ದೈನಂದಿನ ಅಪರಾದ ವರದಿ.
ದಿನಾಂಕ 29.06.2014 ರ 09:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 4 |
ಮನೆ ಕಳವು ಪ್ರಕರಣ | : | 1 |
ಸಾಮಾನ್ಯ ಕಳವು | : | 1 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 2 |
ವಂಚನೆ ಪ್ರಕರಣ | : | 1 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 1 |
1.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 27/06/2014 ರಂದು ಪಿರ್ಯಾದಿದಾರರಾದ ಶ್ರೀ ಸಾಮ್ ಸನ್ ಗ್ಲಾನ್ ಫರ್ನಾಂಡಿಸ್ ರವರು ತನ್ನ ತಂದೆ ಸ್ಟೇನಿ ಫೆರ್ನಾಂಡಿಸ್ನೊಂದಿಗೆ ಊಟ ತರಲು ಮನೆಯಿಂದ ಮಂಗಳಾದೇವಿಯಲ್ಲಿರುವ ಹೋಟೇಲ್ ಕಡೆಗೆ ನಡೆದುಕೊಂಡು ಹೋಗುತ್ತಾ ರಾತ್ರಿ ಸುಮಾರು 8:45 ಗಂಟೆಗೆ ಮಂಗಳಾದೇವಿ ಮಹಾನಗರ ಪಾಲಿಕೆಯ ಆರೋಗ್ಯ ಎದುರು ತಲುಪಿದಾಗ ಕೆಎ-19-ಇಎ-6276 ನಂಬ್ರದ ಅಕ್ಟಿವಾ ಹೋಂಡಾ ದ್ವಿಚಕ್ರ ವಾಹನವನ್ನು ಮಂಗಳದೇವಿ ಕಡೆಯಿಂದ ಮಾರ್ನಮಿಕಟ್ಟೆ ಕಡೆಗೆ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಬದಿ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರ ತಂದೆಗೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾಧಿದಾರರ ತಂದೆ ಸ್ಟೇನಿ ಫೆರ್ನಾಂಡಿಸ್ರವರ ಎಡಕೈ ಮತ್ತು ಎಡಕಾಲಿಗೆ ಗುದ್ದಿದ ಗಾಯವಾಗಿ ಮೂಳೆ ಮುರಿತವಾಗಿದ್ದು, ಗಾಯಾಳುವ ಮಂಗಳೂರು ಅತ್ತಾವರ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.
2.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 28-06-2014 ರಂದು ಪಿರ್ಯಾದಿದಾರರ ಅಣ್ಣ ಯು.ಎಂ. ರಹಮತ್ತುಲ್ಲಾರವರು ಕೆಎ-19-ಇಇ-5008 ಹೋಂಡಾ ಮ್ಯಾಟ್ರಿಕ್ಸ್ ದ್ವಿಚಕ್ರ ವಾಹನದಲ್ಲಿ ಬೆಳಿಗ್ಗೆ ಸುಮಾರು 9:15 ಗಂಟೆಗೆ ಜ್ಯೋತಿ ವೃತ್ತದ ಕಡೆಯಿಂದ ಬಲ್ಮಠದ ಕಡೆಗೆ ಹೋಗುತ್ತಿದ್ದಾಗ ಬಲ್ಮಠ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಎದುರು ಯು.ಎ. ರಹಮತ್ತುಲ್ಲಾರವರ ಎದುರಿನಿಂದ ಹೋಗುತ್ತಿದ್ದ ಕೆಎ-19-ಎಫ್- 2538 ನಂಬ್ರದ ಕೆ.ಎಸ್.ಆರ್.ಟಿ.ಸಿ. ಬಸ್ಸನ್ನು ಅದರ ಚಾಲಕನು ಪ್ರಯಾಣಿಕರ ತಂಗುದಾಣದ ಬಳಿ ರಸ್ತೆಯಲ್ಲಿ ಹಾಕಿರುವ ಪ್ಲಾಸ್ಟಿಕ್ ಕೋನ್‌ನ ಎಡಬದಿಯಲ್ಲಿ ಬಸ್ಸು ನಿಲ್ಲಿಸುವ ಬದಲಾಗಿ ಕೋನ್‌ನ ಬಲಬದಿಯಲ್ಲಿ ರಸ್ತೆಯಲ್ಲಿ ಒಮ್ಮೆಲೆ ನಿರ್ಲಕ್ಷ್ಯತನದಿಂದ ಬ್ರೇಕ್ ಹಾಕಿ ಬಸ್ಸು ನಿಲ್ಲಿಸಿದ ಪರಿಣಾಮ ಕೆ.ಎಸ್.ಆರ್,ಟಿ,ಸಿ ಬಸ್ಸಿನ ಹಿಂಬದಿಯು ರಹಮತ್ತುಲ್ಲಾರವರ ದ್ವಿಚಕ್ರವಾಹಕ್ಕೆ ತಾಗಿ ರಹಮತ್ತುಲ್ಲಾರವರು ದ್ವಿಚಕ್ರ ವಾಹನ ಸಮೇತ ರಸ್ತೆಗೆ ಬಿದ್ದು ತಲೆಯ ಎಡಭಾಗಕ್ಕೆ ಗುದ್ದಿದ ರಕ್ತಗಾಯ ಹಾಗೂ ಮುಖಕ್ಕೆ ಮತ್ತು ಎದೆಯ ಎಡಭಾಗಕ್ಕೆ ಮತ್ತು ಎಡಕಾಲಿನ ತೊಡೆಗೆ ಗುದ್ದಿದ ಗಾಯವಾಗಿರುತ್ತದೆ.
3.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28-06-2014 ರಂದು ಬೆಳಿಗ್ಗೆ ಪಿರ್ಯಾದಿದಾರರಾದ ಶ್ರೀ ಪ್ರಶಾಂತ್ ರವರು ಎಂದಿನಂತೆ ತನ್ನ ಬಾಬ್ತು ಮೋಟಾರ್ ಸೈಕಲ್ ನಂಬ್ರ ಕೆಎ-19-ಇಇ-2970 ರಲ್ಲಿ ಕೆಲಸದ ನಿಮಿತ್ತ ಮನೆಯಿಂದ ಹೊರಟು ಹೋಗುತ್ತಿರುವಾಗ ಮಂಗಳೂರು ತಾಲೂಕು ಅಂಬ್ಲಮೊಗರು ಗ್ರಾಮದ ತಾರಿಗುಡ್ಡೆ ಎಂಬಲ್ಲಿ ತಲುಪುತ್ತಿದ್ದಂತೆ ಸುಮಾರು 06:30 ಗಂಟೆಗೆ ಯಾರೋ ನಾಲ್ಕು ಜನ ಅಪರಿಚಿತರು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ, ಅವರ ಪೈಕಿ ಓರ್ವನು ಕೈಯಲಿದ್ದ ತಲವಾರನ್ನು ಬೀಸಿದಾಗ ಪೆಟ್ಟು ಪಿರ್ಯಾದಿದಾರರ ತಲೆಯಲ್ಲಿದ್ದ ಹೆಲ್ಮೆಟ್ಗೆ ಬಿದ್ದು ಹೆಲ್ಮೆಟ್ ಜಖಂ ಆಗಿದ್ದು, ಇದರಿಂದ ಹೆದರಿದ ಪಿರ್ಯಾದಿದಾರರು ಬಸ್ ಸ್ಟ್ಯಾಂಡ್ ಕಡೆಗೆ ಓಡಿದಾಗ ಪಿರ್ಯಾದಿದಾರರಿಗೆ ಹಲ್ಲೆ ನಡೆಸಲು ಪ್ರಯತ್ನಿಸಿದ ಯುವಕರು ಪರಾರಿಯಾಗಿರುತ್ತಾರೆ.
4.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28.06.2014 ರಂದು ಫಿರ್ಯಾದಿದಾರರಾದ ಶ್ರೀ ಉಮ್ಮರ್ ಫಾರೂಖ್ ರವರು ಸಿದ್ದಿಕ್ ಮತ್ತು ಹ್ಯಾರೀಸ್‌ರವರೊಂದಿಗೆ ಬಂಟ್ವಾಳ ತಾಲೂಕು, ನರಿಂಗಾನ ಗ್ರಾಮದ, ಪೊಟ್ಟೊಳಿಕೆ ಎಂಬಲ್ಲಿರುವ ಕೆಂಪುಕಲ್ಲು ಕೋರೆಯಲ್ಲಿ ಕೆಲಸ ಮಾಡಿಕೊಂಡಿರುವಾಗ ಮದ್ಯಾಹ್ನ ಸುಮಾರು 2:30 ಗಂಟೆಗೆ ಸಮಯಕ್ಕೆ ಆರೋಪಿಗಳಾದ ಸಫಾಜ್, ನಾಸೀರ್, ನವಾಜ್, ನವಶಾದ್ ಅಪ್ಪಿ ಮತ್ತು ಶೌಕತ್ ಎಂಬವರು ಮೋಟಾರ್ ಸೈಕಲ್ ನಂಬ್ರ ಕೆಎ-19ಇಡಿ-6072 ಮತ್ತು ಕೆಎ-19ಇಎಲ್-502 ರಲ್ಲಿ ಬಂದು ಫಿರ್ಯಾದಿದಾರರನ್ನು ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಿಂದ ಬೈದು ಆರೋಪಿಗಳ ಪೈಕಿ ಸವಾಜ್ನು ದೊಣ್ಣೆಯಿಂದ ಫಿರ್ಯಾದಿದಾರರ ಮೈಕೈಗೆ ಹೊಡೆದು, ನಾಸೀರ್ನು ಸಿದ್ದಿಕ್ರವರ ತಲೆಗೆ ಪಂಚ್ನಿಂದ ಹೊಡೆದುದಲ್ಲದೇ ಉಳಿದ ಆರೋಪಿಗಳು ಫಿರ್ಯಾದಿದಾರರಿಗೆ ಮತ್ತು ಸಿದ್ದಿಕ್ರವರಿಗೆ ಕೈಯಿಂದ ಹೊಡೆದಾಗ ಅವರು ಬೊಬ್ಬೆ ಹಾಕಿದನ್ನು ಕೇಳಿ ಪಕ್ಕದಲ್ಲಿ ಕೆಲಸ ಮಾಡುತ್ತಿದ್ದವರು ಹತ್ತಿರಕ್ಕೆ ಬರುವುದನ್ನು ಕಂಡು ಆರೋಪಿಗಳು ``ನಿಮ್ಮನ್ನು ಇನ್ನು ಮುಂದಕ್ಕೆ ಜೀವ ಸಹಿತ ಬಿಡುವುದಿಲ್ಲ'' ಎಂದು ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ಆರೋಪಿಗಳು ನಡೆಸಿದ ಹಲ್ಲೆಯಿಂದ ಫಿರ್ಯಾದಿದಾರರ ಬಲಕೈಯ ಮೊಣಗಂಟಿಗೆ ಗುದ್ದಿದ ಗಾಯ, ಸಿದ್ದಿಕ್ರವರಿಗೆ ತಲೆಗೆ ರಕ್ತಗಾಯವಾಗಿರುತ್ತದೆ. ಗಾಯಾಳುಗಳು ಚಿಕಿತ್ಸೆಯ ಬಗ್ಗೆ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಆರೋಪಿಗಳು ದಾರಿಯಲ್ಲಿ ಹೋಗುವ ಹುಡುಗಿಯರಿಗೆ ತಮಾಷೆ ಮಾಡುತ್ತಿದ್ದುದನ್ನು ಫಿರ್ಯಾದಿದಾರರು ವಿಚಾರಿಸಿದ ದ್ವೇಷದಿಂದ ಈ ಕೃತ್ಯ ಎಸಗಿರುವುದಾಗಿದೆ.
5.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಹಪ್ಸಾ ರವರು ಮದುವೆಯಾಗಿ 11 ವರ್ಷಗಳಾಗಿದ್ದು ಮಕ್ಕಳಾಗಿರುವುದಿಲ್ಲ, ಗರ್ಭಕೋಶದ ಗಡ್ಡೆ ಅಪರೇಷನ್ ಮಾಡಿಸಲು ದಿನಾಂಕ: 22-02-2010 ರಂದು ಮಂಗಳೂರು ನರ್ಸಿಂಗ್ ಹೋಮ್ ಗೆ ದಾಖಲಾಗಿ ಚಿಕಿತ್ಸೆಯಲ್ಲಿದ್ದು, ದಿನಾಂಕ: 28-02-2010 ರಂದು ವೈದ್ಯರಾದ ಡಾ.ಪೂರ್ಣಿಮಾ ನಾಯರ್ ಮತ್ತು ಡಾ.ರೋಹನ್ ಗಟ್ಟಿ ಇವರು ಅಪರೇಷನ್ ಮಾಡಿ ಗರ್ಭಕೋಶದ ಗಡ್ಡೆಯನ್ನು ತೆಗೆದಿದ್ದು, ದಿನಾಂಕ: 13-03-2010 ರಂದು ಆಸ್ಪತ್ರೆಯಿಂದ ಡಿರ್ಸ್ಚಾಜ್ ಆಗಿ ಮನೆಗೆ ಹೋಗಿದ್ದವರು, ತಿಂಗಳಿಗೊಮ್ಮೆ ಮಂಗಳೂರು ನರ್ಸಿಂಗ್ ಹೋಮ್ ಗೆ ಬಂದು ಪರೀಕ್ಷೆ ಮಾಡಿಸುತ್ತಿದ್ದು, ನಂತರದ ಸಮಯದಲ್ಲಿ ನೋವು ಜಾಸ್ತಿ ಆಗಿರುವುದರಿಂದ ಮತ್ತು ಹೊಟ್ಟೆಯ ಬಲಬದಿ ಅಪರೇಷನ್ ಆದ ಜಾಗದಲ್ಲಿ ಸೊಂಕು ಆಗಿರುವುದರಿಂದ ದಿನಾಂಕ: 23-06-2014 ರಂದು ಅಪರೇಷನ್ ಮಾಡಿದ ಡಾ.ಪೂರ್ಣಿಮಾ ನಾಯರ್ ರವರಿಗೆ ತಿಳಿಸಿದಾಗ ಚರ್ಮದ ವೈದ್ಯರಿಗೆ ತೋರಿಸುವಂತೆ ತಿಳಿಸಿದ್ದು, ಅದರಂತೆ ಪಿರ್ಯಾದಿದಾರರು ದಿನಾಂಕ:25-06-2014 ರಂದು ಬಂಟ್ಸ್ ಹಾಸ್ಟೇಲ್ ಸೋಮಯಾಜಿ ಬಿಲ್ಡಿಂಗ್ ನಲ್ಲಿರುವ ಡಾ.ಕಲ್ಪನಾ ಶ್ರೀಧರ ರವರಲ್ಲಿಗೆ ಹೋದಾಗ ಸ್ಕಾನ್ ಮತ್ತು ಎಕ್ಸ್ ರೇ ಮಾಡಿಸಲು ತಿಳಿಸಿದಂತೆ, ದಿನಾಂಕ: 28-06-2014 ರಂದು S.C.S ಆಸ್ಪತ್ರೆಯ ಎದುರುಗಡೆ ಇರುವ Medi Scan Diagnostic Centreನಲ್ಲಿ ಸಂಜೆ 5-30 ಗಂಟೆಗೆ ಸ್ಕಾನ್ ಮತ್ತು ಎಕ್ಸ್ ರೇ ಮಾಡಿಸಿದಲ್ಲಿ ಹೊಟ್ಟೆಯ ಒಳಗಡೆ ಶಸ್ತ್ರ ಚಿಕಿತ್ಸೆಗೆ ಉಪಯೊಗಿಸುವ ಕತ್ತರಿ ಇದೆ ಎಂದು ಡಾ.ನವೀನಚಂದ್ರ.ಎಂ.ಶೆಟ್ಟಿ ರವರು ತಿಳಿಸಿದಂತೆ ಈ ವಿಷಯವನ್ನು ಪಿರ್ಯಾದಿದಾರರ ಗರ್ಭಕೋಶದ ಗಡ್ಡೆಯ ಅಪರೇಷನ್ ಮಾಡಿದ ವೈದ್ಯರಾದ ಡಾ.ಪೂರ್ಣಿಮಾ ಮತ್ತು ಡಾ.ರೋಹನ್ ಗಟ್ಟಿ ರವರಿಗೆ ತಿಳಿಸಿದಾಗ ಈ ವಿಷಯವನ್ನು ಯಾರಿಗೂ ತಿಳಿಸಬೇಡಿ ನಮ್ಮೊಳಗೆ ಬಗೆಹರಿಸಿಕೊಳ್ಳುವ ಎಂದು ಹೇಳಿರುವುದಾಗಿದೆ.
6.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 17-05-14 ರಂದು ಪಿರ್ಯಾದಿದಾರರಾದ ರೂಪಶ್ರೀ ರವರು ತನ್ನ ಮನೆಯಾದ ಮಂಗಳೂರು ತಾಲೂಕು ಕರಿಂಜೆ ಗ್ರಾಮದ ಕಂಬಳಬೆಟ್ಟು ಎಂಬಲ್ಲಿ ಕುಳಿತು ಸಿನೆಮಾ ಟಿವಿ ನೋಡುತ್ತಿರುವಾಗ ಅದರಲ್ಲಿ ಒಂದು ಮುಖವನ್ನು ತೋರಿಸಿ ಇದು ಯಾರ ಮುಖ ಎಂದು ತಿಳಿದು ಮೊಬೈಲ್ ನಂಬ್ರ 09431278941 ಕ್ಕೆ ಎಸ್ಎಮ್ಎಸ್ ಮಾಡಿ ಎಂಬ ಜಾಹೀರಾತು ಬಂದಿದ್ದು, ಅದಕ್ಕೆ ಪಿರ್ಯಾದಿದಾರರು ಉತ್ತರಿಸಿ, ದಿನಾಂಕ 02-06-14 ರಂದು ಪಿರ್ಯಾದಿದಾರರ ಬಾಬ್ತು ನಂಬ್ರಕ್ಕೆ 917542886014 ನಂಬ್ರದಿಂದ ಗುಲ್ಶನ್ ಕುಮಾರ್ ಎಂಬ ಹೆಸರಿನಲ್ಲಿ ಕರೆ ಮಾಡಿ ನಿಮಗೆ ಟಾಟಾ ಸಫಾರಿ ಕಾರು ಡ್ರಾ ಆಗಿದೆ, ಎಂದು ನಂಬಿಸಿ ನೀವು ಕೂಡಲೇ ಬ್ಯಾಂಕ್ ಅಕೌಂಟ್ ಗೆ ಹಣ ಹಾಕಿ ಎಂದು ತಿಳಿಸಿದ್ದು, ಅಲ್ಲದೇ ಆಗಾಗ ಕರೆ ಮಾಡಿ ಹಣ ಹಾಕುವಂತೆ ತಿಳಿಸಿದ್ದು, ಅವರ ಮಾತನ್ನು ನಂಬಿದ ಪಿರ್ಯಾದಿದಾರರು ಆತನು ನೀಡಿದ ಅಕೌಂಟ್ ನಂಬ್ರ 32933743074 ವಿಕ್ಕಿ ಕುಮಾರ್, 31940524650 ಗೋಪಾಲ್ ಕುಮಾರ್ 31341457232 ಎಂಡಿ ಸಾಜೀದ್ ಎಂಬವರ ಖಾತೆಗೆ ದಿನಾಂಕ 20-06-14 ರ ವರೆಗೆ ಒಟ್ಟು 1,19,800/- ರೂ ಹಣವನ್ನು ಎಸ್ಬಿಐ ಮೂಡಬಿದ್ರೆ ಶಾಖೆಯಲ್ಲಿ ಪಾವತಿಸಿದ್ದು, ಆದರೆ ಎದ್ರಿ ಯಾವುದೇ ಕಾರನ್ನು ನೀಡದೇ ಪಿರ್ಯಾದಿದಾರರನ್ನು ವಂಚಿಸಿ ಹಣವನ್ನು ಪಡೆದು ನಂಬಿಕೆ ದ್ರೋಹ ಮಾಡಿರುತ್ತಾನೆ.
7.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 28-06-2014 ರಂದು ಮಂಗಳೂರು ತಾಲೂಕು ಪುತ್ತಿಗೆ ಗ್ರಾಮ ಗುಡ್ಡೆಯಂಗಡಿ ಬಂಕಿಮಜಲು ಇಮನ್ಯೂವೆಲ್ ಎಂಬ ಹೆಸರಿನ ಮನೆಯ ವಾಸಿ ಹೆನ್ರಿ ಮಸ್ಕರೇನಸ್ ಎಂಬವರ ಹೆಂಡತಿ ಪ್ರಾಯ 31 ವರ್ಷದ ಶ್ರೀಮತಿ ವಿದ್ಯಾ ಮಸ್ಕರೇನಸ್ ಎಂಬವರ ಮನೆಯಲ್ಲಿ ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 12-00 ಗಂಟೆಯ ನಡುವಿನ ಸಮಯದಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಎದುರಿನ ಬಾಗಿಲಿನ ಬೀಗವನ್ನು ಯಾವುದೋ ಸಾದನದಿಂದ ಮೀಟಿ ಒಡೆದು ಒಳ ಪ್ರವೇಶಿಸಿ ಮನೆಯ ಒಳಗಡೆ ಕೋಣೆಗಳಿಂದ ಕಪಾಟುಗಳಲ್ಲಿದ್ದ ಸುಮಾರು 4 ಗ್ರಾಂ ತೂಕದ ಹಳೆಯ ಚಿನ್ನದ ಉಂಗುರ - 1, ಸುಮಾರು 6 ಗ್ರಾಮ ತೂಕದ ಹಳೆಯ ಚಿನ್ನದ ಉಂಗುರ -1, ಸುಮಾರು 4 ಗ್ರಾಂ ತೂಕದ ಹಳೆಯ ಚಿನ್ನದ ಕಿವಿ ಬೆಂಡೋಲೆಗಳು - 1 ಜತೆ ಅಂದಾಜು ಮೌಲ್ಯ ರೂ 14.000/- ಹಾಗೂ ಕೋಣೆಯ ಒಳಗಡೆ ಟೇಬಲ್‌ನ ಮೇಲಿಟ್ಟಿದ್ದ ಹೆಚ್‌ಪಿಎಲ್ ಕಂಪೆನಿಯ ಹಳೆಯ ಲ್ಯಾಪ್ಟಾಪ್ - 1 ಅಂದಾಜು ಮೌಲ್ಯ ರೂ 10.000/- ಆಗಿದ್ದು ಕಳವಾದ ಸೊತ್ತುಗಳ ಒಟ್ಟು ಮೌಲ್ಯ ರೂ 24.000/- ಆಗಬಹುದು.
8.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28-06-2014 ರಂದು ಪಿರ್ಯಾದಿದಾರರಾದ ಶ್ರೀ ಲಲಿತ್ ರಾಜ್ ರವರು ಅವರ ಮನೆಯಾದ ದೇರಳಕಟ್ಟೆಯಿಂದ ಸೋಮೇಶ್ವರ ದೇವಸ್ಥಾನಕ್ಕೆ ಹೋಗುವರೇ ಅವರ ತಮ್ಮ ಪ್ರೀತಮ್ ಪ್ರಜೀತ್ ಸುವರ್ಣ ರವರೊಂದಿಗೆ ಬೈಕ್ ನಂಬ್ರ KA-19-EE-9930 ನೇದರಲ್ಲಿ ಸಹಸವಾರಾಗಿ ಕುಳಿತುಕೊಂಡು ಅವರ ತಮ್ಮ ಸವಾರರಾಗಿ ಚಲಾಯಿಸಿಕೊಂಡು ಪನೀರ್ ಮಾಡೂರು ಮಾರ್ಗವಾಗಿ ಹೋಗುತ್ತಾ ನಾಚಾರು ತಿರುವಿನಲ್ಲಿ ತಲುಪಿದಾಗ ಸಮಯ ಸುಮಾರು 11:45 ಗಂಟೆಗೆ ಪಿರ್ಯಾದಿದಾರರ ವಿರುದ್ಧ ದಿಕ್ಕಿನಿಂದ KA-19-P-2984 ನೇ ಇಂಡಿಕಾ ಕಾರಿನ ಚಾಲಕನು ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದಾಗ ಪಿರ್ಯಾದಿದಾರರ ತಮ್ಮನು ಬೈಕನ್ನು ಮಣ್ಣು ರಸ್ತೆಗೆ ಇಳಿಸಿ ಬೈಕನ್ನು ನಿಲ್ಲಿಸಿ ಕಾರಿನ ಚಾಲಕನಲ್ಲಿ ನಮ್ಮ ವಾಹನವನ್ನು ಅಡಿಗೆ ಹಾಕಿ ಕೊಲ್ಲುತ್ತೀರ ಎಂದು ಜೋರು ಬೊಬ್ಬೆ ಹೊಡೆದಾಗ ಆರೋಪಿ ಕಾರಿನ ಚಾಲಕನು ಕಾರನ್ನು ನಿಲ್ಲಿಸಿ ಪಿರ್ಯಧಿದಾರರನ್ನು ಉದ್ದೇಶಿಸಿ ನಿಮ್ಮನ್ನು ಕೊಲ್ಲುತ್ತೇನೆ ಎಂದು ಹೇಳಿ ಪಿರ್ಯಾದಿದಾರರ ತಮ್ಮನ ಕೈಯಲ್ಲಿದ್ದ ಹೆಲ್ಮೆಟ್ನ್ನು ಎಳೆದು ಅದರಿಂದ ಪಿರ್ಯಧಿದಾರರ ತಮ್ಮನಿಗೆ ತಲೆಗೆ, ಮುಖಕ್ಕೆ, ಭುಜಕ್ಕೆ ಹೊಡೆದುದಲ್ಲದೆ ಅಲ್ಲಿದ್ದ ಕೆ.ಇ.ಬಿ. ಲೈನ್ ಮ್ಯಾನ್‌ನ ಬಳಿ ಇದ್ದ ಕತ್ತಿಯನ್ನು ಬಲತ್ಕಾರವಾಗಿ ಎಳೆದು ಕತ್ತಿಯನ್ನು ಪಿರ್ಯಾದಿದಾರರ ಕಡೆ ಬೀಸಿದನು ಇದರಿಂದ ಪಿರ್ಯಾದಿದಾರರ ಎಡ ಕೈ ಮತ್ತು ಬಲ ಕಣ್ಣಿನ ಬಳಿ ಗಾಯವಾಯಿತು. ಬಳಿಕ ಪಿರ್ಯಾದಿದಾರರ ತಮ್ಮನಿಗೆ ಆರೋಪಿ ಹಾಗೂ ಕಾರಿನಲ್ಲಿದ್ದ ಇನ್ನೊಬ್ಬ ವ್ಯಕ್ತಿಯು ದೊಣ್ಣೆಯಿಂದ ಹೊಡೆದು ತಲೆ, ಭುಜ, ಬೆನ್ನಿಗೆ ತೀವ್ರವಾಗಿ ಹೊಡೆದು ಭುಜದ ಮೂಳೆ ಮುರಿದಿರುತ್ತದೆ. ಬಳಿಕ ಆರೋಪಿಗಳು ಪಿರ್ಯಾದಿದಾರರನ್ನು ಉದ್ದೇಶಿಸಿ ಅಶ್ಲೀಲ ಮಾತಿನಿಂದ ನಿಂದಿಸಿ ಆರೋಪಿಗಳು ಕಾರಿನಲ್ಲಿ ಅಲ್ಲಿಂದ ಪರಾರಿಯಾಗಿರುತ್ತಾರೆ.
9.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28-06-2014 ರಂದು ಪಿರ್ಯಾದಿದಾರರಾದ ಶ್ರೀ ನಾರಾಯಣ ಸಾಲ್ಯಾನ ರವರು ದೇರಳಕಟ್ಟೆ ಬ್ಯಾಂಕಿಗೆ ಹೋಗುವರೇ ಪಿರ್ಯಾದಿದಾರರ ಬಾಬ್ತು ಕೆಎ-19-ಪಿ-8429 ನೇದರಲ್ಲಿ ಅವರ ಸಹೋದರಿ ಲೋಲಾಕ್ಷಿ ರವರನ್ನು ಕುಳ್ಳಿರಿಸಿಕೊಂಡು ತನ್ನ ಮನೆಯಾದ ಕೋಟೆಕಾರಿನಿಂದ ಹೊರಟು ಕೋಟೆಕಾರು ಬೀರಿ ಮಾರ್ಗವಾಗಿ ಹೋಗುತ್ತಾ ಕೋಟೆಕಾರು ಕೆ.ಎಸ್.ಹೆಗ್ಡೆ ಫಾರಾ ಮೆಡಿಕಲ್ ಕಾಲೇಜ್ ಬಳಿ ತಲುಪುವಾಗ ಸಮಯ ಸುಮಾರು 11:45 ಗಂಟೆಯ ಸಮಯಕ್ಕೆ ಪಿರ್ಯಾದಿದಾರರ ಎದುರಿನಿಂದ ಬರುತ್ತಿದ್ದ ಒಂದು ಮೋಟಾರು ಸೈಕಲ್ ಸವಾರನು ಕೋಟೆಕಾರು ಬೀರಿ ಕಡೆಗೆ ಸವಾರಿ ಮಾಡಿಕೊಂಡು ಹೋದವರು ವಾಪಾಸು ತಿರುಗಿ ಬಂದು ಪಿರ್ಯಾದಿದಾರರ ಕಾರನ್ನು ತಡೆದು ಬೈಕನ್ನು ಕಾರಿಗೆ ಅಡ್ಡ ನಿಲ್ಲಿಸಿ ಪಿರ್ಯಧಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಆರೋಪಿಗಳು ಕೈಯಲ್ಲಿದ್ದ ಹೆಲ್ಮೆಟ್ ಹಾಗೂ ಕೈಯಿಂದ ಪಿರ್ಯಾದಿದಾರಿಗೆ ಹೊಡೆದುದಲ್ಲದೆ ಪಿರ್ಯಾದಿದಾರ ಸಹೋದರಿಗೆ ಅವಾಚ್ಯ ಬೈದಿರುತ್ತಾರೆ. ಬಳಿಕ ಆರೋಪಿಯು ಫೋನ್ ಮಾಡಿ ಸುಮಾರು 20 ಮಂದಿಯನ್ನು ಸ್ಥಳಕ್ಕೆ ಕರೆಯಿಸಿ ಮರದ ಗೆಲ್ಲು, ಸೋಂಟೆ, ಕಬ್ಬಿಣದ ರಾಡ್ ಹಾಗು ಬಾಟ್ಲಿಗಳಿಂದ ಹೊಡೆದು ಹಲ್ಲೆ ಮಾಡಿರುತ್ತಾರೆ. ಪಿರ್ಯಾದಿದಾರರಿಗೆ ಹೊಡೆದ ಹಲ್ಲೆ ಮಾಡಿದ ಆರೋಪಿಗಳ ಹೆಸರು ಪ್ರೀತಮ್, ಲವಿತ್ ಮತ್ತು ಮತ್ತಿತರರು ಆಗಿರುತ್ತಾರೆ.
10.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22-06-2014 ರಂದು ಪಿರ್ಯಾದಿದಾರರಾದ ಶ್ರೀ ರವೀಂದ್ರ ಬಿ. ರವರು ಸಂಸಾರ ಸಮೇತ ಅವರ ಹೆಂಡತಿ ನಡೆಸುವ ಮಂಗಳೂರಿನಲ್ಲಿರುವ ಪಿ.ಜಿ.ಗೆ ಹೋಗಿದ್ದು, ವಾಪಾಸು ದಿನಾಂಕ 28-06-2014 ರಂದು ಸಂಜೆ 4:00 ಗಂಟೆಗೆ ತನ್ನ ಮನೆಗೆ ಬಂದು ನೋಡಿದಾಗ ಎದುರಿನ ಬಾಗಿಲು ತೆರೆದಿದ್ದು, ಪಿರ್ಯಾದಿದಾರರ ಹಾಕಿದ ಲಾಕ್ನ್ನು ಯಾವುದೋ ಆಯುಧದಿಂದ ಮೀಟಿ ತೆರೆದಂತೆ ಕಂಡು ಬಂದಿರುತ್ತದೆ. ಮನೆಯ ಒಳಗಡೆ ಹೋಗಿ ನೋಡಲಾಗಿ ಬೆಡ್ ರೂಂನ ಗೋದ್ರೇಜ್ ಕಪಾಟಿನ ಲಾಕರ್ನಲ್ಲಿ ಇದ್ದ ವಿವಿಧ ನಮೂನೆಯ ಸುಮಾರು 10 ಪವನ್ ಚಿನ್ನಾಭರಣಗಳನ್ನು ಮತ್ತು ನಗದು ಹಣ ರೂ. 4000/- ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಸೊತ್ತಿನ ಒಟ್ಟು ಮೌಲ್ಯ ರೂ. 2 ಲಕ್ಷ 54 ಸಾವಿರ ಆಗಬಹುದು.
No comments:
Post a Comment