ದೈನಂದಿನ ಅಪರಾದ ವರದಿ.
ದಿನಾಂಕ 27.06.2014 ರ 07:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 1 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 1 |
ಹಲ್ಲೆ ಪ್ರಕರಣ | : | 1 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 1 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 2 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 2 |
ಇತರ ಪ್ರಕರಣ | : | 0 |
1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26-06-2014 ರಂದು ಸಂಜೆ ಪಿರ್ಯಾದಿದಾರರಾದ ಶ್ರೀ ಶೈಲೇಶ್ ರವರು ಮುಕ್ಕಾ ಜಂಕ್ಷನ್ ನಲ್ಲಿರುವ ಸಮಯ ರಾತ್ರಿ 8-00 ಗಂಟೆ ಸಮಯಕ್ಕೆ ಮೂಲ್ಕಿ ಕಡೆಯಿಂದ ಮಂಗಳೂರು ಕಡೆಗೆ ರಾ.ಹೆ 66 ರಲ್ಲಿ ಕೆ.ಎ. 19. ಝಡ್ 4633ನೇ ರಿಟ್ಜ್ ಕಾರು ಚಾಲಕನು ಅವರ ಬಾಬ್ತು ಸದ್ರಿ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮುಕ್ಕಾ ಜಂಕ್ಷನ್ ನಲ್ಲಿ ರಸ್ತೆಯ ಪೂರ್ವ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮುಕ್ಕಾ ನಿವಾಸಿ ಶ್ರೀನಿವಾಸ ಬಂಗೇರಾ ರವರಿಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀನಿವಾಸ ಬಂಗೇರಾರವರು ರಸ್ತೆಗೆ ಬಿದ್ದು ತಲೆಗೆ ಹಾಗೂ ಬಲಕಾಲಿಗೆ ರಕ್ತ ಗಾಯವಾಗಿ ಚಿಕಿತ್ಸೆ ಬಗ್ಗೆ ಶ್ರೀನಿವಾಸ ಆಸ್ಪತ್ರೆಗೆ ಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಎ.ಜೆ ಆಸ್ಪತ್ರಗೆ ದಾಖಲಿಸಿರುವುದಾಗಿ ಈ ಅಪಘಾತಕ್ಕೆ ಕಾರು ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ.
2.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26-06-2014 ರಂದು ಸಂಜೆ ಸಮಯ ಸುಮಾರು 17-45 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ವೇದಾವತಿ ರವರು ಫ್ಯಾಕ್ಟರಿ ಕೆಲಸ ಮುಗಿಸಿ ಎಂದಿನಂತೆ ಮಂಗಳೂರು ನಗರದ ಮರೋಳಿಯ ಜೋಡುಕಟ್ಟೆಯ ಬಳಿ ಮೈದಾ ಫ್ಯಾಕ್ಟರಿ ರಸ್ತೆಯ ಮೂಲಕ ನಡೆದುಕೊಂಡು ತನ್ನ ಮನೆಗೆ ಹೋಗುತ್ತಿದ್ದ ಸಮಯ ಪಿರ್ಯಾದಿದಾರರ ಎದುರುಗಡೆಯಿಂದ ಒಂದು ದ್ವಿ-ಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತ ಯುವಕರು ತಮ್ಮ ವಾಹನವನ್ನು ಪಿರ್ಯಾದಿದಾರರ ಬಳಿ ನಿಧಾನ ಮಾಡಿ ಅವರುಗಳ ಪೈಕಿ ಹಿಂದಿನ ಸೀಟಿನಲ್ಲಿದ್ದ ಸಹ-ಸವಾರ ಏಕಾಏಕಿ ಪಿರ್ಯಾದಿದಾರರ ಕುತ್ತಿಗೆಗೆ ಕೈ ಹಾಕಿ ಪಿರ್ಯಾದಿದಾರರ ಕುತ್ತಿಗೆಯಲ್ಲಿದ್ದ ಸುಮಾರು 38ಗ್ರಾಂ ತೂಕದ ಅಂದಾಜು ಮೌಲ್ಯ. 80,000/- ರೂ. ಬೆಲೆ ಬಾಳುವ ಮುಷ್ಠಿ ಕರಿಮಣಿ ಸರವನ್ನು ಬಲಾತ್ಕಾರವಾಗಿ ಕಿತ್ತು ಲೂಟಿ ಮಾಡಿಕೊಂಡು ಹೋಗಿರುವುದಾಗಿದೆ.
3.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಜೂಲಿಯನ್ ಕ್ರಾಸ್ತಾ ರವರ ಗಂಡನಾದ ರಮೇಶ್ (49) ಎಂಬವರು ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದು ಸುಮಾರು 6 ತಿಂಗಳಿನಿಂದ ಲೀವರ್ ಸಮಸ್ಯೆಯಿಂದ ಬಳಲುತ್ತಿದ್ದು ವಿಪರೀತ ಕುಡಿತದ ಚಟ ಹೊಂದಿದ್ದರು. ದಿನಾಂಕ 25-06-2014 ರಂದು ಸುಮಾರು ಮಧ್ಯಾಹ್ನ 1.25 ಗಂಟೆಗೆ ಮಂಗಳೂರು ನಗರದ ಬಲ್ಮಠದ ಬಸ್ಸು ನಿಲ್ದಾಣದ ಹತ್ತಿರ ತನ್ನ ಸಂಬಂಧಿಯಾದ ಗಣೇಶ್ ಎಂಬರನ್ನು ಪೋನ್ ಮಾಡಿ ಕರೆಸಿ ಅವರಲ್ಲಿ ತನ್ನ ಮೋಬೈಲ್, ವಾಚು, ಕನ್ನಡಕ, ಯೂನಿಫಾರಂ ನೀಡಿ ನಾಳೆ ದುಡಿಯುವುದಾಗಿ ಇವತ್ತು ಸೌಖ್ಯವಿಲ್ಲದ ಕಾರಣ ಮನೆಗೆ ಹೋಗುವುದಾಗಿ ತಿಳಿಸಿ ನಂತರ ಗಣೇಶ್ ಅವರಲ್ಲಿ 100 ರೂ ಹಣ ತೆಗೆದುಕೊಂಡು ಬಲ್ಮಠ ರೂಬಿ ವೈನ್ಸ್ ಶಾಪ್ ಗೆ ಕುಡಿಯಲು ಹೋದವರು ಈ ವರೆಗೆ ಮನೆಗೂ ಬಾರದೆ ಇದ್ದು ಅಕ್ಕನ ಮನೆಗೂ ಹೋಗದೆ, ಸಂಬಂಧಿಕರ ಮನೆಗಳಲ್ಲಿ ಹಾಗೂ ನಗರದ ಎಲ್ಲಾ ಕಡೆಗಳಲ್ಲಿ ಹುಡುಕಾಡಿದಲ್ಲಿ ಸಿಗದೆ ಇದ್ದು ಕಾಣೆಯಾಗಿರುತ್ತಾರೆ.
4.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26-06-2014ರಂದು ಮದ್ಯಾಹ್ನ 12-15 ಗಂಟೆ ವೇಳೆಗೆ ಮಂಗಳೂರು ತಾಲೂಕು ಕೃಷ್ಣನಗರ ಬೊಂದೆಲ್ ಎಂಬಲ್ಲಿನ ಬಾಲಕರ ಬಾಲಮಂದಿರದಲ್ಲಿದ್ದ ಬಾಲಕ ಭರತ್(12ವ) ಎಂಬವನು ತಪ್ಪಿಸಿಕೊಂಡು ಹೋಗಿ ಕಾಣೆಯಾಗಿದ್ದು ಇದುವರೆಗೆ ಬಾಲಕನು ಪತ್ತೆಯಾಗದೇ ಇರುವುದಾಗಿದೆ. ಕಾಣೆಯಾದವರ ಚಹರೆ:- ಮಾ.ಭರತ್, ಪ್ರಾಯ 12ವರ್ಷ, ತಂದೆ-ವಿಜಯ, ತಾಯಿ:ಆರತಿ, ಗೋದಿ ಮೈ ಬಣ್ಣ, ಕಂದು ಬಣ್ಣದ ಚಡ್ಡಿ, ಚೆಕ್ಸ್ ನೀಲಿ ಬಣ್ಣದ ಅರ್ಧ ತೋಳಿನ ಶರ್ಟ್, ಎತ್ತರ-4 ಅಡಿ 7 ಇಂಚು, 28 ಕೆ.ಜಿ ತೂಕ, ಕಿವುಡ ಮತ್ತು ಮೂಕನಾಗಿರುತ್ತಾನೆ.
5.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಜೋನ್ ಬ್ಯಾಪಿಸ್ಟ್ ಲೆವಿಸ್ ರವು ಪೈಂಟರ್ ಕೆಲಸ ಮಾಡಿಕೊಂಡು ತನ್ನ ಇಬ್ಬರು ಮಕ್ಕಳಾದ ಸವಿತಾ ಮತ್ತು ಜೋಸ್ಮಿನ್ ಮೆಲಿಟಾ ರವರೊಂದಿಗೆ ಡೋರ್ ನಂ 14-1-49 ಹಾಗೂ 14-9-49 ಎ ಪತ್ರಾವೋ ರಸ್ತೆ , ಕರಂಗಲಪಾಡಿಯಲ್ಲಿ ಮನೆಯಲ್ಲಿ ಜೀವನ ನಡೆಸುತ್ತಿದ್ದು, ಸದ್ರಿ ಮನೆಗೆ ವಿದ್ಯುಚ್ಚಕ್ತಿಯನ್ನು ನಿಲುಗಡೆಗೊಳಿಸಿದ ಬಗ್ಗೆ ಸಿವಿಲ್ ದಾವೆಯನ್ನು ಹೂಡಿದ್ದು, ಅದು ನ್ಯಾಯಾಲಯದಲ್ಲಿ ಇರುವಾಗ ವಿದ್ಯುಚ್ಚಕ್ತಿ ಇಲಾಖೆಯವರು ವಿದ್ಯುತ್ತ್ ಸಂಪರ್ಕವನ್ನು ನೀಡಿರುತ್ತಾರೆ. ದಿನಾಂಕ 26-06-2014 ರಂದು ಸುಮಾರು 3:30 ಗಂಟೆಗೆ ಪಿರ್ಯಾದಿದಾರರು ಮನೆಯಲ್ಲಿದ್ದಾಗ ಮನೆಯ ಕಂಪೌಂಡಿನ ಒಳಗಡೆ ಫಾ. ಸಿರಿಲ್ ಡಿ ಮೆಲ್ಲೋ , ಫಾ. ಪ್ರಾನ್ಸಿಸ್ ಡಿ ಅಲ್ಮೆಡಾ ಹಾಗೂ ಹೆಸರು ಗೊತ್ತಿಲ್ಲದ ಮತ್ತೊಬ್ಬ ಧರ್ಮಗುರುಗಳು ಅವರೊಂದಿಗೆ ಸುಮಾರು 30 ರಿಂದ 40 ಜನರನ್ನು ಸೇರಿಸಿಕೊಂಡು ಬುಲ್ಡೋಜರ್ ಹಾಗೂ ಇತರ ವಾಹನಗಳೊಂದಿಗೆ ಮನೆಯ ಕಂಪೌಂಡಿನೊಳಗೆ ಅಕ್ರಮ ಪ್ರವೇಶ ಮಾಡಿದಾಗ, ಪಿರ್ಯಾದಿದಾರರು ಅವರನ್ನು ಪ್ರಶ್ನಿಸುತ್ತಿದ್ದಂತೆ ಅವರೆಲ್ಲರೂ ಸೇರಿ ಪಿರ್ಯಾದಿದಾರರನ್ನು ಹಿಡಿದು ಅಲ್ಲಿಯೇ ಕಟ್ಟಿ ಹಾಕಿ ಬುಲ್ಡೋಜರ್ ನಿಂದ ಮನೆಯನ್ನು ಧ್ವಂಸಗೊಳಿಸಲು ಪ್ರಾರಂಭಿಸಿದ್ದು, ಪಿರ್ಯಾದಿದಾರರು ಬೊಬ್ಬೆ ಹೊಡೆದು ಕೂಗಿ ನನ್ನ ಮನೆಯನ್ನು ಧ್ವಂಸ ಮಾಡಬೇಡಿ ಎಂದು ವಿನಂತಿಸಿದ್ದು, ಆಗ ಫಾ. ಸಿರಿಲ್ ಡಿ. ಮೆಲ್ಲೋ, ಫಾ. ಪ್ರಾನ್ಸಿಸ್ ಡಿ. ಅಲ್ಮೆಡಾ ರವರು ಹತ್ತಿರ ಬಂದು ಪಿರ್ಯಾದಿದಾರರ ಕುತ್ತಿಗೆ ಕೈ ಹಾಕಿ ಕೊಲ್ಲುವುದಾಗಿ ಹೇಳಿ ಕೈಯಿಂದ ಹಲ್ಲೆ ನಡೆಸಿದ್ದು, ಕೂಡಲೆ ವಿಷಯ ತಿಳಿದ ಪಿರ್ಯಾದಿದಾರರ ಮಕ್ಕಳಾದ ಸವಿತಾ ಮತ್ತು ಜೋಸ್ಮಿನ್ ಮೆಲಿಟಾ ಇವರು ಬಂದು ಪಿರ್ಯಾದಿದಾರರನ್ನು ಕಟ್ಟಿ ಹಾಕಿದ್ದನ್ನು ನೋಡಿ ಅವರಲ್ಲಿ ಕೇಳಿದಾಗ ಅವರು ಮಕ್ಕಳ ಮೇಲೆ ಅವರು ಹುಡುಗಿಯರೆಂದು ಗೊತ್ತಿದ್ದರೂ ಕೂಡಾ ಮೈಗೆ ಕೈ ಹಾಕಿ ಹಲ್ಲೆ ಮಾಡಿ ಅವರನ್ನು ದೂಡಿ ಕಾಲಿನಿಂದ ತುಳಿದಿದ್ದು, ನಂತರ ಪಿರ್ಯಾದಿದಾರರು ಮತ್ತು ಅವರ ಮಕ್ಕಳು ಅವರಲ್ಲಿ ನಮ್ಮ ಮನೆಯನ್ನು ಧ್ವಂಸ ಮಾಡ ಬೇಡಿ ಎಂದು ಅಂಗಲಾಚಿ ಬೇಡಿದರೂ ಕೂಡಾ ಕೇಳದೆ ಮಕ್ಕಳು ತನ್ನನ್ನು ಕಟ್ಟಿ ಹಾಕಿದ್ದಲ್ಲಿ ಬಂದು ತನ್ನನ್ನು ಬಿಡಿಸಲು ಪ್ರಯತ್ನಿಸಿದಾಗ ಅವರು ಬುಲ್ಡೋಜರಿನ ಡ್ರೈವರಿನಲ್ಲಿ ಬುಲ್ಡೋಜರನ್ನು ಚಲಾಯಿಸಿ ಅವರನ್ನು ಕೊಲ್ಲಲು ಹೇಳಿ ಒಮ್ಮೆಲೆ ಬುಲ್ಡೋಜರನ್ನು ಮಕ್ಕಳ ಮೇಲೆ ಚಲಾಯಿಸಿಲು ಪ್ರಯತ್ನಿಸಿದಾಗ ಮಕ್ಕಳು ಅಲ್ಲಿಂದ ಓಡಿ ಹೋಗಿ ತಪ್ಪಿಸಿಕೊಂಡಿರುವುದಾಗಿ, ಈ ಕೃತ್ಯದಿಂದಾಗಿ ಪಿರ್ಯಾದಿದಾರರ ಜೀವನ ಬೀದಿ ಪಾಲಾಗಿದ್ದು, ವಾಸ ಮಾಡಲು ಮನೆ ಇಲ್ಲದಂತಾಗಿದ್ದು, ಮನೆಯಲ್ಲಿದ್ದ ಪಿರ್ಯಾದಿದಾರರ ಬಾಬ್ತು ಟಿ.ವಿ., ಪ್ರಿಡ್ಜ್, ಲ್ಯಾಪ್ ಟಾಪ್, ಕಪಾಟು ಮತ್ತು ಇತರ ಮನೆಯ ಸಾಮಾಗ್ರಿಗಳು ನಷ್ಠವಾಗಿರುತ್ತದೆ, ಅಲ್ಲದೇ ಬೆಲೆಬಾಳುವ ವಸ್ತುಗಳಾದ ಚಿನ್ನಾಭರಣಗಳು ಮತ್ತು ಲಾಕರಿನಲ್ಲಿದ್ದಂತಹ ರೂ. 35,000/- ಹಣವನ್ನು ಆರೋಪಿಗಳು ದೋಚಿಕೊಂಡು ಹೋಗಿದ್ದು, ಇದರಿಂದಾಗಿ ಸುಮಾರು 15 ರಿಂದ 20 ಲಕ್ಷ ನಷ್ಠ ಉಂಟಾಗಿರುವುದಾಗಿದೆ.
6.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19-06-2014 ರಂದು 14-00 ಗಂಟೆಯಿಂದ 20-15 ಗಂಟೆಯ ಮದ್ಯೆ ಅವಧಿಯಲ್ಲಿ ಯಾರೋ ಕಳ್ಳರು ಮಂಗಳೂರು ನಗರದ ಅತ್ತಾವರದಲ್ಲಿ ಮೋತಿ ಶಾಮ್ ಕಂಪನಿಯ ವತಿಯಿಂದ ನಿರ್ಮಾಣ ಹಂತದಲ್ಲಿರುವ ಐವರಿ ಟವರ್ ಎಂಬ ಹೆಸರಿನ ವಸತಿ ಸಮುಚಯದ ಬಳಿ ಪಾರ್ಕ್ ಮಾಡಿದ್ದ ಪಿರ್ಯಾದಿದಾರರಾದ ಶ್ರೀ ಅರ್ಫಝ್ ಝಾಕೀರ್ ರವರ ಆರ್. ಸಿ. ಮಾಲಕತ್ವದ 2013ನೇ ಮೊಡಲ್ ನ ಕಪ್ಪು ಬಣ್ಣದ ಅಂದಾಜು ರೂಪಾಯಿ 40000/- ಬೆಲೆ ಬಾಳುವ KA 19 EK 1722ನೇ ನೊಂದಣಿ ಸಂಖ್ಯೆಯ ಹೀರೊ ಕಂಪನಿಯ ಸ್ಲೈಂಡರ್ ಪ್ಲಸ್ ದ್ಚಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ದ್ಚಿಚಕ್ರ ವಾಹನವನ್ನು ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ.
7.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾಧಿದಾರರಾದ ಶ್ರೀ ಮೊಹಮ್ಮದ್ ಶರೀಫ್ ರವರ ಮಾವ ಉಸ್ಮಾನ್ ಹಾಗೂ ತನ್ನ ಹೆಂಡತಿ ಮಾವ ಅಬೂಬಕ್ಕರ್ ರವರು ಪಿರ್ಯಾದಿದಾರರು ವಿದೇಶಕ್ಕೆ ಹೋದ ಸಮಯ ತನ್ನ ಹೆಂಡತಿಯ ಬಂಗಾರದ ಒಡವೆಗಳನ್ನು ಅಡವಿಟ್ಟನೆಂಬ ಕಾರಣಕ್ಕಾಗಿ ಹಾಗೂ ತನ್ನ ಹೆಂಡತಿಗೆ ಹಾಗೂ ತನಗೆ ಇದ್ದ ವೈಮನಸ್ಸನ್ನು ದುರುಪಯೋಗ ಪಡಿಸಿಕೊಂಡು ದಿನಾಂಕ: 26/06/2014 ರಂದು ಸಂಜೆ 7-30 ಗಂಟೆಗೆ ಮಂಗಳೂರು ತಾಲ್ಲೂಕು ಬಜಪೆ ಗ್ರಾಮದ ಕೊಂಚಾರು ಎಂಬಲ್ಲಿರುವ ಜೆ.ಬಿ.ಎಫ್ ಕಂಪೌಂಡು ಬಳಿ ಇರುವ ಕಾಲು ರಸ್ತೆಯಲ್ಲಿ ನಾನು ನಡೆದುಕೊಂಡು ಬರುತ್ತಿದ್ದಾಗ ಅಲ್ಲಿಗೆ ಮೂರು ಜನ ಅಪರಿಚಿತ ಯುವಕರನ್ನು ಕಳುಹಿಸಿ ಅವರಲ್ಲಿ ಪಿರ್ಯಾದಿದಾರರಿಗೆ ಹಲ್ಲೆ ಮಾಡಲು ದುಷ್ಪ್ರೇರಣೆ ನೀಡಿದ್ದರಿಂದ ಆ ಮೂರು ಯುವಕರು ತನ್ನನು ತಡೆದು ನಿಲ್ಲಿಸಿ ಕಬ್ಭಿಣದ ಸರಳು ಮತ್ತು ಪಂಚಿನಿಂದ ಹಲ್ಲೆ ಮಾಡಿ ಕಾಲಿನಿಂದ ತುಳಿದು ಕೈಯಿಂದ ಹೊಡೆದುದಲ್ಲದೇ ತನ್ನಲ್ಲಿದ್ದ ಮೊಬೈಲ್ ನ್ನು ಗುದ್ದಿ ಪುಡಿ ಮಡಿ ನಷ್ಟ ವುಂಟು ಮಾಡಿ ಹೊರಟು ಹೋಗಿರುತ್ತಾರೆ.
8.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26.06.2014 ರಂದು ಪಿರ್ಯಾದಿದಾರರಾದ ಶುಭಲಕ್ಷ್ಮೀ ರವರು ತಮ್ಮ ಬಾಬ್ತು KA-19 -EL-1173ನೇ ನಂಬ್ರದ ಡಿಯೋ ಸ್ಕೂಟರ್ನಲ್ಲಿ ತನ್ನ ಮಗಳು ನಾಲ್ಕುವರೆ ವರ್ಷ ಪ್ರಾಯದ ರಕ್ಷಾ ಮತ್ತು ತನ್ನ ಅತ್ತೆ ವಿಮಲ ರವರನ್ನು ಹಿಂಬದಿ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಮಂಗಳೂರು ನಗರದ ತನ್ನ ಮನೆಯಿಂದ ಕುಡುಪು ದೇವಸ್ಥಾನಕ್ಕೆ ಹೋಗುವರೇ NH-169ನೇ ರಸ್ತಯಲ್ಲಿ ಹೋಗುತ್ತಾ ಸಂಜೆ 16:45 ಗಂಟೆ ಸಮಯಕ್ಕೆ ಬೈತುರ್ಲಿಯಿಂದ ಸ್ವಲ್ಪ ಹಿಂದೆ ತಲುಪಿದಾಗ ಪಿರ್ಯಾದಿದಾರರ ಹಿಂದುಗಡೆಯಿಂದ ಅಂದರೆ ಕುಲಶೇಖರ ಕಡೆಯಿಂದ ವಾಮಂಜೂರು ಕಡೆಗೆ KA-19-D-445ನೇ ನಂಬ್ರದ ಮಹೀಂದ್ರಾ ಜೈಲೋ ಕಾರನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರು ಚಲಾಯಿಸುತ್ತಿದ್ದ ಸ್ಕೂಟರಿನ ಬಲಬದಿಯ ಕನ್ನಡಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಸಹ ಸವಾರರುಗಳು ಸ್ಕೂಟರ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಬಲ ಕೈಯ ಭುಜದ ಕೆಳಗೆ ಮೂಳೆ ಮುರಿತದ ಗಾಯ ಮತ್ತು ಪಿರ್ಯಾದಿದಾರರ ಮಗಳು ವರ್ಷಾಳ ಮುಖಕ್ಕೆ ಮತ್ತು ಬಲ ಕೈ ಬೆರಳಿಗೆ ರಕ್ತ ಬರುವ ಗಾಯ ಹಾಗೂ ವಿಮಲರವರ ತಲೆಯ ಹಿಂದುಗಡೆ ಮತ್ತು ಮುಖಕ್ಕೆ ಗಂಭೀರ ತರಹದ ಗಾಯಗೊಂಡವರು ಚಿಕಿತ್ಸೆಯ ಬಗ್ಗೆ ಮಂಗಳೂರು ನಗರದ AJ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಧಾಖಲುಗೊಂಡಿರುವುದಲ್ಲದೆ ಅಪಘಾತ ಉಂಟು ಮಾಡಿದ ಆರೋಪಿ ಕಾರು ಚಾಲಕ ಕಾರನ್ನು ನಿಲ್ಲಿಸದೇ ತನ್ನ ಬಾಬ್ತು ಕಾರಿನೊಂದಿಗೆ ಅಪಘಾತ ಸ್ಥಳದಿಂದ ಪರಾರಿಯಾಗಿರುವುದಾಗಿದೆ.
No comments:
Post a Comment