Monday, June 16, 2014

Daily Crime Reports 16-06-2014

ದೈನಂದಿನ ಅಪರಾದ ವರದಿ.

ದಿನಾಂಕ 16.06.201407:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

2

ಮನೆ ಕಳವು ಪ್ರಕರಣ

:

1

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

5

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣ :  ಮಂಗಳೂರು ನಗರದ ಅತ್ತಾವರದ ಅಯ್ಯಪ್ಪ ದೇವಸ್ಥಾನ ಬಳಿ  ಜೈನ್ ಕಂಪೌಂಡ್ ರಸ್ತೆ ಸೇರುವ ಅತ್ತಾವರ ಮುಖ್ಯ ರಸ್ತೆಯಲ್ಲಿ ದಿನಾಂಕ 14/06/2014 ರಂದು ಸಂಜೆ ಸುಮಾರು 5:45 ಗಂಟೆಗೆ ಪಿರ್ಯಾದುದಾರರಾದ ಶ್ರೀ ಟಿಪ್ಪು ಹುಸೈನ್ ಸಾವುಲ್ ಹಮೀದ್ ರವರು ತನ್ನ ಬಾಬ್ತು KA-19-EG-9262 ನೇ ಆಕ್ಟಿವಾ ಹೊಂಡಾ ಸ್ಕೂಟರ ಅನ್ನು ಜೈನ್ ಕಂಪೌಂಡ್ ರೋಡನಿಂದ ಅತ್ತಾವರ ಮುಖ್ಯ ರಸ್ತೆಗೆ ನಿಧಾನವಾಗಿ ಚಲಾಯಿಸಿ ಅತ್ತಾವರ ಕಟ್ಟೆ ಕಡೆಗೆ ಚಲಾಯಿಸುತ್ತಿದ್ದಾಗ KA-19-EG-2111 ನಂಬ್ರದ ಮೋಟರ್ ಸೈಕಲ್ ಅನ್ನು ಆರೋಪಿ ಸಚಿನ್ ಎಂಬಾತನು ಅತ್ತಾವರ ಕಟ್ಟೆ ಕಡೆಯಿಂದ ನಂದಿಗುಡ್ಡೆ ಕಡೆಗೆ ಕಾಂಕ್ರಿಟ್ ರಸ್ತೆಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಫೀರ್ಯಾದುದಾರರ ಮೋಟರ್ ಸೈಕಲಗೆ ಡಿಕ್ಕಿ ಮಾಡಿದ ಪರಿಣಾಮ ಫಿರ್ಯಾದುದಾರರ ಬಲಕಾಲಿನ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯ ಹಾಗೂ ಎಡಕೈ ತೋಳಿಗೆ ಗುದ್ದಿದ ನೋವು ಉಂಟಾಗಿದ್ದು ಗಾಯಾಳು ಮಂಗಳೂರು  ತೇಜಸ್ವಿನಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ.

 

2.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣ :  ದಿನಾಂಕ 15/06/2014 ರಂದು ಪೂರ್ವಾಹ್ನ 01:30 ಗಂಟೆಗೆ ಮಂಗಳೂರು ನಗರದ ಕುಂಟಿಕಾನ ಜಂಕ್ಷನ್ ಬಳಿ ಆರೋಪಿ ರಾಕೇಶ ಎನಾಲ್ಡ ಸೋನ್ಸ್ ಎಂಬಾತನು KA-19-EG-3318 ನಂಬ್ರದ ಮೋಟರ್ ಸೈಕಲ್ ಅನ್ನು ದೇರೆಬೈಲ್ ಕಡೆಯಿಂದ ಕುಂಟಿಕಾನ ಕಡೆಗೆ ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ರಸ್ತೆಯಲ್ಲಿದ್ದ ಹಂಪ್ಸ್ ಕಂಡು ಒಮ್ಮೆಲೆ ಬ್ರೆಕ್ ಹಾಕಿದ ಪರಿಣಾಮ ಮೋಟರ್ ಸೈಕಲ್  ಸ್ಕಿಡ್ಡಾಗಿ ಮೋಟರ್ ಸೈಕಲ್ ಸವಾರ ಆರೋಪಿಯ ತಲೆಗೆ ಗಂಭಿರ ಸ್ವರೂಪದ ಗಾಯ ಹಾಗೂ ಮುಖಕ್ಕೆ,ಬೆನ್ನಿಗೆ, ಕೈಗೆ ರಕ್ತ ಗಾಯವಾಗಿದ್ದು, ಗಾಯಾಳು ಮಂಗಳೂರಿನ AJ  ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.

 

3.ಕೊಣಾಜೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣ :  ದಿನಾಂಕ 15-06-2014 ರಂದು ಸಂಜೆ 5-00 ಗಂಟೆಗೆ ಮಂಗಳೂರು ತಾಲೂಕು ಬೋಳಿಯಾರು ಗ್ರಾಮದ ಧರ್ಮ ಎಂಬಲ್ಲಿ ಆರೋಪಿ ಶೈಲೇಶ್ ರೈ ಸುಣ್ಣಕಲ್ಲು ಎಂಬುವರ ಕುಮ್ಮಕ್ಕಿನಿಂದ ಪಿರ್ಯಾದಿದಾರರಾದ ಶ್ರೀ ದೇವರಾಜ್ ರವರನ್ನು ಮತ್ತು ಅವರ ಸಂಗಡಿಗರನ್ನು ಆರೋಪಿಗಳಾದ ವೀರೇಂದ್ರ ಮಾರ್ಲ, ವಿನಯ ಮಾರ್ಲ, ಆನಂದ ಮಾರ್ಲರವರು  ತಡೆದು ನಿಲ್ಲಿಸಿ, ಅವ್ಯಾಚ್ಯ ಶಬ್ದಗಳಿಂದ ಬೈದು, ಪೈಕಿ ವೀರೇಂದ್ರ ಮಾರ್ಲರವರು ತಲವಾರು ಬೀಸಿದ್ದರಿಂದ ಕಿಶೋರನ ತಲೆಗೆ ಗೀರಿದ ಗಾಯವಾಗಿದ್ದು, ಹಾಗೂ ಇತರರಿಗೆ ಎಲ್ಲರೂ ಸೇರಿ ಸಮಾನ ಉದ್ದೇಶದಿಂದ ಕೈಯಿಂದ ಹಲ್ಲೆ ನಡೆಸಿರುತ್ತಾರೆ. ಬಗ್ಗೆ ಗಾಯಾಳುಗಳು ಕೆ.ಎಸ್.ಹೆಗ್ಡೆ ಆಸ್ಫತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗಿರುತ್ತಾರೆ. ಕೃತ್ಯಕ್ಕೆಶೈಲೇಶ್ ರೈ ಸುಣ್ಣಕಲ್ಲುರವರ ಜಾಗದ ಬಳಿಯ ದಾರಿ ವಿಚಾರದಲ್ಲಿನ ವೈಷಮ್ಯವೇ ಕಾರಣವಾಗಿರುತ್ತದೆ.

 

4.ಕೊಣಾಜೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣ :  ದಿನಾಂಕ 15-06-2014 ರಂದು ಸಂಜೆ 7-30 ಗಂಟೆಗೆ ಆರೋಪಿಗಳಾದ ಶರೀಪ್, ಫೈಜಲ್ ಮತ್ತು ಪರಿಚಯವಿರುವ ಮತ್ತೋರ್ವ ಇವರು ಸಮಾನ ಉದ್ದೇಶದಿಂದ ಪಿರ್ಯಾದಿದಾರರಾದ ಶ್ರೀ ರವಿ ಡಿ'ಸೋಜಾ ರವರನ್ನು ಮತ್ತು ಆತನ ಸ್ನೇಹಿತರಾದ ಚಾಲ್ಸಿನ್ ಮತ್ತು  ಅನೀಸ್ ರವರನ್ನು  ಮಂಗಳೂರು ತಾಲೂಕು ಅಂಬ್ಲಮೊಗರು ಗ್ರಾಮದ ಮದಕ ಎಂಬಲ್ಲಿ ತಡೆದು ನಿಲ್ಲಿಸಿ, ಶರೀಫ್ ಎಂಬುವನು ಪಿರ್ಯಾದಿದಾರರ ಮೊಣಗಂಟಿಗೆ ರೀಪಿನಿಂದ ಹಲ್ಲೆ ನಡೆಸಿರುತ್ತಾನೆ. ಉಳಿದ ಆರೋಪಿಗಳು ಪಿರ್ಯಾದಿದಾರರಿಗೆ ಮತ್ತು ಆತನ ಸ್ನೇಹಿತರಿಗೆ ಕೈಯಿಂದ ಹಲ್ಲೆ ನಡೆಸಿರುತ್ತಾರೆ. ಕೃತ್ಯಕ್ಕೆ ಮೋಟಾರು ಸೈಕಲ್ ನಲ್ಲಿ ಹೋಗುವಾಗ ಸೈಡ್ ಕೊಡುವ ವಿಚಾರದ ದ್ವೇಷವೇ ಕಾರಣವಾಗಿರುತ್ತದೆ. ಬಗ್ಗೆ ಗಾಯಾಳು ಕೆ.ಎಸ್ ಹೆಗ್ಡೆ ಆಸ್ಫತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.

 

5.ಬಜ್ಪೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣ :  ಪಿರ್ಯಾದಿದಾರರಾದ ಶ್ರೀ ಮಹಮ್ಮದ್ ಪರ್ವೆಜ್ ಖಾನ್ ರವರು ಮುಂಬೈನಲ್ಲಿ ಕೆಲಸ ಮಾಡಿಕೊಂಡಿದ್ದು ತನ್ನ ಹೆಂಡತಿ ಮತ್ತು ತಾಯಿಯೊಂದಿಗೆ ಬಾಡಿಗೆ ಮನೆ ಮುಂಬೈಯಲ್ಲಿ ವಾಸಮಾಡಿಕೊಂಡು 3-4 ತಿಂಗಳಿಗೊಮ್ಮೆ ಬಜಪೆ ತಾರಿಕಂಬ್ಳದಲ್ಲಿರುವ ತನ್ನ ವಾಸದ ಮನೆಗೆ ಬಂದು ಹೋಗುತ್ತಿರುವುದಾಗಿದೆ. ಪಿರ್ಯಾದಿದಾರರು ಮುಂಬೈಯಲ್ಲಿರುವ ಸಮಯ ಅವರ ಮನೆಯನ್ನು ಪಿರ್ಯಾದಿದಾರರ ತಂಗಿ ಭಟ್ರಕೆರೆ ಎಂಬಲ್ಲಿ  ವಾಸವಾಗಿರುವ ಪಿರ್ದೋಷ್ ಭಾನು ಎಂಬವರು 4 ದಿನಕ್ಕೊಮ್ಮೆ ಬಂದು ನೋಡಿಕೊಂಡು ಹೋಗುತ್ತಿದ್ದು, ದಿನಾಂಕ 05-06-2014 ರಂದು ಸಂಜೆ 5-30 ಗಂಟೆಗೆ ಮನೆಯ ಕೆಲಸ ಮಾಡಿ ಬೀಗ ಹಾಕಿ ಹೋಗಿದ್ದು ದಿನಾಂಕ 09-06-2014 ರಂದು ಬೆಳಿಗ್ಗೆ 10-00 ಗಂಟೆಗೆ ಬಂದು ನೋಡಿದಾಗ ಮನೆಯ ಬಾಗಿಲ ಬೀಗವನ್ನು ಯಾರೋ ಕಳ್ಳರು ಮುರಿದು ಒಳಗೆ ಪ್ರವೇಶಿಸಿ ಹೋಗಿರುವುದಾಗಿ ಪಿರ್ಯಾದಿದಾರರಿಗೆ ಅವರ ತಂಗಿ ದೂರವಾಣಿ ಮಾಹಿತಿಯನ್ನು ನೀಡಿದ್ದು, ದಿನಾಂಕ 13-06-2014 ರಂದು ಪಿರ್ಯಾದಿದಾರರು ಮನೆಗೆ ಬಂದು ನೋಡಿದಾಗ ಮನೆಯ ಒಳಗಿನ ಕೋಣೆಯಲ್ಲಿದ್ದ ಕಪಾಟಿನ ಬೀಗವನ್ನು ಮುರಿದಿದ್ದು ಅದರಲ್ಲಿದ್ದ 1 ಪವನ್ ತೂಕದ 4 ಚಿನ್ನದ ಬಳೆಗಳು ಹಾಗೂ 40,000/- ರೂಪಾಯಿಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಸೊತ್ತುಗಳ ಒಟ್ಟು ಮೌಲ್ಯ 1,20,000/- ರೂಗಳು ಆಗಿರುವುದಾಗಿದೆ.

 

6.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣ :  ದಿನಾಂಕ 13-06-2014 ರಂದು ಪಿರ್ಯಾದುದಾರರಾದ ಶ್ರೀ ಧನುಷ್ ರವರು ದೇರಳಕಟ್ಟೆ ಕೆ.ಎಸ್‌.ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತನ್ನ ಸ್ನೇಹಿತ ಡಗ್ಲಾಸ್ಎಂಬವರ ಬಾಬ್ತು  ಕೆಎ-19-ಕ್ಯೂ-5469 ನೇ ಮೋಟಾರು ಸೈಕಲಿನಲ್ಲಿ ಸಹಸವಾರನಾಗಿ ಕುಳಿತುಕೊಂಡು ಮಂಗಳೂರು ಕಡೆಗೆ ಬರುತ್ತಿದ್ದು. ಮೋಟಾರು ಸೈಕಲ್ನ್ನು ಸವಾರ ಡಗ್ಲಾಸ್ರವರು ಬೆಳಿಗ್ಗೆ 11-30 ಗಂಟೆಯ ಸಮಯಕ್ಕೆ ದೇರಳಕಟ್ಟೆ ಯೇನಪೋಯ ಆಸ್ಪತ್ರೆಯ ಬಳಿ ರಸ್ತೆಯಲ್ಲಿ ತನ್ನ ಮುಂದಿನಿಂದ ಅಬ್ದುಲ್ಲಾರವರು ಎಂಬವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸ್ಕೂಟರ್ ಅತೀ ಸಮೀಪದಲ್ಲಿ ಸವಾರಿ ಮೋಡಿಕೊಂಡು ಹೋಗುತ್ತಿದ್ದು, ಸ್ಕೂಟರ್‌‌ ಸವಾರ ಅಬ್ದುಲ್ಲಾರವರು ಯಾವುದೇ ಸೂಚನೆಯನ್ನು ನೀಡದೇ ಒಮ್ಮಲೇ ಸ್ಕೂಟರ್ನ್ನು ಬಲಬದಿಗೆ ತಿರುಗಿಸಿದ ಪರಿಣಾಮ ಮೋಟಾರು ಸೈಕಲ್‌, ಸ್ಕೂಟರ್ಗೆ ಡಿಕ್ಕಿ ಹೊಡೆಯಿತು. ಮೋಟಾರು ಸೈಕಲ್ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿಯ ಬಲ ಕಾಲಿಗೆ, ಹಾಗೂ ಎರಡೂ ಕೈಗಳಿಗೆ ರಕ್ತಗಾಯವಾಗಿರುತ್ತದೆ. ಡಗ್ಲಾಸ್ರವರ ಎರಡೂ ಕಾಲಿಗೂ, ಎರಡೂ ಕೈಗಳಿಗೆ ಹಾಗೂ ಎರಡೂ ಭುಜಗಳಿಗೆ ರಕ್ತಗಾಯವಾಗಿರುತ್ತದೆ. ನಮ್ಮ ಮೋಟಾರು ಸೈಕಲ್ ಜಖಂಗೊಂಡಿರುತ್ತದೆ. ಪಿರ್ಯಾದುದಾರರು ಮತ್ತು ಡಗ್ಲಾಸ್ರವರನ್ನು ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಡಗ್ಲಾಸ್ ರವರನ್ನು ಮಂಗಳೂರು ತೇಜಸ್ವಿನಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಲಾಗಿರುತ್ತದೆ.

 

7.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣ :  ದಿನಾಂಕ  15.0602014  ರಂದು  ಬೆಳಿಗ್ಗೆ 8:45  ಗಂಟೆಗೆ ಪಿರ್ಯಾದಿದಾರರಾದ ಶ್ರೀ ಬಿ. ಒಮಯ್ಯ ಅಮೀನ್ ರವರು  ತನ್ನ  ಬಾಬ್ತು  ಕೆ. 19  ಯು  5709 ನೇ ಆಕ್ಟೀನ್ಹೊಂಡಾ ಸ್ಕೂಟರ್ ನ್ನು  ಚಲಾಯಿಸಿಕೊಂಡು ವಾಮಂಜೂರು ಪೆಟ್ರೋಲ್ಪಂಪು್ಹತ್ತಿರ ತಲುಪುತ್ತಿದ್ದಂತೆ ಪೆಟ್ರೊಲ್ಪಂಪು ಕಡೆಯಿಂದ ವಾಮಂಜೂರು  ಅಂದರೆ ಮೂಡಬಿದ್ರ- ಮಂಗಳೂರು  ರಾ.ಹೆ  ಕಡೆಗೆ  ಕೆ. 19  ಎನ್‌ 6473  ನೇ ಮಾರುತಿ  800 ಕಾರನ್ನು  ಅದರ  ಚಾಲಕ  ಅತೀ  ವೇಗ ಹಾಗೂ  ಅಜಾಗರೂಕತೆಯಿಂದ ಚಲಾಯಿಸಿಕೊಂಡು ಪಿರ್ಯಾದಿದಾರರ  ಸ್ಕೂಟರ್ಗೆ ಡಿಕ್ಕಿ  ಹೊಡೆದ ಪರಿಣಾಮ  ಪಿರ್ಯಾದಿದಾರರು  ಸಮೆತ  ನೆಲಕ್ಕೆ ಬಿದ್ದು  ಬಲ ಕೈಗೆ,  ಎಲ್ಬೋ  ಪೋರ್ಆರ್ಮ್  ಭಾಗಕ್ಕೆ ಗುದ್ದಿ ಗಾಯವಾಗಿದ್ದು, ಪಿರ್ಯಾದಿದಾರರು   ನಗರದ ಎಸ್‌.ಸಿ.ಎಸ್ ಆಸ್ಪತ್ರೆಯಲ್ಲಿ  ಒಳ ರೋಗಿಯಾಗಿ ಚಿಕಿತ್ಸೆ  ಪಡೆಯುತ್ತಿದ್ದಾರೆ.

 

8.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣ :  ದಿನಾಂಕ  15.06.2014  ರಂದು  ಬೆಳಿಗ್ಗೆ 9:15   ಗಂಟೆಗೆ ಪಿರ್ಯಾದಿದಾರರಾದ ಶ್ರೀ ನಾಗೇಶ್ ಪೂಜಾರಿ ರವರು ಅವರ ತಾಯಿ  ಮತ್ತು  ಅವರ  ಅಕ್ಕ  ಪುಷ್ಪ ರವರೊಂದಿಗೆ  ನಡೆದುಕೊಂಡು  ಬರುತ್ತಿದ್ದ ಸಮಯ ಮಂಗಳೂರು ಕಡೆಯಿಂದ ವಾಮಂಜೂರು  ಕಡೆಯಿಂದ  ಪಲ್ಸರ್ಮೋಟಾರು  ಸೈಕಲ್  ನಂಬ್ರ  ಕೆ   19  ಇಜೆ   3249  ನೇದನ್ನು  ಅದರ  ಚಾಲಕ  ಅತೀ  ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ನಡೆದುಕೊಂಡು  ಹೋಗುತ್ತಿದ್ದ   ಪಿರ್ಯಾದಿದಾರರ   ಅಕ್ಕ ಪುಷ್ಪರಿಗೆ ಡಿಕ್ಕಿ ಹೊಡೆದ ಪರಿಣಾಮ , ತಲೆಗೆ,  ಎಡಕೈಯ  ತಟ್ಟಿಗೆ,  ಬಲ ಕೈ   ತಟ್ಟಿಗೆ  ಕಾಲಿಗೆ ರಕ್ತ ಬರುವ  ಗಂಭೀರ  ಗಾಯವಾಗಿದ್ದು, ಅವರನ್ನು  ಚಿಕಿತ್ಸೆಗಾಗಿ  ನಗರದ ಎಜೆ ಆಸ್ಪತ್ರೆಗೆ ದಾಖಲಿಸಿರುತ್ತಾರೆ.

No comments:

Post a Comment