ದೈನಂದಿನ ಅಪರಾದ ವರದಿ.
ದಿನಾಂಕ 10.06.2014 ರ 07:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 1 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 1 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 3 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 2 |
1.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 04/06/2014 ರಂದು ಸಂಜೆ ವೇಳೆಯಲ್ಲಿ ಪಿರ್ಯಾಧಿದಾರರಾದ ಶ್ರೀ ಕೆ.ಕೆ. ಗಟ್ಟಿ ರವರ ಬಾಬ್ತು ಸೆಕ್ಯುರಿಟಿ ಸಿಬ್ಬಂದಿಗಳು ವಾಸ್ಯವ್ಯವಿರುವ ಬಾಡಿಗೆ ಮನೆಯ ಸಿಕ್ವೇರಾ ಕಂಪೌಂಡ ಎಂಬಲ್ಲಿಯ ಬಾವಿಗೆ ಅಳವಡಿಸಿರುವ ನಿರೇತ್ತುವ ಪಂಪನ್ನು ಯಾರೋ ಕಳವು ಮಾಡಿಕೊಂಡು ಹೋಗಿರುವುದಾಗಿ ಕಳುವಾದ ಪಂಪಿನ ಮೌಲ್ಯ 4832 /-ರೂ ಆಗುತ್ತದೆ. ಅಲ್ಲದೆ ಮನೆ ಮಾಲಿಕರು ಈ ಹಿಂದೆ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿರುವ ಈ ಪ್ರಕರಣದ ಪಿರ್ಯಾಧಿದಾರರ ಸೆಕ್ಯುರಿಟಿ ಸಿಬ್ಬಂದಿಯವರಿಗೆ ನೀರು ಹಾಗೂ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ತೊಂದರೆ ಪಡಿಸಿರುತ್ತಾರೆ. ಇದರಿಂದ ಕಟ್ಟಡದ ಮಾಲಿಕರ ಮೇಲೆ ಸಂಶಯವಿರುವುದಾಗಿದೆ.
2.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 7/6/2014 ರಂದು 17:30 ಗಂಟೆಗೆ ಲಾರಿ ನಂಬ್ರ KA-03-AD-7989 ನ್ನು ಅದರ ಚಾಲಕ ಕುಲಶೇಖರ ಕಡೆಯಿಂದ ಪಡಿಲ್ ಕಡೆಗೆ ಸಾರ್ವಜನಿಕ ಚತುಷ್ಪಥ ರಸ್ತೆಯ ಎಕಮುಖವಾಗಿ ವಾಹನ ಸಾಗಲು ಇರುವ ವ್ಯವಸ್ಥೆಗೆ ವಿರುದ್ದವಾಗಿ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಗ್ರಾಮಾಂತರ ಪೊಲೀಸು ಠಾಣೆಯ ಎದುರುಗಡೆ ಪಡೀಲ್ ಕಡೆಯಿಂದ ಕೈಕಂಬ ಕಡೆಗೆ ಬರುತ್ತಿದ್ದ ಮೋ ಸೈಕಲ್ ನಂಬ್ರ KA-19-EE-6048 ಕ್ಕೆ ಡಿಕ್ಕಿ ಮಾಡಿದ ಪರಿಣಾಮ ಸವಾರ ಮೊಹಮ್ಮದ್ ಸಾದಿಕ್ ರಸ್ತೆಗೆ ಬಿದ್ದು ತಲೆಗೆ ರಕ್ತ ಗಾಯ ಎಡಕೈಗೆ ಗಂಭೀರ ಗಾಯ ಹಾಗೂ ದೇಹದ ಮೇಲೆ ತರಚಿದ ಗಾಯಗೊಂಡು ಸಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ.
3.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 08/06/2014 ರಂದು ರಾತ್ರಿ 11.30 ಗಂಟೆಗೆ ಮಂಗಳೂರು ನಗರದ ಕುಲಶೇಖರದ ಇಂಚರಾ ಬಾರ್ ಮತ್ತು ರೆಸ್ಟೋರೆಂಟ್ ನಲ್ಲಿ ಪಿರ್ಯಾದುದಾರರಾದ ಶ್ರೀ ಪ್ರಶಾಂತ್ ರವರು ಅವರ ಸ್ನೇಹಿತರೊಂದಿಗೆ ಬಿಯರ್ ಕುಡಿದು ಹೊರಗೆ ಬಂದು ಹೋಟೆಲ್ ಮುಂಭಾಗದಲ್ಲಿ ಪಾರ್ಕಿಂಗ್ ಸ್ಥಳದಲ್ಲಿ ಪಿರ್ಯಾದುದಾರರ ಸ್ನೇಹಿತರುಗಳು ಬಾಯಿ ಮಾತಿನ ಗಲಾಟೆ ಮಾಡಿಕೊಳ್ಳುತ್ತಿದ್ದವರನ್ನು ಮೊಹಿತ್ ಮತ್ತು ಸಂದ್ಯಾ ಎಂಬ ಸ್ನೇಹಿತರನ್ನು ಪಿರ್ಯಾದಿಯು ಗಲಾಟೆ ಮಾಡಿಕೊಳ್ಳಬೇಡಿ ಮನೆಗೆ ಹೋಗುವ ಎಂದು ಕರೆದಾಗ ಅವರ ಜೊತೆಗಿದ್ದ ಪಿರ್ಯಾದಿಗೆ ಪರಿಚಯವಿಲ್ಲದ ವ್ಯಕ್ತಿ ಪಿರ್ಯಾದಿಯನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದಾಗ ಪಿರ್ಯಾದಿಯು ಏಕೆ ಬೈಯುತ್ತೀಯಾ ಎಂದು ಕೇಳಿದ್ದಕ್ಕೆ ಆರೋಪಿ ಅಲ್ಲೇ ನಿಲ್ಲಿಸಿದ್ದ ಒಂದು ಆಕ್ವಿವ್ ಹೊಂಡ ಸ್ಕೂಟರ್ ನಲ್ಲಿದ್ದ ರಾಡ್ ನ್ನು ತೆಗೆದು ಪಿರ್ಯಾದಿಯ ಹಿಂಬದಿ ತಲೆಗೆ ಹೊಡೆದು ರಕ್ತ ಗಾಯ ಪಡಿಸಿರುತ್ತಾನೆ. ಪಿರ್ಯಾದಿಯನ್ನು ಸ್ನೇಹಿತರು ಬಿಡಿಸಿದ ನಂತರ ಆಕ್ವಿವಾ ಹೊಂಡ ಸ್ಕೂಟರ್ ನಲ್ಲಿ ಆರೋಪಿಯು ಹೊರಟು ಹೋಗಿರುತ್ತಾನೆ.
4.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಅಹಲ್ಯಾ ರವರು ಮಂಗಳೂರು ನಗರದ ಕದ್ರಿ ಕಂಬಳದಲ್ಲಿರುವ ಸರ್ವೆ ನಂ.64/7ರಲ್ಲಿ ವಾಸವಾಗಿದ್ದು, ಸದ್ರಿ ಜಾಗದ ದಕ್ಷಿಣ ಬದಿಯಲ್ಲಿ ಸಾರ್ವಜನಿಕ ರಸ್ತೆಯಿದ್ದು, ರಸ್ತೆಯ ಬಲ ಬದಿಯಲ್ಲಿರುವ ಜಾಗವನ್ನು ಪ್ರಕಾಶ್ ಪಿಂಟೋ ಪ್ಯಾರಗೋನ್ ಬಿಲ್ಡರ್ಸ್ ಅಂಡ್ ಡೆವೆಲಪರ್ಸ್ ರವರು ಕ್ರಯವರಿಸಿಕೊಂಡು ಸಮತಟ್ಟು ಮಾಡುವ ನೆಪದಿಂದ ಪಿರ್ಯಾದಿದಾರರ ಜಾಗದಲ್ಲಿ ಅಕ್ರಮ ಪ್ರವೇಶ ಮಾಡಿ ಸದ್ರಿ ಜಾಗದ ದಕ್ಷಿಣ ಮತ್ತು ಪೂರ್ವ ಬದಿಯಲ್ಲಿ ಜೆ.ಸಿ.ಬಿ ಯಂತ್ರದ ಮೂಲಕ ಮಣ್ಣು ತೆಗೆದು ಹಾನಿಗೊಳಿಸಿರುತ್ತಾರೆ.
5.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ದೇವಯಾನಿ ರವರು ಮಂಗಳೂರು ನಗರದ ಕದ್ರಿ ಕಂಬಳದಲ್ಲಿರುವ ಸರ್ವೆ ನಂ.64/7ರಲ್ಲಿ ವಾಸವಾಗಿದ್ದು, ಸದ್ರಿ ಜಾಗದ ದಕ್ಷಿಣ ಬದಿಯಲ್ಲಿ ಸಾರ್ವಜನಿಕ ರಸ್ತೆಯಿದ್ದು, ರಸ್ತೆಯ ಬಲ ಬದಿಯಲ್ಲಿರುವ ಜಾಗವನ್ನು ಪ್ಯಾರಗೋನ್ ಬಿಲ್ಡರ್ಸ್ ಅಂಡ್ ಡೆವೆಲಪರ್ಸ್ ನ ಪ್ರಕಾಶ್ ಪಿಂಟೋ ರವರು ಕ್ರಯವರಿಸಿಕೊಂಡು ಸಮತಟ್ಟು ಮಾಡುವ ನೆಪದಿಂದ ಪಿರ್ಯಾದಿದಾರರ ಜಾಗದಲ್ಲಿ ಅಕ್ರಮ ಪ್ರವೇಶ ಮಾಡಿ ಸದ್ರಿ ಜಾಗದ ದಕ್ಷಿಣ ಮತ್ತು ಪೂರ್ವ ಬದಿಯಲ್ಲಿ ಜೆ.ಸಿ.ಬಿ ಯಂತ್ರದ ಮೂಲಕ ಮಣ್ಣು ತೆಗೆದು ಹಾನಿಗೊಳಿಸಿರುತ್ತಾರೆ
6.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 08-06-2014 ರಂದು ಪಿರ್ಯಾದಿದಾರರಾದ ಶ್ರೀ ಫೆಲಿಕ್ಸ್ ಫರ್ನಾಂಡಿಸ್ ರವರು KA-19-2651 ನೇ ನಂಬ್ರದ ಆ್ಯಕ್ಟೀವ್ ಹೋಂಡಾ ದ್ವಿಚಕ್ರ ವಾಹನದಲ್ಲಿ ಸ್ನೇಹಿತ ಅಬ್ದುಲ್ ಹಮೀದ್ ಎಂಬವರನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು, ಮೂಡಬಿದ್ರೆ ಹೊಸಬೆಟ್ಟುವಿನಿಂದ ವ್ಯವಹಾರ ಮುಗಿಸಿ ಮರಳಿ ಮನೆಗೆ ಹೋಗುತ್ತಾ, ಹೊಸಬೆಟ್ಟು-ಕೊನ್ನೆಪದವು-ತೋಡಾರು ರಸ್ತೆಯಯಲ್ಲಿರುವ ಉರ್ಕಿ ಎಂಬಲ್ಲಿಗೆ ಸುಮಾರು 17:30 ಗಂಟೆಗೆ ತಲುಪುತ್ತಿದ್ದಂತೆ, ಹಿಂದಿನಿಂದ ಅಂದರೆ ಹೊಸಬೆಟ್ಟು ಕಡೆಯಿಂದ ತೋಡಾರು ಕಡೆಗೆ ಬರುತ್ತಿದ್ದ ಕಾರು ಚಾಲಕು ತನ್ನ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಆ್ಯಕ್ಟವ್ ಹೋಂಡಾಕ್ಕೆ ಢಿಕ್ಕಿಯಾಗಿ ದ್ವಿಚಕ್ರ ವಾಹನ ಸಮೇತ ಕೆಳಗೆ ಬಿದ್ದಿದ್ದು, ಪರಿಣಾಮ ಪಿರ್ಯಾದಿದಾರರ ಬಲಕಣ್ಣಿನ ಹುಬ್ಬಿನ ಬಳಿ ಗುದ್ದಿದ ರಕ್ತಗಾಯವಾಗಿ, ಬಲ ಮೊಣಕಾಲು ಗಂಟಿನ ಬಳಿ ತರಚಿದ ಗಾಯವಾಗಿದ್ದು, ಸಹಸವಾರರ ಬಲಕಾಲಿನ ಪಾದದ ಬಳಿಯ ಗಂಟಿಗೆ ಗುದ್ದಿದ ರಕ್ತಗಾಯವಾಗಿದ್ದು. ಗಾಯಾಳುಗಳು ಮಂಗಳೂರು ಮಂಗಳ ಕಿಡ್ನಿ ಫೌಂಡೇಶನ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಲ್ಪಟ್ಟಿದ್ದು, ಅಪಘಾತವುಂಟು ಮಾಡಿದ ಕಾರು ಚಾಲಕನು ಬಿದ್ದು ಗಾಯಗೊಂಡ ಪಿರ್ಯಾದಿದಾರರನ್ನು ಕಾರು ನಿಲ್ಲಿಸಿ ಆರೈಕೆ ಮಾಡದೇ, ಕಾರು ಸಮೇತ ಪರಾರಿಯಾಗಿದ್ದು, ಕಾರಿನ ಅತೀ ವೇಗ ಹಾಗೂ ಬೀಳುತ್ತಿದ್ದ ಮಳೆಯ ಕಾರಣ ಸದ್ರಿನ ಕಾರಿನ ನಂಬ್ರ ನೋಡಲು ಅಸಾಧ್ಯವಾಗಿರುತ್ತದೆ
7.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09-06-2014 ರಂದು ಪಿರ್ಯಾದಿದಾರರಾದ ಶ್ರೀ ರವಿಚಂದ್ರನ್ ರವರು ಯೆಯ್ಯಾಡಿಯಿಂದ ಮಂಗಳೂರಿಗೆ ಪೈಂಟಿಂಗ್ ಸಾಮಾಗ್ರಿಗಳನ್ನು ಖರೀದಿಸಲು ಸಜಿತ್ ಎಂಬವರ ಬಾಬ್ತು ಕೆಎ 19 ಇಜಿ 1767 ನೇ ಮೋಟಾರ್ ಸೈಕಲಿನಲ್ಲಿ ಹಿಂಬದಿ ಸವಾರರಾಗಿ ಕುಳಿತುಕೊಂಡು ಹೋಗುತ್ತಾ ಯೆಯ್ಯಾಡಿ ವರ್ಧಮಾನ ಹೋಟೇಲ್ ಬಳಿ ತಲುಪುತ್ತಿದ್ದಂತೆ ಸಮಯ ಸುಮಾರು 12-10 ಗಂಟೆ ವೇಳೆಗೆ ಅವರ ಹಿಂದುಗಡೆಯಿಂದ ಅಂದರೆ ಯೆಯ್ಯಾಡಿ ಕಡೆಯಿಂದ ಒಂದು ಓಮ್ನಿ ಕಾರನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಪ್ರಯಾಣಿಸುತ್ತಿದ್ದ ಬೈಕನ್ನು ಓವರ್‌ಟೇಕ್ ಮಾಡಿ ಮುಂದಕ್ಕೆ ಹೋಗುವ ಸಮಯ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮತ್ತು ಪಿರ್ಯಾದಿದಾರರು ಬೈಕ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಬೈಕ್ ಸವಾರ ಸಜಿತ್‌ನ ಮುಖದ ಬಲಗಡೆ, ಕಣ್ಣಿನ ಬಳಿ, ಬಲಕಾಲಿಗೆ, ಬಲಕೈಗೆ ರಕ್ತಗಾಯ ಉಂಟಾಗಿದ್ದಲ್ಲದೆ, ಪಿರ್ಯಾದಿದಾರರ ಎಡಕಾಲಿನ ಮೊಣಗಂಟು, ಎಡಕೈಯ ಬೆರಳುಗಳಿಗೆ ತರಚಿದ ಗಾಯವಾಗಿದ್ದು, ಕೆಳಗೆ ಬಿದ್ದವರನ್ನು ಅವರ ಹಿಂದಿನಿಂದ ಬಂದ ಸಜಿತ್ನ ಅಣ್ಣ ಅನೀಶನು ಉಪಚರಿಸಿ ಮಂಗಳೂರಿನ ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ವೈದ್ಯರು ಸಜಿತ್ನ ಒಳರೋಗಿಯಾಗಿ ಮತ್ತು ಪಿರ್ಯಾದಿದಾರರನ್ನು ಹೊರರೋಗಿಯಾಗಿ ಚಿಕಿತ್ಸೆ ನೀಡಿರುತ್ತಾರೆ. ಹಾಗೂ ಡಿಕ್ಕಿಯನ್ನುಂಟು ಮಾಡಿದ ಓಮ್ನಿ ಕಾರನ್ನು ಅದರ ಚಾಲಕನು ನಿಲ್ಲಿಸದೇ ಪರಾರಿಯಾಗಿದ್ದು , ನಂತರ ವಿಚಾರಿಸಿದ್ದಲ್ಲಿ ಅದರ ನಂಬ್ರ ಕೆಎ 20 ಎಂ 6461 ಎಂದು ತಿಳಿಯಿತು.
No comments:
Post a Comment