Monday, June 16, 2014

Daily Crime Reports 14-06-2014

ದೈನಂದಿನ ಅಪರಾದ ವರದಿ.

ದಿನಾಂಕ 14.06.201417:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

2

ಮನೆ ಕಳವು ಪ್ರಕರಣ

:

2

ಸಾಮಾನ್ಯ ಕಳವು

:

1

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

6

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು  ಸಂಚಾರ ಉತ್ತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ರಾಘು ರವರ ತಾಯಿ ಶ್ರೀಮತಿ ರಾಜಮ್ಮ ಎಂಬವರಿಗೆ ದಿನಾಂಕ : 03.06.2014 ರಂದು ರಾತ್ರಿ 08.30 ಗಂಟೆಯಿಂದ ದಿನಾಂಕ : 04.06.2014 ಬೆಳಿಗ್ಗೆ 07.45 ಗಂಟೆ ಮಧ್ಯೆ ಕಾನಾ ಬಸ್ಸು ತಂಗುದಾಣದ ಬಳಿ ಯಾವುದೋ ವಾಹನದ ಚಾಲಕನು ಡಿಕ್ಕಿ ಮಾಡಿ ನಿಲ್ಲಿಸದೇ ಪರಾರಿಯಾಗಿದ್ದು ಡಿಕ್ಕಿ ಉಂಟಾದ ಪರಿಣಾಮ ಶ್ರೀಮತಿ ರಾಜಮ್ಮ ರವರ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಅಪಘಾತಕ್ಕೆ ರಾತ್ರಿ ಸಮಯ ಸಂಚರಿಸಿರುವ ಯಾವುದೋ ವಾಹನದ ಚಾಲಕನ ಅತೀವೇಗ ಹಾಗೂ ಅಜಾಗರುಕತೆಯ ಚಾಲನೆಯೇ ಕಾರಣವಾಗಿರುತ್ತದೆ.

 

2.ಮಂಗಳೂರು  ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 12/06/2014 ರಂದು ಬೆಳಗ್ಗೆ 6:45 ಗಂಟೆಗೆ ಮಾರುತಿ ಓಮ್ನಿ ಕಾರು ನಂಬ್ರ KA-19-Z-2381 ನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಕುಲಶೇಖರ ಕಡೆಯಿಂದ ಅವಿನಾಶ ಮೋಸೈಕ್ಸ ಕ್ರಾಸ್ ರಸ್ತೆ ಕಡೆಗೆ ಚಲಾಯಿಸಿಕೊಂಡು ಬಂಧು ಕ್ರಾಸ್ ರಸ್ತೆಗೆ ತಿರುಗಿಸುವ ವೇಳೆ ಯಾವುದೆ ಸೂಚನೆ ನಿಡದೆ ತಿರುಗಿಸಿ ಕೈಕಂಬದ ಕಡೆಯಿಂದ ಕುಲಶೇಖರ ಕಡೆಗೆ ಬರುತ್ತಿದ್ದ ಮೋಟರ್ ಸೈಕಲ್ ನಂಬ್ರ KA-19-EJ-7380 ಕ್ಕೆ ಡಿಕ್ಕಿ ಮಾಡಿದ ಪರಿಣಾಮ ಸವಾರ ಮತ್ತು ಸಹ ಸವಾರರಿಬ್ಬರು ರಸ್ತೆಗೆ ಬಿದ್ದು ಗಂಭೀರ ಸ್ವರೂಪದ ಗಾಯಗೊಂಡು KMC ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ.

 

3.ಮಂಗಳೂರು  ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 13/06/2014 ರಂಧು ಬೆಳಗಿನ ಜಾವ 4:00 ಗಂಟೆಗೆ ಲಾರಿ ನಂಬ್ರ GJ-01-CZ--6001 ನ್ನು ಅದರ ಚಾಲಕ ಪದವಯ ಜಂಕ್ಷನ್ ಕಡೆಯಿಂದ ಮಹಾವೀರ ವೃತ್ತದ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ನಂತೂರು ಜಂಕ್ಷನನಲ್ಲಿ ಬಿಕರ್ನಕಟ್ಟೆ ಕಡೆಯಿಂದ ನಂತೂರು ಜಂಕ್ಷನಿಗೆ ಬರುತ್ತಿದ್ದ ಲಾರಿ ನಂಬ್ರ KA-01-D-4221 ಕ್ಕೆ ಡಿಕ್ಕಿ ಮಾಡಿದ ಪರಿಣಾಮ KA-01-D-4221 ಮುಗುಚಿ ಬಿದ್ದು ಎರಡೂ ಲಾರಿಗಳೂ ಜಖಂಗೊಂಡಿರುತ್ತದೆ ಅಪಘಾತದಿಂದ ಯಾರಿಗೂ ಗಾಯಗಳಾಗಿರುವುದಿಲ್ಲ .

 

4.ಮಂಗಳೂರು  ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 11.06.2014 ರಂದು ಪಿರ್ಯಾದಿದಾರರಾದ ಶ್ರೀ ಇಬ್ರಾಹಿಂ ರವರು ಬಜಾಲ್‌‌ ಪಕ್ಕಲ್ಡಕದಲ್ಲಿರುವ  ತನ್ನ ಹೆಂಡತಿಯ ತವರು ಮನೆಯಿಂದ  ತೊಕ್ಕೊಟ್ಟಿಗೆ  ಹೋಗುವರೇ ಪಂಪವೆಲ್ಗೆ ಹೋಗಿ ಅಲ್ಲಿಂದ  ಕಾಸರಗೋಡಿಗೆ ಹೋಗುವ  ಕೆಎ-19-ಎಫ್-2887 ನೇ  ಕರ್ನಾಟಕ ರಾಜ್ಯದ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಹೊರಟಿದ್ದು ಸದ್ರಿ ಬಸ್ಸಿನಲ್ಲಿ  ಸೀಟ್‌‌ ಇಲ್ಲದೆ ಇದ್ದುದರಿಂದ  ಹಿಂಬದಿ ಬಾಗಿಲಿನ ಹತ್ತಿರ ರಾಡನ್ನು ಹಿಡಿದುಕೊಂಡು  ನಿಂತುಕೊಂಡು ಪ್ರಯಾಣಿಸುತ್ತಾ ಜಪ್ಪಿನಮೊಗರು ಯೆನಪೊಯಾ ಶಾಲೆ ಬಳಿ ತಲುಪಿದಾಗ  ಸದ್ರಿ ಬಸ್ಸನ್ನು  ಅದರ ಚಾಲಕ ರಹೀಂ ಖಾನ್‌‌  ಎಂಬವರು ಅತೀ ವೇಗ ಮತ್ತು ಅಜಾಗರೂಕತೆಯಿಂದ  ಎಡಕ್ಕೆ ಮತ್ತು ಬಲಕ್ಕೆ ಒಮ್ಮೆಗೆ ತಿರುಗಿಸಿದ್ದರಿಂದ ಪಿರ್ಯಾದಿದಾರರು  ಹೊರಕ್ಕೆ ಎಸೆಯಲ್ಪಟ್ಟು  ರಸ್ತೆಗೆ ಬಿದ್ದ ಪರಿಣಾಮ  ಪಿರ್ಯಾದಿದಾರರ  ತಲೆಗೆ  ಗುದ್ದಿದ ನೋವು ಎಡಕಣ್ಣಿನ  ಮೇಲ್ಭಾಗದ ಹಣೆಗೆ ರಕ್ತಗಾಯ ಮತ್ತು ಮುಖಕ್ಕೆ ಗುದ್ದಿದ ನೋವು ಹಾಗೂ ಬಲಕೈಗೆ ತರಚಿದ ಗಾಯಗಳಾಗಿರುತ್ತದೆ.

 

5.ಮಂಗಳೂರು  ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 13.06.2014 ರಂದು ಮಧ್ಯಾಹ್ನ 1.10 ಗಂಟೆಯ ಸಮಯಕ್ಕೆ ವಿಶ್ವನಾಥ ಎಂಬವರು ಬೈಕ್‌‌ ನಂಬ್ರ: ಕೆಎ-19-ಇಎಫ್‌‌-8618 ನೇಯದನ್ನು ವಾಮಂಜೂರು ಕಡೆಯಿಂದ ಚಲಾಯಿಸಿಕೊಂಡು ಬಂದು ಕುಡುಪು ಮಂಗಳಜ್ಯೋತಿ ಎಂಬಲ್ಲಿಗೆ ತಲುಪಿದಾಗ ಎದುರುಗಡೆಯಿಂದ ಅಂದರೆ ಮಂಗಳೂರು ಕಡೆಯಿಂದ ವಾಮಂಜೂರು ಕಡೆಗೆ ಕೆಎ-19-ಸಿ-1275 ನೇ ಬಸ್ಸನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾರಗೂಕತೆಯಿಂದ ಚಲಾಯಿಸಿಕೊಂಡು ತನ್ನ ಎದುರುಗಡೆಯಿಂದ ಹೋಗುತ್ತಿದ್ದ ಟೆಂಪೋ ಒಂದನ್ನು ಓವರ್ಟೇಕ್‌‌ ಮಾಡುವ ಆತುರದಲ್ಲಿ ಸದ್ರಿ ಬಸ್ಸನ್ನು ಎಡದಿಂದ ಬಲಕ್ಕೆ ರಾಂಗ್‌‌ ಸೈಡ್ಗೆ ಚಲಾಯಿಸಿಕೊಂಡು ಬಂದು ವಿಶ್ವನಾಥ ರವರು ಚಲಾಯಿಸುತ್ತಿದ್ದ ಬೈಕ್ಗೆ ಡಿಕ್ಕಿಹೊಡೆದ ಪರಿಣಾಮ ಸದ್ರಿಯವರು ಬೈಕ್‌‌ನಿಂದ ರಸ್ತೆಗೆ ಎಸೆಯಲ್ಪಟ್ಟು ತಲೆಗೆ ತೀವ್ರ ಸ್ವರೂಪದ ಗಾಯ ಉಂಟಾಗಿ ಚಿಕಿತ್ಸೆ ಬಗ್ಗೆ ತೇಜಸ್ವಿನಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

 

6.ಮಂಗಳೂರು  ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 13/06/2014 ರಂದು 18:30 ಗಂಟೆಗೆ ಪೀರ್ಯಾದುದಾರರಾದ ಶ್ರೀ ಗೋಕುಲನಾಥ್ ಪ್ರಭು ರವರು ತನ್ನ ಬಾಬ್ತು ಕಾರು ನಂಬ್ರ KA-19-MC-6892 ರಲ್ಲಿ ಚಾಲಕರಾಗಿದ್ದುಕೊಂಡು ಕರಂಗಲಪಾಡಿ ಜಂಕ್ಷನ್ ಕಡೆಯಿಂದ PVS ವೃತ್ತದ ಕಡೆಗೆ ಬರುತ್ತ PVS ಸರ್ಕಲ್ ಬಳಿ ಇರುವ ಬಸ್ಸು ನಿಲ್ದಾಣದ ಬಳಿ ತಲುಪುವಾಗ ಪ್ರಯಾಣಿಕರನ್ನು ಹತ್ತಿಸಲು ನಿಲ್ಲಿಸಿದ ಬಸ್ಸು ನಂಬ್ರ KA-19-D-3189 ನ್ನು ಅದರ ಚಾಲಕ ನಿರ್ಲಕ್ಷತನದಿಂದ ವೇಗವಾಗಿ ಒಮ್ಮೆಲೆ ಮುಂದಕ್ಕೆ ಚಲಾಯಿಸಿದ ಪರಿಣಾಮ ಬಸ್ಸು ಪಿರ್ಯಾದುದಾರರ ಕಾರಿನ ಎಡಬದಿಗೆ ಡಿಕ್ಕಿಯಾಗಿ ಕಾರು ಎಡಭಾಗ ಸಂಪೂರ್ಣ ಜಖಂ ಆಗಿರುತ್ತದೆ ಅಪಘಾತದಿಂದ ಯಾರಿಗೂ ಗಾಯವಾಗಿರುವುದಿಲ್ಲ.

 

7.ಮಂಗಳೂರು  ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 11-06-2014ರಂದು 15-00 ಗಂಟೆಯಿಂದ ದಿನಾಂಕ: 12-06-2014ರಂದು ಬೆಳಿಗ್ಗೆ 11-00 ಗಂಟೆಯ ಮಧ್ಯೆ, ರಾತ್ರಿ ಸಮಯದಲ್ಲಿ ಮಂಗಳೂರು ನಗರದ ಫಳ್ನೀರಿನ ವಾಸ್ ಲೇನ್ ನಲ್ಲಿರುವ ಫೇಮ್ ವಿಲ್ಲಾ ಎಂಬ ಹೆಸರಿನ ಪಿರ್ಯಾದಿದಾರರಾದ ಶ್ರೀ ಅರಿಫ್ ಹುಸೈನ್ ಜೈನ್ ರವರ ವಾಸದ ಮನೆಯ ಒಂದನೇ ಮಹಡಿಯಲ್ಲಿರುವ ಹಾಲ್ ಹಿಂಭಾಗದ ಕಿಟಕಿಯ ಗ್ರಿಲ್ ನ್ನು ಯಾವುದೋ ಹರಿತವಾದ ಆಯುಧವನ್ನು ಉಪಯೋಗಿಸಿ ಮುರಿದು ತುಂಡರಿಸಿ ಮೂಲಕ ಒಳಪ್ರವೇಶಿಸಿದ ಕಳ್ಳರು ಬೆಡ್ ರೂಮಿನಲ್ಲಿದ್ದ ಕಪಾಟುಗಳನ್ನು ಬಲಾತ್ಕಾರವಾಗಿ ಮೀಟಿ ತೆರೆದು ಕಪಾಟಿನಲ್ಲಿದ್ದ ಎಲ್ಲಾ ಸೊತ್ತುಗಳನ್ನು ಎಳೆದು ಹಾಕಿ ಬೆಲೆ ಬಾಳುವ ಸೊತ್ತುಗಳಿಗಾಗಿ ಜಾಲಾಡಿದ್ದು, ನೆಲ ಅಂತಸ್ತಿನ ಮಾಸ್ಟರ್ ಬೆಡ್ ರೂಮಿನಲ್ಲಿದ್ದ ಮರದ ಕಪಾಟನ್ನು ಬಲಾತ್ಕಾರವಾಗಿ ಮೀಟಿ ತೆರೆದು ಅದರಲ್ಲಿರಿಸಿದ್ದ ಸುಮಾರು ಒಟ್ಟು 24ಗ್ರಾಂ ತೂಕದ ಚಿನ್ನದ ಕಿವಿಯೋಲೆ- 2 ಜೊತೆ, ಸುಮಾರು 8 ಗ್ರಾಂ ತೂಕದ ಚಿನ್ನದ ಕಿವಿಯೋಲೆ- 1 ಜೊತೆ, ಸುಮಾರು 12 ಗ್ರಾಂ ತೂಕದ ಚಿನ್ನದ ಪ್ಲೇನ್ ಚೈನ್-1, ನಗದು ಹಣ ರೂ.48,000/-, ಲೇಡೀಸ್ ರಾಡೋ ವಾಚ್-3 ಅಂದಾಜು ಮೌಲ್ಯ ರೂ.30,000/-, ಸುಮಾರು 6,000/- ರೂ. ಬೆಲೆ ಬಾಳುವ ಸ್ಯಾಮ್ ಸಂಗ್ ಕಂಪನಿಯ ಗ್ಯಾಲಕ್ಷಿ ಮಿನಿ ಮೊಬೈಲ್ ಫೋನ್-1, ಹೀಗೆ ಒಟ್ಟು ಸುಮಾರು 1,94,000/- ರೂ. ಬೆಲೆ ಬಾಳುವ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.

 

8.ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಸುಜೀತ್ ಶೆಟ್ಟಿ ರವರ ಸಂಬಂಧಿಕರಾದ ವಾರಿಜ ಶೆಟ್ಟಿಯವರಿಗೆ ಸೇರಿದ ಜಮೀನು ಮಂಗಳೂರು ತಾಲೂಕು ಪಡುಮಾರ್ನಾಡು ಗ್ರಾಮದ ಬನ್ನಡ್ಕ ಎಂಬಲ್ಲಿರುವ ಪಂಡಿತ್ರೆಸಾರ್ಟ್ಹಿಂದೆಯಿದ್ದು ಅದನ್ನು ದಿನ ದಿನಾಂಕ : 13-06-2014 ರಂದು ಶುಚಿ ಮಾಡುವ ಸಲುವಾಗಿ ವಾರಿಜ ಶೆಟ್ಟಿಯವರ ಮಗ ಶಿವಪ್ರಸಾದ್ಶೆಟ್ಟಿ ಮತ್ತಿತರರೊಂದಿಗೆ ಬೆಳಿಗ್ಗೆ 06-00 ಗಂಟೆ ಸಮಯಕ್ಕೆ ಹೋದಾಗ ಆರೋಪಿಗಳಾದ ಮಿಸ್ರೂಬಿ, ವೀರೇಂದ್ರ, ಲಾಲ್ಗೋಯಲ್‌, ಹರಿಸಿಂಗ್‌, ಜಿನೇಂದ್ರ, ಗ್ರೇಸಿ ಮತ್ತಿತರರು ಮಾರಕಾಯುಧಗಳಿಂದ ಅಕ್ರಮ ಕೂಟ ಸೇರಿ ಕೈಯಿಂದ, ಸರಳಿನಿಂದ ಪಿರ್ಯಾದಿ, ಮತ್ತಿತರಿಗೆ ಹಲ್ಲೆ ಮಾಡಿರುತ್ತಾರೆ.

 

9.ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 12-06-2014 ರಂದು 17-30 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ಸುರೇಶ್ ಪ್ರಭು ರವರು ಮೂಡಬಿದ್ರೆ ನಗರದ ನ್ಯೂ ಪಡಿವಾಳ್ಸ್ ಹೋಟೇಲ್ನಿಂದ ಚಾ ಕುಡಿದು ಮೋಟಾರ್ ಸೈಕಲ್ನಂ ಕೆಎ 19 ಇಇ 6336 ರಲ್ಲಿ ಮನೆಗೆ ಹೋಗಲು ಹೊರಡುತ್ತಿದ್ದಾಗ ಅಲ್ಲಿಗೆ ಬಂದ ಆರೋಪಿಗಳು ಪಿರ್ಯಾದಿದಾರರ ಬಳಿ ಬಂದು ಪಿರ್ಯಾದಿದಾರರನ್ನು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಆರೋಪಿ ಪ್ರಕಾಶ್ ಗೌಡ ಪಿರ್ಯಾದಿದಾರರ ಮುಖಕ್ಕೆ ಗುದ್ದಿದ್ದು ಸಮಯ ಪಿರ್ಯಾದಿದಾರರ ಸ್ನೇಹಿತರು ಬರುವುದನ್ನು ನೋಡಿದ ಆರೋಪಿಗಳು ಪಿರ್ಯಾದಿದಾರರನ್ನು ಉದ್ದೇಶಿಸಿ ನಿನ್ನನ್ನು ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಓಡಿರುತ್ತಾರೆ.

 

10.ಮಂಗಳೂರು      ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಲೀನಾ ತಾವ್ರೋ ರವರ ಮನೆಯಲ್ಲಿ ಕೆಲಸಕ್ಕಿದ್ದ ಕಿನ್ನಿಗೋಳಿ ನಿಡ್ಡೋಡಿ ವಾಸಿ ಸೋನಿಯಾ ಸಾಲ್ದಾನ ಪ್ರಾಯ 24 ವರ್ಷ ಇವಳು ದಿನಾಂಕ 13-06-2014 ರಂದು ಸಂಜೆ 3.30 ಗಂಟೆಯ ವೇಳೆಗೆ ಪಿರ್ಯಾದಿದಾರರ  ಮನೆಯಿಂದ ಇನ್ನೋರ್ವ ಕೇಲಸದಾಕೆ ಮೀರಾ ಎಂಬುವರಲ್ಲಿ ಕಂಕನಾಡಿಗೆ ಹೋಗುತ್ತೇನೆಂದು ಹೋಗಿರುತ್ತಾರೆ.  ದಿನಾಂಕ 13-06-2014 ಸಂಜೆ 6 ಗಂಟೆಯ ವೇಳೆಗೆ ಪಿರ್ಯಾದಿದಾರರು ಮನೆಗೆ ಬಂದಾಗ ಕೇಲಸದ ಹುಡುಗಿ ಸೋನಿಯಾ ಸಾಲ್ದಾನ ಕಂಕನಾಡಿಗೆ ಹೋದವಳು ಬಾರದೆ ಇರುವ ಬಗ್ಗೆ ತಿಳಿದುಕೊಂಡ ಪಿರ್ಯಾದಿದಾರರು ಸೋನಿಯಾ ಸಾಲ್ದಾನಳ ಸಂಬಂದಿಕರಲ್ಲಿಯೂ ಮನೆಯ ನೇರೆಕರೆಯವರಲ್ಲಿಯೂ ವಿಚಾರಿಸಿದಾಗ ಆಕೆಯು ಪತ್ತೆಯಾಗದೆ ಇರುವುದಾಗಿದೆ.

 

11.ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 12-06-2014 ರಂದು ಬೆಳಿಗ್ಗೆ ಸುಮಾರು 10-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಮನ್ಸೂರ್ ಅಹಮ್ಮದ್ ರವರು ಕಾಟಿಪಳ್ಳ ಗ್ರಾಮ 2ನೇ ಬ್ಲಾಕ್ ನಲ್ಲಿರುವ ವಾಸ್ತವ್ಯದ ಮನೆಗೆ ಬೀಗ ಹಾಕಿ ಹಿಂದೂಸ್ಥಾನ್ ಬ್ರಿವರೇಜ್ ಕೊಕೊ ಕೋಲಾ ಕಂಪನಿಗೆ ತೆರಳಿ ಕೆಲಸ ಮುಗಿಸಿಕೊಂಡು ನಂತರ ಜೆ ಆಸ್ಪತ್ರೆಗೆ ಹೋಗಿ ಅವರ ತಾಯಿಯವರನ್ನು ವಿಚಾರಿಸಿಕೊಂಡು ರಾತ್ರಿ ಸುಮಾರು 9-00 ಗಂಟೆಗೆ ವಾಪಾಸು ಮನೆಗೆ ಬಂದು ಮುಂದಿನ ಬಾಗಿಲು ತೆರೆದು ಒಳಗೆ ಹೋಗಿ ನೋಡಿದಾಗ ಅಡುಗೆ ಕೋಣೆಯಲ್ಲಿದ್ದ ಪಾತ್ರೆಗಳು ಚೆಲ್ಲಾಪಿಲ್ಲಿಯಾಗಿ ಕೆಳಗೆ ಬಿದ್ದಿದ್ದು, ಹಿಂಬದಿ ಬಾಗಿಲು ತೆರೆದಿದ್ದು ಅಲ್ಲದೇ ಬೆಡ್ ರೂಮಿನಲ್ಲಿದ್ದ ಕಬ್ಬಿಣದ ಕಪಾಟಿನ ಬಾಗಿಲು ತೆರೆದಿದ್ದು ಅದರಲ್ಲಿದ್ದ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿದ್ದು ಹಾಗೂ ಕಪಾಟಿನೊಳಗಿದ್ದ ನಗದು ಹಣ ರೂ 24,000/- ಇಲ್ಲದೇ ಇದ್ದು ಯಾರೋ ಕಳ್ಳರು ನಿನ್ನೆ ದಿನ ದಿನಾಂಕ 12-06-14 ರಂದು ಬೆಳಿಗ್ಗೆ 10-00 ಗಂಟೆಯಿಂದ ರಾತ್ರಿ 9-00 ಗಂಟೆ ಮದ್ಯೆ  ಪಿರ್ಯಾದಿದಾರರ  ಮನೆಯ ಹಿಂಬದಿ ಬಾಗಿಲಿನ ಮೂಲಕ ಒಳ ಪ್ರವೇಶಿಸಿ ಬೆಡ್ ರೂಮಿನ  ಕಪಾಟಿನಲ್ಲಿದ್ದ ಕೀಯನ್ನು ಬಳಸಿ ಕಪಾಟನ್ನು ತೆರೆದು ಅದರೊಳಗಿದ್ದ ನಗದು ಹಣ 24,000/- ರೂ ಅನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿದೆ.

 

12.ಮಂಗಳೂರು      ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 11.06.2014 ರಂದು ರಾತ್ರಿ ಸುಮಾರು  7.00 ಗಂಟೆಗೆ ಮಂಗಳೂರು ನಗರದ ನೀರುಮಾರ್ಗ ಎಂಬಲ್ಲಿ ಪಿರ್ಯಾದಿದಾರರಾದ ಶ್ರೀ ಜೋಸೆಪ್ ಲೋಬೋರವರ ಬಾಬ್ತು ಡೋರ್ ನಂಬ್ರ 3-125/14 ನೇ ಕಟ್ಟಡದ ಮಂಭಾಗ ಅವರ ಬಾಬ್ತು ಮಹೀಂದ್ರ ಕಂಪನಿಯ  ಕಪ್ಪು ಬಣ್ಣದ ಮೋಟಾರ್ ಬೈಕ್ KA 19 EJ 9582 ನ್ನು ಪಾರ್ಕ್ ಮಾಡಿ ಮನೆಗೆ ಹೋಗಿದ್ದು,  ಮರು ದಿನ ದಿನಾಂಕ 12.06.2014ರಂದು ಬೆಳಿಗ್ಗೆ ಸುಮಾರು 7.00 ಗಂಟೆಗೆ ಬಂದು ನೋಡಿದಾಗ ಸದ್ರಿ ಮೋಟಾರ್ ಬೈಕನ್ನು ರಾತ್ರಿ ಸಮಯ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿಯೂ ಕಳವು ಆದ ಮೋಟಾರ್ ಬೈಕಿನ ಅಂದಾಜು ಮೌಲ್ಯ ರೂಪಾಯಿ 44,000/- ಆಗಬಹುದು

No comments:

Post a Comment