ದೈನಂದಿನ ಅಪರಾದ ವರದಿ.
ದಿನಾಂಕ 06.06.2014 ರ 07:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 1 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 1 |
ಮನೆ ಕಳವು ಪ್ರಕರಣ | : | 1 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 1 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 2 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 1 |
ಇತರ ಪ್ರಕರಣ | : | 0 |
1.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದುದಾರರಾದ ಶ್ರೀ ಶೇಷ ಕೃಷ್ಣ ಶೆಟ್ಟಿ ರವರು 2009 ನೇ ಇಸವಿಯಲ್ಲಿ ಹಳೆ ಕೆಂಪು ಬಣ್ಣದ ಕೆ.ಎ 05 ಎಂ.ಬಿ 9643 ಮಾರುತಿ ಆಲ್ಟೋ ಕಾರು ಒಂದನ್ನು ಖರೀದಿಸಿರುತ್ತಾರೆ. ದಿನಾಂಕ 31-06-2014 ರಂದು ರಾತ್ರಿ ಸುಮಾರು 10-30 ಗಂಟೆಗೆ ಸದ್ರಿರವರು ವಾಸಿಸುತ್ತಿರುವ ಪ್ಲಾಟಿನ ಪಾರ್ಕಿಂಗ್ ಸ್ಥಳದಲ್ಲಿ ವಾಹನವನ್ನು ಪಾರ್ಕ್ ಮಾಡಿದ್ದು ದಿನಾಂಕ 01-06-2014 ರಂದು ಬೆಳಿಗ್ಗೆ ಸುಮಾರು 07-00 ಗಂಟೆಗೆ ಮನೆಯಿಂದ ಹೊರಗೆ ಬಂದು ಕಾರಿನ ಚಕ್ರದ ಗಾಲಿ ಸರಿಯಾಗಿದೆಯೇ ಎಂದು ಪರೀಕ್ಷಿಸಿ ಮನೆ ಒಳಗೆ ಹೋಗಿ ನಂತರ ಮುಲ್ಕಿಯಲ್ಲಿ ನಡೆಯುವ ಮದುವೆ ಕಾರ್ಯಕ್ರಮಕ್ಕೆ ಹೋಗುವರೇ ಬೆಳಿಗ್ಗೆ ಸುಮಾರು 07-45 ಗಂಟೆಗೆ ಮನೆಯಿಂದ ಹೊರಬಂದು ಕಾರು ಪಾರ್ಕ್ ಮಾಡಿದ ಸ್ಥಳಕ್ಕೆ ಬಂದಾಗ ಕಾರು ಪಾರ್ಕ್ ಮಾಡಿದ ಸ್ಥಳದಲ್ಲಿ ಇರುವುದಿಲ್ಲ. ಅಲ್ಲಿಯೇ ಸುತ್ತಮುತ್ತ ಹುಡುಕಾಡಿ ಈವರೆಗೆ ಗೆಳೆಯರಲ್ಲಿ ಹಾಗೂ ಸಂಬಂಧಿಕರಲ್ಲಿ ವಿಚಾರಿಸಿದರೂ ಪತ್ತೆಯಾಗದೇ ಇರುವುದಾಗಿದೆ.
2.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 05-06-2014 ರಂದು 16-00 ಗಂಟೆಗೆ ಕಾರ್ನಾಡು ಗ್ರಾಮದ ಲಿಂಗಪ್ಪಯ್ಯಕಾಡು ಲಚ್ಚಿಲ್ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಬಾಗೇಶ್, ಶಂಕರ ಬಸವರಾಜ ಮೆಥ್ರಿ, ಹನುಮಂತ, ಶರತ್ ಎಂಬ 4 ಜನ ಆರೋಪಿಗಳು ಅಂದರ್ –ಬಾಹರ್ ಜೂಜಾಟ ಆಡುತ್ತಿದ್ದವರನ್ನು , ಮುಲ್ಕಿ ಠಾಣಾ ಪೊಲೀಸ್ ನಿರೀಕ್ಷಕರಾದ ರಾಮಚಂದ್ರ ನಾಯಕ್ ರವರು ಸಿಬ್ಬಂದಿಗಳೊಂದಿಗೆ ಧಾಳಿ ಮಾಡಿ, ಆರೋಪಿತರು ಇಸ್ಪೀಟು ಜೂಜಾಟಕ್ಕೆ ಬಳಸಿದ್ದ ನಗದು ಹಣ 710/- ರೂಪಾಯಿ, ಇಸ್ಪೀಟು ಎಲೆಗಳು-52, ಮತ್ತು ನೆಲಕ್ಕೆ ಹಾಸಲು ಉಪಯೋಗಿಸಿದ ಹಳೆಯ ನ್ಯೂಸ್ ಪೇಪರ್ ಹಾಳೆಗಳು -2 ಇವುಗಳನ್ನು ಸ್ವಾಧೀನಪಡಿಸಿ ಆರೋಪಿತರುಗಳನ್ನು ದಸ್ತಗಿರಿ ಮಾಡಿ ಠಾಣೆಗೆ ಕರೆತಂದು ಪ್ರಕರಣ ದಾಖಲಿಸಿದ್ದಾಗಿದೆ.
3.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 04.06.2014 ರಂದು ಫಿರ್ಯಾದಿದಾರರಾದ ಶ್ರೀ ಮಹಮ್ಮದ್ ಇಸ್ಮಾಯಿಲ್ ರವರು ತನ್ನ ಅಣ್ಣ ಅಹಮ್ಮದ್ ಬಾವಾ ಎಂಬವರೊಂದಿಗೆ ಬೀಬಿ ಅಲಾಬಿ ರಸ್ತೆಯಲ್ಲಿರುವ ಗುಜಿರಿ ಅಂಗಡಿಯಲ್ಲಿರುವಾಗ ಬೆಳಿಗ್ಗೆ ಸುಮಾರು 11:00 ಗಂಟೆ ಸಮಯಕ್ಕೆ ತನ್ನ ಅಂಗಡಿಯ ಬಳಿ ಶೀಟ್ ಐಟಂ ನ್ನು ಮಾರಾಟ ಮಾಡುವ ಸಮಯ ಅಬ್ದುಲ್ ಸಮದ್ ಎಂಬಾತನು ಆತನ ಅಂಗಡಿಯ ಎದುರು ಕಸದ ರಾಶಿಯ ಬಗ್ಗೆ ಫಿರ್ಯಾದಿದಾರರನ್ನು ಉದ್ದೇಶಿಸಿ ಅವ್ಯಾಚ್ಯ ಶಬ್ದಗಳಿಂದ ಕಸ ಹಾಕಿದ ಯಾರು ಎಂದು ಅವ್ಯಾಚ್ಯ ಶಬ್ದಗಳಿಂದ ಬೈಯುತ್ತಿದ್ದಾಗ ಫಿರ್ಯಾದಿದಾರರ ಅಣ್ಣನಾದ ಅಹಮ್ಮದ್ ಬಾವಾ ಯಾಕೆ ಬೈಯುತ್ತೀ ಎಂದು ಕೇಳಿದಾಗ ಆತನ ಮೇಲೆ ಕೈ ಮಾಡಲು ಮುಂದೆ ಬಂದಾಗ ಫಿರ್ಯಾದಿದಾರರು ತಡೆದಿದ್ದು ಆ ಸಮಯ ಸಮ್ಮದ್ ಮತ್ತು ನಜೀರ್ ರವರು ಫಿರ್ಯಾದಿದಾರರ ತಲೆಗೆ ಮತ್ತು ಮುಖಕ್ಕೆ ಹೊಡೆದು ನೆಲಕ್ಕೆ ಬಿದ್ದಾಗ ಕಾಲಿನಿಂದ ತುಳಿದು ಅಬ್ದುಲ್ ಸಮದ್ ಕಲ್ಲಿನಿಂದ ತಲೆಗೆ ಹೊಡೆದು ಮುಂದಕ್ಕೆ ಕಸ ಹಾಕಿದಲ್ಲಿ ಜೀವ ಸಹಿತ ಬಿಡುವುದಿಲ್ಲ ಎಂದು ಅಬ್ದುಲ್ ಸಮದ್, ಬಶೀರ್ ಮತ್ತು ನಜೀರ್ ರವರು ಜೀವ ಬೆದರಿಕೆ ಹಾಕಿರುವುದಾಗಿದೆ.
4.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 05-06-2014 ರಂದು ಬೆಳಿಗ್ಗೆ ಸುಮಾರು 08-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ವಿನಯ ಸುವರ್ಣ ರವರ ಅಕ್ಕನ ಮಗನಾದ ರೋಹಿತ್ ಆರ್. ಪೂಜಾರಿ 7 ವರ್ಷ ಎಂಬಾತನು ಶಾಲೆಗೆ ಹೋಗಲೆಂದು ರಸ್ತೆ ದಾಟುವರೇ ಮಂಗಳೂರು ತಾಲೂಕು ಮುಳೂರು ಗ್ರಾಮದ ಗುರುಪುರ ವ್ಯವಸಾಯ ಸಹಕಾರಿ ಸಂಘದ ಎದುರುಗಡೆ ನಿಂತಿದ್ದಾಗ ಕೈಕಂಬ ಕಡೆಯಿಂದ ಗುರುಪುರ ಕಡೆಗೆ ಟೆಂಪೋ ಈಚರ್ ನಂ KA 19 C 4525 ನೇದನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬಾಲಕನಾದ ರೋಹಿತ್ ಆರ್. ಪೂಜಾರಿ ಎಂಬವನಿಗೆ ಡಿಕ್ಕಿ ಹೊಡೆದ ಪರಿಣಾಮ ರೋಹಿತನು ರಸ್ತೆಗೆ ಎಸೆಯಲ್ಪಟ್ಟು ಅವನ ತಲೆಯ ಹಿಂಬದಿಗೆ ತೀವೃ ತರಹದ ಗಾಯವಾಗಿರುವುದಲ್ಲದೇ, ಕೈ ಕಾಲುಗಳಿಗೂ ತರಚಿದ ಗಾಯವಾಗಿದ್ದು, ಆತನನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ಎಸ್.ಸಿ.ಎಸ್. ಆಸ್ಪತ್ರೆಗೆ ದಾಖಲಿಸಿರುತ್ತಾರೆ.
5.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ರಂಜಿತಾ ಎಂಬಾಕೆಯ ಗಂಡ ರಾಜು ಎಂಬವರು ದಿನಾಂಕ 04-06-2014 ರಂದು ಅಪರಾಹ್ನ 2-30 ಗಂಟೆಗೆ ಮಂಗಳೂರು ತಾಲೂಕು ಸಸಿಹಿತ್ಲು ಅವರ ಮನೆಯಿಂದ ಪಿರ್ಯಾದಿದಾರರ ಮೊಬೈಲ್ ಪಡೆದುಕೊಂಡು ಹೋದವರು ಈ ವರೆಗೂ ಮನೆಗೆ ಬಾರದೇ ಕಾಣೆಯಾಗಿರುವುದಾಗಿದೆ. ಕಾಣೆಯಾದ ರಾಜು ರವರ ಚಹರೆಃ 5 ಅಡಿ 6 ಇಂಚು ಎತ್ತರ, ಗೋದಿ ಮೈಬಣ್ಣ, ಮೀಸೆ ಬೋಳಿಸಿರುತ್ತಾರೆ, ಕಪ್ಪು ತಲೆ ಕೂದಲು, ನೀಳಿ ಬಿಳಿ ಉದ್ದ ಗೆರೆಗಳುಳ್ಳ ಅರ್ದ ತೋಳಿನ ಶರ್ಟ್ ನೀಲಿ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ.
6.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 02.06.2014 ರಂದು 16:30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಶೇಖರ @ ಚಂದ್ರಶೇಖರ ರವರು ತನ್ನ ಬಾಬ್ತು ಕೆ.ಎ 19 ಡಿ 4796 ನೇ ಸ್ಕೂಟರ್ ನಲ್ಲಿ ವಾಮನ ಪೂಜಾರಿಯವರನ್ನು ಸಹ ಸವಾರನಾಗಿ ಕುಳ್ಳಿರಿಸಿಕೊಂಡು ವಾಮಂಜೂರು ಕಡೆಯಿಂದ ಚಲಾಯಿಸಿಕೊಂಡು ಮಂಗಳೂರು ಕಡೆಗೆ ಬರುತ್ತಾ ವಾಮಂಜೂರು ಜಂಕ್ಷನ್ ತಲುಪಿದಾಗ ಕೆ.ಎ 19 ಎಂಸಿ 6208 ನೇ ಕಾರನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಓವರ್‌ಟೇಕ್ ಮಾಡಲು ಪ್ರಯತ್ನಿಸಿ ಪಿರ್ಯಾದಿದಾರರ ಸ್ಕೂಟರ್ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಚಾಲನಾ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದುದರಿಂದ ಪಿರ್ಯಾದಿದಾರರಿಗೆ ಮುಖಕ್ಕೆ, ಬಲ ಮೊಣ ಕೈಗೆ, ಹಾಗೂ ಬಲ ಮೊಣ ಕಾಲಿಗೆ, ರಕ್ತ ಬರುವ ಗಾಯವಾಗಿದ್ದು, ಸಹಸವಾರ ವಾಮನ ಪೂಜಾರಿಯವರಿಗೆ ಸೊಂಟಕ್ಕೆ ಮತ್ತು ದೇಹದ ಇತರ ಭಾಗಗಳಿಗೆ ಗಾಯವಾಗಿದ್ದು ಅಲ್ಲಿ ಸೇರಿದ ಜನರು ಎಜೆ. ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ದಾಖಲಿಸಿರುತ್ತಾರೆ.
7.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ನಗರ ಕಂಕನಾಡಿ ಗ್ರಾಮದ ಉಜ್ಜೋಡಿ ಕೂಲ್ ಟೆಕ್ ಕಾರ್ ಏರ್ ಕಂಡಿಶನಿಂಗ್ ಎಂಬ ಶಾಪ್ ನ್ನು ಪಿರ್ಯಾದಿದಾರರಾದ ಶ್ರೀ ನಿಶಿತ್ ಸುವರ್ಣ ರವರು ದಿನಾಂಕ 04.06.2014 ರಂದು ರಾತ್ರಿ 8:00 ಗಂಟೆಗೆ ಮುಚ್ಚಿ ಹೋಗಿದ್ದು, ದಿನಾಂಕ 05.06.2014 ರಂದು ಬೆಳಿಗ್ಗೆ 9:00 ಗಂಟೆಗೆ ಬಂದು ನೋಡಿದಾಗ ಅಂಗಡಿಯ ಕಿಟಕಿಯ ಗಾಜು ಮುರಿದು ಕಿಟಕಿಯ ಕಬ್ಬಿಣದ ಸರಳನ್ನು ಯಾವುದೋ ಬಲವಾದ ಆಯುಧದಿಂದ ಬಗ್ಗಿಸಿ ಒಳ ಪ್ರವೇಶಿಸಿ ರೂ. 10,000/- ನಗದು , ಹಾಗೂ ರೂ. 10,000 ಬೆಳೆ ಬಾಳುವ 10 ಬಂಡಲ್ ಹಿತ್ತಾಳೆಯ ಕೇಬಲ್ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.
No comments:
Post a Comment