Wednesday, June 18, 2014

Daily Crime Reports 18-06-2014

ದೈನಂದಿನ ಅಪರಾದ ವರದಿ.

ದಿನಾಂಕ 18.06.201407:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

3

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

2

ಮನೆ ಕಳವು ಪ್ರಕರಣ

:

1

ಸಾಮಾನ್ಯ ಕಳವು

:

1

ವಾಹನ ಕಳವು

:

2

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

5

ವಂಚನೆ ಪ್ರಕರಣ        

:

0

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

4

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನಾಂಕ: 16-06-2014 ರಂದು ಪಿರ್ಯಾದಿದಾರರಾದ ಶ್ರೀಮತಿ ವಿದ್ಯಾಶ್ರೀ ರವರ ಗಂಡನವರಾದ ಶ್ರೀ ಪಿ. ಗಣೇಶ್ರವರೊಂದಿಗೆ ಅವರ ಬಾಬ್ತು ಮೋಟಾರು ಸೈಕಲ್ನಂಬ್ರ ಕೆ.-19-.ಬಿ-2917ನೇದರಲ್ಲಿ ಸಹಸವಾರರಾಗಿ ಕುಳಿತುಕೊಂಡು ಮಂಗಳೂರು ನಗರದ ಮಲ್ಲಿಕಟ್ಟೆಯಿಂದ ಗೌರಿಮಠಕ್ಕೆ ಹೋಗಲೆಂದು ಹೋಗುತ್ತಾ ಸಮಯ ಸಂಜೆ 17:45 ಗಂಟೆಗೆ ಕಾರ್ಸ್ಟ್ರೀಟ್ವೆಂಕಟರಮಣ ದೇವಸ್ಥಾನದ ಬಳಿಗೆ ತಲುಪಿದಾಗ, ಮಹಾಮಾಯಿ ದೇವಸ್ಥಾನದ ಕಡೆಯಿಂದ ವಿ.ಟಿ ರೋಡ್ಕಡೆಗೆ ಮೋಟಾರು ಸೈಕಲ್ನಂಬ್ರ ಕೆ.-19-.ಜೆ-7608 ನೇದನ್ನು ಅದರ ಸವಾರನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಗಂಡ ಚಲಾಯಿಸುತ್ತಿದ್ದ ಮೋಟಾರು ಸೈಕಲ್ಗೆ  ಡಿಕ್ಕಿಹೊಡೆದಿದ್ದು, ಪರಿಣಾಮ  ಪಿರ್ಯಾದಿದಾರರ ಗಂಡ ಪಿ. ಗಣೇಶ್ರವರ ಬಲಕಾಲಿನ ಹೆಬ್ಬರಳಿಗೆ ಮೂಳೆ ಮುರಿತದ ರಕ್ತ ಗಾಯ ಉಂಟಾಗಿ ಚಿಕಿತ್ಸೆಯ ಬಗ್ಗೆ ನಗರದ ಯೆನೆಪೋಯಾ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.

 

2.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ :  ಪಿರ್ಯಾದಿದಾರರಾದ ಶ್ರೀ ಬಿ.ಎ. ವಸಂತ್ ಕುಮಾರ್ ರವ ಮಗ ಬಿ.ವಿ.ಶ್ರವಣ್ ಭಾರದ್ವಾಜ್ (22) ಎಂಬಾತನು ಎಸ್.ಡಿ.ಎಮ್. ಕಾಲೇಜ್  ಮಂಗಳೂರಿನಲ್ಲಿ BA, LLB, ವಿದ್ಯಾಭ್ಯಾಸ ಮಾಡುತ್ತಿದ್ದು ಕೊಟ್ಟಾರ ಚೌಕಿಯಲ್ಲಿರುವ "ಮಂಜುಷಾ" ಹಾಸ್ಟೇಲ್ ನಲ್ಲಿ ಸುಮಾರು ಒಂದು ವರ್ಷದಿಂದ ಉಳಕೊಂಡಿದ್ದವನುದಿನಾಂಕ 14-06-2014 ರಂದು ಎಂದಿನಂತೆ ಬೆಳಿಗ್ಗೆ ಕಾಲೇಜ್ ಗೆಂದು ಹೋಗಿದ್ದು ವಾಪಸು ಹಾಸ್ಟೆಲ್ ಗೆ ಬಾರದೇ ಕಾಣೆಯಾಗಿರುತ್ತಾನೆ.

 

3.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನಾಂಕ16-06-2014 ರಂದು ಬೆಳಗ್ಗಿನ ಜಾವ ಸುಮಾರು 03-00 ಗಂಟೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಮಂಗಳೂರು ವಿಭಾಗ-3 ನೇ ಘಟಕದಲ್ಲಿ ನಗದು ಶಾಖೆಯ ಪಕ್ಕದಲ್ಲಿ ಇದ್ದ ವಿಶ್ರಾಂತಿ ಗೃಹದಲ್ಲಿ ತಂಗಿದ್ದ ಘಟಕದ ನಿರ್ವಾಹಕರಾದ ಶ್ರೀ ನಾಗರಾಜು ರವರು ಶೌಚಾಲಯಕ್ಕೆಂದು ಎದ್ದು ಬಂದಾಗ ನಗದು ಶಾಖೆಯ ಬಳಿ ಯಾರೋ ಒಬ್ಬ ಅಪರಿಚಿತ ನಿಂತುಕೊಂಡಿದ್ದು "ಯಾರೋ ನೀನು, ಯಾಕೆ ಇಲ್ಲಿ ನಿಂತಿದ್ದೀಯಾ" ಎಂದು ವಿಚಾರಿಸಿದಾಗ ಆ ವ್ಯಕ್ತಿಯು ಓಡಿಹೋಗಿರುತ್ತಾನೆ ಹಾಗೂ ಸದ್ರಿ ನಿರ್ವಾಹಕರ ಹಿಂಬದಿಯಿಂದ ಮತ್ತೊಬ್ಬ ವ್ಯಕ್ತಿಯು ನಿರ್ವಾಹಕರನ್ನು ತಳ್ಳಿಕೊಂಡು ಓಡಿ ಹೋಗಿರುತ್ತಾರೆ. ನಂತರ ಬೆಳಿಗ್ಗೆ 06-00 ಗಂಟೆಗೆ ಘಟಕದ ನಗದು ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಕಿರಿಯ ಸಹಾಯಕಿ ಕುಮಾರಿ ಹೇಮಲತಾ ರವರು ಕರ್ತವ್ಯ ನಿರ್ವಹಿಸುವ ಸಲುವಾಗಿ ನಗದು ಶಾಖೆಯ ಮುಖ್ಯದ್ವಾರವನ್ನು ತೆರೆದು ಒಳಪ್ರವೇಶಿಸಿದಾಗ ನಗದು ಶಾಖೆಯ ನಗದು ಪೆಟ್ಟಿಗೆಯನ್ನು ಗ್ಯಾಸ್ ಕಟ್ಟರ್ನಿಂದ ತುಂಡರಿಸಿರುವುದು ಕಂಡುಬಂದಿದ್ದು ಈ ನಗದು ಪೆಟ್ಟಿಗೆಯಲ್ಲಿ  ಸುಮಾರು ರೂ. 16,85,034.00 ಇದ್ದು ಇದನ್ನು ದೋಚಲು ಪ್ರಯತ್ನಿಸಿರುವುದಾಗಿದೆ.

 

4.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 17-06-2014 ರಂದು  ಬೆಳಿಗ್ಗೆ ಸುಮಾರು 10-30 ಗಂಟೆ ಸಮಯಕ್ಕೆ ಮಂಗಳೂರು ನಗರದ ಜಿಲ್ಲಾ ಕಾರಾಗೃಹದ  ಬಿ ಬ್ಲಾಕ್ ನಲ್ಲಿ   ಆರೋಪಿತ ಖೈದಿಗಳು ಅಕ್ರಮ ಕೂಟ ಸೇರಿ ಕೆಳಗಿದ್ದ ಪಿರ್ಯಾದಿದಾರರಾದ ಶೈಲೇಶ್ ರೈ ರವರನ್ನು ಮೇಲಕ್ಕೆ ಕರೆದು ಇದಕ್ಕೆ ಒಪ್ಪದ ಪಿರ್ಯಾದಿದಾರರು  ತನ್ನ ಬ್ಯಾರಕ್ಕಿಗೆ ಹೋಗಿ ಮಲಗಿದ್ದಾಗ ಆರೋಪಿತರು ಅಕ್ರಮ ಕೂಟಸ್ತರಾಗಿ  ಅಲ್ಲಿಗೂ ಬಂದು ಪಿರ್ಯಾದಿದಾರರನ್ನು ಉದ್ದೇಶಿಸಿ ಅವ್ಯಾಚ್ಯ ವಾಗಿ ಬೈದು ಕೈಗಳಿಂದ ಹೊಡೆದು ಮೂಗಿಗೆ ರಕ್ತಗಾಯ ಪಡಿಸಿದ್ದಲ್ಲದೆ ಪಿರ್ಯಾದಿದಾರರನ್ನು ಹೊರ ಹೋಗದಂತೆ ತಡೆದು ನೆಲಕ್ಕೆ ಕೆಡವಿ ಪಿರ್ಯಾದಿದಾರರ  ಕುತ್ತಿಗೆಯನ್ನು ಬಲತ್ಕಾರವಾಗಿ ಒತ್ತಿ ಹಿಡಿದು ಕೊಲ್ಲುವರೇ ಪ್ರಯತ್ನ ಪಟ್ಟಿರುವುದಾಗಿದೆ.

 

5.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನಾಂಕ 16.06.2014 ರಂದು  12.00  ಗಂಟೆಗೆ ಮಂಗಳೂರು ತಾಲುಕ್ ಬಿಕರ್ನಕಟ್ಟೆ ಗ್ರಾಮದ ಬಿಕರ್ನಕಟ್ಟೆ ವೀನಸ್ ಪರ್ನಿಚರ್ ಬಳಿ   KA19-MB-5113 ,TATA SUMO GRAND  ವಾಹನವನ್ನು ಅದರ ಚಾಲಕ ಗಣೇಶ್ ಕಾಮತ್ ಎಂಬಾತನು ಬಿಕರ್ನಕಟ್ಟೆ ಕಡೆಯಿಂದ ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ  ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ  ಚಲಾಯಿಸಿಕೊಂಡು ಬಂದು ರಸ್ತೆಯ ಬಲಕ್ಕೆ ತೆರೆದ ಡಿವೈಡರ್ ಕಡೆಗೆ ತಿರುಗಿಸಿದ ಪರಿಣಾಮ ಬಿಕರ್ನಕಟ್ಟೆ ಕಡೆಯಿಂದ ಬರುತ್ತಿದ್ದ   ಸಕರಿಯಾ ಯಾನೆ ನಿತಿನ್ ಮ್ಯಾಥ್ಯೂ  ಎಂಬುವರು ಸವಾರಿ ಮಾಡಿಕೊಂಡು ಬರುತ್ತಿದ್ದ KA19-S-5549  ನಂಬ್ರದ ಮೋಟರ್ ಸೈಕಲ್ ಗೆ ಡಿಕ್ಕಿ ಮಾಡಿದ ಪರಿಣಾಮ ಮೋಟರ್ ಸೈಕಲ್ ಸವಾರ ಸಕರಿಯಾ ಯಾನೆ ನಿತಿನ್ ಮ್ಯಾಥ್ಯೂ ರವರಿಗೆ ಎಡ ಬದಿಯ ಕಾಲರ್ ಬೋನ್  ಮುಂತಾದ ಗಂಭೀರ ಗಾಯವಾಗಿರುತ್ತದೆ. ಗಾಯಾಳು ಕೆ.ಎಸ್.ಹೆಗ್ಡೆ ದೇರಳಕಟ್ಟೆ ಆಸ್ಪತ್ರೆಯಲ್ಲಿ ಚಿಕೆತ್ಸೆಯಲ್ಲಿರುತ್ತಾರೆ.

 

6.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನಾಂಕ: 17-06-2014 ರಂದು ಸಾಯಂಕಾಲ ಸುಮಾರು 7:25 ಗಂಟೆಯ ಸಮಯಕ್ಕೆ ಮಾನ್ಯ ನ್ಯಾಯಾಲಯದ ಅಧಿಕಾರವ್ಯಾಪ್ತಿಗೊಳಪಟ್ಟ ಕಾವೂರು ಠಾಣಾ ಸರಹದ್ದಿನ ಮರಕಡ ಗ್ರಾಮದ ಬೋಂದೇಲ್ಜಂಕ್ಷನ್ಎಂಬಲ್ಲಿಯ ಮಂಗಳೂರುಬಜಪೆ ವಿಮಾನ ನಿಲ್ದಾಣ ಸಾರ್ವಜನಿಕ ಎಕ-ಮಖ ರಸ್ತೆಯಲ್ಲಿ ನಡೆದ ರಸ್ತೆ ವಾಹನ ಅಪಘಾತದ ಬಗ್ಗೆ ಆಕ್ರೋಶಗೊಂಡ ಸಾರ್ವಜನಿಕರು ಅಕ್ರಮ ಕೂಟ ಸೇರಿಕೊಂಡು ಕೃತ್ಯವನ್ನು ನಡೆಸುವ ದುರುದ್ದೇಶದಿಂದಲೇ ಸಮಾನ ಮನಸ್ಕರಾಗಿ ಸಾರ್ವಜನಿಕ ಏಕ- ಮಖ ರಸ್ತೆಗೆ ಕಲ್ಲುಗಳನ್ನು ಅಡ್ಡವಾಗಿಟ್ಟು ರಸ್ತೆ ತಡೆಯನ್ನುಂಟುಮಾಡಿ ಸಾರ್ವಜನಿಕ ವಾಹನ ಸಂಚಾರಕ್ಕೆ ತಡೆಯನ್ನುಂಟುಮಾಡಿದವರಾಗಿರುತ್ತಾರೆ.

 

7.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನಾಂಕ 15-06-2014ರಂದು ಸಂಜೆ 4:30 ಗಂಟೆಗೆ ಮಂಗಳೂರು ತಾಲೂಕು ಬೋಳಿಯಾರು ಗ್ರಾಮದ ಧರ್ಮ ಎಂಬಲ್ಲಿ ಪಿರ್ಯಾದಿದಾರರಾದ ಶ್ರೀ ವಿನಯ ಮಾರ್ಲ, ತಂದೆ ಆನಂದ ಮಾರ್ಲ, ಅಣ್ಣ ವೀರೇಂದ್ರ ಮಾರ್ಲ ಸೇರಿ ತೋಟದ ಕೆಲಸ ಮಾಡಿಕೊಂಡಿರುವಾಗ ಆರೋಪಿಗಳಾದ ಸತೀಶ್ ಆಚಾರಿ, ದೇವೂ, ರಂಜಿತ್, ಸುಭಾಶ್, ರತ್ನಾಕರಾ, ಅಶ್ವಿತ್, ಗಣೇಶ್, ಕಿಶೋರ್, ಹರೀಶ್ ಪೂಜಾರಿ, ದೇವರಾಜ, ಜಯರಾಮ ರೈ, ಪವನ್ ರಾಜ್ ಮತ್ತು ಸುದರ್ಶನ್, ಎಂಬುವರುಗಳು ಅಕ್ರಮ ಕೂಟ ಸೇರಿ, ಅವ್ಯಾಚ್ಯ ಶಬ್ದಗಳಿಂದ ಬೈದು, ಸಮಾನ ಉದ್ದೇಶದಿಂದ ಕೈಯಿಂದ ಹಲ್ಲೆ ನಡೆಸಿರುತ್ತಾರೆ. ಅವರಲ್ಲಿ ರತ್ನಾಕರನು ಕೈಯಲ್ಲಿದ್ದ ತಲವಾರಿನಿಂದ ಪಿರ್ಯಾದಿದಾರರ ಬಲ ಕೆನ್ನೆಗೆ, ಭುಜಕ್ಕೆ ಮತ್ತು ತಲೆಗೆ ಹೊಡೆದಿರುತ್ತಾನೆ. ಅಶ್ವಿತ್ ಮತ್ತು ರಂಜಿತ್ ಸೇರಿ ಅವರ ಕೈಯಲ್ಲಿದ್ದ ದೊಣ್ಣೆಯಿಂದ ವೀರೇಂದ್ರರವರ ತಲೆಗೆ ಮತ್ತು ಎಡಕೈಯ ಮೊಣಗಂಟಿಗೆ ಹಲ್ಲೆ ಮಾಡಿರುತ್ತಾರೆ. ನಂತರ ಉಳಿದವರೆಲ್ಲರೂ ಸೇರಿ ಹಿಗ್ಗಾ-ಮುಗ್ಗಾ ಹೊಡೆದು ಜೀವ ಬೆದರಿಕೆ ಹಾಕಿರುತ್ತಾರೆ.

 

8.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನಾಂಕ 16.06.2014 ರಂದು ಬೆಳಿಗ್ಗೆ 07:30 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು ಬೋಳಿಯಾರ್ಗ್ರಾಮದ ಧರ್ಮ ಎಂಬಲ್ಲಿ ಫಿರ್ಯಾದಿದಾರರಾದ ಜಯಶ್ರೀ ರವರು ದನವನ್ನು ಮೇವು ತಿನ್ನಿಸಲು ಹೋಗುತ್ತಿದ್ದಾಗ ಆರೋಪಿ ಶೈಲೇಶ್ರೈ ಎಂಬಾತನು ಫಿರ್ಯಾದಿದರರನ್ನು ತಡೆದು ನಿಲ್ಲಿಸಿ "ನಿನಗೆ ಈ ದಾರಿಯಲ್ಲಿ ಬರಬಾರದು ಎಂದು ಹೇಳಿಲ್ಲವೇ" ಎಂದು ಅವಾಚ್ಯ ಶಬ್ದಗಳಿಂದ ಬೈದು ತಾನು ತಂದ ಮರದ ದೊಣ್ಣೆಯಿಂದ ಫಿರ್ಯಾದಿದಾರರ ತಲೆಗೆ ಹೊಡೆದಾಗ ಫಿರ್ಯಾದಿದಾರರು ಬೊಬ್ಬೆ ಹೊಡೆದಾಗ ಅಲ್ಲಿಗೆ ಬಂದ ಫಿರ್ಯಾದಿದಾರರ ತಂದೆ, ತಾಯಿ, ಮತ್ತು ಚಿಕ್ಕಪ್ಪನ ಮಗಳು ದಿವ್ಯಶ್ರೀ ಎಂಬರಿಗೆ ಕೂಡಾ ಆರೋಪಿಯು ದೊಣ್ಣೆಯಿಂದ ಹೊಡೆದಿರುತ್ತಾನೆ. ಬೊಬ್ಬೆ ಕೇಳಿ ಇತರರು ಬರುವುದನ್ನು ಕಂಡು ಆರೋಪಿಯು "ನಿಮ್ಮ ಮುಂದೆ ಬದುಕಲು ಬಿಡುವುದಿಲ್ಲ" ಎಂದು ಜೀವ ಬೆದರಿಕೆ ಒಡ್ಡಿ ಹೋಗಿರುತ್ತಾನೆ. ಆರೋಪಿಯ ಈ ಕೃತ್ಯದಿಂದ ಫಿರ್ಯಾದಿದರರ ತಲೆಗೆ ರಕ್ತಗಾಯ, ದಿವ್ಯಾಶ್ರಿಗೆ ಎಡಕೈ ಬೆರಳಿಗೆ ಮತ್ತು ಬಲಬದಿಯ ಕಿಬ್ಬೊಟ್ಟೆಗೆ ಗುದ್ದಿದ ಗಾಯ, ಫಿರ್ಯಾದಿಯ ತಂದೆಗೆ ಮೈಕೈಗೆ ಗುದ್ದಿದ ಗಾಯ ಮತ್ತು ತಾಯಿಗೆ ಬಲಕೈ ಬೆರಳುಗಳಿಗೆ ತರಚಿದ ಗಾಯವಾಗಿರುತ್ತದೆ. ಗಾಯಾಳುಗಳು ದೇರಳಕಟ್ಟೆ ಕೆ.ಎಸ್‌.ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ. ಆರೋಪಿಯ ಮನೆಯ ಹತ್ತಿರ ಹಾದು ಹೋಗುವ ಸಾರ್ವಜನಿಕ ರಸ್ತೆಯಲ್ಲಿ ಓಡಾಡುವುದು ಆರೋಪಿಗೆ ಅಸಮಾಧಾನವಿದ್ದು ಇದೇ ದ್ವೇಷದಿಂದ ಈ ಕೃತ್ಯ ಎಸಗಿರುವುದಾಗಿದೆ.

 

9.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನಾಂಕ 15-06-2014 ರಂದು ಸಂಜೆ 5:30 ಗಂಟೆಗೆ ಮಂಗಳೂರು ತಾಲೂಕು ಬೊಳಿಯಾರು ಗ್ರಾಮದ ಬೊಳಿಯಾರು ಜಂಕ್ಷನ್ ನಲ್ಲಿ ಪಿರ್ಯಾದಿದಾರರಾದ ಶ್ರೀ ವಿನೋದ್ ಡಿ'ಸೋಜಾ ರವರು ಆಟೋ ರಿಕ್ಷಾವನ್ನು ಪಾರ್ಕ್ ಮಾಡಿ ನಿಂತಿರುವಾಗ, ಮೆಲ್ಕಾರು ಕಡೆಯಿಂದ ಬೊಳಿಯಾರು ಕಡೆಗೆ ದ್ವಿಚಕ್ರ ವಾಹನ ಸಂಖ್ಯೆ ಕೆಎ-19-ಇಎಲ್-502 ನ್ನು ಭರತ್ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದು, ಬೊಳಿಯಾರು ಜಂಕ್ಷನ್ ನಲ್ಲಿ ನಿಂತಿದ್ದ ತೋಮಸ್ ವೇಗಸ್(61) ಎಂಬುವರಿಗೆ ಡಿಕ್ಕಿ ಹೊಡೆದ ಪರಿಣಾಮ ತೋಮಸ್ ವೇಗಸ್ ರವರಿಗೆ ತಲೆಗೆ ತೀರ್ವ ಸ್ವರೂಪದ ಗಾಯಾವಾಗಿರುತ್ತದೆ. ಈ ಘಟನೆಗೆ ಭರತ್ ರವರು ದ್ವಿಚಕ್ರ ವಾಹನವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ್ದೆ ಕಾರಣವಾಗಿರುತ್ತದೆ.

 

10.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 17.06.2014 ರಂದು ಮೂಡಬಿದ್ರೆ ಪೊಲೀಸ್ ಠಾಣಾ ನಿರೀಕ್ಷಕರಾದ ಶ್ರೀ ಅನಂತಪದ್ಮನಾಭ ರವರು, ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ, ಮಂಗಳೂರು ತಾಲೂಕು ಕರಿಂಜೆ ಗ್ರಾಮದ ಬಿರಾವು ಎಂಬಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನ ಸೇರಿ ಹಣವನ್ನು ಪಣವಾಗಿಟ್ಟು ಕೋಳಿ ಜೂಜಾಟ ಆಡುತ್ತಿದ್ದಾರೆಂದು ದೊರೆತ ಖಚಿತ ಮಾಹಿತಿಯಂತೆ, ಎಎಸ್ ಐ ಶಂಕರ ನಾಯರಿ, ಸಿಬ್ಬಂದಿಗಳು ಹಾಗೂ ಪಂಚರೊಂದಿಗೆ ಸದ್ರಿ ಸ್ಥಳದ ಪುರಸಭೆಯ ತ್ಯಾಜ್ಯ ಶೇಖರಣಾ ಸ್ಥಳದ ಬಳಿ, ಸರಕಾರಿ ಜಮೀನಿನಲ್ಲಿ  ಸುಮಾರು 15 ರಿಂದ 20 ಜನ ಹುಂಜಕೋಳಿಗಳ ಕಾಲಿಗೆ ಬಾಲನ್ನು ಕಟ್ಟಿ ಕೋಳಿಗಳ ಮೇಲೆ ಹಣವನ್ನು ಪಣವಾಗಿಟ್ಟು, ಜೂಜಾಟವಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು, 16:30 ಗಂಟೆಗೆ ಸಿಬ್ಬಂದಿಗಳೊಂದಿಗೆ ದಾಳಿ ಮಾಡಿದ್ದು, ಹೆಚ್ಚಿನವರು ಕಾಡು ಗುಡ್ಡೆಯಲ್ಲಿ ಓಡಿ ಹೋಗಿದ್ದು, ಮೂವರು ಆರೋಪಿಗಳನ್ನು ಹಾಗೂ 2. ಕೋಳಿ ಬಾಲುಗಳು, ಅದಕ್ಕೆ ಕಟ್ಟುವ 2 ಹಗ್ಗ, ನಗದು ರೂಪಾಯಿ 660/, ವಿವಿಧ ಬಣ್ಣದ ಅವುಗಳಲ್ಲಿ ಕೆಲವು ಗಾಯಗೊಂಡಿರುವ 8 ಕೋಳಿ ಹುಂಜಗಳನ್ನು ವಿವರವಾದ ಮಹಜರು ಬರೆದು ಸ್ವಾಧೀನಪಡಿಸಿಕೊಳ್ಳಲಾಗಿರುತ್ತದೆ.

 

11.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 15.06.2014 ರಂದು ಪಿರ್ಯಾದಿದಾರರಾದ ಶ್ರೀ ರಾಜೇಂದ್ರ ಕುಮಾರ್ ರವರು, ತನ್ನ ಸ್ನೇಹಿತನ ಬಾಬ್ತು KA-20-MB-2727 ನೇ ನಂಬ್ರದ ಕಾರನ್ನು ಚಲಾಯಿಸುತ್ತಾ ತನ್ನ ಪತ್ನಿ ಹಾಗೂ ಮಕ್ಕಳೊಂದಿಗೆ ಕಾರ್ಕಳದಿಂದ ಮೂಡಬಿದ್ರೆಗೆ ಬರುತ್ತಾ, 20:30 ಗಂಟೆಗೆ ಆಲಂಗಾರು ವಿಜಯಾ ವೈನ್ಸ್ ಬಳಿ ತಲುಪುವಾಗ್ಗೆ, ಎದುರಿನಿಂದ ಅಂದರೆ ಮಂಗಳೂರು ಕಡೆಯಿಂದ ಕಾರ್ಕಳ ಕಡೆ ಬರುತ್ತಿದ್ದ, KL-05-E-3736  ನೇ ನಂಬ್ರದ ಲಾರಿಯನ್ನು ಅದರ ಚಾಲಕ ಹರೀಶ್ಚಂದ್ರ ಎಂಬವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಾ ಬಂದ ಕಾರಣ ಪಿರ್ಯಾದಿದಾರರ ಕಾರಿಗೆ ಢಿಕ್ಕಿಯಾಗಿದ್ದು, ಪರಿಣಾಮ, ಪಿರ್ಯಾದಿದಾರರ ಬಲಕಾಲಿನ ಕೋಲು ಕಾಲಿಗೆ ಮೂಳೆ ಮುರಿತದ ಗಾಯ, ಬಲಕೈಯ ತೋಳಿಗೆ, ಹಣೆಗೆ ರಕ್ತಗಾಯ,ಬಲಕೈ ತೋಳಿಗೆ ತರಚಿದ ಗಾಯವಾಗಿ, ಪತ್ನಿ ಸುಪ್ರಿತಾರಿಗೆ ಎಡಕೈ ಬೆರಳುಗಳಿಗೆ ಗದ್ದಿದ ಗಾಯ ಮತ್ತು ಎರಡೂ ಕೆನ್ನೆಗಳಿಗೆ ರಕ್ತ ಗಾಯವಾಗಿ, ಮಗ 'ಅನ್ಶ್' ನಿಗೆ ಎಡಕೈ ತೋಳಿಗೆ ಗುದ್ದಿದ ಗಾಯ, ಮೂಗಿಗೆ ರಕ್ತ ಗಾಯವಾಗಿ, ಮಗಳು 'ಅವನಿ'ಳಿಗೆ ನಾಲಗೆ, ಗದ್ದಕ್ಕೆ ರಕ್ತಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಗೆ ತರಲ್ಪಟ್ಟು, ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ತೇಜಸ್ವಿನಿ ಆಸ್ಪತ್ರೆಗೆ ತಂದು ಒಳರೋಗಿಯಾಗಿ ದಾಖಲಿಸಲಾಗಿರುವುದಾಗಿದೆ.

 

12.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನಾಂಕ 16-06-2014 ರಂದು ಪಿರ್ಯಾದಿದಾರರಾದ ಶ್ರೀ ಮೊಹಮ್ಮದ್ ಕೆ. ರವರು ತರಕಾರಿ ಖರೀದಿಗೆ ತನ್ನ ಬಾಬ್ತು ಸುಜುಕಿ ಎಕ್ಸಿಸ್ ಸ್ಕೂಟರ್ ನಂಬ್ರ ಕೆಎ-19-ವಾಯ್-2319 ನೇದರಲ್ಲಿ ಸೆಂಟ್ರಲ್ ಮಾರ್ಕೆಟ್ ಗೆ ಮದ್ಯಾಹ್ನ 3:00 ಗಂಟೆಗೆ ಬಂದು ಸೆಂಟ್ರಲ್ ಮಾರ್ಕೆಟ್ ನ ಮುಖ್ಯ ದ್ವಾರದ ಬಳಿ ಸ್ಕೂಟರ್ ನ್ನು ಪಾರ್ಕ್ ಮಾಡಿ ತರಕಾರಿ ಖರೀದಿಸಿ ವಾಪಾಸ್ಸು ಅರ್ಧ ಗಂಟೆ ಬಿಟ್ಟು ಸ್ಕೂಟರ್ ಪಾರ್ಕ್ ಮಾಡಿದ ಸ್ಥಳಕ್ಕೆ ಬಂದು ನೋಡಲಾಗಿ ಪಿರ್ಯಾದಿದಾರರ ಬಾಬ್ತು ಸ್ಕೂಟರ್ ಪಾರ್ಕ್ ಮಾಡಿದ ಸ್ಥಳದಲ್ಲಿರದೇ ಕಾಣೆಯಾಗಿದ್ದು, ಅಕ್ಕಪಕ್ಕದಲ್ಲಿ ಮತ್ತು ನಗರದ ಇತರ ಕಡೆಗಳಲ್ಲಿ ಹುಡುಕಾಡಿದ್ದಲ್ಲಿ ಪತ್ತೆಯಾಗದೇ ಇದ್ದು, ಇದನ್ನು ಯಾರೋ ಕಳ್ಳರು ಕಳವು ಮಾಡಿರುವುದಾಗಿ, ಕಳವಾದ ಸ್ಕೂಟರ್ ನಂಬ್ರ ಕೆಎ-19-ವಾಯ್-2319 ನೇದರ ಎಲ್ಲಾ ಮೂಲ ದಾಖಲಾತಿಗಳು ಆರ್.ಸಿ., .ಸಿ., ಸ್ಕೂಟರ್ ನಲ್ಲೆ ಇದ್ದು, ಇಂಜಿನ್ ನಂಬ್ರ F486166503, ಚಾಸೀಸ್ ನಂಬ್ರ MB8CF4CAK88166920, ಬಣ್ಣ: ಕಪ್ಪು ಬಣ್ಣ, ಮಾಡೇಲ್ 2008, ಅಂದಾಜು ಬೆಲೆ ರೂ. 20,000/- ಆಗಿರುತ್ತದೆ.

 

13.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ :  ಪಿರ್ಯಾದಿದಾರರಾದ ಶ್ರೀ ಮುಕುಲ್ ಕುಮಾರ್ ರವರು ಬೆಂಗಳೂರು ಮೈಕ್ರಾನ್ಇಂಜಿನಿಯರಿಂಗ್ಎಂಟರ್ ಪ್ರೈಸಸ್ ಜೆ.ಸಿ. ರೋಡ್‌‌, ಬೆಂಗಳೂರು ಕಂಪೆನಿಯಲ್ಲಿ ಇಲೆಕ್ಟ್ರೀಷಿಯನ್‌  ಕೆಲಸವನ್ನು ಮಾಡಿಕೊಂಡಿರುವುದಾಗಿದೆ. ಸದ್ರಿ ಕಂಪೆನಿಯು  ಮಂಗಳೂರು ನಗರದ ಪಾಂಡೇಶ್ವರದಲ್ಲಿರುವ ಫಾರಮ್ ಫಿಜಾ ಮಾಲ್‌  ಬಹುಮಹಡಿ ಕಟ್ಟಡದ 3 ನೇ ಅಂತಸ್ತಿನಲ್ಲಿರುವ   ಫುಡ್ ಕೋರ್ಟ್ಮಳಿಗೆಗಳ ಇಲೆಕ್ಟ್ರೀಕಲ್ ಕೆಲಸವನ್ನು ಗುತ್ತಿಗೆ ಆಧಾರದಲ್ಲಿ  ವಹಿಸಿಕೊಂಡಿದ್ದುಅದರಂತೆ ಪಿರ್ಯಾದಿದಾರರು ಹಾಗೂ ಮೃತ ಸುಲ್ತಾನ್ಮಿರ್ಜಾ ರವರು  ರವರು ಸುಮಾರು ಎರಡು ತಿಂಗಳುಗಳಿಂದ  ಇಲೆಕ್ಟ್ರೀಷಿಯನ್ಕೆಲಸ ಮಾಡುತ್ತಿದ್ದು, ದಿನಾಂಕ: 16-06-2014 ರಂದು ಸಂಜೆ ಸುಮಾರು 4-10 ಗಂಟೆಗೆ ಸುಮಾರು 6 ಅಡಿ ಎತ್ತರದ ಲ್ಯಾಡರ್ ಮೇಲೆ ನಿಂತು ಮೆಟಲ್ ಟ್ರೇಯ ಬೋಲ್ಟ್ ನೆಟ್ಟೈಟ್ ಮಾಡುತ್ತಾ ಇದ್ದ ಸುಲ್ತಾನ್ಮಿರ್ಜಾ ರವರು  ಸುಲ್ತಾನ್ಮಿರ್ಜಾರವರಿಗೆ ಅಲ್ಲಿಯೇ ಹರಿಯುತ್ತಿದ್ದ, ಲೈಟ್ ಫೀಟ್ಟಿಂಗ್ನ ವಯರ್ ಕೈಗೆ ತಾಗಿ, ವಿದ್ಯುತ್  ಶಾಕ್ಹೊಡೆದು, ಕೆಳಗೆ ಬಿದ್ದು  ಮೃತ ಪಟ್ಟಿರುವುದಾಗಿದೆ. ಕೆಲಸದ  ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದ  ಕಂಪೆನಿಯ ಸೈಟ್ಇಂಜಿನಿಯರ್ ಆದ ಅಮ್ರೀಶ್ ಮತ್ತು ಕಂಪೆನಿಯ ಇತರ ಅಧಿಕಾರಿಗಳು, ಇಲೆಕ್ಟ್ರಿಕಲ್ಕೆಲಸ ಮಾಡುತ್ತಿದ್ದ ಸುಲ್ತಾನ್ಮಿರ್ಜಾರವರಿಗೆ, ಕರೆಂಟ್ಶಾಕ್ ತಾಗದಂಥಹ ಹ್ಯಾಂಡ್ ಗ್ಲೌಸ್ ಹಾಗೂ ಕಾಲಿಗೆ ಸೇಫ್ಟೀ ಶೂ ಮತ್ತು  ತಲೆಗೆ ಹೆಲ್ಮೆಟ್ ಇತರ ಸಲಕರಣೆಗಳನ್ನು ನೀಡದೇ, ಸುರಕ್ಷತಾ ಕ್ರಮವನ್ನು ಕೈಗೊಳ್ಳದೇ ಬೇಜವಬ್ದಾರಿಯಿಂದ  ಕೆಲಸ   ಮಾಡಿಸಿರುವುದರಿಂದ, ಈ ಅವಘಡ ಉಂಟಾಗಿರುತ್ತದೆ.

 

14.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನಾಂಕ 16-06-2014 ರಂದು 19-45 ಗಂಟೆಯಿಂದ ದಿನಾಂಕ 17-06-20104 ರಂದು ಬೆಳಿಗ್ಗೆ 07-30 ಗಂಟೆಯ ಮದ್ಯೆ  ಅವಧಿಯಲ್ಲಿ ಯಾರೋ ಕಳ್ಳರು ಮಂಗಳೂರು ನಗರದ ಅತ್ತಾವರ ಕೆ.ಎಂ.ಸಿ. ಆಸ್ಪತ್ರೆಯ ಹಿಂಭಾಗ, ಮಣಿಪಾಲ ಸ್ಕೂಲ್ ಎದುರುಗಡೆ 6ನೇ ಕ್ರಾಸ್ ನಲ್ಲಿ ಇರುವ ಶ್ರೀರಾಮ್  ಎಂಬ ಹೆಸರಿನ ಪಿರ್ಯಾದಿದಾರರಾದ ಶ್ರೀಮತಿ ಶ್ರೀದೇವಿ ಕೆ. ರಾವ್ ರವರ ಮನೆಯ ಕಂಪೌಂಡಿನಲ್ಲಿ ಪಾರ್ಕ್ ಮಾಡಿದ್ದ ಪಿರ್ಯಾದಿದಾರರ ಆರ್. ಸಿ. ಮಾಲಕತ್ವದ 2010ನೇ ಮೊಡಲ್ ನ ಬಿಳಿ ಬಣ್ಣದ ಅಂದಾಜು ರೂಪಾಯಿ 30100/- ಬೆಲೆ ಬಾಳುವ KA 19 EB 9909ನೇ ನೊಂದಣಿ ಸಂಖ್ಯೆಯ ಸುಜುಕಿ ಎಸ್ಸಿಸ್ ದ್ಚಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು  ಕಳವಾದ ದ್ಚಿಚಕ್ರ ವಾಹನವನ್ನು ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ.

 

15.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನಾಂಕ: 15-16/06/2014 ರಂದು ರಾತ್ರಿ ಸಮಯ ಮಂಗಳೂರು ತಾಲೂಕಿನ ಬಜಪೆ ಠಾಣಾ ಸರಹದ್ದಾದ ಬಜಪೆ ಗ್ರಾಮದ MSEZ ಕಾಲೋನಿಯ ಧೂಮಾವತಿ ಧಾಮದಲ್ಲಿ ವಾಸವಾಗಿರುವ ಪಿರ್ಯಾದಿದಾರರಾದ ಶ್ರೀ ದಯಾನಂದ ಕೋಟ್ಯಾನ್ ರವರ ಬಾಬ್ತು ಬಾಗಿಲು ಹಾಕಿ ಬೀಗ ಹಾಕಿದ ಮನೆಯ ಹಿಂಬದಿಯ ಬಾಗಿಲು ಮುರಿದು ಯಾರೋ ಕಳ್ಳರು ಮನೆಯೊಳಗೆ ನುಗ್ಗಿ ಮನೆಯೊಳಗಿದ್ದ ಕಪಾಟನ್ನು ಮುರಿದು ಕಪಾಟಿನೊಳಗಿದ್ದಂತಹ 3 ½ ಪವನ್ ತೂಕದ ಬಂಗಾರದ ಸರಗಳು ಮತ್ತು ನಗದು ಹಣ ಒಟ್ಟು 30,000/- ರೂ. ಹಾಗೂ ಎಲ್.ಸಿ.ಡಿ., ಟಿ.ವಿ. ಮತ್ತು ಎರಡು ಸ್ಟೆಬಿಲೈಸರ್ ಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಅವುಗಳ ಅಂದಾಜು ಬೆಲೆ ಸುಮಾರು 1,00,000/- ರೂ. ಆಗಬಹುದು.

 

16.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ :  ಫಿರ್ಯಾದುದಾರರಾದ ಶ್ರೀ ರುಕ್ಮಯ್ಯ ಎಂಬವರು ತನ್ನ ಬಾಬ್ತು ಕೆಎ-19-.ಹೆಚ್-5654 ನೇ ಮೋಟಾರು ಸೈಕಲಿನಲ್ಲಿ ವಿನಿತಾ ಎಂಬಾಕೆಯನ್ನು ಸಹ ಸವಾರಳಾಗಿ ದಿನಾಂಕ:17/06/2014 ರಂದು ತನ್ನ ಮನೆಯಾದ ತೆಂಕ ಎಡಪದವಿನಿಂದ ವಾಮಂಜೂರು ಕಡೆಗೆ ಹೊರಟು ಕೈಕಂಬ ಪೊಳಲಿದ್ವಾರದ ಬಳಿ ಬಂಗ್ಲೆಗುಡ್ಡೆ ಕ್ರಾಸ್ ಬಳಿ ಬೆಳಿಗ್ಗೆ 08-20 ಕ್ಕೆ ತಲುಪಿದಾಗ ಅದರ ಎದುರಿನಿಂದ ಅಂದರೆ ಮಂಗಳೂರು ಕಡೆಯಿಂದ ಕೈಕಂಬ ಕಡೆಗೆ ಕೆಎ-19-ಎಂ.-8307 ನೇಯ ರಿಟ್ಜ್ ಕಾರನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾರೂಕತೆಯಿಂದ ಚಲಾಯಿಸಿಕೊಂಡು ಡಿಕ್ಕಿ ಹೊಡೆದ ಪರಿಣಾಮ ಸವಾರ ಹಾಗೂ ಸಹ ಸವಾರರಿಗೆ ರಕ್ತ ಗಾಯವುಂಟಾಗಿರುತ್ತದೆ. ಗಾಯಾಳು ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ.

 

17.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 17-06-2014 ರಂದು ಪಿರ್ಯಾದಿದಾರರಾದ ಶ್ರೀ ಝಾಕೀರ್ ಹುಸೈನ್ ರವರು ಹಾಗೂ ಘಾರೂಕ್ ಎ.ಹೆಚ್. ರವರು ಸೇರಿಕೊಂಡು ಪಿರ್ಯಾದಿದಾರರ ಸಂಸ್ಥೆಗೆ ಸಂಬಂಧಪಟ್ಟ ಸಿವಿಲ್ ವ್ಯಾಜ್ಯ ಸಂಖ್ಯೆ 52/14 ರ ಬಾಬ್ತು ದಾಖಲೆಗಳನ್ನು ಸಂಗ್ರಹಿಸಿಕೊಂಡು ಅಳೇಕಲ, ಮದನಿ ಜೂನಿಯರ್ ಕಾಲೇಜ್ ಹತ್ತಿರ ಬರುವಾಗ ಸಮಯ ಸುಮಾರು ಬೆಳಿಗ್ಗೆ 11:00 ಗಂಟೆಗೆ ಆರೋಪಿಗಳಾದ ಬಿ.ಹೆಚ್.ಘಾರೂಕ್, ಘಾರೂಕ್ ಸ್ಪೋರ್ಟಿಂಗ್, ನಝೀರ್ ಬೀಫ್, ಇಕ್ಬಾಲ್ ಅರಾಬಿ, ಸಫಿಕ್ ಫಕ್ರುದ್ದೀನ್, ರಜಾಕ್ ಸಾನ, ಫೈಜಲ್ ಖಾದರ್ ಮತ್ತು ಎಸ್.ಕೆ.ಎಸ್.ಎಂ. ನ ಪದಾಧಿಕಾರಿಗಳ ಕುಮ್ಮಕ್ಕಿನಿಂದ ಎಲ್ಲಾ ಆರೋಪಿಗಳು ಒಟ್ಟು ಸೇರಿಕೊಂಡು ದೊಣ್ಣೆ, ಕಬ್ಬಿಣ ರಾಡ್, ತಲವಾರ್ ಇತ್ಯಾದಿ ಮಾರಕ ಆಯುಧಗಳಿಂದ ಪಿರ್ಯಾದಿ ಹಾಗೂ ಅವರ ಜೊತೆಯಲ್ಲಿದ್ದ ಘಾರೂಕ್ ಎ.ಹೆಚ್ ರವರ ಮೇಲೆ ಹಲ್ಲೆ ಮಾಡಿ, ಬೆದರಿಕೆಯೊಡ್ಡಿ ಕೊಲೆ ಮಾಡಲು ಪ್ರಯತ್ನಿಸಿರುವುದಾಗಿದೆ.

 

18.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನಾಂಕ 17-06-2014 ರಂದು ಬೆಳಿಗ್ಗೆ 11-00 ಗಂಟೆ ಸಮಯಕ್ಕೆ ಪಿರ್ಯಾದುದಾರರಾದ ಶ್ರೀ ಮೊಹಮ್ಮದ್ ಹ್ಯಾರಿಸ್ ರವರು ಮಂಗಳೂರು ತಾಲೂಕು, ಉಳ್ಳಾಲ ಗ್ರಾಮದ ಅಳೇಕಲ ಮದನಿ ಶಾಲೆಯ ಬಳಿ ನಡೆದುಕೊಂಡು ಹೋಗುತ್ತಿದ್ದಾಗ, ಆರೋಪಿಗಳಾದ (1) ಝಾಕೀರ್ಹುಸೈನ್‌, (2) . ಹೆಚ್‌. ಫಾರೂಕ್‌, (3) ಯು. ಎನ್‌. ಇಕ್ಬಾಲ್‌, (4) ಹನೀಫ್ಮಾರ್ಗತಲೆ, (5) ತಸ್ಲೀಂ ಯು. ಎನ್‌. (6) ಸಲೀಂ ಯು. ಎನ್‌. ಎಂಬವರು ಪಿರ್ಯಾದುದಾರರನ್ನು ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು, "ಅಳೇಕಲ ಆಲ್ಪುರ್ಖಾನ್ಮಸೀದಿಯ ಬಗ್ಗೆ ನೀನು, ನಮ್ಮ ವಿರುದ್ದ ಭಾರಿ ಮಾತನಾಡುತ್ತಿಯಾ, ಮುಂದಕ್ಕೆ ಏನಾದರೂ ಮಾತನಾಡಿದರೆ ನಿನ್ನನ್ನು ಈಗಾಲೇ ಕೊಲ್ಲುತ್ತೇನೆ" ಎಂದು ಕಬ್ಬಿಣದ ರಾಡಿನಿಂದ ಝಕೀರ್ ಹುಸೈನ್ಹೊಡೆಯಲು ಬಂದಾಗ ಪಿರ್ಯಾದಿಯ ತಪ್ಪಿಸಿಕೊಂಡಿದ್ದು, ಆ ಸಮಯ ಇತರ ಆರೋಪಿಗಳು ಪಿರ್ಯಾದಿಯನ್ನು ಕೊಲ್ಲು-ಕೊಲ್ಲು ಎಂದು ಝಕೀರ್ಹುಸೈನ್ಗೆ ಹುರಿದುಂಬಿಸುತ್ತಿದ್ದರು. ಅದೇ ಸಮಯ ಫಾರೂಕ್. ಹೆಚ್‌. ಎಂಬವರು ಮರದ ದೊಣ್ಣೆಯಿಂದ ಪಿರ್ಯಾದಿಯ ಎಡಕಾಲಿಗೆ ಮತ್ತು ಬೆನ್ನಿಗೆ ಹೊಡೆದಿರುತ್ತಾನೆ. ನೋವು ತಡೆಯಲಾರದೇ ಪಿರ್ಯಾದುದಾರರು ಬೊಬ್ಬೆ ಹೊಡೆದಾಗ ಮಹಮ್ಮದ್ ಪೈಝಲ್ಎಂಬವರು ಬಿಡಿಸಲು ಬಂದಿದ್ದು, ಆರೋಪಿತರಾದ ಝಾಕೀರ್ಹುಸೈನ್ಮತ್ತು ಫಾರೂಕ್ಎಂಬವರು ರಾಡ್ಮತ್ತು ದೊಣ್ಣೆಯಿಂದ ಆತನಿಗೂ ಹೊಡೆದು ಗಾಯಗೊಳಿಸಿರುತ್ತಾರೆ. ಅಷ್ಟರಲ್ಲಿ ಅಲ್ಲಿಗೆ ಜನರು ಬಂದು ಸೇರುವುದನ್ನು ಕಂಡ ಆರೋಪಿಗಳು ಓಡಿ ಪರಾರಿಯಾಗಿರುತ್ತಾರೆ. ಆರೋಪಿಗಳು ಪಿರ್ಯಾದುದಾರರನ್ನು ಕೊಲ್ಲುವ ಉದ್ದೇಶದಿಂದಲೇ ಈ ಕೃತ್ಯ ಮಾಡಿರುತ್ತಾರೆ.

 

19.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನಾಂಕ 17-06-2014 ರಂದು ಮುಂಜಾನೆ 02-00 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು ಕಳವಾರು ಗ್ರಾಮದ ಎಮ್.ಎಸ್..ಝಡ್ ಬಾಬ್ತು ಸೈಟ್ ನಿಂದ ಪಿರ್ಯದಿದಾರರಾದ ಶ್ರೀ ರಾಮ್ ಪೂಲ್ ರವರ ಬಾಬ್ತು ಕೆ..ಐ ಕಂಪೆನಿಗೆ ಸಂಬಂದಿಸಿದ ಸುಮಾರು 6 ಲಕ್ಷ ರೂ ಬೆಲೆ ಬಾಳುವ ತಾಮ್ರದ ಕೇಬಲ್ ವಯರ್ ಗಳನ್ನು ಯಾರೂ 4 ಜನ ಅಪರಿಚಿತ ವ್ಯಕ್ತಿಗಳು ಕಳವು ಮಾಡಿಕೊಂಡು ಹೋಗಿರುವುದಾಗಿದೆ.

No comments:

Post a Comment