ದೈನಂದಿನ ಅಪರಾದ ವರದಿ.
ದಿನಾಂಕ 24.06.2014 ರ 06:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 1 |
ಹಲ್ಲೆ ಪ್ರಕರಣ | : | 2 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 2 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 1 |
ಇತರ ಪ್ರಕರಣ | : | 0 |
1.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 21/06/2014 ರಂದು ಸಮಯ ಸಂಜೆ 17:00 ಗಂಟೆಗೆ ಮಂಗಳೂರು ನಗರದ ಪಂಪ್ ವೆಲ್ ಎಂಬಲ್ಲಿ ಕರ್ನಾಟಕ ಬ್ಯಾಂಕ್ ಎದುರು ಕೆಎ-19-ಎಂ.ಬಿ. -6793 ನಂಬ್ರದ ಕಾರನ್ನು ಅದರ ಚಾಲಕನು ನಂತೂರು ಕಡೆಯಿಂದ ಪಂಪ್ ವೆಲ್ ಕಡೆಗೆ ಹಾದು ಹೋಗುವ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಬದಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರ ಮಗಳು 11 ವರ್ಷ ಪ್ರಾಯದ ಲಕ್ಕಮ್ಮ ಎಂಬವಳಿಗೆ ಡಿಕ್ಕಿ ಪಡಿಸಿದ ಪರಿಣಾಮ ಲಕ್ಕಮ್ಮಳ ಮುಖದ ಗದ್ದಕ್ಕೆ ಮತ್ತು ಬಲಕೈ ರಿಸ್ಟ್ ಗೆ ರಕ್ತಗಾಯವಾಗಿದ್ದು, ಗಾಯಾಳು ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಆರೋಪಿಯು ಗಾಯಾಳುವಿಗೆ ಚಿಕಿತ್ಸಾ ವೆಚ್ಚವನ್ನು ನೀಡುವುದಾಗಿ ಹೇಳಿ ಬಳಿಕ ನಿರಾಕರಿಸಿದ್ದರಿಂದ ದೂರು ನೀಡಲು ವಿಳಂಭವಾಗಿದ್ದು,. ಆರೋಪಿಯು ಅಪಘಾತದ ಮಾಹಿತಿಯನ್ನು ಪೊಲೀಸ್ ಠಾಣೆಗೆ ನೀಡಿರುವುದಿಲ್ಲ.
2.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಅಬೂಬಕ್ಕರ್ ಸಿದ್ದಿಕ್ ರವರು ಬಸ್ಸು ಕೆ,ಎ 19 ಬಿ/5955 GOLDEN TRAVELS ನಲ್ಲಿ ನಿರ್ವಾಹಕ ಹಾಗೂ ಕ್ವಾಂಟ್ರೆಕ್ಟ್ ಮಾಲಕರಾಗಿದ್ದು. ದಿನಾಂಕ 22/06/2014 ರಂದು ಸಂಜೆ 16-35 ರ ವೇಳೆಗೆ ಜೋಕಟ್ಟೆ ಕಡೆಯಿಂದ ಬೈಕಂಪಾಡಿ ಕಡೆಗೆ ತನ್ನ ಬಾಬ್ತು ಬಸ್ಸಿನಲ್ಲಿ ಪ್ರಯಾಣಿಕರನ್ನು ತುಂಬಿಸಿಕೊಂಡು ಬರುತ್ತಿರುವ ಸಮಯ ಬೈಕಂಪಾಡಿಯ ಕೈಗಾರಿಕಾ ಪ್ರದೇಶದ ಶಬರಿ ಗ್ಯಾರೇಜ್ ಬಳಿ ಬಸ್ಸಿನಿಂದ ಪ್ರಯಾಣಿಕರನ್ನು ಇಳಿಸುವ ಸಲುವಾಗಿ ಬಸ್ಸನ್ನು ನಿಲ್ಲಿಸಿದಾಗ ಜೋಕಟ್ಟೆ ಕ್ರಾಸ್ ಜಂಕ್ಷನ ಕಡೆಯಿಂದ ಜೀಪು ನಂಬ್ರ MYH 4259 ನೇಯದರಲ್ಲಿ ತನಗೆ ಗುರುತು ಪರಿಚಯದ ಕೂಳೂರು ರಾಯಿಕಟ್ಟೆ ನಿವಾಸಿ ಹಸನಬ್ಬ ಮತ್ತು ಅವರ ತಮ್ಮ ಹನೀಫ್ ಹಾಗೂ SM MUBARK ಬಸ್ಸಿನ ಮಾಲಕ ಇಚ್ಚಾಲಿ @ ಇಸ್ಮಾಯಿಲ್ ರವರು ತಂದು ಎದುರುಗಡೆಯಿಂದ ಸದ್ರಿ ಜೀಪನ್ನು ಬಸ್ಸಿಗೆ ಅಡ್ಡವಾಗಿ ನಿಲ್ಲಿಸಿ ಬಸ್ಸಿನ ಒಳಗೆ ಇದ್ದ ಪಿರ್ಯಾದಿದಾರರನ್ನು ಬಸ್ಸಿನಿಂದ ಹೊರಗೆ ಎಳೆದು ಆ ಫೈಕಿ ಹನೀಫ್ ರವರು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದಿರುವುದಲ್ಲದೆ. ಅವರ ಜೊತೆಯಿದ್ದ ಹಸನಬ್ಬ ಮತ್ತು ಇಚ್ಚಾಲಿ @ ಇಸ್ಮಾಯಿಲ್ ರವರು ಕೂಡಾ ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದು ಕಾಲಿನಿಂದ ತುಳಿದು ಪಿರ್ಯಾದಿದಾರರಿಗೆ ಜೀವ ಬೆದರಿಗೆ ಒಡ್ಡಿರುತ್ತಾರೆ.
3.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಕವಿತಾ ರವರ ತಂದೆ ಮಂಜುನಾಥ ಎಂಬವರು ದಿನಾಂಕ 21-06-2014 ರಂದು ಬೆಳಿಗ್ಗೆ 08-30 ಗಂಟೆಗೆ ಮನೆಯಿಂದ ಮಂಗಳೂರು ಹಳೆ ಬಸ್ ಸ್ಟಾಂಡ್ ಗೆ ಅವರ ಕಾರು ನಂಬ್ರ ಕೆ.ಎ 19-ಝೆಡ್-6245 ನೇ ಇಂಡಿಕಾ ಕಾರಿನಲ್ಲಿ ಹೋಗಿ ಸಂಜೆ 3-00 ಗಂಟೆಗೆ ಚಿಕ್ಕಮಗಳೂರಿಗೆ ಮಂಜುನಾಥ ಎಂಬವರ ಬಾಡಿಗೆಗೆ ಹೋಗಿ ಸಂಜೆ 7-00 ಗಂಟೆಗೆ ಚಿಕ್ಕಮಗಳೂರಿನಿಂದ ವಾಪಾಸು ಹೊರಟವರು ಪೋನ್ ಸ್ವಿಚ್ ಆಫ್ ಆಗಿದ್ದು ಈ ತನಕ ಮನೆಗೆ ಬಾರದೇ ಕಾರು ಸಮೇತ ಕಾಣೆಯಾಗಿರುತ್ತಾರೆ.
4.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ.23-6-2014 ರಂದು ಸಂಜೆಯ ಹೊತ್ತಿಗೆ ಫಿರ್ಯಾದಿದಾರರಾದ ಶ್ರೀಮತಿ ಶಾರದಾ ರವರು ಕೋಟೆಕಾರ್ ನೂರ್‌ಮಹಲ್ ಬಳಿ ವಾಸವಾಗಿರುವ ತನ್ನ ತಮ್ಮನ ಮನೆಗೆ ಹೋಗಿ ವಾಪಾಸು ತನ್ನ ಮನೆಯ ಕಡೆಗೆ ನಡೆದುಕೊಂಡು ಬರುತ್ತಾ ಸಂಜೆ ಸುಮಾರು 6-30 ಗಂಟೆಯ ಹೊತ್ತಿಗೆ ಮಂಗಳೂರು ತಾಲೂಕು ಸೋಮೇಶ್ವರ ಗ್ರಾಮದ ಸೋಮೇಶ್ವರ ಪಂಚಾಯತ್ ಕಛೇರಿಯ ಬಳಿಗೆ ತಲುಪುವಷ್ಟರಲ್ಲಿ ಫಿರ್ಯಾದಿದಾರರ ಹಿಂದಿನಿಂದ ಬಂದ ಉಳ್ಳಾಲ ಒಂಭತ್ತುಕೆರೆ ವಾಸಿ ಶರತ್ ಎಂಬ ವ್ಯಕ್ತಿಯು ಫಿರ್ಯಾದಿದಾರರನ್ನು ಕರೆದು ನಿಲ್ಲಿಸಿ ಸೋಮೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆ ಯಾವುದು ಎಂದು ಕೇಳಿದಾಗ ಫಿರ್ಯಾದಿದಾರರು ಅವರಿಗೆ ದಾರಿ ತೋರಿಸುವ ಸಮಯ ಸದ್ರಿ ವ್ಯಕ್ತಿಯು ಫಿರ್ಯಾದಿದಾರರು ಕುತ್ತಿಗೆಗೆ ಧರಿಸಿದ್ದ ಸುಮಾರು 30 ಸಾವಿರ ಬೆಲೆ ಬಾಳುವ ಸುಮಾರು 12 ಗ್ರಾಂ ತೂಕದ ಚಿನ್ನದ ಕನಕಮಾಲೆಯನ್ನು ಎಳೆದುಕೊಂಡು ಪರಾರಿಯಾಗಿರುವುದು.
5.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 23-06-2014 ರಂದು ಪಿರ್ಯಾದಿದಾರರಾದ ಶೋಭಾ ರವರು ಮನೆ ಸಾಮಾನು ತರಲು ಕೆರೆಬೈಲು ಕೊರಗಜ್ಜನಕಟ್ಟೆ ಬಳಿ ಇರುವ ಅಂಗಡಿಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಸಮಯ ಸುಮಾರು ಸಂಜೆ 7:00 ಗಂಟೆಯ ಸಮಯಕ್ಕೆ ಚೆಂಬುಗುಡ್ಡೆ ಕಡೆಯಿಂದ ತೊಕ್ಕಟ್ಟು ಕಡೆಗೆ KA-19-EK-0464 ನೇ ಮೋಟಾರು ಸೈಕಲಿನ ಚಾಲಕನು ತನ್ನ ಬಾಬ್ತು ಮೋಟಾರು ಸೈಕಲನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಎದೆಗೆ, ಎಡಕೈಯ ಮೊಣಗಂಟಿಗೆ, ಬಲಕೈ, ಸೊಂಟಕ್ಕೆ ರಕ್ತ ಬರುವ ಹಾಗೂ ಗುದ್ದಿದ ನೋವುಂಟಾಗಿದ್ದು ಅಲ್ಲದೆ ದವಡೆ ಮುಖದ ಬಳಿ ರಕ್ತ ಬರುವ ಗಾಯಾವಾಗಿರುತ್ತದೆ.
6.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 23.06.2014 ರಂದು ಪಿರ್ಯಾದುದಾರರಾದ ಶ್ರೀ ಮಧುಕೇಶವ ರವರು ಬೆಳಿಗ್ಗೆ 08:35 ಗಂಟೆಗೆ ಪಚ್ಚನಾಡಿ ಗ್ರಾಮದಲ್ಲಿರುವ 1ನೇಆಪಾದಿತರಾದ ಭಾರತಿ ಯವರ ಮನೆಗೆ ಬಟ್ಟೆ ವ್ಯಾಪಾರದ ಬಗ್ಗೆ ಹೋದಾಗ 1ನೇ ಆಪಾದಿತರು ಬಟ್ಟೆ ಖರೀದಿ ಮಾಡಿದ ವೇಳೆ ಪಿರ್ಯಾದಿದಾರರು ಅವರೊಡನೆ ಈ ಹಿಂದಿನ ಬಾಕಿ ಹಣ ಕೊಡುವಂತೆ ಹೇಳಿದಾಗ 1ನೇ ಆಪಾದಿತರು ಪಿರ್ಯಾದಿದಾರರನ್ನುದ್ದೇಶಿಸಿ 'ನಿನಗೆ ಎಂತಾ ಹಣ ಕೊಡುವುದು' ಎಂದು ಹೇಳಿ ಪಿರ್ಯಾದುದಾರರ ಬಲ ಕೆನ್ನೆಗೆ ಕೈಯಿಂದ ಹೊಡೆದಿದ್ದು ಈ ವೇಳೆ 2ನೇ ಆಪಾದಿತ ದಿನೇಶ್ ನು ಪಿರ್ಯಾದುದಾರರನ್ನುದ್ದೇಶಿಸಿ ಜಾತಿ ನಿಂದನೆ ಮಾಡಿ ಪಿರ್ಯಾದುದಾರರಿಗೆ ಕೈಯಿಂದ ಹೊಡೆದು ಕಾಲಿನಿಂದ ತುಳಿದಿದ್ದು, 3 ನೇ ಆರೋಪಿ ದಿನೇಶ ನ ತಂದೆ ಮತ್ತು 4 ನೇ ಆರೊಪಿ ದಿನೇಶನ ಸಹೋದರ ನು ಕೂಡಾ ಕೈಗಳಿಂದ ಹಲ್ಲೆ ನಡೆಸಿರುತ್ತಾರೆ.
No comments:
Post a Comment