Monday, June 2, 2014

Daily Crime Reports 02-06-2014

ದೈನಂದಿನ ಅಪರಾದ ವರದಿ.

ದಿನಾಂಕ 02.06.201407:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

1

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

2

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 31-05-2014 ರಂದು ಸಂಜೆ ಸುಮಾರು 15-45 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ವಿನಯ ಕುಮಾರ್ ರವರ ಮಾವ ದೊಡ್ಡಣ್ಣ ಶೆಟ್ಟಿ ರವರು ಮಂಗಳೂರು ತಾಲೂಕು ಬಪ್ಪನಾಡು ಗ್ರಾಮದ ಮುಲ್ಕಿ ಬಸ್ ನಿಲ್ದಾಣದ ಬಳಿ ಅಯ್ಯಂಗಾರ್ ಬೇಕರಿಯ ಎದುರುಗಡೆ ರಾಹೆ-66 ರಸ್ತೆ ಬದಿಯಲ್ಲಿ ರಸ್ತೆ ದಾಟುವ ಸಲುವಾಗಿ ನಿಂತುಕೊಂಡಿರುವಾಗ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಕೆಎ-19-ಇಜಿ-3213ನೇ ನಂಬ್ರದ ದ್ವಿಚಕ್ರ ವಾಹನವನ್ನು ಅದರ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದೊಡ್ಡಣ್ಣ ಶೆಟ್ಟಿ ರವರಿಗೆ ಡಿಕ್ಕಿಯಾದ ಪರಿಣಾಮ ದೊಡ್ಡಣ್ಣ ಶೆಟ್ಟಿರವರು ರಸ್ತೆ ಬಿದ್ದು ಮುಖಕ್ಕೆ, ಬಾಯಿಗೆ ರಕ್ತಗಾಯವಾಗಿದ್ದು, ಚಿಕಿತ್ಸೆ ಬಗ್ಗೆ ಮಂಗಳೂರು .ಜೆ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

 

2.ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಸಂತೋಷ್ ರವರು ಹೋಟೆಲ್ ನಲ್ಲಿ ಸ್ವಚ್ಚತಾ ಕೆಲಸ ಮಾಡುತ್ತಿದ್ದು ದಿನಾಂಕ 01-06-2014 ರಂದು ಸಮಯ ಸುಮಾರು 12.30 ಗಂಟೆಗೆ, ಸ್ವಾಗತ್ ಹೋಟೆಲ್ 4 ಜನ ವೈಟರ್ ಗಳು ಗಣೇಶ್ ಹೋಟೆಲ್ ಒಳಗಡೆ ಅಕ್ರಮ ಪ್ರವೇಶ ಮಾಡಿ ಅವರುಗಳ ಪೈಕಿ ಒರ್ವ ಪಿರ್ಯಾದಿದಾರರನ್ನ ನೋಡಿ ಉದ್ದೇಶಿಸಿ ತುಳು ಭಾಷೆಯಲ್ಲಿ "ಉಂಬೆನೆ ಹೋಟೆಲಗ್ ಬತ್ತದ್ ಚಪಾತಿ ದಕ್ಕ್ ದ್ ಪೋಯಿನಾಯೆ" (ಈತನೆ ಹೋಟೆಲ್ ಬಂದು ಚಪಾತಿಯನ್ನು ಬಿಸಾಡಿ ಹೋದವ) ಎಂದು ಹೇಳಿದಾಗ ಉಳಿದವರ ಪೈಕಿ ಒರ್ವನು ಅವಾಚ್ಯ ಶಬ್ದಗಳಿಂದ ತುಳು ಬಾಷೆಯಲ್ಲಿ "ಚಪಾತಿನ ಮುಸುಂಡುಗು ದಕ್ಕ್ ಬರ್ಪನಾ" (ಚಪಾತಿಯನ್ನು ಮುಖಕ್ಕೆ ಬಿಸಾಡಿ ಬರುತ್ತಿಯಾ) ಎಂದು ಹೇಳಿ ಅವರುಗಳೆಲ್ಲರು ಪಿರ್ಯಾದಿದಾರರಿಗೆ ಕೈಯಿಂದ ಹೊಡೆದು ನೆಲಕ್ಕೆ ದೂಡಿ ಹಾಕಿ ಕಾಲುಗಳಿಂದ ಯದ್ವಾ ತದ್ವಾ ತುಳಿದರು ಅವರ ಪೈಕಿ ಒರ್ವನು ಕೈಯಲ್ಲಿದ್ದ ಕಲ್ಲಿನಿಂದ ತಲೆಯ ಹಿಂಬಾಗಕ್ಕೆ ಗುದ್ದಿದಾಗ ಬೋಬ್ಬೆ ಹಾಕಿದಾಗ ಹೋಟೆಲ್ ನಲ್ಲಿದ್ದ ವಿಶ್ವನಾಥ ರವರು ಹತ್ತಿರಕ್ಕೆ ಬರುತ್ತಿದ್ದಂತೆ ಅವರುಗಳ ಪೈಕಿ ಒರ್ವ "ನನ್ ದುಂಬುಗು ಎಂಕ್ಲೆನ್ ಹೋಟೆಲ್ ಗೆ ಕಾರ್ ದೀಯಾಂಡಾ ನಿನನ್ ಕೆರೆಂದ ಬುಡಾಯೆ''(ಇನ್ನು ಮುಂದಕ್ಕೆ ನಮ್ಮ ಹೋಟೆಲ್ ಗೆ ಕಾಲು ಇಟ್ಟರೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ) ಎಂದು ಬೇದರಿಕೆ ಒಡ್ಡಿ ಹೋಗಿರುತ್ತಾರೆ ಹಲ್ಲೆ ಮಾಡಿದ್ದರಿಂದ ಮೈ ಕೈಗೆ ನೋವು ಆಗಿರುವುದಲ್ಲದೆ, ತುಟಿಯಲ್ಲಿ ರಕ್ತ ಗಾಯ ಹಾಗೂ ತಲೆಯ ಹಿಂಬಾಗ ರಕ್ತ ಗಾಯವಾಗಿದ್ದು ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಿದ್ದು ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿಕೊಂಡಿರುವುದಾಗಿ ಹಾಗೂ ಕೃತ್ಯಕ್ಕೆ ಸ್ವಾಗತ್ ಹೋಟೆಲ್ ನವರು ಪರೋಟಾ ನೀಡುವ ಬದಲು ಚಪಾತಿ ನೀಡಿದ್ದು ಅದನ್ನು ವಾಪಾಸು ಮಾಡಿದ  ದ್ವೇಷದಿಂದ ಕೃತ್ಯವನ್ನು ಆರೋಪಿಗಳು ಎಸಗಿರುವುದಾಗಿದೆ.

 

3.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 29.05.2014 ರಿಂದ 31.05.2014 ಬೆಳಿಗ್ಗೆ ಸುಮಾರು 07.30 ಗಂಟೆಯ ಮಧ್ಯಾವಧಿಯಲ್ಲಿ ಪಿರ್ಯಾದಿದಾರರಾದ ಶ್ರೀ.ಸುರೇಶ್‌‌ ಎಂ.ಎಸ್‌‌ ರವರ ಬಾಬ್ತು ಮಂಗಳೂರು ನಗರದ ಪಂಪ್ವೆಲ್‌‌ ನಿರ್ಮಲಾ ಟವರ್ಸ್ ಪ್ರಥಮ ಮಹಡಿಯಲ್ಲಿರುವ ಸರ್ವಜ್ಞ ..ಎಸ್‌‌ ಅಕಾಡೆಮಿ ಎಂಬ ಸಂಸ್ಥೆಯ ಬಾಗಿಲಿಗೆ ಅಳವಡಿಸಿದ ಬೀಗ ಹಾಗೂ ಕೊಂಡಿಯನ್ನು ಯಾರೋ ಕಳ್ಳರು ಯಾವುದೋ ಬಲವಾದ ಆಯುಧವನ್ನು ಉಪಯೋಗಿಸಿ ಮೀಟಿ ಬೀಗ ಮುರಿದು ಒಳ ಪ್ರವೇಶಿಸಿ ಸಂಸ್ಥೆಯ ಒಳಗೆ ಇಟ್ಟಿದ್ದ ಸುಮಾರು 20,000/- ರೂಪಾಯಿ ಬೆಲೆ ಬಾಳುವ ಸೋನಿ ಕಂಪೆನಿಯ ಲ್ಯಾಟ್‌‌ಟಾಪ್‌‌ ನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.

 

4.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಸುಧಾಕರ ರವರು ತನ್ನ ಬಾಬ್ತು  ಕೆ, 03- ಇಎಸ್‌- 9872 ನೇ  ಮೋಟಾರು  ಸೈಕಲ್ನಲ್ಲಿ  ದಿನಾಂಕ  01.06.2014  ರಂದು ಬೆಳಿಗ್ಗೆ 10:00 ಗಂಟೆ ಸುಮಾರಿಗೆ  ವಾಮಂಜೂರು ಕಡೆಯಿಂದ   ಪಚ್ಚನಾಡಿ  ಗ್ರಾಮದ ಡಂಪಿಂಗ್‌‌ ಯಾರ್ಡ್  ಬಳಿ  ಇರುವ  ಕೊರಗಜ್ಜನ  ಕಾಣಿಕೆ ಡಬ್ಬಿಯ  ಹತ್ತಿರ ತಲುಪುತ್ತಿದ್ದಂತೆ  ಪಿರ್ಯಾದಿದಾರರ  ಮುಂದಿನಿಂದ ಹೋಗುತ್ತಿದ್ದ ಕೆ. 20 ಎಂಬಿ  4444 ನೇ  ಜೀಪನ್ನು  ಅದರ  ಚಾಲಕ ಒಮ್ಮೆಲೆ ಬ್ರೇಕ್ಹಾಕಿ  ಹಿಂದಕ್ಕೆ ಚಲಾಯಿಸಿದ ಪರಿಣಾಮ ಪಿರ್ಯಾದಿದಾರರು  ಚಲಾಯಿಸುತ್ತಿದ್ದ ಕೆ.   03-ಇಎಸ್‌-9872 ಗೆ  ಡಿಕ್ಕಿ  ಹೊಡೆದು  ಪಿರ್ಯಾದಿದಾರರು  ರಸ್ತೆಗೆ ಬಿದ್ದು ಎಡ ಕೈ,  ಎಡ ಭುಜಕ್ಕೆ ಮೂಳೆ ಮುರಿತದ, ಹಣೆಗೆ ರಕ್ತ  ಗಾಯ ಮತ್ತು  ಕಾಲುಗಳಿಗೆ ಮೂಳೆ ಮುರಿತದ ಗಾಯವಾಗಿದ್ದು  ಸದ್ರಿಯವರನ್ನು  ನಗರದ ಸಿಟಿ  ಆಸ್ಪತ್ರೆಗೆ  ಒಳರೋಗಿಯಾಗಿ ದಾಖಲಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

No comments:

Post a Comment