ದೈನಂದಿನ ಅಪರಾದ ವರದಿ.
ದಿನಾಂಕ 09.06.2014 ರ 07:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 3 |
ಮನೆ ಕಳವು ಪ್ರಕರಣ | : | 1 |
ಸಾಮಾನ್ಯ ಕಳವು | : | 1 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 0 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 1 |
ಇತರ ಪ್ರಕರಣ | : | 0 |
1.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 08-06-2014ರಂದು ಮಂಗಳೂರು ಜಿಲ್ಲಾ ಕಾರಾಗೃಹದ ವಿಚಾರಣಾ ಬಂದಿಗಳಾದ ಪೈಝಲ್ ಹಾಗೂ ತಲ್ಲತ್ ಎಂಬರುಗಳನ್ನು ಶಿಸ್ತು ಕ್ರಮದಡಿ ದಾರವಾಡ ಕೇಂದ್ರ ಕಾರಾಗೃಹಕ್ಕೆ ಮೇಲಾಧಿಕಾರಿಗಳ ಆದೇಶದಂತೆ ವರ್ಗಾವಣೆ ಮಾಡಲು ಪ್ರಯತ್ನಿಸಿದಾಗ ಅದರ ಬಗ್ಗೆ ಮಾಹಿತಿ ತಿಳಿದ ವಿಚಾರಣಾ ಬಂಧಿಗಳು ಧಾರವಾಡ ಕೇಂದ್ರ ಕಾರಾಗರಹಕ್ಕೆ ತೆರಳಲು ನಿರಾಕರಿಸಿ ತಮ್ಮ ರೂಮ್ನಲ್ಲಿದ್ದ ಇತರ ವಿಚಾರಣಾ ಬಂಧಿಗಳೊಂದಿಗೆ ಪ್ರಕ್ಷುಪ್ತ ವಾತಾವರಣ ಉಂಟು ಮಾಡಿದ್ದರಿಂದ ಸೂಕ್ತ ಬಂದೋಬಸ್ತ ವ್ಯವಸ್ಥೆಗೆ ಕೋರಿಕೆಯಂತೆ ಆಗಮಿಸಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ವಿಚಾರಣಾ ಬಂಧಿ ಆರೋಪಿತರುಗಳು ಇತರರೊಂದಿಗೆ ಸೇರಿ ಸಮಾನ ಉದ್ದೇಶದಿಂದ ಆಕ್ರಮಕೂಟಸ್ಥರಾಗಿ ಜೈಲಿನ ಕೋಣೆಯೊಳಗಡೆ ಲಭ್ಯವಿರುವ ಟಿವಿ, ಗ್ಲಾಸ್, ಸೆಟ್‌ಆಪ್ ಬಾಕ್ಸ, ಸ್ಟೇಬಲೈಝರ್ ವಗೈರೆ ಆಯುಧಗಳಿಂದ ಕರ್ತವ್ಯನಿರತ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಟಿವಿಯ ಸೆಟ್ ಆಫ್ ಬಾಕ್ಸ ಹಾಗೂ ಗ್ಲಾಸ್ಗಳಿಂದ ಹೊಡೆದು ತೀವ್ರ ಹಾಗೂ ಸಾಮಾನ್ಯ ಸ್ವರೂಪದ ರಕ್ತಗಾಯವನ್ನುಂಟು ಮಾಡಿದ್ಲಲದೇ ಸುಮಾರು 30000/-ರೂ ಗಳಷ್ಟು ಮೌಲ್ಯದ ಸ್ವತ್ತುಗಳಿಗೆ ಹಾನಿಪಡಿಸಿ ನಷ್ಟವನ್ನುಂಟು ಮಾಡಿರುವುದಾಗಿದೆ.
2.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ನಿಶ್ಮಿತಾ ಪ್ರಾಯ 15 ವರ್ಷ ರವರು ದಿನಾಂಕ 8.6.2014 ರಂದು ತನ್ನ ದೊಡ್ದಪ್ಪನಾದ ಕೃಷ್ಣಪ್ಪ ರವರ ಮನೆಯಿಂದ ತನ್ನ ಸ್ವಂತ ಮನೆಯಾದ ಮಂಗಳೂರು ತಾಲೂಕು ಕಾರ್ನಾಡು ಗ್ರಾಮದ ಲಿಂಗಪ್ಪಯ್ಯಕಾಡುವಿಗೆ ಬಂದಾಗ ಸಮಯ ಸುಮಾರು ಬೆಳಿಗ್ಗೆ 9.00 ಗಂಟೆಗೆ ಫಿರ್ಯಾದಿದಾರರಾದ ನಿಶ್ಮಿತಾಳ ತಾಯಿ ಆರೋಪಿ ಹರಿಣಿ ಎಂಬಾಕೆಯು "ನೀನು ಸರೋಜ ಅತ್ತೆಯವರಲ್ಲಿ ತಂದೆಯ ಬಗ್ಗೆ ಹೇಳಲು ನಾನು ಹೇಳಿದ್ದೆಯಲ್ಲ ನೀನು ಯಾಕೆ ಹೇಳಲಿಲ್ಲ" ಎಂದು ಹೇಳಿ ಫಿರ್ಯಾದಿದಾರರ ಎಡಕೆನ್ನೆಗೆ ಕೈಯಿಂದ ಹೊಡೆದು ಹಾಗೂ ಕೋಲಿನಿಂದ ಬೆನ್ನಿಗೆ ಮತ್ತು ಸೊಂಟಕ್ಕೆ ಹೊಡೆದಿರುವುದಾಗಿದೆ.
3.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 07-06-14 ರಂದು ಬೆಳಿಗ್ಗೆ 08.00 ಗಂಟೆಯಿಂದ 17.30 ಗಂಟೆಯ ನಡುವೆ ಯಾರೋ ಕಳ್ಳರು ಮಂಗಳೂರು ತಾಲೂಕು ಪುತ್ತಿಗೆ ಗ್ರಾಮದ ಹಂಡೇಲು ಎಂಬಲ್ಲಿರುವ ಪಿರ್ಯಾದಿದಾರರಾದ ಶ್ರೀ ಮಹಮ್ಮದ್ ಶರೀಫ್ ರವರ ಬಾಬ್ತು ವಾಸದ ಮನೆಯ ಅಡುಗೆ ಕೋಣೆಯ ಕಿಟಕಿಯ ಮರದ ರೀಪನ್ನು ಕಿತ್ತು ಆ ಮೂಲಕ ಒಳ ಪ್ರವೇಶಿಸಿ ಮನೆಯ ಒಳಗೆ ಇದ್ದ ಪಿರ್ಯಾದಿದಾರರ ತಮ್ಮಂದಿರಿಗೆ ಸೇರಿದ ಎರಡು ಕಬ್ಬಿಣದ ಕಪಾಟುಗಳ ಬೀಗಗಳನ್ನು ಬಲ ಪ್ರಯೋಗಿಸಿ ತೆಗೆದು ಬಟ್ಟೆಗಳನ್ನೆಲ್ಲಾ ಹೊರಗೆ ಹಾಕಿರುವುದಲ್ಲದೇ ಪಿರ್ಯಾದಿದಾರರು ಮಲಗುವ ಕೋಣೆಯಲ್ಲಿದ್ದ ಸೂಟ್ ಕೇಸ್ ನ್ನು ಬಲವಂತದಿಂದ ತೆರೆದು ಅದರೊಳಗಿದ್ದ ಬಂಗಾರದ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಬಂಗಾರದ ಆಭರಣಗಳ ಬಿಲ್ಲುಗಳು ಅರೇಬಿಕ್ ಭಾಷೆಯಲ್ಲಿರುವ ಕಾರಣ ಕಳವಾದ ಬಂಗಾರದ ಆಭರಣಗಳ ಮಾದರಿ, ತೂಕ ಮತ್ತು ಬೆಲೆ ತಿಳಿದಿಲ್ಲವಾಗಿರುತ್ತದೆ.
4.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 07-06-2014 ರಂದು 19-30 ಗಂಟೆಯಿಂದ ದಿನಾಂಕ 08-06-2014 ರ ಬೆಳಿಗ್ಗೆ 06-15 ಗಂಟೆಯ ಮಧ್ಯೆ ಮಂಗಳೂರು ತಾಲೂಕು, ಉಳ್ಳಾಲ ಗ್ರಾದಮ ಕಾಫಿಕಾಡ್ ಎಂಬಲ್ಲಿರುವ 23/75 ನೇ ನಂಬ್ರದ ಪಿರ್ಯಾದುದಾರರಾದ ಶ್ರೀ ಕೆ.ಎಲ್. ನಾರಾಯಣ ಭಟ್ ರವರ ಬಾಬ್ತು ಲಾಕ್ ಮಾಡಿದ ಮನೆಯ ಎದುರಿನ ಬಾಗಿಲಿನ ಚಿಲಕ ಯಾರೋ ಕಳ್ಳರು ಮುರಿದು ಮನೆಯ ಒಳಗೆ ಪ್ರವೇಶಿಸಿ, ಪಿರ್ಯಾದುದಾರರ ಮಗ ಪ್ರಶಾಂತ್ರವರ ರೂಮ್ನ ಒಳಗಡೆಯಿಂದ ಕಪಾಟಿನಲ್ಲಿದ್ದ ಅವರ ಪತ್ನಿಯ ಬಾಬ್ತು ಸುಮಾರು 5 ಪವನ್ ತೂಕದ ಒಂದು ಉಂಗುರ ಮತ್ತು ಚೈನ್, ಒಂದು ಕೆಂಪು ಬಣ್ಣದ ಲ್ಯಾಪ್ಟಾಪ್ನ್ನು ಕಳವು ಮಾಡಿರುವುದಲ್ಲದೇ ಪಿರ್ಯಾದುದಾರರ ಇನ್ನೊಬ್ಬ ಮಗ ಪ್ರಕಾಶ್ರವರ ರೂಮ್ಗೆ ಪ್ರವೇಶಿಸಿ ಅಲ್ಲಿನ ಮೂರು ಕಪಾಟಿನಲ್ಲಿರಿಸಿದ್ದ ಸುಮಾರು 19 ಪವನ್ ತೂಕದ ಚಿನ್ನದ ಬಳೆಗಳು -4, 5 ಜೊತೆ ಕಿವಿಯ ಓಲೆಗಳು, 1 ನೆಕ್ಲೇಸ್, 1 ಚೈನ್, 2 ಉಂಗುರಗಳು ಮತ್ತು ಪಿರ್ಯಾದುದಾರರ ಪತ್ನಿಯ 4 ಬಳೆಗಳು, 2 ಓಲೆಗಳು ಒಂದು ದೊಡ್ಡ ಚಿನ್ನದ ಸರ ಸುಮಾರು 12 ಪವನ್ ತೂಕದ ಚಿನ್ನದ ವಸ್ತುಗಳು, ರೂಪಾಯಿ 20,000/- ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಸ್ವತ್ತುಗಳ ಒಟ್ಟು ಮೌಲ್ಯ ರೂಪಾಯಿ 6.5 ಲಕ್ಷ ಆಗಬಹುದು.
5.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಜಪ್ಪಿನಮೊಗರು ಪ್ರಜ್ಞಾ ಅಲ್ಪಾವಧಿ ವಸತಿ ಗೃಹದಲ್ಲಿದ್ದ ಕುಮಾರಿ ಪುಷ್ಪ ಪ್ರಾಯ:16 ವರ್ಷ ತಂದೆ: ದಿವಂಗತ ಸುಬ್ರಹ್ಮಣ್ಯ ವಾಸ: ವಿಲ್ಪುರಂ ಪೋಕ್ರವರಿ ಚಿನ್ನಸೆಲ್ಲಂ ತಮಿಳುನಾಡು ಎಂಬಾಕೆಯು ದಿನಾಂಕ: 06.06.2014 ರಂದು ರಾತ್ರಿ ವಸತಿಗೃಹದ ಹಾಲ್‌ನಲ್ಲಿ ಮಲಗಿದ್ದು ಮರುದಿನ ದಿನಾಂಕ 07.06.2014 ರಂದು ಬೆಳಿಗ್ಗೆ 5.30 ಗಂಟೆಗೆ ಪಿರ್ಯಾಧಿದಾರರಾದ ಜ್ಯೋತಿ, ಕೌನ್ಸಲರ್, ಪ್ರಜ್ಞಾ ಶಾರ್ಟ್ ಸ್ಟೇ ಹೋಮ್, ಜಪ್ಪಿನಮೊಗರು, ಮಂಗಳೂರು ರವರು ಎದ್ದು ನೋಡಿದಾಗ ಅವಳು ನಾಪತ್ತೆಯಾಗಿದ್ದು ಆಕೆಯ ಪತ್ತೆಯ ಬಗ್ಗೆ ಈವರೆಗೂ ಹುಡುಕಾಟ ನಡೆಸಿದಲ್ಲಿ ಪತ್ತೆಯಾಗಿರುವುದಿಲ್ಲ. ಚಹರೆ: ಹೆಸರು: ಕುಮಾರಿ ಪುಷ್ಪಾ ( 16 ವರ್ಷ) ಎತ್ತರ: 5 ಅಡಿ 4 ಇಂಚು ಬಣ್ಣ: ಎಣ್ಣೆ ಕಪ್ಪು ಧರಿಸಿರುವ ಉಡುಪು: ಕಪ್ಪು ಟೀ ಶರ್ಟ್ ಮತ್ತು ಪ್ಯಾಂಟ್ ಧರಿಸಿರುತ್ತಾಳೆ ಭಾಷೆ: ಕನ್ನಡ, ತಮಿಳು, ತುಳು ಮಾತನಾಡುತ್ತಾಳೆ.
6.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀಮತಿ ಶಾಂಭವಿ ರವರು ಸುಮಾರು 1 ವರ್ಷದ ಹಿಂದೆ ಮನೋಜ್ ಶರ್ಮಾ ಎಂಬವರ ಜೊತೆ ವಿವಾಹವಾಗಿದ್ದು, ಫಿರ್ಯಾದಿದಾರರ ಗಂಡ ಮೈಸೂರಲ್ಲಿ ಚಂಡಿಕಾ ಪರಮೇಶ್ವರಿ ಜ್ಯೋತಿಷ್ಯಾಲಯ ಎಂಬುದಾಗಿ ಬೋರ್ಡು ಇಟ್ಟುಕೊಂಡು ಜೋತಿಷ್ಯ ಹೇಳುವುದಾಗಿದೆ. ಫಿರ್ಯಾದಿದಾರರು ಕಳೆದ ಆಗಷ್ಟ್ ತಿಂಗಳಿನಿಂದ ಗಂಡನ ಕಿರುಕುಳ ತಾಳಲಾರದೆ ತಾಯಿ ಮನೆಯಾದ ಬಂಟ್ವಾಳಕ್ಕೆ ಬಂದವಳು ಬಳಿಕ ಒಂದು ವಾರದ ಹಿಂದೆ ತನ್ನ ಅಕ್ಕ ಮತ್ತು ಬಾವ ವಾಸವಿರುವ ಕಾರ್ ಸ್ಟ್ರೀಟ್ ಹೂ ಮಾರ್ಕೆಟ್ ಪಕ್ಕದಲ್ಲಿರುವ ಮನೆಗೆ ಬಂದಿದ್ದು, ದಿನಾಂಕ 07-06-2014 ರಂದು ಫಿರ್ಯಾದಿಯ ಗಂಡ ಮನೋಜ್ ಶರ್ಮಾ 4 ಜನ ಅಪರಿಚಿತರೊಂದಿಗೆ ಮನೆಗೆ ಅಕ್ರಮ ಪ್ರವೇಶ ಮಾಡಿ ಫಿರ್ಯಾದಿದಾರರಿಗೆ ಒಂದುವರೆ ಫೀಟ್ ಉದ್ದದ ಕಬ್ಬಿಣದ ರಾಡಿನಿಂದ ಕೈಗೆ ಹಲ್ಲೆ ಮಾಡಿ ತಲೆಯನ್ನು ಗೋಡೆಗೆ ಜಜ್ಜಿದ್ದು, ತಡೆಯಲು ಬಂದ ತಾಯಿ ಶಕುಂತಲ ರನ್ನು ಉಳಿದ 4 ಜನ ಅಪರಿಚಿತರು ತಡೆದು ಕೈಯಿಂದ ಹಲ್ಲೆ ನಡೆಸಿರುವುದಲ್ಲದೆ ಅವಾಚ್ಯ ಶಬ್ದಗಳಿಂದ ಬೈಯ್ದಿರುತ್ತಾರೆ. ಫಿರ್ಯಾದಿಗೆ ನೀನು 10 ಲಕ್ಷ ರೂಪಾಯಿ ಮತ್ತು 10 ಪವನ್ ಚಿನ್ನ ತರದಿದ್ದರೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಫಿರ್ಯಾದಿಯ ಭಾವ ಗಾಯಗೊಂಡ ಫಿರ್ಯಾದಿಗೆ ಹಾಗೂ ಅವಳ ತಾಯಿ ಶಕುಂತಳಾರವರಿಗೆ ಚಿಕಿತ್ಸೆ ಬಗ್ಗೆ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಿರುತ್ತಾರೆ.
No comments:
Post a Comment