Saturday, June 21, 2014

Daily Crime Reports 21-06-2014

ದೈನಂದಿನ ಅಪರಾದ ವರದಿ.

ದಿನಾಂಕ 21.06.201408:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

2

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

3

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನಾಂಕ 20-06-2014 ರಂದು ಬೆಳಿಗ್ಗೆ ಪಿರ್ಯಾದಿದಾರರಾದ ಶ್ರೀ ರಿಚರ್ಡ್ ಜಿ. ಅರನ್ಹಾ ರವರ ಅಣ್ಣ ರೋಬರ್ಟ್ ಅರಾಹ್ನ ಎಂಬವರು ಅವರ ಬಾಬ್ತು ದ್ವಿಚಕ್ರ ವಾಹನ ನಂಬ್ರ ಕೆ..19.ಎಸ್.4040  ನೇದರಲ್ಲಿ ಕಾರ್ನಾಡು ಕಡೆಗೆ ಹೋಗಿ ನಂತರ ಮರಳಿ ಮನೆಗೆಕಡೆಗೆ ರಾ.ಹೆ 66 ರಲ್ಲಿ ಹೋಗುತ್ತಿರುವಾಗ್ಗೆ ಬೆಳಿಗ್ಗೆ ಸುಮಾರು 10-00 ಗಂಟೆ ಸಮಯಕ್ಕೆ ಕಾರ್ನಾಡು ಬೈಪಾಸ್ ಎಂಬಲ್ಲಿ ಹಿಂದಿನಿಂದ ಕೆ. 19.ಎಂ. 2118 ನೇ ಮಾರುತಿ ಓಮ್ನಿ ಕಾರು ಚಾಲಕನು ಸದ್ರಿ ಹೆದ್ದಾರಿಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಅಣ್ಣ ರೋಬರ್ಟ್ ಅರಾಹ್ನ ರವರು ಚಾಲಾಯಿಸಿಕೊಂಡು ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಮಾಡಿ ವಾಹನವನ್ನು ನಿಲ್ಲಿಸದೇ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸದೇ ಪರಾರಿಯಾಗಿದ್ದು ಡಿಕ್ಕಿ ಮಾಡಿದ  ಪರಿಣಾಮ ರೋಬರ್ಟ್ ಅರಾಹ್ನ ಎಂಬವರಿಗೆ ಎದೆ ಹಾಗೂ ತಲೆಗೆ ತೀರ್ವ ತರಹದ  ರಕ್ತ ಗಾಯವಾಗಿ ಚಿಕಿತ್ಸೆ ಬಗ್ಗೆ ಶ್ರೀನಿವಾಸ ಆಸ್ಪತ್ರೆಗೆ ದಾಖಲು ಮಾಡಿದ್ದು ಅಲ್ಲಿ ಚಿಕಿತ್ಸೆಯಲ್ಲಿರುತ್ತಾ ಚಿಕಿತ್ಸೆ ಫಲ ಕಾರಿಯಾಗದೇ ದಿನಾಂಕ 20-06-2014 ರಂದು ಬೆಳಿಗ್ಗೆ 10-55 ಗಂಟೆಗೆ ಮೃತ ಪಟ್ಟಿರುವುದಾಗಿದೆ.

 

2.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನಾಂಕ: 19-06-2014 ರಂದು  ರಾತ್ರಿ ಪಿರ್ಯಾದಿದಾರರಾದ ಶ್ರೀ ಕೆ. ಶ್ರೀನಿವಾಸನ್ ರವರು  ತನ್ನ ಬಾಬ್ತು ಮೋಟಾರು ಸೈಕಲ್ನಂಬ್ರ .ಪಿ-36-ಎನ್‌-1258 ನೇದರಲ್ಲಿ ಅವರ ತಂಗಿಯನ್ನು ಕುಳ್ಳಿರಿಸಿಕೊಂಡು ಮಂಗಳೂರು ನಗರದ ಸೆಂಟ್ರಲ್ ರೈಲ್ವೇ ಸ್ಟೇಷನ್ಗೆ ಕರೆದುಕೊಂಡು ಹೋಗಿ ಬಿಟ್ಟು, ವಾಪಾಸು ಅಲ್ಲಿಂದ  ತನ್ನ ಮನೆಯಾದ ಸುರತ್ಕಲ್ಹೋಗುವರೇ ಹಂಪನ್ಕಟ್ಟೆಯಿಂದ ಕೆ.ಎಸ್‌.ಆರ್ರಸ್ತೆಯಲ್ಲಿ ಹೋಗುತ್ತಾ ಸಮಯ ರಾತ್ರಿ 10:15 ಗಂಟೆಗೆ ಸಿಟಿಸೆಂಟರ್ಎದುರು ರಸ್ತೆ ತಲುಪಿದಾಗ, ಕಾರು ನಂಬ್ರ ಕೆ.-05-ಎಂ.-5977 ನೇದನ್ನು ಅದರ ಚಾಲಕನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರು ಸೈಕಲ್ಗೆ ಹಿಂದಿನಿಂದ ಡಿಕ್ಕಿಹೊಡೆದಿದ್ದು, ಪರಿಣಾಮ ಪಿರ್ಯಾಧಿದಾರರು ಬೈಕ್ಸಮೇತ ರಸ್ತೆಗೆ ಬಿದ್ದು ಎರಡೂ ಕೈಗಳಿಗೆ ಮೂಳೆ ಮುರಿತದ ಗಾಯ ಹಾಗೂ ಸೊಂಟಕ್ಕೆ ಗುದ್ದಿದ ನಮೂನೆಯ ಗಾಯವಾದ್ದವರನ್ನು ಚಿಕಿತ್ಸೆಯ ಬಗ್ಗೆ  ಜ್ಯೋತಿ ಕೆ.ಎಂ.ಸಿ ಆಸ್ಪತ್ರೆಗೆ  ಕೊಂಡೊಯ್ದು ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಅಲ್ಲಿಂದ ಅತ್ತಾವರ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.

 

3.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19-06-2014 ರಂದು ಫಿರ್ಯಾದಿದಾರರಾದ ಶ್ರೀ ಮಹೇಶ್ ಕುಮಾರ್ ರವರು ಕೊಂಚಾಡಿಯಲ್ಲಿರುವ ತನ್ನ ಅಂಗಡಿಯನ್ನು ಬಂದ್ ಮಾಡಿ ತನ್ನ ಮೋಟಾರು ಸೈಕಲ್ ನಲ್ಲಿ ಹೋಗುತ್ತಾ ರಾತ್ರಿ ಸುಮಾರು 10-30 ಗಂಟೆಗೆ ಅಂಗಡಿಯ ಸ್ವಲ್ಪ ಮುಂದೆ ತಲುಪಿದಾಗ ಆರೋಪಿ ಲೋಹಿತ್ ಎಂಬಾತನು ಮೋಟಾರು ಸೈಕಲ್ ನಲ್ಲಿ ಬಂದು ಫಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಫಿರ್ಯಾದಿದಾರರನ್ನು ದೂಡಿ `ನೀನು ಭಾರೀ ಪೊಲೀಸ್ ಕಂಪ್ಲೈಂಟ್ ಕೊಡುತ್ತೀಯಾ?, ಕೊಟ್ಟರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ' ಎಂದು ಜೀವಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈಯಿಂದ ಫಿರ್ಯಾದಿದಾರರ ಕೈಗೆ ಹೊಡೆದು, ಫಿರ್ಯಾದಿದಾರರ ಮೋಟಾರು ಸೈಕಲ್ ನ್ನು ಜಖಂಗೊಳಿಸಿರುತ್ತಾನೆ.

 

4.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನಾಂಕ 19-06-2014 ರಂದು ಪಿರ್ಯಾದಿದಾರರಾದ ಶ್ರೀ ಸಿಬಿನ್ ಸಿ. ಜೋಸೇಫ್ ರವರ ಸ್ನೇಹಿತ ಆರೋಪಿ ಲಿತಿನ್ ಎಂಬವರು ಪಿರ್ಯಾದಿದಾರರಿಗೆ ಪೋನ್ ಕರೆ ಮಾಡಿ, ಕೆಲಸದ ವಿಚಾರದಲ್ಲಿ ಮಾತನಾಡಲು ಇದೆ ಎಂದು ಹೇಳಿ ಪಿರ್ಯಾದಿದಾರರು ವಾಸ್ತವ್ಯ ಇರುವ ಉಜ್ಜೋಡಿಯ ಮಹಾಕಾಳಿ ದೇವಸ್ಥಾನದ ಹತ್ತಿರ ಇರುವ ಕಮಲ ನಿವಾಸ ಎಂಬ ಮನೆಗೆ  ರಾತ್ರಿ 10-30 ಗಂಟೆಗೆ ಆರೋಪಿ ಜಿತಿನ್ ಎಂಬವರ ಜೊತೆಯಲ್ಲಿ ಬಂದು, ಪಿರ್ಯಾದಿದಾರರಲ್ಲಿ ಕೆಲಸದ ವಿಚಾರ ಮಾತನಾಡಿ ಬಳಿಕ ಒಮ್ಮೆಲೇ ಸಿಟ್ಟಿಗೆದ್ದು, ತಾನು ಕಾಲೇಜಿಗೆ ಹೋಗುವ ಸಮಯ, ನೀನು ಸೀನಿಯರ್ ಆಗಿದ್ದು, ತುಂಬಾ ತೊಂದರೆ ಕೊಟ್ಟಿದ್ದೀ ಎಂದು ಅವಾಚ್ಯ ಶಬ್ದಗಳಿಂದ ಬೈದು, ಪಿರ್ಯಾದಿದಾರರಿಗೆ ಆರೋಪಿತರುಗಳಿಬ್ಬರು ಕೈಗಳಿಂದ ಹಲ್ಲೆ ನಡೆಸಿರುವುದಲ್ಲದೇ, ರೂಮಿನಲ್ಲಿದ್ದ ಪೈಬರ್ ಚೇಯರ್ ಗಳನ್ನು, ಮೆಟಲ್ ಕಾಟ್, ಮರದ ಬೆಂಚ್ ನ್ನು ಗುದ್ದಿ ಪುಡಿ ಮಾಡಿರುತ್ತಾರೆ. ಇದನ್ನು ಪ್ರಶ್ನಿಸಿದ ಪಿರ್ಯಾದಿದಾರರನ್ನು, ಆರೋಪಿತರಗಳು ಬೆನ್ನಟ್ಟಿ ಕೊಂಡು ಹೋಗಿ, ಮನೆಯ ಅಂಗಳದಲ್ಲಿ ಅಕ್ರಮವಾಗಿ ತಡೆದು ನಿಲ್ಲಿಸಿ, ಕಂಪೌಂಡ್ ಗೋಡೆಗೆ ಒತ್ತಿ ಹಿಡಿದು, ಆರೋಪಿ ಜಿತಿನ್ ಕೈಯಿಂದ ಹಾಗೂ ಆರೋಪಿ ಲಿತಿನ್ ಇಟ್ಟಿಗೆಯ ತುಂಡಿನಿಂದ ಕೈಗಳಿಗೆ ಹಾಗೂ ಕಾಲುಗಳಿಗೆ ಹೊಡೆದಿರುವುದಲ್ಲದೇ, ಗಲಾಟೆ ಬಿಡಿಸಲು ಬಂದ ಅಖಿಲ್ ಹಾಗೂ ಮೆಹಮೂದ್ ರವರಿಗೆ ಆರೋಪಿತರುಗಳಿಬ್ಬರು ಕೈಗಳಿಂದ ಹೊಡೆದು ಬೀಳಿಸಿ, ಕಾಲುಗಳಿಂದ ತುಳಿದಿರುತ್ತಾರೆ.

 

5.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ :  ಫಿರ್ಯಾದುದಾರರಾದ ಶ್ರೀ ನಾಗೇಶ್ ಶೇಟ್ ರವರು ಮಂಗಳೂರಿನ ಮಣ್ಣಗುಡ್ಡೆ ನಿವಾಸಿಯಾಗಿದ್ದು, ತೊಕ್ಕೋಟು ಸಹರಾ ಆಸ್ಪತ್ರೆ ಬಳಿ ಇರುವ ಸ್ಟೇಟ್ಬ್ಯಾಂಕ್ಮೈಸೂರು ಇಲ್ಲಿ ಮ್ಯಾನೆಜರ್ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು ದಿನಾಲು ಅವರು ಮನೆಗೆ ಹೋಗಿ ಬರುವುದಾಗಿದೆ. ಅದರಂತೆ ಫಿರ್ಯಾದುದಾರರು ದಿನಾಂಕ 18-06-20104 ರಂದು ಸದ್ರಿ ಬ್ಯಾಂಕ್‌‌ನಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುವರೇ ಮಂಗಳೂರು ತಾಲೂಕು ಸಹರಾ ಆಸ್ಪತ್ರೆಯ ರಾಷ್ತ್ರೀಯ ಹೆದ್ದಾರಿ ರಸ್ತೆ ಬದಿಯಲ್ಲಿ ತೊಕ್ಕೋಟು ಬಸ್ನಿಲ್ದಾಣದ ಕಢೆಗೆ ಹೋಗುತ್ತಿರುವಾಗ್ಗೆ ಅದೇ ರಸ್ತೆಯಲ್ಲಿ ಮಂಗಳೂರು ಕಡೆಯಿಂದ ತೊಕ್ಕೋಟು ಕಡೆಗೆ ಮೋಟಾರ್ಸೈಕಲ್ಸವಾರನೊಬ್ಬ ತನ್ನ ಬೈಕನ್ನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರಿಗೆ ಡಿಕ್ಕಿ ಹೊಡೆದಿರುತ್ತಾರೆ. ಪರಿಣಾಮ ಫಿರ್ಯಾದಿದಾರರ ತಲೆಗೆ ರಕ್ತ ಬರುವ ಹಾಗೂ ಗುದ್ದಿದ ನೋವು ಉಂಟಾಗಿರುತ್ತದೆ. ಅಲ್ಲದೆ ಬಲಕಿವಿಗೆ ರಕ್ತಬರುವ ಗಾಯವಾಗಿರುತ್ತದೆ. ಸದ್ರಿ ಮೋಟಾರ್ಸೈಕಲ್‌‌ನಲ್ಲಿ ಸವಾರನಲ್ಲದೆ ಸಹಸವಾರನೂ ಕೂಡ ಇದ್ದು ಡಿಕ್ಕಿ ಹೊಡೆದ ಮೋಟಾರ್‌‌ ಸೈಕಲ್‌‌ ನಂಬ್ರ ಕೆಎ 19 ಇಇ 2007 ನೇ ಆಗಿರುತ್ತದೆ. ಘಟನೆಯು ದಿನಾಂಕ 18-06-2014 ರಂದು ರಾತ್ರಿ 8-20 ಗಂಟೆ ಸಮಯಕ್ಕೆ ತೊಕ್ಕೋಟು ಸಹರಾ ಆಸ್ಪತ್ರೆ ರಾಷ್ತ್ರೀಯ ಹೆದ್ದಾರಿ ಬಳಿ ಆಗಿರುತ್ತದೆ.

No comments:

Post a Comment