Monday, June 2, 2014

Daily Crime Reports 01-06-2014

ದೈನಂದಿನ ಅಪರಾದ ವರದಿ.

ದಿನಾಂಕ 01.06.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

2

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

3

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

2

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 31-05-2014 ರಂದು ಸಯಯ ಸುಮಾರು ಬೆಳಿಗ್ಗೆ 10-00 ಗಂಟೆ ವೇಳೆಗೆ ಬಂಟ್ವಾಳ ತಾಲೂಕು ಕುರ್ನಾಡು ಗ್ರಾಮದ ಮುಡಿಪು ಬಸ್ ನಿಲ್ದಾಣದ ಬಳಿ ಪಿರ್ಯಾದಿದಾರರಾದ ಶ್ರೀಮತಿ ನಫೀಸಾ ರವರು ಮಂಗಳೂರಿಗೆ ಹೋಗುವರೇ ಬಸ್ಸಿಗಾಗಿ ಕಾಯುತ್ತಿರುವಾಗ ಮುಡಿಪು ಚರ್ಚ್ ಕಡೆಯಿಂದ ಕಾಯರ್ ಗೋಳಿ  ಕಡೆಗೆ ಇಶರ್ ಗಾಡಿ ನಂಬ್ರ ಕೆಎ-21ಬಿ 0794 ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಪಿರ್ಯಾದಿದಾರರಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಎರಡೂ ಕಾಲಿಗೆ ತರಚಿದ ಗಾಯವಾಗಿರುತ್ತದೆ. ಸದ್ರಿ ಗಾಯಾಳುವನ್ನು ಅಲ್ಲಿ ಸೇರಿದವರು ಯೇನಪೋಯ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ಒಳರೋಗಿಯಾಗಿ ದಾಖಲಿಸಿರುತ್ತಾರೆ.

 

2.ಮಂಗಳೂರು ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ನಗರದ SCS ಆಸ್ಪತ್ರೆಯ ಎದುರುಗಡೆ ಇರುವ ವಿಲ್ಲೀಸ್ ಕೋಟ್ ಎಂಬಲ್ಲಿ  ಜ್ಯೋತಿ ರವರ ಮನೆಯಲ್ಲಿ ಕೆಲಸ ಮಾಡಿಕೊಂಡಿರುವ ಪಿರ್ಯಾದಿದಾರರಾದ ಸುಲೋಚನಾ ರವರು ತನ್ನ ಅಣ್ಣನ ಮಗಳಾದ ಸುನೀತಾಳನ್ನು ಜೊತೆಯಲ್ಲಿರಿಸಿಕೊಂಡಿದ್ದು,  ದಿನಾಂಕ 27-05-2014 ರಂದು ಮಧ್ಯಾಹ್ನ ಸಮಯ ಸುಮಾರು 12-00 ಗಂಟೆಗೆ ಪಿರ್ಯಾದಿದಾರರು ಕೆಲಸದಲ್ಲಿ ಮಗ್ನರಾಗಿದ್ದ ಸಮಯ ಸದ್ರಿಯಾಕೆಯು ಹೇಳದೇ ಕೇಳದೇ ಮನೆ ಬಿಟ್ಟು ಹೋಗಿದ್ದು ಕಾಣೆಯಾದ ದಿನಾಂಕದಿಂದ ಇಲ್ಲಿಯವರೆಗೆ ಸುತ್ತಮುತ್ತಲೂ ಹಾಗೂ ನಗರದ ಎಲ್ಲಾ ಕಡೆಗಳಲ್ಲಿ ಮತ್ತು ಸ್ನೇಹಿತರಿಗೆ, ಸಂಬಂಧಿಕರಿಗೆ ಕರೆ ಮಾಡಿ ವಿಚಾರಿಸಿ ಹುಡುಕಾಡಿದಲ್ಲಿ ಇಲ್ಲಿಯವರೆಗೆ ಪತ್ತೆಯಾಗಿರುವುದಿಲ್ಲ.

 

3.ಮಂಗಳೂರು ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 11-04-2014 ರಂದು 00-00 ಗಂಟೆಯಿಂದ ದಿನಾಂಕ 30-05-2014 09-30 ಗಂಟೆಯ ಮಧ್ಯೆ ಮಂಗಳೂರು ನಗರದ ಕದ್ರಿ ಗ್ರಾಮದ ಕೆ.ಪಿ.ಟಿ ಕಾಲೇಜಿನ ಎದುರುಗಡೆ ಇರುವ  ಸರಕಾರಿ ಕಿರಿಯ ತಾಂತ್ರಿಕ ಶಾಲೆಯ ಎಲೆಕ್ಟ್ರಿಕ್ ವಿಭಾಗ ಮತ್ತು ಮೆಕ್ಯಾನಿಕ್ ವಿಭಾಗದ ಕಾರ್ಯಾಗಾರದ ಹಿಂದಿನ ಕಿಟಕಿಯ ಗ್ರಿಲ್ ಗಳನ್ಜು ಯಾರೋ ಕಳ್ಳರು ಯಾವುದೋ ಆಯುಧವನ್ನು ಉಪಯೋಗಿಸಿ ಮುರಿದು ತೆರೆದು ಮೂಲಕ ಒಳಪ್ರವೇಶಿಸಿ ಎರಡೂ ವಿಭಾಗಗಳಲ್ಲಿನ ವಿವಿಧ ನಮೂನೆಯ ಮೆಷಿನರಿಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಮೆಷಿನರಿಗಳ ಒಟ್ಟು ಮೌಲ್ಯ 18,874/- ರೂ. ಆಗಬಹುದು.

 

4.ಮಂಗಳೂರು ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 31-05-2014 ರಂದು ಸಂಜೆ 5-10 ಗಂಟೆಗೆ ಪಿರ್ಯಾದಿದಾರರಾದ ಶ್ರೀ ರಾಘವ ಪಡೀಲ್, ಪೊಲೀಸ್ ನಿರೀಕ್ಷಕರು, ಮಂಗಳೂರು ಪೂರ್ವ ಪೊಲೀಸ್ ಠಾಣೆ ರವರು ಇಲಾಖಾ ಜೀಪುನಲ್ಲಿ ಪಿಸಿ 655 ನೇಯವರು ಚಾಲಕರಾಗಿಯೂ ಹಾಗೂ ASI ಕೃಷ್ಣ, ಹೆಚ್ ಸಿ 831 ಮತ್ತು ಪಿಸಿ 2026 ನೇಯವರ ಜೊತೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಮಂಗಳೂರು ನಗರದ ಕದ್ರಿ ಸ್ಮಶಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್ ಎಂಬ ಜುಗಾರಿ ಆಟ ಆಡುತ್ತಿರುವ ಬಗ್ಗೆ ದೊರೆತ ಖಚಿತ ವರ್ತಮಾನದಂತೆ ಪಂಚರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿ ಸಂಜೆ 5-20 ಗಂಟೆಗೆ ಕದ್ರಿ ಸ್ಮಶಾನದ ಬಳಿ ಹಣವನ್ನು ಪಣವಾಗಿಟ್ಟಕೊಂಡು ಅಂದರ್-ಬಾಹರ್ ಎಂಬ ಜುಗಾರಿ ಆಟವಾಡುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಗಳ ಸಹಾಯದಿಂದ ಸುತ್ತುವರಿದು 6 ಜನರನ್ನು  ಹಿಡಿದು ಅಂದರ್-ಬಾಹರ್ ಎಂಬ ಅದೃಷ್ಟ ಆಟವಾಡುತ್ತಿದ್ದ ಬಗ್ಗೆ ಅವರಿಗೆ ತಪ್ಪನ್ನು ತಿಳಿಯ ಪಡಿಸಿದಾಗ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡ ಮೇರೆಗೆ ಜುಗಾರಿ ಆಟವಾಡುತ್ತಿದ್ದ 1. ವೆಂಕಪ್ಪ, 2. ಚಿತ್ತರಂಜನ್, 3. ಶೇಖರ ಜೋಗಿ, 4. ಮಧು, 5. ರಾಜೇಶ್ ಹಾಗೂ 6. ಪಮ್ಮಿ @ ಪ್ರವೀಣ್ ಎಂಬವರನ್ನು ವಿಚಾರಿಸಿ ಹೆಸರು ವಿಳಾಸ ಪಡೆದುಕೊಂಡು, 6 ಜನ ಆಪಾದಿತರು ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್ ಜುಗಾರಿ ಆಟವಾಡಿ ಕರ್ನಾಟಕ ಪೊಲೀಸ್ ಕಾಯ್ದೆ 87 ಪ್ರಕಾರ ಅಪರಾದವೆಸಗಿರುವುದರಿಂದ ಕ್ರಮ ಕೈಗೊಂಡಿರುವುದಾಗಿದೆ.

 

5.ಪಣಂಬೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಸಂಜೀಬ್ ಕುಮಾರ್ ಮಿಶ್ರಾ ರವರು ತನ್ನ ಬಾಬ್ತು ಕಾರು ನಂಬ್ರ ಕೆ, 05 ಎಂ,ಪಿ, 6494 ನೇಯದರಲ್ಲಿ ದಿನಾಂಕ 31/05/2014 ರಂದು ಮಡಿಕೇರಿಯಿಂದ ಉಡುಪಿ ಕಡೆಗೆ ರಾ-ಹೆ 66 ರಲ್ಲಿ ಹೋಗುತ್ತಾ. ಮದ್ಯಾಹ್ನ ಸಮಯ 3-15 ಗಂಟೆಗೆ ಪಣಂಬೂರು ಸರ್ಕಲ್ ನಿಂದ ಸ್ವಲ್ಪ ಮುಂದಕ್ಕೆ ತಲುಪ್ಪುತಿದಂತೆ ರಸ್ತೆಯಲ್ಲಿ ಬೀದಿ ನಾಯಿ ಒಂದು ಅಡ್ಡ ಬಂದ ಕಾರಣ ಪಿರ್ಯಾದಿದಾರರು ಒಮ್ಮೇಲೆ ಕಾರಿಗೆ ಬ್ರೇಕ್ ಹಾಕಿದ ಪರಿಣಾಮ ಪಿರ್ಯಾದಿದಾರರ ಕಾರಿನ ಹಿಂದೆ ಅಂದರೆ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಕೆ, 19 .ಬಿ 8824 ನಂಬ್ರ ಮೋಟಾರು ಸೈಕಲನ್ನು ಅದರ ಸವಾರ ದೇವದಾಸ ರವರು ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿನ ಹಿಂಬದಿಗೆ ಬಲವಾಗಿ ಡಿಕ್ಕಿ ಪಡಿಸಿರುತ್ತಾನೆ. ಪರಿಣಾಮ ಮೋಟಾರು ಸೈಕಲ್ ಸವಾರ ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದಿರುತ್ತಾರೆ.  ಅಪಘಾತದಿಂದ ಪಿರ್ಯಾದಿದಾರರ ಕಾರಿನ ಹಿಂಬದಿ ಹಾಗೂ ಮೋಟಾರು ಸೈಕಲ್ ಜಖಂಗೊಂಡಿದ್ದು  ಹಾಗೂ ಮೋಟಾರು ಸೈಕಲ್ ಸವಾರ ದೇವದಾಸ ರವರ  ಮುಖಕ್ಕೆ ರಕ್ತಗಾಯ ಉಂಟಾಗಿರುತ್ತದೆ. ಗಾಯಾಳುವನ್ನು ಪಿರ್ಯಾದಿದಾರ ಪತ್ನಿ  ಚಿಕಿತ್ಸೆಯ ಬಗ್ಗೆ  .ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ.

 

6.ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಬಬ್ಲು ರವರು ಸುಮಾರು 1 ವರ್ಷದಿಂದ ಮಂಗಳೂರಿನ ರೂಹಾ ಕನ್ಟ್ರಕ್ಷನ್ ನಲ್ಲಿ ಮೂಡಬಿದ್ರೆಯ ಮಂಗಳೂರು ತಾಲೂಕು ಬಡಗಮಿಜಾರು ಗ್ರಾಮದ ಮೈಟ್ ಕಾಲೇಜಿನ ಕ್ಯಾಂಪಸ್ ಒಳಗಡೆ ನಿರ್ಮಾಣ ಹಂತದ ಕಟ್ಟಡದಲ್ಲಿ ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದು, ಪಿರ್ಯಾದಿದಾರರ ತಂದೆ ಜಿಬಿನ್ ಬರ್ಮಾನ್ (50) ಎಂಬವರು ಜೊತೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದು, ದಿನಾಂಕ 31-05-14 ರಂದು ಪಿರ್ಯಾದಿದಾರರು 3 ನೇ ಮಹಡಿಯಲ್ಲಿ ಕೆಲಸ ಕೆಲಸ ಮಾಡುತ್ತಿದ್ದ ಸಮಯ ಜಿಬಿನ್ ಬರ್ಮಾನ್ ರವರು 1 ನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದು, ಪಿರ್ಯಾದಿದಾರರು ನೋಡುತ್ತಿದ್ದಂತೆ ಸುಮಾರು 11.30 ಗಂಟೆ ವೇಳೆಗೆ ಜಿಬಿನ್ ಬರ್ಮಾನ್ ರವರು ಸೆಂಟ್ರಿಂಗ್ ಗೆ ಮರದ ಗುಜ್ಜಿಯನ್ನು ಕೊಡುವ ಸಮಯ ಕಾಲು ಜಾರಿ ಒಂದನೇ ಮಹಡಿಯಿಂದ ಕೆಳಗೆ ಕಲ್ಲಿನ ಮೇಲೆ ಬಿದ್ದು, ಎಡಕೆನ್ನೆಗೆ ಗಂಭೀರ ಗಾಯವಾಗಿ ರಕ್ತ ಬರುತ್ತಿದ್ದವರನ್ನು ಚಿಕಿತ್ಸೆಯ ಬಗ್ಗೆ ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ತಿಳಿಸಿದ್ದು, ಕೆಲಸಗಾರರಿಗೆ ಭದ್ರತೆಯ ಬಗ್ಗೆ ಯಾವುದೇ ವ್ಯವಸ್ಥೆಯನ್ನು ಮಾಡದೇ ಇದ್ದುದರಿಂದ 1 ನೇ ಮಹಡಿಯಿಂದ ಬಿದ್ದು ಮೃತ ಪಟ್ಟಿದ್ದು,  ಸೈಟ್ ಇನ್ಚಾರ್ಜ್ ಇಸ್ಮಾಯಿಲ್ ಮತ್ತು ದೀಪಕ್ ರಾಯ್ ರವರ  ನಿರ್ಲಕ್ಷತನವೇ ತಕ್ಷೀರಿಗೆ ಕಾರಣವಾಗಿದೆ.

 

7.ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19-05-14 ರಂದು 10.00 ಗಂಟೆಯಿಂದ 17.30 ಗಂಟೆಯ ಮಧ್ಯಾವದಿಯಲ್ಲಿ ಪ್ರಾಂತ್ಯ ಗ್ರಾಮದ ವಿವೇಕಾನಂದ ನಗರ, ದಿಶಾವಿಲ್ಲಾ ಎಂಬಲ್ಲಿ  ಪಿರ್ಯಾದಿದಾರರಾದ ಶ್ರೀಮತಿ ಶರ್ಮಿಳಾ ನಝರತ್ ರವರು ಬಂಟ್ವಾಳದ ಅಲ್ಲಿಪಾದೆ ಎಂಬಲ್ಲಿಗೆ ಮದುವೆಗೆ ಹೋಗಿದ್ದ ಸಮಯ ಯಾರೋ ಕಳ್ಳರು ಪಿರ್ಯಾದಿದಾರರ ಮನೆಯ ಹಿಂದಿನ ಬಾಗಿಲನ್ನು ಬಲಾತ್ಕಾರದಿಂದ ತೆಗೆದು ಒಳ ನುಗ್ಗಿ ಕಪಾಟಿನಲ್ಲಿದ್ದ 1. ಚಿನ್ನದ ಕರಿಮಣಿ ಸರ, 2. ಎರಡು ಕಿವಿಯ ರಿಂಗ್, 3. ಬ್ರಾಸ್ಲೈಟ್, 4. ಉಂಗುರ, 5. ನೋಕಿಯಾ ಮೊಬೈಲ್ ಗಳನ್ನು ಕಳತನ ಮಾಡಿಕೊಂಡು ಹೋಗಿದ್ದು,  ಕಳವಾದ ಸ್ವತ್ತಿನ ಅಂದಾಜು ಮೌಲ್ಯ 24,000/- ರೂ.  ಆಗಬಹುದು.

 

8.ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 30-05-14 ರಂದು ಪಿರ್ಯಾದಿದಾರರಾದ ಶ್ರೀ ಸಿದ್ದಿಕ್ ರವರು ಹಾಲು ತರಲೆಂದು ತನ್ನ ಮನೆಯಿಂದ ಚೊಕ್ಕಬೆಟ್ಟುವಿಗೆ ಹೋಗಿ ಹಾಲಿನೊಂದಿಗೆ ವಾಪಾಸು ಬರುತ್ತಿರುವಾಗ ರಾತ್ರಿ 9-00 ಗಂಟೆ ಸಮಯಕ್ಕೆ ಸಲಾಫಿ ಮಸೀದಿ ಹಿಂಬದಿ ರಸ್ತೆಗೆ ತಲುಪಿದಾಗ ಎದುರಿನಿಂದ ಒಂದು ಕ್ವಾಲಿಸ್ ವಾಹನವನ್ನು ಅಬ್ದುಲ್ ಬಶೀರ್ ರವರು ಚಲಾಯಿಸಿಕೊಂಡು ಬಂದು ಏಕಾಏಕಿ ಬ್ರೇಕ್ ಹಾಕಿ ನಿಲ್ಲಿಸಿದ್ದು ಪಿರ್ಯಾದಿದಾರರನ್ನು ಬದಿಯಲ್ಲಿ ಹೋಗುವಂತೆ ಹೇಳಿದಾಗ ಅವರಿಬ್ಬರ ನಡುವೆ ಮಾತಿಗೆ ಮಾತು ಬೆಳೆದು ಬೈದಾಡಿದ್ದು ನಂತರ ಆರೋಪಿ ಅಬ್ದುಲ್ ಬಶೀರ್ ರವರು ಪಿರ್ಯಾದಿದಾರರನ್ನು ತಡೆದು ಕೈಯಿಂದ ಅವರ ಮುಖಕ್ಕೆ ಹೊಡೆದಿದ್ದು ಸಮಯ ಮಹಮ್ಮದ್ ಶರೀಪ್ ಮತ್ತು ಮಹಮ್ಮದ್ ಆಶಿಕ್ ರವರು ಸದ್ರಿ ಸ್ಥಳಕ್ಕೆ ಬಂದು ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಕೆನ್ನೆಗೆ ಮತ್ತು ಮುಖಕ್ಕೆ ಹೊಡೆದುದರ ಪರಿಣಾಮ ಪಿರ್ಯಾದಿದಾರರ ಬಾಯಿಯಲ್ಲಿ ಮತ್ತು ಮೂಗಿನಲ್ಲಿ ರಕ್ತ ಬಂದಿದ್ದು ಹಾಗೂ ಹಲ್ಲಿನ ದವಡೆಗೆ ಜಖಂ ಆಗಿರುವುದಾಗಿದೆ.

 

9.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 29.05.2014 ರಂದು ಪಿರ್ಯಾಧಿದಾರರಾದ ಶ್ರೀ ಸದಾಶಿವ ಪೂಜಾರಿ ರವರ ಮಗ ಶಿಶಿರ್‌‌ ಕುಮಾರ್‌‌ ಎಂಬವನು ಅವನ ಸ್ನೇಹಿತ ಪುನೀತ್‌‌ ಎಂಬವನನ್ನು ಬೈಕ್‌‌ ನಂಬ್ರ  KA-51-L-3006 ನೇಯದರಲ್ಲಿ ಹಿಂಬದಿ ಸವಾರನನ್ನಾಗಿ ಕುಳ್ಳಿರಿಸಿಕೊಂಡು ರಾಹೆ 73 ರಲ್ಲಿ ಅಡ್ಯಾರ್‌‌ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಾ ರಾತ್ರಿ ಸುಮಾರು 10.45 ಗಂಟೆ ವೇಳೆಗೆ ಪಡೀಲ್‌‌ ಕಣ್ಣೂರಿನ ಅಶೋಕ್‌‌ ಲೈಲ್ಯಾಂಡ್‌‌ ಶೋರೂಮಿನ ಸಮೀಪ ತಲುಪಿದಾಗ ಮಂಗಳೂರು ಕಡೆಯಿಂದ ಲಾರಿ ನಂಬ್ರ ಕೆಎ-13--3268 ನೇಯದನ್ನು  ಅದರ ಚಾಲಕ M.H ರಘು ಎಂಬವನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಿರ್ಲಕ್ಷ್ಯತನದಿಂದ ಅಶೋಕ್‌‌ ಲೇಲ್ಯಾಂಡ್‌‌ ಕಡೆಗೆ ಸದ್ರಿ ಲಾರಿಯನ್ನು  ತಿರುಗಿಸಿದ್ದರಿಂದ  ಸದ್ರಿ ಲಾರಿ ಶಿಶಿರ್ಚಲಾಯಿಸುತ್ತಿದ್ದ  ಕೆಎ51ಎಲ್‌‌3006 ನೇ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌‌ ಸವಾರ ಶಿಶಿರ್‌‌ ಮತ್ತು ಹಿಂಬದಿ ಸವಾರ ಪುನೀತ್‌‌ ರಸ್ತೆಗೆ ಎಸೆಯಲ್ಪಟ್ಟು ಶಿಶೀರ್ಗೆ ತಲೆಗೆ, ಮುಖಕ್ಕೆ, ಗಂಭೀರ ಗಾಯವಾಗಿದ್ದು ಪುನೀತ್ಗೆ ಕೈಕಾಲುಗಳಿಗೆ ರಕ್ತಗಾಯವಾಗಿ ಚಿಕಿತ್ಸೆ ಬಗ್ಗೆ ಫಾ|| ಮುಲ್ಲರ್ಸ್ಆಸ್ಪತ್ರೆಗೆ ದಾಖಲುಗೊಂಡಿದ್ದು ನಂತ್ರ ಶಿಶಿರ್ನನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ AJ ಆಸ್ಪತ್ರೆಗೆ ದಾಖಲಿಸಲಾಗಿದೆ.

No comments:

Post a Comment