Thursday, June 26, 2014

Daily Crime Reports 26-06-2014

ದೈನಂದಿನ ಅಪರಾದ ವರದಿ.

ದಿನಾಂಕ 26.06.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

0

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 24/06/2014 ರಂದು ಮಂಗಳೂರು ತಾಲೂಕು ಎಕ್ಕಾರು ಗ್ರಾಮ ಪಂಚಾಯತ್ ಗ್ರಾಮ ಸಭೆಯಲ್ಲಿ ಎಕ್ಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಗ ಎಕ್ಕಾರು ಗ್ರಾಮದ ಸರಕಾರಿ ಜಮೀನಿನಲ್ಲಿ ಅಕ್ರಮವಾಗಿ ಕೆಂಪು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆಂದು ಗ್ರಾಮಸ್ಥರು ನೀಡಿದ ದೂರಿನಂತೆ ಪಿರ್ಯಾದಿದಾರರಾದ ಶ್ರೀ ಕೆ.ಎಸ್. ನಾಗೇಂದ್ರಪ್ಪ ಭೂ ವಿಜ್ಷಾನಿ ಉಪ ನಿದೇರ್ಶಕರು ರವರು ಶ್ರೀ ಪ್ರಶಾಂತ್ ಗ್ರಾಮ ಲೆಕ್ಕಿಗರು ತೆಂಕ ಎಕ್ಕಾರು ಗ್ರಾಮ ರವರೊಂದಿಗೆ ಸದ್ರಿ ಪ್ರದೇಶಗಳಿಗೆ ತೆರಳಿ ಸ್ಥಳ ತನಿಖೆ ನಡೆಸಿ, ಅಕ್ರಮ ಕೆಂಪು ಕಲ್ಲು ಗಣಿಗಾರಿಕೆಯಲ್ಲಿ ತೊಡಗಿದ ಯಂತ್ರೋಪಕರಣಗಳನ್ನು ವಶಪಡಿಸಿಕೊಂಡಿದ್ದರು. ದಿನಾಂಕ: 25/06/2014 ರಂದು ಸದ್ರಿ ಸ್ಥಳದಲ್ಲಿ ಪುನಃ ಅಕ್ರಮ ಕೆಂಪು ಕಲ್ಲಿನ ಗಣಿಗಾರಿಕೆಯಲ್ಲಿ ತೊಡಗಿರುವುದನ್ನು ಕಂಡ ಗ್ರಾಮಸ್ಥರು ಗಣಿಗಾರಿಕೆಯಲ್ಲಿ ತೊಡಗಿದ್ದ ವಾಹನಗಳನ್ನು ತಡೆದು, ಪಿರ್ಯಾದಿದಾರರಿಗೆ ದೂರವಾಣಿ ಮೂಲಕ ತಿಳಿಸಿದ ಮೇರೆಗೆ ಪಿರ್ಯಾದಿದಾರರು ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕರಾದ ಶ್ರೀ ನವೀನ್ ಸುರತ್ಕಲ್ ಹೋಬಳಿ, ಗ್ರಾಮ ಲೆಕ್ಕಿಗರಾದ ಶ್ರೀ ಪ್ರಶಾಂತ್ ಮತ್ತು ಪೊಲೀಸ್ ಇಲಾಖೆಯವರೊಂದಿಗೆ ಸದ್ರಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಸದ್ರಿ ಪರಿಸರದಲ್ಲಿ 7 ವಾಹನ ಮತ್ತು 1 ಜೆ.ಸಿ.ಬಿ. ಇದ್ದು, 4 ಯಂತ್ರೋಪಕರಣಗಳನ್ನು ಅಡಗಿಸಿಟ್ಟಿದ್ದು ಕಂಡು ಬಂದಿದ್ದು, ಗ್ರಾಮಸ್ಥರು ಅವುಗಳನ್ನು ತಂದೊಪ್ಪಿಸಿರುವುದಾಗಿದೆ.  ಗಣಿಗಾರಿಕೆಯು ಅನಧೀಕೃತವಾಗಿ ಇಲಾಖೆಯಿಂದ ಯಾವುದೇ ಪರವಾನಿಗೆಯನ್ನು ಪಡೆಯದೇ ಕೆಂಪು ಕಲ್ಲಿನ ಗಣಿಗಾರಿಕೆಯನ್ನು ಸರಕಾರಿ ಸರ್ವೇ ನಂಬ್ರ 163/11ಬಿ ರಲ್ಲಿ ಶ್ರೀ ಕರಿಯ ಪೂಜಾರಿ, ಬಡಗ ಎಕ್ಕಾರು ಗ್ರಾಮ, ಕಿಶನ್ ಶೆಟ್ಟಿ, ತಂದೆ: ಬಾಬು ಎನ್. ಶೆಟ್ಟಿ, ಮರವೂರು, ಯತೀಶ್ ಪೂಜಾರಿ ಕೆಂಜಾರು ಗ್ರಾಮ, ಕೇಶವ ತೆಂಕ ಎಕ್ಕಾರು ಮತ್ತು ಹರೀಶ್ ತೆಂಕ ಎಕ್ಕಾರು, ಜಯಂತ್ ಮೂಲ್ಯ ಕಾನ ಸುರತ್ಕಲ್ ರವರು ನಡೆಸುತ್ತಿದ್ದಾರೆಂದು ಗ್ರಾಮಸ್ಥರು ಪಿರ್ಯಾದಿದಾರರಿಗೆ ತಿಳಿಸಿದ್ದು, ಸರ್ವೇ ನಂಬ್ರ 28 ರಲ್ಲಿನ ಸರಕಾರಿ ಜಮೀನಿನಲ್ಲಿ ಸ್ವರೂಪ್ ಕಾವೂರು ರವರು, ಅಕ್ರಮವಾಗಿ ಕೆಂಪು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದು,  ಸರ್ವೇ ನಂಬ್ರ 162/2 ರಲ್ಲಿನ ಪಟ್ಟಾ ಜಮೀನಿನಲ್ಲಿ 1 ಎಕ್ರೆ ಪ್ರದೇಶಕ್ಕೆ ಕೆಂಪು ಕಲ್ಲಿನ ಗಣೆಗಾರಿಕೆಗೆ ಅನುಮತಿ ಪಡೆದು 1 ಎಕ್ರೆಗಿಂತ ಹೆಚ್ಚಿನ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಡೆಸಿದ್ದು, ಇವರು ಸರಕಾರದ ಅನುಮತಿ ಪಡೆಯದೇ ಸರಕಾರಿ ಮತ್ತು ಪಟ್ಟಾ ಜಮೀನಿನಲ್ಲಿ  ಅಕ್ರಮವಾಗಿ ಕೆಂಪು ಕಲ್ಲು ಗಣಿಗಾರಿಕೆ ನಡೆಸುತ್ತಿರುವುದು ಕಂಡು ಬಂದಿರುವುದಾಗಿದೆ.

 

2.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾಧಿದಾರರಾದ ಶ್ರೀ ಮಂಜುನಾಥ ನಾಯ್ಕ್ ರವರು ಪರಿಶಿಷ್ಟ ಪಂಗಡ ಸೇರಿದವರಾಗಿದ್ದು ಮಂಗಳೂರು ತಾಲ್ಲೂಕು ಕರಂಬಾರಿನ ಯತೀಶ್ ಎಂಬವರ ಅರಸುಲ ಪದವಿನಲ್ಲಿರುವ ಕೆಂಪು ಕಲ್ಲಿನ ಕೋರೆಯಲ್ಲಿ  ದುಡಿಯುತ್ತಿದ್ದು ದಿನಾಂಕ: 25-06-2014 ರಂದು ಬೆಳಿಗ್ಗೆ ಸುಮಾರು 8-30 ಗಂಟೆ ಸಮಯಕ್ಕೆ ಕಲ್ಲಿನ ಕೋರೆಯ ಹತ್ತಿರ ಹೋಗಿ ಇಂದು ಕೋರೆಯಲ್ಲಿ ಕೆಲಸ ನಡೆಯುತ್ತಿದೆಯಾ ಎಂದು ನೋಡಲು ಫಿರ್ಯಾಧಿದಾರರು ಹೋಗಿದ್ದ ಸಂದರ್ಭ ಸ್ಥಳಿಯರಾದ ಸ್ಟಾನಿ ಪಿಂಟೋ ತಂದೆ: ಅಲ್ಪ್ರೆಡ್ ಪಿಂಟೋ ಮತ್ತು ಪ್ರದೀಪ್ ಭಂಡಾರಿ ತಂದೆ: ಉಮೇಶ್ ಭಂಡಾರಿ ಹಾಗೂ ಮತ್ತಿತರರು ಮೂರು ಬೈಕ್ ಗಳಲ್ಲಿ ಬಂದು ಏಕಾ ಏಕಿ ಫಿರ್ಯಾಧಿದಾರರ ಮೇಲೆ ಸ್ಟಾನಿ ಪಿಂಟೋ ಕೈ ಮಾಡಿ, ನೆಲಕ್ಕುರುಳಿಸಿ ಕಾಲಲ್ಲಿ ತುಳಿದು ಮತ್ತು ಪ್ರದೀಪ್ ಭಂಡಾರಿ ಮತ್ತು ಇತರರು ಕೈ ಮಾಡಿದುದಲ್ಲದೇ  ಸ್ಟಾನಿ ಪಿಂಟೋ ಫಿರ್ಯಾಧಿದಾರರನ್ನು ಉದ್ದೇಶಿಸಿ ಅವಮಾನಕರವಾಗಿ ಮಾತಾಡಿದಲ್ಲದೇ ಇನ್ನು ಮುಂದೆ ಇಲ್ಲಿ ದುಡಿಯಲು ಬಂದರೆ ನಿನ್ನ ಕೈ ಕಾಲು ಮುರಿದು ಸಾಯಿಸುವುದಾಗಿ ಕೊಲೆ ಬೆದರಿಕೆ ಒಡ್ಡಿರುತ್ತಾರೆ.

 

No comments:

Post a Comment