ದೈನಂದಿನ ಅಪರಾದ ವರದಿ.
ದಿನಾಂಕ 25.06.2014 ರ 06:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 1 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 1 |
ಮನೆ ಕಳವು ಪ್ರಕರಣ | : | 4 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 4 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 1 |
ಇತರ ಪ್ರಕರಣ | : | 2 |
1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 24-06-2014 ರಂದು ಸಂಜೆ ಸಮಯ ಪಿರ್ಯಾದಿದಾರರಾದ ಶ್ರೀ ವಚನ್ ಮನಾಯ್ ರವರು ಸುರತ್ಕಲ್ ಗ್ರಾಮದ ಮುಕ್ಕಾ ಜಂಕ್ಷನ್ನಲ್ಲಿ ಅವರ ಅಂಗಡಿ ಮುಂದುಗಡೆ ರಾ.ಹೆ 66ರ ಬದಿಯಲ್ಲಿ ನಿಂತುಕೊಂಡು ಅವರ ಸ್ನೇಹಿತರೊಂದಿಗೆ ಮಾತನಾಡುವ ಸಮಯ ಮಂಗಳೂರು ಕಡೆಯಿಂದ ಅವರಿಗೆ ಪರಿಚಯದ ಟಿಕ್ಕಾ ಅಬ್ದುಲ್ ರಜಾಕ್ @ ಅದ್ದು ಅವರ ಮಗ ದುಲ್ಷಾಕನು ಅವರ ಬಾಬ್ತು ದ್ವಿಚಕ್ರ ವಾಹನ ನಂಬ್ರ ಕೆ. ಎ. 19.ಇ 6247ನೇದರಲ್ಲಿ ಹಿಂಬದಿ ಅವರ ತಮ್ಮ ಸಾಹಿಕ್ರವರನ್ನು ಕುಳ್ಳಿರಿಸಿಕೊಂಡು ಬಂದು ಮುಕ್ಕಾ ಜಂಕ್ಷನ್ನಲ್ಲಿ ಮತ್ತೆ ಸುರತ್ಕಲ್ ಕಡೆಗೆ ಅಂದರೆ ಉಡುಪಿ- ಮಂಗಳೂರು ರಾ.ಹೆ ಗೆ ತಿರುಗಿಸುವರೇ ಮುಕ್ಕ ಜಂಕ್ಷನ್ ಬಳಿ ರಾತ್ರಿ 7-20 ಗಂಟೆ ಸಮಯಕ್ಕೆ ನಿಂತಿಕೊಂಡಿರುವ ಸಮಯ ಉಡುಪಿ ಕಡೆಯಿಂದ ಕೆ.ಎ.19.ಎಎ.0347ನೇ ಟಾಟಾ ಏಸ್ ವಾಹನದ ಚಾಲಕನು ಸದ್ರಿ ಹೆದ್ದಾರಿಯಲ್ಲಿ ತೀರಾ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಮುಕ್ಕಾ ಜಂಕ್ಷನ್ ಬಳಿ ಬಲಗಡೆಯ ಡಿವೈಡರಿಗೆ ಡಿಕ್ಕಿ ಹೊಡೆದು ಅಲ್ಲಿಂದ ಡಿವೈಡರಿಗೆ ಒರೆಸಿಕೊಂಡು ಬಂದು ದಿಲ್ ಷಾಕನು ನಿಲ್ಲಿಸಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಮಾಡಿ ಅಲ್ಲಿಂದ ಮುಂದಕ್ಕೆ ಚಲಾಯಿಸಿಕೊಂಡು ಹೋಗಿ ಮಂಗಳೂರು ಕಡೆಯಿಂದ ಬರುತ್ತಿದ್ದ ಕೆ.ಎ. 20.ಎಂ.9016ನೇ ಕಾರಿಗೆ ಡಿಕ್ಕಿ ಮಾಡಿರುವುದಾಗಿದೆ. ಈ ಅಪಘತದ ಪರಿಣಾಮ ದುಲ್ಷಾಕನು ದ್ವಿಚಕ್ರ ವಾಹನದಿಂದ ಎಸೆಯಲ್ಪಟ್ಟು ತಲೆಗೆ ತೀವ್ರ ತರಹದ ರಕ್ತಗಾಯವಾಗಿ ಚಿಕಿತ್ಸೆ ಬಗ್ಗೆ ಶ್ರೀನಿವಾಸ ಆಸ್ಪತ್ರೆಗೆ ದಾಖಲಾಗಿ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಎ.ಜೆ ಆಸ್ಪತ್ರೆಗೆ ದಾಖಲು ಮಾಡಿದ್ದು ಅಲ್ಲಿ ಚಿಕಿತ್ಸೆಯಲ್ಲಿರುತ್ತಾ ಚಿಕಿತ್ಸೆ ಫಲಕಾರಿಯಾಗದೇ ದುಲ್ಷಾಕನು ರಾತ್ರಿ 8-35 ಗಂಟೆಗೆ ಮೃತಪಟ್ಟಿರುವುದಾಗಿ ಹಿಂಬದಿ ಸವಾರ ಸಾಹಿಕ್ ನಿಗೆ ರಕ್ತ ಗಾಯವಾಗಿದ್ದು ಈ ಅಪಘತಕ್ಕೆ ಟಾಟಾ ಏಸ್ ವಾಹನ ಚಾಲಕನ ತೀರಾ ನಿರ್ಲಕ್ಷತನದ ಚಾಲನೆಯೇ ಕಾರಣವಾಗಿರುತ್ತದೆ.
2.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 24-06-2014 ರಂದು ಬೆಳಗ್ಗಿನ ಜಾವ 02:00 ಗಂಟೆಗೆ ಮಂಗಳೂರು ನಗರದ ಬಿಜೈ ಮುಖ್ಯ ರಸ್ತೆಯಲ್ಲಿ ಕೆನರಾ ಬಸ್ಸು ಮಾಲಕರ ಮನೆಯ ಬಳಿ ಕೆಎ-19-ಎಂ.ಎ-3251 ನಂಬ್ರದ ಮಾರುತಿ ಓಮ್ನಿ ಕಾರನ್ನು ಅದರ ಚಾಲಕ ಕಾರ್ತಿಕ್ ಎಂಬಾತನು ಕೆ.ಎಸ್.ಆರ್.ಟಿ.ಸಿ. ಬಸ್ಸು ನಿಲ್ದಾಣ ಕಡೆಯಿಂದ ಬಿಜೈ ಕಡೆಗೆ ಕಾಂಕ್ರಿಟ್ ರಸ್ತೆಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆಯ ಡಿವೈಡರ್ಗೆ ಡಿಕ್ಕಿಪಡಿಸಿದ ಪರಿಣಾಮ ಕಾರು ಪಲ್ಟಿಯಾಗಿ ಕಾರಿನಲ್ಲಿ ತನ್ನ ಗೆಳೆಯರಾದ ಸುಶಾಂತ, ಭವಿತ್, ಹರ್ಷಿತ್‌ರೊಂದಿಗೆ ಪ್ರಯಾಣಿಸುತ್ತಿದ್ದ ಪಿರ್ಯಾದಿದಾರ ಕಾರ್ತಿಕ್(18) ಎಂಬವರಿಗೆ ತಲೆಯ ಎಡಬದಿಗೆ ಮತ್ತು ಎಡಕೈ ಕೋಲುಕೈಗೆ ರಕ್ತಗಾಯವಾಗಿರುತ್ತದೆ. ಗಾಯಾಳು ಮಂಗಳೂರು ಮಂಗಳಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ.
3.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 21.06.2014 ರಂದು ಪಿರ್ಯಾದಿದಾರರಾದ ಶ್ರೀಮತಿ ವಿಜಯಲತಾ ರವರು ತಮ್ಮ ಬಾಬ್ತು KA-19-EJ-4927ನೇ ನಂಬ್ರದ ಸ್ಕೂಟರನ್ನು ಮಂಗಳೂರು ನಗರದ ತಮ್ಮ ಮನೆಯಿಂದ ಚಲಾಯಿಸಿಕೊಂಡು ಹೋಗುತ್ತಾ ಬೆಳಿಗ್ಗೆ 09:00 ಗಂಟೆ ಸಮಯಕ್ಕೆ ಬಜಾಲ್ ನಾರಾಯಣ ಕೊಟ್ಟಾರಿ ಎಂಬವರ ಕಂಪೌಂಡ್ ಸಮೀಪ ತಲುಪಿದಾಗ ಪಿರ್ಯಾದುದಾರರ ಎದುರುಗಡೆಯಿಂದ ಅಂದರೆ ಪಢೀಲ್ ಕಡೆಯಿಂದ ಬಜಾಲ್ ಕಡೆಗೆ KA-19-X-815ನೇ ನಂಬ್ರದ ಆಕ್ಟೀವಾ ಸ್ಕೂಟರನ್ನು ಅದರ ಸವಾರ ಚಂದ್ರಹಾಸ್ ಎಂಬವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ಮಧ್ಯೆ ಇದ್ದ ಹೊಂಡವನ್ನು ತಪ್ಪಿಸುವ ಸಲುವಾಗಿ ಸದ್ರಿ ಸ್ಕೂಟರನ್ನು ಅವರ ಎಡಬದಿಯಿಂದ ಬಲಬದಿಗೆ ಚಲಾಯಿಸಿಕೊಂಡು ಬಂದುದರಿಂದ ಸದ್ರಿ ಸ್ಕೂಟರಿನ ಬಲಭಾಗವು ಬಜಾಲ್ ಕಡೆಯಿಂದ ಪಡೀಲ್ ಕಡೆಗೆ ರಸ್ತೆಯ ತೀರಾ ಎಡಬದಿಯಲ್ಲಿ ಪಿರ್ಯಾದುದಾರರು ಚಲಾಯಿಸಿಕೊಂಡು ಹೋಗುತ್ತಿದ್ದ ಸ್ಕೂಟರಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಅವರ ಹಣೆಗೆ, ಎಡಕೈಗೆ ರಕ್ತ ಗಾಯ, ಎಡಕಾಲಿಗೆ ತೀವ್ರ ಜಖಂಗೊಂಡವರನ್ನು ಆರೋಪಿ ಚಂದ್ರಹಾಸ್ ರವರು ಚಿಕಿತ್ಸೆಯ ಬಗ್ಗೆ ಮಂಗಳೂರು ನಗರದ ತೇಜಸ್ವಿನಿ ಆಸ್ಪತ್ರೆಯ್ಲಲ್ಲಿ ಒಳರೋಗಿಯಾಗಿ ದಾಖಲುಗೊಳಿಸಿರುವುದಾಗಿದೆ.
4.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 23-06-2014 ರಂದು ರಾತ್ರಿ 20-00 ಗಂಟೆಯಿಂದ ದಿನಾಂಕ: 24-06-2014ರಂದು ಬೆಳಿಗ್ಗೆ 10-00 ಗಂಟೆಯ ಮಧ್ಯೆ ಯಾರೋ ಕಳ್ಳರು ಪಿರ್ಯಾದಿದಾರರಾದ ಶ್ರೀ ಪ್ರಶಾಂತ್ ಕುವೆಲ್ಲೋ ರವರ ಬಾಬ್ತು ಮಂಗಳೂರು ನಗರದ ಕದ್ರಿ ದೇವಸ್ಥಾನ ರಸ್ತೆಯಲ್ಲಿರುವ ಅಯ್ಯಂಗಾರ್ ಬೇಕರಿ ಬಳಿ ಇರುವ ಹ್ಯಾಂಗ್ಯೋ ಐಸ್ ಕ್ರೀಂ ಅಂಗಡಿಯ ಶಟರ್ ಬಾಗಿಲನ್ನು ಬಲಾತ್ಕಾರವಾಗಿ ತೆರೆದು, ಅಂಗಡಿಯ ಡ್ರಾವರ್ ನಲ್ಲಿರಿಸಿದ್ದ ನಗದು ಹಣ ರೂ.13,000/- ಮತ್ತು ಡ್ರಾವರ್ ನಲ್ಲಿದ್ದ ಮಾರುತಿ ಓಮ್ನಿ ಕಾರಿನ ಕೀಯನ್ನು ಕೂಡಾ ತೆಗೆದು ಸದ್ರಿ ಅಂಗಡಿಯ ಎದುರುಗಡೆ ನಿಲ್ಲಿಸಿದ್ದ ಪ್ರಶಾಂತ್ ಕುವೆಲ್ಲೋ ರವರ ಆರ್.ಸಿ ಮಾಲಕತ್ವದ ಚಾಸೀಸ್.ನಂಬ್ರ: MA3EVB11S01108836, ಇಂಜಿನ್ ನಂಬ್ರ: F8BIN4109240ರ, KA 19 MA 3251ನೇ ನೋಂದಣಿ ಸಂಖ್ಯೆಯ 2009ನೇ ಮೊಡೆಲಿನ ಬಿಳಿ ಬಣ್ಣದ ಸುಮಾರು 2,00,000/- ರೂ. ಬೆಲೆ ಬಾಳುವ ಮಾರುತಿ ಓಮ್ನಿ ಕಾರನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.
5.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಭಾಸ್ಕರ್ ಶೆಟ್ಟಿ ರವರ ಬಾಬ್ತು ವಾಸದ ಮನೆಯಾದ ತೋಕೂರು ಗ್ರಾಮದ ರಾಮಪಾಲ್ ಎಂಬಲ್ಲಿ ಇರುವ ಶ್ರೀದೇವಿ ಹೂಸದಾಗಿ ನಿರ್ಮಿಸಿದ ಮನೆಯ ಹಿಂಬದಿ ಬಾಗಿಲನ್ನು ಯಾರೋ ಕಳ್ಳರೂ ದಿನಾಂಕ 23/06/2014 ರ ಸಂಜೆ 6-00 ಗಂಟೆಯಿಂದ ದಿನಾಂಕ 24/06/2014 ರ ಬೆಳಿಗ್ಗೆ 06-00 ಗಂಟೆಯ ಮಧ್ಯ ಬಾಗಿಲನ್ನು ಮುರಿದು ಒಳಹೊಕ್ಕಿ ಅಡುಗೆ ಕೊಣೆಯಲ್ಲಿ ಇದ್ದ ಸುಮಾರು 15,000/- ಬೆಲೆ ಬಾಳುವ 2 ಗ್ಯಾಸ್ ಸಿಲಿಂಡರ್, ಇಂಡೆಕ್ಷನ್ ಕುಕ್ಕರ್-1, ರೆಗ್ಯೂಲೇಟರ್-1, ಫ್ಯಾನ್-1, ಆ್ಯಕ್ವಗಾರ್ಡ-1 ಇವುಗಳನ್ನು ಕಳವುಮಾಡಿಕೊಂಡು ಹೋಗಿರುವುದಾಗಿದೆ.
6.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 24-06-2014 ರಂದು ಮದ್ಯಾಹ್ನ ದೊರೆತ ಖಚಿತ ವರ್ತಮಾನದಂತೆ, ಸಮಯ 14-15 ಗಂಟೆ ವೇಳೆಗೆ ಕಾರ್ನಾಡು ಗ್ರಾಮದ ಲಿಂಗಪ್ಪಯ್ಯಕಾಡು ಕೂಸು ಶೆಟ್ಟಿಗಾರ್ ಎಂಬವರ ಮನೆಯ ಹಿಂಬದಿಯಲ್ಲಿ ಸಾರ್ವಜನಿಕ ಖಾಲಿ ಜಾಗದಲ್ಲಿ ಹಣವನ್ನು ಪಣವಾಗಿಟ್ಟು ಇಸ್ಪೀಟು ಎಲೆಗಳಿಂದ ಅಂದರ್-ಬಾಹರ್ ಜೂಜಾಟ ಆಡುತ್ತಿದ್ದ ಶಶಿಕುಮಾರ್, ಸಮೀರ್ ನದಾಫ್, ಹೊನ್ನಪ್ಪ, ದೇವೆಂದ್ರ, ಮಲ್ಲಿಕಾರ್ಜುನ ತಲವಾರ, ಮಂಜುನಾಥ್ ಉಪ್ಪಳ ದಿನ್ ಎಂಬ 6 ಜನ ಆರೋಪಿಗಳನ್ನು ಮುಲ್ಕಿ ಪೊಲಿಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ರಾಮಚಂದ್ರ ನಾಯಕ್ ರವರು ಸಿಬ್ಬಂದಿಗಳೊಂದಿಗೆ ತೆರಳಿ ದಾಳಿ ನಡೆಸಿ ದಸ್ತಗಿರಿ ಮಾಡಿ, ಜೂಜಾಟಕ್ಕೆ ಬಳಸಿದ್ದ ನಗದು ಹಣ ರೂ 3,350/- ರೂಪಾಯಿ, ಇಸ್ಪೀಟು ಎಲೆಗಳು-52, ಮತ್ತು ನೆಲಕ್ಕೆ ಹಾಸಲು ಉಪಯೋಗಿಸಿದ ಹಳೆಯ ನ್ಯೂಸ್ ಪೇಪರ್ ಹಾಳೆಗಳು -2 ಇವುಗಳನ್ನು ಪಂಚರ ಸಮಕ್ಷಮ ಸ್ವಾಧಿನಪಡಿಸಿ, ಆರೋಪಿಗಳು ಮತ್ತು ಸೊತ್ತು ಸಮೇತ ಠಾಣೆಗೆ ಬಂದು ಪ್ರಕರಣ ದಾಖಲಿಸಿರುವುದಾಗಿದೆ.
7.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಮುಕೇಶ್ ಕುಮಾರ್ ರವರು ಕೆ.ಎಂ.ಬಿ. ಎಂಟರ್‌ಪ್ರೈಸಸ್ ಎಂಬ ಹೆಸರಿನಲ್ಲಿ ಅಡಿಕೆ ಮತ್ತು ಮೆಣಸಿನ ವ್ಯಾಪಾರ ಮಾಡುತ್ತಿದ್ದು, ಚಿಕ್ಕಮಗಳೂರು ಮತ್ತು ದ.ಕ ಜಿಲ್ಲೆಯ ವಿವಿದೆಡೆಗಳಿಂದ ರೈತರಿಂದ ಸಂಗ್ರಹಿಸಿದ ಕಾಳು ಮೆಣಸನ್ನು ತನ್ನ ಬಾಬ್ತು ಮಂಗಳೂರು ತಾಲೂಕು ಪುತ್ತಿಗೆ ಗ್ರಾಮದ ಹಂಡೇಲು ಎಂಬಲ್ಲಿರುವ ತನ್ನ ಗೋಡೌನ್ನಲ್ಲಿ ಶೇಖರಿಸಿ ಶುಚಿ ಮಾಡಿ ಮಾರ್ಕೆಟ್ನಲ್ಲಿ ಉತ್ತಮ ಬೆಲೆ ಬಂದಾಗ ಮಾರಾಟ ಮಾಡುವುದಾಗಿದ್ದು ಹಾಲಿ ಈಗ ಸದ್ರಿ ಗೋಡೌನ್ನಲ್ಲಿ ತಲಾ 60 ಕೆಜಿ ತುಂಬಿದ 45 ಕಾಳು ಮೆಣಸು ಗೋಣಿ ಚೀಲಗಳನ್ನು ಶೇಖರಿಸಿಟ್ಟಿದ್ದು ದಿನಾಂಕ : 21-06-2014 ರಂದು 17:00 ಗಂಟೆಯಿಂದ ದಿನಾಂಕ : 24-06-2014 ರಂದು 08:00 ಗಂಟೆಯ ನಡುವೆ ಯಾರೋ ಕಳ್ಳರು ಪಿರ್ಯಾದುದಾರರ ಗೋಡೌನ್‌ನ ಶಟರ್‌ನ ಸೆಂಟರ್ ಲಾಕ್ ಮತ್ತು ಎರಡೂ ಬದಿ ಅಳವಡಿಸಿದ್ದ ಬೀಗಗಳನ್ನು ಮುರಿದು ಗೋಡೌನ್‌ನ ಒಳಗೆ ಪ್ರವೇಶಿಸಿ ಗೋಡೌನ್‌ನ ಒಳಗಡೆಯಿದ್ದ 45 ಕಾಳು ಮೆಣಸಿನ ಗೋಣಿ ಚೀಲಗಳ ಪೈಕಿ 21 ನ್ನು ಕಳವು ಮಾಡಿದ್ದು ಕಳವಾದ ಸೊತ್ತಿನ ಒಟ್ಟು ಮೌಲ್ಯ ರೂ. 8,40,000/- ಆಗಿರುತ್ತದೆ.
8.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಅಬ್ದುಲ್ ರಹೀಂ @ ರಹೀಂ ರವರು ಕುದ್ರೋಳಿಯ ಮಂಡಿಯ ಬಳಿ ಕ್ಯಾಂಟೀನ್ ಇಟ್ಟುಕೊಂಡು ಜೀವಿಸುತ್ತಿದ್ದು, ದಿನಾಂಕ 24-06-2014 ರಂದು ಬೆಳಿಗ್ಗೆ 09-30 ಗಂಟೆಗೆ ಕ್ಯಾಂಟೀನ್ಗೆ ಬೇಕಾದ ಜೀನಸು ಸಾಮಾನುಗಳನ್ನು ಖರೀದಿಸುವರೇ ನೂರ್ಮಹಲ್ ಎದುರುಗಡೆ ಇರುವ ಜೀನಸು ಅಂಗಡಿಗೆ ಹೋಗುವಾಗ ಪಿರ್ಯಾದಿಗೆ ಪರಿಚಯವಿರುವ ನಹೀಂ ಎಂಬವನು ಕಾಣಸಿಕ್ಕಿ ನಮ್ಮ ಕೇಸು ಯಾವ ತಾರೀಕಿಗೆ ಇದೆ ಎಂದು ಕೇಳಿದಾಗ ಆತನು ಉಡಾಫೆಯಿಂದ ಮಾತನಾಡಿ ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ, ಪಿರ್ಯಾದಿಯ ಕಾಲರ್ಪಟ್ಟಿಯನ್ನು ಹಿಡಿದು ಅವಾಚ್ಯ ಶಬ್ದಗಳಿಂದ "ಮಗನೇ ಇನ್ನೊಮ್ಮೆ ನನ್ನಲ್ಲಿ ಕೇಸಿನ ವಿಷಯ ಕೇಳಿದರೆ ನಿನ್ನನ್ನು ಇಲ್ಲಿಯೇ ಮುಗಿಸಿ ಬಿಡುತ್ತೇನೆ" ಎಂಬುದಾಗಿ ಜೀವಬೆದರಿಕೆ ಹಾಕಿ ಅಲ್ಲಿಯೇ ಇದ್ದ ಒಂದು ಮರದ ಸೊಂಟೆಯಿಂದ ಪಿರ್ಯಾದಿಯ ತಲೆಗೆ ಹೊಡೆಯಲು ಪ್ರಯತ್ನಿಸಿದಾಗ ಅದನ್ನು ತಪ್ಪಿಸಲು ಯತ್ನಿಸಿದಾಗ ಪಿರ್ಯಾದಿದಾರರ ಎಡಕಣ್ಣಿನ ಮೇಲ್ಭಾಗಕ್ಕೆ ಹೊಡೆತ ಬಿದ್ದು ರಕ್ತ ಗಾಯವುಂಟಾಗಿದ್ದು, ಪಿರ್ಯಾದಿದಾರರ ಬೊಬ್ಬೆ ಕೇಳಿ ಅಲ್ಲಿಯೇ ಇದ್ದ ಶಂಶುದ್ದೀನ್ ಮತ್ತು ನವಾಜ್ ಎಂಬವರು ಬಿಡಿಸಿದ್ದು, ನಂತರ ಚಿಕಿತ್ಸೆಯ ಬಗ್ಗೆ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ.
9.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 24-06-2014 ರಂದು ಬೆಳಿಗ್ಗೆ 09-30 ಗಂಟೆಯ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ಮಹಮ್ಮದ್ ನಯೀಮ್ ರವರು ಮನೆಯಿಂದ ಹೊರಟು ಕುದ್ರೋಳಿ ಮಂಡಿ ಬಳಿ ತಲುಪಿದಾಗ ಪಿರ್ಯಾದಿದಾರರಿಗೆ ಪರಿಚಯವಿರುವ ರಹೀಂ @ ಪೋದು ರಹೀಂ ಎಂಬಾತನು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ "ನಿನಗೆ 2 ಸಾವಿರ ರೂಪಾಯಿ ಕೊಡಲು ಆಗುವುದಿಲ್ಲವೇ" ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದು ಅವನ ಕೈಯಲ್ಲಿದ್ದ ಮರದ ಸೊಂಟೆಯಿಂದ ತಲೆಗೆ ಹೊಡೆಯಲು ಬಂದಾಗ ಅದನ್ನು ತಪ್ಪಿಸಲು ಪ್ರಯತ್ನಿಸಿದಾಗ ಇಟ್ಟಿಗೆ ಕಲ್ಲಿನಿಂದ ಪಿರ್ಯಾದಿದಾರರ ಬಲಕೈಯ ನಡುಬೆರಳಿಗೆ ಮತ್ತು ಪಕ್ಕದ ಬೆರಳಿಗೆ ಹೊಡೆದು ರಕ್ತಗಾಯವನ್ನುಂಟು ಮಾಡಿದ್ದಲ್ಲದೇ ಮುಂದಕ್ಕೆ ಮಂಡಿಗೆ ಬಂದಲ್ಲಿ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲೆಂಬುದಾಗಿ ಜೀವ ಬೆದರಿಕೆ ಹಾಕಿದ್ದು, ಪಿರ್ಯಾದಿದಾರರು ಚಿಕಿತ್ಸೆಯ ಬಗ್ಗೆ ಮಂಗಳೂರು ಯೆನಪೋಯ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.
10.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 24-06-2014 ರಂದು ಮಂಗಳೂರು ಉತ್ತರ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ಚಲುವರಾಜು ಬಿ, ರವರು ಠಾಣಾ ವ್ಯಾಪ್ತೀಯಲ್ಲಿ ರೌಂಡ್ಸ್ ನಲ್ಲಿರುವಾಗ ಸಮಯ 19:00 ಗಂಟೆ ಸಮಯಕ್ಕೆ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರು, ಮಂಗಳೂರು ಕೇಂದ್ರ ಉಪವಿಭಾಗ, ಮಂಗಳೂರು ನಗರ ರವರಿಗೆ ಮಂಗಳೂರು ನಗರದ ಕೆ.ಎಸ್. ರಾವ್ ರಸ್ತೆಯಲ್ಲಿರುವ ಹಿಂದೂಸ್ತಾನ್ ಲಾಡ್ಜ್ ನ ಮೂರನೇ ಮಹಡಿಯಲ್ಲಿ ಉಲಾಯಿ ಪಿದಾಯಿ ಎಂಬ ನಸಿಬಿನ ಆಟವನ್ನು ಆಡುತ್ತಿದ್ದಾರೆ ಎಂಬ ಬಂದ ಖಚಿತ ಮಾಹಿತಿಯಂತೆ ಪಂಚರು ಮತ್ತು ಠಾಣಾ ಪಿಎಸ್ಐ ರಾಮಕೃಷ್ಣ ಹಾಗೂ ಸಿಬ್ಬಂಧಿಗಳೊಂದಿಗೆ ಮಂಗಳೂರು ನಗರದ ಕೆ.ಎಸ್. ರಾವ್ ರಸ್ತೆಯಲ್ಲಿರುವ ಹಿಂದೂಸ್ತಾನ್ ಲಾಡ್ಜ್ ನ ಮೂರನೇ ಮಹಡಿಯ ರೂಮ್ ನಂಬ್ರ 415 ನೇಯದಕ್ಕೆ ಇಸ್ಫೀಟ್ ಎಲೆಗಳನ್ನು ಹಾಕಿ ಹಣವನ್ನು ಪಣವಾಗಿಟ್ಟುಕೊಂಡು ಉಲಾಯಿ ಪಿದಾಯಿ ನಸೀಬಿನ ಆಟ ಆಡುತ್ತಿರುವವರನ್ನು ದಾಳಿ ನಡೆಸಿ ಸುತ್ತುವರಿದು ವಿಚಾರಿಸಿದಾಗ 1. ಜೋಸ್, ಪ್ರಾಯ 58 ವರ್ಷ, ತಂದೆ: ಥೋಮಸ್, ವಾಸ: ಕಣ್ಣೂರು, ಕೇರಳಾ 2. ಸಲಾಂ, ಪ್ರಾಯ 58 ತಂದೆ: ಮೊಯಿದ್ದಿನ್, ವಾಸ: ತಲಪಾಡಿ, ಮಂಗಳೂರು 3. ಅಬ್ದುಲ್ ರಹಿಮಾನ್, ಪ್ರಾಯ 49 ವರ್ಷ, ವಾಸ: ಪಳ್ಳಿಕೆರೆ, ಕಾಸರಗೋಡು, ಕೇರಳಾ, 4. ಮಹಮ್ಮದ್ ಕುಂಞ, ಪ್ರಾಯ 47 ವರ್ಷ, ತಂದೆ: ಅಬ್ದುಲ್ ಖಾದರ್, ವಾಸ: ಕಾಸರಗೋಡು, ಕೇರಳಾ, 5. ಕೆ.ಹೆಚ್. ಸುರೇಶ್, ಪ್ರಾಯ 42 ವರ್ಷ, ತಂದೆ: ಗೌರಿಶಂಕರ್, ವಾಸ: ಮಡಂತ್ಯಾರು 6. ಅಬ್ದುಲ್ ರಹಿಮಾನ್, ಪ್ರಾಯ 51 ವರ್ಷ, ತಂದೆ: ಇಬ್ರಾಹಿಂ, ಕೇರಳಾ, 7. ವೇಣುಗೋಪಾಲ, ಪ್ರಾಯ 37 ವರ್ಷ, ತಂದೆ: ಮಾದೇವ ನಾಯರ್, ಕೇರಳಾ, 8. ಅಶ್ರಫ್, ಪ್ರಾಯ 42 ವರ್ಷ, ತಂದೆ: ಮಹಮ್ಮದ್ ಕುಂಞ, ಕೇರಳಾ, 9. ಕೆ. ಹೇಯಗ್ರಿವ ಆಚಾರ್ಯ , ಪ್ರಾಯ 53 ವರ್ಷ, ತಂದೆ: ಗಣಪತಿ ಆಚಾರ್ಯ, ವಾಸ: ಕೃಷ್ಣಾಪುರ, ಕಾಟಿಪಳ್ಳ, 10. ಅಚ್ಚುತ ಭಟ್, ಪ್ರಾಯ 40 ವರ್ಷ, ತಂದೆ: ದಿ. ಎ.ಪಿ. ರಾಮಚಂದ್ರ್ರ ಭಟ್, ಕುಲಶೇಖರ, ಮಂಗಳೂರು 11. ಅಬ್ದುಲ್ ರಹಿಮಾನ್, ಪ್ರಾಯ 49 ವರ್ಷ, ತಂದೆ: ಹಂಬಾಯಿ, ಕಾಸರಗೊಡು, ಕೇರಳಾ, 12. ಅಬ್ದುಲ್ ಖಾದರ್, ಪ್ರಾಯ 49 ವರ್ಷ, ತಂದೆ: ಅಬ್ದುಲ್ ರಹಿಮಾನ್, ಕಾಸರಗೋಡು ಕೇರಳಾ ರಾಜ್ಯ, 13. ಅಬ್ದುಲ್ @ ಮುನಾಫ್, ಪ್ರಾಯ 45 ವರ್ಷ, ತಂದೆ: ದಿ. ಮೊಹಮ್ಮ್ಮದ್, ಕಸಬ ಬೇಂಗ್ರೆ, ಮಂಗಳೂರು, 14. ಪಿ.ಹೆಚ್. ಮಹಮ್ಮದ್, ಪ್ರಾಯ 39 ವರ್ಷ, ತಂದೆ: ಪಿ.ಕೆ. ಹಸನಬ್ಬಾ, ಕಾಟಿಪಳ್ಳ, ಮಂಗಳೂರು, 15. ಅಬ್ದುಲ್ಲಾ, ಪ್ರಾಯ 50 ವರ್ಷ, ತಂದೆ: ಮಹಮ್ಮದ್ ಅಬ್ದುಲ್ಲಾ, ಕಾಸರಗೋಡು, ಕೇರಳಾ, 16. ಶ್ಯಾಮಸುಂದರ್ ಭಟ್, ಪ್ರಾಯ 44 ವರ್ಷ, ತಂದೆ: ಭೀಮ್ ಭಟ್, ಉಪ್ಪಳ, ಕಾಸರಗೋಡು, ಕೇರಳಾ ರಾಜ್ಯ, 17. ಅಬೂಬಕ್ಕರ್, ಪ್ರಾಯ 50 ವರ್ಷ, ತಂದೆ: ಮೊಹಮ್ಮದ್ ಕುಂಞಿ, ಕಾಸರಗೋಡು, ಕೇರಳಾ ರಾಜ್ಯ ಎಂಬ ಆರೋಪಿಗಳನ್ನು ಸ್ಥಳದಲ್ಲಿಯೇ ವಶಕ್ಕೆ ತೆಗೆದುಕೊಂಡು ದಸ್ತಗಿರಿ ಮಾಡಿ, ಉಲಾಯಿ ಪಿದಾಯಿ ಅಟಕ್ಕೆ ಉಪಯೋಗಿಸಿದ ರೂ. 42,350/- ಮತ್ತು 52 ಇಸ್ಪಿಟ್ ಎಲೆಗಳನ್ನು ಹಾಗೂ ಕಡು ಕಂದು ಬಣ್ಣದ ಟೇಬಲ್-1 ಮತ್ತು 2 ಬಟ್ಟೆಯನ್ನು ಹಾಗೂ 10 ಚೇರಗಳನ್ನು ಸ್ವಾಧೀನ ಪಡಿಸಿಕೊಂಡು, 17 ಆರೋಪಿಗಳು ಮತ್ತು ಮಹಜರನ್ನು ಸೊತ್ತಿನೊಂದಿಗೆ ಠಾಣೆಗೆ ಬಂದು ಆರೋಪಿಗಳ ಕಾನೂನು ಕ್ರಮ ಜರುಗಿಸಿರುವುದಾಗಿದೆ.
11.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಝೀಹಾಮ್ ರವರ ತಂದೆಯಾದ ಅಬ್ದುಲ್ ರಹಿಮಾನ್ ಎಂಬವರಿಗೆ ಊರಿನಲ್ಲಿ ಸಾಲವಿದ್ದು, ಇದರಿಂದಾಗಿ ಇತ್ತಿಚೆಗೆ ಮದ್ಯಪಾನ ಸೇವಿಸುವ ಚಟವನ್ನು ರೂಡಿಸಿಕೊಂಡಿದ್ದರು. ಪಿರ್ಯಾದಿದಾರರ ಅಕ್ಕ ಹಾಗೂ ಅಮ್ಮನಲ್ಲಿ ಆಗಾಗ ಹಣ ಅಥವಾ ಚಿನ್ನವನ್ನು ಕೊಡಿ ಎಂದು ಪೀಡಿಸುತ್ತಿದ್ದರು. ದಿನಾಂಕ 20/06/2014 ರಂದು ಕೂಡಾ ಪಿರ್ಯಾದಿದಾರರ ಅಕ್ಕ ಹಾಗೂ ಅಮ್ಮನಲ್ಲಿ ಹಣ ಕೊಡಿ ಎಂದು ಕೇಳಿದ್ದರು. ಅವರುಗಳು ಕೊಡಲಿಲ್ಲ. ಮದ್ಯಾಹ್ನ ಸುಮಾರು 2-00 ಗಂಟೆಗೆ ಹೊರಗೆ ಹೋಗಿ ಯಾರಿಂದಾದರೂ ಹಣ ತೆಗೆದುಕೊಂಡು ಬರುತ್ತೇನೆ ಎಂದು ಮನೆಯಿಂದ ಹೋದ ಅಬ್ದುಲ್ ರಹಿಮಾನ್ ಈ ತನಕ ವಾಪಾಸು ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಪಿರ್ಯಾದಿದಾರರು ಅವರ ಸಂಬಂಧಿಕರ ಮನೆಯವರಲ್ಲಿ ವಿಚಾರಿಸಿ, ಹುಡುಕಾಡಿ ದೂರು ನೀಡಲು ತಡವಾಗಿರುತ್ತದೆ.
12.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 23-06-14 ರಂದು ಸಂಜೆ 7-00 ಗಂಟೆಯಿಂದ ದಿನಾಂಕ: 24-06-14 ರ ಬೆಳಿಗ್ಗೆ ಸುಮಾರು 08-00 ಗಂಟೆಯ ಮಧ್ಯೆ ಯಾರೋ ಕಳ್ಳರು ಪಿರ್ಯಾದಿದಾರರಾದ ಶ್ರೀ ವಿವೇಕಾನಂದ ಶೆಟ್ಟಿ ರವರ ತಮ್ಮನಾದ ವೇಣುಗೋಪಾಲ ಎಂಬವರ ಇಡ್ಯಾ ಗ್ರಾಮದ ಸುಭಾಷಿತ ನಗರ ಎಂಬಲ್ಲಿನ ಮನೆ ನಂಬ್ರ 5-22/6(3) ನೇ ಮನೆಯ ಹಿಂಬದಿ ಬಾಗಿಲನ್ನು ಯಾವುದೋ ಆಯುಧದಿಂದ ಮುರಿದು ಒಳ ಪ್ರವೇಶಿಸಿ ದೇವರ ಕೋಣೆಯಲ್ಲಿದ್ದ ಲಾಕರ್ ನಿಂದ ಸುಮಾರು 6 ಲಕ್ಷ ರೂಪಾಯಿ ಮೌಲ್ಯದ ಸುಮಾರು 30 ರಿಂದ 40 ಪವನ್ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.
13.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22-06-2014 ರಂದು ಪಿರ್ಯಾದುದಾರರಾದ ಶ್ರೀಮತಿ ಫಾತಿಮಾ ರವರು ತನ್ನ ಸಂಬಂಧಿಕರೊಂದಿಗೆ ಕೋಟೆಕಾರು ಸಂಕೋಳಿಗೆ ಶ್ರೀ. ಕೃಷ್ಣ ಸದನ ಹಾಲ್ನಲ್ಲಿ ನಡೆಯುವ ಮುದುವೆ ಕಾರ್ಯಕ್ರಮಕ್ಕೆ ಹೋಗುವರೇ ಬಸ್ಸಿನಿಂದ ಇಳಿದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಾ ಹಾಲ್ ಬಳಿ 14-00 ಗಂಟೆ ಸುಮಾರಿಗೆ ತಲುಪುತ್ತಿದ್ದಂತೆ ಕೋಟೆಕಾರು ಬೀರಿ ಕಡೆಯಿಂದ ರಾ.ಹೆ. 66 ರಲ್ಲಿ ತಲಪಾಡಿ ಕಡೆಗೆ ಕೆಎ 19 ಎಮ್‌ಎ 7775 ನೇ ನಂಬ್ರ ಕಾರನ್ನು ಅದರ ಚಾಲಕ ಅತೀವೇಗ ಹಾಗೂ ತೀರಾ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿಗೆ ಡಿಕ್ಕಿ ಹೊಡೆದನು. ಈ ಅಪಘಾತದಿಂದ ಪಿರ್ಯಾದಿಯ ಎಡಕಾಲಿನ ಪಾದಕ್ಕೆ ಹಾಗೂ ಕೋಲು ಕಾಲಿಗೆ ತೀವ್ರ ಸ್ವರೂಪದ ಗಾಯಾಗಿರುತ್ತದೆ. ಗಾಯಾಳು ಪಿರ್ಯಾದಿಯು ತೊಕ್ಕೊಟ್ಟು ನೇತಾಜಿ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಸಲುವಾಗಿ ದಾಖಲಾಗಿದ್ದು. ಈ ಸಮಯ ಕಾರು ಚಾಲಕ ಖರ್ಚಿಗೆ ನೀಡುವುದಾಗಿ ತಿಳಿಸಿದ್ದು, ಬಳಿಕ ಹಣ ನೀಡದೇ ಇದ್ದುದರಿಂದ ದೂರು ನೀಡಿರುವುದಾಗಿದೆ.
No comments:
Post a Comment