾರೋ ಕಳ್ಳರು ಹರಿತವಾದ ಆಯುಧವನ್ನು ಉಪಯೋಗಿಸಿ ಮೀಟಿ ತೆರೆದು ಒಳಪ್ರವೇಶಿಸಿ ಕಚೇರಿಯೊಳಗಿದ್ದ  ಕಾಂಪ್ಯಾಕ್ ಕಂಪನಿಯ ಲ್ಯಾಪ್ ಟಾಪ್-2 ಮತ್ತು ಇ-ಮೆಶಿನ್ ಕಂಪನಿಯ ಲ್ಯಾಪ್ ಟಾಪ್-1 ನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತುಗಳ ಅಂದಾಜು ಮೌಲ್ಯ 24,000/- ರೂ ಆಗಬಹುದು.

 

9. ಮಂಗಳೂರು ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನಾಂಕ 25/01/2014 ರಂದು ಬೆಳಗ್ಗೆ ಸುಮಾರು 8:00 ಗಂಟೆಗೆ ಕಾರು ನಂಬ್ರ KA-03-MA-2812 ನ್ನು ಅದರ ಚಾಲಕ ಬಿಜೈ ಕಡೆಯಿಂದ K P T ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಢು ಬಂದು ಬಿಜೈ ಮ್ಯೂಸಿಯಂ ಕ್ರಾಸ್ ರಸ್ತೆ ಬಳಿ ತಲುಪುವಾಗ ಮುಂದಿನಿಂದ ಹೋಗುತ್ತಿದ್ದ ಸ್ಕೂಟರ್ ನಂಬ್ರ KA-19-EB-2749 ಕ್ಕೆ ಡಿಕ್ಕಿ ಮಾಡಿದ ಪರಿಣಾಮ ಸ್ಕೂಟರನಲ್ಲಿದ್ದ ರಮೇಶ ಮತ್ತು ರಾಘವ ಮೆಂಡನ್ ರಸ್ತೆಗೆ ಬಿದ್ದು ರಮೇಶರವರ ಬಲಭುಜಕ್ಕೆ ಗುದ್ದಿದ ಗಾಯವಾಗಿ ವಿನಯ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾರೆ.

 

10. ಮಂಗಳೂರು ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 25-01-2014 ರಂದು ಬೆಳಿಗ್ಗೆ 09-30 ಗಂಟೆಯಿಂದ 16-30 ಗಂಟೆಯ ಮಧ್ಯೆ ಮಂಗಳೂರು ನಗರದ ನಂತೂರಿನ ಬಿ.ಆರ್ ಶೆಟ್ಟಿ ಕಂಪೌಂಡಿನಲ್ಲಿರುವ ಪಿರ್ಯಾದಿದಾರರಾದ ಶ್ರೀ ಪಿ.ಜಿ.ಅಚ್ಚುತ ರಾವ್ ರವರ ವಾಸ್ತವ್ಯದ ಮನೆಯ ಬಲಭಾಗದ ಕಿಟಕಿಯ ಮರದ ಗ್ರಿಲ್ ಗಳನ್ನು ಯಾವುದೋ ಹರಿತವಾದ ಆಯುಧವನ್ನು ಉಪಯೋಗಿಸಿ ಮುರಿದು ಒಳ ಪ್ರವೇಶಿಸಿದ ಯಾರೋ ಕಳ್ಳರು ಮನೆಯ ಬೆಡ್ ರೂಮಿನಲ್ಲಿ ಇರಿಸಿದ್ದ ಕಬ್ಬಿಣದ ಕಪಾಟನ್ನು ಹರಿತವಾದ ಆಯುಧದಿಂದ ಬಲಾತ್ಕಾರವಾಗಿ ಮೀಟಿ ತೆರೆದು ಕಪಾಟಿನಲ್ಲಿದ್ದ ವಿವಿಧ ನಮೂನೆಯ ಸುಮಾರು 216 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತುಗಳ ಅಂದಾಜು ಮೌಲ್ಯ ರೂ. 85,000/- ಆಗಬಹುದು.

 

11. ಮಂಗಳೂರು ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 25/01/2014 ರಂದು ಸಮಯ ಸುಮಾರು ಬೆಳಗ್ಗೆ 10:15 ಗಂಟೆಗೆ ಮೋಟರ್ ಸೈಕಲ್ ನಂಬ್ರ KA-19-EB-3036   ಅದರ ಸವಾರ ನಂತೂರು ಜಂಕ್ಷನ್ ಕಡೆಯಿಂದ ಮಹಾವೀರ ವೃತ್ತದ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ತಾರೇತೋಟ ಗ್ಯಾರೇಜ್ ಬಳಿ ತಲುಪುವಾಗ ರಸ್ತೆಯ ಎಡಭಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿ ವಸಂತಗೌಡನಿಗೆ ಡಿಕ್ಕಿ ಮಾಡಿದ ಪರಿಣಾಮ ವಸಂತಗೌಡ ರಸ್ತೆಗೆ ಬಿದ್ದು ತಲೆಗೆ ಗಂಭಿರ ಸ್ವರೂಪದ ಗಾಯ ಹಾಗೂ ಬಲಮುಂಗೈಗೆ ಸಾದಾ ಸ್ವರೂಪದ ಗಾಯ ಉಂಟಾಗಿ ಆಸ್ಪತ್ರೆ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ.

 

12. ಮಂಗಳೂರು ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 25-01-2014 ರಂದು ಸಂಜೆ 18-00 ಗಂಟೆಯಿಂದ ದಿನಾಂಕ 27-01-2014 ರಂದು ಬೆಳಿಗ್ಗೆ 09-00 ಗಂಟೆಯ ಮಧ್ಯೆ ಪಿರ್ಯಾದಿದಾರರಾದ ಸಮ್ಮಿ ಜೆ. ಅಮನ್ನಾ ರವರ ಬಾಬ್ತು ಮಂಗಳೂರು ನಗರದ ಬೆಂದೂರುವೆಲ್ ನಲ್ಲಿರುವ ಕರ್ನಾಟಕ ಅಯರ್ನ್ ವರ್ಕ್ಸ್ ಎಂಬ ಫ್ಯಾಕ್ಟರಿಯ ಹಿಂಬದಿಯ ಮೇಲ್ಛಾವಣಿಯ ಸಿಮೆಂಟ್ ಶೀಟನ್ನು ತೆಗೆದು ಒಳ ಪ್ರವೇಶಿಸಿದ ಕಳ್ಳರು, ಸದ್ರಿ ಸಂಸ್ಥೆಯ ಆಫೀಸಿನಲ್ಲಿದ್ದ  ಈ ಮೇಲೆ ನಮೂದಿಸಿದ ಅಂದಾಜು 48,000/- ರೂ. ಬೆಲೆ ಬಾಳುವ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ ಎಂಬಿತ್ಯಾದಿ.

 

 

13. ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 24-01-2014 ರಂದು ಸುಮಾರು 17:15 ಗಂಟೆಗೆ ಪಿರ್ಯಾದಿದಾರರು ಮಂಗಳೂರು ತಾಲೂಕು, ಮಾರ್ಪಾಡಿ ಗ್ರಾಮದ ಮೂಡಬಿದ್ರೆ ನಿಶ್ಮಿತಾ ಟವರ್ ಬಳಿ ನಿಂತಿದ್ದ ವೇಳೆ, ರಸ್ತೆಯ ಆಚೆ ಕಡೆ ಇರುವ ನವಮಿ ವ್ಯಾಪಾರ ಮಳಿಗೆಯಲ್ಲಿ ಪಿಗ್ಮಿ ಸಂಗ್ರಹ ಮಾಡಿ ರಸ್ತೆ ದಾಟುವರೇನಿಂತಿದ್ದ ನಾಗೇಶ್ ಪೈ ಎಂಬವರಿಗೆ ಕಾರ್ಕಳ ಕಡೆಯಿಂದ ಮಂಗಳೂರು ಕಡೆಗೆ ಕೆಎ-19-ಡಿ-1340 ನೇ ನಂಬ್ರದ ಗೂಡ್ಸ್ ರಿಕ್ಷಾ ಚಾಲಕ ನಿತಿನ್ ರಾಜ್ ಎಂಬವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆ ದಾಟಲು ನಿಂತಿದ್ದ  ನಾಗೇಶ ಪೈರವರಿಗೆ ಢಿಕ್ಕಿಯಾಗಿದ್ದು, ಪರಿಣಾಮ ರಸ್ತೆಗೆ ಬಿದ್ದ ನಾಗೇಶ ಪೈರವರ ತಲೆಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆಗಾಗಿ ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಎಜೆ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.

 

14. ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 24-01-2014 ರಂದು ಪಿರ್ಯಾದಿದಾರರಾದ ಶ್ರೀ ಅಧು ರವರು ಕೂಲಿ ಕೆಲಸ ಮುಗಿಸಿ ಕೊಡ್ಯಡ್ಕದಿಂದ ಮನೆಯ ಕಡೆ ಸೈಕಲ್ ನಲ್ಲಿ ಬರುತ್ತಾ ಸುಮಾರು 19:15 ಗಂಟೆಗೆ ಮಂಗಳೂರು ತಾಲೂಕು, ಪಡುಮಾರ್ನಾಡು  ಗ್ರಾಮದ ಬಸವನ ಕಜೆ ಎಂಬಲ್ಲಿಗೆ ತಲುಪುವಾಗ್ಗೆ, ಎದುರುಗಡೆಯಿಂದ ಅಂದರೆ  ಕಾರ್ಕಳ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಕೆಎ-19-ಎಂಬಿ-4559 ನೇ ನಂಬ್ರದ ಸ್ವಿಫ್ಟ್ ಕಾರನ್ನು ಅದರ ಚಾಲಕರಾದ ಅಹಮ್ಮದ್ ಅನ್ಸಾರ್ ಎಂಬವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಾ, ರಸ್ತೆಯ ತೀರಾ ಬಲಭಾಗಕ್ಕೆ ಬಂದು ಪಿರ್ಯಾದಿದಾರರಿಗೆ  ಢಿಕ್ಕಿಯಾಗಿದ್ದು, ಪರಿಣಾಮ ಸೈಕಲ್ ಸಮೇತ ರಸ್ತೆಗೆ ಬಿದ್ದ ಪಿರ್ಯಾದಿದಾರರ ಎರಡೂ ಕಾಲಿಗೆ, ಬೆನ್ನಿನ ಹಿಂಭಾಗಕ್ಕೆ, ತಲೆಯ ಹಿಂಬದಿಗೆ ಗುದ್ದಿದ ಗಾಯವಾಗಿದ್ದು, ಚಿಕಿತ್ಸೆಗಾಗಿ ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್  ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.

 

15. ಉಳ್ಲಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 24-01-2014 ರಂದು ಬೆಳಿಗ್ಗೆ 7-30 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು, ತಲಪಾಡಿ ಗ್ರಾಮದ ಕೆ.ಸಿ ರೋಡ್ಜಂಕ್ಷನ್ ರಾ.ಹೆ. 66 ರಲ್ಲಿ ಪಿರ್ಯಾದುದಾರರಾದ ಶ್ರೀ ದಿಲ್ವರ್ ಅಲಮ್ ಲಸ್ಕರ್ ರವರು ಕೆಎ 20 ಬಿ 8940 ನೇ ನಂಬ್ರ ಲಾರಿಯನ್ನು ಚಾಲಾಯಿಸಿಕೊಂಡು ಹೋಗುತ್ತಿದ್ದಾಗ ಅವರ ಮುಂದಿನ ಸತ್ಯನಾರಾಯಣ ಎಂಬವರು ಚಾಲಾಯಿಸಿಕೊಂಡು ಹೋಗುತ್ತಿದ್ದ ಕೆಎ 20 ಬಿ 8946 ನೇ ಲಾರಿಯನ್ನು ಯಾವುದೇ ಸೂಚನೆ ನೀಡದೇ ಅವರು ಒಮ್ಮಲೇ ನಿಲ್ಲಿಸಿದಾಗ, ಪಿರ್ಯಾದುದಾರರ ಲಾರಿಯ ಮುಂಭಾಗವು ಎದುರಿನ ಕೆಎ 20 ಬಿ 8946 ನೇ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆಯಿತು. ಈ ಪರಿಣಾಮ ಕೆಎ 20 ಬಿ 8940 ನೇ ಲಾರಿಯ ಮುಂಭಾಗವು ಸಂಪೂರ್ಣ ಜಖಂಗೊಂಡಿರುತ್ತದೆ.

 

16. ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನಾಂಕ 26-01-2014 ರಂದು ಬೆಳಿಗ್ಗೆ 11-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಜಿತೇಶ್ ರವರು ತನ್ನ ತಾಯಿ ಶ್ರೀಮತಿ ಪೂವಮ್ಮ ಹಾಗೂ ತಂಗಿ ದೀನಾಕ್ಷಿಯೊಂದಿಗೆ ತನ್ನ ಅಕ್ಕನ ಮನೆಗೆ ಹೋಗುವರೇ ವೆಲೆನ್ಸಿಯಾ ಜಂಕ್ಷನ್ ನಲ್ಲಿ  ಬಸ್ಸಿಗಾಗಿ  ಕಾಯುತ್ತಿರುವ ಸಮುಯ , ಅಲ್ಲಿಗೆ ಬಂದ ಪ್ರವೀಣ್ ಎಂಬಾತನು ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ನೀನು ಕೋರ್ಟಿನ ಬಳಿ ನನಗೆ ಯಾಕೆ ಬೆದರಿಕೆ ಹಾಕಿದ್ದು ಎಂದು  ಅವಾಚ್ಯ ಶಬ್ದಗಳಿಂದ ಬೈದು, ನಂತರ ಆತನ ಕೈಯಲ್ಲಿದ್ದ ಸೋಡಾ ಬಾಟ್ಲಿಯಿಂದ ಪಿರ್ಯಾದಿದಾರರ ತಲೆಯ ಎಡಬದಿಗೆ ಹೊಡೆದು ಎಡ ಕಿವಿಗೆ ರಕ್ತಗಾಯವನ್ನು ಮಾಡಿದಾಗ, ಪಿರ್ಯಾದಿದಾರರು  ಹಾಗೂ ಪಿರ್ಯಾದಿದಾರರ ಜೊತೆಯಲ್ಲಿದ್ದ ತಾಯಿ, ತಂಗಿಯು ಬೊಬ್ಬೆ ಹೊಡೆದಾಗ, ಪ್ರವೀಣನು ಅವಾಚ್ಯ ಶಬ್ದಗಳಿಂದ " ಕೊಂದು ಹಾಕುತ್ತೇನೆಂದು" ಬೆದರಿಕೆ ಹಾಕಿ ಅಲ್ಲಿಂದ ಓಡಿ ಹೋಗಿರುವುದಾಗಿದೆ.

 

17. ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 25-01-2014ರಂದು ಫಿರ್ಯಾದಿದಾರರಾದ ಶ್ರೀ ಮುರುಗೇಶ್ ರವರು ಅವರ ಬಾಬ್ತು  ಕೆಎ-21--1975ನೇ ಟಾಟಾ ಇಂಡಿಕಾ ಕಾರನ್ನು ಬೆಳ್ತಂಗಡಿಯಿಂದ ಬಜಪೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಸಂಜೆ ಸುಮಾರು 4-30 ಗಂಟೆಯ ಸಮಯಕ್ಕೆ ಪುತ್ತಿಗೆ ಗ್ರಾಮದ ಹಂಡೇಲು ತಿರುವು ಬಳಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಿರುವಾಗ ಮಂಗಳೂರು ಕಡೆಯಿಂದ ಮೂಡಬಿದ್ರಿ ಕಡೆಗೆ ಕೆಎ-19-ಡಿ-3669ನೇ ಟಿಪ್ಪರ್ಲಾರಿಯನ್ನು ಅದರ ಚಾಲಕ ನಝೀರ್ಎಂಬಾತನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ತಿರುವಿನಲ್ಲಿ ರಸ್ತೆಯ ತೀರಾ ಬಲ ಭಾಗಕ್ಕೆ ಚಲಾಯಿಸಿ ಢಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರ ಕಾರಿನ ಎದುರಿನ ಬಲ ಬದಿ ಸಂಪೂರ್ಣವಾಗಿ ಜಖಂಗೊಂಡು ರಸ್ತೆಯ ಬದಿಯಲ್ಲಿ ಬಿದ್ದಿದ್ದು, ಈ ಅಪಘಾತದಿಂದ ಯಾವುದೇ ಗಾಯವಾಗಿರುವುದಿಲ್ಲ.

 

18. ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26-01-2014 ರಂದು 16:30 ಗಂಟೆಗೆ ಪಿರ್ಯಾದಿದಾರರಾದ ಸಂತೋಷ ಟಿ.ವಿ. ಇವರು ಮಂಗಳೂರು ನಗರದ ಲೇಡಿಗೋಷನ್ ಆಸ್ಪತ್ರೆಯ ಎದುರುಗಡೆ ಇರುವಾಗ ನಾಲ್ಕು ಜನ ಯುವಕರು ಪಿರ್ಯಾದಿದಾರರ ಹತ್ತಿರಕ್ಕೆ ಬಂದು ಅವರುಗಳ ಪೈಕಿ ಇಬ್ಬರು ಪಿರ್ಯಾದಿದಾರರನ್ನು ಗಟ್ಟಿಯಾಗಿ ಹಿಡಿದುಕೊಂಡಾಗ ಇನ್ನಿಬ್ಬರು ಪಿರ್ಯಾದಿದಾರರಲ್ಲಿ "ನಿನ್ನಲ್ಲಿದ್ದ ಹಣವನ್ನು ಕೊಡು" ಎಂಬುದಾಗಿ ಬೆದರಿಸಿದ್ದು ಪಿರ್ಯಾದಿದಾರರು ನಿರಾಕರಿಸಿದಾಗ ನಾಲ್ಕು ಜನರ ಪೈಕಿ ಇಬ್ಬರು ಮುಖಕ್ಕೆ ಹಾಗೂ ಮೂಗಿಗೆ ಹೊಡೆದು ಪಿರ್ಯಾದಿದಾರರ ಪ್ಯಾಂಟಿನ ಹಿಂಭಾಗದ ಕಿಸೆಗೆ ಕೈಹಾಕಿ ಕಿಸೆಯಲ್ಲಿದ್ದ ನಗದು ಹಣ 1200/- ರೂಪಾಯಿ ಇದ್ದ ಪರ್ಸನ್ನು ಬಲಾತ್ಕಾರವಾಗಿ ತೆಗೆದಿದ್ದು ಅಲ್ಲದೆ ಪ್ಯಾಂಟಿನ ಮುಂಭಾಗದ ಬಲ ಭಾಗದ  ಕಿಸೆಯಲ್ಲಿದ್ದ ಅಂದಾಜು ರೂಪಾಯಿ 2000/- ಬೆಲೆ ಬಾಳುವ ನೋಕಿಯಾ ಕಂಪನಿಯ ಮೋಬೈಲ್ ಸೆಟ್-1 ಹಾಗೂ ಕೈಯಲ್ಲಿದ್ದ ಅಂದಾಜು ರೂಪಾಯಿ 1000/- ಬೆಲೆಬಾಳುವ ರೈನಿಸ್ ಕಂಪನಿಯ ವಾಚ್-1 ಇತ್ಯಾದಿ ಸ್ವತ್ತುಗಳನ್ನು ಬಲತ್ಕಾರವಾಗಿ ಹಲ್ಲೆ ನಡೆಸಿ ಸುಲಿಗೆ ಮಾಡಿಕೊಂಡು ಹೋಗಿದ್ದು ಸುಲಿಗೆಯಾದ ಸ್ವತ್ತುಗಳ ಒಟ್ಟು ಮೌಲ್ಯ 4,200/- ರೂಪಾಯಿ ಆಗಬಹುದು. ಘಟನೆಯಿಂದ ಪಿರ್ಯಾದಿದಾರರ ಮೂಗಿಗೆ ರಕ್ತ ಗಾಯವಾಗಿದ್ದು ಹಲ್ಲೆ ನಡೆಸಿದವರ ಪೈಕಿ ಒರ್ವನ ಹೆಸರು ದಿನೇಶ್ ಎಂಬುವನಾಗಿದ್ದು ಉಳಿದ ಮೂರು ಜನ ಆತನ ಸಹಚರರಾಗಿರುತ್ತಾರೆ.

 

19. ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರಾದ ಶ್ರೀ ನಾಜರಾಜ್ ಎಂಬವರು ಮಂಗಳೂರು ಸಿಟಿ ಸೆಂಟರ್ ಮಾಲ್ ನಲ್ಲಿ ಇರುವ ಅಂಚನ್ ಎಂಬ ಮಳಿಗೆಯಲ್ಲಿ ಸುಮಾರು 3 ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದು, ದಿನಾಂಕ 22-01-2014 ರಂದು ಕೆಲಸ ಮಾಡಿಕೊಂಡಿರುವಾಗ ಸುಮಾರು 15:30 ಗಂಟೆ ಸಮಯಕ್ಕೆ ಅಂಚನ್ ಮಳಿಗೆಯಲ್ಲಿ ಕೆಲಸ ಂಆಡುತ್ತಿದ್ದ ಲಕ್ಷ್ಮಣ ಎಂಬವರು ಮಳಿಗೆಯ ವಸ್ತುಗಳನ್ನು ಸರಿಯಾಗಿ ಜೋಡಿಸಿ ಇಡದೇ ಇದ್ದುದರಿಂದ ಪಿರ್ಯಾದಿದಾರರು ಆತನಲ್ಲಿ ಎಲ್ಲ ವಸ್ತುಗಳನ್ನು ನಿಟಾಗಿ ಜೋಡಸಲು ಹೇಳಿದ್ದು, ಅದಕ್ಕೆ ಲಕ್ಷ್ಮಣ ರವರು ಅವಾಚ್ಯ ಶಬ್ದಗಳಿಂದ ಬೈದು "ನನ್ನ ತಂಟೆಗೆ ಬರಬೇಡ" ಎಂದು ಹೇಳಿದಕ್ಕೆ ಪಿರ್ಯಾದಿದಾರರು ಸುಮ್ಮನಾಗಿ ಹೊರಗೆ ಹೋಗುತ್ತಿರುವ ಸಮಯ ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಕೈಯಿಂದ ಹೊಡೆದು ಮತ್ತು ಬಾಟ್ಲಿಯಿಂದ ಹೊಡೆಯಲು ಬಂದಾಗ ತಪ್ಪಿಕೊಂಡಿದ್ದು, ಅಲ್ಲೇ ಇದ್ದ ರುಣ್ ಎಂಬವರು ಬಿಡಿಸಲು ಬಂದಾಗ, ಆರೋಪಿ ಲಕ್ಷ್ಮಣ ರವರು "ನಿಮ್ಮನ್ನು ನೋಡಿಕೊಳ್ಳುತ್ತೇನೆ" ನಿಮ್ಮ ಕಾರನ್ನು ಹುಡಿ ಮಾಡುತ್ತೇನೆ ಎಂಬುದಾಗಿ ಹೇಳಿ ಹೋಗಿದ್ದು, ಇದರಿಂದ ಪಿರ್ಯಾದಿದಾರರಿಗೆ ಯಾವುದೇ ಗಾಯಗಳಾಗಿರುವುದಿಲ್ಲವಾಗಿ, ಪಿರ್ಯಾದಿದಾರರನ್ನು ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆ ಹಾಕಿದ್ದಾಗಿದೆ.

 

20. ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26/01/2014 ರಂದು ಬೆಳಿಗ್ಗೆ 06.35 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಅಹಮ್ಮದ್ ಬಾವಾ ರವರ ತಂಗಿ ಮೈಮುನಾ ಎಂಬವರ ಮಗ ಮಹಮ್ಮದ್ ಆರೀಸ್ 26 ವರ್ಷ ಎಂಬವರು ಕೃಷ್ಣಾಪುರದ ಅಕ್ಕನ ಮನೆಗೆ ಹೋಗುವರೇ ತನ್ನ ಬಾಬ್ತು ಮೋಟಾರು ಸೈಕಲ್ ನಂಬ್ರ KA 19 ED 3614 ನೇದರಲ್ಲಿ ಹೊರಟು ಕೈಕಂಬ ಕಡೆಗೆ ಹೋಗುತ್ತಾ ಬೆಳಿಗ್ಗೆ ಸುಮಾರು 06.50 ಗಂಟೆಗೆ ಮಂಗಳೂರು ತಾಲೂಕು ತೆಂಕುಳಿಪಾಡಿ ಗ್ರಾಮದ ಕಾಜಿಲ - ಬಿರಾವು ರಸ್ತೆಯ ಸಮೀಪ ತಲುಪುತ್ತಿದ್ದಂತೆ ಎದುರಿನಿಂದ ಅಂದರೆ ಕೈಕಂಬ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಮಾರುತಿ ಓಮ್ನಿ ಕಾರು ನಂಬ್ರ KA 29 M 912 ನೇದ್ದನ್ನು ಅದರ ಚಾಲಕ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯಕರವಾಗುವ ರೀತಿಯಲ್ಲಿ ರಸ್ತೆಯ ತೀರಾ ಬಲ ಬದಿಗೆ ಚಲಾಯಿಸಿಕೊಂಡು ಬಂದು ಮಹಮ್ಮದ್ ಆರೀಸ್ ರವರು ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟಾರು ಸೈಕಲ್ ಗೆ ಡಿಕ್ಕಿ ಹೊಡದ ಪರಿಣಾಮ ಮಹಮ್ಮದ್ ಆರೀಸ್ ರವರು ರಸ್ತೆಗೆ ಎಸೆಯಲ್ಪಟ್ಟು ಅವರ ತಲೆಗೆ ಮತ್ತು ದೇಹದ ಇತರ ಭಾಗಗಳಿಗೆ ತೀವೃ ತರಹದ ಗಾಯಗಳಾಗಿ ಅವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಅಲ್ಲದೇ ಕಾರಿನಲ್ಲಿದ್ದವರಿಗೂ ಗಾಯಗಳಾಗಿದ್ದು, ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

 

 

21. ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಅಬೂಬಕ್ಕರ್ ಸಿದ್ದಿಕ್ ರವರು ಕಾಟಿಪಳ್ಳ  2ನೇ ಬ್ಲಾಕ್ ಹುಸೇನ್ ಎಂಬವರ ಮನೆ ಬಳಿ ಇರುವಾಗ ಪಿರ್ಯಾದಿಗೆ ಪರಿಚಯದ ಹೈದರ್ ಸಫ್ವಾನ್ ಎಂಬವರು ಅವರ ಬಾಬ್ತು ಮೋಟಾರು ಸೈಕಲ್ ನಂಬ್ರ ಕೆ..19.ಇಡಿ.5474 ನೇದರಲ್ಲಿ ಕಾಟಿಪಳ್ಳ ರಸ್ತೆಯಲ್ಲಿ ಕೈಕಂಬ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ  ಈ ದಿನ    ದಿನಾಂಕ 26-01-2014 ರಂದು ಅಪರಾಹ್ನ 1-25 ಗಂಟೆ ಸಮಯಕ್ಕೆ ಮುಂದಿನಿಂದ ಅಂದರೆ ಸುರತ್ಕಲ್ ಕಡೆಯಿಂದ ಕಾಟಿಪಳ್ಳವಾಗಿ ಸೂರಿಂಜೆ ಕಡೆಗೆ ಹೋಗುವ ಕೆ..19..4947ನೇ ಬಸ್ಸಿನ ಚಾಲಕ ಅಶ್ರಫ್ ಆಲಿ ಎಂಬಾತನು ಸದ್ರಿ ರಸ್ತೆಯಲ್ಲಿ ಬಸ್ಸನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹೈದರ್ ಸಫ್ವಾನ್ ಎಂಬವರು ಚಾಲಾಯಿಸಿಕೊಂಡು ಹೋಗುತ್ತಿದ್ದ ಮೇಲ್ಕಂಡ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಹೈದರ್ ಸಫ್ವಾನ್ ಎಂಬವರು ಮೋಟಾರು ಸೈಕಲ್ ಸಮೇತಾ ರಸ್ತೆಗೆ ಬಿದ್ದು ರಕ್ತ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಎ.ಜೆ ಆಸ್ಪತ್ರೆಗೆ ದಾಖಲಿಸಿದ್ದು ಈ ಅಪಘಾತಕ್ಕೆ ಬಸ್ಸು ಚಾಲಕ ಅಶ್ರಫ್ ಆಲಿ ಎಂಬಾತನ ಅತೀ ವೇಗ ಹಾಗೂ ಅಜಾಗರೂಕತೆಯಚಾಲನೆಯೇ ಕಾರಣವಾಗಿರುತ್ತದೆ.

 

 

22. ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 25.01.2014 ರಂದು ರಾತ್ರಿ 11.00 ಗಂಟೆಗೆ ಖಚಿತ ವರ್ತಮಾನ ಬಂದ ಮೇರೆಗೆ ಫಿರ್ಯಾದಿದಾರರಾದ ಪಿಎಸ್ಐ ಶಿವಪ್ರಕಾಶ್ ಹೆಚ್. ರವರು ಸಿಬ್ಬಂದಿಗಳೊಂದಿಗೆ ತಿರುವೈಲ್ ಗ್ರಾಮದ ಕೆಲರಾಯ್ ಕೋಡಿ ಶಿವಂ ಪ್ರೆಂಡ್ಸ್ ಕ್ಲಬ್ನ ವಾಮಂಜೂರು ಕಟ್ಟೆಯ ಬಳಿ ಮೈದಾನದಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಉಳಾಯಿ- ಫಿದಾಯಿ, ನಸೀಬಿನ ಆಟ ಆಡುತ್ತಿದ್ದ,  7 ಜನ  ಆರೋಪಿಗಳನ್ನು ಹಿಡಿದು ಅವರ ವಶದಲ್ಲಿದ್ದ ಸ್ವತ್ತುಗಳಾದ  ಒಟ್ಟು ಹಣ 16.770 ರೂಪಾಯಿ, 1ಬಿಳಿ ಬಣ್ಣದ ಮಹಿಂದ್ರಾ ಡೂರೊ  ಸ್ಕೂಟರ್ ನಂಬ್ರ:ಕೆಎ-19-ಇಡಿ-8540, 1 ಚಾಪೆ, 44 ಇಸ್ಪೀಟ್ ಎಲೆಗಳು, 1 ಮೇಣದ ಬತ್ತಿ, 6 ಬೇರೆ ಬೇರೆ ಕಂಪನಿಯ ಮೂಬೈಲ್ ಸೆಟ್ ಇವುಗಳನ್ನು ಸ್ವಾಧಿನಪಡಿಕೊಂಡದ್ದಾಗಿದೆ.

No comments:

Post a Comment