ದೈನಂದಿನ ಅಪರಾದ ವರದಿ.
ದಿನಾಂಕ 19.06.2014 ರ 06:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 1 |
ಮನೆ ಕಳವು ಪ್ರಕರಣ | : | 1 |
ಸಾಮಾನ್ಯ ಕಳವು | : | 1 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 1 |
ರಸ್ತೆ ಅಪಘಾತ ಪ್ರಕರಣ | : | 1 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 1 |
ಇತರ ಪ್ರಕರಣ | : | 1 |
1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 17-6-2014 ರಂದು ಸಂಜೆ 7-00 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು ಬೋಂದೆಲ್-ಕಾವೂರು ರಸ್ತೆಯಲ್ಲಿ ಬೋಂದೆಲ್ ಎಂಬಲ್ಲಿ ಪಿರ್ಯಾದಿದಾರರಾದ ಶ್ರೀ ಆಶ್ವಿನ್‌ರವರು ಮೋಟಾರು ಸೈಕಲ್ ನಂಬ್ರ: ಕೆಎ-19-ಇಎಚ್-8172 ನೇದರಲ್ಲಿ ಸಹ ಸವಾರರಾದ ತುಕರಾಮ್ ಇವರನ್ನು ಕುಳ್ಳಿರಿಸಿಕೊಂಡು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸಮಯ ಅವರ ಎದುರಿನಿಂದ ಅಂದರೆ ಕಾವೂರು ಕಡೆಯಿಂದ ಕೆಎ-19-ಎಎ-2535 ನೇ ಬಸ್ಸಿನ ಚಾಲಕನು ಬಸ್ಸನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಪಿರ್ಯಾದಿದಾರರು ಮತ್ತು ಸಹ ಸವಾರ ತುಕರಾಮ ಇವರು ರಸ್ತೆಗೆ ಬಿದ್ದು, ಪಿರ್ಯಾದಿದಾರರಿಗೆ ಬಲಕಾಲಿನ ಮೊಣ ಗಂಟಿಗೆ ಮೂಳೆ ಮುರಿತದ ಗಾಯ, ಬಲ ಕೈಯ ಬೆರಳುಗಳಿಗೆ ಗಾಯ, ಬಲ ಎದೆಗೆ ಗಾಯ ಆಗಿದ್ದು, ಸಹ ಸವಾರ ತುಕರಾಮನಿಗೆ ಬಲ ಕಣ್ಣಿನ ಬಳಿ, ತಲೆಗೆ ರಕ್ತ ಗಾಯ ಆಗಿದ್ದು, ಗಾಯಾಳುಗಳನ್ನು ಬಸ್ಸಿನ ಚಾಲಕನು ಚಿಕಿತ್ಸೆ ಬಗ್ಗೆ ಮಂಗಳೂರು ಎ.ಜೆ ಆಸ್ಪತ್ರೆಯಲ್ಲಿ ದಾಖಲುಪಡಿಸಿರುವುದಾಗಿದೆ.
2.ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ರಮಣಿ ರವರು ಆರೋಪಿ ರಘವೀರ ರವರೊಂದಿಗೆ ಮದುವೆಯಾಗಿ 30 ವರ್ಷಗಳಾಗಿದ್ದು, ಆರೋಪಿಯು ದಿನಾಲೂ ಶರಾಬು ಕುಡಿಯಲು ಪಿರ್ಯಾದಿಯವರಲ್ಲಿ ಹಣ ಕೇಳಿ ಕೊಡದಿದ್ದರೆ ಹೊಡೆದು ಹಣ ತೆಗೆದುಕೊಂಡು ಹೋಗುತ್ತಿದ್ದರು. ದಿನಾಂಕ 18-06-2014 ರಂದು ಬೆಳಿಗ್ಗೆ 8.30 ಗಂಟೆಗೆ ಪಿರ್ಯಾದಿದಾರರು ಕೆಲಸಕ್ಕೆಂದು ಹೊರಟು ಆರ್.ಟಿ.ಓ ಬಳಿಯ ಮಕಾನ್ ಬಳಿ ತಲುಪಿದಾಗ ಅಲ್ಲಿ ನಿಂತಿದ್ದ ಆರೋಪಿ ಹಣ ಕೊಡು ಎಂದು ಕೇಳಿದಾಗ ಪಿರ್ಯಾದಿದಾರರು ಇಲ್ಲವೆಂದು ಹೇಳಿದ್ದು, ಆಗ ಆರೋಪಿಯು ಕೈಯಿಂದ ಮುಖಕ್ಕೆ ಗುದ್ದಿ ಮೆಲ್ತುಟಿಗೆ ಗಾಯ ಮಾಡಿ, ಪಿರ್ಯಾದಿದಾರರು ಬೊಬ್ಬೆ ಹಾಕಿದಾಗ ಆರೋಪಿಯು ಓಡಿ ಹೋಗಿರುತ್ತಾರೆ.
3.ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22-04-2011 ರಂದು ಪಿರ್ಯಾದಿದಾರರಾದ ಶ್ರೀಮತಿ ಲಾವಣ್ಯ ರೈ ರವರು ಆರೋಪಿ ನವೀನ್ ಆರ್ ಶೆಟ್ಟಿ ಎಂಬುವರೊಂದಿಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಹಿಂದೂ ಸಂಪ್ರಾದಾಯದಂತೆ ಮದುವೆಯಾಗಿದ್ದು, ಆ ಸಮಯ ಪಿರ್ಯಾದಿದಾರರ ಅಣ್ಣ ಆರೋಪಿ ನವೀನ್ ಆರ್ ಶೆಟ್ಟಿ ಗೆ 1 ಚಿನ್ನದ ಭ್ರಸ್ ಲ್ಶೆಟ್, 1 ಚೈನು, 1 ಉಂಗುರ, ಮತ್ತು ಪಿರ್ಯಾದಿಗೆ 125 ಪವನ್ ಚಿನ್ನ ಹಾಕಿರುವುದಲ್ಲದೆ ಮದುವೆಯ ಎಲ್ಲಾ ಖರ್ಚನ್ನು ಪಿರ್ಯಾದಿಯ ಅಣ್ಣನವರೇ ಭರಿಸಿರುತ್ತಾರೆ. ಮದುವೆಯ ನಂತರ ಗಂಡನ ಮನೆಯಾದ ಜಕ್ರಿಬೆಟ್ಟು ಕುಂಟುಪ್ಮಣಿ ಮುಡಿಪು ಬೋಳಿಯಾರ್ ಎಂಬಲ್ಲಿ ಆರೋಪಿತರೊಂದಿಗೆ ವಾಸವಾಗಿದ್ದು, ದಿನಂಪ್ರತಿ ವಿನಾಕಾರಣ ಹೊಡೆದು, ಕೆಟ್ಟ ಶಬ್ದಗಳಿಂದ ಬೈದು ಪಿರ್ಯಾದಿಗೆ ಮಾನಸಿಕ ಹಾಗೂ ದೈಹಿಕ ಚಿತ್ರಹಿಂಸೆ ನೀಡುತ್ತಿದ್ದರು. ನಂತರ ಆರೋಪಿ ಆರೋಪಿ ನವೀನ್ ಆರ್ ಶೆಟ್ಟಿ ಯು ನಿನ್ನ ಮದುವೆ ಹೇಗಾಗಿದೆಯೋ ಆಗೆಯೇ ಅದ್ದೂರಿಯಾಗಿ ನನ್ನ ತಮ್ಮನ ಮದುವೆಯನ್ನು ತಾನು ಎದುರು ನಿಂತು, ನೀನು ಹಣ ಖರ್ಚು ಮಾಡಿ ಮದುವೆ ಮಾಡಬೇಕೆಂದು ಪಿರ್ಯಾದಿದಾರರನ್ನು ಬೆದರಿಸುತ್ತಿದ್ದರು. ಅದಲ್ಲದೇ ಆರೋಪಿ ಆರೋಪಿ ನವೀನ್ ಆರ್ ಶೆಟ್ಟಿಯು ಪಿರ್ಯಾದಿಯವರ ಚಿನ್ನವನ್ನು ಅಡವಿಟ್ಟು ತವರು ಮನೆಯಿಂದ 10 ಲಕ್ಷ ವರದಕ್ಷಿಣೆ ಹಣವನ್ನು ತರಬೇಕೆಂದು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರು. ಅಲ್ಲದೇ ಇತ್ತೀಚೆಗೆ ಇತರ ಆರೋಪಿಗಳು ಸೇರಿಕೊಂಡು ಆರೋಪಿ ಆರೋಪಿ ನವೀನ್ ಆರ್ ಶೆಟ್ಟಿ ಯವರಿಗೆ ಅಕ್ರಮವಾಗಿ ದಕ್ಷಾಶೆಟ್ಟಿ ಎಂಬುವಳೊಂದಿಗೆ ವಿವಾಹ ಮಾಡಿದ್ದು, ಪಿರ್ಯಾದಿಯವರಿಗೆ ಇದುವರೆಗೂ ವಿಚ್ಚೇದನ ನೀಡಿರುವುದಿಲ್ಲ.
4.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 21-04-2014 ರಂದು ಆರೋಪಿತನಾದ ಉದಯ್ ಬಳ್ಳಾಲ್ ಬಾಗ್ ಎಂಬವನು ಇತರರ ಜೊತೆಯಲ್ಲಿ ಪಿರ್ಯಾದಿದಾರರಾದ ಶ್ರೀ ಶೈಲೇಶ್ ರವರ ಚಿಲಿಂಬಿಯಲ್ಲಿರುವ ಮಲರಾಯ ದೈವಸ್ಥಾನದ ಬಳಿಯಿರುವ ಅಕ್ಷಯ ಪೈನಾನ್ಸ್ ಗೆ ಕೈ ಯಲ್ಲಿ ಮಾರಕಾಯುಧಗಳಿಂದ ಹಿಡಿದು ಬಂದು ಪಿರ್ಯಾದಿದಾರರ ಪೈ ನಾನ್ಸ್ ಕಚೇರಿಗೆ ಅಕ್ರಮ ಪ್ರವೇಶ ಮಾಡಿ ಬೆದರಿಸಿ "ರೂಪಾಯಿ 6.0 ಲಕ್ಷ ನೀಡದೇ ಇದ್ದರೆ ನಿನ್ನನ್ನು ಕೊಲೆ ಮಾಡುವುದಾಗಿ ಹೇಳಿದಲ್ಲದೇ" ಕಚೇರಿಯಲ್ಲಿ ಹಾಜರಿದ್ದ ಪಿರ್ಯಾದಿಯ ಹೆಂಡತಿ ಸವಿತರವರಲ್ಲಿ ಕೂಡಾ ಹಣ ಕೊಡದಿದ್ದರೆ ನಿನ್ನ ಗಂಡನನ್ನು ಮುಗಿಸಿ ಬಿಡುತ್ತೆನೆ ಎಂದು ಜೀವ ಬೆದರಿಕೆ ಹಾಕಿರುತ್ತಾರೆ. ಈ ವೇಳೆಗೆ ಕಛೇರಿಯ ಸಿಬ್ಬಂದಿಗಳಾದ ಆಲ್ವಿನ್ , ಸುನೀಲ್, ಹರೀಶ್ ,ಅಮರ್ ಇವರುಗಳು ಕಛೇರಿಯಲ್ಲಿ ಕರ್ತವ್ಯದಲ್ಲಿದ್ದರು. ನಂತರ 07-06-2014 ರಂದು ಸಂಜೆ ಸುಮಾರು 7-00 ಗಂಟೆಯ ಸಮಯಕ್ಕೆ ಆರೋಪಿಯು ಪಿರ್ಯಾದಿದಾರರ ಮೊಬೈಲ್ ಗೆ ಪೋನ್ ಮಾಡಿ ದಿನಾಂಕ 11-06-2014 ರೊಳಗೆ ಹಣ ಕೊಡದಿದ್ದರೆ ನಿನ್ನನ್ನು ಹಾಗೂ ಹೆಂಡತಿ ಮಕ್ಕಳನ್ನು ಕೊಲೆ ಮಾಡುವುದಾಗಿ, ಹಾಗೂ ನೀವು ಹೊಂದಿದ್ದ ಪೈನಾನ್ಸ್ ನ್ನು ಮುಚ್ಚಿಸಿ ಬಿಡುತ್ತೇನೆ ಹಾಗೂ ಪೇಪರಿನಲ್ಲಿ ಹಾಕುತ್ತೇನೆ ಎಂಬಿತ್ಯಾದಿ ನುಡಿದಿರುತ್ತಾರೆ. ಈ ಬಗ್ಗೆ ಲೋಹಿತ್ ಎಂಬವನು ಆರೋಪಿತರ ಜೊತೆ ಮಾತುಕತೆ ನಡೆಸಿ ಮುಂದಕ್ಕೆ ಪಿರ್ಯಾದಿಗೆ ತೊಂದರೆ ಕೊಡದಂತೆ ಆರೋಪಿ ಉದಯನಿಗೆ ಬುದ್ದಿ ಮಾತನ್ನು ಹೇಳಿದ್ದು ಸದ್ರಿ ಕೃತ್ಯದ ಬಗ್ಗೆ ಪಿರ್ಯಾದಿಯನ್ನು ನೀಡದೇ ಇದ್ದು ಈಗ ಆರೋಪಿತ ಮತ್ತೆ ತೊಂದರೆ ಕೊಡುವ ಉದ್ದೇಶದಿಂದ ತಡವಾಗಿ ಈ ಪಿರ್ಯಾದಿಯನ್ನು ನೀಡುತ್ತಿದ್ದು ಇದಕ್ಕೆ ಬೋಳೂರು ನಿವಾಸಿಯಾದ ಸ್ವರೂಪ್ ಎಂಬವರಿಗೆ ಅವರ ಸಿರಾಸ್ಥಿಯ ಮೇಲೆ ಅಡವಿಟ್ಟು ಪಿರ್ಯಾದಿದಾರರು ಸಾಲ ಕೊಡದೇ ಇದ್ದುದರಿಂದ ಆರೋಪಿಗಳು ಅಕ್ರಮ ಕೂಟ ಸೇರಿಕೊಂಡು, ಕಛೇರಿಗೆ ಅಕ್ರಮ ಪ್ರವೇಶಿಸಿ, ಸಮಾನೋದ್ದೇಶಿತರಾಗಿ ಜೀವ ಬೆದರಿಕೆ ಒಡ್ಡಿರುತ್ತಾರೆ.
5.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ವಿಲೇಟ್ ಡಿ'ಸೋಜಾ ರವರ ಗಂಡ ರೋಶನ್ ಡಿ;ಸೋಜ (39) ಎಂಬವರು ಖಾಸಗಿ ಸಂಸ್ಥೆಯಲ್ಲಿ ನಿರ್ದೇಶಕರಾಗಿದ್ದು ಪಾಲು ದಾರಿಕೆಯಲ್ಲಿ ಆರ್.ಡಿ.ಕಲೆಕ್ಷನ್ ವ್ಯವಹಾರ ನಡೆಸುತ್ತಿದ್ದವರು, ಸದ್ರಿ ಸಂಸ್ಥೆ ನಷ್ಟ ಹೊಂದಿದ ಕಾರಣ ಮಾನಸಿಕವಾಗಿ ನೊಂದಿದ್ದು ದಿನಾಂಕ 16-06-2014 ರಂದು ಬೆಳಿಗ್ಗೆನ ಸಮಯ ತಾನು ಬೆಂಗಳೂರಿಗೆ ಹೋಗುವುದಾಗಿ ತಿಳಿಸಿ ಹೋಗಿದ್ದು ಮದ್ಯಾಹ್ನ 12-30 ಗಂಟೆಗೆ ಪಿರ್ಯಾದುದಾರರ ಮೊಬೈಲ್ ಮೂಲಕ 2 ದಿನದೊಳಗೆ ಬರುವುದಾಗಿ ತಿಳಿಸಿ ನಂತರ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಸಂಪರ್ಕಕ್ಕೆ ಬಾರದೇ ಕಾಣೆಯಾಗಿರುತ್ತಾರೆ.
6.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ತಾಲೂಕು ಕೆಲಿಂಜಾರು ಗ್ರಾಮದ ಕಟ್ಟೆಮಾರ್ ಎಂಬಲ್ಲಿ ದಿನಾಂಕ: 18/06/2014 ರಂದು 03.00 ಗಂಟೆಯಿಂದ 03.15 ಗಂಟೆಯ ಮಧ್ಯೆ ಪಿರ್ಯಾದಿದಾರರಾದ ಶ್ರೀ ಪುನೀತ್ ಕುಮಾರ್ ಕೆ.ಎಸ್. ರವರ ಮನೆ ನಾಯಿ ಬೊಗಳುವುದನ್ನು ಕೇಳಿ ಹೊರ ಬಂದಾಗ ಮನೆಯ ಸಮೀಪವಿರುವ ಹಟ್ಟಿಯೊಳಗೆ ಅಕ್ರಮ ಪ್ರವೇಶ ಮಾಡಿದ 4 ಮಂದಿ ತಡೆದವರಿಗೆ ಗಾಯ ಯಾ ಮರಣವನ್ನುಂಟು ಮಾಡುವ ಸಿದ್ಧತೆಗಳೊಂದಿಗೆ ಇಬ್ಬರು ವ್ಯಕ್ತಿಗಳು ಕೈಯಲ್ಲಿ ತಲವಾರನ್ನು ಹಿಡಿದುಕೊಂಡು ಹಟ್ಟಿಯಲ್ಲಿದ್ದ ಸುಮಾರು 50,000/- ರೂಪಾಯಿ ಬೆಲೆಯ 4 ದನಗಳನ್ನು ಹಿಂಸೆಯಾಗುವ ರೀತಿ ಕೈಕಾಲು ಕಟ್ಟಿ, ಎಳೆದುಕೊಂಡು ಹೋಗಿ ಅವರು ರಸ್ತೆಯಲ್ಲಿ ನಿಲ್ಲಿಸಿ ಬಂದಿದ್ದ ಬಿಳಿ ಬಣ್ಣದ ಟಾಟಾ ಸುಮೋದಲ್ಲಿ ಹಾಕಿ ಕಳವು ಮಾಡಿಕೊಂಡು ಹೋಗಿರುವುದಾಗಿದೆ.
7.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 17-06-2014 ರ ಸಂಜೆ 5-30 ಗಂಟೆಯಿಂದ ದಿನಾಂಕ 18-06-2014 ರ ಬೆಳಿಗ್ಗೆ 10-00 ಗಂಟೆ ಮದ್ಯೆ ಯಾರೋ ಕಳ್ಳರು ಕುಳಾಯಿಯಲ್ಲಿರುವ ಅಖಿಲ ಭಾರತ ಹಿಂದೂ ಯುವಕ್ ಸಬಾ ಕಾರ್ಯಾಲಯದ ಬಾಗಿಲನ್ನು ಬಲಪ್ರಯೋಗದಿಂದ ತೆರೆದು ಒಳ ಪ್ರವೇಶಿಸಿ ಪಕ್ಷದ ಸದಸ್ಯತ್ವಕ್ಕೆ ಸೇರಿದ ರೂ 38000/- ಹಾಗೂ ದೈನಂದಿನ ಚಟುವಟಿಕೆಗೆ ಇರಿಸಿದ್ದ ರೂ 4000/- ಒಟ್ಟು 42000/- ರೂನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.
No comments:
Post a Comment