Thursday, June 5, 2014

Daily Crime Reports 05-06-2014

ದೈನಂದಿನ ಅಪರಾದ ವರದಿ.

ದಿನಾಂಕ 05.06.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

2

ಮನೆ ಕಳವು ಪ್ರಕರಣ

:

1

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

1

ರಸ್ತೆ ಅಪಘಾತ  ಪ್ರಕರಣ

:

2

ವಂಚನೆ ಪ್ರಕರಣ        

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 03.06.2014 ರಂದು ಫಿರ್ಯಾದಿದಾರರಾದ ಶ್ರೀ ಸುಜೀತ್ ರೈ ರವರು ಕೆಲಸ ಮುಗಿಸಿ ಗ್ರಾಮಚಾವಡಿ ಕಡೆಯಿಂದ ಕಿಲ್ಲೂರು ಕಡೆಗೆ ಆಟೋ ರಿಕ್ಷಾ ನಂಬ್ರ ಕೆಎ-19ಬಿ-5104 ನೇಯದರಲ್ಲಿ ಪ್ರಯಾಣಿಸುತ್ತಾ ರಾತ್ರಿ ಸುಮಾರು 8:30 ಗಂಟೆಗೆ ಮಂಗಳೂರು ತಾಲೂಕು, ಪಾವೂರು ಗ್ರಾಮದ, ಕಿಲ್ಲೂರು ಲಕ್ಕ ಹೌಸ್ಎಂಬಲ್ಲಿಗೆ ತಲುಪುತ್ತಿದ್ದಂತೆಯೇ ಆಟೋರಿಕ್ಷಾವನ್ನು ಅದರ ಚಾಲಕ ದಯಾನಂದ ಎಂಬಾತನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಒಮ್ಮೆಲೇ ಬ್ರೇಕ್ಹಾಕಿದ ಪರಿಣಾಮ ಆಟೋರಿಕ್ಷಾವು ಎಡ ಮಗ್ಗುಲಿಗೆ ಮಗುಚಿ ಬಿದ್ದುದರ ಪರಿಣಾಮ ಆಟೋ ರಿಕ್ಷಾ ಚಾಲಕ ಆರೋಪಿ ದಯಾನಂದರವರಿಗೆ ಎಡಕಾಲಿನ ಪಾದಕ್ಕೆ ಕೀಲು ಮುರಿದ ಗಾಯವಾಗಿದ್ದು ಗಾಯಾಳುವನ್ನು ಮಂಗಳೂರು ಎ.ಜೆ. ಆಸ್ಪತ್ರೆಗೆ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ.

 

2.ಕಾವೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ನಗರದ ನಗರ ಅಪರಾಧ ವಿಭಾಗ (ಸಿ.ಸಿ.ಬಿ) ದಲ್ಲಿ ಪೊಲೀಸ್ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿರ್ಯಾದುದಾರರಾದ ಶ್ರೀ ವೆಲೆಟೈನ್ ಡಿಸೋಜಾ ರವರಿಗೆ ದಿನಾಂಕ: 04-06-2014 ರಂದು 14:00 ಗಂಟೆಯ ಸಮಯಕ್ಕೆ ದೊರೆತ ಖಚಿತ ಮಾಹಿತಿಯಂತೆ ತಮ್ಮ ಸಿ.ಸಿ.ಬಿ.ಯ ಪಿ.ಎಸ್‌.ಐ ಶ್ರೀ ಶ್ಯಾಮ್ ಸುಂದರ್‌,ಹಾಗೂ ಸಿಬ್ಬಂದಿಯವರು ಮತ್ತು ಪಂಚರುಗಳೊಂದಿಗೆ ಮಾನ್ಯ ನ್ಯಾಯಾಲಯದ ಅಧಿಕಾರವ್ಯಾಪ್ತಿಗೊಳಪಟ್ಟ ಕಾವೂರು ಪೊಲೀಸ್ಠಾಣಾ ಸರಹದ್ದಿನ ಮಂಗಳೂರು ತಾಲೂಕು ದೆರೇಬೈಲು ಗ್ರಾಮದ ಪ್ರಶಾಂತ್ನಗರ ಬಡಾವಣೆಯ 1 ನೇ ಕ್ರಾಸ್ರಸ್ತೆಯ ಬಳಿಯಲ್ಲಿನ ಸಾರ್ವಜನಿಕ ಸ್ಥಳದಲ್ಲಿ 15:15 ಗಂಟೆಯ ಸಮಯಕ್ಕೆ ಧಾಳಿ ಮಾಡಿದ ಸಂದರ್ಭ ಓಡಿ ಹೋಗುತ್ತಿದ್ದ 4-5 ಜನ ಆರೋಪಿಗಳಲ್ಲಿ ಮೂವರು ಆರೋಪಿಗಳಾದ ಸುಶೀಲ್ಕುಮಾರ್‌, ಪುನೀತ್‌.ಕೆ.ಪಿ., ಮತ್ತು ದೀಕ್ಷಿತ್ಪೂಜಾರಿ ಎಂಬವರುಗಳನ್ನು ಬೆನ್ನಟ್ಟಿ ಹಿಡಿದು ವಶಕ್ಕೆ ತೆಗೆದುಕೊಂಡು ವಿಚಾರಿಸಿದಾಗ್ಯೆ ಆರೋಪಿಗಳು ಭೂಗತ ಪಾತಕಿ  ವಿಕ್ಕಿ ಶೆಟ್ಟಿಯ ಆದೇಶದಂತೆ ಮಂಗಳೂರು ನಗರದ ಶ್ರೀಮಂತ ವ್ಯಕ್ತಿಯೊಬ್ಬರ ಸಂಪತ್ತನ್ನು ದರೋಡೆ ಮಾಡುವುದು ಅಲ್ಲದೇ ಭೂಗತ ಪಾತಕಿ ವಿಕ್ಕಿ ಶೆಟ್ಟಿಯ ಸಹಚರನಾದ ಬಿಜೈ ರಾಜನನ್ನು ಕೊಲೆ ಮಾಡಿದ ಆರೋಪಿಗಳ ಪೈಕಿ ಚಂದು @ ಚಂದ್ರಹಾಸ ಶೆಟ್ಟಿ ಹಾಗೂ ಭರತೇಶ್ಎಂಬವರನ್ನು ಕೊಲೆ ಮಾಡುವ ಬಗ್ಗೆ ಸಮಾನ ಉದ್ದೇಶದಿಂದ ಪರವಾನಿಗೆಯನ್ನು ಹೊಂದಿರದ  ಮಾರಕಾಯುಧವಾದ  ಸಜೀವ 5 ಮದ್ದುಗುಂಡುಗಳನ್ನು ಲೋಡ್ಮಾಡಿಕೊಂಡಿದ್ದ ಪಿಸ್ತೂಲ್ಒಂದನ್ನು ಹಾಗೂ ಮಾರಕಾಸ್ತ್ರವಾದ ಎರಡು ಚೂರಿಗಳು, ಒಂದು  ಪ್ಯಾಕೇಟ್ಮೆಣಸಿನ ಹುಡಿ, ಮತ್ತು  ಮದ್ದುಗುಂಡುಗಳನ್ನು ಲೋಡ್ಮಾಡುವ ಪಿಸ್ತೂಲಿನ ಮ್ಯಾಗ್ಸೀನ್ಒಂದು ಹಾಗೂ ಆರೋಪಿಗಳು ಸಂಚಿಗೆ ಬಳಸಿದ  ಒಂದು ಕಾರು ,ಒಂದು ಮೋಟಾರು ಸೈಕಲ್ಹಾಗೂ ಒಟ್ಟು 4 ಮೊಬೈಲ್ಪೋನ್ಗಳನ್ನು ಕ್ರಮದಂತೆ ಸ್ವಾಧೀನಪಡಿಸಿಕೊಂಡು ಆರೋಪಿಗಳ ದಸ್ತಗಿರಿ ಕ್ರಮವನ್ನು ಜರುಗಿಸಿದ್ದು, ಆರೋಪಿಗಳ ಪೈಕಿ ಮಂಜುನಾಥ @ ಮಂಜು @ ಕರಿ ಮಂಜ ಹಾಗೂ ಮಂಜುನಾಥನ ಸ್ನೇಹಿತನಾದ ಮತ್ತೊಬ್ಬ ಆರೋಪಿಯು ತಲೆ ಮರೆಸಿಕೊಂಡಿರುವುದಾಗಿದೆ. ಸರಹದ್ದಿನ ಆಧಾರದ ಮೇಲೆ ಸ್ವಾದೀನಪಡಿಸಿಕೊಂಡಿರುವ ಸೊತ್ತುಗಳು ಮತ್ತು ಆರೋಪಿಗಳನ್ನು ಕಾವೂರು ಠಾಣೆಗೆ ಮುಂದಿನ ಕ್ರಮದ ಹಸ್ತಾಂತರಿಸಿರುವುದಾಗಿದೆ.

 

3.ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 04-06-2014 ರಂದು ಸಂಜೆ 5-30 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀಮತಿ ಸುಂದರಿ ರವರು ತನ್ನ ಗಂಡ ಚಂದ್ರ ಶೇಖರ ಹಾಗೂ ಚಂದ್ರಶೇಖರ ರವರ ಅಕ್ಕ ಸುಮತಿ ಹಾಗೂ ತಂಗಿ ವನಜಾರೊಂದಿಗೆ ಮಾತನಾಡುತ್ತಿರುವಾಗ ತನ್ನ ನೆರೆಮನೆಯ ನಿವಾಸಿ ಪಿರ್ಯಾದಿದಾರರ ಅಕ್ಕ ಮೋಹಿನಿಯವರ ಮಗ ಪ್ರವೀಣ್ ಕುಮಾರ್ ಎಂಬಾತನು ಏಕಾಏಕಿ ಮನೆಗೆ ಬಂದು ಕುಡಿದ ಅಮಲಿನಲ್ಲಿ ಚಂದ್ರಶೇಖರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿದಾರರಿಗೆ ಕೈಯಿಂದ ಹಲ್ಲೆ ನಡೆಸಿ ಅವರ ಗಂಡನಿಗೆ ಹಲ್ಲೆ ನಡೆಸಲು ಮುಂದಾದಾಗ ಶ್ರೀಮತಿ ಮೋಹಿನಿರವರು ಅಡ್ಡ ಬಂದಿದ್ದು, ಆ ಸಮಯ ಮೋಹಿನಿರವರಿಗೂ ಕೂಡಾ ಕೈಯಿಂದ ಹಲ್ಲೆ ನಡೆಸಿ, ಚಂದ್ರಶೇಖರನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಜೀವಬೆದರಿಕೆ ಒಡ್ಡಿರುವುದಾಗಿದೆ.

 

4.ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 03-06-2014 ರಂದು 18-15 ಗಂಟೆಯಿಂದ ದಿನಾಂಕ 04-06-2014ರಂದು ಬೆಳಿಗ್ಗೆ 09-30 ಗಂಟೆಯ ಮದ್ಯ ಅವಧಿಯಲ್ಲಿ ಯಾರೋ ಕಳ್ಳರು ಮಂಗಳೂರು ನಗರದ ರೊಜಾರಿಯೋ ಶಾಲೆಯ ಹಿಂಬದಿ ನಿಲೇಶ್ವಲ್ಯ ರಸ್ತೆಯಲ್ಲಿರುವ ಪಿರ್ಯಾದಿದಾರರಾದ ಶ್ರೀ ಬಶೀರ್ ಬಿ. ರವರ ಬಾಬ್ತು ಡೋರ್ ನಂ. 20-16-1086,1087 ರ ವಿಡಿಯೋಕೊನ್ ಮತ್ತು ಇತರ ಕಂಪನಿಗಳ ಎಲೆಕ್ರೋನಿಕ್ಸ್ ಸೊತ್ತುಗಳನ್ನು ದಾಸ್ತಾನು ಇಡಲಾಗಿದ್ದ ಗೋಡಾನ ಕಿಟಕಿಯ ಸ್ಲೈಡ್ ಗ್ಲಾಸ್ ಹೊಡೆದು ಕಿಟಕಿಯ ಸರಳು ತುಂಡರಿಸಿ ಒಳ ಪ್ರವೇಶಿಸಿ ವಿಡಿಯೋಕೋನ್ ಕಂಪನಿಯ 32  ಇಂಚಿನ 7 ಎಲ್.ಇಡಿ. ಮತ್ತು 28 ಇಂಜಿನ 19 ಎಲ್. .ಡಿ, ಹಾಗೂ ಸೋಗೊ ಕಂಪನಿಯ 4 ಪ್ಯಾನ್ ಗಳು, ಮತ್ತು ಸದ್ರಿ ದಾಸ್ತಾನು  ಶಾಫ್ ಗೆ ಅಳವಡಿಸಲಾಗಿದ್ದ ಸಿಸಿ. ಕ್ಯಾಮರಾ  ಯುನಿಟ್ ಇತ್ಯಾದಿ ಒಟ್ಟು ರೂಪಾಯಿ 552940/- ಮೌಲ್ಯ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.

 

5.ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 04-06-2014 ರಂದು ಸಂಜೆ 3.45 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ಹಬಿಬುಲ್ಲಾ ಅಹ್ಮದ್ ರವರು ಅವರ ಅಂಗಡಿಯಾದ ಮಂಗಳೂರು ನಗರದ ಮಿಶನ್ ಸ್ಟ್ರಿಟ್ ನಲ್ಲಿರುವ ಪೈನ್ ಝೋನ್ ಅಂಗಡಿಯಲ್ಲಿರುವಾಗ ಆರೋಪಿಗಳಾದ ಶಾಭಾಝ್ ಹುಸೇನ್ ಹಾಗೂ ಅಬ್ದುಲ್ ಲತೀಪ್ ಎಂಬುವರು ಅಂಗಡಿಯೊಳಗೆ ಅಕ್ರಮ ಪ್ರವೇಶ ಮಾಡಿ "ನಿನಗೆ ಹಣ ಬೇಕಾ" ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದು, ಕೈಗಳಿಂದ ಹೊಡೆದು ಕಾಲಿನಿಂದ ತುಳಿದು ನಂತರ ಪೈಬರ್ ಛೇರ್ ನಿಂದ ಪಿರ್ಯಾದಿದಾರರ ಬಲ ಕೈಗೆ ಹಾಗೂ ಬಲ ಭುಜಕ್ಕೆ ಹೊಡೆದು ಇನ್ನು ಮುಂದಕ್ಕೆ ನೀನು ಅಂಗಡಿ ವ್ಯಾಪಾರ ಮಾಡಿದಲ್ಲಿ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿದ್ದು ಪಿರ್ಯಾದಿದಾರರು ಚಿಕಿತ್ಸೆ ಬಗ್ಗೆ ಎಂ.ವಿ ಶೆಟ್ಟಿ ಆಸ್ಪತ್ರೆ ದಾಖಲಾಗಿರುತ್ತಾರೆ.

 

6.ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 01/06/2014 ರಂದು ಪಿರ್ಯಾದಿದಾರರಾದ ಶ್ರೀ ಉಸ್ಮಾನ್ ರವರು ತನ್ನ ಹೆಂಡತಿ ಜೈನಾಬಿ ಎಂಬವರನ್ನು ಸಹಸವಾರರಾಗಿ ಕುಳ್ಳಿರಿಸಿಕೊಂಡು  ತನ್ನ ಬಾಬ್ತು ಮೋಟಾರು ಸೈಕಲ್ ನಂಬ್ರ KA 19 EJ 4559 ನೇದರಲ್ಲಿ ಹೊರಟು ಬಜಪೆ ಕಡೆಗೆ ಬರುತ್ತಾ ಮಧ್ಯಾಹ್ನ ಸುಮಾರು 1.00 ಗಂಟೆಗೆ ಮಂಗಳೂರು ತಾಲೂಕು ಪೆರ್ಮುದೆ ಗ್ರಾಮದ ರೈಹಾನಾ ಅಡಿಟೋರಿಯಂ ಎದುರು ತಲುಪುತ್ತಿದ್ದಂತೆ ಎದುರಿನಿಂದ ಅಂದರೆ ಬಜಪೆ ಕಡೆಯಿಂದ ಕಟೀಲು ಕಡೆಗೆ ಹೋಗುತ್ತಿದ್ದ ಕಾರು ನಂಬ್ರ  KA 19 P 9481 ನೇದ್ದನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಜೈನಾಬಿ ರವರು ರಸ್ತೆಗೆ ಬಿದ್ದು, ಪಿರ್ಯಾದಿದಾರರ ಎಡಬದಿಯ ಪಕ್ಕೆಲುಬಿಗೆ ಜಖಂ ಆಗಿರುವುದಲ್ಲದೇ, ಜೈನಾಬಿ ರವರ ಎಡ ಕಾಲಿಗೆ ತೀವ್ರ ಜಖಂ ಆಗಿರುತ್ತದೆ. ಗಾಯಾಳುಗಳನ್ನು ಸುರತ್ಕಲ್ ಪದ್ಮಾವತಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿರುತ್ತಾರೆ.

 

7.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19-01-2014 ರಂದು ಪಿರ್ಯಾದಿದಾರರಾದ ಶ್ರೀಮತಿ ಶಿಲ್ಪಾ ರವರಿಗೆ ಪಾವೂರು ಗ್ರಾಮದ ಉದಯ ಕುಮಾರ್ಎಂಬವನ ಜೊತೆ ಮಂಗಳೂರು ಲಯನ್ಸ್ಕ್ಲಬ್ನಲ್ಲಿ ವಿವಾಹವಾಗಿದ್ದು ವಿವಾಹದ ಸಮಯ ಪಿರ್ಯಾದಿದಾರರ ತಂದೆ ತಾಯಿ ವರದಕ್ಷಿಣೆಯನ್ನು ನೀಡದೆ ಮದುವೆಯ ಎಲ್ಲಾ ಖರ್ಚನ್ನು ಭರಿಸಿ ಮದುವೆ ಮಾಡಿಸಿಕೊಟ್ಟಿದ್ದು ಮದುವೆಯ ನಂತರ ಗಂಡ " ನನಗೆ ತುಂಬಾ ಸಾಲವಿದೆ ಮದುವೆಯ ಸಮಯ ನೀನು ವರದಕ್ಷಿಣೆ ತರದ ಕಾರಣ ಈಗ ನಿನ್ನ ತಂದೆಯ ಕೈಯಿಂದ 2 ಲಕ್ಷ ಹಣ ತಂದು ಕೊಡೆಂದು ಹೇಳಿದ್ದು ಅದಕ್ಕೆ ಪಿರ್ಯದಿದಾರರು ತಂದೆಯ ಬಳಿ ಹಣವಿಲ್ಲ ಎಂದು ಹೇಳಿದಾಗ ನಿನ್ನ ತಂದೆ ವಾಸವಿರುವ ಮನೆಯನ್ನು ಮಾರಾಟ ಮಾಡಿ ಹಣವನ್ನು ತಂದು ಕೊಡು ಇಲ್ಲದಿದ್ದಲ್ಲಿ ನಿನಗೆ ಏನು ಮಾಡಬೇಕೆಂದು ನನಗೆ ಗೊತ್ತಿದೆ" ಎಂದು ಪಿರ್ಯಾದಿದಾರರನ್ನು ಬೆದರಿಸುತ್ತಿದ್ದಾಗ ಅವರ ಅತ್ತೆ ಹಾಗೂ ಮಾವ  ಮತ್ತು ಗಂಡನ ತಮ್ಮ ವಿನೋದ್ಹಾಗೂ ಗಂಡನ ತಂಗಿ ಪಿರ್ಯಾದಿದಾರರ ಗಂಡನನ್ನು ಪ್ರಚೋದಿಸುತ್ತಿದ್ದು ಪಿರ್ಯಾದಿದಾರರಿಗೆ ಕೆಲಸಕ್ಕೆ ಹೋಗಿ ದುಡಿದು ಹಣ ತಂದುಕೊಡು ಇಲ್ಲದಿದ್ದಲ್ಲಿ ನಿನಗೆ ಊಟ ಕೊಡುವುದಿಲ್ಲವೆಂದು ಬೆದರಿಸಿದ್ದು, ಪಿರ್ಯಾದಿದಾರರಿಗೆ ಊಟ ತಿಂಡಿಕೊಡದೆ ದೈಹಿಕ ಹಾಗೂ ಮಾನಸಿಕ ಹಿಂಸೆಯನ್ನು ಕೊಡುತ್ತಿದ್ದು, ನಂತರ ದಿನಾಂಕ 29-05-2014 ರಂದು ಪಿರ್ಯಾದಿದಾರರಿಗೆ ತಿನ್ನಲು ಆಹಾರ ನೀರುಕೊಡದೆ ರಾತ್ರಿಯವರೆಗೆ ರೂಮಿನಲ್ಲಿ ಕೂಡಿ ಹಾಕಿದ್ದು ಪಿರ್ಯಾದಿದಾರರಿಗೆ ಔಷಧಿಯೆಂದು ಮಾತ್ರೆಯನ್ನು ಕುಡಿಸಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ.

No comments:

Post a Comment