ಕಾವೂರು ಪೊಲೀಸ್ ಠಾಣೆಯ ನೂತನ ಕಟ್ಟಡದ ಉದ್ಘಾಟನೆ ಹಾಗೂ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯ ಕಾರ್ಯಾರಂಭದ ಕರೆಯೋಲೆ
ಕಾವೂರು ಪೊಲೀಸ್ ಠಾಣೆಯ ನೂತನ ಕಟ್ಟಡದ ಉದ್ಘಾಟನೆ ಹಾಗೂ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯ ಕಾರ್ಯಾರಂಭವು ದಿನಾಂಕ : 03.06.2014 ರಂದು ನಡೆಯಲಿದ್ದು ಸಂಜೆ 4 ಗಂಟೆಗೆ ಕಾವೂರು ಪೊಲೀಸ್ ಠಾಣೆಯ ಉದ್ಘಾಟನೆ ಮತ್ತು ಸಂಜೆ 5 ಗಂಟೆಗೆ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯ ಕಾರ್ಯಾರಂಭವು ನಡೆಯಲಿರುತ್ತದೆ. ಈ ಕಾರ್ಯಕ್ರಮದ ಉದ್ಘಾಟಕರಾಗಿ ಸನ್ಮಾನ್ಯ ಶ್ರೀ ಬಿ . ರಮಾನಾಥ ರೈ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಕರ್ನಾಟಕ ಸರಕಾರ, ಗೌರವ ಉಪಸ್ಥಿತಿ; ಸನ್ಮಾನ್ಯ ಶ್ರೀ ಯು.ಟಿ. ಖಾದರ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು, ಕರ್ನಾಟಕ ಸರಕಾರ , ಸನ್ಮಾನ್ಯ ಶ್ರೀ ಕೆ. ಆಭಯಚಂದ್ರ ಜೈನ್ ಯುವಜನ ಸೇವೆ, ಕ್ರೀಡೆ ಮತ್ತು ಮೀನುಗಾರಿಕಾ ರಾಜ್ಯ ಸಚಿವರು, ಕರ್ನಾಟಕ ಸರಕಾರ, ಅಧ್ಯಕ್ಷತೆ ಸನ್ಮಾನ್ಯ ಶ್ರೀ ಬಿ ಎ ಮೊಯಿದ್ದಿನ್ ಬಾವ ಶಾಸಕರು, ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ, ಮುಖ್ಯ ಅತಿಥಿಗಳು : ಶ್ರೀಮತಿ ಆಶಾ ತಿಮ್ಮಪ್ಪ ಗೌಡ ಅಧ್ಯಕ್ಷರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ಸನ್ಮಾನ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಶಾಸಕರು, ವಿಧಾನ ಪರಿಷತ್, ಸನ್ಮಾನ್ಯ ಶ್ರೀ ಮೋನಪ್ಪ ಭಂಡಾರಿ ಶಾಸಕರು, ವಿಧಾನ ಪರಿಷತ್, ಸನ್ಮಾನ್ಯ ಶ್ರೀ ನಳೀನ್ ಕುಮಾರ್ ಕಟೀಲ್ ಲೋಕಸಭಾ ಸದಸ್ಯರು ದ.ಕ. ಜಿಲ್ಲೆ, ಸನ್ಮಾನ್ಯ ಶ್ರೀ ಮಹಾಬಲ ಮಾರ್ಲ ಮಹಾಪೌರರು, ಮಹಾನಗರ ಪಾಲಿಕೆ ಮಂಗಳೂರು ಇವರು ಭಾಗವಹಿಸಲಿದ್ದು ಈ ಕಾರ್ಯಕ್ರಮಕ್ಕೆ ತಮಗೆಲ್ಲರಿಗೂ ಮಂಗಳೂರು ಪೊಲೀಸ್ ಕಮೀಷನರೆಟ್ ವತಿಯಿಂದ ಆದರದ ಸ್ವಾಗತ. ಸುರತ್ಕಲ್, ಮುಲ್ಕಿ, ಕಾವೂರು, ಪಣಂಬೂರು ಪೊಲೀಸ್ ಠಾಣಾ ಸರಹದ್ದುಗಳು ಹಾಗೂ ಬಜ್ಪೆ ಪೊಲೀಸ್ ಠಾಣಾ ಸರಹದ್ದಿನ ವಿಮಾನ ನಿಲ್ದಾಣ ರಸ್ತೆಯು ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುತ್ತದೆ.
No comments:
Post a Comment