Saturday, June 28, 2014

Daily Crime Reports 28-06-2014

ದೈನಂದಿನ ಅಪರಾದ ವರದಿ.

ದಿನಾಂಕ 28.06.201407:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

1

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

1

ವಾಹನ ಕಳವು

:

1

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

2

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

3

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 27-06-2014 ರಂದು  ರಾತ್ರಿ ಪಿರ್ಯಾದಿದಾರರಾದ ಶ್ರೀಮತಿ ಸುಮಿತ್ರಾ ರವರು ತಾನು ಕೆಲಸ ಮಾಡುತ್ತಿದ್ದ ಮಂಗಳೂರು ನಗರದ ಮಿಲಾಗ್ರಿಸ್ಚರ್ಚ್ಬಿಲ್ಡಿಂಗ್ನಲ್ಲಿರುವ ಶೆಟ್ಟಿ ಟ್ರೇಡರ್ಸ್ನಿಂದ ಕೆಲಸ ಮುಗಿಸಿ ತನ್ನ ಮನೆಗೆ ಹೋಗಲೆಂದು ಹಂಪನ್ಕಟ್ಟೆ ಕಡೆಯಿಂದ ರಾವ್ಅಂಡ್ರಾವ್ಸರ್ಕಲ್ ಬಳಿಗೆ ಹೋಗಿ, ಅಲ್ಲಿಯೇ ರಸ್ತೆ ಬದಿಯಲ್ಲಿ ತನ್ನ ತಮ್ಮನಾದ ಶಂಕರ್ನೊಂದಿಗೆ ಮಾತನಾಡುತ್ತಾ ಇರುವಾಗ, ಸಮಯ ರಾತ್ರಿ 20:00 ಗಂಟೆಗೆ ಸ್ಟೇಟ್ಬ್ಯಾಂಕ್ಕಡೆಯಿಂದ ಲೇಡಿಗೋಶನ್ಕಡೆಗೆ ಕಾರು ನಂಬ್ರ ಕೆ.-19-ಎಂ.-735 ನೇದನ್ನು ಅದರ ಚಾಲಕನು ಅತೀವೇಗ ಮತ್ತು ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಪಿರ್ಯಾಧಿದಾರರು ರಸ್ತೆಗೆ ಬಿದ್ದು ಎಡಕಾಲಿನ ಕೋಲುಕಾಲಿಗೆ ಮೂಳೆ ಮುರಿತದ ಗಾಯವಾದ್ದವರನ್ನು ಚಿಕಿತ್ಸೆಯ ಬಗ್ಗೆ  ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ  ಕೊಂಡೊಯ್ದು ದಾಖಲಿಸಿರುವುದಾಗಿದೆ.

 

2.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾಧುದಾರರಾದ ಶ್ರೀ ಫ್ರಾನ್ಸಸ್ ಡಿಸೋಜಾ ರವರ ಬಾಬ್ತು ಮಂಗಳೂರು ಅರ್ಥ್ ಮೂವರ್ಸ್ ಎಂಬ ಸ್ಪೇರ್ ಪಾರ್ಟ್ ಅಂಗಡಿಗೆ ಸುಮಾರು 5-6 ತಿಂಗಳ ಹಿಂದೆ, ಜೆ.ಸಿ.ಬಿ ವಾಹನದ ಕಿಂಗ್ ಪೋಸ್ಟ್ ಎಂಬ ಬಿಡಿಭಾಗವನ್ನು ಮಾರಾಟ ಮಾಡಲು ತಂದಿರಿಸಿದ್ದು ಅದನ್ನು  ತನ್ನ ಅಂಗಡಿಯ ಹೊರಗೆ ಇರಿಸಿದ್ದನ್ನು, ದಿನಾಂಕ 21-06-2014 ಸಂಜೆ 17-00 ಗಂಟೆಯಿಂದ ದಿನಾಂಕ 25-06-2014 ಸಂಜೆ 17-00 ಗಂಟೆಯ ಮದ್ಯ ವೇಳೆಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಸದ್ರಿ ಕಳವಾದ ಜೆ.ಸಿ.ಬಿ ವಾಹನದ ಕಿಂಗ್ ಪೋಸ್ಟ್ ಸುಮಾರು 100ರಿಂದ 150 ಕೆಜಿ ಭಾರ ಇದ್ದು, ಹಳದಿ ಬಣ್ಣದ್ದಾಗಿದ್ದು ಇದರ ಅಂದಾಜು ಮೌಲ್ಯ ರೂ 25,000/-ಆಗಬಹುದು.

 

3.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ:27-06-2014 ರಂದು ರಾತ್ರಿ 9-15 ಗಂಟೆಗೆ ಮಂಗಳೂರು ತಾಲೂಕು ಮೆನ್ನಬೆಟ್ಟು ಗ್ರಾಮದ ರಾಜರತ್ನಪುರ ಕಾಪಿಕಾಡು ಎಂಬಲ್ಲಿರುವ ವಾಸ್ತವ್ಯ ಇಲ್ಲದ  ಮನೆಯ ಹೊರಗಡೆ, ಚಾರ್ಜರ್ ಲೈಟ್ ಬೆಳಿಕಿನ ಸಹಾಯದಿಂದ ಅಶೋಕ ಶೆಟ್ಟಿ, ಸಂದೀಪ್, ಪ್ರತಾಪ್ ಶೆಟ್ಟಿ, ಪ್ರವೀಣ್ ಕುಮಾರ್, ಸಂತೋಷ್ ಶೆಟ್ಟಿ ಎಂಬ 6  ಜನ ಆರೋಪಿಗಳು ಹಣವನ್ನು ಪಣವಾಗಿಟ್ಟು ಇಸ್ಪೀಟು ಎಲೆಗಳಿಂದ ಅಂದರ್-ಬಾಹರ್ ಎಂಬ ಜೂಜಾಟ ಆಡುತ್ತಿದ್ದವರನ್ನು, ಮುಲ್ಕಿ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ರಾಮಚಂಧ್ರ ನಾಯಕ್ ರವರು ಸಿಬ್ಬಂದಿಗಳೊಂದಿಗೆ ಧಾಳಿ ಮಾಡಿ, ಆರೋಪಿತರು ಇಸ್ಪೀಟು ಜೂಜಾಟಕ್ಕೆ ಬಳಸಿದ್ದ ನಗದು ಹಣ 17,100/- ರೂಪಾಯಿ, ಇಸ್ಪೀಟು ಎಲೆಗಳು 52, ಮತ್ತು ನೆಲಕ್ಕೆ ಹಾಸಲು ಉಪಯೋಗಿಸಿದ ಬೆಡ್ ಶೀಟ್ -1  ಇವುಗಳನ್ನು ಸ್ವಾಧೀನಪಡಿಸಿ ಆರೋಪಿತರುಗಳನ್ನು ದಸ್ತಗಿರಿ ಮಾಡಿ ಠಾಣೆಗೆ ಕರೆತಂದು ಪ್ರಕರಣ ದಾಖಲಿಸಿರುವುದಾಗಿದೆ.

 

4.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 27-06-2014 ರಂದು ರಾತ್ರಿ 9-30 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀಮತಿ ಶಕೀನಾ ರವರ ಮನೆಯಾದ ಮಾನಂಪಾಡಿ ಗ್ರಾಮದ ಕೆಂಪುಗುಡ್ಡೆ ಎಂಬಲ್ಲಿಗೆ ಆರೋಪಿಗಳಾದ ರಶೀದ್, ಮೊದೀನ್, ಹನೀಫ್, ಹಫೀಜ್, ಶ್ರೀಮತಿ ಅತೀಜಮ್ಮ ಎಂಬವರು ಬಂದು 'ಅಬುಸಾಲಿ ನಿನ್ನ ಮನೆಗೆ ಬಂದಿದ್ದಾನೆಯೇ' ಎಲ್ಲಿದ್ದಾನೆಂದು ಹೇಳಿ'  ಎಂದು ಕೇಳಿ ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು, ಆರೋಪಿಗಳ ಪೈಕಿ ರಶೀದ್ನು ತನ್ನ ಕೈಯ್ಯಲಿದ್ದ ಚೂರಿಯಿಂದ ಶ್ರೀಮತಿ ಶಕೀನಾ ಎಂಬವರ ಕೋಲು ಕೈಗೆ ಗೀರಿದ್ದು  ರಕ್ತಗಾಯವಾಗಿರುತ್ತದೆ. ಇತರ ಆರೋಪಿಗಳು ಆಕೆಗೆ ಕೈಯಿಂದ ಹೊಡೆದು, ಜೀವಬೆದರಿಕೆ ಒಡ್ಡಿರುತ್ತಾರೆ.

 

5.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಮಹಮ್ಮದ್ ಅಶ್ರಫ್ ರವರು ಲೈನ್ ಸೇಲ್ ವ್ಯಾಪಾರ ಮಾಡಿಕೊಂಡಿದ್ದು, ಫಿರ್ಯಾದಿದಾರರು 7 ತಿಂಗಳ ಮೊದಲು ಸುರತ್ಕಲ್ಲಿನ ಉಸ್ಮಾನ್ ಸಾಬ್ ರವರ ಮಗನಾದ ಮುಹಮ್ಮದ್ ಇಕ್ಬಾಲ್ ರವರಿಂದ ಮಾರುತಿ ಓಮ್ನಿ ಕಾರ್ ನಂಬರ್ ಕೆಎ-19-ಪಿ-6214 ನೇ ದನ್ನು ಖರೀದಿ ಮಾಡಿದ್ದು, ಸದ್ರಿ ಕಾರಿಗೆ ಶ್ರೀ ರಾಂ ಫೈನಾನ್ಸ್ ಕಂಪೆನಿಯ ಸಾಲ ಇದ್ದ ಕಾರಣ ಕಾರಿನ ನೊಂದಾಣಿಯನ್ನು ಫಿರ್ಯಾದಿದಾರರ ವರ್ಗಾಹಿಸದೇ ಸದ್ರಿ ಕಾರನ್ನು ಫಿರ್ಯಾದಿದಾರರು ಉಪಯೋಗಿಸುತ್ತಿದ್ದು, ದಿನಾಂಕ 25-06-2014 ರಂದು ರಾತ್ರಿ ಸುಮಾರು 8 ಗಂಟೆಗೆ ಫಿರ್ಯಾದಿದಾರರ ಮನೆಯಾದ ಫ್ಲಾಟ್ ನಂ 202, ಎಂ,ಎಂ, ಫ್ಲಾಝ, ಅಜಿಜುದ್ದೀನ್  ರಸ್ತೆ ಬಂದರು ಇಲ್ಲಿನ ಪಾರ್ಕಿಂಗ್ ಜಾಗದಲ್ಲಿ ತನ್ನ ಬಾಬ್ತು ಕೆಎ-19-ಪಿ-6214 ನೇ ಓಮ್ನಿ ಕಾರನ್ನು ಡೋರ್ ಲಾಕ್ ಮಾಡಿ ಹೋಗಿದ್ದು, ಮರುದಿನ ದಿನಾಂಕ 26-06-2014 ರಂದು ಬೆಳಿಗ್ಗೆ ಸುಮಾರು 8:30 ಗಂಟೆಗೆ ಬಂದು ಪಾರ್ಕ್ ಮಾಡಿದ ಸ್ಥಳದಲ್ಲಿ ಬಂದು ನೋಡಿದಾಗ ಕಾರು ಇಲ್ಲದೇ ಇದ್ದು, ಯಾರೋ ಕಳ್ಳರು ಕಾರನ್ನು ಕಳವು ಮಾಡಿದ್ದು, ಕಳವಾದ ಕಾರಿನ ಅಂದಾಜು ಮೌಲ್ಯ ರೂ. 95000/- ಆಗಬಹುದು. MARUTHI OMNI WHITE COLOUR, REG. NO. KA 19 P 6214 ENGINE NO. F8BIN2997488, CHASIS NO. MA3EVBIIS00729475, MODEL -2005.

 

6.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಕೌಶಿಕ್ ಎಸ್. ಶೆಟ್ಟಿ ಯವರು ತನ್ನ ತಮ್ಮ ಕಾರ್ತಿಕ್ ನೊಂದಿಗೆ ದಿನಾಂಕ 27-06-2014 ರಂದು ಬೆಳಗ್ಗೆ 08.15 ಗಂಟೆ ಸಮಯಕ್ಕೆ ತನ್ನ ಬಾಬ್ತು ಕೆ. 19 ಕೆ 9389ನೇ ಮೋಟಾರ್ ಸೈಕಲ್ ನಲ್ಲಿ ತನ್ನ ಮನೆಯಿಂದ ಹೊರಟು ಬರುತ್ತಿದ್ದಂತೆ ಮುಳಿಹಿತ್ಲು ಜ್ಯೋತಿ ಗ್ಯಾರೇಜ್ ಬಳಿ ತಲುಪಿದಾಗ 2 ಮೊಟಾರ್ ಸೈಕಲ್ ಗಳಲ್ಲಿ ಬಂದ ಆರೋಪಿಗಳಾದ ಕೌಶಿಕ್ ಅಲಿಯಾಸ್ ಬೆಣ್ಣಿ ಮತ್ತು ವಿಕ್ಯಾತ್ ಅಲಿಯಾಸ್ ವಿಕ್ಕಿ ಮತ್ತು ಇತರ ಇಬ್ಬರು ವ್ಯಕ್ತಿಗಳು ಅಕ್ರಮವಾಗಿ ತಡೆದು ನಿಲ್ಲಿಸಿ ಮೊಟಾರ್ ಸೈಕಲ್ಲನ್ನು ಕೆಳಗೆ ಬೀಳಿಸಿ ಅವಾಚ್ಯ ಶಬ್ದಗಳಿಂದ ಬೈಯ್ದು ಆರೋಪಿತರಗಳ ಪೈಕಿ ಇಬ್ಬರು ಹಾಕಿ ಸ್ಟಿಕ್ ನಿಂದ ಹಾಗೂ ಇನ್ನಿಬ್ಬರು ತಲವಾರಿನಿಂದ ಪಿರ್ಯಾದಿದಾರರಿಗೆ ಹೊಡೆದಾಗ ಪಿರ್ಯಾದಿದಾರರ ತಮ್ಮ ಕಾರ್ತಿಕ್ ಹೆದರಿ ಸ್ಥಳದಿಂದ ಓಡಿ ಹೊಗಿದ್ದು, ನಂತರ ಆರೋಪಿತರುಗಳು ಪಿರ್ಯಾದಿದಾರರನ್ನು ಉದ್ದೇಶಿಸಿ ನಿಮ್ಮನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆಯನ್ನು ಹಾಕಿ ಸ್ಥಳದಿಂದ ಹೋಗಿದ್ದು, ಆರೋಪಿತರುಗಳು ಹಲ್ಲೆ ನಡೆಸಿದ ಪರಿಣಾಮ ಪಿರ್ಯಾದಿದಾರರಿಗೆ ತಲೆಯ ಎಡ ಬದಿಗೆ, ಹಾಗೂ ಎಡ ಕೈ ಬೆರಳಿಗೆ ರಕ್ತ ಗಾಯವಾಗಿರುತ್ತದೆ. ಪಿರ್ಯಾದಿದಾರರನ್ನು ಗುರುಪ್ರಸಾದ ಎಂಬುವರು ಕಂಕನಾಡಿ ಪಾದರ್ ಮುಲ್ಲರ್ಸ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು ಆರೋಪಿಗಳು ಕೊಲೆ ಮಾಡುವ ಉದ್ದೇಶದಿಂದಲೆ ಕೃತ್ಯವನ್ನು ಎಸಗಿರುವುದಾಗಿದೆ. ಆರೋಪಿತರುಗಳ ಬಂದ ಒಂದು ಮೊಟಾರು ಸೈಕಲ್ ನಂಬ್ರ ಕೆಎ 19 ಎಲ್ 43 ಆಗಿದ್ದು  ಮತ್ತು ಇನ್ನೊಂದು ಮೊಟಾರು ಸೈಕಲ್ ನಂಬ್ರ ವನ್ನು ಗಮನಿಸಿರುವುದಿಲ್ಲ.

 

7.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಲಾಲಬಾಬು ರವರು ಕುಳಾಯಿ ಗ್ರಾಮದ ಚಿತ್ರಾಪುರ ಎಂಬಲ್ಲಿ ನಿರ್ಮಾಣ ಆಗುತ್ತಿರುವ ರೆಹೆಜಾ ಯುನಿವರ್ಸಲ್ ಎಂಬ ಹೆಸರಿನ ಬಹುಮಹಡಿ ಕಟ್ಟಡದ ಕಾರ್ಪೆಂಟರ್ (ಸೆಂಟ್ರಿಂಗ್) ಕೆಲಸ ಮಾಡುತ್ತಿದ್ದು ಅವರೊಂದಿಗೆ ರಂಜಿತ್ ವಿಕ್ರಂ ಠಾಕೋರ್ ಹಾಗೂ ವಿನೋದ್ ಠಾಕೋರ್ ಎಂಬವರು ಕೂಡಾ ಕೆಲಸ ಮಾಡುತ್ತಿದ್ದು ದಿನಾಂಕ 27-06-2014 ರಂದು ಅಪರಾಹ್ನ 2-45 ಗಂಟೆ ಸಮಯಕ್ಕೆ ಪಿರ್ಯಾದಿದಾರರು ಹಾಗೂ ರಂಜಿತ್ ವಿಕ್ರಂ ಠಾಕೋರ್ ಮತ್ತು ವಿನೋದ್ ಠಾಕೋರ್ ಎಂಬವರು 18ನೇ ಮಹಡಿಯಲ್ಲಿ ನಡೆಯುವ ಕಾಮಗಾರಿ ಕೆಲಸಕ್ಕೆ ಹೋಗುವರೇ ಲಿಫ್ಟ್ ಗಾಗಿ ಕಾಯುತ್ತಿರುವ ಸಮಯ ಸುಮಾರು 60 ಮೀಟರ್ ಎತ್ತರದಿಂದ ಲಿಫ್ಟ್ ಕ್ಯಾಬಿನ್ ಅಡಿ ಬಾಗದಲ್ಲಿ ಅಳವಡಿಸಿರುವ ಸ್ಟಾಪರ್ (ಕಬ್ಬಿಣದ್ದು) ಕಳಚಿ ಅವರ ಪೈಕಿ ವಿನೋದ್ ಠಾಕೋರ್ ರವರ ತಲೆಗೆ ಬಿದ್ದ ಪರಿಣಾಮ ತಲೆಯಲ್ಲಿದ್ದ ಹೆಲ್ಮೆಟ್ ಒಡೆದು ತಲೆಗೆ ತೀರ್ವ ತರಹದ ರಕ್ತಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಮಂಗಳೂರು ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿದ್ದು ಅಪಘಾತಕ್ಕೆ ಸದ್ರಿ ರೆಹೆಜಾ ಯುನಿವರ್ಸಲ್ ಕಂಪೆನಿಯ ಸೇಫ್ಟಿ ಆಫಿಸರ್  ಆದರ್ಶ ಡಯಾಸ್ ಎಂಬವರು  ನಿರ್ಲಕ್ಷತನದಿಂದ ಸರಿಯಾಗಿ ಉಸ್ತುವಾರಿ ನಡೆಸದೇ ಹಾಗೂ ಲಿಫ್ಟ್ ಅಪರೇಟರ್ ರವರ ನಿರ್ಲಕ್ಷತನದ ಚಾಲನೆ ಕಾರಣವಾಗಿರುತ್ತದೆ.

 

8.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಶ್ರೀ ಅರಾಫತ್ ರವರ ಅಣ್ಣ 35 ವರ್ಷ ಪ್ರಾಯದ ಉಮ್ಮರ್ ಫಾರೂಕ್ಎಂಬವರು ದಿನಾಂಕ 26/06/2014 ರಂದು ಬೆಳಿಗ್ಗೆ 9:30 ಗಂಟೆ ಸಮಯಕ್ಕೆ ಉಳ್ಳಾಲ ಗ್ರಾಮದ ಮಾಸ್ತಿಕಟ್ಟೆ, ಸುಂದರಿ ಭಾಗನ ತನ್ನ ಮನೆಯಿಂದ ಹೊರ ಹೋದವನು, ವಾಪಾಸು ಮನೆಗೆ ಬಾರದೇ ಕಾಣೆಯಾಗಿರುತ್ತಾನೆ. ಕಾಣೆಯಾದ ಅಬ್ದುಲ್ಫಾರೂಕ್ಸುಮಾರು 5 ಅಡಿ 6 ಇಂಚು ಉದ್ದವಿದ್ದು, ಗೌರವರ್ಣ ಹೊಂದಿರುತ್ತಾನೆ. ಕಾಣೆಯಾಗುವ ಸಮಯ ಗ್ರೇ ಕಲರಿನ ಪ್ಯಾಂಟ್, ಅರ್ಧ ತೋಳಿನ ಮೆರೂನ್ ಕಲರಿನ ಶರ್ಟ್‌, ಚಪ್ಪಲಿ ಧರಿಸಿರುತ್ತಾನೆ. ಮಲೆಯಾಳ, ಕನ್ನಡ, ತುಳು, ಬ್ಯಾರಿ ಬಾಷೆ ಮಾತನಾಡುತ್ತಾನೆ.

 

9.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 26.06.2014 ರಂದು 16.30 ಗಂಟೆಗೆ  ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಕ್ಷಮ ಅಧಿಕಾರಿಯಾದ ಪಿರ್ಯಾಧಿ ಶ್ರೀ ಗಿರೀಶ್ ಮೋಹನ್ ಎಸ್.ಎನ್. ರವರು ವಾಮಂಜೂರಿನಲ್ಲಿರುವ ಇಲಾಖೆಯ ಅಧಿಕೃತ ತನಿಖಾ ಠಾಣೆಯಲ್ಲಿ  ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಮುರ ಕಲ್ಲು ಉಪಖನಿಜ ಸಾಗಿಸುತ್ತಿದ್ದ ವಾಹನ ಸಂಖ್ಯೆ ಕೆಎ19ಡಿ4307  ಚಾಲಕ ಅಶ್ರಫ್‌‌  ಪಿರ್ಯಾಧಿದಾರರು  ಕೈ ತೋರಿಸಿದರು ನಿಲ್ಲಿಸದೇ ತಪಾಸಣೆಗೆ ಸ್ಪಂದಿಸದೆ ಮೈ ಮೇಲೆ ಬರುವಂತೆ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗುವಂತೆ ವಾಹನ ಚಲಾಯಿಸಿರುತ್ತಾರೆ.

 

10.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 26.06.2014 ರಂದು ಪಿರ್ಯಾದುದಾರರಾದ ಶ್ರೀ ನಾಗೇಂದ್ರ ರವರ ಬಾವ ಯಶವಂತ ಎಂಬವರು ತಮ್ಮ ಬಾಬ್ತು KA-19-W-8732ನೇ ನಂಬ್ರದ TVS ಮೋಟಾರ್ ಸೈಕಲನ್ನು ಮಂಗಳೂರು ನಗರದ ಅಳಪೆ ಪಡೀಲ್ ಕಡೆಯಿಂದ ಪಂಪ್ ವೆಲ್ ಕಡೆಗೆ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಸಂಜೆ ಸುಮಾರು 5:30 ಗಂಟೆ ಸಮಯಕ್ಕೆ ನಾಗೂರಿ ಟಯರ್ ರಿಸೋಲ್ ಅಂಗಡಿಯ ಬಳಿ ತಲುಪುತ್ತಿದ್ದಂತೆ ಯಶವಂತರವರ ಹಿಂದುಗಡೆಯಿಂದ ಅಂದರೆ ಪಡೀಲ್ ಕಡೆಯಿಂದ ಪಂಪ್ ವೆಲ್ ಕಡೆಗೆ KL-18-K-9473ನೇ ನಂಬ್ರದ ಮೋಟಾರ್ ಸೈಕಲ್ಲನ್ನು ಅದರ ಸವಾರ ಅಭಯ್ ಎಂಬವನು ಅತೀವೇಗ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಯಶವಂತರವರ ಬೈಕನ್ನು ಓವರ್ ಟೇಕ್ ಮಾಡಿ ಮುಂದೆ ಹೋಗುವ ಸಮಯ ಅಭಯ್ ರವರು ಚಲಾಯಿಸುತ್ತಿದ್ದ ಬೈಕಿನಲ್ಲಿ ಕುಳಿತಿದ್ದ ಹಿಂಬದಿ ಸವಾರನ ಬ್ಯಾಗ್ ಯಶವಂತರವರ ಕೈ ಮತ್ತು ಬೈಕ್ ಹ್ಯಾಂಡಲಿಗೆ ಸಿಕ್ಕಿಕೊಂಡ ಪರಿಣಾಮ ಯಶವಂತರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಅವರ ತಲೆಗೆ, ಭುಜಕ್ಕೆ ತೀವ್ರ ತರಹದ ಗಾಯಗೊಂಡವರು ನಗರದ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ಸಮಯ ದಿನಾಂಕ: 27.06.2014 ರಂದು ಬೆಳಿಗ್ಗೆ 9:50 ಗಂಟೆ ಸಮಯಕ್ಕೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿದೆ.

No comments:

Post a Comment