ದೈನಂದಿನ ಅಪರಾದ ವರದಿ.
ದಿನಾಂಕ 30.06.2014 ರ 07:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 2 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 2 |
1.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29.06.2014 ರಂದು ಕೊಣಾಜೆ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಶ್ರೀ ಶೇಖರ ರವರು ತಮ್ಮ ಸಿಬ್ಬಂದಿಗಳೊಂದಿಗೆ ಮುಡಿಪು ಪರಿಸರದಲ್ಲಿ ಗಸ್ತು ಕರ್ತವ್ಯದಲ್ಲಿರುವಾಗ ಬಂಟ್ವಾಳ ತಾಲೂಕು ಕುರ್ನಾಡು ಗ್ರಾಮದ, ಮುಡಿಪು ಗೋಪಾಲಕೃಷ್ಣ ದೇವಸ್ಥಾನದ ಸಭಾಭವನದ ಬಳಿ ಒಬ್ಬ ವ್ಯಕ್ತಿಯು ಜಿಂಕೆ ಚರ್ಮವನ್ನು ಮಾರಾಟ ಮಾಡಲು ತರುತ್ತಿದ್ದಾನೆ ಎಂಬುದಾಗಿ ದೊರೆತ ಖಚಿತ ವರ್ತಮಾನದ ಮೇರೆಗೆ ಮದ್ಯಾಹ್ನ 15:15 ಗಂಟೆಗೆ ಆರೋಪಿ ಸ್ಟಾರ್ ವಿನ್ ವಿಲ್ಸನ್ ಎಂಬಾತನು ಅನುಮಾನಸ್ಪದ ರೀತಿಯಲ್ಲಿ ನಿಂತುಕೊಂಡಿರುವುದನ್ನು ಕಂಡು ಸಿಬ್ಬಂದಿಯವರೊಂದಿಗೆ ಆತನ ಬಳಿಗೆ ಹೋಗುತ್ತಿದ್ದಂತೆ ಆತನು ಫಿರ್ಯಾದಿದಾರರನ್ನು ಕಂಡು ಓಡಿ ಹೋಗಲು ಪ್ರಯತ್ನಿಸಿದವನನ್ನು ಸಿಬ್ಬಂದಿಯವರೊಂದಿಗೆ ಸುತ್ತುವರಿದು ಹಿಡಿದು ನಿಲ್ಲಿಸಿ ಆತನ ಬಳಿ ಇರುವ ಬ್ಯಾಗಿನಲ್ಲಿ ಏನಿದೆ ಎಂದು ಕೇಳಲಾಗಿ ಸಮರ್ಪಕವಾದ ಉತ್ತರವನ್ನು ಹೇಳದೆ ಇದ್ದು ಪುನಃ ವಿಚಾರಿಸಲಾಗಿ ಜಿಂಕೆ ಚರ್ಮ ಇರುವುದಾಗಿ ತಿಳಿಸಿದ್ದು, ಈ ಬಗ್ಗೆ ವಿಚಾರಿಸಲಾಗಿ ಇದನ್ನು ಸಾಗರದ ರಮೇಶ ಎಂಬಾತನು ಮಾರಾಟಕ್ಕಾಗಿ ನೀಡಿದ್ದು ಎಂಬುದಾಗಿ ಆರೋಪಿಯು ತಿಳಿಸಿದ್ದು. ಆರೋಪಿಯು ವನ್ಯ ಜೀವಿ ಜಿಂಕೆಯ ಚರ್ಮವನ್ನು ಇಟ್ಟುಕೊಳ್ಳುವರೇ, ಯಾ ಮಾರಾಟ ಮಾಡುವರೇ, ಸಾಗಾಟ ಮಾಡುವರೇ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಜಿಂಕೆ ಚರ್ಮಗಳನ್ನು ಇಟ್ಟು ಕೊಂಡು ವನ್ಯ ಜೀವಿ ಸಂರಕ್ಷಣಾ ಕಾಯ್ದೆಯಂತೆ ಅಪರಾಧ ಎಸಗಿದವನನ್ನು ವಶಕ್ಕೆ ತೆಗೆದುಕೊಂಡು ಪಂಚರ ಸಮಕ್ಷಮ ಮಹಜರು ಮುಖೇನ ಸೊತ್ತನ್ನು ಸ್ವಾಧೀನ ಪಡಿಸಿಕೊಂಡು ಮುಂದಿನ ಕ್ರಮದ ಬಗ್ಗೆ ಆರೋಪಿ ಮತ್ತು ಸೊತ್ತನ್ನು ಕೊಣಾಜೆ ಠಾಣೆಗೆ ತಂದು ಪೊಲೀಸ್ ನಿರೀಕ್ಷಕರು ಮುಂದೆ ಹಾಜರು ಪಡಿಸಿರುವುದಾಗಿದೆ.
2.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಶ್ರೀಮತಿ. ಆರೀಫಾಜಾರವರನ್ನು ದಿನಾಂಕ 26-05-2013 ರಂದು ಮಂಗಳೂರು ತಾಲೂಕು, ಉಳ್ಳಾಲ ಗ್ರಾಮದ ಅಹಮದ್ ಕಬೀರ್ ಎಂಬವರಿಗೆ ಮದುವೆ ಮಾಡಿಕೊಡಲಾಗಿದ್ದು, ಮದುವೆಯ ಮೊದಲು ಆರೋಪಿತ ಮಹಮದ್ ಕಬೀರ್, ಆತನ ತಾಯಿ ನಫೀಸಾ ಬಾನು, ಆತನ ತಂಗಿ ಅಯಿಷಾ @ ಮುನ್ನಿಯವರು ಪಿರ್ಯಾದುದಾರರಲ್ಲಿ ಅಹಮದ್ ಕಬೀರ್‌ನು ವಿದೇಶದಲ್ಲಿ ಒಳ್ಳೆಯ ಉದ್ಯೋಗ ಹೊಂದಿದ್ದು, ಮದುವೆಯಾದ ಬಳಿಕ ಪಿರ್ಯಾದಿಯನ್ನು ವಿದೇಶಕ್ಕೆ ಕರೆದುಕೊಂಡು ಹೋಗುತ್ತೇನೆ ಎಂಬಿತ್ಯಾದಿಯಾಗಿ ತಿಳಿಸಿ ಮದುವೆಗೆ ಒಪ್ಪಿಸಿರುತ್ತಾರೆ. ಅಲ್ಲದೇ ಮೂರು ಮಂದಿ ಆರೋಪಿತರು ಮದುವೆ ಸಮಯ 40 ಪವನ್ ಚಿನ್ನ ಹಾಗು ಮದುವೆಯನ್ನು ಅದ್ದೂರಿಯಾಗಿ ಮಾಡಿಕೊಡುವಂತೆ ಒತ್ತಾಯಿಸಿದ್ದು, ಅದೇ ರೀತಿಯಲ್ಲಿ ಮದುವೆಯಾಗಿರುತ್ತದೆ. 40 ಪವನ್ ಚಿನ್ನವನ್ನು ವರದಕ್ಷಿಣೆ ರೂಪದಲ್ಲಿ ಆರೋಪಿತರು ಪಡೆದುಕೊಂಡಿದ್ದರು. ಮದುವೆಯಾದ ದಿನದಿಂದ ಪಿರ್ಯಾದಿಯು ತನ್ನ ಗಂಡ ಮನೆಯಲ್ಲಿ ವಾಸವಾಗಿದ್ದು, ಮರುದಿನವೇ ಪಿರ್ಯಾದಿಯಲ್ಲಿದ್ದ 40 ಪವನ್ ಚಿನ್ನಾಭರಗಳನ್ನು ಗಂಡ ಅಹಮ್ಮದ್ ಕಬೀರ್ ಮತ್ತು ಗಂಡನ ತಂಗಿ ಅಯೀಷಾರವರ ಒತ್ತಾಯದಂತೆ ಅತ್ತೆ ನಪೀಸಾರವರು ಹೆದರಿಸಿ ಪಡೆದುಕೊಂಡಿರುತ್ತಾರೆ. ಅವುಗಳನ್ನು ಕೇಳಿದರೆ ಅವೆರಲ್ಲರೂ ಗದರಿಸುತ್ತಿದ್ದರು. ಒಂದು ತಿಂಗಳ ನಂತರ ಪಿರ್ಯಾದುದಾರರ ಗಂಡ ಸೌದಿ ಹೋಗಲು ಸಿದ್ದರಾದಾಗ ಪಿರ್ಯಾದಿಯು ಗಂಡನಲ್ಲಿ ತನ್ನನ್ನು ಸೌದಿಗೆ ಕರೆದುಕೊಂಡು ಹೋಗುವಂತೆ ವಿನಂತಿಸಿದಾಗ ಅಹಮದ್ ಕಬೀರ್ ತುಚ್ಚವಾಗಿ ಮಾತನಾಡಿ ಮನೆಯಲ್ಲಿ ಬಿದ್ದಿರುವಂತೆ ತಾಕೀತು ಮಾಡಿ ಸೌದಿಗೆ ಹೋಗಿರುತ್ತಾರೆ. ತದ ನಂತರ ಪಿರ್ಯಾದಿಯು ಮನೆಯಲ್ಲೇ ಇದ್ದಾಗ ಅತ್ತೆ ಮತ್ತು ನಾದಿನಿಯು ಮಾನಸಿಕ ಹಿಂಸೆ ನೀಡುತ್ತಿದ್ದರು. ಬಲತ್ಕಾರವಾಗಿ ಮನೆಕೆಲಸವನ್ನು ಮಾಡಿಸಿ ಸರಿಯಾಗಿ ಆಹಾರ ನೀಡುತ್ತಿರಲಿಲ್ಲ. ಹಿಂಸೆ ತಡೆಯಲಾರದೇ ಪಿರ್ಯಾದಿಯ ತನ್ನ ತವರು ಮನೆಗೆ ಹೋಗಿದ್ದು, ಅಲ್ಲಿಂದ ಗಂಡನಲ್ಲಿ ಸೌದಿಗೆ ಕರೆದುಕೊಂಡು ಹೋಗುವಂತೆ ವಿನಂತಿಸಿದಲ್ಲಿ ಸೌದಿಯಲ್ಲಿ ಪ್ಲಾಟ್ ಖರೀದಿಸುವರೇ 80 ಲಕ್ಷ ಹಣ ನೀಡುವಂತೆ ತಿಳಿಸುತ್ತಿದ್ದ. ಪಿರ್ಯಾದಿಯು ಆರೋಪಿ ಅಹಮದ್ ಕಬೀರ್ ಸೌದಿಯಿಂದ ಉಳ್ಳಾಲ ಬಂದ ವಿಚಾರ ತಿಳಿದು ದಿನಾಂಕ 19-06-2014 ರಂದು ಗಂಡನ ಮನೆಗೆ ಬಂದಾಗ ಅಲ್ಲಿ ಅಹಮ್ಮದ್ ಕಬೀರ್, ನಪೀಸಾ ಬಾನು ಮತ್ತು ಅಯೀಷಾರವರು ಪಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು, ಮನೆಬಿಟ್ಟು ಹೋಗವಂತೆ ಹೆದರಿಸಿ ಕೈಯಿಂದ ಹೊಡೆದಿರುತ್ತಾರೆ. ಪಿರ್ಯಾದಿಯು ಇನ್ನು ಹೆಚ್ಚಿನ ಹಣವನ್ನು ಆರೋಪಿತ ಅಹಮ್ಮದ್ ಕಬೀರ್ಗೆ ನೀಡಿ ಸೌದಿಯಲ್ಲಿ ಪ್ಲಾಟ್ ಖರೀದಿಸಿಕೊಡುವಂತೆ ತಿಳಿಸಿರುತ್ತಾರೆ. ಆರೋಪಿತ ಮೂರು ಮಂದಿಯು ಹೆಚ್ಚಿನ ವರದಕ್ಷಿಣೆಗೆ ಒತ್ತಾಯಿಸಿರುವುದಲ್ಲದೇ, ಪಿರ್ಯಾದುದಾರರ ಕುಟುಂಬದ ವಿರುದ್ದ ಸೇಡು ತಿರಿಸಿಕೊಳ್ಳುವ ಉದ್ದೇಶದಿಂದ ಈ ಕೃತ್ಯ ಮಾಡಿರುವುದಾಗಿದೆ.
3.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 29.06.2014 ರಂದು ಪಿರ್ಯಾದಿದಾರರಾದ ಶ್ರೀ ಉಮೇಶ್ ಸಾಲಿಯಾನ್ ರವರು ತನ್ನ ಬಾಬ್ತು ಕೆಎ-19-ಎಂಬಿ-4775 ನೇ ವಾಕ್ಸ್‌ವ್ಯಾಗನ್ ಕಾರಿನಲ್ಲಿ ತನ್ನ ಹೆಂಡತಿ ಹರಿಣಾಕ್ಷಿ , ಮಗಳು ದೀಕ್ಷಾ ಮತ್ತು ಸಂಬಧಿಯಾದ ರಾಜೇಶ್‌ರೊಂದಿಗೆ ಕುಡುದೇವಸ್ಥಾನಕ್ಕೆ ಹೋಗಿ ಮಧ್ಯಾಹ್ನ ಸುಮಾರು 12.30 ಗಂಟೆಗೆ ಮರಳಿ ಮೂಡಬಿದ್ರೆ ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಗೂರಿ ಕಡೆಗೆ ಬರುತ್ತಾ ಬೈತುರ್ಲಿ ತಲುಪುವಾಗ ಎದುರುಗಡೆಯಿಂದ ಅಂದರೆ ಮಂಗಳೂರು ಕಡೆಯಿಂದ ವಾಮಂಜೂರು ಕಡೆಗೆ ಮಂಗಳೂರು ಮಹಾನಗರ ಪಾಲಿಕೆಯ ಕಸವನ್ನು ಕೊಂಡು ಹೋಗುವ ಲಾರಿ ನಂ ಕೆಎ-20-2291 ನೇದನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿನ ಬಲಭಾಗಕ್ಕೆ ಡಿಕ್ಕಿಹೊಡೆದ ಪರಿಣಾಮ ಪಿರ್ಯಾದಿದಾರರ ಬಲಕೈ ಭುಜಕ್ಕೆ ಗುದ್ದಿದ ಜಖಂ, ಎಡ ಕೈ ತಟ್ಟೆಗೆ ಗುದ್ದಿದ ನೋವುಂಟಾಗಿದ್ದು, ಪಿರ್ಯಾದಿದಾರರ ಹೆಂಡತಿ ಹರಿಣಾಕ್ಷಿ ಯವರ ತುಟಿ, ಗಲ್ಲ ಕಣ್ಣಿನ ಕೆಳಭಾಗಕ್ಕೆ ಜಖಂ ಆಗಿದ್ದಲ್ಲದೆ, ಕಾರಿನ ಹಿಂದೆ ಕುಳಿತ್ತಿದ್ದ ಪಿರ್ಯಾದಿದಾರರ ಮಗಳು ದೀಕ್ಷಾಳಿಗೆ ಎಡಭಾಗದ ನೆತ್ತಿಗೆ ಹಾಗೂ ಕುತ್ತಿಗೆಯ ಹಿಂಭಾಗಕ್ಕೆ ಗುದ್ದಿದ ಹಾಗೂ ರಕ್ತ ಬರುವ ಗಾಯ ಉಂಟಾಗಿ ತೇಜಸ್ವಿನಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.
4.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 29.06.2014 ರಂದು ರಾತ್ರಿ 7.15 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಅವಿನಾಶ್ ರವರು ಅಡ್ಯಾರು ಕಟ್ಟೆ ಅಂಗಡಿಯ ಮುಂದೆ ನಿಂತಿರುವಾಗ ಫಿರ್ಯಾದಿಯವರ ಲಾರಿ ಆಫೀಸಿನ ಲಾರಿ ಕ್ಲೀನರ್ ಮಸ್ತಾನ ಎಂಬವರು ಅಂಗಡಿಯಿಂದ ಬೀಡಿಯನ್ನು ಪಡೆದುಕೊಂಡು NH 73 ರಸ್ತೆಯನ್ನು ದಾಟುವರೇ ಅಡ್ಯಾರಕಟ್ಟೆ ಎಂಬಲ್ಲಿ ರಸ್ತೆ ಬದಿಯಲ್ಲಿ ನಿಂತಿರುವಾಗ ಮಂಗಳೂರು ಕಡೆಯಿಂದ ಬಿ.ಸಿ. ರೋಡ್ ಕಡೆಗೆ KA-19-EK-1545 ನೇ ಯಮಹಾ FZ ಬೈಕನ್ನು ಅದರ ಸವಾರ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಿಂತಿದ್ದ ಮಸ್ತಾನ ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ ಮಸ್ತಾನನಿಗೆ ಬಲಕಾಲಿಗೆ ಮೂಳೆ ಮುರಿತದ ಗಾಯ, ಎಡಭುಜಕ್ಕೆ ಮೂಳೆ ಮುರಿತದ ಗಾಯ ಮತ್ತು ಎಡಗಡೆಯ ಅಣೆಗೆ ರಕ್ತ ಬರುವ ಗಾಯವಾಗಿರುತ್ತದೆ, ಅಲ್ಲದೇ ಬೈಕ ಸವಾರನಿಗೂ ಗಾಯವಾಗಿರುತ್ತದೆ. ಗಾಯಾಳು ಮಸ್ತಾನನನ್ನು ಫಿರ್ಯಾದಿ ಮತ್ತು ಸಾರ್ವಜನಿಕರೂ ಚಿಕಿಸ್ಥೆಯ ಬಗ್ಗೆ ಕಂಕನಾಡಿ ಪಾಧರ್ ಮುಲ್ಲರ್ ಆಸ್ಪತ್ರೆಗ ದಾಖಲು ಮಾಡಿರುವುದಾಗಿದೆ.
No comments:
Post a Comment