ದೈನಂದಿನ ಅಪರಾದ ವರದಿ.
ದಿನಾಂಕ 12.06.2014 ರ 16:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 1 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 1 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 3 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 2 |
ಇತರ ಪ್ರಕರಣ | : | 3 |
1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 11-06-2014 ರಂದು ಪಿರ್ಯಾದಿದಾರರಾದ ಶ್ರೀ ಸಂದೇಶ್ ಶೆಣೈ ರವರ ದೊಡ್ಡಪ್ಪರಾದ ಮೋಹನ್‌ದಾಸ್ ಶೆಣೈರವರು ಬೆಳಿಗ್ಗೆ ಮಂಗಳೂರು ನಗರದ ಮಠದಕಣಿಯಿಂದ ಗಾಂಧಿಪಾರ್ಕ್ಗೆ ವಾಕಿಂಗ್ಗೆ ಹೋದವರು, ಅಲ್ಲಿಂದ ವಾಪಾಸು ಉರ್ವಾಮಾರ್ಕೇಟ್-ಮಠದಕಣಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವ ಸಮಯ ಸುಮಾರು 07:00 ಗಂಟೆಗೆ ಅಪರಿಚಿತ ಆಟೋರಿಕ್ಷಾ ವನ್ನು ಅದರ ಚಾಲಕನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ದೊಡ್ಡಪ್ಪನಿಗೆ ಹಿಂದಿನಿಂದ ಡಿಕ್ಕಿಹೊಡೆದು, ಅಲ್ಲಿಂದ ರಿಕ್ಷಾ ಸಮೇತ ಪರಾರಿಯಾಗಿದ್ದು, ಅಪಘಾತದಿಂದ ಗಾಯಾಳುವಾದ ಮೋಹನ್‌ದಾಸ್ ಶೆಣೈರವರು ಅಲ್ಲಿಯ ಫುಟ್ಪಾತ್ನಲ್ಲಿ ಬಿದ್ದಿರುವುದನ್ನು ಗಮನಿಸಿದ ಸಾರ್ವಜನಿಕರು ಚಿಕಿತ್ಸೆಯ ಬಗ್ಗೆ ಉಳ್ಳಾಲ ನರ್ಸಿಂಗ್ ಹೋಂಗೆ ದಾಖಲಿಸಿದ್ದು, ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಅಲ್ಲಿಂದ ಜ್ಯೋತಿ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ, ಈ ಅಪಘಾತದಿಂದ ಗಾಯಳುವಿನ ತಲೆಗೆ ತೀವ್ರ ತರಹದ ರಕ್ತ ಗಾಯವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿರುತ್ತಾರೆ. ಈ ಅಪಘಾತ ನಡೆಸಿದ ಆಟೋ ರಿಕ್ಷಾ ನಂಬ್ರ ಕೆ.ಎ-19-ಎ.ಎ-3970 ಎಂಬುದಾಗಿ ಬಳಿಕ ತಿಳಿದು ಬಂದಿರುತ್ತದೆ.
2.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಅರ್ಜಿದಾರರಾದ ಶ್ರೀ ಜೆರಾಲ್ಡ್ ಅಲ್ವಿನ್ ಫರ್ನಾಂಡಿಸ್ ರವರು ಮ್ಯಾನೇಜರಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೈಟ್‌ಡೌಸ್ ಹೋಮ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾನಸಿಕ ಅಸ್ವಸ್ಥ ಹಾಗೂ ನಿರ್ಗತಿಕಳಾದ ರಾಧಿಕಾ(35) ದಿನಾಂಕ 09-06-2014 ರಂದು ಸಾಯಂಕಾಲ 19-30 ಗಂಟೆ ಹೊತ್ತಿಗೆ ಯಾರಿಗೂ ಹೇಳದೆ ಸಂಸ್ಥೆಯಿಂದ ಹೊರಟು ಹೋಗಿರುತ್ತಾಳೆ ಈ ಬಗ್ಗೆ ನಗರದ ಎಲ್ಲಾ ಭಾಗಗಳಲ್ಲಿ ಹುಡುಕಾಡಿ ಪತ್ತೆಯಾಗದೇ ಇದ್ದು ದೂರು ನೀಡಲು ತಡವಾಗಿರುತ್ತದೆ.
3.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 11-06-2014 ರಂದು ಸುಮಾರು 20-15 ಗಂಟೆ ಸಮಯ ಸೀತಾರಾಮ ರಾವ್ ಎಂಬವರನು ತನ್ನ ಬಾಬ್ತು ಯಾವುದೇ ಪರವಾನಿಗೆ ಇಲ್ಲದ ನಾಡ ಪಿಸ್ತೂಲನ್ನು ಮುಹಿಬುಲ್ಲಾ ಎಂಬವರಿಗೆ ಮಾರಾಟ ಮಾಡಲು ತಂದಿದ್ದು ಈ ಬಗ್ಗೆ ನಿಖರವಾದ ಮಾಹಿತಿ ಪಡೆದ ಪಿರ್ಯಾಧಿದಾರರಾದ ಶ್ರೀ ಚಲುವರಾಜು, ಪೊಲೀಸ್ ನಿರೀಕ್ಷಕರು, ಮಂಗಳೂರು ಉತ್ತರ ಠಾಣೆ ರವರು ಆರೋಪಿತರ ಮನೆಗೆ ಸಿಬ್ಬಂದಿಯವರೊಡನೆ ದಾಳಿ ಮಾಡಿ ಪರವಾನಿಗೆ ರಹಿತ ನಾಡ ಕೊವಿ ಯೊಂದನ್ನು ಸ್ವಾಧಿನಪಡಿಸಿಕೊಂಡಿರುವುದಾಗಿದೆ.
4.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10-06-2014 ರಂದು ರಾತ್ರಿ 9:30 ಗಂಟೆಗೆ ಬಂಟ್ವಾಳ ತಾಲೂಕು ಪಜೀರು ಗ್ರಾಮದ ಪಜೀರು ಇನ್ಫೋಸಿಸ್ ಬಸ್ ನಿಲ್ದಾಣದ ಬಳಿಯಲ್ಲಿ ಮುಡಿಪು ಕಡೆಯಿಂದ ಕೊಣಾಜೆ ಕಡೆಗೆ ಆಕ್ಟಿವಾ ದ್ವಿಚಕ್ರ ವಾಹನ ಸಂಖ್ಯೆ ಕೆಎ-19-ಇಸಿ-6027 ನ್ನು ಅಶೋಕ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದು, ಎದುರುಗಡೆಯಿಂದ ಕೊಣಾಜೆ ಕಡೆಯಿಂದ ಮುಡಿಪು ಕಡೆಗೆ ಸ್ವಿಫ್ಟ್ ಕಾರು ನಂಬ್ರ ಕೆಎ-20-ಎನ್-5681 ರ ಚಾಲಕ ಹರೀಶ್ಚಂದ್ರವರು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ದ್ವಿಚಕ್ರ ವಾಹನಕ್ಕೆ ಎದುರಿನಿಂದ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸಹಸವಾರ ಪಿರ್ಯಾದಿ ಶ್ರೀ ಹೆರಾಲ್ಡ್ರವರು ರಸ್ತೆಗೆ ರಟ್ಟಿ ಬಿದ್ದು, ಅವರ ಬಲಕಾಲಿನ ಪಾದಕ್ಕೆ ಕೀಲು ಮುರಿತದ ತೀವ್ರ ಗಾಯವಾಗಿ ಅವರು ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.
5.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ವಾಸಂತಿ ಪ್ರಾಯ 79 ವರ್ಷ ರವರು ಆರೋಗ್ಯದ ದೃಷ್ಠಿಯಿಂದ ಬೆಳಿಗ್ಗೆ ನಡೆಯುವ ಅಭ್ಯಾಸವನ್ನಿಟ್ಟುಕೊಂಡಿದ್ದು, ದಿನಾಂಕ: 11-06-2014ರಂದು ಬೆಳಿಗ್ಗೆ ಕೂಡಾ ಮನೆಯಿಂದ ಹೊರಟು ನಡೆದುಕೊಂಡು ಬಂದು ಸಮಯ ಸುಮಾರು 06-15 ಗಂಟೆಗೆ ಮಂಗಳೂರು ನಗರದ ಕದ್ರಿ ಕಂಬ್ಳದ ಚಂದ್ರಿಕಾ ಬಡಾವಣೆಯಲ್ಲಿರುವ ಧನಂಜಯ ಕುಮಾರ್ ರವರ ಮನೆಯಿಂದ ರಸ್ತೆಯಲ್ಲಿ ಸ್ವಲ್ಪ ಮುಂದಕ್ಕೆ ಹೋಗಿ ವಾಪಾಸು ಹೊರಟು ಮನೆ ಕಡೆಗೆ ಬರುತ್ತಿರುವಾಗ ಸದ್ರಿ ರಸ್ತೆಯಲ್ಲಿ ಬೈಕಿನಲ್ಲಿ ಬಂದ ಈರ್ವರು ಅಪರಿಚಿತ ಯುವಕರು ಪಿರ್ಯಾದಿದಾರರಲ್ಲಿ ವಿಳಾಸ ಕೇಳುವಂತೆ ನಟಿಸಿ ಅವರಲ್ಲಿ ಓರ್ವ ಪಿರ್ಯಾದಿದಾರರ ಕುತ್ತಿಗೆಯಲ್ಲಿ ಇದ್ದ ಸುಮಾರು 28 ಗ್ರಾಂ ತೂಕದ ಅಂದಾಜು ರೂ. 75,000/- ಬೆಲೆ ಬಾಳುವ ಚಿನ್ನದ ಬಟಾನಿ ಸರವನ್ನು(ಪೆಂಡೆಂಟ್ ಸಹಿತ) ಕಿತ್ತು ಲೂಟಿ ಮಾಡಿಕೊಂಡು ಪಿರ್ಯಾದಿದಾರರನ್ನು ದೂಡಿ ಹಾಕಿ ಹೋಗಿರುವುದಾಗಿದೆ.
6.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಅಬ್ದುಲ್ ರಹಿಮಾನ್ ರವರ ಬಾಬ್ತು ಕೆಎ 19 ವೈ 1041 ನೇ ನಂಬ್ರದ ಮೋಟಾರ್ ಸೈಕಲ್‌ನ್ನು ಪಿರ್ಯಾದಿದಾರರ ಮಗ ಮೊಹಮ್ಮದ್ ಹುಸೈನ್ ಎಂಬವರು ದಿನಾಂಕ 30-05-2014 ರಂದು ಕೆಲಸದ ಸಲುವಾಗಿ ತೆಗೆದುಕೊಂಡು ಹೋಗಿದ್ದು ಕೆಲಸ ಮುಗಿಸಿ ರಾತ್ರಿ ಮನೆಯಲ್ಲಿ ಬೈಕ್‌ನ್ನು ಪಾರ್ಕಿಂಗ್ ಮಾಡಿದ್ದು ದಿನಾಂಕ 31-05-2014 ರಂದು ಬೆಳಿಗ್ಗೆ ಸುಮಾರು 06-00 ಗಂಟೆಗೆ ಪಿರ್ಯಾದಿದಾರರು ಬೈಕ್ ಪಾರ್ಕಿಂಗ್ ಮಾಡಿದ ಸ್ಥಳದಲ್ಲಿ ನೋಡಲಾಗಿ ಬೈಕ್ ಇಲ್ಲದೇ ಇದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಪಿರ್ಯಾದಿದಾರರ ಮಗ ಸದ್ರಿ ಬೈಕ್ನ್ನು ಹುಡುಕಿದರೂ ಇದುವರೆಗೆ ಬೈಕ್ ಪತ್ತೆಯಾಗಿರುವುದಿಲ್ಲ. ಸದ್ರಿ ಬೈಕ್‌ನ ಅಂದಾಜು ಮೌಲ್ಯ 18.000/- ರೂ ಅಗಬಹುದು.
7.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10-06-2014 ರಂದು ಪೂರ್ವಾಹ್ನ 10-45 ಗಂಟೆಗೆ ಕಂದುಕ ನೀರೇಶ್ವಾಲ್ಯದ ವಾರ್ಡ್ ನಂಬ್ರ 45 ಕ್ಕೆ ಫಿರ್ಯಾದುದಾರರಾದ ಶ್ರೀ ಸನಾದಿ ಅಜಿತ್ ಕುಮಾರ್ ಹೆಗ್ಡೆ, ಕಮೀಷನರ್, ಮಂಗಳೂರು ಮಹಾನಗರ ಪಾಲಿಕೆ ರವರು ಮತ್ತು ಮಾನ್ಯ ಮಹಾ ಪೌರರು, ಶ್ರೀ ಬಿ ಬಾಲಕೃಷ್ಣ ಗೌಡ, ನಗರ ಯೋಜನಾಧಿಕಾರಿ, ಶ್ರೀ ಶಿವರಾಜ್ ಪಿ.ಬಿ ಸಹಾಯಕ ನಗರ ಯೋಜನಾಧಿಕಾರಿ ಹಾಗೂ ಶ್ರೀ ಬಿ ಮಂಜುನಾಥ, ಮೋಜಣಿದಾರರೊಂದಿಗೆ ನಗರ ಪಾಲಿಕೆ ವಾಹದಲ್ಲಿ ಸ್ಥಳ ತನಿಖೆಯ ಬಗ್ಗೆ ಹೋದ ವೇಳೆಯಲ್ಲಿ ಅಬ್ದುಲ್ ಅಜೀಜ್, ಕುದ್ರೋಳಿ ಕಾರ್ಪೊರೇಟರ್ ರವರ ನೇತ್ರತ್ವದಲ್ಲಿ ಸುಮಾರು 50 ಜನರು ಗುಂಪಿನೊಂದಿಗೆ ಬಂದು ಕರ್ತವ್ಯಕ್ಕೆ ಅಡ್ಡ ಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾರೆ. ನಂತರ ವಾಪಾಸು ಸಂಜೆ ಸುಮಾರು 5-00 ಗಂಟೆಗೆ ಅಬ್ದುಲ್ ಅಜೀಜ್ ನೇತ್ರತ್ವದ ಗುಂಪು ಮಹಾನಗರ ಪಾಲಿಕೆಯ ಕೇಂದ್ರ ಕಚೇರಿಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾರೆ.
8.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 27-05-2014 ರಂದು ಬೆಳ್ತಂಗಡಿ ತಾಲೂಕು ಕಸ್ಬಾ ಗ್ರಾಮದ ಶ್ರೀಮತಿ ಭೋಮ್ಮಿ ರವರನ್ನು ಎಡಕಾಲು ನೋವಿನ ಬಗ್ಗೆ ಚಿಕಿತ್ಸೆಗಾಗಿ ಮಂಗಳೂರಿನಲ್ಲಿರುವ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಆಸ್ಪತ್ರೆಯ ಡಾ: ಶ್ರೀನಿವಾಸ್ ಮತ್ತು ಸಿಬ್ಬಂದಿ ವರ್ಗದವರ ಬೇಜವಾಬ್ದಾರಿಯಿಂದ ಚಿಕಿತ್ಸೆ ಫಲಕಾರಿಯಾಗಿರುವುದಿಲ್ಲ. ಈ ಬಗ್ಗೆ ಆಸ್ಪತ್ರೆಯ ಮೇಲಾಧಿಕಾರಿಗಳಿಗೆ ದೂರು ನೀಡಿದರೂ ವೈಧ್ಯರು ಬಂದು ಸರಿಯಾಗಿ ಚಿಕಿತ್ಸೆ ನೀಡಿರುವುದಿಲ್ಲ. ದಿ: 07-06-2014 ರಂದು ರಾತ್ರಿ ಸುಮಾರು 11-00 ಗಂಟೆಗೆ ಮೂತ್ರ ಬ್ಲಾಕ್ ಆಗಿರುವ ಬಗ್ಗೆ ವೈಧ್ಯರಲ್ಲಿ ತಿಳಿಸಿದರೂ ತುರ್ತು ಚಿಕಿತ್ಸಾ ಘಟಕಕ್ಕೆ ಕೊಂಡು ಹೋಗದೇ ನಮ್ಮಲ್ಲಿ ಏನೂ ಆಗುವುದಿಲ್ಲ ಎಂದು ಬೇಜಾವಾಬ್ದಾರಿತನದಿಂದ ವರ್ತಿಸಿರುತ್ತಾರೆ. ಇದರಿಂದಾಗಿ ಶ್ರೀಮತಿ ಬೋಮ್ಮಿ ರವರು ದಿ: 08-06-14 ರಂದು ಬೆಳಿಗ್ಗೆ 6-00 ಗಂಟೆಗೆ ಮೃತಪಟ್ಟಿರುತ್ತಾರೆ.
9.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 06-06-2014 ರಂದು ಮುಂಜಾನೆ 01-00 ಗಂಟೆ ಸಮಯಕ್ಕೆ ಪಿರ್ಯಾದುದಾರರಾದ ಶ್ರೀ ಕಿಶೋರ್ ಎಂ. ರವರ ಬಾಬ್ತು ಕೆಎ 19 ಡಿ 618 ನೇ ಟಿಪ್ಪರನ್ನು ಅದರ ಚಾಲಕ ಸುರೇಶ್ ಎಂಬವರು ಕೆ.ಸಿರೋಡ್ ಕಡೆಯಿಂದ ದೇವಿಪುರ ಕಡೆಗೆ ಅತೀವೇಗ ಹಾಗು ತೀರಾ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಮಂಗಳೂರು ತಾಲೂಕು, ತಲಪಾಡಿ ಗ್ರಾಮ ದೇವಿಪುರ ಸೇತುವೆಯ ಬಳಿ ಮರವೊಂದಕ್ಕೆ ಡಿಕ್ಕಿ ಹೊಡೆದಿರುತ್ತಾನೆ. ಈ ಅಪಘಾತದಿಂದ ಟಿಪ್ಪರ್‌ನ ಬಾಡಿ, ಶೇಫ್, ಕ್ಯಾಬಿನ್ ಇತ್ಯಾದಿ ಜಖಂಗೊಂಡು ನಷ್ಟ ಸಂಭವಿಸಿರುತ್ತದೆ.
10.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾಧಿದಾರರಾದ ಶ್ರೀ ಉಮರಬ್ಬಾ ರವರ ಮಗ ಮಹಮ್ಮದ್ ಜಮಾಲ್(28) ಎಂಬಾತನು ದಿನಾಂಕ: 07.06.2014 ರಂದು ಬೆಳಿಗ್ಗೆ 8.30 ಗಂಟೆಗೆ ತನ್ನ ಬಾಬ್ತು ಕೆಎ19-ಇಇ394 ನೇ ಕೆಂಪು ಪಲ್ಸರ್ ಬೈಕ್ನಲ್ಲಿ ಮನೆಯಿಂದ ಹೋದವನು ನಂತರ ವಾಪಸು ಮನೆಗೆ ಬಾರದೆ ಇದ್ದು ಆತನ ಪತ್ತೆಯ ಬಗ್ಗೆ ಸಂಬಂಧಿಕರ ಮನೆಯಲ್ಲಿ ಮತ್ತು ಆತನು ಕೆಲಸ ಮಾಡುವ ಜಾಗಗಳಲ್ಲಿ ವಿಚಾರಿಸಿದಾಗಲು ಆತನು ಎಲ್ಲಿದ್ದಾನೆಂದು ತಿಳಿದು ಬಂದಿರುವುದಿಲ್ಲ ಕಾಣೆಯಾಗಿರುವ ಮಹಮ್ಮದ್ ಜಮಾಲ್‌ನ ಚಹರೆ: ಮಹಮ್ಮದ್ ಜಮಾಲ್ ಪ್ರಾಯ 28, ಎತ್ತರ: ಸುಮಾರು 5.7, ಗೋಧಿ ಮೈ ಬಣ್ಣ, ದುಂಡು ಮುಖ, ದೃಡಕಾಯ ಶರೀರ, ಕಪ್ಪು ಕುರುಚಲು ಗಡ್ಡ, ಉದ್ದ ತಲೆ ಕೂದಲು, ಕನ್ನಡ, ತುಳು, ಬ್ಯಾರಿ ಭಾಷೆ ಮಾತನಾಡುತ್ತಾನೆ, ಹೆಚ್ಚಾಗಿ ಜೀನ್ಸ್ ಪ್ಯಾಂಟ್ ಮತ್ತು ಶರ್ಟ್ ಧರಿಸುತ್ತಾನೆ.
No comments:
Post a Comment